Oppanna.com

ಸಮಸ್ಯೆ 103 : “ಸೋದರ ಮಾವನ ಕಾ೦ಬಗ ಬಾಲ್ಯದ ಲೂಟಿಯ ನೆ೦ಪುಗೊ ಬತ್ತೆನಗೇ”

ಬರದೋರು :   ಸಂಪಾದಕ°    on   19/09/2015    15 ಒಪ್ಪಂಗೊ

ಈ ವಾರ ವನಮ೦ಜರಿ ವನಮ೦ಜರಿ ಛ೦ದಸ್ಸಿಲಿ ಇನ್ನೊ೦ದು ಪ್ರಯತ್ನ ಮಾಡುವ°.
22 ಅಕ್ಷರ೦ಗೊ ಇಪ್ಪ ಈ ಅಕ್ಷರ ವೃತ್ತದ ಲಕ್ಷಣ : ನಾನನ ನಾನನ ನಾನನ ನಾನನ ನಾನನ ನಾನನ ನಾನನನಾ
ಕನ್ನಡ ಪ೦ಡಿತರ ಹತ್ತರೆ ಕೇಳಿರೆ : “ಏಳ್ ಭಗಣ೦ಗಳುಮೊರ್ಗುರುವು೦ ಬರಲಾ ವನಮ೦ಜರಿ ಯಪ್ಪುದು ಕೇಳ್” ಹೇಳುಗು.

ಸಮಸ್ಯೆ : “ಸೋದರ ಮಾವನ ಕಾ೦ಬಗ ಬಾಲ್ಯದ ಲೂಟಿಯ ನೆ೦ಪುಗೊ ಬತ್ತೆನಗೇ”

ಬೈಲಿನ ನೆ೦ಟ್ರುಗಳ ಬಾಲ್ಯದ ನೆ೦ಪುಗೊ ಬರಳಿ ನೋಡುವ°.

 

15 thoughts on “ಸಮಸ್ಯೆ 103 : “ಸೋದರ ಮಾವನ ಕಾ೦ಬಗ ಬಾಲ್ಯದ ಲೂಟಿಯ ನೆ೦ಪುಗೊ ಬತ್ತೆನಗೇ”

  1. “ಭೇದವ ಮಾಡದೆ ಎಂಗಳ ಗುಂಪಿಲಿ ಸೇರಿಯೆ ಅಜ್ಜನ ಕಾಡ್ಸುಗದಾ
    ವೇದವ ಹೇಳುವ ವೇಳೆಲಿ ತೋಳೆಯೊ ಸಾಲಿಗ ಬೀಳುಸಿ ಬೈಸಿದರೇ
    ಬಾದಿಯ ಮೋರೆಲಿ ಅಜ್ಜಿಯ ವಾಲಿಸಿ ಡಬ್ಬಿಯ ತಿಂಡಿಗ ತಿನ್ಸಿದ ಆ
    ಸೋದರ ಮಾವನ ಕಾ೦ಬಗ ಬಾಲ್ಯದ ಲೂಟಿಯ ನೆ೦ಪುಗೊ ಬತ್ತೆನಗೇ”

  2. ಬೂಂದಿಯ ಲಾಡಿಲಿ ನಂಜಿನ ತುಂಬುಸಿ ಕೊಟ್ಟರು ತಿಂದಿದೆ ಧೈರ್ಯದೊಳಾ
    ಮೋದದೆ ಕಟ್ಟಿದ ಲಾಕ್ಷದ ಸೌಧಕೆ ಬಾಯಿಯ ಮುಚ್ಚಿಯೆ ಹೋಯಿದೆಯಾ
    ಜಾದುವ ಮಾಡಿಯೆ ಕೃಷ್ಣೆಯ ಮಾನವ ಮುಚ್ಚಿದನಂದದ ; ಕೌರವನಾ
    ಸೋದರಮಾವನ ಕಾಂಬಗ ಬಾಲ್ಯದ ಲೂಟಿಯ ನೆಂಪುಗೊ ಬತ್ತೆನಗೇ ||

  3. ಕೇದಗೆ ಹೂಗಿನ ಕೊಯ್ವಲೆ ಯತ್ನಿಸಿ ಮುಳ್ಳಿನ ಕಂತಿಸಿ ಕೊಂಡದು ನಂ-
    ಬೂದರಿ ತೋಟದ ಪೇರಳೆ ಮಾವಿನ ಹಣ್ಣಿನ ತಿಂಬಲೆ ಕೆಂಪೆರುಗಿ-
    ತ್ತಾದರು ಹತ್ತಿಯೆ ಬಿದ್ದದು ಬೇನೆಯ ಒಟ್ಟಿಗೆ ಪೆಟ್ಟುಗ ತಿಂದದು ಈ
    ಸೋದರ ಮಾವನ ಕಾ೦ಬಗ ಬಾಲ್ಯದ ಲೂಟಿಯ ನೆ೦ಪುಗೊ ಬತ್ತೆನಗೇ

  4. ಖಾದರಿ ಮಕ್ಕಳ ನೋಡುಲೆ ಕೂರುಸಿ ಸೇರಿದ ಮಕ್ಕೊಗೆ ಹೇಳಿದೆ ಆ
    ನಾದಿನ ಕಾದುವ ರಾಜರ ಪದ್ಯದ ಸಾಲುಗೊ ಬೀಜದ ಗುಡ್ದೆಲಿಯೇ I
    ಮಾದರಿ ಬೆತ್ತವ ಕತ್ತಿಯ ಹಾಂಗೆಯೆ ಬೀಜೊಗೊ ತಾಗಿದ ಗಾಯವದೀ
    ಸೋದರ ಮಾವನ ಕಾಂಬಗ ಬಾಲ್ಯದ ಲೂಟಿಯ ನೆಂಪುಗೊ ಬತ್ತೆನಗೇ II

    ಆಟದ ಮರ್ಲಂಗೊ (craze) ಆಟ ನೋಡಿ ಬಂದ ಮರದಿನ ಗುಡ್ದೆಲಿ ಯಕ್ಷಗಾನ ಬಯಲಾಟದ ಆಟ . ಖಾದರಿ ಹೇಳುವ ಬ್ಯಾರಿಯ ಮಕ್ಕೊ ಪ್ರೇಕ್ಷಕರು . ಮಾವನೂ ಅಳಿಯನೂ ಒಂದೇ ಪ್ರಾಯದವು . ಅಳಿಯ ಭಾಗವತಿಗೆ ಮಾಡೊಗೊ ಮಾವನೂ ಒಳುದ ಮಕ್ಕಳೂ ಬೆತ್ತ ಬೀಜಿದ್ದರಲ್ಲಿ ಭಾಗವತ ಅಳಿಯಂಗೆ ಬೆತ್ತದ ಕೊಡಿ ತಾಗಿ ಮೋರೆಲಿ ಅಷ್ಟಪ್ಪಗ ಆದ ಗಾಯದ ಕಲೆ ಈ ಮಾವನ ಕಾ೦ಬಗ ನೆ೦ಪಾವುತ್ತು ಹೇಳಿ ಈಗ ದೊಡ್ದಾದ ಅಳಿಯ ಬೆರೆಯವರತ್ತರೆ ಹೇಳುದು

  5. ಬಾಲ(ಲ್ಯ)ಲೀಲೆ
    ಸೋದರ ಮಾವನ ಕಾಂಬಗ ಬಾಲ್ಯದ ಲೂಟಿಯ ನೆಂಪು ಗೊ ಬತ್ತೆನ ಗೇ
    ಹಾದಿಲಿ ಸಿಕ್ಕಿದ ಬೀಡಿಯ ತೊಟ್ಟಿನ ಚೀಲಲಿ ಹುಗ್ಗುಸಿ ನೇಲುಸಿ ದಾ
    ವಾದಕೆ ಬಂದರೆ ಮೋರಗೆ ಜೆಪ್ಪಿದ ಗುರ್ತವು ಇನ್ನುದೆ ತೋರುಗದಾ
    ಓದುಲೆ ಕೂದರೆ ಪುಸ್ತಕ ಕಾಣೆಯೆ ಅಪ್ಪದು ನಿತ್ಯದ ಸಂಗತಿಯೇ

  6. ಓದುದು ತಪ್ಪುಸಿ ಲೂಟಿಯ ಮಾಡೊಗ ಎಂಗೊಗೆ ಇಕ್ಕದ ಪಾಲುಸಮಾ
    ಬೀಡಿಯ ಕಚ್ಚೊಗ ಸೆಮ್ಮವು ಬಂದರೆ ಅಜ್ಜನು ನೋಡುಗು ಎಂಗಳನೇ
    ಸೀದದೆ ಹೋಗಿಯೆ ಬೆತ್ತವ ತಂದರೆ ಬೆನ್ನಿಲಿ ಗುರ್ತವು ಮೂಡುಗದಾ
    ಸೋದರಮಾವನ ಕಾಂಬಗ ಬಾಲ್ಯದ ಲೂಟಿಯ ನೆಂಪುಗೊ ಬತ್ತೆನಗೇ ||

  7. ಬೂದಿಯ ಹೊಂಡದಿ ಮನುಗಿದ ನಾಯಿಯ ಬೀಲಕೆ ಕೊಳ್ಳಿಯ ತಾಗುಸಿದೇ
    ಕಾದಿದ ಅಣ್ಣನ ಊದಿದ ಮೋರಗೆ ಗೋಧಿಯ ಅಂಟಿನ ಲೇಪುಸಿದೇ
    ಹಾದಿಲಿ ಹೋಪಗ “ಹಾವದು ಬಂತೂ” ಬೊಬ್ಬೆಲಿ “ಪೋಡಿಗೆ” ಹುಟ್ಟುಸಿದೇ
    ಸೋದರ ಮಾವನ ಕಾಂಬಗ ಬಾಲ್ಯದ ಲೂಟಿಯ ನೆಂಪುಗೊ ಬತ್ತೆನಗೇ ||

    ಸೀದಿಯ ಬ್ಯಾರಿಯ ಚೆರ್ಪಿನ ಸೊಪ್ಪಿನ ಕಟ್ಟದ ಒಳಗಡೆ ಹುಗ್ಗುಸಿದೇ
    ಬೀದಿಯ ನಾಯಿಗೆ ಸುಮ್ಮನೆ ಕಲ್ಲಲಿ ಹೊಡೆಯಲು ಕುಯ್ಯನೆ ಕೂಗುಸಿದೇ
    ಬೀಡಿಯ ಒಳಗಡೆ ಮೆಣಸಿನ ಹೊಡಿಯಾ ತುಂಬುಸಿ “ಬೋಚ”ಗೆ ಎಳೆಸಿದೆನೇ
    ಬೈದರೆ ಕೇಳದೆ ಬೀಜದ ಹಣ್ಣಿನ ಕದ್ದದು ತಿಂದದು ನೆಂಪೆನಗೇ ||

    ಮೇಲೆ ಹೇಳಿದ ಹಾಂಗೆ ಎಂತೂ ಮಾಡಿದ್ದಿಲ್ಲೆ ಆನು. ಆದರೂ ನವಗೆ ಬರವಲೆಂತ ಅಲ್ಲದೊ ?!!

    1. ಹ ಹಾ ಲಾಯ್ಕಾಯ್ದು.
      “ಸೀದಿಯ ಬ್ಯಾರಿಯ ಚೆರ್ಪಿನ ಸೊಪ್ಪಿನ ಕಟ್ಟದ ಒಳಗಡೆ ಹುಗ್ಗುಸಿದೇ” ಎನಗೆ ಈ ವಾಕ್ಯ ಅರ್ಥ ಆಯ್ದಿಲ್ಲೆ.

      1. ಅದರಲ್ಲಿ ಅರ್ಥ ಅಪ್ಪಲೆ ಎಂತೂ ಇಲ್ಲೆ ಅಕ್ಕಾ. ಸೀದಿ ಹೇಳುವ ಹೆಸರಿನ ಬ್ಯಾರಿಯ ಚಪ್ಪಲಿನ, ಒಂದು ಸೊಪ್ಪಿನ ಕಟ್ಟದ (ಹಟ್ಟಿಗೆ ಹಾಕಲೆ ಇಪ್ಪ ದೊಡ್ಡ ಕಟ್ಟ) ಎಡೆಲಿ ಅಡಗುಸಿ ಮಡಗಿದೆ ಹೇಳಿ ಅಷ್ಟೆ.

  8. ಕೃಷ್ಣನ ಸ್ವಗತಲ್ಲಿ ಗೊಣಗಾಟ….
    ಕೊಂದಿದೆ ಹಾಲಿನ ಕುಡ್ಸಿದ ಪೂತನಿಯಮ್ಮಿಯ ಕಚ್ಚಿಯೆ ಅಂಬಗಳೇ
    ಹಾದಿಲಿ ನಿಲ್ಸಿದ ಬಂಡಿಯ ಸೇರಿದ ರಕ್ಕಸನನ್ನುದೆ ಚಚ್ಚಿದೆನೂ
    ಮಂದೆಲಿ ಗೋವಿನ ರೂಪಲಿ ಸೇರಿದ ಧೇನುಕ ಹೋದ್ದದು, ಎಲ್ಲವುದೇ
    ಸೋದರಮಾವನ ಕಾಂಬಗ ಬಾಲ್ಯದ ಲೂಟಿಯ ನೆಂಪುಗೊ ಬತ್ತೆನಗೇ ||

    1. ತುಂಬಾ ಲಾಯ್ಕದ ಕಲ್ಪನೆ. ಕಿಟ್ಟಂಗೆ ಕಿಟ್ಟನೇ ಸಾಟಿ.

    2. ಇಂದಿರತ್ತೆಯ ಪ್ರಾಸಲ್ಲಿ ಅನುಸ್ವಾರ ಸೇರಿದ ಜಾಗೆಲಿ ಹಿಂಗೊಂದು ಬದಲಾವಣೆ ತಂದರೆ ಹೇಂಗೆ ?

      ಕೂದದು ಪೂತನಿ ಹಾಲಿನ ಕೊಡ್ವಗ ಕಚ್ಚಿದೆಯಮ್ಮಿಯನ೦ಬಗಳೇ
      …. ………. ……..

      ಯಾದವ ಕೂಟದ ಗೋವಿನ ಮಂದೆಲಿ ಕೊಂದದು ಧೇನುಕನಲ್ಲವುದೇ

      ……… …..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×