Oppanna.com

ಕಮ್ಮಕ್ಕಿಯ ಮನೆಯ “ಇಲಿಯಜ್ಞ” ದ ಕಥೆ !!

ಬರದೋರು :   ಸುರೇಖಾ ಚಿಕ್ಕಮ್ಮ    on   20/09/2014    13 ಒಪ್ಪಂಗೊ

ಕಿಂದರಿ ಜೋಗಿಗೆ ಸೈಡ್ ಹೋಡಿಯೋ ಹಾಂಗಿತ್ತು -ಕಮ್ಮಕ್ಕಿಯ ಮನೆಯ “ಇಲಿಯಜ್ಞ” ದ ಕಥೆ  !!

ಮತ್ತೆ ಎನ್ನ ಬಾಲ್ಯದ ನೆನಪುಗೊ ಜಾತ್ರೆ ತೇರಿನಂಗೆ ಮೆರವಣಿಗೆ ಹೆರಡುತ್ತಾ ಇದ್ದವು. ಎನಗೆ ಅಂಬಗ 7 – 8 ವರ್ಷ ಇಕ್ಕು. ಮನೇಲಿ ಒಂದು ಮುಂಗುಸಿ ಸಾಕಿತ್ತಿದ್ದೆಯೋ. ಗುಡ್ಡಲ್ಲಿ ಎಮ್ಮೆ ಮೇಯಿಸುಲೆ  ಹೋದಪ್ಪಗ, ಗಾಯ ಆಗಿಪ್ಪ ಮುಂಗುಸಿ ಮರಿಯೊಂದು ಪೊದೆಲಿ ನರಳಿಗೋಂಡಿತ್ತು. ಪಾಪ ಹೇಳಿ- ಮನೆಗೆ ತಂದಿಕ್ಕಿ- ಶ್ರುಶ್ರೂಶೆ ಮಾಡಿಕ್ಕಿ- ಸಾಂಕಿ, “ಕಿಟ್ಟಿ” ಹೇಳಿ ಹೆಸರಿಟ್ಟಪ್ಪಗ ಅದು ಎಂಗಳ ಮನೆಯ ಸದಸ್ಯನೇ ಆಗಿಹೋತು. ಭುಜ ಹತ್ತಿ ಕೂರುಗು- ಕೂದುಕೊಂಡಿಪ್ಪಗ ಬಂದು ಮಡಿಲಲ್ಲಿ ಮನಗುಗು. ಅಬ್ಬೆಯಿಂದ ಪಾಠ ಕಲಿಯದ್ದ ಕಾರಣವಾ ಎಂಥದಾ,  ಅದು ಬೇಟೆಯಾಡಿಕೊಂಡು ಇತ್ತಿಲ್ಲೆ. ಎಂಗಳೇ ಜಿರಳೆ, ಇಲಿ, ಕಪ್ಪೆ ಇತ್ಯಾದಿ ಆಹಾರ ಒದಗಿಸೆಕಾಗಿತ್ತು ! ಕೊಡಪಾನ ತೆಕ್ಕೊಂಡು ನೀರಿಂಗೆ ಹೇಳಿ ತೋಟಲ್ಲಿಪ್ಪ ಬಾವಿ ಕಡೇಂಗೆ ಹೆರಟಪ್ಪಗ, ಕಪ್ಪೆ ಮೇಲಣ ಆಶೆಗಾಗಿಯೇ ಆದಿಕ್ಕು- ಕಿಟ್ಟಿ ಎಂಗಳ ಹಿಂದೆ ಬಂದುಗೊಂಡಿತ್ತು. ಎಂಗಳೆ ಸಾಯಿಸಿ ತಂದುಕೊಟ್ಟ ಬೇಟೆಯ ಅದು ತಿಂಬಗ -ಆರಾರು ನೋಡಿರೆ ಅದಕ್ಕೆ ಭಯಂಕರ ಕೋಪ. ಬಂದು ಎಂಗಳನ್ನ ಪರಂಚದೆ ಬಿಡ. ಎಂಗೋ ಮಕ್ಕ ಕುತೂಹಲಕ್ಕೆ ನೋಡ್ಲೆ ಹೋಗಿ- ಕಿಟ್ಟಿಯಿಂದ ಪರಂಚಿಸಿಕೊಂಡ ನೆಂಪಿದ್ದು. ಉಳುದ ಸಮಯಲ್ಲಿ ಒಪ್ಪಣ್ಣನಂತೆ ಇರುತ್ತಿದ್ದ ಕಿಟ್ಟಿ, ಅದರ ಊಟದ ಸಮಯಲ್ಲಿ ಮಾಂತ್ರ ಅದೆ೦ತಕೆ ಪಿಸುಂಟನಂಗೆ ಆಡಿಗೊಂಡಿತ್ತೋ ?

ಕಿಟ್ಟಿಗಾಗಿ ಇಲಿ ಬೇಟೆ ಎಂಗೊಗೆ ಅನಿವಾರ್ಯವಾತನ್ನೆ ? ಅಲ್ಲದ್ದೆ ಮನೆ ಅಟ್ಟಲ್ಲಿ ಇಲಿಗ ದೊಡ್ಡ ಸಂಸಾರವೇ ಇದ್ದತ್ತು.  ರಾತ್ರಿಯಪ್ಪದೆ ತಡ- ಅಟ್ಟಲ್ಲಿ ಇಲಿಗಳ ಕೊಕ್ಕೊ-ಕಬ್ಬಡ್ಡಿ ಶುರುವಾಗಿಗೊಂಡಿತ್ತು. ಬೇಟೆಯಾಡ್ಲೆ ಕಲಿಯಲಿ ಹೇಳಿ ಅಟ್ಟಲ್ಲಿ ಕಿಟ್ಟಿನ ಬಿಡಲುದೆ ಧೈರ್ಯ ಇಲ್ಲೆ !!  ಇಲಿಗಳೇ ಕಿಟ್ಟಿನ ಬೇಟೆಯಾಡಿದರೇ ? ಹೇಳಿ ಭಯ ! ಇಲಿಗತ್ತರಿಯ ಹೂಡಿಟ್ಟರೆ, ಇಲಿಗ ಸುಮ್ಮನೆ ಅದರಲ್ಲಿ ಬೀಳುಗಾ ? ಪಕ್ಕದ ಬಸವಾನಿ ಪೇಟೆಯ ಹೋಟೆಲಿಂದ  ಅಪ್ಪ  ನಾಲ್ಕೇ ನಾಲ್ಕು  ಗೋಳಿಬಜೆಯ  ಕಟ್ಟಿಸಿಗೊಂಡು ಬಕ್ಕು. ಅದರ ತಂದಿಕ್ಕಿ ಹಲಗಣೆಯ ಕೊಡಿಲಿ ಪೇಪರ್ ಲಿ ಸುತ್ತಿ ಮಡುಗಿರೆ- ಮನೆಯಿಡೀ ಪರಿಮಳ !!! ಎಂಗಳ ಬಾಯಲ್ಲಿ ನೀರು !!! ಎನಗೆ- ಎನ್ನ ಅಕ್ಕಂಗೆ ಮನಸ್ಸೆಲ್ಲ ಗೋಳಿಬಜೆಯ ಮೇಲೆ ! ಆದ್ರೆ ದೊಡ್ಡೋವು ಕೊಡ್ತವಿಲ್ಲೆನ್ನೆ ! ಆ ಗೋಳಿಬಜೆಗೆ ಅಪ್ಪನ ಹದ್ದಿನ ಕಣ್ಣಿನ ರಕ್ಷಣೆ ಬೇರೆ !  “ಕೆಳ  ಜಾತಿಯವನ ಹೋಟೆಲ್ನಲ್ಲಿ ಮಾಡಿದ್ದು ಕಣ್ರೋ. ನಿಂಗೊಗೆ ಕೊಡಂಗಿಲ್ಲ. ಅದು ಇಲಿಗೆ ತಿಂಬಲೆ ತಂದದ್ದು ” ಎಂಬ ಅಮ್ಮನ ಸಮಜಾಯಿಸಿ, ಎಂಗಳ ಎಳೆ ಮನಸ್ಸಿಗೆ ಒಪ್ಪುಗಾ ? ದೊಡ್ಡೋವು ಮಾತಾಡುದು ಕೇಳಿ, ಇಲಿಗಳ ಅದೃಷ್ಟದ ಬಗ್ಗೆ ಎಂಗಳಲ್ಲೇ ಚರ್ಚೆ ಆಗಿಗೊಂಡಿತ್ತು. ಮಾರನೆ ದಿನ ಎಂಗಳ ಕಿಟ್ಟಿಗೆ ಮೃಷ್ಟಾನ್ನ(ಇಲಿ) ಭೋಜನ ಗ್ಯಾರೆಂಟಿ !

ಇಲಿಗಳು ಮಾಡಿಕೊಂಡಿದ್ದ ಉಪದ್ರ ಒಂದಾ ? ಎರಡಾ ? ಅದೇ ವರ್ಷ ಹೊಲಿಸಿದ್ದ, ಅಥಿತಿಗಳಿಗೆ ತೆಗೆದಿರಿಸಿದ್ದ, ಹೊಸ ಹತ್ತಿ ಹಸೆಯ ಒಳಗೊಳಗೇ ತಿಂದು -ಹರಿದುಹಾಕಿ, ನೆಂಟರೆದುರು ಅವಮಾನ ಆಗಿಯಪ್ಪಗ, ಅಮ್ಮನಿಂದ ಇಲಿಗೊಗೆ ಸಹಸ್ರ ನಾಮಾರ್ಚನೆ ! ಮಿಲ್ಲಿ0ಗೆ ತೆಕ್ಕೊ೦ಡು ಹೋಪಲೆ ಹೇಳಿ- ಪಣಥದಿಂದ ಗೋಣಿ ಚೀಲಕ್ಕೆ ತುಂಬಿಸಿ ಮಡುಗಿದ್ದ ಭತ್ತದ ಚೀಲ ತೂತು ಮಾಡಿದಾಗ ಅಪ್ಪನ ಕೈ೦ದ ಇಲಿಗೆ ಸಿಕ್ಕ ಬೈಗುಳು ! ಅಕ್ಕನ ಹೊಸ ಯುನಿಫಾರ್ಮ್ ಜಗುದ ಕರ್ಮಕ್ಕೆ ಅತ್ತು- ಶಾಪ ಹಾಕಿ, ರಂಪ ಮಾಡಿದ ಅಕ್ಕ ! ತನ್ನ ಸ್ವಯಂವೈದ್ಯ ಆಯುರ್ವೇದ ಪುಸ್ತಕವ ಮೆಂದ ತಪ್ಪಿಂಗೆ  “ಇಲಿಯಜ್ಞ” (ಜನಮೇಜಯ ರಾಯನ ಸರ್ಪಯಜ್ಞದ ಹಾ೦ಗೆ) ಕೈಗೊಂಡು, ವಿವಿಧ ಉಪಾಯ0ದ ನಿರಂತರ ಒಂದು ತಿಂಗಳು ಇಲಿಗತ್ತರಿಲಿ ಇಲಿ ಸಾಯಿಸಿ, ಎಂಗಳ ಕಿಟ್ಟಿಗೆ ಸುಗ್ರಾಸ ಭೋಜನ ಒದಗಿಸಿದ ಅಣ್ಣ ! ಈಗ ಅನ್ನಿಸುತ್ತು – ಅಷ್ಟೆಲ್ಲ ಇಲಿಗ ಎಲ್ಲಿತ್ತಿದ್ದವು ? ಊರಿನ ಎಲ್ಲ ಇಲಿಗಳುದೆ ಯಜ್ಞ ನೋಡುಲೆ ಎಂಗಳ ಮನೆಗೆ ಬಂದುಕೊಂಡಿತ್ತಿದ್ದವಾ ?  ಅಣ್ಣನ ಇಲಿಯಜ್ಞ ಎಂಗಳ ಊರಲ್ಲಿ ಎಷ್ಟು ” ವಲ್ಡ್ ಫೇಮಸ್ !!! ” ಆಗಿಬಿಟ್ಟಿತ್ತು ಗೊಂತಿದ್ದಾ ? ಕುವೆಂಪುರವರ “ಬೊಮ್ಮನಹಳ್ಳಿಯ  ಕಿಂದರಿ ಜೋಗಿ”ಗೆ ಸೈಡ್ ಹೋಡಿಯೋ ಹಾಂಗಿತ್ತು-ಕಮ್ಮಕ್ಕಿಯ ಮನೆಯ “ಇಲಿಯಜ್ಞ” ದ ಕಥೆ  !! ಅಹಾ……… ಬರೆದರೆ ಅದೇ ಒಂದು ಲಲಿತಪ್ರಬಂಧಕ್ಕಪ್ಪಷ್ಟು ವಿಷಯ ಇದ್ದು !

ಇಂತಹ ಎಂಗಳ ಮನೆಯ ಕಿಟ್ಟಿ – ಒಂದಿನ ಹಟ್ಟಿಯೆಡೆಗೆ ಹೆರಟಿದ್ದ ಅಕ್ಕನ ಹಿಂದೆಯೇ ಹೋಯ್ದು. ಅದೆಲ್ಲಿತ್ತೋ ಪಕ್ಕದ ಮನೆಯ ನಾಯಿ – ಓಡಿ ಬಂದು, ಕಿಟ್ಟಿಯ ಕುತ್ತಿಗೆಗೆ ಬಾಯಿ ಹಾಕಿತ್ತು….. ಕ್ಷಣ ಮಾತ್ರಲಿ ಕಿಟ್ಟಿಗೆ ಭೂಮಿಯ ಋಣ ತೀರಿತ್ತು ….. ಮನೆಯಲ್ಲಿ ಅಂದು ಸ್ಮಶಾನ ಮೌನ !!! ಮೂರು ವರ್ಷಂದ ಜೊತೆಗಿದ್ದ ಜೀವವೊಂದು -ಅರೆ ಕ್ಷಣಲಿ ಕಣ್ಣೆದುರೆ ದುರ್ಮರಣಕ್ಕೀಡಾದ್ದು ಎನ್ನ ಬಾಲ್ಯ ಒಂದು ಕಹಿ ಘಟನೆ…..

ಕಿಟ್ಟಿ ಹೋದ ಮತ್ತೆ, ಅಣ್ಣ “ಇಲಿಯಜ್ಞ”ನ ನಿಲ್ಲಿಸಿ ಬಿಟ್ಟ !! “ಯಾರಿಗಾಗಿ, ಯಾವ ಉದ್ದೇಶಕ್ಕಾಗಿ, ಯಾರ ಆಹಾರಕ್ಕಾಗಿ ಇಲಿಗಳ ಬೇಟೆಯಾಡುತ್ತಿದ್ದೆನೋ- ಆ ಕಿಟ್ಟಿಯೇ ಇಲ್ಲವೆಂದ ಮೇಲೆ ಮತ್ತೆ ನಾನು ಯಾರಿಗಾಗಿ ಈ ಇಲಿಯಜ್ಞವನ್ನು ಮುಂದುವರೆಸಲಿ ? ನನ್ನ ಇಲಿಯಜ್ಞಕ್ಕೆ ಧಿಕ್ಕಾರವಿರಲಿ….. ”  ಎಂದು ಶಪಥ ತೊಟ್ಟ ಎನ್ನಣ್ಣ !!!!

ಇಲಿಗೋಕ್ಕೂ ಅದೇ ಬೇಕಾಗಿತ್ತು. ಅವು ಅವದ್ದೇ ಸ್ವತಂತ್ರ ರಾಜ್ಯಭಾರ ಸುರುಹಚ್ಚಿಕೊಂಡವು. ಪೂರ ಅಟ್ಟ ಅವುಗಳದ್ದೇ ಸಾಮ್ರಾಜ್ಯವಾಗಿ ಹೋತು. ಹೇಳೋವು- ಕೇಳೋವು ಇಲ್ಲದ್ದೆ, ರಾಜಾರೋಷವಾಗಿ ತಿರುಗುವ ಅವುಗಳ ಪರಿ ನಿಂಗೊ ನೋಡೆಕಾತು…. ಇಲಿಗಳ ಉಪದ್ರ ತಡವಲೆಡಿಯದ್ದೆ, ಅವುಗಳಿಗೊಂದು ಗತಿ ಕಾಣಿಸಲೇ ಬೇಕಾದ ಅನಿವಾರ್ಯತೆ. ಅಜ್ಜನ ಮನೇಂದ ಬೆಕ್ಕಿನ ಮರಿ ತಪ್ಪ ನಿರ್ಧಾರ ಆತು. ಪುಟ್ಟ ಬೆಕ್ಕಿನ ಮರಿನ ಚೀಲಲಿ ಇಟ್ಟುಗೊಂಡು, ಬಸ್ಸಿಲಿ ತಂದು, ದಷ್ಟಪುಷ್ಟವಾಗಿ ಬೆಳೆಸಿದ್ದೇ ಬಂತು ! ಬೆಕ್ಕು ಇಲಿಗಳನ್ನ ಹಿಡಿದ್ದಿಲ್ಲೆ, ಒಲೆದಂಡೇಲಿ ಬೆಚ್ಚಂಗೆ ಮನಗಿ, ಹಾಯಾಗಿ ನಿದ್ದೆ ಮಾಡಿಗೊಂಡಿತ್ತು ! ಹಸಿವಪ್ಪಗ ಕದ್ದು ಜಾಯಿ ಕುಡಿಗು ! ಜರಳೆಯ ನೋಡಿದರುದೆ ಹೆದರಿ ದೂರ ಸರಿದು ನಿಲ್ಲುಗು ! ಎಂಗಳೇ ಜರಳೆ ಬಡಿದು ಎದುರು ಹಾಕಿರೆ, ಕಚ್ಚಿಗೊಂಡು ಓಡಿಹೋಗಿಗೊಂಡಿತ್ತು ! ಜಾಯಿ- ಅನ್ನ ತಿಂದು ಹಾಯಾಗಿದ್ದದ್ದು ಸಾಲದ್ದೆ, ಅಂಬಗಂಬಗ ಹರಣೆ-ಓತಿಕ್ಯಾತವ ಬೇಟೆ ಮಾಡಿ, ಅರ್ಧ ತಿಂದಿಕ್ಕಿ, ಉಳಿದರ್ಧವ ಅಟ್ಟಲಿ-ಹೆಂಚಿನ ಮರೆಲಿ ಇಟ್ಟು ಬಿಡುಗನ್ನೆ. ಮರುದಿನ ಮನೆಯಿಡೀ ಅದರ ವಾಸನೆ ! ಆ ಅರೆ ಶವ ಹುಡುಕಿ ಎಸೆವ ಕೆಲಸ ಬೇರೆ ! ಬೆಕ್ಕಿಂದ ಉಪಕಾರಕ್ಕಿಂತ ಅಪಕಾರವೇ ಜಾಸ್ತಿಯಾದಪ್ಪಗ- ಅಪ್ಪ ಬೆಕ್ಕನ್ನ ಒತ್ತಾಯ ಪೂರ್ವಕವಾಗಿ, ಅಜ್ಜನ ಮನೆಗೆ ವಾಪಾಸ್ ಬಿಟ್ಟಿಕ್ಕಿ ಬಂದದ್ದು ಇನ್ನೊಂದು ಕತೆ !

ಪಾಪ ನಿಂಗೋ…… ಸಿಕ್ಕಿದ್ದಿ  ಹೇಳಿ ಒಂದೆ ಸಾರ್ತಿ ಪೂರ ತಲೆ ತಿಂಬಲಾಗ. ಅದಕ್ಕೆ ಇಲ್ಲಿಗೆ ನಿಲ್ಲಿಸುತ್ತೆ ………. ಅಕ್ಕಾ…….

13 thoughts on “ಕಮ್ಮಕ್ಕಿಯ ಮನೆಯ “ಇಲಿಯಜ್ಞ” ದ ಕಥೆ !!

  1. “ಇಲಿ ಯಜ್ಞ”ದ ಕಥೆಲಿಯೂ ಎಮ್ಮೆ ಮೇಯಿಸುವ ಶುದ್ದಿ!ಒಪ್ಪ ಆಯಿದು.ಅಂತೂ ಎಲಿಗಳ ಸಂಸಾರ ಬೆಳದತ್ತು..ಒಂದು ಹೆಣ್ಣು ಎಲಿ ಒಂದು ವರ್ಷಲ್ಲಿ ೨೦೦೦ಮರಿಗೊಕ್ಕೆ ಜನ್ಮ ಕೊಡುತ್ತ ಡ.

    1. ಅಯ್ಯಯ್ಯಪ್ಪಾ ….!!!!! ಈ ಇಲಿಗಳ ಕ್ಯಪಾಸಿಟಿಯೇ ?????

    2. ಎಲ್ಲಿಂದ ಇದು ಸುದ್ದಿ ? ವರ್ಷಕ್ಕೆ 2000 ಮರಿ ಮಡುಗೆಕು ಕೇಳಿರೆ ದಿನಾ 5-6 ಮರಿ ಮಡುಗೆಕಾವುತ್ತು.
      ಎಡಿತ್ತಿಲ್ಲೆಯಾ ಹೇಳಿ. ಅದಕ್ಕೆಂತ ರೆಸ್ಟ್ ಬೇಡದಾ ?

      1. ಅವು ಹೇಳಿದ್ದು ಇಲಿಚಕ್ರ-ಬಡ್ಡಿ ಲೆಕ್ಕಾಚಾರದ ,ಮೊಮ್ಮರಿಯಾ ಮೆಮೊರಿಗೆ ಸೇರಿಸಿ ಇರೆಕ್ಕು.ರಾಯನ ಯಾಗಲಿ ,ಕುರ್ಸಿ-ಇ0ದ್ರ-ತಕ್ಷಕ ಸಮೇತ ,ಹೇಳಿದಾ೦ಗೆ.

        1. ಸರಿಯಾಗಿ ಹೇಳಿದಿ ಯಮ್.ಕೆ ಅಣ್ಣ.ಧನ್ಯವಾದ.ಬಹುಶ: ಹೀಂಗೆ ಹೇಳಿರೆ ಸರಿಯಕ್ಕು.”ಒಂದು ಜೊತೆ ಇಲಿಯ ಸಂತತಿ ಒಂದು ವರ್ಷಲ್ಲಿ ೨೦೦೦ದಷ್ಟು ಆವುತ್ತು.”ಅವಲೋಕನಕ್ಕೆ ಎಡೆಮಾಡಿ ಕೊಟ್ಟ ಭೀಮಗುಳಿ ಅಕ್ಕಂಗೆ ಧನ್ಯವಾದ.

  2. ಎಲ್ಲ ಇದ್ದನ್ನೇ, ಆದರೆ ಬೀಚು-ಹಿತ್ತಿಲು ಭಾವ ಸೀತ(ದಾ)ಉಪಾರಕ್ಕೆ ಹೋಪ ಬದಲು ,ಮುನ್ನಾಣ ದಿನವೇ ಊಟಕ್ಕೆ ಹೋದರಾಗದೋ ಹೇಳಿ ಮ೦ಗಳ– ಊರಿ೦ದ ಸ್ವೀಟು ಮಾಡಿದ್ದ.

    —ಸಾರಿ ,ಟ್ವೀಟ್ ಮಾಡಿದ್ದ.

    1. ಅಪ್ಪಪ್ಪು…. ಮೆಲಾರಕ್ಕೆ ಕೊರೆವಲೆ ಹಿಂದಣ ದಿನವೆ ಬಪ್ಪಲಕ್ಕು. ಕಾಳಗ-ಕಲ್ಯಾಣ ಮಾಡಿ ಮಾಡಿ ಬಚ್ಚಿತ್ತು ! ಹಾಂಗೆ ಒಂದರಿ ಕಿಡ್ನಾಪ್ ಮಾಡುವ ಅದಾಜಿ. ಅಡ್ರೆಸ್ಸಿಂಗೆ ಮುಳಿಯ ಭಾವನ್ನ ಕೇಳಿ…..

      1. ಚಿಕ್ಕಮ್ಮಾ.. ಮುಳಿಯ ಭಾವ೦ಗೂ ದಾರಿ ಗೊ೦ತಿಲ್ಲೆ.ಆದರೆ ಕೇಳಿಗೊ೦ಡು ಬಪ್ಪೆ !!

        1. ಹಾಗೆ ಕೇಳಿಗೊಂಡು ಬಪ್ಪಗ, ಜೊತೆಲಿದ್ದೊರನ್ನೂ ಕರೆದುಕೊಂಡು ಬನ್ನಿ……

  3. ಎಂಗಳ ಮನೆಯಲ್ಲಿ ಈ ಭಾನುವಾರ(28.9.14) “ಸೀತಾಪಹಾರ” ತಾಳಮದ್ದಳೆ. ಮಧ್ಯಾಹ್ನ 2.30 ಯಿಂದ ಸಂಜೆ 6.00. ಬಪ್ಪಲೆ ಇಷ್ಟ ಇದ್ದಾ ? ಹಂಗಾರೆ ಬಪ್ಪಲಕ್ಕು. ಸ್ವಾಗತ.

  4. ಇಲಿ ಕತೆ ಓದಿಪ್ಪಗ ನಾವಗೆ ಒ೦ದು ಕಡೇ, ಕೋಕು೦ಟೇ ಕ್ರಾಸ್ನ ಹಾಗಿ೦ರತ ಜಾಗೆಲಿ ದರ್ಶಿನಿ ಒ೦ದರ ಮೆನು ಬಾಗಿಲಿಲಿ ಬರದು ಮಡಗಿದ್ದು ಓದಿದ ನೆ೦ಪಾತು.

    ಅಲ್ಲಿ —
    ಇಲಿ ಇಡ್ಲಿ ದೊರೆಯುತ್ತದೆ
    ಹೇಳಿ ಮಸಿಲಿ ಬರದಿತ್ತು.

    ಸದ್ಯ ಹೇಳಿ ಅಲ್ಲಿ೦ದ ಪೀ೦ಕಿತ್ತು.

    – ಹೀ೦ಗೆ ಬರಕೊ೦ಡಿತ್ತು.

    1. ಹ್ಹ. ಹ್ಹ…. ಒಂದರಿ ಇಲಿ ಇಡ್ಲಿ ರುಚಿ ನೋಡೆಕಾತು ! …
      2 ಸೆಪ್ಟೆಂಬರ್ 2014, ಕನ್ನಡ ಪ್ರಭ -ಬೈ2 ಕಾಫಿ – ಮಕರಂಧದಲ್ಲಿ ಪ್ರಕಟವಾದ ಎನ್ನ “ಶ್ರುತಕೀರ್ತಿ” ಲೇಖನ ಸಾಕಷ್ಟು ಕತ್ತರಿ ಪ್ರಯೋಗಕ್ಕೆ ಒಳಗಾಗಿತ್ತು. ಹಾಂಗೆ ಮೈಲ್ ಮಾಡಿತ್ತಿದ್ದೆ. ನೋಡಿದ್ದಿಲ್ಲೆಯಾ ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×