ಬೈಲ ಬಂಧುಗೊಕ್ಕೆ ಆತ್ಮೀಯ ವಂದನೆಗೊ
ಇಂದು ಒಬ್ಬ ಹೊಸ ನೆಂಟರ ಈ ಬೈಲಿಂಗೆ ಪರಿಚಮಾಡ್ಸುತ್ತಾ ಇದ್ದೆ.
ವೃತ್ತಿಲಿ ಇಂಜಿನಿಯರ್ ಆಗಿ ಬೆಂಗಳೂರಿಲ್ಲಿ ವಾಸ್ತವ್ಯ ಇಪ್ಪ ಮೂಲತಹ ವಿಟ್ಲ ಪುಣಚದ ದಂಬೆ ಮನೆ ರವಿಶಂಕರ ಶಾಸ್ತ್ರಿಯವೇ ಇಂದಿನ ಹೊಸ ಸದಸ್ಯರು ಈ ಬೈಲಿಂಗೆ
ಇವರ ಹವ್ಯಾಸ:ಪುಸ್ತಕ ಓದುದು,ಕವನ/ಹನಿಕವನ ಬರವದು,ಪದಬಂಧ ರಚನೆ.
2 ವರ್ಷಂದ ವಿಶ್ವವಾಣಿ ದಿನಪತ್ರಿಕೆಲಿ ಪದಬಂಧ ಬರೆತ್ತಾ ಇದ್ದವು. ( ಕೊರೊನ ಕಾರಣ ಪುಟ ಸಂಖ್ಯೆ ಇಳಿಸಿದ ಕಾರಣ ಸದ್ಯ ಬತ್ತಾ ಇಲ್ಲೇ).
ಕೆಲ ವರ್ಷಗಳ ಮೊದಲು ‘ಮಂಜುವಾಣಿ’ ಪತ್ರಿಕೆಲಿ ಕೂಡ ಪದಬಂಧ ಬತ್ತಾ ಇತ್ತು.ಕೆಲವು ಹನಿಕವನಂಗೊ ವಿವಿಧ ಪತ್ರಿಕೆಗಳಲ್ಲಿ ಪ್ರಕಟ ಆಯಿದು.
ಇವಕ್ಕೆ ಸ್ವಾಗತ ಹೇಳ್ತಾ, ಇವರಿಂದ ಹವ್ಯಕ ಸಹಿತ್ಯಕ್ಷೇತ್ರಲ್ಲಿ ಹೆಚ್ಚಿನ ಕೃಷಿ ಆಗಲಿ ಹೇಳಿ ಹಾರೈಸುವೊ°
-ಶ್ರೀಕೃಷ್ಣ ಶರ್ಮ ಹಳೆಮನೆ
ಎಲ್ಲ ಕಡೆ ಮಿಂಚುತ್ತವು ನಮ್ಮೋರು ನೋಡಿ
ಬೇರೆಯೋರಿಂಗೆಲ್ಲ ಅಕ್ಕು ಹೊಟ್ಟೆಯೊಳ ಉರಿ
ನಮ್ಮಿಂದ ಆರಿಂಗೂ ತೊಂದರೆಯು ಆಗ
ಹೊಗಳದ್ದರೆ ಬೇಡ, ತಳಿಯದ್ದೇ ಕೂರಿ!
ಎಲ್ಲ ಕ್ಷೇತ್ರಂಗಳಲಿ ನಮ್ಮೋರ ಕಾಂಗು
ಚೊಕ್ಕಲ್ಲಿ ಕೆಲಸಂಗಳ ಮಾಡಿ ಮುಗಿಶುಗು
ಸ್ವಂತದ ವರ್ಚಸ್ಸು ಮಾಡುಗು ಮೋಡಿ
ಹವ್ಯಕರು ಯಾವತ್ತೂ ಶ್ರೇಷ್ಟವೇ ಬಿಡಿ.
– ರವಿಶಂಕರ ಶಾಸ್ತ್ರಿ
ವಿಳಾಸ: #AF13, ಎಸ್.ವಿ.ಎಸ್.ವಿಂಡ್ ಗೇಟ್ಸ್ ಅಪಾರ್ಟ್ಮೆಂಟ್,
13th street,
ಹೊರಮಾವು-ಅಗರ ರಸ್ತೆ,
ಪ್ರಕೃತಿ ಟೌನ್ಶಿಪ್,
ಬೆಂಗಳೂರು-560113.
Latest posts by ಶರ್ಮಪ್ಪಚ್ಚಿ (see all)
- ಅವನೀಶ- SSLC 99.68% - May 20, 2023
- ಕಣ್ಣಾಮುಚ್ಚೇ ಕಾಡಾಗೂಡೇ - August 3, 2021
- ಮರಳಿ ಗೂಡಿಗೆ - May 31, 2021