ಜಾಲಿಲಡಕೆಯು ಒಣಗಿ ಕೈಲಿಯೆ
ಚೋಲಿ ಸೊಲಿವಾ೦ಗಾತು ಹೆಡಗೆಯ
ಮೇಲೆ ಕೈಪುಳುಯೆಳದು ಪತ್ತಾಯಕ್ಕೆ ತು೦ಬುಸುವ°|
ಕಾಲು ಹಾಕೊಗ ಜಾರಿಬಿದ್ದರೆ
ಸೋಲುಗಿದ ಜಾಗ್ರತೆಗೆ ಈ ಮಳೆ
ಗಾಲ ಸೋಗೆಲಿ ನೆಲವ ಮುಚ್ಚೆಕ್ಕಷ್ಟೆ ಭಾವಯ್ಯ||
ಮೂಡ ಉಗ್ರಾಣಲ್ಲಿ ಮೂಲೆಯ
ಓಡು ಒಡದಿತ್ತನ್ನೆ ಬಾ ಸರಿ
ಮಾಡಿ ಬಿಟ್ಟರೆ ನೀರು ಸೋರುವ ತಲೆಬೆಶಿಯೆ ಇಲ್ಲೆ|
ತೋಡಕಣಿ ಕೆರಸಿದರೆ ಮಳೆ ನೀ
ರೋಡಿ ಹೊಳೆ ಸೇರುಗದ ಎತ್ತಿನ
ಗಾಡಿ ಹೋಪಗ ಹುಗಿಯ ಮಾರ್ಗವು ಕೇಳು ಭಾವಯ್ಯ||
ಓ- ರಘುಭಾವ° ಆರು ಹೇಳಿ ನಿಂಗೊಗೆ ಗೊಂತಾತೋ? ಬೈಲಿನ ಒಪ್ಪಂಗಳ ನಿತ್ಯವೂ ನೋಡಿಗೊಂಡು ಇದ್ದಿದ್ದರೆ ಗೊಂತಾವುತಿತು. ಎಲ್ಲಾ ಶುದ್ದಿಗೊಕ್ಕೆ ಪ್ರೋತ್ಸಾಹಕ ಒಪ್ಪಂಗಳ ಕೊಟ್ಟೊಂಡು, ವಿಶಿಷ್ಟ ರೀತಿಯ ವಾದಂಗಳ ಮಂಡಿಸಿಗೊಂಡು, ಆಸಕ್ತಿದಾಯಕವಾಗಿ ಬರವದು ಅವರ ಹವ್ಯಾಸ. ಅವರ ಮೂಲ ನಮ್ಮ ಊರಿನ ಮುಳಿಯವೇ! ಮುಳಿಯದ ಅಜ್ಜ° ಇತ್ತಿದ್ದವಲ್ಲದೋ (ಶ್ರೀ ಮುಳಿಯ ತಿಮ್ಮಪ್ಪಯ್ಯ) - ಅವರ ತಮ್ಮನ ಪುಳ್ಳಿ! ಸದ್ಯಕ್ಕೆ ಬೆಂಗುಳೂರಿಲಿ ಯೇವದೋ ಕಂಪೆನಿಲಿ ದೊಡ್ಡ ಕೆಲಸ. ನಾಲ್ಕು ಜೆನರ ತುಂಬು ಸಂಸಾರ - ಸುಖ ಸಾಗರವಾಗಿ ನೆಡೆತ್ತಾ ಇದ್ದು. ದಿನ ಉದಿಯಾದರೆ ಆಪೀಸು - ಹೊತ್ತಪ್ಪಗ ಮನಗೆ. ಹೋಪಲೂ ಬಪ್ಪಲೂ ಕಾರಿದ್ದು- ಕಾರಿಲಿ ಒಂದು ಟೇಪ್ರೆಕಾರ್ಡು ಇದ್ದು. ಅದಕ್ಕೆ ಆಟಂಗಳೋ, ತೆಂಕು-ಬಡಗು ಪದಂಗಳೋ, ಉರುಳಿಕೆಗಳೋ, ಪಂಚವಾದ್ಯಂಗಳೋ, ಇಂಪಾದ ಬಾಗೊತಿಗೆಗಳೋ - ಎಂತಾರು ಇಪ್ಪ ಉರುಟು ತಟ್ಟೆಸೀಡಿ ಹಾಕಿರೆ ಆಪೀಸಿಲಿ ಕಾರು ತಿರುಗುಸಿದ್ದು ನೆಂಪಿಕ್ಕು. ಮತ್ತೆ ಮನಗೆ ಎತ್ತಿ, ಮುಳಿಯದಕ್ಕ° ಪರಂಚಿದ ಮೇಗೆಯೇ ನಿಲ್ಲುಸುಗಷ್ಟೇ - ಅಷ್ಟುದೇ ಆಟದ ಮರುಳು - ಚೆನ್ನಬೆಟ್ಟಣ್ಣ, ವೇಣೂರಣ್ಣನ ಹಾಂಗೆ! ಅಪ್ಪು, ಅವಕ್ಕೆ ರಜ ಆಟದ ಮರುಳು ಜಾಸ್ತಿ. ಆಟ ಹೇಳಿರೆ - ಒಪ್ಪಣ್ಣನ ಹಾಂಗೆ ಬರೇ ನೋಡುದು ಮಾಂತ್ರ ಅಲ್ಲ. ಅರ್ತವೂ ಹೇಳುಗು. ದೊಡ್ಡ ದೊಡ್ಡ ಪ್ರಸಿದ್ಧ ಕಲಾವಿದಾರ ಒಟ್ಟಿಂಗೆ ಕೂದಂಡು ಅರ್ತ ಹೇಳಿದ ಅನುಬವ ಅವಕ್ಕಿದ್ದು. ಯೇವದೇ ಪ್ರಸಂಗ, ಯೇವದೇ ಪದ ಆದರೂ ಅದಕ್ಕೆ ಅರ್ತ ಹೇಳುವಗ ಇವರದ್ದೇ ಆದ ಚಿಂತನೆಗಳ ಸೇರುಸಿ ವರ್ಣನೆ ಸಹಿತವಾಗಿ ಕೇಳ್ತವಂಗೆ ಕುತೂಹಲ ಏರಿಗೊಂಡೇ ಹೋಪ ಹಾಂಗೆ ಅರ್ತ ಹೇಳ್ತದು ಅವರ ಶೆಗ್ತಿ. ಅವು ಮಾಂತ್ರ ಅಲ್ಲ, ಅವರ ಮಕ್ಕಳುದೆ ಯಕ್ಷಗಾನಲ್ಲಿ ಮುಂದೆ ಬಪ್ಪ ನಮುನೆ ಪ್ರೇರೇಪಣೆ ಕೊಟ್ಟು, ಈಗಾಣ ಅಮುಸರದ ಜೀವನಲ್ಲಿ ಬೆಂಗುಳೂರಿಲಿ ಬದುಕ್ಕುತ್ತ ಅಪ್ಪಂದ್ರಿಂಗೆ ಮಾದರಿ ಆಯಿದವು. ಮೊನ್ನೆ ಚೆನ್ನಬೆಟ್ಟಣ್ಣನ ಮದುವೆಲಿ ಒಟ್ಟಿಂಗೆ ಅಶನಕ್ಕೆ ಹಿಡಿವಲೆ ಸಿಕ್ಕಿದವು ಒಪ್ಪಣ್ಣಂಗೆ. ಸುಮಾರು ಶುದ್ದಿ ಮಾತಾಡಿದವು. ನಮ್ಮ ಊರು - ಈಗಾಣ ಬದುಕ್ಕಾಣ -ಅದು ಇದು ಎಲ್ಲ. ಈ ಶುದ್ದಿಗಳ ಬೈಲಿಂಗೆ ಹೇಳುವಿರೋ - ಕೇಳಿದ ಒಪ್ಪಣ್ಣ. ಸಂತೋಷಲ್ಲಿ "ಅಕ್ಕು ಒಪ್ಪಣ್ಣ ಭಾವಾ.." ಹೇಳಿದವು.
ಓ, ಸೂಪರ್. ಅದರಲ್ಲಿ ಎರಡು ಮಾತಿಲ್ಲೆ. ಅದೇ ದಿನ ಕೇಳಿದ್ದೆ, ಪುನಃ ಒಪ್ಪ ಕೊಡ್ಳೆ ಬಾಕಿ ಆತು. ಅಂದು ಶ್ರೀಶಣ್ಣ ಹಾಡಿದ ಸೋಬಾನೆ ಇನ್ನುದೆ ಕೆಮಿಲಿ ತಿರುಗುತ್ತಾ ಇದ್ದು. ಇದರ ಗಮಕ ಶೈಲಿಲಿಯುದೆ ಪ್ರಯತ್ನ ಮಾಡ್ಳಕ್ಕು. ನಿಂಗಳಿಬ್ಬರ ಜೋಡಿ ಬೈಲಿನ ರಂಜಿಸುತ್ತಾ ಇರಳಿ.
ಮುಳಿಯ ಬಾವನ ಭಾಮಿನಿಯ ಕೋ-
ಗಿಲೆಯೆ ಹಾಡಿದ ಹಾಂಗೆ ಆಯಿದು
ತಳಿಯದ್ದೆ ಕೇಳಿದೆವೆಲ್ಲ ಒಟ್ಟಿಂಗೆ ಕೂದು ಕೆಮಿಗೊಟ್ಟು
ಮಳೆ ಬಪ್ಪ ಹೊತ್ತಿಂಗೆ ಎಲ್ಲೊರು
ಸೊಳೆ ಬಿಡುಸಿ ಉಪ್ಪಿಲಿ ಹಾಕಿ ಮಡು
ಗಲೆ ತುಂಬ ಕೊಶಿ ಮಳೆಗಾಲದಟ್ಟಣೆ ಹಾಡ ಕೇಳಿಂಡು
(ತುಂಬಾ ತಡವಾತು ಒಪ್ಪ ಕೊಡಲೆ ಬೇಜಾರಿಲ್ಲೆನ್ನೆ?)
ಪಷ್ಟಾಯ್ದು ಭಾವಯ್ಯ..ಕೊನೆಯ ಸಾಲುಗ ಓದುವಗ ಎನ್ನ ಅಮ್ಮ, ಆಳುಗ ಇಪ್ಪಗ ಸೊಳೆಬೆ೦ದಿ ಸಾಕಕ್ಕೊ ಹೇಳಿ ಹೇಳಿದ್ದು ನೆಂಪಾತು..
ಓದಿ ಆತಷ್ಟೇ..
ಭಾರೀ ಅಪ್ಪ ಆಯಿದು. ಇನ್ನು ಮನೆಗೆ ಹೋಗಿ ಕೇಳ್ತೆ.. 🙂
ಕೇಳಿ ಆತೊ ಮಾಣಿ?
ಶ್ರೀಶಣ್ಣ ಸೂಪರ್… 🙂
ರಚನೆ – ಗಾಯನ.. ಎರಡೂ A1 🙂
ಬರದ್ದು,ಹಾಡಿದ್ದು ಎರಡೂ ತು೦ಬಾ ಲಾಯ್ಕಾಯಿದು..
ಭಾರೀ ಲಾಯ್ಕ ಆಯ್ದು ಭಾವ……
ರಚನೆ–ಗಾಯನ ಎರಡೂ ಪಷ್ಟಾಯ್ದು……..
ಚೆಂದ ಆಯಿದು ಬರದ್ದು ಭಾವ.
ಪುನಃ ಪುನಃ ಕೇಳುವಾಂಗೆ ಲಾಯಿಕಿದ್ದು..ರಚನೆ, ಸೊರ ಎರಡುದೇ
ಮುಳಿಯಭಾವನ ಚಿನ್ನದ ಕಾವ್ಯಕ್ಕೆ ಶ್ರೀಶಣ್ಣನ ಕಂಚಿನ ಕಂಠ ಹೊಸ ಮೆರುಗು ಕೊಟ್ಟತ್ತು.
ಮಹೇಶಾ,
ರನ್ನ ಕೂದಲ ಮುಳಿಯಭಾವನ
ಚಿನ್ನದಕ್ಷರ ಭಾಮಿನಿಗೆ ಶ್ರೀ
ಶಣ್ಣ ಕ೦ಚಿನ ಕ೦ಠ ಸೇರ್ಸಿರೆ ಹಾಲು ಜೇನಕ್ಕೊ?
ಐದು ಸರ್ತಿ ಕೇಳಿ ಆತು ಭಾವ. ರಚನೆಯೂ, ಗಾಯನವೂ ಭಾರೀ ಲಾಯಕ ಆಯ್ದು, ಮತ್ತೂ ಮತ್ತೂ ಅಸ್ವಾದಿಸುವ ಹಾಂಗೆ ಬಯಿಂದು ಹೇಳಿ ಇನ್ನೊಂದರಿ – ‘ಚೆನ್ನೈವಾಣಿ’
ಮಳೆಗಾಲದ ನಿರೀಕ್ಷೆ, ಮುಗಿಲು ಕಂಡಪ್ಪಗ ಜಾಲಿಂದ ಅಡಕ್ಕೆ ಒಳ ಹಾಕುತ್ತ ಗೌಜಿ, ಮೂಲೆ ಓಡು ಸರಿ ಮಾಡುವ ಆತುರ, ಇದೆಲ್ಲವೂ ಒಂದು ಹವ್ಯಕ ಮನೆಯ ವಾತಾವರಣವ ಚೆಂದಕೆ ಪ್ರತಿಬಿಂಬಿಸಿದ್ದು.
ಧನ್ಯವಾದ ಅಪ್ಪಚ್ಚಿ.
ಮಳೆಕಾಲಕ್ಕಿಪ್ಪ ತಯಾರಿ ಭಾಮಿನಿಲಿ ಚೆಂದಕೆ ಬಯಿಂದು. ಮುಳಿಯ ಭಾವನ ಸಾಹಿತ್ಯವ ಸೊಗಸಾಗಿ ಎನ್ನಷ್ಟಕ್ಕೇ ಮನಸ್ಸಿಲ್ಲೇ ಓದಿದೆ. ಶ್ರೀಶಣ್ಣನ ಸ್ವರಲ್ಲಿ ಮನಗೆ ಹೋಗಿ ಕೇಳೆಕಷ್ಡ್ಟೆ. ಖಂಡಿತಾ ಚೆಂದಕೆ ಬಂದಿಕ್ಕು.
ಪಡು ಹೊಡೆಲಿ ಕರಿಮುಗಿಲು ಎದ್ದದು ಕಾಂಬಗ ಗಡಿಬಿಡಿಲಿ ನೆಲ್ಲಿಕ್ಕೋರಿ, ಮಣೆ ಹಿಡುದು ಜಾಲಿಲ್ಲಿಪ್ಪ ಅಡಕ್ಕೆಯ ಬಾಚಿದ್ದು ನೆಂಪಾತು. ಏವತ್ರಾಣ ಹಾಂಗೆ ಒನ್ನಾಂ ಗ್ರೇಡು. ಧನ್ಯವಾದಂಗೊ. ಶ್ರೀಶಣ್ಣನ ಸಂಗೀತವ ಮನಗೆ ಹೋಗಿ ದೊಡ್ಡಕೆ ಕೇಳೆಕು . . . ಅಂಬಗಳೇ ಅದರ ರುಚಿ, ಎಂತ ಹೇಳ್ತಿ ?
ಶ್ರೀಶಣ್ಣನ ಪದ ಹೇ೦ಗಾಯಿದು ಭಾವ?
ಓ, ಸೂಪರ್. ಅದರಲ್ಲಿ ಎರಡು ಮಾತಿಲ್ಲೆ. ಅದೇ ದಿನ ಕೇಳಿದ್ದೆ, ಪುನಃ ಒಪ್ಪ ಕೊಡ್ಳೆ ಬಾಕಿ ಆತು. ಅಂದು ಶ್ರೀಶಣ್ಣ ಹಾಡಿದ ಸೋಬಾನೆ ಇನ್ನುದೆ ಕೆಮಿಲಿ ತಿರುಗುತ್ತಾ ಇದ್ದು. ಇದರ ಗಮಕ ಶೈಲಿಲಿಯುದೆ ಪ್ರಯತ್ನ ಮಾಡ್ಳಕ್ಕು. ನಿಂಗಳಿಬ್ಬರ ಜೋಡಿ ಬೈಲಿನ ರಂಜಿಸುತ್ತಾ ಇರಳಿ.
ವಾಹ್ ವಾಹ್… ಮುಳಿಯಭಾವನ ಭಾಮಿನಿ ಷಟ್ಪದಿ – ಶ್ರೀಶಣ್ಣನ ಜಂಟಿ ಒಳ್ಳೆ ಚೇರ್ಚೆ ಆಯ್ದು. ಸೊಗಸಾಗಿ ಮೂಡಿಬೈಂದು. ಅಭಿನಂದನೆಗೊ ಇಬ್ರಿಂಗು.
(ಮಳೆಗಾಲಲ್ಲಿ ಕೆಲಸ ಇನ್ನೂ ಸುಮಾರು ಇದ್ದು ಭಾವ,ಹೇಳ್ತೆ ಬೇಗಲ್ಲಿ..) – ಇದು ಕೊಶಿ ಆತು ಹೇಳಿ – ‘ಚೆನ್ನೈವಾಣಿ’