Latest posts by ಸಂಪಾದಕ° (see all)
- ಪೆರಡಾಲ ವಸಂತ ವೇದಪಾಠ ಶಿಬಿರ : ಎಪ್ರಿಲ್7 ರಿಂದ ಪ್ರಾರಂಭ - April 6, 2023
- ವಿಷು ವಿಶೇಷ ಸ್ಪರ್ಧೆ – 2023 : ಆಹ್ವಾನ - March 19, 2023
- ನಗೆ ಬರಹ ದ್ವಿತೀಯ – ಮೆಡಿ ಉಪ್ಪಿನಕಾಯಿ - July 9, 2021
ಹೊಸ ಛ೦ದಸ್ಸು ಪರಿಚಯ ಆಗದ್ದೆ ಸುಮಾರು ದಿನ ಕಳುದತ್ತು. ಅಲ್ಲದೋ?
ಈ ವಾರ “ಶಾರ್ದೂಲ ವಿಕ್ರೀಡಿತ” ಹೇಳ್ತ ಛ೦ದಸ್ಸಿನ ಲಕ್ಷಣ೦ಗಳ ನೋಡುವ°.
ಪ್ರತಿ ಸಾಲಿಲಿ 19 ಅಕ್ಷರ೦ಗೊ ಬಪ್ಪ ಈ ಛ೦ದಸ್ಸಿನ ಮಾತ್ರಾಗಣ ಹೀ೦ಗಿದ್ದು.
ನಾನಾನಾನನ ನಾನನಾನ ನನನಾ ನಾನಾನ ನಾನಾನನಾ
ಉದಾಹರಣೆಗೆ ಅ.ರಾ.ಮಿತ್ರರ ಛ೦ದೋಮಿತ್ರಲ್ಲಿ ಹೀ೦ಗೆ ಬರದ್ದವು ಃ
“ಯಾರೇನೆ೦ದರೊ ಕೃಷ್ಣನೇ ನಿನಗದಾರೇನೆ೦ದರೋ ಕೃಷ್ಣನೇ
ಮೂರೂ ಲೋಕವು ಮುದ್ದುಗೈವ ನಿನಗಾರೇನೆ೦ದರೋ ಕೃಷ್ಣನೇ
ಊರೂ ಕೇರಿಯೆ ಮೋಹಿಪ೦ತ ನಿನಗಾರೇನೆ೦ದರೋ ಕೃಷ್ಣನೇ
ಕಾರಾಗಾರದಿನೆದ್ದು ಬ೦ದ ನಿನಗಾರೇನೆ೦ದರೋ ಕೃಷ್ಣನೇ ”
ನಮ್ಮ ಸಮಸ್ಯೆ ಈಗ ಮಾರ್ಗಲ್ಲಿ ನಡೆತ್ತ ಸಮಸ್ಯೆಯೇ.ಇದಕ್ಕೆ ಬೈಲಿನ ಪರಿಹಾರ ಮಾರ್ಗೋಪಾಯ೦ಗಳ ನೋಡುವ °,ಆಗದೋ? ಃ
“ ವಾಲೋ ವಾಹನ ಶುದ್ದಿಯೋದಿ ಹೆದರೀ ಮ೦ಚಲ್ಲಿಯೇ ಕೂದರೇ “
ಭೋಲಾಯ್ಕಿದ್ದದ ತಂಪುವಾಹನ, ಅದಲ್ಲೇ ಹೋಯೆಕ್ಕೇಳಿಕ್ಕಿ ಗೋ-
ಪಾಲಪ್ಪಚ್ಚಿಯು ಹೇಳಿಗೊಂಡು ಹೆರ ಬಂದಪ್ಪಾಗ ಟೀವೀಲಿ ಮು-
ಕ್ಕಾಲಷ್ಟೂ ಅದೆ ಸುದ್ದಿ, ಪೇಪರಿಲಿಯೂ ಮತ್ತಷ್ಟು ಇದ್ದತ್ತು, ಆ
ವಾಲೋ ವಾಹನ ಶುದ್ಧಿಯೋದಿ ಹೆದರೀ ಮಂಚಲ್ಲಿಯೇ ಕೂದನೋ?
ಸಾಲಾಗ್ಯೆಲ್ಲದರಲ್ಲು ಬಿತ್ತರುಸುದೇ ತುಂಬಾತು ಸಾಯ್ವಂತದಾ
ವಾಲೋ ವಾಹನ ಶುದ್ದಿಯೋದಿ ಹೆದರೀ ಮಂಚಲ್ಲಿಯೇ ಕೂದರೇ
ಸೋಲನ್ನೇ ಗ್ರಹಚಾರವಲ್ಲಿಗುದೆ ಬಂದಾ ನಾಲ್ಕು ನೆಗ್ಯೊಂಡಿ ಡೀ
ಕಾಲನ್ನೇ ಮುರುಶಿಕ್ಕುಗೋ ವರಳೆ ಬಂದಲ್ಲಿಂದ ಕುಂಬಾಗ್ಯದಾ ||
ವಾಲೋ ವಾಹನ ಶುದ್ದಿಯೋದಿ ಹೆದರೀ ಮಂಚಲ್ಲಿಯೇ ಕೂದನೋ
ಭೂಲೋಕಲ್ಲಿದು ನಿತ್ಯಸಂಭವವೆ ಹೇದೊಂಡಿದ್ದು ಅಡ್ಡಾದನೋ
ಮೇಲಾಟಂಗಳ ಕಾರಣಂದ ಅಥವಾ ಚಾಲಾಕು ಸಾಲದ್ದದೋ
ಮೂಲೋತ್ಪಾಟನೆ ಮಾಡಿ ತಿದ್ದುಪಡಿ ಮಾಡೆಕ್ಕಕ್ಕು ಕಾನೂನಿನಾ
(ಅಡ್ಡಾದನೋ=ಮನುಗಿದನೋ,ಮೂಲೋತ್ಪಾಟನೆ=ನಿರ್ಮೂಲ)
ವಾಲೋ ವಾಹನ ಶುದ್ದಿಯೋದಿ ಹೆದರೀ ಮಂಚಲ್ಲಿಯೇ ಕೂದರೇ
ಸಾಲಾಸಾಲಿಲಿ ಊರಿಲಿದ್ದು ಮದುವೇ ಹೇ೦ಗಪ್ಪ ಹೋಯ್ಕೊ೦ಬದೂ
ಕಾಲಿ೦ಗೊ೦ದರಿ ಚಕ್ರ ಕಟ್ಟಿ ಹೆರಟೇ ಬ೦ತೊ೦ದು ಆಲೋಚನೇ
ಈ ಲೋಕಲ್ಲಿಯೆ ಭೂಮಿ ಕ೦ಪುಸಿದರೇ ಕಾಪಾಡುಲಾರಿದ್ದವೂ //
ಬ್ಯಾಲೇ ಮಾಡುವ ಹಾಂಗೆ ವೋಡ್ಸಿ ಬಸಿನಾ ತಿರ್ಗಾಸು ಘಟ್ಟಲ್ಲಿಯೂ
ಮಾಲ್ಯೊಂಡಾನು ದಿನಾಗ್ಳು ಹೋಪದೆನಗೀ ಜನ್ಮಕ್ಕೆ ಶಾಪಾಗಿಯೋ?
ವಾಲೋ ವಾಹನ ಶುದ್ದಿಯೋದಿ ಹೆದರೀ ಮಂಚಲ್ಲಿಯೇ ಕೂದರೇ
ಮೂಳೆ೦ದಾಗಿಯೆ ಬೇನೆ ಬಪ್ಪದು ರಜಾ ಕಮ್ಯಾಗಿ ಹೋತಿಕ್ಕುಗೋ?
ಶಿರಾಡಿ ಘಟ್ಟಲ್ಲಿ (ಸಕಲೇಶಪುರ – ಉಪ್ಪಿನ೦ಗಡಿ ಮಧ್ಯೆ )ವಾಲೋ ಬಸ್ಸಿನ ತೆಕ್ಕೊಂಡು ಹೋಪ ಚಾಲಕನ ದೃಷ್ಟಿ೦ದ — ಹೆದರಿ ಕೂದರೆ ಎಲುಬಿನ ಗೆಂಟು ಬೇನೆ ಕಮ್ಮಿ ಅಕ್ಕಷ್ಟೇ ಹೊರತು ಬೇರೇನೋ ಪ್ರಯೋಜನ ಆಗ ಹೇಳುದು ಇದರ ಸಾರ
ಬ್ಯಾಲೇ = ballet ನೃತ್ಯ — ಕೊಡಿ ಕಾಲಿಲಿಯೆ ಮಾಡುವ ಹಾ೦ಗೆ, ಈಗಾಣ ಹೊ೦ಡದ ಮಾರ್ಗಲ್ಲಿ ವಾಹನದ ಚಕ್ರ ಚೂರು ಮಾತ್ರ ನೆಲಕ್ಕಚ್ಹಿ ಹೋಪದು ಹೇಳುವ ಅರ್ಥಲ್ಲಿ ಬಳಸಿದ್ದು.
ಭಾಗ್ಯಕ್ಕ,
ಈ ಸಮಸ್ಯೆ,ಸಮಸ್ಯೆ ಆಗಿಯೇ ಒಳಿಗೋ ಹೇಳಿ ಹೆದರಿಕೆ ಆಗಿತ್ತು,ಲಾಯ್ಕ ಆಯಿದು ಪರಿಹಾರ.
ಕೂದರೆ ಶಬ್ದವ ಎಳದು ಕೂದರೇ ಹೇಳಿ ಪ್ರಯೋಗ ಮಾಡಿದ್ದದು ಬೊಳು೦ಬು ಭಾವ. ಕೂದ್ದದರ ಪರಿಣಾಮ ಎ೦ತೆಲ್ಲಾ ಅಕ್ಕು ಹೇಳ್ತ ಕಲ್ಪನೆಗೆ ಆಹಾರ ಆಗಲಿ ಹೇಳಿ.
ಕೂದನೋ ? ಹೇಳಿ ಪ್ರಶ್ನೆ ಹಾಕಿ ಬಿಟ್ಟರೆ ಕಲ್ಪನೆಗೆ ಕಡಿವಾಣ ಹಾಕಿದ ಹಾ೦ಗಾವುತ್ತೋ ಏನೋ? ಯಾವದು ಅನುಕೂಲವೋ ಹಾ೦ಗೆ ಪ್ರಯತ್ನ ಮಾಡ್ಲಕ್ಕು.
“ಕೂದರೇ” ಹೇಳಿ ಮಾಡಿರೆ ಛಂದಸ್ಸಿಂಗೆ ಸರಿಯಾದರೂ ವ್ಯಾಕರಣ ತಪ್ಪಾವುತ್ತು. ಅಲ್ಲಿ ದೀರ್ಘ ಬಪ್ಪಲಾಗ. ಅದಕ್ಕೆ ಎಂತ ಮಾಡುತ್ಸು?
ಅರ್ಕಚ್ಛೇದದೆ ಮಂಸಜಂ ಸತತಗಂ ಶಾರ್ದೂಲ ವಿಕ್ರೀಡಿತಂ-ಹನ್ನೊಂದು ಅಕ್ಷರದ ಮತ್ತೆ’ ಯತಿ’ ಬಪ್ಪ ಮ,ಸ,ಜ,ಸ,ತ,ತ ಗಣಂಗೊ ಮತ್ತೆ ಒಂದು ಗಂ-ಹೀಂಗಿಪ್ಪ ಬಲು ಪ್ರಸಿದ್ಧ ವೃತ್ತ.ಭಾರೀ ಸಂತೋಷ ಆತು.