Oppanna.com

ಸಮಸ್ಯೆ : 33 ” ಹೋಳಿಗೆಯ ಬಳುಸಿತ್ತು ಬಾಳಗೆ ಮಾವಗಳ ಮಗಳು”

ಬರದೋರು :   ಸಂಪಾದಕ°    on   08/06/2013    26 ಒಪ್ಪಂಗೊ

ಅಕ್ಷರವೃತ್ತ೦ಗಳ ಪರಿಚಯದ ಎಡಕ್ಕಿಲಿ ಈ ವಾರ ಒ೦ದು ಭಾಮಿನಿ ಷಟ್ಪದಿಯ ಪ್ರಯತ್ನ ಮಾಡಿರೆ ಹೇ೦ಗೇ?

ಸಮಸ್ಯೆ:

“ಹೋಳಿಗೆಯ ಬಳುಸಿತ್ತು ಬಾಳಗೆ ಮಾವಗಳ ಮಗಳು”

ಮೂರನೆ ಅಥವಾ ಆರನೇ ಸಾಲಿಲಿ ಈ ಸಾಲು ಬಪ್ಪ ಹಾ೦ಗೆ ರಚನೆ ಮಾಡುವ°,ಆಗದೋ?

ಸೂ:

  • ಈ ಸಮಸ್ಯೆ “ಭಾಮಿನಿ ಷಟ್ಪದಿಲಿ” ಇದ್ದು.
    ಮೂರು ನಾಲ್ಕರ ಎರಡು ಗುಚ್ಛ ಮೊದಲೆರಡು ಸಾಲುಗಳಲ್ಲಿ,
    ಮೂರ್ನೇ ಸಾಲಿಲಿ ಮೂರು ಗುಚ್ಛ, ಕೊನೆಗೊಂದು ಗುರು.
  • ಹೆಚ್ಚಿನ ಮಾಹಿತಿಗೆ:

26 thoughts on “ಸಮಸ್ಯೆ : 33 ” ಹೋಳಿಗೆಯ ಬಳುಸಿತ್ತು ಬಾಳಗೆ ಮಾವಗಳ ಮಗಳು”

  1. ಶಾಲು ಚೆಂದಕೆ ಹೊದದು ಅಳಿಯ ಕು-
    ಶಾಲಿನರಸನೆ ಬಂದು ಮನೆ ಮೊಗ-
    ಸಾಲೆಲಿಯೆ ಕೂದಂಡು ಹೇಳಿದ “ಭಾರಿ ಹಶುವಾವ್ತು”/
    ಸೇಲೆ ದುಗ್ಗಿಯೊ! ಸೀರೆ ಸುತ್ತಿದ
    ಶಾಲಿನಿಯೆ ಇಡಿ ಕೆರುಶಿಲಿಪ್ಪಾ
    ಹೋಳಿಗೆಯ ಬಳುಸಿತ್ತು ಬಾಳಗೆ ಮಾವಗಳ ಮಗಳು/

    1. ಹಾ೦ಗಾಗಿ ನಾಕೇ (ಕೆರುಶಿಲಿಪ್ಪಾ) ಹೋಳಿಗೆ ಬಳುಸಿದ್ದ್ದಾಯಿಕ್ಕು ಬಾಲಣ್ಣ೦ಗೆ ಃ)

  2. ಕೇಳುದೆಂತರ ! ನೋಡುದೆಂತರ !
    ಬಾಳಗೆರಡರ ಲೆಕ್ಕ ಬಡುಸೆಕು
    ಬೋಳುಬಯಲಿನ ಭಾವ ಹೇಳುಗು ಹೀಂಗೆ ಏವತ್ತೂ/
    ಕೋಲು ಊರುವ ಅಜ್ಜ ಕೂಡಾ
    ‘ಏಳು’ ಹೇಳೊಗ ಎನಗೆ ನಾಕೇ
    ಹೋಳಿಗೆಯ ಬಳುಸಿತ್ತು ಬಾಳಗೆ ಮಾವಗಳ ಮಗಳು/

  3. ತಾಳಿ ಕಟ್ಟುವ ಶುಭಮುಹೂರ್ತವು
    ನಾಳೆಗೊ೦ದೇ ತಿ೦ಗಳಿಪ್ಪಗ
    ಹೇಳಿಕೆಯ ಸಮಗಟ್ಟು ತಿದ್ದುವ ಹೆಳೆಲಿ ಮದ್ಮಾಯ।
    ಓಳಿ ಕರೆಲಿಯೆ ನೆಡದು ಬೀಸಕೆ
    ಗಾಳ ಹಾಕುಲೆ ಬ೦ದು ಕೂದರೆ
    ಹೋಳಿಗೆಯ ಬಳುಸಿತ್ತು ಬಾಳಗೆ ಮಾವಗಳ ಮಗಳು ॥

    1. ಏ ಕೆಣಿಯಾ, ಹೇಳಿಕೆ ಕಾಗದ ತಿದ್ದುವ ಹೆಳೆಲಿ ಮಾವನ ಮನಗೆ ಮಾವನ ಮಗಳ ಕಾಂಬಲೆ ಬಂದದು ಫಸ್ಟ್ ಆಯಿದು.

      1. ಬೊಳು೦ಬು ಮಾವಾ,
        “ಹೋಳಿಗೆಯು ಜಾರಿತ್ತು ತುಪ್ಪಕೆ ಬಿಡುಸಿ ಹೇಳೆಕ್ಕೋ?”

    2. ಭಾಮಿನಿಯ ಬಗ್ಗೆ ಭಾಮಿನಿಲಿ ಬರದ್ದು ಲಾಯಕ್ಕಾಯಿದು ಮುಳಿಯದಣ್ಣಾ.

  4. ವಾಹ್ ವಾಹ್.. ಒಳ್ಳೆ ರೈಸಿದ್ದು ಈ ಸರ್ತಿಯಾಣದ್ದು. ಒಬ್ಬರಿಂದ ಒಬ್ಬರದ್ದು ಲಾಯಕ ಆಯ್ದು.

    ಹೀಂಗೆಲ್ಲ ಬರವಲೆ ನವಗರಡಿತ್ತಿಲ್ಲೆ. ಅಂದರೆ ಓದಲೆ ಲಾಯ್ಕ ಆವ್ತು. ಕೊಶಿ ಆತಿದಾ. ನಿಂಗೆಲ್ಲ ಬರಕ್ಕೊಂಡಿರಿ . ನಾವಿಲ್ಲಿ ಓದಿಗೊಂಡಿರುತ್ತು.

  5. ಮಾವನೋರ ಮಗಂಗೆ ಎರಡು ಹೋಳಿಗೆ ತಿಂದರೆ ಅಜೀರ್ಣ ಅಕ್ಕಾ- ಅಗದೋ ಹೇಳಿ-
    ಹೋಳಿಗೆ ವಿಚಾರಣೆ ಬೇಡದಾ ? ಪುನರಾವರ್ತನೆ ಆದರೆ ಸ್ವಾರಸ್ಯ ಕಮ್ಮಿ ಆವುತ್ತಲ್ಲದಾ – ಸರಿಮಾಡ್ತೆ –

    ಬಾಳಗೆಳತಿಯ ನೋಡುವಾಸೆಲಿ
    ಕಾಲಿ ಹೊಟ್ಟೆಲೆ ಬಂದನಳಿಯನು
    ಬಾಳೆಯೆದುರಿಲಿ ಕೂದನುಂಬಲೆ ಭಾರಿ ಗೌಜಿಲಿಯೇ ।
    ಮೋಳು ತಂದತು ತುಪ್ಪ ಗಿಣ್ಣಲು
    ಹಾಲು ತುಂಬಿದ ತಪಲೆಯನ್ನುದೆ
    ಹೋಳಿಗೆಯ ಬಳುಸಿತ್ತು ಬಾಳಗೆ ಮಾವಗಳ ಮಗಳು ॥

    1. ಮೂಡ೦ಬೈಲು ಶಾಸ್ತ್ರಿಗೊ ತಾಳಮದ್ದಲೆಲಿ “ಈ ಊಟ ಉ೦ಬಗ ಮೂಗು ನೆತ್ತಿಯ ಮೇಲೆ ಇದ್ದಿದ್ದರೆ ಲಾಭ ಇತ್ತು,ಎರಡು ಹೋಳಿಗೆ ಹೆಚ್ಚು ತಿ೦ದಿಕ್ಕುಲಾವ್ತಿತ್ತು” ಹೇಳಿ ಅರ್ಥ ಹೇಳಿದ್ದು ನೆ೦ಪಾತು.
      ಗಡದ್ದಾತು ಅತ್ತೆ.

  6. ತಾಳು ಸಾರು ಕಲಸಿಂದ ಮತ್ತೆ
    ಬೋಳುಹುಳಿ ಪಾಯಸ ಬಳುಸಿಕ್ಕಿ
    ಹೋಳಿಗೆಯ ಬಳುಸಿತ್ತು ಬಾಳಗೆ ಮಾವನ ಮಗಳು
    ಏಳು ಹೋಳಿಗೆಯ ಹೊಡದಪ್ಪಗ
    ಬಾಳೆಕಾಯಿಯ ಬಾಳ್ಕು ಬಂತದ
    ಕೇಳಿ ಮಜ್ಜಿಗೆಯ ಆತೊಂಡುಂಡೂಟವ ಮುಗುಶಿದೆ
    ——-
    ತಾಳು ಹಲಸಿನಕಾಯಿದು ಮತ್ತೆ
    ಬಾಳೆಕಾಯಿಯ ಬೋಳು ಕೊದಿಲೂ
    ಬಾಳೆಹಣ್ಣಿನ ಪಾಯಸದೊಟ್ಟಿಂಗೆ ಬಂತು ನೋಡಿರೆ
    ಹೋಳು ಮಾಡಿದ ಮಾವಿನ ಹಣ್ಣು
    ಕೇಳದೆ ಬೇಡ ಹೇಳಿದರೂದೆ
    ಹೋಳಿಗೆಯ ಬಳುಸಿತ್ತು ಬಾಳಗೆ ಮಾವನ ಮಗಳು

    1. ಮಾವ,
      ಭಾವಾರ್ಥ ಲಾಯ್ಕಿದ್ದು.ಮಾತ್ರೆಗಳ ತಿದ್ದೆಕ್ಕು.ಹೀ೦ಗಕ್ಕೋ?

      ತಾಳು ಸಾರಿನ ಸುರಿವ ಗೌಜಿಲಿ
      ಬೋಳುಹುಳಿ ಪಾಯಸದ ಹಿ೦ದೆಯೆ
      ಹೋಳಿಗೆಯ ಬಳುಸಿತ್ತು ಬಾಳಗೆ ಮಾವಗಳ ಮಗಳು
      ಏಳು ಹೋಳಿಗೆ ಹೊಡದು ನೋಡೊಗ
      ಬಾಳೆಕಾಯಿಯ ಬಾಳ್ಕು ಬಂತದ
      ಕೇಳಿ ಮಜ್ಜಿಗೆಯಾ೦ತು ಮುಗುಶಿದೆಯೂಟ ಭರ್ಜರಿದು
      ——-
      ತಾಳು ಹಲಸಿನಕಾಯಿ ಕದಳಿಯ
      ಬಾಳೆಕಾಯಿಯ ಬೋಳುಕೊದಿಲೂ
      ಬಾಳೆಹಣ್ಣಿನ ಪಾಯಸವು ಬ೦ತದರ ಬೆನ್ನಿ೦ಗೇ
      ಹೋಳು ಮಾಡಿದ ಮಾವಿನಣ್ಣಿನ
      ಕೇಳುವಗ ಬ೦ದಲ್ಲಿ ಬೆಶಿಬೆಶಿ
      ಹೋಳಿಗೆಯ ಬಳುಸಿತ್ತು ಬಾಳಗೆ ಮಾವಗಳ ಮಗಳು

  7. ಬಾಳೆಗೆ ಹೋಳಿಗೆ ಬಳಸಿದ ಮೇಲೆ ನವಗೆ ಭಾಮಿನಿ ಎಲ್ಲ ನೆಂಪಾವುತ್ತಿಲ್ಲೆ , ಕಾಯಿ ಹಾಲು ಬರಲಿ ಹೇಳಿ ಹೇಳ್ತಾ ಇತ್ತಿದ್ದ ನೆಗೆಮಾಣಿ ಅಜ್ಜಕಾನ ಭಾವನ ಹತ್ತರೆ.

  8. ಹಾಲು ಹಾಕಿದ ಸಿರಿಯ ಗಂಧದ
    ಸಾಲೆಯಕ್ಕಿಯ ಪಾಚ ಬಂತದ
    ಹೋಳು ಹಣ್ಣಿನ ರಸರಸಾಯನ ಲಾಡು ಜೆತೆಜತೆಗೇ ।

    ಕಾಳು ಮಿಕ್ಸ್ಚರು ರುಚಿಯ ನೋಡಲು
    ಸೇಲೆ ಮಾಡುತ ಬಳುಕಿ ನಗುತಲಿ
    ಹೋಳಿಗೆಯ ಬಡುಸಿತ್ತು ಬಾಳಗೆ ಮಾವಗಳ ಮಗಳು ॥

    1. ಬೊಳು೦ಬು ಮಾವಾ,
      ಹೋಳಿಗೆ ಮಾ೦ತ್ರ ಅಲ್ಲ, ಐಟಮು ಸುಮಾರು ಇದ್ದನ್ನೇ..ಲಾಯ್ಕ ಆಯಿದು.

    2. ಗೋಪಾಲಣ್ಣಾ ,ಬಾರೀ ಗಡದ್ದಾತು,ಪದ್ಯವೂ ಊಟವೂ…

  9. ಬೋಳು ಬೆಂದಿಯ ತಿಂದು ಸಯಿಸದೆ
    ಹಾಳು ಮಾರ್ಗದ ಗುಂಡಿಗಳುಕದೆ
    ಗಾಳಿ ಮಳೆಲಿಯೆ ಕಾರಯೇರಿದ° ದಾರಿ ಮಾವಂದು ।
    ತಾಳ್ಳಶನ ಮೇಲಾರ ಹಸರಿನ
    ಬೇಳೆ ಪಾಯಸದೆಲೆಯುವೋಡ್ವಗ
    ಹೋಳಿಗೆಯ ಬಳುಸಿತ್ತು ಬಾಳಗೆ ಮಾವಗಳ ಮಗಳು ॥

    1. ಭಾಗ್ಯಕ್ಕ,
      “ಪಾಯಸದೆಲೆಯುವೋಡ್ವಗ” ರೈಸಿದ್ದು.ಕಾಯಿಹಾಲು ಬೇಕಾಗ ಹಾ೦ಗಾರೆ !

      1. ಮುಳಿಯದಣ್ಣ ಅಸ್ಟು ಪಡಪ್ಪೋಸು ಮಾಡುದು ಬೇಡ ಹೇಳಿ ಅಳಿಯ° ಹೀ೦ಗೆ ಹೇಳಿದ –

        ಹೆ೦ಡತಿಯೊ೦ದು ಅಪ್ಪನ ಮನಗೆ
        ಹೋದರೆ ಮನೆಯಿದು ಗೊ೦ಡಾರಣ್ಯ
        ಹೆ೦ಡತಿಯೊ೦ದರಿ ಕರಕ್ಕೊ೦ಡ್ ಬಪ್ಪಲೆ
        ಹೊದರೆಯಾನೇ ಅಳಿಯ° ವರೇಣ್ಯ

        ಕೆ. ಎಸ್ . ನರಸಿ೦ಹ ಸ್ವಮಿಯವರ ನೆನೆಪಾತಡ ಅವ೦ಗೆ

  10. ಗಾಳಿ ತಿಂಬಲೆ ಹೋಗಿ ಬಪ್ಪಗ
    ಗೋಳಿಬಜೆಯನೆ ಮಾಡಿ ಮಡಗಿತು
    ಚೋಲಿ ಕೆತ್ತಿಕಿ ಕೊರದು ಮಾವಿನ ಹಣ್ಣ ಕೊಟ್ಟತ್ತೂ ।
    ಹಾಲ ಹಿಂಡಿತು ಕಾಯಿ ಕಡದಿಕಿ
    ಚೀಲದೊಳದಿಕೆಯಿದ್ದ ಮದುವೆಯ
    ಹೋಳಿಗೆಯ ಬಳುಸಿತ್ತು ಬಾಳಗೆ ಮಾವಗಳ ಮಗಳು ॥

    ನೀಲವೇಣಿಯ ತಲಗೆ ಮಲ್ಲಿಗೆ
    ಮಾಲೆ ತಂದರೆ ನೋಡಿಯಪ್ಪಗ
    ಸೇಲೆಮಾಡಿಯೆ ಸೂಡಿಗೊಂಡತುಯೆನ್ನ ಮನದನ್ನೆ ।
    ಓಲೆ ಜುಮುಕಿಯ ಸರಳ ಸುಂದರಿ
    ಕಾಲ ಕಳೆಯದೆ ಬಾಳೆ ಮಡಗಿತು
    ಹೋಳಿಗೆಯ ಬಳುಸಿತ್ತು ಬಾಳಗೆ ಮಾವಗಳ ಮಗಳು ॥

    ಕೋಲವೂರುತಲಜ್ಜ ಬಂದನು
    ಕಾಲ ತೊಳದೂ ಬಂದು ಕೂದನು
    ಹೋಳಿಗೆಯ ಬಳುಸಿತ್ತು ಬಾಳಗೆ ಮಾವಗಳ ಮಗಳು ।
    ಪಾಲು ಕೊಡುಗದ ಮುದುಕ ಮುದುಕಿಗೆ
    ಹೋಳಿ ಹಬ್ಬವ ದಿನವು ಮಾಡಿರೆ
    ಸೋಲು ಕಾಣುಗು ಹರಯ ವೃದ್ಧರ ಸರಸ ಲೀಲೆಯಲೀ ॥

    1. ಅತ್ತೇ,
      ಭಾರೀ ಲಾಯ್ಕ ಆಯಿದು.ಮೂರನೆಯ ಚರಣ ಕೊಶಿ ಕೊಟ್ಟತ್ತು.

  11. ಅತ್ತೇ…..ತುಪ್ಪದ ಹೋಳಿಗೆ ತಿಂದಾಂಗೇ ಆತನ್ನೆ… ঃ)

    ಆಳು ತೆಗದಾ ತುಳುವ ಕಾಯ್ಸೊಳೆ
    ತಾಳು ಮಾಡಿಕಿಯೊಳುದ ಹಲಸಿನ
    ಬೇಳೆ ಬೆಲ್ಲಲಿ ಬೇಶಿ ಕಡವಗ ಭಾವ ಬಂದಿಳುದಾ ।
    ಗೋಳಡುಂಡೆಯ ಮಾಡಿ ಕಣಕದ
    ಜೋಳಿಗೆ ಮಡುಗಿ ಬೇಶೆ ಲಟ್ಟಿಸಿ
    ಹೋಳಿಗೆಯ ಬಳುಸಿತ್ತು ಬಾಳಗೆ ಮಾವಗಳ ಮಗಳು ॥

    1. ಶೈಲಜಕ್ಕಾ,

      “ಗೋಳದು೦ಡೆಯ ಮಾಡಿ ಕಣಕದ
      ಜೋಳಿಗೆಯ ಲಟ್ಟುಸುತ ಬೇಶಿದ”

      ಹೇಳಿರೆ ಇನ್ನೂ ಲಾಯ್ಕ.

  12. ಅಕ್ಷರ ಬರವಲೆ ಎಲ್ಲೋರು ಉದಾಸನ ಮಾಡ್ತವು ಹೇಳಿ ಮಾತ್ರೆ ಕೊಡ್ಳೆ ಭಾಮಿನಿ ಮತ್ತೆ ಬಂತಾ…..

    ಬಾಳಗೆಳತಿಯ ನೋಡುವಾಸೆಲಿ
    ಕಾಲಿ ಹೊಟ್ಟೆಲೆ ಬಂದನಳಿಯನು
    ಬಾಳೆಯೆದುರಿಲಿ ಕೂದನುಂಬಲೆ ಭಾರಿ ಗೌಜಿಲಿಯೇ ।
    ಮೋಳು ತಂದತು ಕೆರುಶಿ ಹೋಳಿಗೆ
    ಮೇಲೆ ತುಪ್ಪವ ಕಾಯಿಹಾಲನು
    ಹೋಳಿಗೆಯ ಬಳುಸಿತ್ತು ಬಾಳಗೆ ಮಾವಗಳ ಮಗಳು ॥

    1. ಅತ್ತೆ,

      ನಾಲ್ಕನೆ ಮತ್ತೆ ಆರನೆ ಸಾಲಿಲಿ ಹೋಳಿಗೆ ಪುನರುಕ್ತಿ ಆದ ಕಾರಣ ಎರಡು ಹೋಳಿಗೆ ಬಾಳೆಗೆ ಬಿದ್ದತ್ತೋ?
      ಅದರ ಬದಲ್ಸಿರೆ ಇನ್ನೂ ಲಾಯ್ಕ ಅಕ್ಕು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×