Oppanna.com

ಸಮಸ್ಯೆ:31 ಚಿತ್ರಕ್ಕೆ ಪದ್ಯ (4)

ಬರದೋರು :   ಸಂಪಾದಕ°    on   18/05/2013    8 ಒಪ್ಪಂಗೊ

ಈ ಚಿತ್ರಕ್ಕೆ ನಿ೦ಗಳ ಕಲ್ಪನೆ ಕವಿತೆಯಾಗಿ ಬರಳಿ.

ನೀನೇರಿದೆತ್ತರಕೆ..

ಚಿತ್ರಕೃಪೆ ಃ ಪವನಜ ಮಾವ

8 thoughts on “ಸಮಸ್ಯೆ:31 ಚಿತ್ರಕ್ಕೆ ಪದ್ಯ (4)

  1. ನೀಲ ಬಾನಿಲಿ
    ಜಾಲ ಚಾಚಿಹ
    ಕೋಲ ಕೋಲವಯಣಕಿ ನೋಟಲ್ಲೇ

    ಬಾಲ ಚಂದಿರ
    ಕಾಲ ನೇಮದ
    ಬೀಲ ಬಿಚ್ಚಿದ ಸೂರ್ಯನುದಯಲ್ಲೇ॥

  2. ರೀತಿ-೧-ನೀತಿ-೧
    ಪಕ್ಷ ಬದಲಪ್ಪದಕ್ಕೆ ಹೊಂದಿ
    ಕಕ್ಷೆಲಿ ತಿರುಗಿಯೊಂಡು ಶಶಿ ವೃ
    ದ್ಧಿ ಕ್ಷಯದಸಹಜ ದೋಷ ಮೀರಿ ಗುಣಂದ ಪೊರೆತ್ತ
    ಭಕ್ಷಕರ ತಪ್ಪುಸುಲೆ ಬಯಲ್ಲಿ
    ರಕ್ಷಕ ಋತುವಿನ ಕಾದೊಂಡೆ
    ವೃಕ್ಷ ಹೊಸ ಚಿಗುರು ಬಂದಪ್ಪಗಳೆ ಆವುತ್ತಮರ
    ರೀತಿ-೨-ನೀತಿ ಅದೇ
    ವೃದ್ಧಿ ಕ್ಷಯದಸಹಜ ದೋಷಂದ ಮೆರೆವ
    ಕಳಾಧರ ಕಳೆಗುಂದಿರು ಗುಣಂದ ಪೊರೆವ
    ವಸಂತನ ನಿರೀಕ್ಷೆಲಿ ಬಯಲ್ಲಿಪ್ಪ ಮರ
    ಬೋಳಾದರೂ ಹೊಸ ಚಿಗುರು ಬಂದರಮರ

  3. ಬೇರು ನೀರಿನ ಸೆಲೆಯ ಹುಡುಕೊಗ
    ಳೇರಿ ಗೆಲ್ಲುಗೊ ಬಾನಿನೆತ್ತರ
    ಚೂರು ಮಳೆಹನಿಗಳನೆಯಿಳುಸುಲೆ ಮುಗಿಲುಗಳ ತಳ್ಪೀ।
    ಆ ರವಿಯ ಶಾಖಕ್ಕದಾ ಹೌ
    ಹಾರಿ ಬೆತ್ತಲೆಯಾಗಿ ನಿ೦ದವು
    ಸೋರುಗೋ ತಿ೦ಗಳಿನ ತ೦ಪಿನ ಸುಧೆಯು ಹಗಲಿಲಿಯೇ?।।

  4. ಆಹಾ ! ಪಸಂದಾಯಿದನ್ನೇ ಕವನ ! ಚಂದಮಾಮನ ಪಜೀತಿಯೇ !

  5. ನೀಲಿ ಬಾನಿಲಿಯರುಣನುದಯಕೆ
    ಕಾಲು ಕಿತ್ತವು ತಾರೆಯೆಲ್ಲವು
    ಜೋಲು ಮೋರೆಯ ಮಾಡಿ ನಿಂದನು ಮಸುಕು ಚಂದಿರನೂ ।
    ಬಾಲ ಸೂರ್ಯನು ಬಪ್ಪ ಹೊತ್ತಿಲಿ
    ಬೋಳು ಮರವನೆಯೆತ್ತಿ ಹಿಡ್ದದು
    ಕೋಲ ಕಬರಿಲಿ ತಡದು ನಿಲ್ಸುಲೆ ಚಂದ್ರ ಮುಳುಗುದರಾ ॥

    1. ಇ೦ದಿರತ್ತೆಯ ಕಲ್ಪನೆ ಲಾಯ್ಕಿದ್ದು.ಇದನ್ನೇ ಚ೦ದ್ರನ ಮಾತಿಲಿ ಹೇಳೊದಾದರೆ,

      ಒ೦ದು ಹೊಡೆಯಟ್ಟುಸುವ ರವಿ ಮ
      ತ್ತೊ೦ದು ಹೊಡೆ ಕಬೆಯಡ್ಡ ನಿ೦ದಿದು
      ಕು೦ದಿತಿ೦ದಾಸಕ್ತಿ ನೆಡವಲೆ ನೀಲ ಜಾಲಿನೊಳ।
      ನಿ೦ದರಾ ಹುಲಿ ನು೦ಗುಗೀ ಕ್ಷಣ
      ಹ೦ದುಲೇ ಬಿಡದೊತ್ತಕೀ ದರೆ
      ಚ೦ದಮಾಮ೦ಗಡಕೆಕತ್ತರಿಯೆಡೆಲಿ ಬೊಡುದತ್ತು।।

  6. ಬೆಶಿಲಿನ ಗಾವಿಂಗೆ ಸೊಪ್ಪೆಲ್ಲಾ ಹೋದತ್ತು
    ದೊಂಡೆಯ ಪಸೆಯಾರಿತ್ತು
    ಬೇರಿಂಗೆ ನೀರಿಲ್ಲೆ ಮೇಲಂಗೆ ನೆರಳಿಲ್ಲೆ
    ಬದುಕೇ ಭಾರವಾದತ್ತು ॥೧॥
    ಏನಾರೂ ಸಂಭವಿಸಲಿ ನಮ್ಮ ಬಾಳಿಲಿ
    ಬಗ್ಗದ್ದೆ ನೇರ ನಿಲ್ಲೆಕ್ಕು
    ಯಾವುದೋ ಮೂಲೆಂದ ಮುಗಿಲೆದ್ದು ಮಳೆ ಬಂದು
    ಪಚ್ಚೆಯ ಕೊಡಿ ಚಿಗುರೆಕ್ಕು ॥೨॥
    ಅಮವಾಸ್ಯೆ ಕಳೆದರೆ ಮತ್ತೊಮ್ಮೆ ಹುಣ್ಣಮೆ
    ಬೇಸಗೆ ಮತ್ತೆ ಮಳೆಗಾಲ
    ಹಾಂಗಾಗಿ ಬೇಗೆಗೆ ಬೇಗುದಿಪಡಲಿಲ್ಲೆ
    ಕಾದರೆ ಬಕ್ಕೊಳ್ಳೆ ಕಾಲ! ॥೩॥

    1. ಆಶಾವಾದ ತು೦ಬಿ ಹರಿವ ಕವನ ಲಾಯ್ಕಾಯ್ದು ಗೋಪಾಲಣ್ಣ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×