- ಸುಭಾಷಿತ – ೪೩ - October 16, 2018
- ಸುಭಾಷಿತ ೪೨ - December 20, 2017
- ಸುಭಾಷಿತ – ೪೧ - December 14, 2017
ಯೋ ನ ಬೃಂಹತಿ ಸಮ್ಮಾನೇ ನಾಪಮಾನೇ ಚ ಕುಪ್ಯತಿ
ನ ಕ್ರುದ್ಧಃ ಪರುಷಂ ಬ್ರೂಯಾತ್ ಸ ವೈ ಸಾಧೂತ್ತಮಃ ಸ್ಮೃತಃ
ಅನ್ವಯಾರ್ಥ:
ಯಃ(ಆರು) ಸಂಮಾನೇ(ಹೊಗಳುವಗ) ನ ಬೃಂಹತಿ(ಸಂತೋಷಂದ ಉಬ್ಬುತ್ತಯಿಲ್ಲೆಯೋ) ಚ (ಮತ್ತು) ಅಪಮಾನೇ(ಅವಮಾನ ಅಪ್ಪಗ) ನ ಕುಪ್ಯತಿ (ಕೋಪ ಮಾಡ್ತಯಿಲ್ಲೆಯೋ) ಕ್ರುದ್ಧಃ(ಕೋಪ ಬಂದರೂ) ಪರುಷಂ ನ ಬ್ರೂಯಾತ್ (ಒರಟು ಮಾತು ಆಡ್ತಯಿಲ್ಲೆಯೋ) ಸಃ ವೈ ಸಾಧೂತ್ತಮಃ ಸ್ಮೃತಃ (ಅವನೇ ಸಜ್ಜನ).
ಭಾವಾರ್ಥ:
ಹೊಗಳಿದರೆ ಕುಶಿ ಅಪ್ಪದು ಸಹಜ. ಆದರೆ ಎಷ್ಟು ಮೇಲೇರಿತ್ತೋ ಬೀಳುವಗ ಅಷ್ಟೇ ಬೇನೆ ಹೆಚ್ಚು. ಹಾಂಗಾಗಿ ಹೊಗಳಿಕೆ ಬಯಸುವವಂಗೆ ಬೇಜಾರು ಅಪ್ಪದೂ ಹೆಚ್ಚೇ.
ಅವಮಾನ ಆದರೆ ಕೋಪ ಬಪ್ಪದೂ ಸಹಜವೇ. ಆ ಸಮಯಲ್ಲಿ ಕೋಪ ಮಾಡದ್ದೆ ಸಾವಧಾನವಾಗಿ ವಿಮರ್ಶೆ ಮಾಡಿದರೆ ಅದಕ್ಕೆ ನಿವಾರಣೆಯ/ಪ್ರತಿಕ್ರಿಯೆಯ ಕಂಡುಗೊಂಬಲೆಡಿಗು.
ಕೋಪಲ್ಲಿ ಮಾಡಿದ ಯಾವ ಕೆಲಸವೂ ನೇರ್ಪಆಗ.
ಕೋಪಲ್ಲಿ ಒರಟು ಮಾತಾಡುದು ತಪ್ಪು. ಕೋಪ ರಜ ಹೊತ್ತು ಇರ್ತು. ಆದರೆ ಆಡಿದ ಮಾತು ಆಡಿದವನ ಮನಸ್ಸಿಲಿಯೂ ಕೇಳಿದವನ ಮನಸ್ಸಿಲಿಯೂ ಶಾಶ್ವತವಾಗಿ ಒಳಿತ್ತು.
ಸಾಧುಜನರು ಹೊಗಳಿದರೆ ಆರಕ್ಕೆ ಏರವು ತೆಗಳಿದರೆ ಮೂರಕ್ಕೆ ಇಳಿಯವು. ಅವಮಾನ ಮಾಡಿದರೆ ಕೋಪ ಮಾಡವು ಇತರರಿಂಗೆ ಬೇಜಾರಪ್ಪ ಮಾತೂ ಆಡವು
ಸಜ್ಜನರ ಗುಣಂಗಳ ಬಗ್ಗೆ ವಿವರಣೆ ತುಂಬ ಅರ್ಥಗರ್ಭಿತವಾಗಿದ್ದು