ಮೂರು ವರ್ಷ ಹಿಂದಣ ಮಾತು. ದೊಡ್ಡ ಮಗ° ಆರನೇ ಕ್ಲಾಸ್- ಚಿಕ್ಕ ಮಗ° ಒಂದನೇ ಕ್ಲಾಸ್. ಮಕ್ಕಳ ಶಾಲೆ ಬಿಡುವ ಹೊತ್ತಿಂಗೆ, ಆನು ಶಾಲೆ ಹತ್ರ ಹೋಗಿ, ಅಲ್ಲಿಪ್ಪ ಶಾಲೆಯ ಈಜುಕೊಳಲ್ಲಿ ಮೂರು ಜೆನವುದೆ ಈಜಿಕ್ಕಿ ಬಪ್ಪ ಕ್ರಮ ಮಾಡಿಕೊಂಡಿತ್ತಿದ್ದೆಯೊ°. ಅಂದು ಈಜು ಮುಗುಶಿ ಹೆರೆ ಬರೆಕಾರೆ ಕಂಡದು ಎಂತ ಗೊಂತಿದ್ದಾ ? ಮಕ್ಕಳ ಶಾಲಾ ಕ್ರೀಡೋತ್ಸವಕ್ಕಾಗಿ ಸಿದ್ಧಪಡಿಸಿಪ್ಪ ಲಾಂಗ್ ಜಂಪ್ ಹೊಂಡ. ಅಂದಷ್ಟೇ ಹೊಯ್ಗೆ ತುಂಬಿಸಿಟ್ಟಿತ್ತಿದ್ದವು.
ಎಲ್ಲಿತ್ತೋ ಸ್ಪಿರಿಟ್ಟು ! ಹಳೆಯ ದಿನಗಳ ನೆಂಪಾತು. ಹತ್ತನೇ ತರಗತಿಯಲಿಪ್ಪಗ, ಹೊಸನಗರಲ್ಲಿ ನಡೆವ “ಹಿರಿಯ ಪ್ರಾಥಮಿಕ ಶಾಲಾ ಮಟ್ಟದ ಕ್ರೀಡೋತ್ಸವ”ಕ್ಕೆ ಹೋಗಿತ್ತಿದ್ದೆ. ವಿದ್ಯಾರ್ಥಿ ಜೀವನಲ್ಲಿ ಕ್ರೀಡೆಲಿ ಅಷ್ಟೆಂತ ಆಸಕ್ತಿ ಇಲ್ಲದ ಜೆನ ಆನು. ಆವಕಾಶ ಸಿಕ್ಕಿದ್ದಾದರೂ ಹೇಂಗೆ ? ಆ ವರ್ಷ ಕ್ರೀಡೆಗೆ ವಯಸ್ಸಿನ ಮಿತಿ ಹಾಕಿತ್ತಿದ್ದವು. ಹಾಂಗಾಗಿ, ಉತ್ತಮ ಕ್ರೀಡಾಪಟುಗಳಿಂಗೆಲ್ಲ ಪ್ರಾಯ ಹೆಚ್ಚಾದ ಕಾರಣ ಅವಕಾಶ ಸಿಕ್ಕದ್ದೇ ಹೋತು. ಅಕೇರಿಗೆ ಆನು ಹೈಜಂಪ್ ಗೆ ಆಯ್ಕೆಯಾಗಿತ್ತಿದ್ದೆ. ಮೂರೂ ಮುಕ್ಕಾಲು ಅಡಿ ಎತ್ತರ ಹಾರಿ, ಮೊದಲ ಬಹುಮಾನ ಗೆದ್ದಿಕ್ಕಿ, ಶಿವಮೊಗ್ಗಲಿ ನಡೆಯಲಿಪ್ಪ ತಾಲ್ಲೂಕು ಲೆವೆಲ್ ಕ್ರೀಡೋತ್ಸವಕ್ಕೂ ಅರ್ಹಳಾಗಿತ್ತಿದ್ದೆ ! ಓದಿನ ನೆಪವೊಡ್ಡಿ ಶಿವಮೊಗ್ಗಕ್ಕೆ ಹೊಯ್ದಿಲ್ಲೆ. ಅದು ಬೇರೆ ವಿಷ್ಯ.
ಹಳೆದೆಲ್ಲ ಒಂದರಿ ನೆಂಪಾತು. ಮೈಯಲ್ಲಿ ಒಂದರಿ ಉತ್ಸಾಹ ಚಿಮ್ಮಿತ್ತು ! ಕೈಯಲ್ಲಿಪ್ಪ ಈಜುಡುಗೆಯ ತೊಟ್ಟೆ ಮಕ್ಕಳ ಕೈಲಿ ಕೊಟ್ಟಿಕ್ಕಿ, ಮರಳು ಹೊಂಡದ ಕಡೇಂಗೆ ಹೋದೆ. ಹೊಂಡಂದ 20 ಅಡಿ ಹಿಂದಕ್ಕೆ ನಡದು ಅಲ್ಲಿಯೆ ನಿಂದೆ. ಅಲ್ಲಿ ಆಡುತ್ತಾ ಇತ್ತಿದ್ದ 8 -10 ಮಕ್ಕೊ ಲಾಂಗ್ ಜಂಪ್ ಪ್ರಾಕ್ಟೀಸ್ ಮಾಡಿಕೊಂಡಿತ್ತಿದ್ದವು. ” ಆಂಟಿಗೆ ದಾರಿ ಬಿಡ್ರೋ” ಎಂಬ ಮಾತು ಕೇಳಿತ್ತು. ಮಕ್ಕೋ ಸರಿದು ನಿಂದವು. ನಾಲ್ಕು ಹೆಜ್ಜೆ ಓಡಿದ್ದೆ ಅಷ್ಟೆ…. ಮುಂದಕ್ಕೆ ಮುಕ್ಕರಿಸಿದಂಗಾತು…….. ಓಡುದರ ನಿಲ್ಲಿಸಲೂ ಆಯ್ದಿಲ್ಲೆ, ನಿಯಂತ್ರಣ ತಪ್ಪಿತ್ತು. ಹೊಯ್ಗೆ ಹೊಂಡ ಇನ್ನು ಎ೦ಟು ಹೆಜ್ಜೆ ಇಪ್ಪಗಳೆ “ಮೊಗಚ್ಚಿ” ಬಿದ್ದೆ ! (ನಗೆ ಮಾಡ್ತಾ ಇದ್ದಿರಾ ಹೇಂಗೆ ? – ಪಾಪ ಎನಿಸಿದ್ದಿಲ್ಲೆಯೊ ?) ಹೊಯ್ಗೆ ಹೊಂಡಕ್ಕೆ ಒಂದು ದೀರ್ಘದಂಡ ಪ್ರಣಾಮ ಮಾಡಿದಂಗಾತು. ಸವಾರಿಸಿಕೊಂಡು ಎದ್ದೆ – ಕೈಗೆ ರಜ್ಜ ತರಚಿತ್ತು. ಅಲ್ಲಿದ್ದ ಮಕ್ಕಳೆಲ್ಲ “ಆಂಟಿ ಬಿದ್ರು ಕಣ್ರೋ” ಹೇಳಿದ್ದು ಕೇಳಿತ್ತು. ಹಾಂಗೇ ಬಿಟ್ಟರೆ ಸೋಲು ಒಪ್ಪಿಕೊಂಡಂಗೆ ಆವುತ್ತು ಹೇಳಿ (ಬಿದ್ದರು ಮೀಸೆ ಮಣ್ಣಾಗಲಿಲ್ಲ ಹೇಳುವ ಹಾ೦ಗೆ) ಮತ್ತೆ ನಾಲ್ಕು ಹೆಜ್ಜೆ ಹಿಂದಕ್ಕೆ ನಡೆದು, ಮತ್ತೆ ನಿಧಾನಕ್ಕೆ ಓಡಿ ಒಂದು ಲಾಂಗ್ ಜಂಪ್ ಮಾಡಿದೆ !!!.
ಅಷ್ಟೊತ್ತಿಂಗೆ ಕೈಯಿಂದ ರಕ್ತ ಅರಿವಲೆ ಸುರು ಆಗಿತ್ತು ! ಹೊಯ್ಗೆ ಗಾಯಕ್ಕೆ ಮೆತ್ತಿ, ಉರಿವಲೆ ಸುರು ಆತು ! ತೊಟ್ಟೆ೦ದ ನೀರಿನ ಬಾಟೆಲ್ ತೆಗದು ಸ್ವಲ್ಪ ನೀರು ಕುಡುದು, ಮುಂಗೈ ತೊಳಕ್ಕೊ೦ಡು, ಸ್ಕೂಟಿ ಚಲಾಯಿಸಿ ಮನೆ ಸೇರಿ, ಮದ್ದೆಣ್ಣೆ ಕಿಟ್ಟಿಗೊ೦ಡೆ.
ಪ್ರಸಂಗ ನಡೆವ ಹೊತ್ತಿ೦ಗೆ ಸ್ಕೂಲಿನ ಸೆಕರೇಟ್ರಿ ಶಾಲೆಯ ಬಾಲ್ಕನಿಲಿ ನಿಂತಿತ್ತಿದ್ದವಡ. ಆನು ಬಿದ್ದದು ನೋಡಿ, ಕೈಯಿಂದ ಮೋರೆ ಮುಚ್ಚಿಕೊಂಡವಡ. ದೊಡ್ಡ ಮಗ೦ಗೆ ಅದೇ ದೊಡ್ಡ ಅವಮಾನ ಅನ್ಸಿತ್ತು !
ಮನೆಗೆ ಬಂದು ಕೂದು, ಸುಧಾರಿಸಿಗೊ೦ಡ ಮೇಲೆ ಸಣ್ಣ ಮಗ° ಕೀಟಲೆ ಮಾಡಿದ° ”ಇ೦ದು ಅಮ್ಮನ ವಿಡಿಯೋ ಮಾಡಿದ್ದಿದ್ದರೆ, gags – just for laugh ಗೆ ಕಳುಸಲಾವುತ್ತಿತ್ತು !” ಹೇಳಿ. ಎನ್ನ ಅವಸ್ಥೆ ಎನಗೆ ! ಬಿದ್ದದ್ದಕ್ಕೆ ಕೈ ತರಚಿ ಉರಕೊಂಡಿತ್ತು. ಲಾಂಗ್ – ಹೈ – ಜಂಪ್ ಮಾಡಿ, ಹೊಯ್ಗೆ ಹೊಂಡಲ್ಲಿ ಬಿದ್ದ ಕಾರಣ, ಕುಸಿದು ಕೂದ ಹಾ೦ಗಾಗಿ ಬೆನ್ನು ಚಳಕ್ ಚಳಕ್ ಹೇಳುಲೆ ಸುರುಮಾಡಿತು. ಯಾರಿಗೂ ಹೇಳುವಂಗಿಲ್ಲೆ – ಅನುಭವಿಸುವಂಗಿಲ್ಲೆ. ಹೇಳಿದರೆ “ಬೇಕಿತ್ತಾ ?” ಹೇಳಿ ನಗ್ತವು ಹೇಳಿ ಗೊಂತಿದ್ದು. ಹಾಂಗೆ ಆರತ್ರೂ ಹೇಳ್ಲೆ ಹೊಯ್ದಿಲ್ಲೆ ! ನಿಂಗಳತ್ರ ಮಾತ್ರ…….. ಅದೂ ಈಗ….. ಹೇಳ್ತಾ ಇಪ್ಪದು…… ಆರತ್ರು ಹೇಳೆಡಿ ಮತ್ತೆ ?
ನಾಲ್ಕೈದು ದಿನಲ್ಲಿ ಬೆನ್ನು ಬೇನೆ ಕಮ್ಮಿ ಆತು. ಕೈ ಗಾಯ ಮಾಯುಲೆ ಒಂದು ತಿಂಗಳು ಹಿಡದ್ದು. ಗಾಯದ ಕಲೆ ಈಗಳೂ ಇದ್ದು ! ಮತ್ತೆ ಕೂದು ಯೋಚ್ನೆ ಮಾಡಿದೆ . ದೇವರು ದೊಡ್ಡೋನು. ಈ ವಯಸ್ಸಿಲಿ ಲಾಂಗ್ ಜಂಪ್ ಮಾಡ್ಲೆ ಹೋಗಿ ಒಂದಕ್ಕೊಂದು ಆಗಿದ್ದರೆ ? ಕೈ ಮುರ್ದಿತ್ತಿದ್ದರೆ ?……… ಸ್ಲಿಪ್ ಡಿಸ್ಕ್ ಆಯ್ದಿಲ್ಲನೆ ಸದ್ಯ !
ಬೇಡಪ್ಪ ಬೇಡ……… ಇನ್ನು ಈ ಜೀವನಲಿ ಲಾಂಗ್ ಜಂಪ್ – ಹೈ ಜಂಪ್ ಮಾಡ್ಲೆ ಹೋವುತ್ತಿಲ್ಲೆ !!!!
Latest posts by ಸುರೇಖಾ ಚಿಕ್ಕಮ್ಮ (see all)
- “ಸುರೇಖಾ ಕೌನ್ ಹೈ ? ಆವೋ ಡಾನ್ಸ್ ಕರ್ಲೋ “ - October 12, 2014
- “ರಾತ್ರಿ ಒಂದು ಗಂಟೆಗೆ ಎಚ್ಚರಾಗಿ ಇದ್ದಕ್ಕಿದ್ದಂತೆ ಜ್ಞಾನೋದಯ ಆತು !” - October 5, 2014
- ಕಮ್ಮಕ್ಕಿಯ ಮನೆಯ “ಇಲಿಯಜ್ಞ” ದ ಕಥೆ!! - September 20, 2014
ನಿಂಗೊ ಕ್ರಿಕೆಟ್ಟು, ವಾಲಿಬೋಲು ಆಟಂಗೊ ನೋಡಿದ್ದಿಲ್ಯ!! , ಮದಾಲು ಅದಕ್ಕೆ ನಮಸ್ಕಾರ ಮಾಡ್ಳೆ ಇದ್ದು! ಲಾಂಗ್ ಜಂಪು ಮಾಡ್ಳೆ ಹೆರಡುವ ಮುನ್ನ ನೀವು ನೆಲ ಕೆರದು ಉದ್ದಿ ನಮಸ್ಕಾರ ಮಾಡೇಕ್ಕಿತ್ತು. D
ಅದಾ ಅಲ್ಲೇ ಮೋಸ ಆದ್ದೀಗ! 🙂
ಅಪ್ಪ್. ಮುಂದಿನ ಸಾಹಸ ಮಾಡ್ಲೆ ಹೆರಡುವ ಮೊದಾಲು ಚೆನ್ನೈ ಭಾವನ್ನ ಕೇಳಿ ಮುಂದುವರೆಸುತ್ತೆ ! ಆಗ ಮೋಸ ಆಗ ! ಅಲ್ಲದಾ ?
ಅಪ್ಪಪ್ಪು. ಈಗ ಗೊಂತಾತು ಎಂಥಕ್ಕೆ ಹೀಂಗಾತು ಹೇಳಿ ! ಮೊದೂಲೇ ಹೇಳುಲೆ ಅವುತಿತ್ತಿಲ್ಲೆಯೋ ? ಅವತ್ತು ಭರಣಿ-ಕೃತಿಕೆ !
“ಮೊಗಚ್ಚಿ” ಅಲ್ಲ ಚಿಕ್ಕಮ್ಮ ನಿಂಗೊ” ಕಮುಂಚ್ಚಿ” ಬಿದ್ದದು. ಎಂಗೊ ನೋಡಿದ್ದಿಯೊ. ಆರೋ ನಮಸ್ಕಾರ ಮಾಡ್ತಾ ಇದ್ದವು ಹೇಳಿ ಗ್ರಹಿಸಿ ಎಂಗೊ ಬಂದು ಬಿಟ್ಟಿಯೊ. ಸೋರಿ.
ಅಪ್ಪಪ್ಪು. “ಕಮುಂಚ್ಚಿ” ಮನಗಿ ದೀರ್ಘದಂಡ ನಮಸ್ಕಾರ ಮಾಡಿದ್ದು. ಕಬಡ್ಡಿ ಆಟ ಆಡುವ ಮೊದೂಲು ನೆಲ ಮುಟ್ಟಿ ನಮಸ್ಕಾರ ಮಾಡ್ತಿಲ್ಲೆಯೊ ಹಾಂಗೆ. ರಜ್ಜ ಜಾಸ್ತಿ ಆತು ಬಿಲ್ಡಪ್ ಕೊಟ್ಟದ್ದು !
“ಅನುಭವವು ಸವಿಯಲ್ಲ,ಅದರ ನೆನಪೇ ಸವಿಯು”ಹೇಳ್ತವಲ್ಲದಾ?ಆರ ಹತ್ತರೂ ಹೇಳ್ತಿಲ್ಲೆ ಆತೋ!
ಬೇನೆ ಕಡಮ್ಮೆ ಆದ ಮತ್ತೆ, ಆ ಆನುಭವದ ನೆನಪೇ ಗಮ್ಮತ್ತು ! ಬೇರೆ ಆರನ್ನೋ ಹಾಸ್ಯ ಮಾಡುದಕ್ಕಿಂತ ನನ್ನ ಬಗ್ಗೆಯೇ ಹಾಸ್ಯ ಮಾಡಿಕೊಂಡರೆ ಉತ್ತಮ ಅಲ್ಲದೊ. ಹಾಂಗೆ ಅನುಭವವನ್ನೆ ಬರೆದ್ದೆ ! ಇನ್ನು…. ಆರ ಹತ್ತರೂ ಹೇಳಿರೂ ತೊಂದರೆ ಇಲ್ಲೆ ! ನಾವುದೇ ಜೊತೆ ಸೇರಿ ನಕ್ಕರಾತು !