Latest posts by ಪುಣಚ ಡಾಕ್ಟ್ರು (see all)
- ಸುಭಾಷಿತ – ೪೩ - October 16, 2018
- ಸುಭಾಷಿತ ೪೨ - December 20, 2017
- ಸುಭಾಷಿತ – ೪೧ - December 14, 2017
ಕಾಕ ಆಹ್ವಯತೇ ಕಾಕಾನ್ ಯಾಚಕೋ ನ ತು ಯಾಚಕಾನ್ ।
ಕಾಕಯಾಚಕಯೋರ್ಮಧ್ಯೇ ವರಂ ಕಾಕೋ ನ ಯಾಚಕಃ ॥
ಅನ್ವಯ:
ಕಾಕಃ ಕಾಕಾನ್ ಆಹ್ವಯತೇ। ಯಾಚಕಃ ಯಾಚಕಾನ್ ನ ಆಹ್ವಯತೇ।।
(ತಸ್ಮಾತ್) ಕಾಕಯಾಚಕಯೋಃ ಮಧ್ಯೇ ಕಾಕಃ (ಏವ) ವರಮ್।ಯಾಚಕಃ ನ ವರಮ್।।
ಕೊಳಕು ತಿಂಬ ಕಾಕೆಯ ಎಲ್ಲೋರೂ ನಿಕೃಷ್ಟವಾಗಿ ಕಾಣ್ತವು.
ಆದರೆ ಅದರ ಹಂಚಿ ತಿಂಬ ಸ್ವಭಾವ ಮನುಷ್ಯರಿಂಗೊಂದು ಪಾಠ!
ಆಹಾರ ಕಂಡರೆ ಕಾಕೆ ತನ್ನ ಬಳಗವ ದಿನಿಗೇಳ್ತು. ಆದರೆ ಒಬ್ಬ ಭಿಕ್ಷುಕ ಇನ್ನೊಬ್ಬ ಭಿಕ್ಷುಕನ ದಿನಿಗೇಳ್ತಯಿಲ್ಲೆ.
ಹಾಂಗಾಗಿ ಕಾಕ (ಕಾಕೆ) ಮತ್ತು ಭಿಕ್ಷುಕ(ಯಾಚಕ) ರಲ್ಲಿ ಕಾಕೆಯೇ ಶ್ರೇಷ್ಠ.
ಭಿಕ್ಷುಕ(ಮನುಷ್ಯ)ಶ್ರೇಷ್ಠ ಅಲ್ಲ
ಕಾಗೆಯೊಂದಗುಳ ಕಂಡರೆ ಕರೆಯದೇ ತನ್ನ ಬಳಗವನು?