Oppanna.com

ಚೈತನ್ಯಶಂಕರನ ‘ಪಾರಮ್ಯ’ ಬಿಡುಗಡೆ…

ಬರದೋರು :   ಶುದ್ದಿಕ್ಕಾರ°    on   20/08/2011    5 ಒಪ್ಪಂಗೊ

ಬೈಲಿನೋರಿಂಗೆ ಒಂದು ಕೊಶೀ ಶುದ್ದಿ…

ನಮ್ಮ ಬೈಲಿನ ಹೆರಿಯೋರಾದ ಚೆಂಬರ್ಪು ಸತ್ಯಮಾವನ ಅರಡಿಗಲ್ಲದೋ?
ನಮ್ಮ ಊರಿನ ಚೆಂಬರ್ಪಿಂದ, ಹೆರಿಯೋರ ಕಾಲಲ್ಲಿಯೇ ಹೊಸನಗರದ ಹೊಡೆಂಗೆ ಹೋಗಿ, ಪ್ರಸ್ತುತ ಬೆಂಗುಳೂರಿಲಿ ದೊಡ್ಡ ಉದ್ಯೋಗಲ್ಲಿಪ್ಪ ನಮ್ಮೆಲ್ಲರ ಸೀಯಚ್ಚೆಸ್ ಮಾವ!
ಶ್ರೀ ಗುರುಗಳ, ಶ್ರೀಮಠದ ನಿಷ್ಠೆಯ  ಸರಳ ಸಜ್ಜನ. ಚೆಂದದ ನೆಗೆಯೇ ಅವರ ಗುರ್ತ! 🙂

ಅವು, ನಮ್ಮ ಬೈಲಿಂಗೆ ವಿಶೇಷ ‘ಹೇಳಿಕೆ ಕಾಗತ’ ಕಳುಸಿ ಕೊಟ್ಟಿದವು.
ಎಂತರದ್ದು?

ಅವರ ಮಗ ಶ್ರೀ ಚೈತನ್ಯ ಶಂಕರ ಸಣ್ಣ ಇಪ್ಪಾಗಳೇ ಸಂಗೀತಲ್ಲಿ ಆಸಗ್ತಿ ಇದ್ದಿದ್ದ ವೆಗ್ತಿ –  ಅಪ್ಪಮ್ಮನ ಹಾಂಗೇ.
ಪಂ. ಪರಮೇಶ್ವರ ಹೆಗಡೆಯ ಶಿಷ್ಯ ಆಗಿ ಶಾಸ್ತ್ರೀಯವಾಗಿ ಅಭ್ಯಾಸ ಮಾಡಿಗೊಂಡವು.
ಇಂಜಿನಿಯರು ಅಪ್ಪದರ ಒಟ್ಟಿಂಗೇ, ಸಂಗೀತಾಭ್ಯಾಸವೂ ಯಶಸ್ವಿ ಆಗಿ ನೆಡದ್ದು; ಇಂದಿನ ಒರೆಂಗೂ.

ಇಂದು, ಅವರ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕಛೇರಿ; ಅದರೊಟ್ಟಿಂಗೇ, ಗಾಯನದ ಸೀಡಿ “ಪಾರಮ್ಯ”ದ ಬಿಡುಗಡೆ ಕಾರ್ಯಕ್ರಮ.

ಕಾರ್ಯಕ್ರಮ ವಿವರ:
ಜಾಗೆ: ಅಖಿಲ ಹವ್ಯಕ ಮಹಾಸಭಾ ಆವರಣ, ಮಲ್ಲೇಶ್ವರಂ, ಬೆಂಗಳೂರು.
ಹೊತ್ತು: ಇಂದು, 20-ಆಗಷ್ಟ್-2011 ಹೊತ್ತೋಪಗ; ಆರೂವರೆಂದ ಎಂಟೂವರೆ ಒರೆಂಗೆ.

ಬೆಂಗುಳೂರಿಲೇ ಇಪ್ಪ ಸಂಗೀತಾಸಕ್ತರು ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಕೆಲಿ ಸೇರಿ, ಯಶಸ್ವಿಗೊಳುಸೇಕು – ಹೇಳಿ ಸೀಯಚ್ಚೆಸ್ ಮಾವ ಹೇಳಿಕೆ ಹೇಳಿದ್ದವು.

ನಮ್ಮ ಮಾಣಿಯ ಈ ಸಂಗೀತ ಸಾಧನೆಯ ಕಂಡು ಬೈಲಿನೋರು ಹೆಮ್ಮೆ ಪಡ್ತವು.
ಸಂಗೀತ ಲೋಕಲ್ಲಿ ಇನ್ನೂದೇ ಪಾರಮ್ಯ ಸಾಧಿಸಲಿ  – ಹೇಳ್ತದು ನಮ್ಮ ಹಾರೈಕೆ.

|| ಹರೇರಾಮ ||

ಹೇಳಿಕೆಕಾಗತ ಇಲ್ಲಿದ್ದು:

5 thoughts on “ಚೈತನ್ಯಶಂಕರನ ‘ಪಾರಮ್ಯ’ ಬಿಡುಗಡೆ…

  1. ಎನ್ನ ತಮ್ಮ (cousin) ನ ಸಂಗೀತಕ್ಕೆ ಶುಭ ಹಾರೈಸಿದೋರಿಂಗೆ ಧನ್ಯವಾದ. ಕಾರ್ಯಕ್ರಮ ಲಾಯೆಕಾತು. ಎರಡು ಹಾಡುಗಳ ಹಿಂದೂಸ್ಥಾನಿ ಶೈಲಿಲಿ ಗಾಯನವೂ ಇತ್ತು. ಬಂದೋರೆಲ್ಲೋರಿಂಗೆ ಮೂಡೆ, ಕಾಯಿಹಾಲು, ವಡೆ, ಹಲ್ವದ ಉಪಹಾರ.

  2. ಚೈತನ್ಯಂಗೆ ಶುಭಾಶಯಂಗೊ.

  3. ಕಾರ್ಯಕ್ರಮಕ್ಕೆ ಶುಭ ಕಾಮನೆಗೊ. ಒಳ್ಳೆದಾಗಲಿ.

  4. ಕಾರ್ಯಕ್ರಮಕ್ಕೆ ಶುಭ ಹಾರೈಕೆಗೊ.
    ಸಂಗೀತ ಕ್ಷೇತ್ರಲ್ಲಿ ಚೈತನ್ಯನ ಹೆಸರು ಉಜ್ವಲವಾಗಿ ಬೆಳಗಲಿ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×