Oppanna.com

ಅಬ್ಬೇ…,ಎನಗೆ ಅರುಂಧತಿಯ ಕಂಡಿದೇ ಇಲ್ಲೆ…,                 (ಭಾಗ-18)

ಬರದೋರು :   ಶೀಲಾಲಕ್ಷ್ಮೀ ಕಾಸರಗೋಡು    on   01/11/2016    12 ಒಪ್ಪಂಗೊ

 

“ಅಬ್ಬೇ…,ನೀನು ಹೇಳ್ತದ್ರಲ್ಲಿಯೂ ಅರ್ಥ ಇದ್ದು ಹೇಳಿ ಆವುತ್ತೆನಗೆ….,ಮೊನ್ನೆ ಸ್ನೇಹ ಎನಗೆ ಫೋನು ಮಾಡಿ ಅದು ಸಿನೆಮಾ ಜಗತ್ತಿನ ಮೋಸದ ಬಲೆಲಿ ಸಿಕ್ಕಿ ಬಿದ್ದ ಕತೆ ಹೇಳಿ ಕಣ್ಣೀರು ಹಾಕಿಯಪ್ಪಗ ಎನಗೆ ಬೆಚ್ಚಿ ಬೀಳ್ತ ಹಾಂಗಾತು. ಮನುಷ್ಯರು ಹೀಂಗೂದೆ ಮೋಸ ಮಾಡುಗೋ ಹೇಳಿ ಕಂಡತ್ತೆನಗೆ…. ಕೂದಲೆಳೆಯ ಅಂತರಲ್ಲಿ ಆನು ಆ ಪ್ರಪಾತಕ್ಕೆ ಬೀಳದ್ದೆ ಬಚಾವಾದೆ. ಸ್ನೇಹ ಮಾತಾಡಿದ ಲಾಗಾಯ್ತು ಆದಿತ್ಯ ಹೇಳಿಯೊಂಡಿತ್ತಿದ್ದ ಒಂದೊಂದು ಬುದ್ಧಿ ಮಾತಿನ ಬಗ್ಗೆಯೂ ಆನು ಮತ್ತೆ ಮತ್ತೆ ಆಲೋಚನೆ ಮಾಡ್ಲೆ ಸುರು ಮಾಡಿದೆ. ನೀನು ಹೇಳಿದ್ದದೂ ಎನ್ನ ಒಳ್ಳೇದಕ್ಕೇ ಹೇಳಿ ಎನಗೆ ಗೊಂತಿದ್ದು. ಅಂದರೆ ಒಂದು ವಿಷಯ ಆನು ಕೇಳ್ತೆ ಅಬ್ಬೇ…ಅಂವ ಆ ನಮೂನೆ ಎನ್ನ ಅವಮಾನ ಮಾಡಿ ಫೇಸ್ ಬುಕ್ಕಿಲ್ಲಿ, ವಾಟ್ಸಾಪಿಲ್ಲಿ ಎಲ್ಲ ಬರದ್ದದು ಸರಿಯೋ…?”

 

ಸುರಭಿಯ ಮಾತುಗಳ ಕೇಳಿ `ಕೂಸು ದಾರಿಗೆ ಬತ್ತಾ ಇದ್ದು…’ ಹೇಳಿ ಹರಿಣಿ ಜಾನ್ಸಿಯೋಂಡಿತ್ತಿದ್ದು. ಆದರೆ ಕಡೇಂಗೆ ಅದರ ಬಾಯಿಂದ ಬಂದ ಪ್ರಶ್ನೆಯ ಕೇಳಿ ತಲೆಗೆ ಜೆಪ್ಪಿಯೋಂಬ ಹಾಂಗೆ ಆತು…,ಅಂದರೆ ಇದು ಎಷ್ಟು ಮಾಂತ್ರಕ್ಕೂ ತಾಳ್ಮೆ ತಪ್ಪುತ್ತ ಸಮಯ ಅಲ್ಲ…ಬೆಣ್ಣೆಲಿ ಕೂದಲಿನ ಎಳದು ತೆಗವ ಹಾಂಗಿದ್ದ ಕೆಲಸವೇ ಇದೂದೆ…,ಎಚ್ಚರ…,ಎಚ್ಚರ…,ಕಟ್ಟೆಚ್ಚರ….ಹೇಳಿ ಅದರ ಮನಸ್ಸಿಂಗೇ ಅದು ತಾಕೀತು ಮಾಡಿಯೋಂಡತ್ತು.

 

“ಒಪ್ಪಕ್ಕೋ…,ಇದಾ…, ಅಂದು ನೀನು ನಿನ್ನ ಮೋರೆ ಪುಟಂದ ಎನ್ನ ಹೆರಾಂಗೆ ಅಟ್ಟಿದ್ದ್ಯೋ ಇಲ್ಲ್ಯೋ….? ಈ ಪ್ರಶ್ನೆಗೆ ಮದಾಲು ಉತ್ತರ ಹೇಳು…”

 

ಅಬ್ಬೆಯ ಪ್ರಶ್ನೆ ಕೇಳಿ ಕೂಸಿನ ಬಾಯಿಂದ ಮಾತೇ ಹೆರಡ. ತಲೆ ತಗ್ಗಿತ್ತು, ಕಣ್ಣು ತುಂಬಿತ್ತು, ಮೋರೆ ಕುಂಞಿ ಆತು. ಮಗಳ ಮೌನ ಕಂಡು ಹರಿಣಿ `ಕೆಲಸ ಕೆಟ್ಟತ್ತು…’ ಹೇಳಿ ಜಾನ್ಸಿಯೊಂಡತ್ತು. ಮೃದುವಾಗಿಯೇ ಹೇಳಿತ್ತು,

 

“ಅಯ್ಯೋ ಮಗಳೋ…,ನೀನು ತಪ್ಪು ಮಾಡಿದ್ದದು ಹೇಳ್ಲೆ ಬೇಕಾಗಿ ಆನು ಆ ವಿಷಯವ ಎತ್ತಿದ್ದದಲ್ಲ….,ಅಂದು ನೀನು ಹಾಂಗೆ ಮಾಡಿರೂ ಆನು ನಿನ್ನತ್ರೆ ಕೋಪ್ಸಿದ್ದನೋ…? ಇಲ್ಲೇನ್ನೇ? ಎಂತಕೆ ಹೇಳು…ಎನಗೆ ಜೀವನಲ್ಲಿ ವಿಚಾರ ಮಾಡ್ಲೆ, ಹೊತ್ತು ಕಳವಲೆ, ಮಾತಾಡ್ಲೆ ಬೇರೆ ಎಷ್ಟೋ ವಿಷಯಂಗೊ, ಎಷ್ಟೋ ಒಡನಾಡಿಗೊ, ಎಷ್ಟೋ ಕೆಲಸಂಗೊ ಇದ್ದು. ಆ ಮೋರೆ ಪುಟ, ವಾಟ್ಸಾಪು ಇತ್ಯಾದಿಗೊ ಹೇಂಗೆ ಹೇಳಿರೆ ಕಾರು, ಫ್ರಿಜ್ಜು ಎಲ್ಲ ಇಪ್ಪ ಹಾಂಗೆ ಅದೂದೆ ಒಂದು ಸೌಕರ್ಯ ಹೇಳಿ ಆನು ತಿಳ್ಕೋಂಡಿದೆ ಅಷ್ಟೇ ಹೊರತಾಗಿ ಅದುವೇ ಜೀವನ ಹೇಳಿ ಎನಗೆ ಕಂಡಿದಿಲ್ಲೆ. ಮುತ್ತಿನ ಹಾಂಗಿದ್ದ ಮಗಳೇ ಒಟ್ಟಿಂಗಿಪ್ಪಾಗ ಅದರ ಮೋರೆ ಪುಟಲ್ಲಿ ಆನು ಇಲ್ಲದ್ರೆ ಎಂತಾಡ…? ಹೇಳಿಯಷ್ಟೇ ಎನಗೆ ಕಂಡದು. ದೇವರು ನವಗೆ ಪಂಚೇಂದ್ರಿಯಂಗಳ ಕೊಟ್ಟದು ಎಂತಕೆ…? ಸರ್ವವಿಧದ ಸಂವಹನವೂ ಅದರ ಮೂಲಕವೇ ಆಯೇಕು ಹೇಳ್ತದು ಉದ್ದೇಶ. ಅದು ಬಿಟ್ಟು ಇಡೀ ದಿನ ಬೆರಳ ಕೊಡಿಲಿ ಕಂಪ್ಯೂಟರು, ಮೊಬೈಲುಗಳ ಕೀಬೋರ್ಡ್ ಕುಟ್ಟಿಯೋಂಡು ಲೈಕುಗೊ, ಕಮೆಂಟುಗೋ ಹೇದು ಆ ನಿಜರ್ೀವ ಶಬ್ದಂಗಳೊಟ್ಟಿಂಗೆ ಹೊಡಚ್ಚುತ್ತದ್ರಲ್ಲಿ ಅರ್ಥ ಇದ್ದೋ…? ಆದಿತ್ಯನ ಕಮೆಂಟುಗಳೋ ಅಂವ ಹಾಕಿದ ಪಟಂಗಳೋ ನಿನ್ನ ಅಷ್ಟು ಕೆದರ್ಸಲೆ ಕಾರಣ ಎಂತಾ ಹೇಳಿದ್ರೆ ನಿಜ ಜೀವನಂದಲೂ ಹೆಚ್ಚು ಆ ನಿಜರ್ೀವ ಲೋಕವನ್ನೇ ನೀನು ಪ್ರೀತಿಸಿದೆ. ಅದಕ್ಕೂ ಮೂಲ ಕಾರಣ ಎಂಗಳೇ ಹೇಳುವೋಂ. ಇನ್ನು ಮುಂದೆಯಾದ್ರೂ ನೆಂಪು ಮಡುಗಿಗೋ….,ಗೆಂಡ ಹೆಂಡತ್ತಿಯೊಳ ಇರೇಕಾದ್ದದು ಟೆಕ್ಸ್ಟಿಂಗ್(ಮೆಸೇಜುಗಳ ಕಳ್ಸುತ್ತದು), ಚ್ಯಾಟಿಂಗ್(ಅಂತಜರ್ಾಲಲ್ಲಿ ಪಟ್ಟಾಂಗ ಹೊಡವದು), ಇಮೋಜಿಗಳ ಹಾಕುತ್ತದೋ ಅಲ್ಲ ಮಗಳೋ….,ವೈವಾಹಿಕ ಜೀವನಲ್ಲಿ ಜೀವಂತಿಕೆಯೇ ಇರೇಕಪ್ಪದು. ಅಲ್ಲಿ ಬಿಗುಮಾನಕ್ಕೆ ಜಾಗೆಯೇ ಇಪ್ಪಲಾಗ…,ಪರಸ್ಪರ ಮುಕ್ತ ಮಾತುಕತೆ, ಮಧುರ ಸ್ಪರ್ಷ…ಈ ಎಲ್ಲವನ್ನೂ ಧಾರಾಳವಾಗಿ ಕೊಟ್ಟು ಧಾರಾಳವಾಗಿ ತೆಕ್ಕೋಂಬದು…, ಇದಿಷ್ಟರ ನೀನು ಅಭ್ಯಾಸ ಮಾಡಿಯೋಂಡ್ರೆ ನಿನಗೆ ನಿನ್ನ ಮನೆಯೇ ಸ್ವರ್ಗ ಅಕ್ಕು….,ಇದಾ…ಆದಿತ್ಯ ಸುಮಾರು ಸತರ್ಿ ನಿನಗೆ ಫೋನು ಮಾಡಿಯಪ್ಪಾಗಳೂ ನೀನು ತೆಗದ್ದೇ ಇಲ್ಲೆಯಾಡ…? ಎನ್ನತ್ರೆ ಹೇಳಿ ತುಂಬಾ ಬೇಜಾರು ಮಾಡಿಯೋಂಡ….” ಹರಿಣಿ ವಿಷಯ ಎಲ್ಲ ಹೇಳಿಕ್ಕಿ ಸುರಭಿಯ ಪ್ರತಿಕ್ರಿಯೆಗೆ ಕಾದತ್ತು. ಕಸ್ತ್ಲೆಲಿ ಮಗಳ ಮೋರೆಯ ಭಾವ ಹರಿಣಿಗೆ ಕಂಡತ್ತಿಲ್ಲೆ. ಅದು ಅಬ್ಬೆಯ ಮಡಿಲಿಲ್ಲಿ ಮಡುಗಿಯೊಂಡಿತ್ತಿದ್ದ ತಲೆಯ ಚಕ್ಕನೆ ಎತ್ತಿ ಹೇಳಿತ್ತು,

“ಹೇಂ…ಅಪ್ಪೋ ಅಬ್ಬೇ…?ಎನಗೂ ಅಂವನ ಬಿಟ್ಟು ಇಪ್ಪಲೆ ಸಾಧ್ಯವೇ ಇಲ್ಲೆ ಹೇಳಿ ನಿನ್ನೆಂದ ಕಾಂಬಲೆ ಸುರುವಾಯಿದು…ಅಂದರೆ ಆನಾಗಿ ಎಂತಕೆ ತಪ್ಪಾತು ಹೇಳಿ ಕ್ಷಮೆ ಕೇಳೇಕು…? ಎನ್ನಷ್ಟೇ ಅಂವನೂ ತಪ್ಪು ಮಾಡಿದ್ದನ್ನೇ ಹೇಳಿಯೂ ಕಂಡತ್ತು…ಎನಗೆ ಹೇಳಿದ ಬುದ್ಧಿ ಮಾತುಗಳ ಅಂವಗೂ ನೀನು ಹೇಳೇಕಬ್ಬೇ…”

 

“ನಿಂಗೊಗಿಬ್ರಿಂಗೂ ಬುದ್ಧಿ ಬೇಕಾಷ್ಟು ಇದ್ದು ಮಗಳೋ…,ಆನು ಬರೇ ಸಲಹೆ ಕೊಟ್ಟದಷ್ಟೆ….,ಮತ್ತೇ…ತುಳು ಭಾಷೆಲಿ `ಎಂಕಿಂಚ’ ಹೇಳ್ತ ಒಂದು ಶಬ್ದ ಇದ್ದು. ಹೇಳಿರೆ ತನಗೆ ಹೀಂಗೇ ಆಯೇಕು….,ಆರು ಹೇಳಿರೂ, ಎಂತದೇ ಆದ್ರೂ ಹೊಂದಾಣಿಕೆಯ ಪ್ರಶ್ನೆಯೇ ಇಲ್ಲೆ ಹೇಳ್ತ ಭಾವ ಆ ಒಂದು ಶಬ್ದಲ್ಲಿ ಇಪ್ಪದು. ಈಗ ನಿನ್ನ ಮಾತು ಕೇಳಿ ಎನಗೆ ಅದುವೇ ನೆಂಪಾತದ. ದಾಂಪತ್ಯ ಜೀವನಲ್ಲಿ ಅಂವ ಬೇರೆ…ನೀನು ಬೇರೆ…ಹೇಳ್ತ ಮಾತು ಬಪ್ಪಲೇ ಆಗ. ಒಪ್ಪೀ….,ಆರೊಬ್ಬಂ ತಪ್ಪು ಮಾಡೀರೂ ಬೇನೆ ಅನುಭವಿಸುತ್ತದು ಇಬ್ರೂದೆ….ಈಗ ನಿನ್ನ ವಿಷಯಲ್ಲಿ ಆದ್ದದೂ ಅದುವೇ ಅಲ್ದೋ….ನೀನು ಹೆಚ್ಚೆಂತ ಮಾಡ್ತದು ಬೇಡ….ಆನು ಹೇಳಿದ ವಿಷಯಂಗಳ ಪ್ರಯೋಗ ಹೇಳ್ತ ರೀತೀಲಿ ನಿನ್ನ ಜೀವನಲ್ಲಿ ಅಳವಡ್ಸಿ ನೋಡು….ಒಂದೇ ಒಂದು ತಿಂಗಳು ಅದರೆಲ್ಲ ಅನುಸರ್ಸಿ ನೋಡು….,ಜೀವನ ಖುಷಿಲಿ ಹೋವುತ್ತೋ ನೋಡುವೋಂ….ಖಂಡಿತವಾಗಿಯೂ ಸರಿ ಅಕ್ಕು….ಆದಿತ್ಯನತ್ರೂ ಆನು ಈ ವಿಷಯ ಮಾತಾಡಿದ್ದೆ. ಅಂವನೂ ನೀನಿಲ್ಲದ್ದೆ ಕಂಗಾಲಾಯಿದಂ. ನಿಂಗಳಿಬ್ರ ಮಧ್ಯಲ್ಲಿಪ್ಪ ಅಹಂ ಹೇಳ್ತ ಕುರೆ ಹೊಂಡವ ಮುಚ್ಚಿಕ್ಕುವೊಂ ಆಗದೋ….?”

 

“ಹೂಂ…ಪ್ರಯತ್ನ ಮಾಡ್ತೆ ಅಬ್ಬೇ….” ಹರಿಣಿಗೆ ಮಗಳ ಮಾತು ಕೇಳಿ ಪರಮಾನ್ನ ಉಂಡಷ್ಟು ಸಂತೋಷ ಆತು. ಇದೇ ತಕ್ಕ ಸಮಯ ಹೇಳಿಯೊಂಡು ಇನ್ನೊಂದು ದಾಳವನ್ನೂ ಉರುಳ್ಸಿತ್ತು,

 

“ಮಗಳೋ…,ಮತ್ತೊಂದು ವಿಷಯ ಹೇಳ್ಲೆ ಮರದು ಹೋತು….ಇದಾ…ನೀನು ಬೆಂಗ್ಳೂರಿಂಗೆ ಹೋಪ ಮೊದಲು ಅಪ್ಪನತ್ರೆ ಒಂದಾರಿ ಚೆಂದಕೆ ಮಾತಾಡೇಕು ಮಿನಿಯಾಂ…ಮದುವೆಂದ ಮೊದಲು ಮಾತಾಡಿಯೊಂಡಿತ್ತಿದ್ದ ಹಾಂಗೆ….? ಅಪ್ಪನ ಮನಸ್ಸಿನ ಒಳಾವೆ ಎಂತೋ ಒಂದು ವಿಚಾರ ಕೊರತ್ತಾ ಇದ್ದು…ನೀನೇ ಅದರ ಸರಿ ಮಾಡೇಕು….ಎಷ್ಟಾದ್ರೂ ನೀನು ಅಪ್ಪನ ಮುದ್ದಿನ ಮಗಳಲ್ದೋ….” ಹರಿಣಿ ಅಷ್ಟು ಹೇಳಿದ್ದೇ ತಡ…ಸುರಭಿಯ ಕಣ್ಣಿಂದ ಹೊಸ ಒರತ್ತೆ ಹರಿವಲೆ ಸುರುವಾತದ….

 

“ಅಯ್ಯೋ ಅಬ್ಬೇ….ಆನು ಆ ಯೋಗ್ಯತಿಗೆಯ ಅಂದೇ ಕಳಕ್ಕೋಂಡಿದೆ….ಬೆಂಗ್ಳೂರಿಲ್ಲಿ ಆನು ಅಪ್ಪನ ಎದೆಗೆ ತೊಳುದ ಹಾಂಗೆ ಮಾತಾಡಿದ್ದೇ ಸಾಕನ್ನೇ….ಇನ್ನು ಪುನಃ ಮತಾಡ್ಲೆ ಎಂತದೂ ಬಾಕಿ ಇಲ್ಲೆ….” ಸುರಭಿಯ ಮಾತುಗಳ ಕೇಳಿ ಹರಿಣಿಗೆ ಕಕ್ಕಾಬಿಕ್ಕಿಯಾತು.

 

“ಎಂತರ ಒಪ್ಪಕ್ಕೋ ನೀನು ಹೇಳ್ತಾ ಇಪ್ಪದು…?”

 

“ಅಪ್ಪು ಅಬ್ಬೇ…,ಅಂದು ಮೈಸೂರಿಲ್ಲಿ ಎನ್ನ ಕಾರ್ಯಕ್ರಮ ಇಪ್ಪಾಗ ನಾಕು ದಿನ ಮದಲೇ ಆನು ಬೆಂಗ್ಳೂರಿಂಗೆ ಹೋಗಿತ್ತಿದ್ದೆ ಅಲ್ದೋ…? ಒಂದು ದಿನ ಎನ್ನ ಕಾಂಬಲೆ ಹೇಳಿ ಅಪ್ಪಂ ಅಲ್ಲಿಗೆ ಬಂದಿತ್ತಿದ್ದವು. ರೂಮಿಲ್ಲಿ ಆನಿಲ್ಲೆ ಹೇಳಿ ಗೊಂತಾಗಿ ವತ್ಸಲ ಮೇಡಂ ಹತ್ರೆ ವಿಚಾರ್ಸಿಯಪ್ಪಗ ಆದಿತ್ಯಂಗೂ ಎನಗೂ ಇಪ್ಪ ಸ್ನೇಹಾಚಾರವ ಹೇಳಿತ್ತಾಡ. ದಿಕ್ಕು ದೆಸೆ ಎಂತದೂ ಗೊಂತಿಲ್ಲದ್ದ ಹುಡುಗನೊಟ್ಟಿಂಗೆ ಆನು ತಿರುಗುತ್ತಾ ಇಪ್ಪದು ಗೊಂತಾಗಿ ಅಪ್ಪಂ ಎಕ್ಕಸಕ್ಕ ಬೇಜಾರು ಮಾಡಿಯೋಂಡವಾಡ. ಆ ಬೇಜಾರಿನ ಮೇಡಂ ಹತ್ರೆ ಹೇಳಿಯೋಂಡಪ್ಪಗ ಅದು ಪೆರಟ್ಟೇ ಮತಾಡಿತ್ತಾಡ. ಅಷ್ಟು ಮಾಂತ್ರ ಆಗಿತರ್ಿದ್ರೆ ಸಾರ ಇತರ್ೀತಿಲ್ಲೆ. ಆನು ಬಪ್ಪವರೇಗೆ ಕಾದು ಅಪ್ಪಂ ಎನಗೆ ಬುದ್ಧಿ ಮಾತು ಹೇಳಿತ್ತಿದ್ದವು. ಅಂಬಗ ಎನ್ನ ತಲೆ ಹೆಗಲ ಮೇಗೆ ಇತ್ತಿದ್ದಿಲ್ಲೆ ಹೇಳಿಯೇ ಹೇಳೇಕಷ್ಟೆ….ಪ್ರಾಯದ ಮದ, ರೂಪದ ಮದ, ಪ್ರಸಿದ್ಧಿಯ ಮದ ಎನ್ನ ತಲೆಗೆ ಏರಿತ್ತಿದ್ದು….ಅಪ್ಪಂ ಅಷ್ಟು ಕೊಂಗಾಟಕ್ಕೆ ಎನಗೆ ಬುದ್ಧಿ ಮಾತು ಹೇಳುವಾಗ ಆನು ಎಂತ ಹೇಳಿದೆ ಗೊಂತಿದ್ದೋ….ಅದೂ ಮೇಡಮ್ಮಿನ ಎದುರು….,

 

“ಅಪ್ಪಾಂ…ನಿಂಗೊ ಇನ್ನೂ ಯಾವ ಕಾಲಲ್ಲಿ ಇದ್ದಿರಿ…? ನಿಂಗೋಗೆ ಕಲೆಯ ಬಗ್ಗೆ ಎಂತ ಗೊಂತಿದ್ದು….? ಆನು ನಿಂಗಳ ಬೇಕಾರೂ ಬಿಡುವೆ…ಅಬ್ಬೆಯನ್ನೂ ಮರವೆ…, ಆದರೆ ಆದಿತ್ಯನೂ ನೃತ್ಯವೂ ಇಲ್ಲದ್ದ ಜೀವನವ ಎನಗೆ ಯೋಚಿಸಲೂ ಎಡಿಯ…,ಎನಗೆ ಎಂತ ಬೇಕು ಹೇದು ಎನಗೆ ಗೊಂತಿದ್ದು…ನಿಂಗಳ ಬುದ್ಧಿ ಮಾತಿನ ಅಗತ್ಯ ಇಲ್ಲೆ…’ ಹೇಳಿ ಹೇಳಿತ್ತಿದ್ದೆ ಅಬ್ಬೇ….ಅಪ್ಪಂ ಎಷ್ಟು ಅವಮಾನ ಪಟ್ಟವೋ…..ಎಷ್ಟು ಕೊರಗಿದವೋ….ದೇವರೇ ಎನಗೆ ಬುದ್ಧಿ ಕಲುಶೇಕು ಹೇಳ್ತ ತೀಮರ್ಾನ ತೆಕ್ಕೋಂಡ ಕಾಣ್ತು….ಕೆಲವೇ ಸಮಯಲ್ಲಿ ವತ್ಸಲಾ ಮೇಡಂನ ನಿಜ ಬುದ್ಧಿ ಗೊಂತಾತು…,ಆನೇ ರಂಭೆ…ಊರ್ವಶಿ ಹೇಳಿ ಎನ್ನ ತಲೆಗೆ ಏರಿದ್ದದು ಮೆಲ್ಲಂಗೆ ಕಾಲಿಂಗೆ ಇಳಿವಲೆ ಸುರುವಾತದ. ಅದರೊಂಟ್ಟಿಂಗೆ ಆದಿತ್ಯನ ಬುದ್ಧಿ ಮಾತುಗೋ….ಕೋಪದ ನಡತೆಗೋ….ಎನಗೆ ಮರುಳು ಹಿಡಿವಲೆ ಒಂದು ಬಾಕಿ ಇತ್ತಿದ್ದು….ಸಾವೇ ಗತಿ ಹೇಳಿ ಕಂಡಪ್ಪಗ ನಿಂಗಳ ನೆಂಪಾದ್ದದು….ಅಪ್ಪಂ ಖಂಡಿತಾ ಎನ್ನ ಮನೆಯೊಳಾಂಗೆ ಸೇರ್ಸವು ಹೇಳಿಯೇ ಜಾನ್ಸಿತ್ತಿದ್ದೆ. ಹಾಂಗೆ ಆವುತಿದ್ರೆ ಆನು ರೈಲಿನಡಿಂಗೆ ತಲೆ ಕೊಟ್ಟು ಸಾಯ್ವದು ಹೇಳಿ ತೀಮರ್ಾನ ಮಾಡಿಯೊಂಡೇ….”

 

“ಅಯ್ಯೋ ಒಪ್ಪೀ….ಎಂತಕೆ ಹಾಂಗಿದ್ದ ಮಾತು ಹೇಳ್ತೆ ಮಗಳೋ….” ಫಕ್ಕನೆ ಮೋಹನನ ಸ್ವರ ಕೇಳಿಯಪ್ಪಗ ಸುರಭಿಯ ಬಾಯಿ ಕಟ್ಟಿತ್ತು. ಎದೆ ನೆಡುಗಿತ್ತು. ಹರಿಣಿ ಬೆಚ್ಚಿ ಬಿದ್ದು ಧಿಗ್ಗನೆ ಎದ್ದು ಲೈಟು ಹಾಕಿತ್ತು. ಇವಿಬ್ರು ಕೂದಲ್ಲಿಂದ ರಜ್ಜ ಅತ್ಲಾಗಿಯಂಗೆ ಅಂವ ನಿಂದೊಂಡಿತ್ತಿದ್ದಂ! ಹರಿಣಿಗೆ ಒಂದು ಕ್ಷಣ ಎದೆ ಬಡಿತವೇ ನಿಂದ ಹಾಂಗಾತು….

`ಅಯ್ಯೋ…ಎಂಗಳ ಮಾತುಗೋ ಎಲ್ಲವೂ ಅಂವನ ಕೆಮಿಗೆ ಬಿದ್ದಿಕ್ಕೋ…? ಈಗಷ್ಟೇ ಸೌಖ್ಯ ಆಗಿ ಊಟ ಒರಕ್ಕು ಸರಿಯಾಗಿ ಮಾಡ್ಲೆ ಸುರುಮಾಡಿದವಂ….ಇನ್ನು ಪುನಃ ಎಂತಾರೂ ಆದರೆ….ಹೇ…ದೇವಾ…ಇದೆಂತಾ ಪರೀಕ್ಷೆ….ಸುರಭಿಯ ಜೀವನ ಒಂದು ಮಟ್ಟಿಂಗೆ ಸರಿದಾರಿಗೆ ಬಕ್ಕು ಹೇಳ್ತ ನಿರೀಕ್ಷೆಲಿಪ್ಪಾಗ ಮೋಹನಂಗೆ ಮತ್ತೆ ಆಘಾತ…?’

 

ಸುರಭಿ ಧೈರ್ಯ ಮಾಡಿ ಹೇಳಿತ್ತು,

“ಅಪ್ಪು…ಅಪ್ಪಾಂ…ಆನು ಹೇಳಿದ ಆ ಮಾತುಗೊಕ್ಕೆ, ನಿಂಗಳ ಅವಮಾನಿಸಿದ ಆ ರೀತಿಗೆ ಏಳೇಳು ಜನ್ಮಲ್ಲಿಯೂ ಎನಗೆ ಕ್ಷಮೆ ಸಿಕ್ಕ….ನಿಂಗೊ ಆದ ಕಾರಣ ಎನ್ನ ಮನೆಯೊಳಾಂಗೆ ಬಪ್ಪಲೆ ಬಿಟ್ಟಿರಿ…ಬೇರೆಯವು ಆವುತಿದ್ರೆ ಮೆಟ್ಟು ತೆಗದು….” ಸುರಭಿ ಮುಂದೆ ಮಾತಾಡ್ಲೆ ಅವಕಾಶ ಇಲ್ಲದ್ದ ಹಾಂಗೆ

ಮೋಹನ ಮಗಳ ಬಳಸಿ ಹಿಡಿದು ತನ್ನ ಎದೆಗೆ ಮೃದುವಾಗಿ ಒತ್ತಿಯೋಂಡ.

“ಒಪ್ಪೀ…,ಮಕ್ಕೊ ಎಂದಿಂಗೂ ಮಕ್ಕಳೇ….ತಪ್ಪು ಮಾಡಿಯೇ ಬುದ್ಧಿ ಬಲಿಯೇಕಷ್ಟೆ….,ನೀನು ಹೀಂಗಿದ್ದ ಬೇಡಂಕೆಟ್ಟ ಮಾತುಗಳ ಎಲ್ಲ ಹೇಳ್ಲಾಗ ಮಿನಿಯಾಂ….ನಿನಗೆ ನಿನ್ನ ಆಯ್ಕೆಲೇ ಸಂತೋಷ ಸಿಕ್ಕುತ್ತು ಹೇಳಿಯಾದ್ರೆ ಆನೆಂತಕೆ ಮಧ್ಯಲ್ಲಿ ಬಂದು ಅದರ ಹಾಳು ಮಾಡೇಕು ಹೇಳಿ ಜಾನ್ಸಿಯೋಂಡೆ….ಇನ್ನು ಬೆಂಗ್ಳೂರಿಲ್ಲಿ ಆದ ವಿಷಯವ ಅಬ್ಬೆಯತ್ರೂ ಹೇಳಿ ಅದರ ಮನಸ್ಸಿಂಗೂ ಎಂತಕೆ ಬೇಜಾರು ಮಾಡ್ಸುತ್ತದು ಹೇಳಿ ಎಲ್ಲವನ್ನೂ ಆನೊಬ್ಬನೇ ನುಂಗಿಯೋಂಡೆ…., ನಿನ್ನ ಮತ್ತೆ ಆದಿತ್ಯನ ವಿಷಯಕ್ಕಪ್ಪಗ ಆನು ಪರಕೀಯ ಹೇಳ್ತ ಭಾವನೆ ನಿನ್ನಲ್ಲಿ ಇಪ್ಪಷ್ಟು ಸಮಯವೂ ಆನು ದೂರವೇ ಇಪ್ಪದು ಒಳ್ಳೇದು ಹೇಳ್ತ ಕಾರಣಕ್ಕಾಗಿ ಆನು ದೂರ ಇತ್ತಿದ್ದೆ ಅಷ್ಟೇ….ಆದರೆ ಪರಕೀಯ ಹೇಳ್ತ ಆ ಭಾವನೆಯ ಅಭ್ಯಾಸ ಮಾಡಿಯೋಳೇಕಾರೆ ಮಾಂತ್ರ ತುಂಬಾ ಕಷ್ಟ ಬಂದೆ…..”

“ಅಯ್ಯೋ…ಅಪ್ಪಾಂ…ಎನ್ನಂದಾಗಿ ಎಷ್ಟು ಅನುಭವಿಸಿದಿರಿ ನಿಂಗೋ…,ಆದಿತ್ಯನೂ ಆನೂ ಇನ್ನು ಮುಂದೆ ಎಂದೆಂದಿಂಗೂ ನಿಂಗೊಗೆ ಬೇಜಾರು ಅಪ್ಪ ಹಾಂಗೆ ಮಾಡೆಯೋಂ….ಇದು ಎನ್ನ ಖಂಡಿತದ ಮಾತು ಅಪ್ಪಾಂ…”

ಮೋಹನನ ಮೋರೆಲಿ ಮಂದಹಾಸ ಮಿನುಗಿಯಪ್ಪಗ ಅದರ ಪ್ರತಿಫಲನ ಹರಿಣಿಯ ಮೋರೆಲಿ ಕಂಡತ್ತು. ಮೂರೂ ಜೆನಕ್ಕೂ ಗಾಳಿಲಿ ತೇಲುವ ಹಾಂಗಿದ್ದ ಹಗುರ ಅನುಭವ ಆತದ.

 

“ನಿಂಗೊ ಇಲ್ಲಿಗೆ ಆಗಳೇ ಬಂದಿರಾ…?” ಹರಿಣಿಗೊಂದು ಕುತೂಹಲ…ಮೋಹನ ಅವರಿಬ್ರ ಮಾತುಗಳ ಪೂರಾ ಕೇಳಿಕ್ಕೋ ಏನೋ ಹೇಳಿ.

 

“ಹ್ಹಾ…ಮಗಳತ್ರೆ ಮಾತಾಡೇಕು ಹೇಳ್ತ ಅಂಬ್ರೆಪ್ಪಿಲ್ಲಿ ಎನಗೆ ಇರುಳು ಕುಡಿವಲೆ ನೀರು ಮಡುಗಲೆ ನೀನು ಮರದ್ದೆ…,ದೊಂಡೆ ಒಣಗಿದ ಹಾಂಗಾಗಿ ಎನಗೆ ಎಚ್ಚರಿಕೆ ಅಪ್ಪಾಗ ನೀರೂ ಕಂಡತ್ತಿಲ್ಲೆ. ಅಲ್ಲೆಲ್ಲಿಯೂ ನಿನ್ನನ್ನೂ ಕಂಡತ್ತಿಲ್ಲೆ. ದಿನುಗೋಂಬಗ `ಓ..’ ಹೇಳಿದ್ದೂ ಇಲ್ಲೆ. ಹಾಂಗೆ ನಿನ್ನ ಹುಡ್ಕಿಯೋಂಡು ಇಲ್ಲಿಗೆ ಬಂದದು. ಆನು ಬಪ್ಪಾಗ ನಿಂಗಳೊಳ ಅರುಂಧತಿಯ ಕತೆ ಆಗಿಯೋಂಡಿತ್ತಿದ್ದದ. ಒಳ್ಳೇ ಕುತೂಹಲ ಇಪ್ಪ ಹಾಂಗೆ ಕಂಡತ್ತು. ಹಾಂಗೆ ಎಲ್ಲವನ್ನೂ ಕೇಳಿಕ್ಕಿಯೇ ಹೋಪ ಹೇಳಿ ನಿಂದದು. ಹಾಂಗೆ ನಿಂದ ಕಾರಣ ಎನ್ನ ಮಗಳು ಎನಗೆ ಸಿಕ್ಕಿತ್ತದ….” ಮೋಹನ ಸಮಾಧಾನಂದ ಹೇಳಿಯಪ್ಪಗ ಸುರಭಿ ತೃಪ್ತಿಂದ ಅಬ್ಬೆಯ ನೋಡಿ ಮುಗುಳ್ನೆಗೆ ಮಾಡಿತ್ತು. ತಣ್ಣಂಗೆ ಗಾಳಿ ಬೀಸಲೆ ಸುರುವಪ್ಪಗ ಹರಿಣಿಯ ದೃಷ್ಟಿ ಆಕಾಶದ ಹೊಡೆಂಗೆ ತಿರುಗಿತ್ತು,

 

“ಒಪ್ಪಕ್ಕೋ…,ನೋಡಲ್ಲಿ…ಮೋಡಂಗೋ ಕರಗುತ್ತಾ ಇದ್ದು…ನಕ್ಷತ್ರಂಗೊ ಕಾಂಬಲೆ ಸುರುವಾತದ….ರಜ್ಜ ಹೊತ್ತು ಕಾಯುವೋಂ….ಅರುಂಧತಿಯ ನೋಡಿಕ್ಕಿಯೇ ಹೋಪ….ಅದೊಂದರ ಎಂತಕೆ ಬಾಕಿ ಮಡುಗುತ್ತದು…ಅಲ್ದೋ…?”

 

ಹರಿಣಿಯ ಪ್ರಶ್ನೆಗೆ ಅಪ್ಪಂ, ಮಗಳ ಅರಳಿದ ಮೋರೆಯೇ ಉತ್ತರ ಆತು.

 

ಆರು ತಿಂಗಳು ಕಳುದಿಕ್ಕಿ….

 

 

ಸುರಭಿ ಈಗ ಸಂತೃಪ್ತ ಗೃಹಿಣಿ. ಸ್ವಂತದ್ದೇ ಆದ ನಾಟ್ಯ ಶಾಲೆ ಸುರು ಮಾಡ್ತ ಆಲೋಚನೆ ಮಾಡಿಯೊಂಡಿಪ್ಪಾಗಳೇ ಅದರ ಕೈ ಬಿಡೇಕಾಗಿ ಬಂತು. ಬೇರೆಂತಕೂ ಅಲ್ಲ…ಸುರಭಿ ಬಸರಿ ಆತದ. ಇದರಿಂದ ದೊಡ್ಡದು ಬೇರೆ ಯೇವದಿದ್ದು…? ಸಂಭ್ರಮಾಚರಣೆಗೆ ಆದಿತ್ಯನ ಅಬ್ಬೆ, ಅಪ್ಪಂ ಬೆಂಗ್ಳೂರಿಂಗೆ ಬಂದವು. ಮತ್ತೆ ಎಲ್ಲೋರೂ ಒಟ್ಟಿಂಗೆ ಸುರಭಿಯ ಅಪ್ಪನ ಮನೆಗೆ ಹೋದವು. ಮನೆ, ಮನಸ್ಸು ತುಂಬಿಯಪ್ಪಾಗ ಮೋಹನ ಹರಿಣಿಗೆ ಮತ್ತೆ ಜವ್ವನ ಮರುಕಳ್ಸಿದ ಹಾಂಗಾತು. ಆದಿತ್ಯನ ಅಬ್ಬೆ, ಅಪ್ಪಂ ನಾಕು ದಿನ ಇದ್ದು  ವಾಪಾಸು ಹೋದವು. ಆದಿತ್ಯ ಇನ್ನೂ ಎರಡು ದಿನ ಇಲ್ಲೇ ಇದ್ದು ಹೋವುತ್ತ ಹೇಳಿಯೂ ಸುರಭಿ ಮತ್ತೂ ಒಂದು ವಾರ ಅಪ್ಪನ ಮನೆಲಿ ಇದ್ದಿಕ್ಕಿ ಹೋಪಾಗ ಹರಿಣಿ ಮೋಹನನೂ ಒಟ್ಟಿಂಗೆ ಬೆಂಗ್ಳೂರಿಂಗೆ ಹೋಪದು ಹೇಳಿಯೂ ಮೊದಲೇ ಮಾತುಕತೆಯಾಗಿತ್ತಿದ್ದು.

 

ಒಂದು ಇರುಳು ಅಪ್ಪನೂ ಮಗಳೂ ಟಿ.ವಿ.ಲಿ ಎಂತೋ ಸಿನೆಮಾ ನೋಡಿಯೊಂಡಿಪ್ಪಾಗ ಆದಿತ್ಯನೂ ಹರಿಣಿಯೂ ತಿಂಗಳ ಬೆಳಕಿನ ಆಸ್ವಾದನೆ ಮಾಡುವೋಂ ಹೇಳಿಯೊಂಡು ಟೇರೇಸಿಂಗೆ ಹೋದವು. ಅದೂ ಇದೂ ಮಾತಾಡ್ತಾ ಮಾತಾಡ್ತಾ ಹರಿಣಿ ಆದಿತ್ಯನತ್ರೆ ಸಂಕೋಚಂದಲೇ ಹೇಳಿತ್ತು,

 

“ಆದಿತ್ಯೋ….,ಎನಗೆ ಸುಮಾರು ಸಮಯಂದ ಮನಸ್ಸಿಲ್ಲಿ ಒಂದು ಸಂಶಯ ಇದ್ದು…ಮಾವನತ್ರೆ ಹೇಳಿತ್ತೋ `ನಿನಗೆ ರಜ್ಜ ಭ್ರಮೆ…’ ಹೇಳಿ ನೆಗೆ ಮಾಡುಗು…,ಸುರಭಿಯತ್ರೆ ಇದೆಲ್ಲ ಹೇಳಿ ಪ್ರಯೋಜನ ಇಲ್ಲೆ…, ನಿನ್ನತ್ರೆ ಆದ್ರೂ ಹಂಚಿಯೋಂಬೊ ಹೇಳಿ ಆವುತ್ತಾ ಇದ್ದು…ಇಷ್ಟು ಹೇಳಿಕ್ಕಿ ಹರಿಣಿ ಅಂದು ಗುರುಗಳ ಪಟದೆದುರು ಕೂದಪ್ಪಾಗ ಆದ ಅನುಭವಂಗಳ ಒಂದೂ ಬಿಡದ್ದೆ ಹೇಳಿಕ್ಕಿ ಕಡೇಂಗೆ ಹೇಳಿತು,

” ಅಂದು ಆನು ಮಾವನೊಟ್ಟಿಂಗೆ ಆಸ್ಪತ್ರೆಲಿಪ್ಪಾಗ ಎನ್ನ ಫೋನಿಂಗೆ ಒಂದು ಕರೆ ಬಂದಿತ್ತು, `ಹರಿಣೀ..ಎಂತ ಚಿಂತೆ ಮಾಡೇಡ…ಶ್ರೀರಾಮ ಇದ್ದಂ…ಎಲ್ಲ ಸರಿ ಆವುತ್ತು…’ ಹೇಳಿ ಭರವಸೆ ಕೊಟ್ಟ ಆ ಸ್ವರ ನಮ್ಮ ಗುರುಗಳ ಸ್ವರದ ಹಾಂಗೇ ಇತ್ತಿದ್ದಪ್ಪ….ಅದು ನಿಜವೇ ಆದಿಕ್ಕೋ ಅಥವಾ ಎನ್ನ ಭ್ರಮೆಯೊ….?’

“ಅತ್ತೇ…ಜೀವನ ಹೇಳಿರೇ ಒಂದು ಗಟ್ಟಿ ನಂಬಿಕೆಯ ಮೇಲೆ ಬೆಳಕ್ಕೊಂಡು ಹೋಪಂತಾದ್ದು….ಸರಿ ಅಲ್ದಾ ಆನು ಹೇಳಿದ್ದದು…? ಎನ್ನ ಕೈ ಹಿಡಿದು ನಡೆಸಿದ್ದೂ ಅದುವೇ ಅತ್ತೇ…, ಗುರುಗಳ ಮೇಲೆ ಸಂಶಯಾತೀತವಾದ ಭಕ್ತಿ, ಪ್ರೀತಿ, ವಿಶ್ವಾಸ ಮಡುಗಿತ್ತು ಹೇಳಿಯಾದ್ರೆ ಅದುವೇ ನಮ್ಮ ದಡ ಮುಟ್ಟುಸುತ್ತು ಹೇಳ್ತದೂ ಎನ್ನ ಸ್ವಂತ ಅನುಭವವೇ…..”

(ಪ್ರಿಯ ಬೈಲಿನ ನೆಂಟ್ರೇ…ಆದಿತ್ಯ ಹವೀಕ ಭಾಷೆ ಎಷ್ಟು ಚೆಂದಕೆ ಮಾತಾಡ್ತಂ ಹೇಳ್ತದ್ರ ಗಮನಿಸಿದಿರಾ?…ಮನಸ್ಸುಗೊ ಒಂದಾದ್ರೆ ಬೇರೆಲ್ಲವೂ ಗೌಣ…ಅಪ್ಪಲ್ದೋ…?)

“ಹೇಂ…? ನಿನ್ನ ಅನುಭವವೋ…ನೀನು ಎಂತರ ಹೇಳ್ತಾ ಇಪ್ಪದು ಹೇಳಿಯೇ ಎನಗೆ ಗೊಂತಾಯಿದಿಲ್ಲೆನ್ನೇ ಮಾರಾಯಾ…?” ಹರಿಣಿಗೆ ಆಶ್ಚರ್ಯವೇ ಆಶ್ಚರ್ಯ…, ಅಳಿಯಂಗೆ ನಮ್ಮ ಗುರುಗಳ ಬಗ್ಗೆ ಕೇಳಿ ಗೊಂತಿಕ್ಕಷ್ಟೆ ಹೇಳಿ ಅದರ ಆಲೋಚನೆ. ಹೆಚ್ಚು ಹೇಳಿರೆ ಗೋಡೆ ಮೇಗೆ ಇಪ್ಪ ಅವರ ಪಟಂಗಳ ನೋಡಿಕ್ಕಷ್ಟೆ….,ಆದರೆ ಇಂವ ಬೇರೆಂತೋ ಮನಸ್ಸಿಲ್ಲಿ ಮಡುಗಿಯೊಂಡು ಹೇಳ್ತನ್ನೇ ಹೇಳಿ ಜಾನ್ಸಿಯೋಂಡೇ ಅದು ಹಾಂಗೆ ಕೇಳಿದ್ದದು.

“ಅಪ್ಪು ಅತ್ತೇ…,ಅಂದು ಗುರುಗಳು ಕೋಲ್ಕೊತ್ತಾಲ್ಲಿ ಚಾತುಮರ್ಾಸ್ಯ ಆಚರಣೆ ಮಾಡಿತ್ತಿದ್ದವಲ್ದೋ? ಎಂಗಳ ಮನೆಯೂ ಅಲ್ಲೇ ಆಸುಪಾಸಿಲ್ಲಿಯೇ ಇಪ್ಪದು. ಅಂಬಗ ಆನು ಅಲ್ಲೇ ಕೆಲಸ ಮಾಡಿಯೊಂಡಿತ್ತಿದ್ದೆ. ಚಾತುಮರ್ಾಸ್ಯದ ಗೌಜಿ ನೋಡಿ ಎನಗೂ ಕುತೂಹಲ ಉಂಟಾತು. ಒಂದು ದಿನ ಆನೂ ಹೋದೆ. ಗುರುಗಳ ಪ್ರವಚನ ಕೇಳಿ, ಅವು ಹೇಂಗಿಪ್ಪವರೊಟ್ಟಿಂಗೂ ಆತ್ಮೀಯವಾಗಿ ಪ್ರೀತಿಲಿ ಮಾತಾಡ್ತರ ನೋಡಿ ಆನು ತುಂಬಾ ಪ್ರಭಾವಿತನಾಗಿ ಹೋದೆ. ಮತ್ತೆ ಮತ್ತೆ ಅವರ ಆಶೀರ್ವಚನಂಗಳ ಕೇಳ್ಲೆ ಹೋಗಿಯೊಂಡಿತ್ತಿದ್ದೆ. ಒಂದು ದಿನ ಎನ್ನ ಅವು ಗಮನಿಸಿ ಮಾತಾಡ್ಸಿದವು. ಜೀವನ ಸಾರ್ಥಕ ಆತು ಹೇಳಿ ತೋರಿತ್ತು. ಮತ್ತೆ ಎನಗೆ ಬೆಂಗ್ಳೂರಿಲ್ಲಿ ಕೆಲಸ ಆತು. ಅಲ್ಲಿಗೆ ಬಂದ ಮತ್ತೆಯೂ ಒಂದೊಂದಾರಿ ಅವರ ಭೇಟಿ ಮಾಡ್ಲೆ ಹೋಪ ಕ್ರಮ ಇತ್ತಿದ್ದು. ಸುರಭಿಗೆ ಅದೆಲ್ಲ ಅಷ್ಟು ಇಷ್ಟ ಆಗಿಯೊಂಡಿತ್ತಿದ್ದಿಲ್ಲೆ. ಹಾಂಗಾಗಿ ಆನೂದೆ ರಜ್ಜ ದೂರವೇ ಒಳುದೆ. ಎಂಗಳೊಳ ಜಟಾಪಟಿಯಾಗಿ ಅದಕ್ಕೆಂತ ಪರಿಹಾರ ಹೇಳಿ ಅರಡಿಯದ್ದೆ ತಲೆ ಕೆಟ್ಟು ಕೂದೊಂಡಿಪ್ಪಾಗ ಎನ್ನ ಫ್ರೆಂಡ್ ಒಬ್ಬ ಗುರುಗಳ ಹತ್ರೆ ಹೋಪಲೆ ಹೇಳಿದಂ. ಹೋದೆ…ಶ್ರೀಗಳು ಎನ್ನ ಗಮನಿಸಿ ಎನ್ನ ಹೆಸರು ಹಿಡಿದು ಮಾತಾಡ್ಸಿ `…ಕೋಲ್ಕೊತ್ತಾಲ್ಲಿಪ್ಪಗ ಬಂದೊಂಡಿತ್ತಿದ್ದೆ ಅಲ್ದೋ…ಈಗೆಂತ ಬಪ್ಪದು ಕಡಮ್ಮೆ ಮಾಡಿದ್ದದು…’ ಹೇಳಿ ಕೇಳಿದವು…..ಅಷ್ಟು ಸಮಯದ ನಂತ್ರವೂ ಅವು ಎನ್ನ ಸರಿಯಾಗಿ ನೆಂಪು ಮಡುಗಿಯೊಂಡಿತ್ತಿದ್ದವು! ಎನ್ನ ದೊಂಡೆಂದ ಸ್ವರ ಹೆರಟತ್ತಿಲ್ಲೆ…,ಸುಮ್ಮನೇ ತಲೆ ತಗ್ಗಿಸಿ ನಿಂದೆ….ಮತ್ತೆ ಬಾ..,ಬತ್ತಾ ಇರು…ಹೇಳಿ ಮಂತ್ರಾಕ್ಷತೆ ಕೊಟ್ಟವು. ಆಫೀಸಿಂದ ಬಂದಿಕ್ಕಿ ದಿನ ನಿತ್ಯ ಹೋಪಲೆ ಸುರು ಮಾಡಿದೆ. ಮನಸ್ಸಿಂಗೆ ತುಂಬಾ ಶಾಂತಿ ಸಿಕ್ಕಿತ್ತು. ಒಂದು ದಿನ ಸಂದರ್ಭ ಒದಗಿ ಬಂದಪ್ಪಗ ಎಂಗಳೊಳಾಣ ಭಿನ್ನಾಭಿಪ್ರಾಯವ ಒಂದೂ ಬಿಡದ್ದೆ ಅವರತ್ರೆ ಹೇಳಿ ಮನಸ್ಸು ಹಗುರ ಮಾಡಿಯೋಂಡೆ. ಎಲ್ಲವನ್ನೂ ಗಮನ ಕೊಟ್ಟು ಕೇಳಿಕ್ಕಿ ಅವು ಹೇಳಿದ್ದದು ಒಂದೇ ಮಾತು,

 

`ಸುರಭಿಯ ಅದರ ಅಬ್ಬೆಯ ಹತ್ರಂಗೆ ಕಳ್ಸು….ಎಲ್ಲ ಸರಿ ಆವುತ್ತು…, ಮತ್ತೆ ಇಬ್ರೂ ಒಟ್ಟಿಂಗೆ ಇಲ್ಲಿಗೆ ಬಂದು ಶ್ರೀರಾಮಂಗೆ ಸೇವೆ ಸಲ್ಸಿ…’ ಹೇಳಿ ಮಂತ್ರಾಕ್ಷತೆ ಕೊಟ್ಟವು. ಮಾತು ಮಾತಿಂಗೆ `ಆನೀಗಳೇ ಸಾಯ್ತೆ….ರೈಲಿನಡಿಯಂಗೆ ಬೀಳ್ತೆ…ಸಮುದ್ರಕ್ಕೆ ಹಾರಿ ಸಾಯ್ತೆ…’ ಹೇಳಿಯೆಲ್ಲ ಹಾರಿಯೊಂಡಿತ್ತಿದ್ದ ಸುರಭಿಗೆ ಆ ಶ್ರೀರಾಮನೇ ಇಲ್ಲಿಗೆ ಬಪ್ಪಲೆ ಬುದ್ಧಿ ಕೊಟ್ಟದು ಹೇಳೇಕಷ್ಟೆ…, ಸುರಭಿ ನಿಂಗಳ ಮಡಿಲಿಂಗೆ ಬಿದ್ದ ಕಾರಣ ಆನೂದೆ ಮಾವನೂದೆ ಬಚಾವಾದೆಯೋಂ….ಇಲ್ಲದಿದ್ರೆ…? ಎನಗೆ ಅದರ ಜಾನ್ಸಲೂ ಎಡಿತ್ತಿಲ್ಲೆ ಅತ್ತೆ….”

 

“ಹೋ…ಇಷ್ಟೆಲ್ಲಾ ವಿಷಯ ಆದ್ದದ್ರ ನೀನು ಎನ್ನತ್ರೆ ಹೇಳಿದ್ದೇ ಇಲ್ಲೆ…?”

 

“ಹೇಳಿವಾಂಗಿಪ್ಪ ಸಂದರ್ಭವೇ ಬಂದಿತ್ತಿದ್ದಿಲ್ಲೆನ್ನೇ ಅತ್ತೇ….,ಮತ್ತೇ…ಇಲ್ಲಿ ಗೋಡೆ ಮೇಲೆ ಗುರುಗಳ ಪಟ ಇದ್ರೂ ನಿಂಗೋಗೆ ಅವರ ಮೇಲೆ ಇಪ್ಪ ನಂಬಿಕೆಯ ಆಳ ಎಷ್ಟು ಹೇಳಿ ಎನಗೆ ಗೊಂತಿತ್ತಿದ್ದಿಲ್ಲೆ…ಹಾಂಗಾದ ಕಾರಣ ಎನ್ನ ಅನುಭವ ಹೇಳಿದರೆ ನಿಂಗೊ ನಂಬುವಿರೋ ಇಲ್ಲ್ಯೋ ಹೇಳಿ ಜಾನ್ಸಿಯೋಂಡೆ…ಈಗ ನಿಂಗಳ ಅನುಭವ ಕೇಳುವಾಗ ನಾವಿಬ್ರೂ ಒಂದೇ ದೋಣಿಯ ಪಯಣಿಗರು ಹೇಳಿ ಸಮಾಧಾನ ಆತು, ದೈರ್ಯವೂ ಬಂತು…,ಹಾಂಗಾಗಿ ಹೇಳಿದೆ ಅಷ್ಟೆ… ”

 

“ಆದಿತ್ಯೋ…ನಿನ್ನ ಹಾಂಗಿದ್ದ ಅಳಿಯನ ಪಡಕ್ಕೋಂಬಲೆ ಎಂಗೊ ಇಬ್ರೂ ಪುಣ್ಯ ಮಾಡಿದ್ದೆಯೋಂ….ನೀನು ಗುರುಗಳತ್ರೆ ಹೋಗಿ ಬೇಡಿಯೋಂಡ ಕಾರಣವೇ ಅದು ಒಳ ಅರಿವು (ಇಂಟ್ಯೂಶನ್) ಆಗಿ ಎನ್ನ ಸುಪ್ತ ಪ್ರಜ್ಙೆ ಸೂಚನೆ ಕೊಟ್ಟದು ಆದಿಪ್ಪಲೂ ಸಾಕು….ಅಲ್ದೋ…?”

 

“ಖಂಡಿತಕ್ಕೂ ಅತ್ತೆ….ಸುರಭಿ ಇಷ್ಟು ಬದಲಪ್ಪಲೂ ಕಾರಣ ಅವರ ಕೃಪೆ ಹೇಳಿಯೇ ಎನ್ನ ನಂಬಿಕೆ….ಆದರೆ ಒಂದು ವಿಷಯಲ್ಲಿ ನಿಂಗೊ ಎನ್ನ ಕ್ಷಮಿಸೇಕು…ಸುರಭಿ ಇಲ್ಲಿಗೆ ಬರೇಕು ಹೇಳ್ತ ಉದ್ದೇಶಂದಲೇ ಅದರೊಟ್ಟಿಂಗೆ ರಜಾ ಹೆಚ್ಚೇ ಕಠಿಣವಾಗಿ ವತರ್ಿಸಿದೆ. ಅದು ಬೇರೆಲ್ಲಿಗೂ ಹೋಗ ಹೇಳ್ತ ಧೈರ್ಯವೂ ಎನಗಿತ್ತಿದ್ದು. ಆತ್ಮಹತ್ಯೆ ಮಾಡಿಯೋಂಬಷ್ಟು ಧೈರ್ಯ ಅದಕ್ಕಿಲ್ಲೆ ಹೇಳ್ತದೂ ಎನಗೆ ಅಂದಾಜಿತ್ತಿದ್ದು. ಎನ್ನ ಒರಟು ವರ್ತನೆಂದಾಗಿ ಅದೂ ಬೇನೆ ತಿಂದತ್ತು…ನಿಂಗಳೂ ಒಳ್ಳೆತ ಬೇಜಾರು ಮಾಡಿಯೋಂಬ ಹಾಂಗಾತು…”

 

“ಸಾರ ಇಲ್ಲೆ ಆದಿತ್ಯೋ…ಕಷ್ಟ ಪಟ್ರೂ ಇಷ್ಟ ಪಡುವ ಹಾಂಗಿಪ್ಪದು ಸಿಕ್ಕಿತ್ತನ್ನೇ….ಅದು ಸಾಕು…,ಮಕ್ಕಳ ಜೀವನ ತಾಂಟು ಮೋಂಟು ಆತು ಹೇಳಿರೆ ಅಬ್ಬೆ, ಅಪ್ಪಂಗೆ ಕುಡುದ ನೀರು ದೊಂಡೆಂದ ಕೆಳ ಇಳಿಗೋ ಹೇಳಿ…? ಗುರು ಕೃಪೆ ಹೇಳ್ತ ಆ ಪ್ರಕಾಶದ ಒಂದು ಕಿರಣ ನಮ್ಮೆಲ್ಲೋರ ಹೊಡೆಂಗೆ ಹರುದತ್ತದ. ಹಾಂಗಾಗಿಯೇ ನಮ್ಮ ಬಾಳು ಬಂಗಾರ ಆತು. ಎಂಗೊ ಇಬ್ರು, ನಿಂಗೊ ಇಬ್ರು, ನಿನ್ನ ಅಬ್ಬೆ, ಅಪ್ಪಂ…ಇಷ್ಟು ಜೆನವೂ ಶ್ರೀಮಠಕ್ಕೆ ಹೋಗಿ ಗುರುಗಳ ಕೈಂದ ಮಂತ್ರಾಕ್ಷತೆ ತೆಕ್ಕೊಂಡು ಆಶೀವರ್ಾದ ಬೇಡಿಯೋಂಬ….ಆಗದೋ…?” ಸುರಭಿ ಅತ್ಯುತ್ಸಾಹಂದ ಹೇಳಿಯಪ್ಪಗ ಆದಿತ್ಯ ನೆಗೆ ಮಾಡಿಯೊಂಡೇ ಹೇಳಿದ,

 

“ಅತ್ತೇ…ಆರು ಜೆನ ಅಲ್ಲ…ಏಳು….,ಸುರಭಿಯ ಹೊಟ್ಟೆಲಿಪ್ಪ ನಿಂಗಳ ಪುಳ್ಳಿಯ ಮರದಿರೋ…?” ಆದಿತ್ಯನ ತುಂಟ ಪ್ರಶ್ನೆಗೆ ಹರಿಣಿ ದೊಡ್ಡದಾಗಿ ನೆಗೆ ಮಾಡಿಯೊಂಡೇ ಸಮ್ಮತಿ ಸೂಚಕವಾಗಿ ತಲೆಯಾಡ್ಸಿಯೊಂಡು ಹೇಳಿತ್ತು,

 

“ಹೂಂ…ಅದೂ ಅಪ್ಪನ್ನೇ…ಎಂಗಳ ಪುಳ್ಳಿಯ ಬಿಡುವ ಹಾಂಗಿಲ್ಲೇನ್ನೇ…? ಬಾ ಕೆಳ ಹೋಪೋಂ….ಅಪ್ಪಂ, ಮಗಳಿಂಗೆ ಸಿನೆಮಾ ನೋಡಿಯಾದ್ರೆ ಉಂಡಿಕ್ಕಿ ಒರಗುವೋಂ…” ಹರಿಣಿ ಅಳಿಯನೊಟ್ಟಿಂಗೆ ಮಾಳಿಗೆ ಮೆಟ್ಲು ಇಳುಕ್ಕೋಂಡು ಕೆಳ ಬಪ್ಪಾಗ ಅದರ ದೃಷ್ಟಿ ಅಪ್ರಯತ್ನವಾಗಿ ಎದುರಾಣ ಗೋಡೆಯ ಮೇಗೆ ಬಿದ್ದತ್ತು. ಅದೇ ಗುರುಗಳ ಪಟ… ಮೋರೆಲಿ ಮಂದಹಾಸ…,ಅಭಯ ಸೂಚಕವಾಗಿಯೋ ಆಶೀವರ್ಾದ ಪೂರ್ವಕವಾಗಿಯೋ ಮೇಲೆತ್ತಿದ ಬಲದ ಕೈ….,ಕಣ್ಣಿಲ್ಲಿ ಅದೇ ಅನುಕಂಪದ ಮಹಾಪೂರ….ಹರಿಣಿ ಅಳಿಯನ ನೋಡಿತ್ತು. ಆ ಪಟವನ್ನೇ ನೋಡಿಯೊಂಡಿತ್ತಿದ್ದ ಅಂವನ ದೃಷ್ಟಿಯೂ ಅದೇ ಹೊತ್ತಿಂಗೆ ಅತ್ತೆಯ ಹೊಡೇಂಗೆ ತಿರುಗಿತ್ತು. ಮನಸ್ಸುಗಳ ಮಾತು ಕ್ರಿಯೆಯಾಗಿ ಹೆರ ಬಂತು. ಇಬ್ರೂ ಒಟ್ಟಿಂಗೆ ಗುರುಗಳಿಂಗೆ ತಲೆಬಾಗಿ ಕೈಯ್ಯೆತ್ತಿ ನಮಸ್ಕಾರ ಮಾಡಿದವು.

(ಮುಗಿದತ್ತು)

 

 

 

 

12 thoughts on “ಅಬ್ಬೇ…,ಎನಗೆ ಅರುಂಧತಿಯ ಕಂಡಿದೇ ಇಲ್ಲೆ…,                 (ಭಾಗ-18)

  1. ಧನ್ಯವಾದಂಗೊ ಗೋಪಾಲಣ್ಣ…, ಬೆನ್ನು ತಟ್ಟಿ ಮುಂದೆ ಹೋಗು ಹೇಳಿ ಪ್ರೋತ್ಸಾಹಿಸುವ ನಿಂಗಳ ಹಾಂಗಿಪ್ಪ ಓದುಗರೇ ಎನ್ನ ಬರವಣಿಗೆಯ ಹಿಂದಾಣ ಶಕ್ತಿ. ಖಂಡಿತ ಬರೆವೆ.

  2. ಶೀಲಕ್ಕನ ಶೈಲಿಯೇ ಶೈಲಿ,ಸುಲಲಿತವಾಗಿ ಓದಿಸಿಕೊಂಡು ಹೋತು. ಕತೆಲಿ ತುಂಬಾ ಹೊಸತನ ಇಲ್ಲದ್ದರೂ ನಮ್ಮ ಭಾಷೆಯ ಪರಿಮಳ ತುಂಬಾ ಇದ್ದು.ಓದುಗರ ಮನಸ್ಸಿಂಗೆ ತಟ್ಟುವ ಕಥಾವಸ್ತು,ನಿರೂಪಣೆ ಅದ್ಭುತ.ಇನ್ನೊಂದು ಧಾರಾವಾಹಿ ಬರೆಯಿರಿ,ನಿಧಾನ ಆದರೂ ಸಾರ ಇಲ್ಲೇ.

  3. ಧನ್ಯವಾದಂಗೊ ಶೈಲಜಾ… ನಿಂಗಳ ಚೆಂದದ ಮನಸ್ಸಿನ ಪ್ರತೀಕ ನಿಂಗಳ ಮಾತುಗೊ…

  4. ಪ್ರತೀ ಶಬ್ದವನ್ನೂ ಮನಸ್ಸಿ೦ಗೆ ತಟ್ಟುವ ಹಾ೦ಗೆ ಪೋಣಿಸಿ ಇಷ್ಟುದ್ದಕ್ಕೆ ಲಾಯಿಕಲ್ಲಿ ಕಟ್ಟಿದ ಕಥಾಮಾಲೆ ನಿ೦ಗಳ ಪ್ರತಿಭೆಗೆ ಸಾಕ್ಷಿ ಶೀಲಕ್ಕಾ .. ಒಳ್ಳೇ ಪರಿ೦ಮಳವೂ ಚೆ೦ದವೂ ಆಯಿದು…

  5. ಓಹ್ ! ಹದಿನೆಂಟು ವಾರ ತುಂಬಾ ಚೆಂದಕೆ ಬಂತು ಹವ್ಯಕ ಧಾರಾವಾಹಿ. ಮನಸ್ಸಿಂಗೆ ತಟ್ಟಿದ ಕಥೆ. ಎಲ್ಲೋರ ಬಯಕೆಯ ಮೇರೆಗೆ ಸುಖಲ್ಲೇ ಸಮಾಪ್ತಿ ಆದ್ದದು ಸಂತೋಷ. ಸುಖ ದಾಂಪತ್ಯದ ಬಗ್ಗೆ ಹರಿಣಿಯ (ಶೀಲಕ್ಕನ) ಕಿವಿ ಮಾತುಗಳ ಈಗಾಣ ಮಕ್ಕೊ ಅರ್ಥ ಮಾಡ್ಯೋಂಬಲೇ ಬೇಕು. ಶೀಲಕ್ಕಾ, ರಜ್ಜ ಬೇಕಾರೆ ವಿರಾಮ ತೆಕ್ಕೊಂಡು, ಇನ್ನೊಂದು ಧಾರಾವಾಹಿ ಸುರು ಮಾಡಿ. ಪ್ಲೀಸ್.

    1. ಧನ್ಯವಾದಂಗೊ ಗೋಪಾಲಣ್ಣ …,ನಿಂಗಳೂ ನಿಂಗಳ ಹಾಂಗಿದ್ದ ಒಳುದ ಓದುಗರು ಕೊಟ್ಟ ಪ್ರೋತ್ಸಾಹ ಮತ್ತೆ ಅದಕ್ಕೆ ಸಿಕ್ಕಿದ ಶ್ರೀ ಗುರು ಪ್ರೇರಣೆಯೇ ಈ ಬರವಣಿಗೆಯ ಹಿಂದಿಪ್ಪದು ಹೇಳ್ತದು ಎನ್ನ ದೃಢ ನಂಬಿಕೆ. ಖಂಡಿತಕ್ಕೂ ಇನ್ನೊಂದು ಧಾರಾವಾಹಿ ಬರೆವೆ. ಆದ್ರೆ ಈಗ ರಜ್ಜ ವಿರಾಮ ತೆಕ್ಕೊಂಬಲೆ ಬೇಕಾವುತ್ತು. ಪುಳ್ಳಿಯ ಆಗಮನದ ನಿರೀಕ್ಷೇಲಿದ್ದೆ. ಆ ಹಿರಿಯ ಜವಾಬ್ದಾರಿಯ ಕೊಡಿ ಎತ್ಸಿಕ್ಕಿತ್ತೆ ಆಗದೋ….? ಹಾಂಗೆ ಹೇಳಿ ಬರವಣಿಗೆಯ ಖಂಡಿತಕ್ಕೂ ನಿಲ್ಸುತ್ತಿಲ್ಲೆ …ಸಣ್ಣ ಪುಟ್ಟದ್ರ ಬರೆತ್ತಾ ಇರ್ತೆ….ಓದಿ ಅಭಿಪ್ರಾಯ ಹೇಳಿ ಆತಾ…?

  6. ಧನ್ಯವಾದಂಗೊ ವಿಜಯಕ್ಕ. ಈಗ ಸರಿ ಮಾಡಿದೆ ನೋಡ್ತೀರಾ …

  7. ಒಳ್ಳೆ ಒಂದು ಧಾರಾವಾಹಿ(ಕತೆ) ಹವ್ಯಕ ಭಾಷೇಲಿ ಒಪ್ಪಣ್ಣ ಬಯಲಿಲ್ಲ್ಫಿ ಇದೇ ಮದಾಲು ಬಪ್ಪದು ಏನ ಗೊಂತಿದ್ದಹಾಂಗೆ .ಒಳ್ಳೆದಾಯಿದು ಶೀಲಾ .ಅಕೇರಿಗೆ , ಊಟಲ್ಲಿ ಒಂದು ಉಪ್ಪಿನಕಾಯಿ ಹೇಳ್ತರೆ ” ಗುರುಗೊಕ್ಕೆ ಕೈ ಜೋಡಿಸಿ ತಲೆಬಾಗಿದೋವು” ಹೇಳಿ ಆಗಿದ್ದರೆ ಒಳ್ಳೆದಿತ್ತು.ಅದರ ಇನ್ನಾದರೂ ಸರಿಮಾಡಲಕ್ಕನ್ನೆ . ಹರೇರಾಮ.

  8. ಸಂಸ್ಕೃತ ಭಾಷೆಲಿ ಒಂದು ನ್ಯಾಯ ಇದ್ದಡ . ಅರುಂಧತೀ ಪ್ರದರ್ಶನ ನ್ಯಾಯ ಹೇಳಿ . (ಸುಲಭ ಗ್ರಾಹ್ಯ ವಾದ್ದರ ಪರಿಚಯಿಸಿ ಸೂಕ್ಷ್ಮವಾದ್ದರ ತಿಳಿಶುದಕ್ಕೆ ಹಾಂಗೆ ಹೇಳ್ತವಡ ) ಈ ಕಥೆ ಓದುವಾಗ ಅದು ನೆನಪ್ಪಾಗಿಯೋ೦ಡಿತ್ತು .

    ಹವ್ಯಕ ಭಾಷೆಲಿ ಒಳ್ಳೆ ಧಾರಾವಾಹಿ ಕಥೆ ಓದಿ ಖುಷಿಯಾತು . ಹವ್ಯಕರ ಹಳ್ಳಿ ಮನೆಯ ಜೀವನ ,ಬದುಕ್ಕಿಲಿ ಪ್ರಕೃತಿಯೊಟ್ಟಿಂಗೆ ಅವರ ಒಡನಾಟ ,ಯೋಗ ,ಪ್ರಾಣಾಯಾಮ ಜೀವನಲ್ಲಿ ಅಳವಡಿಸಿಗೊಂಬ ರೀತಿಲಿ ಹರಿಣಿಯ ಅಣ್ಣನ ಉಪದೇಶ ಲಾಯಿಕಾಯಿದು . ಜವ್ವನಲ್ಲಿ ನೆತ್ತರಿನೋಟ ಜಾಸ್ತಿ ಇಪ್ಪಗ ಜವ್ವನಿಗರ ತಲೆಂದ ಮೇಲೆ ಮೀರುವ ಮಾತುಗೊ ಎಲ್ಲಾ ಲಾಯಿಕಲ್ಲಿ ಚಿತ್ರಿಸಿದ್ದಿ . ನಿಂಗಳ ಕಥೆ ಒಳ್ಳೆತ ಖುಷಿ ಆತು . ಧನ್ಯವಾದ .

    ಒಂದು ಕಂಪ್ಲೇಂಟ್ ಎಂತ ಹೇಳಿರೆ ಸುರಭಿಗೆ ಆಟಿ ಅಮಾಸೆ ಸಮ್ಮಾನ ಆಯಿದಿಲ್ಲೆನ್ನೆ . ಮೊನ್ನೆ ಹಬ್ಬಕ್ಕ್ಕಾದ ರೂ ( ಮೊದಲಿಂಗೆ ಹವ್ಯಕರು ಹಬ್ಬ ಹೇಳುವದು ದೀಪಾವಳಿಗೆ ಮಾತ್ರ ) ಸುರಭಿಯ ಅಪ್ಪನ ಅನಾರೋಗ್ಯದ ಹೊರತಾಗಿಯೂ; ಶೀಲಕ್ಕನ೦ಗೆ ಕಟ್ಟು- ಕಟ್ ಲೆ ಸಮ್ಮಾನ ಮಾಡುಸಿಕ್ಕುಲಾವುತಿತನ್ನೇ ಕಥೆಲಿ 🙂

    1. ಭಾಗ್ಯಕ್ಕಾ…ಧನ್ಯವಾದಂಗೊ…, ಹಾ…ಅಪ್ಪನ್ನೇ ನಿಂಗೊ ಹೇಳಿದ್ದು ಸರಿಯೇ…(ಆಟಿ ಅಮಾವಾಸ್ಯೆ ಸಮ್ಮಾನದ ಬಗ್ಗೆ ) ಅದೀಗ ಎಂತಾಯಿದು ಹೇಳಿರೆ ಸುರಭಿಗೆ ಇನ್ನು ಕೆಲವೇ ತಿಂಗಳಿಲ್ಲಿ ಕೋಡಿ (ಗೋದ್ ಬರಾಯಿ- ಹಿಂದೀಲಿ ಹಾಂಗೆ ಅಲ್ದೊ ಹೇಳ್ತದು , ಅದರ ಅತ್ತೆ ಮಾವ ಹಿಂದಿಯವು ಅಲ್ದೊ?) ಇದ್ದಾನೇ…? ಅದರ ಬೆಂಗಳೂರಿಲ್ಲಿ ಮಾಡ್ತವಡ. ಮೋಹನಂಗೆ ಕೊಲ್ಕೊತ್ತಾ ವರೆಗೆ ಹೋಪಲೆ ಕಷ್ಟ ಹೇದು. ಅದರ ಮುನ್ನಾಣ ದಿನ ಇರುಳಿಂಗೆ ಅದೇ hall ಲ್ಲಿ ಅಪ್ಪನ ಮನೆಯವರ ಆಟಿ ಅಮಾವಾಸ್ಯೆ ಸಮ್ಮಾನವೂ ಉಡುಗೊರೆಯ ಗೌಜಿಯೂ ಎಲ್ಲ ಇದ್ದಾಡ.

  9. ಲಾಯ್ಕ ಆಯಿದು. ಎಲ್ಲೋರಿಂಗೂ ಇದಲ್ಲಿ ಓದ್ಲೇ ಎಡಿಯದ್ರೆ ಹವ್ಯಕ ಪತ್ರಿಕೇಲಿ ಹಾಕ್ಲಕ್ಕು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×