- ಮಹಾನಗರದ ಮಹಾನ್ ಸಾಧಕಿ – ಡಾ.ಸುನಂದ ನಾರಾಯಣ ಭಟ್. - May 18, 2015
- ರಾಮಾಯಣ ಅಲ್ಲ ಪಿಟ್ಕಾಯನ - April 4, 2015
- ಪಾರುವ ಸ್ವಗತ - June 23, 2014
ಮನ್ನೆ ಬುಧವಾರ, ಆಫೀಸಿಂಗೆ ಹೆರಟು ಪಾರ್ಕಿಂಗಿಂಗೆ ಬಂದು ಆಯಿದಷ್ಟೆ, ಮೊಬೈಲು “ಟ್ರಿಣ್” ಹೇಳಿತ್ತು. ಪಾರುದು ಫೋನು. ಎಂತಪ್ಪಾ ಹೇಳಿ ಒಂದರಿಯಂಗೆ ಗಾಬರಿಯೂ ಆತು.
“ಚಾ ಮುಚ್ಚಿ ಮಡಿಗಿತ್ತಿದ್ದೆ ಎಂತ ಕುಡಿಯದ್ದದು ?”
“ಅಯ್ಯನಮಂಡೆ..!..ಎನಗೆ ಮರದತ್ತು, ಇನ್ನು ಅದಕ್ಕೆ ಬೇಕಾಗಿ ವಾಪಾಸು ಬತ್ತಿಲೆ ಆಗದೋ.?”
“ನಿಂಗೊ ವಾಪಾಸು ಬಪ್ಪಲೆ ಇಲ್ಲೆ ಹೇಳಿ ಗೊಂತಿದ್ದು, ಆದರೂ ಕೇಳುವ ಹೇಳಿ ಗ್ರೇಶಿ ಫೋನು ಮಾಡಿದೆ. ಎಂತ ನಿಂಗೊಗೆ ಮರದ್ದದು”
“ಕಂಬಾರರಿಂಗೆ ಜ್ಞಾನಪೀಠ ಪ್ರಶಸ್ತಿ ಸಿಕ್ಕಿದ್ದಕ್ಕೆ ಚಂಪಾ ಮತ್ತೆ ಶಿವಪ್ರಕಾಶರ ಲೇಖನ ಇಂದ್ರಾಣ ಪೇಪರಿಲಿ ಬಂದದರ ನಿನಗೆ ತೋರ್ಸಿತ್ತಿದ್ದೆನ್ನೆ. ಅದರ ಓದಿಗೊಂಡು ತಿಂಡಿ ಮುಗುಶಿದೆ. ಅದೇ ಧ್ಯಾನಲ್ಲಿ ಚಾ ಕುಡಿವದು ಬಿಟ್ಟು ಹೋತು,”
“ಆತು, ಆತು..! ನಿಂಗೊ ಹೆರಡಿ” ಹೇಳಿಕ್ಕಿ ಲೈನು ಕಟ್ ಮಾಡಿತ್ತು.
ಹೊತ್ತೋಪಗ ಮನೆಗೆ ಎತ್ತಿಯಪ್ಪದ್ದೆ ಪಾರು ಮತ್ತೆ ವಿಚಾರ್ಸಿತ್ತು.
“ಪೇಪರಿಲಿ ಬಂದ ಲೇಖನದ ಗುಂಗಿಲಿ ಇದ್ದದೋ , ಅಲ್ಲಾ ನಿಂಗೊ ನಿನ್ನೆ ಬರೆಯೆಕ್ಕು ಹೇಳಿ ಗ್ರೇಶಿದ ವಿಷಯ ತಲೆಲಿ ಸುಳ್ಕೊಂಡಿತ್ತಿದ್ದದೋ ?”
‘ಅಪ್ಪು-ಅಲ್ಲ’ ಒಟ್ಟಿಂಗೆ ಹೇಳ್ಲೆ ಇಪ್ಪ ಪರ್ಯಾಯ ಶಬ್ದ ಗೊಂತಾಗದ್ದೆ ಅಂತೆ ಒಂದರಿ ತಲೆ ಮೇಲೆ – ಕೆಳ, ಅತ್ತ –ಇತ್ತ ಸುತ್ತು ತಿರುಗಿಸಿದೆ.
“ಆನು ಸಾರಿ ಸಾರಿ ಹೇಳಿತ್ತಿದ್ದೆ, ನಿಂಗೊಗೆ ಗುಮಾನವೇ ಇಪ್ಪಲಿಲ್ಲೆ..ಹ್ಹುಂ..!”
“ಅದು ಹಾಂಗಲ್ಲ ಪಾರು… ”
“ಮತ್ತೆಂತರ, ಸೋಫಲ್ಲಿ ಕಾಲು ಕುತ್ತ ಮಾಡಿ ಪೇಪರ್ ಹಿಡ್ಕೊಂಡು ಕೂದರೆ ಬೇರೆಂತ ಗೊಡವೆ ಅಪ್ಪಲಿಲ್ಲೆ ನಿಂಗೊಗೆ”
“ಒಂದರಿ ಇಲ್ಲಿ ಕೇಳು….. ನಿನ್ನೆ ಲಾಗಯ್ತು ಒಂದು ವಿಷಯ ಬಗ್ಗೆ ಬರದು ಹಾಕುತ್ತ ಯೊಚನೆ ಮಾಡಿಗೊಂಡು ಇದ್ದೆ. ಅದೂ ಇದೂ ಎಲ್ಲ ಸೇರಿಯಪ್ಪಗ ಒಂದರಿ ತಟ – ಪಟ ಆತು.”
“ಅಂಬಗ ಎಂತ ಅದರ ಬರದು ಆತೋ…?”
“ಅದೆಂತ ಬಾಳೆಹಣ್ಣು ಸೊಲುದು ತಿಂಬ ಹಾಂಗ , ಅಷ್ಟು ಬೇಗ ಬರದು ಮುಗುಶುಲೆ !. ಎಂತದೆ ಆದರೂ, ಬರದ್ದರ ನಿನಗೆ ತೋರ್ಸಿಕ್ಕಿಯೇ ಕಳುಸುದನ್ನೆ.” ಪಾರುವ ಮೋರೆಲಿ ರಜ್ಜ ಪಸೆ ಆಡಿತ್ತು.
“ತಲೆಲಿ ಇಪ್ಪದರ ಒಂದರಿ ಬರದು ಮುಗುಶುವನ್ನಾರ ಮಣಭಾರ ಅದು. ಇನ್ನು ಒಂದು ‘ಬೆಶಿ- ಬೆಶಿ’ ಚಾ ಕುಡುದು ಕೂದೊಂಡು ಶುರುಮಾಡ್ತೆ. ಅಂಬೆರ್ಪಿಲಿ ಬರವಲೆ ಎನಗರಡಿಯ.”
“ಅಂಬಗ ಎಂತ, ಇಂದುದೆ ಎನಗೆ ‘ಒಪ್ಪಣ್ಣ’ ನೋಡ್ಲೆ ಎಡಿಗಪ್ಪಲಿಲ್ಲೆ ಕಾಣುತ್ತು, ಶ್ಯೇ….!! ”
~~~
ಪಾರು ಹೀಂಗೆ ಹೇಳುಲೆ ಕಾರಣವೂ ಇದ್ದು. ಅದು ಗೊಂತಾಯೆಕ್ಕಾರೆ ಆನು ಮೊನ್ನಾಣ ಕತೆಯ ಮುದದಿಂದ ಸುರು ಮಾಡೆಕ್ಕು.
‘ಒಪ್ಪಣ್ಣ’ ಬೈಲಿಂಗೆ ಇಳಿವಲೆ ಶುರು ಮಾಡಿದ ಮೇಲೆ ಬೈಲಿನ ಶುದ್ದಿಗಳ, ಒಪ್ಪಂಗಳ ಓದುದು ಹೇಳಿಗೊಂಡು ಈಗೀಗ ದಿನಾಗಿಳೂ ಒಂದಾರಿಯೂ ನೋಡದ್ದರೆ, ತಿಂದದು ಮೈಗೆ ಹಿಡಿತ್ತಿಲೆ ಹೇಳುವ ಹಾಂಗಾಯಿದು, ಪಾರುಗೆ.
“ಇಂದೆಂತ ವಿಶೇಷ ಇದ್ದು, ಒಪ್ಪಣ್ಣಲ್ಲಿ !” ಹೇಳಿ ಶುರು ಮಾಡುತ್ತು.
ಕಳುದ ವಾರಂದ ಮಕ್ಕೊಗೆ ಪರೀಕ್ಷೆಗೆ ಓದ್ಸುವ ಗೌಜಿಲಿ ‘ಒಪ್ಪಣ್ಣ’ ನೋಡದ್ದೆ ವಾರವೇ ಆಗಿದ್ದತ್ತು. ನಿನ್ನೆ ಪುರುಸೊತ್ತಪ್ಪಗ ನೆಂಪಾಗಿ ನೋಡುವ°ಹೇಳಿ ಕೂದರೆ ಬೈಲಿನ ಪುಟ ಮೊಗಚ್ಚಿದ್ದಿಲೆ.
“ಪಡ್ಚ” – ಇನ್ನು ಪಾರುವ ಅಸಬಡಿಯಾಣ ಶುರುವಕ್ಕು. ಹೇಳಿ ಆನು ಗ್ರೇಶಿದ್ದೇ ಸರಿ, ಅಂಬಗಳೇ ಶುರು ಮಾಡಿತ್ತು.
” ನಿಂಗೊ ಇಡೀ ದಿನ ಕೂದೊಂಡು ನೋಡ್ತಿ, ಎನಗೆ ನೋಡ್ಲಪ್ಪಗ ತೊಂದರೆ ಶುರುವಪ್ಪದೋ ? ಆನು ನೋಡ್ಲೆ ಆಗ ಹೇಳಿ ಮಾಡಿದ್ದಿರೋ….ಹ್ಹು.!”
“ನಿನಗೆ ಅಳ್ಳೆಲಿ ಶಂಕೆ ಆದರೆ ಆನು ಎಂತರ ಮಾಡುದು. ಇದಾ, ಇಂಟರ್- ನೆಟ್ ಕನೆಕ್ಷನ್ ಎಲ್ಲ ಸರಿ ಇದ್ದು. ‘ಒಪ್ಪಣ್ಣ’ಲ್ಲಿ ಎಂತ್ಸೋ ತೊಂದರೆ ಇರೆಕ್ಕು.”
ಪಾರು ಪರಂಚುಲೆ ಶುರು ಮಾಡಿರೆ ಕಷ್ಟ ಹೇಳಿ ಕಂಡತ್ತು ಎನಗೆ.
ಬೈಲಿನ ಚಾವಡಿಗೆ ‘ಸಮೋಸ’(SMS) ಕಳುಸಿಯಪ್ಪಗ, ತೊಂದರೆ ಇಪ್ಪದು ಅಪ್ಪು ಹೇಳ್ತದು ಖಾತ್ರಿ ಆತು.
” ಅದಾ, ಬೈಲಿನ ‘ಶೇಖರಣೆ’ ವ್ಯವಸ್ತೆಲಿ ದೋಷ ಇದ್ದಡ. ಸರಿ ಅಕ್ಕು ಹೇಳಿದವು.”
“ಇದಾರು, ಶೇಖರಣ್ಣ, ನಾಸಿಕಲ್ಲಿತ್ತಿದ್ದ ಇನ್ಶೂರ್ ಏಜಂಟೋ ? ಒಳ್ಳೆದು, ಅದರತ್ತರೆ ಮಾತಾಡ್ಸಿ ಒಪ್ಪಣ್ಣಂಗುದೆ ಒಂದು ಇನ್ಶೂರ್ ಮಾಡ್ಸಿಕ್ಕಿ. ಇನ್ನುಮುಂದಂಗೆ ತೊಂದರೆ ಆಗದ್ದ ಹಾಂಗೆ. ಲೊಟ್ಟೆ ಬಿಟ್ಟು ನವಗುದೆ ಒಂದು ಪಾಲಿಸಿ ಹಿಡ್ಸಿದ್ದನ್ನೆ. ಅದರತ್ತರೆ ಎಲ್ಲದಕ್ಕೂ ಇನ್ಶೂರ್ ಇರ್ತು, ಬಹುಶಃ ಕೆಲವೆಲ್ಲ ಎಲ್ಲೈಸಿಗೂ ಗೊಂತಿರ”
“ಒಳ್ಳೆ ಕತೆ, ನೆಗೆಮಾಣಿಯಾಂಗೆ ಎಡೆ ಎಡೇಲಿ ಪಿಟ್ಕಾಯನ ಶುರು ಮಾಡ್ತೆ ನೀನು ! ”
” ಬೈಲಿಲಿ ಇಷ್ಟೆಲ್ಲ ಜೆನ ಇದ್ದವು, ಬೇಗ ಒಂದರಿ ವ್ಯವಸ್ತೆ ಮಾಡಿ ಸರಿ ಮಾಡ್ಲೆ ಅರಡಿಯದೋ ಇವಕ್ಕೆ. ಹಾಸ್ಯಗಾರನಾಂಗೆ ದೊಡ್ಡ ಬಾಯಿ ಬಿಟ್ಟು ನೆಗೆ ಕಿಸಿವಲೆ ಮಾಂತ್ರವ ಇಪ್ಪದು ಇವು ?”
“ಬರೆ ನೆಗೆ ಕಿಸಿವದಲ್ಲ ಪಾರು, ಇಡೀ ಬೈಲಿಲಿ ಏಕತಾನತೆ ಆಗದ್ದ ಹಾಂಗೆ ಎಡೆ ಎಡೇಲಿ ಬಂದು ಶುದ್ದಿಲಿ ಜೀವಂತಿಕೆಯ ಹಿಡುದು ನಿಲ್ಸುತ್ತ ಕೆಲಸ ಮಾಡ್ತವು. ಇವು ಒಂದು ನಮೂನೆಲಿ ಆಟಲ್ಲಿ ಇಪ್ಪ ವಿದೂಷಕಂಗಳ ಹಾಂಗೆ, ಬೈಲಿನ ಅವಿಭಾಜ್ಯ ವ್ಯಕ್ತಿತ್ವಂಗೊ. ಇಲ್ಲಿ ಭಾಗವತನೂ ಇದ್ದ°, ಬಾಲ ವೇಷದವರಿಂದ ಹಿಡುದು, ಪುಂಡು ವೇಷದವು, ಕಿರೀಟ ವೇಷದವು, ಸ್ತ್ರೀ ವೇಷದವು ಎಲ್ಲ ಸೇರಿದ್ದವು. ಆರಲ್ಲಿಯೂ ಹೆಚ್ಚು ಕಮ್ಮಿ ಭೇದ ಇಲ್ಲೆ, ಎಲ್ಲೋರು ಒಂದೆ. ಸಂಸ್ಕಾರ, ಸಂಪ್ರದಾಯಂದ ಹಿಡುದು, ಪ್ರಚಲಿತ, ಪುರಾಣದ ಶುದ್ದಿಗೊ ಬತ್ತಾ ಇರ್ತು. ಎಲ್ಲವೂ ಒಂದು ಶಿಸ್ತುಬದ್ಧ ಚೌಕಟ್ಟಿನೊಳ ಬಪ್ಪ ಹಾಂಗೆ ಗುರಿಕ್ಕಾರು ನೋಡಿಗೊಳ್ತವು. ಈಗಾಣ ತೊಂದರೆಯನ್ನೂ ಅವು ಸರಿ ಮಾಡ್ತವು. ಆದರೆ ಎಲ್ಲದಕ್ಕೂ ಅದರದ್ದೇ ಆದ ಸಮಯ ಹೇಳಿ ಇರ್ತನ್ನೇ…!!. ”
ಪಾರುಗೆ ಗೊಂತಿಪ್ಪ ಸಂಗತಿಯೇ, ಆದರೂ, ಛಾನ್ಸ್ ಸಿಕ್ಕಿಪ್ಪಗ ಸುಮ್ಮನೆ ಎಂತಕೆ ಅವಕಾಶವ ಕಳಕ್ಕೊಂಬದು ಹೇಳಿ ಉರುಗಿದೆ.
“ಅದೆಲ್ಲ ಗೊಂತಿದ್ದು ಎನಗೆ. ಒಂದು ವಾರ ಆತು ಶುದ್ದಿ ನೋಡದ್ದೆ, ಇಂದು ನೋಡ್ಲೆ ಸಿಕ್ಕುಗೋ ಹೇಂಗೆ ಅದು ಹೇಳಿ”
“ಇದಾ ನೋಡು, ‘ಸರ್ವರ್’ಲಿ ತೊಂದರೆ ಇಪ್ಪದಡ, ಸರಿ ಆವುತ್ತು ಇನ್ನು ರಜ್ಜ ಹೊತ್ತಿಲಿ, ಹಾಂಗೆ ಗುರಿಕ್ಕಾರ್ರೇ ಹೇಳಿದವು.”
“ಆತು, ನಾಳಂಗೆ ನೋಡ್ಲೆ ಸಿಕ್ಕುಗನ್ನೆ, ‘ಸರ್ವರ್’ ರಿಪೇರಿ ಆದರೆ ಸರ್ವರಿಂಗೂ ಸಮದಾನ ಅಕ್ಕು.”
ಅಂತೂ,ಪಾರುಗೆ ಸಮದಾನ ಆದ ಹಾಂಗೆ ಕಂಡತ್ತು. ‘ಸರ್ವರ್’ ಸರಿ ಆತು ಹೇಳಿ ಇರುಳಿಂಗೆ ಸೂಚನೆ ಸಿಕ್ಕಿತ್ತಿದ್ದು.
ಈ ಶುದ್ದಿಯನ್ನೇ ಏಕೆ ಬರದು ಹಾಕುಲಾಗ ಹೇಳ್ತ ಯೋಚನೆ ಬಂದು, ಉದಿಯಪ್ಪಗ ಎದ್ದು ಇದೇ ಗುಂಗಿಲಿ ಚಾ ಕುಡಿವಲೂ ಮರವ ಹಾಂಗಾತು.!
ಹೊತ್ತೋಪಗಾಣ ಚಾ ಕುಡುದು ಆನು ಕೂದಪ್ಪಗ ಪಾರು ಬಂದು ಹತ್ತರೆ ಅಂಟಿತ್ತು. “ಈಗ ಮದಾಲು ‘ಒಪ್ಪಣ್ಣ’ ತೋರ್ಸಿ ಮತ್ತೆಲ್ಲ ಮತ್ತೆ.”
ಪಾರುಗೆ ಹಿಂದಾಣ ಶುದ್ದಿಗಳ ಎಲ್ಲ ತೋರ್ಸಿ, ಹೊಸ ಶುದ್ದಿಗಳನ್ನೂ ನೋಡಿ ಆತು.
” ನವರಾತ್ರಿ ಸಮಯಲ್ಲಿ ಪೆರ್ಲಲ್ಲಿ ಮಕ್ಕಳ ಯಕ್ಷಗಾನ ತಂಡದವರ ಆಟ ಇದ್ದಡ, ಬೈಲಿನ ಕೆಲವು ಜೆನ ಸೇರುಗು ಅಲ್ಲಿ
“ನಾವುದೆ ಹೋಪ, ಎಂತ ಅವುತ್ತು ?! ” ಪಾರು ಚೋದ್ಯ ಮಾಡಿದ್ದಲ್ಲ, ತೀರ್ಮಾನ ಹೇಳಿದ್ದು ಹೇಳಿ ಆನು ಅರ್ಥ ಮಾಡಿಗೊಂಡೆ.
” ನಿಂಗೊ ಈಗ ಯೇವ ವಿಷಯವ ಬರವದು ?”
“ನಿನ್ನೆ ಲಾಗಾಯ್ತು ಈವರೆಗೆ ನಡದ್ದದರ ಬಿಟ್ರೆ ಬೇರೆಂತ ಇಲ್ಲೆ ಸದ್ಯಕ್ಕೆ ಎನ್ನ ತಲೆಲಿ , ಅದನ್ನೇ ಬರದರಾತು, ಸರ್ವರಿಂಗೂ ಕ್ಷೇಮ.! ಎಂತ ಹೇಳ್ತೆ ನೀನು ?”
~*~*~
ಸರ್ವರೂ ಸೌಖ್ಯ.
ಕುಮಾರಣ್ಣ-ಪಾರುವಿನ ಸರಸ ಸಲ್ಲಾಪ ಸೊಗಸಾಯಿದು. ಎನಗೆ ಮುದ್ದಣ ಮನೋರಮೆಯನ್ನೇ ನೆಂಪು ಮಾಡಿತ್ತದ. ಬೈಲಿನ ಲೇಖನಂಗಳ ಎಡೆಲಿ ಇದೊಂದು ಲೇಖನ ಓದಲೆ ಬಿಟ್ಟು ಹೋತದ. ತಡವಾಗಿ ಓದಿ ಒಪ್ಪ ಕೊಟ್ಟದಕ್ಕೆ ಕ್ಷಮೆ ಇರಳಿ ಕುಮಾರ ಭಾವ.
“ಇಂದೆಂತ ವಿಶೇಷ ಇದ್ದು, ಒಪ್ಪಣ್ಣಲ್ಲಿ !” ಹೇಳಿ ಶುರು ಮಾಡುತ್ತು – ಎಂಗಳಲ್ಲಿಯುದೆ ಇದೇ ಕಥೆ ಭಾವಯ್ಯ. ಏವತ್ತುದೆ, ಅದೊಂದು ಕೇಳದ್ರೆ ಆಗ ಎನ್ನ ಎಜಮಾಂತಿಗೆ.
ಒಪ್ಪ ಕೊಟ್ಟ “ಸರ್ವರಿಂ”ಗೂ ಧನ್ಯವಾದ, ನೆಗೆಗಾರನ ಬಿಟ್ಟು.
ಸಾರಡಿ ತೋಡಿಲಿ ಬೆಳ್ಳಕ್ಕೆ ಬಿಟ್ಟ ನಿನ್ನ ಡಿಕಿಶ್ನರಿಯ ನೋಡಿಕ್ಕಿ ಅರ್ಥ ಹೇಳಿದ ಮತ್ತೆ ಧನ್ಯವಾದ ತಿಳುಶುಲೆ ಮತ್ತೆ ಬತ್ತೆ, ಅಕ್ಕೋ ನೆಗೆಮಾಣಿ.
ತೆಕ್ಕುಂಜೆಮಾವಾ°..
ಪಾರುಅತ್ತೆಯ ಕೈಂದ ಪಾರು ಅಪ್ಪಲೆ ನಿಂಗೊ ’ಬೈಲಿಂಗೆ ಬಂದು ಹೊತ್ತುಕಳವದು’ ಹೇಳಿ ಪ್ರಣವಬಾವ ಮೊನ್ನೆ ಸಿಕ್ಕಿಪ್ಪಗ ಗುಟ್ಟಿಲಿ ಹೇಳಿತ್ತಿದ್ದ°! 😉
ಸರ್ವರು ಹೇಳಿರೆ ಇಂಗ್ಳೀಶೋ? ಎನ್ನ ಡಿಕಿಶ್ನರಿಲಿ ಎಂತ ಅರ್ತ ಇದ್ದು ನೋಡಿ ಆಯೆಕ್ಕಟ್ಟೆ..
ಚೋದ್ಯ ಮಾಡಿದ್ದಲ್ಲ, ತೀರ್ಮಾನ ಹೇಳಿದ್ದು – ಹೆ ಹೆ.. ಇನ್ನೆಂತ ಮಾಡ್ಲೂ ಗೊಂತಿಲ್ಲೆ ಅಲ್ದಾ ಮಾವ..
ಪಾರುವಿನ ಪಾರುಪತ್ಯಲ್ಲಿ ಒಪ್ಪಣ್ಣನ ಚಟ ಸರ್ವರೂ ಅಂಟುಸಿಗೊಂಡಿದವು ಹೇಳುವ ವಿಷಯದ
ವಿವರಣೆ ಲಾಯಿಕ ಆಯಿದು
ಏ ಮಾವ ನಿ೦ಗಳ ಪಟ್ಟಾ೦ಗಲ್ಲಿ ಪೆರ್ಲಲ್ಲಿ ಆಟಕ್ಕೆ ಬಪ್ಪ ಸುದ್ದಿ ಕೇಳಿಯಪ್ಪಗ ಖುಷಿ ಆತದ…..
{‘ಅಪ್ಪು-ಅಲ್ಲ’ ಒಟ್ಟಿಂಗೆ ಹೇಳ್ಲೆ ಇಪ್ಪ ಪರ್ಯಾಯ ಶಬ್ದ ಗೊಂತಾಗದ್ದೆ }
ಇದು ಗಮ್ಮತ್ತಾಯಿದು. ನಿಂಗಳ ವಾಕ್ಯಂಗಳಲ್ಲಿ ಸ್ವಾರಸ್ಯ ಇದ್ದು.
ಗ್ಯಾನ = ?
ಅದಾ, ತಪ್ಪಿತ್ತು, ಧನ್ಯವಾದ ಮಹೇಶಣ್ಣ.
ಎನ್ನಾಂಗೆ ಗಡಿಬಿಡಿ ಮಾಡದ್ದೇ , ಚಾಯ ಸಾನ ಕುಡಿಯದ್ದೇ , ನಿಂಗೊ ಸಮಧಾನಲ್ಲಿ ಪಾರು ಹತ್ರೆ ಉರುಗಿದ್ದು ಲಾಯಕ್ಕ ಆಯ್ದು ಮಾವ. ಹೊತ್ತೋಪಗ ಬಂದು ಆ ತಣ್ಕಟೆ ಚಾಯ ಬಿಸಿಮಾಡಿ ಕುಡುದ್ದಡ ಅಪ್ಪೋ . ಉಮ್ಮಾ ಎನಗೊಂತಿಲ್ಲೆ – ನೆಗೆಮಾಣಿ ಹೇಳಿದ್ದಾತೋ.
ಒಟ್ಟಾರೆ ಪಾರುವ ಪಂಚಾತಿಗೆಲಿ ಎಡಿಯ… ಆಲ್ಲದೋ ಕುಮಾರ ಭಾವ…. 🙂