Oppanna.com

ಕಣ್ಣಾಮುಚ್ಚೇ ಕಾಡಾಗೂಡೇ

ಬರದೋರು :   ಶರ್ಮಪ್ಪಚ್ಚಿ    on   03/08/2021    0 ಒಪ್ಪಂಗೊ

ಕಣ್ಣಾಮುಚ್ಚೇ ಕಾಡಾಗೂಡೇ

ಸಂಧ್ಯಾ ಶ್ಯಾಮಭಟ್ ಮುಂಡತ್ತಜೆ

ಸಂಧ್ಯಾ ಶ್ಯಾಮಭಟ್ ಮುಂಡತ್ತಜೆ

ಶಾಂತ ಸೊಂಟಕ್ಕೆ ಕೈ ಹಿಡುಕೊಂಡು ಹೆರ ಜಾಲಿಂಗೆ ಬಂತು.ಅಲ್ಲೇ ಕರೇಲಿದ್ದ ಸಿಮೆಂಟ್ ನ ಬೆಂಚಿಲಿ ಕೂದು ನೋಡ್ತು.ಜಾಲು ಇಡೀ ಭಣ ಭಣ ಹೇಳ್ತಾ ಇದ್ದು.ಹೊಟ್ಟೆ ಒಳಂದಲೇ ಸಂಕಟ ಒದ್ದುಗೊಂಡು ಮೇಲಂಗೆ ಬಂತು.ಗತ ಕಾಲಕ್ಕೆ ಜಾರಿತ್ತದು.

**************************

ಇದೇ ಅಂಗಳಲ್ಲಿ ಅಲ್ಲದಾ ಎನ್ನ ಮಕ್ಕೋ ಸುಧೀರ,ಸುಜಯ್,ಸುಮನ  ರೊಟ್ಟಿಂಗೆ ಸೇರಿ ಆನು ಕಣ್ಣಾಮುಚ್ಚಾಲೆ ಆಟ ಆಡಿದ್ದು.ಅಮ್ಮ….ಆಟ ಆಡುವ ಬಾ ಹೇಳಿ ಎಳಕೊಂಡು ಜಾಲಿಂಗೆ ಹೋಕು ಸುಧೀರ.ಅವ ಸಣ್ಣ ಹೇಳಿ ಕೊಂಡಾಟ ಜಾಸ್ತಿ.ಎನಗೆಷ್ಟು ಕೆಲಸ ಇದ್ದರೂ ಮಕ್ಕೋ ಹೇಳ್ಯಪ್ಪಗ ಆನು ಆಡುಲೆ ಹೋಪೆ ಸಣ್ಣ ಮಕ್ಕಳಾಂಗೆ ಆಡುವಾಗ ಸ್ವರ್ಗಸುಖ ಸಿಕ್ಕಿಗೊಂಡಿತ್ತು.
ಎನ್ನ ಅಮ್ಮ ಎನಗೆ ….ಹೇಳಿ ಮೂರು ಮಕ್ಕೋದೇ ಕೈ ಹಿಡುದು ಎಳಗು.
ಆನು ಕೊಂಡಾಟಲ್ಲಿ “ಆನು ನಿಂಗೋಗೆ ಮೂರು ಜನಕ್ಕೂ…ಹೇಳುವೆ.ಅವು ಕೇಳುವ ಪ್ರಶ್ನೆಗೋಕೆ ಉತ್ತರ ಕೊಟ್ಟುಗೊಂಡು ಎಡೆಎಡೆಲಿ ಅವರ ನಡುವೆ ಅಪ್ಪ ಜಗಳವ ಬಿಡುಸುದೇ ದೊಡ್ಡ ಕೆಲಸ ಆಯಿಗೊಂಡಿತ್ತು.ಸಣ್ಣ ಸಣ್ಣ ಕೋಳಿಜಗಳ ಅಷ್ಟೇ.ಮತ್ತೆ ಮಕ್ಕೋ ಅಲ್ಲದಾ ಅವು ಮತ್ತೆ ಒಂದೇ.
ಅಂಬಗಂಬಗ,ಹಾರ್ಟ್ ಅಟ್ಯಾಕ್ ಆಗಿ ತೀರಿದ ಗೆಂಡನ ನೆನಪು ಕಣ್ಣಿಲಿ ನೀರು ತರುಸಿರೂ ಮಕ್ಕಳ ನೋಡಿ ಮರವಲೆ ಪ್ರಯತ್ನ ಮಾಡಿಕೊಂಡಿತ್ತು.
ಸ್ವಂತ ಮನೆ,ಹಿತ್ತಲಿಲಿ ಹತ್ತು ತೆಂಗಿನಮರ ಇತ್ತು ಅಷ್ಟೆ.ಗೆಂಡ ಅರವಿಂದ ಸಣ್ಣ ಶಾಲೆಲಿ ಮಾಷ್ಟ್ರು ಹೆಸರಿಂಗೆ ಮಾತ್ರ.ಅನುದಾನಿತ ಶಾಲೆ ಆದ ಕಾರಣ ಸಂಬಳ ಸರಿಯಾದ ಸಮಯಕ್ಕೆ ಸಿಕ್ಕಿಕೊಂಡಿತ್ತಿಲ್ಲೆ.ಸಿಕ್ಕಿದ ಅಷ್ಟು, ಇಷ್ಟು ಪೈಸೆಲಿ ಇಷ್ಟು ಜನರ ಜೀವನ ಹೋಯೆಕ್ಕು.ಭಾರೀ ಕಷ್ಟ.
ಪೈಸೆ ಗೆ ಬಡತನ ಇದ್ದರೂ ಪ್ರೀತಿಗೆ ಬಡತನ ಇತ್ತಿಲ್ಲೆ.ಅವರದ್ದು ಅನುರೂಪದ ದಾಂಪತ್ಯ.ಮದುವೆ ಆದ ಹೊಸತ್ತಿಲಿ,ಇದೇ ಜಾಲಿಲಿ ಕೂದು ಸರಸ ಸಲ್ಲಾಪ ಆಯಿಗೊಂಡಿತ್ತು.ಎಷ್ಟೇ ಕೆಲಸ ಇದ್ದರೂ ಎಲ್ಲಾ ಮಾಡಿ ಆದ ಮತ್ತೆ ಮೂರುಸಂಧಿ ಅಪ್ಪಗ ದೇವರಿಂಗೆ ಹೊಡಾಡಿ ಶಂಖ ಉರುಗಿದ ಮತ್ತೆ
 ಜಾಲಿಂಗೆ ಬಾ ಶಾಂತೂ….ಹೇಳುಗು ಅರವಿಂದ.
“ಎನಗೆ ಒಳ ಕೆಲಸ ಬೇಕಾಷ್ಟು ಇದ್ದು.ನಿಂಗಳೊಟ್ಟಿಂಗೆ ಕೂದು ಲೊಟ್ಟೆ ಪಟ್ಟಾಂಗ ಹಾಕಿರೆ,ಎನ್ನ ಕೆಲಸ ನಿಂಗಳ ಅಜ್ಜ ಬಂದು ಮಾಡ್ತವಾ? “ಹೇಳಿ ಮೋರೆಲಿ ಬಾರದ್ದ ಕೋಪವ ಬರಿಸಿಗೊಂಡು ಹೇಳಿರುದೇ ಶಾಂತಂಗೆ ಗೆಂಡನ ಒಟ್ಟಿಂಗೆ ಸಮಯ ಕಳವಲೆ, ಭಾರೀ ಖುಷಿ.
ಬಾ ಮಾರಾಯ್ತೀ.ಒಂದರಿ.ನಿನ್ನ ಕೆಲಸ ಇದ್ದದೇ.ಹೇಳಿ ಕೈ ಹಿಡುಕೊಂಡು ಇದೇ ಸಿಮೆಂಟ್ ಬೆಂಚಿಲಿ ಕೂರ್ಸಿ” ಶಾಂತೂ…. ನಿನ್ನ ಮದುವೆ ಆದ ಮತ್ತೆಯೇ ಎನಗೆ ಹೊಸ ಬಾಳು ಸಿಕ್ಕಿದ್ದು.ಆನು ಅಪ್ಪ ಅಮ್ಮ ಇಲ್ಲದ್ದ ಅನಾಥ ಆಗಿ ಸೋದರಮಾವನ ಹಂಗಿಲಿ ಬೆಳದೆ.ಹೇಂಗೂ ಅಲ್ಲಿ ಕತ್ತೆ ಚಾಕರಿ ಮಾಡಿಕೊಂಡು ಓದಿದೆ.ಈ ಶಾಲೆಲಿ ಮಾಷ್ಟ್ರ ಕೆಲಸ ಸಿಕ್ಕುಲೆ ಭಾರೀ ಕಷ್ಟ ಆತು.ಇದು ಎನ್ನ ಸೋದರತ್ತೆ ಮನೆ .ಅಪ್ಪನ ತಂಗೆ ಎನ್ನ ಜಯತ್ತೆಯ ಜಾಗೆ ಇದು.ಅವಕ್ಕೆ ಮಕ್ಕೋ ಇಲ್ಲೆ.ಹಾಂಗೆ ಎನ್ನ ಹೆಸರಿಗೆ ಮಾಡಿತ್ತವು.ಎನ್ನ ಕಂಡ್ರೆ ಭಾರೀ ಪ್ರೀತಿ ಅವಕ್ಕೆ.ಮಾವ ಕಂಡಾಪಟ್ಟೆ ಜೋರು.ಹಾಂಗೆ ಅತ್ತೆಗೆ ಎನ್ನ ಸಾಂಕುವ ಮನಸ್ಸಿದ್ದರೂ ಎಡಿಗಾಯಿದಿಲ್ಲೆ..ಮಾವ ತೀರಿಹೋಪ ಹೊತ್ತಿಂಗೆ ಸರಿಯಾಗಿ ಎನಗೆ ಕೆಲಸ ಆತು.ಮತ್ತೆ ಅತ್ತೆ ದಣಿಯ ಸಮಯ ಇರದ್ರೂ ಈ ಜಾಗೆ ಎನ್ನ ಹೆಸರಿಗೆ ಮಾಡಿತ್ತವು.ಹಾಂಗೆ ಬದುಕಿದೆ ಆನು.ಅರವಿಂದ ಹಿಂದಣ ಕತೆ ಹೇಳುಗು.
ಶಾಂತ ಹೂಂಗುಟ್ಟುದು.ಗೆಂಡನ ಹಳೆ ಕತೆಯ ಮನಸ್ಸು ಮಡುಗಿ ಕೇಳುಗು.
ನೋಡು ಪಾರಿಜಾತ ಮರವ.ಇದು ದೇವಲೋಕದ ಮರ ಅಡ.ಕೃಷ್ಣ ದೇವರ ಹೆಂಡತಿಯಕ್ಕ ಸತ್ಯಭಾಮೆ,ರುಕ್ಮಿಣಿಯರ ನಡುವೆ ಈ ಹೂಗಿಂಗೆ ಲಡಾಯಿ ಆಯಿಗೊಂಡಿತ್ತಡ.ಕತೆಲಿ ಓದಿದ್ದಾನು.ಎಷ್ಟು ಹೂಗು ಬಿಟ್ಟಿದಿಲ್ಲಿ.ಘಮಘಮ ಹೇಳ್ತು.ಬಗ್ಗಿದ ಮರಂದ ಎಕ್ಕುವ ಹೂಗುಗಳೆಲ್ಲಾ  ಕೊಯಿದು ತಂದು ಶಾಂತನ  ಸೀರೆಯ ಸೆರಗಿಂಗೆ ಸೊರುಗುಗು.ಅರವಿಂದ.
ಶಾಂತ ಅದರ ಮೂಸಿ ಮೂಸಿ ಹಿತವಾದ ಪರಿಮಳಲ್ಲಿ ಗೆಂಡನ ಎದೆಗೊರಗುಗು.
ಮಾತೇ ಇಲ್ಲೆ ಅಷ್ಟಪ್ಪಗ ಅವರ ನಡುವೆ.ಅಲ್ಲಿ ಅವರದ್ದೇ ಸುಂದರ ಪ್ರೇಮ ಲೋಕ.ಅವ್ವೇ ರಾಜ,ರಾಣಿ.ಮಾತಿಂಗೂ ಮೀರಿದ ನವಿರು ಭಾವ ಮೈಮರೆಶಿ ಹಾಂಗೇ ಕೂದು ಸಂತೋಷಲ್ಲಿ ತೇಲಾಡುಗು.ಆಕಾಶ ನೋಡಿಕೊಂಡು,ನಕ್ಷತ್ರ  ಎಣಿಸಿಕೊಂಡು ಪಾರಿಜಾತದ ಪರಿಮ್ಮಳಲ್ಲಿ ಕಳದು ಹೋಕು.
ಮಕ್ಕ ಆದ ಮತ್ತೆಯೂ ಮಕ್ಕಳೊಟ್ಟಿಂಗೆ ಆಡುಗು ಅವು.ಆದರೆ ಬೇಗ ಬಚ್ಚುತ್ತು ಹೇಳುಗವ.ಸುಧೀರ ಹುಟ್ಟಿ ಒಂದು ತಿಂಗಳಿಲಿ ದಮ್ಮು ಕಟ್ಟುವುದು ಜೋರಾಗಿತ್ತು.ಎಷ್ಟುದೇ ಮದ್ದು ಮಾಡಿರೂ ಗುಣವೇ ಆಯಿದಿಲ್ಲೆ.
ಆ ದಿನ ತೀರಿ ಹೋದ ಮುನ್ನಾದಿನ  ಮೂರುಸಂಧಿಲಿ,ಇದೇ ಬೆಂಚಿಲಿ ಎನ್ನ ಕೂರ್ಸಿ ಎನ್ನ ತೊಡೆಲಿ ಮನುಗಿದವು.
ಶಾಂತೂ… ಆನು ಇನ್ನು ಹೆಚ್ಚು ಸಮಯ ಇಲ್ಲೆ.ನೀನು ಗಟ್ಟಿಗೆತ್ತಿ.ಮಕ್ಕಳ ಲಾಯ್ಕಕೆ ನೋಡಿಗೋ.ನಿನ್ನ ಬಿಟ್ಟಿಕ್ಕಿ ಹೋಯೆಕ್ಕಲ್ಲಾ ಹೇಳಿ ಬೇಜಾರು ಎನಗೆ ಹೇಳಿದವು.
ಇದರ ಕೇಳಿ ಹೊಟ್ಟೆಗೆ ಪೀಶಕತ್ತಿ ಹಾಕಿದಂಗಾತು ಅದಕ್ಕೆ.
“ಏನೆಲ್ಲಾ ಅಪಶಕುನ  ಹೇಳೆಡಿ ಮುರುಸಂಧಿ ಅಪ್ಪಗ” ಎಂತದೂ ಆಗ ಹಾಂಗೆ …” ಹೇಳಿ ಸಮಾಧಾನ ಮಾಡಿತ್ತದು.
ಗೆಂಡಂಗೆ ದಮ್ಮು ಕಟ್ಟುದು ಜೋರಾಗಿ ಹೋದ್ದು ಅದಕ್ಕೂ ಗೊಂತಿದ್ದ ಸಂಗತಿಯೇ.ಮರುದಿನವೇ ಶಾಲೆಂದ ಬೇಗ ಬಂದವ
ಎನಗೆ‌ ಏನೂ ಎಡಿತ್ತಿಲ್ಲೆ ಶಾಂತೂ.. ಹೇಳಿ ಮದ್ದು ಕುಡುದು,ಅದರ ಮೊಟ್ಟೆಲಿ ಮನುಗಿದವ ಮತ್ತೆ ಎದ್ದಿದಾಯಿಲ್ಲೆ.
ಶಾಂತಂಗೆ ಎಲ್ಲಾ ಅಯೋಮಯ ಆತು.ವಿಪರೀತ ದು:ಖ.ಮಕ್ಕಳ ತಬ್ಬಿಗೊಂಡು ಕರುಳು ಬಿರಿವ ಹಾಂಗೆ ಕೂಗುತ್ತದು.ಮಕ್ಕೋದೇ ಅಮ್ಮ ಕೂಗುದು ನೋಡಿ ಕೂಗುತ್ತವು. 
ಶಾಂತ ಮಕ್ಕೋ  ಅನಾಥರಾದವು.ಅಣ್ಣ ಬಂದು ಎಲ್ಲಾ ಆದ ಮತ್ತೆ ತಂಗೆಗೆ ಸಾಂತ್ವನ ಹೇಳಿಕ್ಕಿ ಹೋದ.
ಕಾಲ ಅರನ್ನೂ ಕಾಯ್ತಿಲ್ಲೆನ್ನೆ?ನೋಡಿ,ನೋಡಿಕೊಂಡು ಇದ್ದಾಂಗೆ ,ಮಕ್ಕ ಕಲ್ತು ದೊಡ್ಡ ಆದವು.ದೊಡ್ಡ ಉದ್ಯೋಗದೇ ಹಿಡುದವು.ಮಗಂದಿರಿಂಗೆ ಮದುವೆ ಆತು.ಬೇರೆ ಮನೆಯೂ ಮಾಡಿದವು.ಸಂಸಾರ ಕಟ್ಟಿಕೊಂಡು ಹೋದವು ದೂರ ಆದವು.ಮಗಳಿಂಗೂ ಮದುವೆ ಆತು.ಅದುದೇ ದೂರ ಆತು.ಅವರವರ ಸಂಸಾರಲ್ಲಿ ಬ್ಯುಸಿ ಆಗಿ ಹೆತ್ತಬ್ಬೆಯ ಮರದವು ಅವು.
ಈಗ ಶಾಂತ ಒಂಟಿ ಜೀವ.ಪಾಪ. ಪ್ರಾಯ ಆದಾಂಗೆ ಅನಾರೋಗ್ಯ ಸಮಸ್ಯೆ ಆತು.ಸೊಂಟ ಬೇನೆ,ಮೊಳಪ್ಪು ಬೇನೆ ಒದ್ದಾಡುಗು.ಮಕ್ಕ ಕಾಟಾಚಾರಕ್ಕೆ ಬಂದು ನೋಡಿ ಹೋಕು.
ಎಲ್ಲಾ ಬದಲಾಗಿ ಹೋತು.ಜಾಲಿಲಿದ್ದ ಪಾರಿಜಾತ ಮರ ಮಾತ್ರ ಹಾಂಗೇ ಇದ್ದು.ಹೂಗು ಇದ್ದರುದೇ ಕೊಯಿವವಿಲ್ಲೆ.ಸಿಮೆಂಟ್ ಬೆಂಚಿಲಿ ಕೂದು ಹಳತ್ತೆಲ್ಲಾ ನೆಂಪಾತು ಅದಕ್ಕೆ.
ಅಮ್ಮ ಎನಗೆ…. ಅಮ್ಮ ಎನಗೆ… ಹೇಳಿ ಹೇಳಿದ ಮಕ್ಕೋಗೆ ಈಗ ಅಮ್ಮ ಆರಿಂಗೂ ಬೇಡ ಆಗಿ ಹೋತು.
ಆರಿಂಗೂ ಅಮ್ಮ ಬೇಡ ಈಗ. ಆ ದಿನ ಏನೋ ಅಪರೂಪಕ್ಕೆ ಅಮ್ಮನ ನೋಡ್ಲೆ ಬಂದಿತ್ತು ಸುಮನಾ.ಎರಡು ದಿನಕ್ಕೆ ಅಮ್ಮನ ಮನೆಗೆ ಬಾ… ಹೇಳಿಯೂ ಹೇಳಿತ್ತು.
ಆನು ಎಲ್ಲಿಗೂ ಬತ್ತಿಲ್ಲೆ.ಈ ಜಾಲಿಲೇ ಎನ್ನ ಸರ್ವಸ್ವ ಇದ್ದು.ಎನಗೆ ಇಲ್ಲಿಯೇ ಪರಮಸುಖ.ಗ್ರೇಶಿಗೊಂಡು ಕಲ್ಪನೆಲೇ ಪಾರಿಜಾತ ಹೂಗಿನ ಹೆರ್ಕುತ್ತು ಶಾಂತ.
ಕಣ್ಣಾಮುಚ್ಚೇ ಕಾಡಾಗೂಡೇ… ಹೇಳಿ ಆಡಿದ ಆಟ ನೆಂಪಾವ್ತಾ ಇದ್ದು.ಮಕ್ಕೋ ಮೂರು ಜನದೇ ಇದ್ದವಲ್ಲಿ.ಕಾಣ್ತಾ ಇದ್ದದಕ್ಕೆ….
“ಅಮ್ಮ ಎನಗೆ….ಅಮ್ಮ ಎನಗೆ..” ಹೇಳಿ ಅದರ ಎಳೆತ್ತಾ ಇದ್ದವು ಮಕ್ಕೋ.ಖುಷಿಯೋ ಖುಷಿ…..ಆಟವೇ ಆಟ…..ಬಚ್ಚಿದ್ದೇ ಇಲ್ಲೆ……
ಗಾಳಿ ಬೀಸುಲೆ ಸುರುವಾತು…..ಸಣ್ಣಕೆ ಮಳೆ ಹನಿದೇ ಹನುಕಿತ್ತು….
ಮಕ್ಕೋ…ನಿಂಗೋ ಎಲ್ಲಾ ಒಳ‌ ಹೋಗಿ ಬೇಗ….ಮಳೆ ಬಂದರೆ ಶೀತ ಅಕ್ಕು..ಒಳ ಹೋಗಿ ಬೇಗ… ಬೇಗ …ಹೇಳ್ತು.
ಪಾರಿಜಾತ ಹೂಗು ಕಾಣ್ತದಕ್ಕೆ ಜಾಲಿಲಿ ಹರಗಿಗೊಂಡು.ನೋಡಿಗೊಂಡೇ ನಿಂದತ್ತು.
ಶಾಂತೂ….ಪಾರಿಜಾತ ಹೆರ್ಕು.ನೋಡು ಎಷ್ಟಿದ್ದು? ಪರಿಮ್ಮಳ ಬತ್ತಾ ಇದ್ದು….ಹೇಳಿ ಅರವಿಂದನ ಸ್ವರ ಗಾಳಿಲಿ ಕೇಳಿದಾಂಗಾತು.
ಹಾ….ಹೆರ್ಕುತ್ತೆ ಹೇಳಿ, ಹೆರ್ಕುಲೆ ಹೆರಟತ್ತು.ಬಗ್ಗುವಗ ತೆಗಲೆಲಿ  ಛಳಕ್ ಹೇಳಿ ಬೇನೆ ಎದ್ದತ್ತು.ಗುಮಾನ ಮಾಡಿದ್ದಿಲ್ಲೆ ಅದು.ರಜಾ ಹೊತ್ತಿಲಿ ಕಮ್ಮಿ ಆತು.
ಅಮ್ಮಂಗೆ ಮರುಳಾ?ಗಾಳಿ ಮಳೆ ಬಪ್ಪ ಅಂದಾಜು ಇದ್ದು. ಸಣ್ಣ ಮಕ್ಕಳಾಂಗೆ ಜಾಲಿಲಿ ಆಡಿಗೊಂಡು ಕೂಯಿದು. ಈಗ ಪಾರಿಜಾತ ಹೂಗು ಭಾರೀ ಅಗತ್ಯವಾ? ಎಂತಕೆ ಹೀಂಗೆ ಮಾಡ್ತಾ? ಸೊಂಟ ಬೇನೆ ಅಡ.ಮಗಳು ಸುಮನಾ ಅಮ್ಮನ ಬೈತ್ತು.
ಶಾಂತಂಗೆ ಕೇಳ್ತೇ ಇಲ್ಲೆ…ಅದು ಬೇರೆಯೇ ಲೋಕಲ್ಲಿದ್ದು….
ಶಾಂತ ಮಾತಾಡದ್ದೆ ಹೂಗಿನ ಹೆರ್ಕಿ, ಹೆರ್ಕಿ,  ಸೆರಗಿಲಿ ತುಂಬುಸಿ ಮೂಸಿ, ಮೂಸಿ ನೋಡುತ್ತು.ಇದ್ದಕಿದ್ದಾಂಗೆ ತೆಗಲೆ ಬೇನೆ ಜೋರಾತು.ತಡವಲಾರದ್ದ ಬೇನೆ ಬಂದು ತೆಗಲೆ ಹಿಡ್ಕೊಂಡು ಅಲ್ಲೇ ಬೀಳ್ತು.ಅದರ ಪ್ರಾಣಪಕ್ಷಿ ಕ್ಷಣಮಾತ್ರಲ್ಲಿ ಹಾರಿ ಹೋಗಿ ಪಂಚಭೂತಲ್ಲಿ ಸೇರಿಗೊಂಡತ್ತು.ಪಾರಿಜಾತ ಹೂಗು ಅದರ ಮೇಲೆ ಒಂದೊಂದೇ ಬೀಳ್ತಾ ಇದ್ದು.ರಜ ಹೊತ್ತಿಲೇ, ಗಾಳಿ ಬೀಸುದು ಜೋರಾಗಿ ಲಟಲ್ಲ… ಹೇಳಿ ಪಾರಿಜಾತ ಮರವೇ ಬುಡ ಸಮೇತ, ಶಾಂತನ( ಹೆಣದ) ಮೇಲಂಗೆ ಬಿದ್ದತ್ತು.
ಆ ಸ್ವರ ಕೇಳಿ ಮಗಳು ಓಡಿಗೊಂಡು ಬಂತು ಜಾಲಿಂಗೆ.ಗರಬಡುದೋರಾಂಗೆ ನಿಂದಿದು ಅದು.
ಈಗ ನಿಜಕ್ಕೂ ಅಂಗಳ ಭಣ ಭಣ ಹೇಳ್ತಾ ಇದ್ದು.ಪಾರಿಜಾತ ಮರವೇ ಆ ಅಂಗಳಕ್ಕೆ ಹೊಸ ಕಳೆ ತಂದುಗೊಂಡಿದ್ದದು.ಈಗ ಎಲ್ಲಾ ಖಾಲಿಖಾಲಿ.ಪಾರಿಜಾತ ಹೂಗುಗೆಲ್ಲಾ…. ಹೆಣದ ಮೇಲೆ  ಬಿದ್ದು ತಣ್ಣನೆ ಆಗಿ ಹೋತು.ಬದುಕು ಇಷ್ಟೇ.ಎಲ್ಲವೂ ಮುಗುತ್ತಲ್ಲಿಗೆ….
ಕಣ್ಣಾ ಮುಚ್ಚೆ ಕಾಡಾ ಗೂಡೇ….ಉದ್ದಿನ ಮೂಟೆ ಉರುಳೇ ಹೋಯ್ತು…..ಹೇಳಿ ಆಡಿದ ಜೀವ ಶಾಶ್ವತವಾಗಿ ಕಣ್ಣುಮುಚ್ಚಿತ್ತು.ಶಾಂತ,ಅರವಿಂದರ ಪ್ರೀತಿಗೆ ಸಾಕ್ಷಿಯಾದ ಪಾರಿಜಾತ ಮರ ನೆಲಕಚ್ಚಿತ್ತು.

-ಸಂಧ್ಯಾ ಶ್ಯಾಮಭಟ್ ಮುಂಡತ್ತಜೆ

ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)
ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×