ಒಂದು ಪ್ರಕರಣದ ಸುತ್ತ :೧೨
– ರಮ್ಯ ನೆಕ್ಕರೆಕಾಡು
ಅಂಜಲಿಯನ್ನುದೇ ಬ್ರೋಕರ್ ಗೋಪಾಲಣ್ಣ ನನ್ನುದೇ ಅರವಿಂದಂಗೆ ಗುರ್ತ ಇದ್ದ ಕಾರಣ ಈ ಕೊಲೆಯ ಅರವಿಂದನೇ ಏಕೆ ಮಾಡಿಪ್ಪಲಾಗ ಹೇಳಿ ಶರತ್ಚಂದ್ರಂಗೆ ಸಂಶಯ ಹೆಚ್ಚಾತು. “ವೀಣಾ.. ಎಂತಕುದೇ ಆನು ಅರವಿಂದನ ಮನೆಗೆ ಹೋತೆ… ನೀನು ಭಾವನ ನೋಡಿಗೊ..” ಹೇಳಿಕ್ಕಿ ಬೈಕಿಲಿ ಅರವಿಂದನ ಮನೆಗೆ ಹೋದ.
ಅರವಿಂದನ ಮನೆಗೆ ಹೋಪ ದಾರಿಲಿ ಶರತ್ಚಂದ್ರಂಗೆ ಎರಡು ಆಳುಗ ಸಿಕ್ಕಿದವು. ಬೈಕ್ ನಿಲ್ಸಿಕ್ಕಿ ಅವರತ್ರೆ, ” ಈ ಅರವಿಂದ ಅವನ ಮನೆಯವೆಲ್ಲ ಜನಂಗ ಹೇಂಗೆ..??” ಹೇಳಿಯಪ್ಪಗ ಪೋಲೀಸ್ ಯುನಿಫಾರ್ಮ್ ಲಿತ್ತ ಶರತ್ಚಂದ್ರನ ಕಂಡು ಸುರುವಿಂಗೆ ಅವಕ್ಕೆ ಹೆದರಿಕೆ ಆದರುದೇ ಮತ್ತೆ, “ಜನಂಗ ತೊಂದರಿಲ್ಲೆ ಒಳ್ಳೆಯವು.. ಕಷ್ಟಕಾಲಕ್ಕಪ್ಪಗ ತಾಂಗುತ್ತವು.. ಅರವಿಂದನ ಅಮ್ಮ ರಜ್ಜ ಜೋರಿನ ಹೆಮ್ಮಕ್ಕ.. ಬಾಯಿಲಿ ಒಳ್ಳೆ ಉಷಾರಿದ್ದು.. ಅರವಿಂದನ ಹೆಂಡತಿ..” ಹೇಳುಲಪ್ಪಗ ಇನ್ನೊಂದು ಆಳು ಪಕ್ಕ ಕುಟ್ಟಿಕ್ಕಿ ಹೇಳೆಡ ಹೇಳುವಾಂಗೆ ಕಣ್ಣಭಾಷೆ ಮಾಡಿತ್ತು. ಎಂಗೊಗೆ ತಡವಾವ್ತು ಹೇಳಿ ಇಬ್ರುದೇ ಹೋದವು. ಮೊದಲೇ ಪೋಲಿಸುಗಳ ಕಂಡ್ರೆ ಹೆದರುವ ಹೀಂಗೆಪ್ಪ ಮುಗ್ದ ಜನರ ಹೆದರ್ಸಿ ಬೆದರ್ಸಿ ಬಾಯಿ ಬಿಡ್ಸೆರೆ ಮತ್ತೆ ಪೋಲಿಸುಗಳ ಮೇಲೆ ಅಭಿಪ್ರಾಯವೇ ಬದಲಾಕ್ಕು.. ಹೇಂಗೂ ಅರವಿಂದನ ಮನೆಗೆ ಹೋವ್ತಾ ಇದ್ದೆನ್ನೇ.. ಅವನ ಕೈಂದಲೇ ಎಂತ ಸತ್ಯ ಹೇಳಿ ಬಾಯಿ ಬಿಡ್ಸದ್ದೆ ಬಪ್ಪಲಿಲ್ಲೆ ಹೇಳಿ ತೀರ್ಮಾನ ಮಾಡಿ ಶರತ್ಚಂದ್ರ ಸೀದಾ ಅರವಿಂದನ ಮನೆಗೆ ಹೋದ.
ಶರತ್ಚಂದ್ರನ ಕಂಡಪ್ಪದ್ದೆ ಅರವಿಂದಂಗುದೇ ಅವನ ಮನೆಯವಕ್ಕುದೇ ಆಶ್ಚರ್ಯ ಆತು. ಶರತ್ಚಂದ್ರ ಸೀದಾ ಮನೆ ಒಳಂಗೆ ಹೋಗಿ, “ಅಂಜಲಿಯ ಪ್ರಕರಣದ ಬಗ್ಗೆ ರಜ್ಜ ಮಾತಾಡ್ಲಿದ್ದು.. ಗೊಂತಿಪ್ಪ ವಿಷಯವ ಮುಚ್ಚಿಮಡುಗದ್ದೇ ಪೂರಾ ಬಾಯಿಬಿಡೆಕ್ಕು.. ಲೊಟ್ಟೆ ಹೇಳಿ ಎನ್ನ ಕೈಂದ ತಪ್ಸಿಗೊಂಬಲೆ ಎಡಿಯ.. ಬಿ ಕೇರ್ ಫುಲ್..” ಹೇಳಿ ಗಂಭೀರಲ್ಲಿ ಹೇಳಿಯಪ್ಪಗ ಅರವಿಂದ, “ಅಲ್ಲ… ವಿಷಯ ಎಂತಾಳಿ ಹೇಳದ್ದೇ ಹೀಂಗೆ ಬಂದು ಹೆದರ್ಸೆರೆ..???” ಹೇಳಿ ರಜ್ಜ ಕೋಪಲ್ಲಿಯೇ ಅರವಿಂದ ಕೇಳಿದ. ಶರತ್ಚಂದ್ರ, “ಸರಿ ಈಗ ಲೆಕ್ಕಂದ ಹೆಚ್ಚು ವಾದ ಬೇಡ.. ನೇರ ಪ್ರಶ್ನೆಗೆ ಬತ್ತೆ.. ನಿನ್ನ ಮೊದ್ಲಣ ಹೆಂಡತಿದು ಆಕಸ್ಮಿಕ ಸಾವ?? ಅಲ್ಲ.. ಕೊಲೆಯ??” ಹೇಳಿ ಓರೆ ಕಣ್ಣಿಲಿ ನೋಡಿದ. ಅರವಿಂದ ಸಣ್ಣಕ್ಕೆ ಜೊಗುಳಿ ನುಂಗಿ, “ಅದು.. ಸತ್ತ…ದು..” ಹೇಳಿ ನುಂಗಿ ನುಂಗಿ ಮಾತಾಡಿದ. ಶರತ್ಚಂದ್ರ ಅರವಿಂದನ ಹತ್ರೆ ಬಂದು, ” ಓಹೋ.. ಇಷ್ಟೊತ್ತು ಹಾರಿಗೊಂಡಿತ್ತ ಜನ ನೀನೆಯಾ.. ಎಂತ ಮಾತೇ ಹೆರಡ್ತಿಲ್ಲೆ.. ಹೆಂಡತಿಯ ಕೊಂದೆಯಾ..??” ಹೇಳಿ ಅರವಿಂದನತ್ರೆ ಕೇಳಿದ. ಅರವಿಂದ ಅಬ್ಬೆಯ ಮೋರೆ ನೋಡಿಕ್ಕಿ, “ಅದು… ಸತ್ಯ ಹೇಳೆಕ್ಕಾರೆ ಎನ್ನ ಹೆಂಡತಿ ಸತ್ತಿದಿಲ್ಲೆ.. ಅದು.. ಎಂಗೊಗೆ ಡಿವೋರ್ಸ್
ಆದ್ದು.. ಅದಕ್ಕುದೇ ಅಮ್ಮಂಗುದೇ ಸರಿ ಹೋಯಿಕ್ಕೊಂಡಿತ್ತಿಲ್ಲೆ.. ಸಣ್ಣಪುಟ್ಟ ವಿಷಯಲ್ಲಿದೇ ಜಗಳ.. ಯಾವಾಗ ನೋಡ್ರುದೇ ಅಮ್ಮನೊಟ್ಟಿಂಗೆ ಲಡಾಯಿ ಮಾಡಿಗೊಂಡಿಪ್ಪದು.. ಎಷ್ಟು ಹೇಳಿ ಮಂಕಡ್ಸುಲಕ್ಕು?? ಅಮ್ಮಂಗೆ ಅದರ ಕೆಲವು ವರ್ತನೆಗ ಆಗಿ ಬಂದುಗೊಂಡಿತ್ತಿಲ್ಲೆ.. ಅಮ್ಮ ರಜ್ಜ ಮುಸು ಮುಸು ಮಾಡ್ರೆ ಇದು ಹಾರುಲೆ ಸುರುಮಾಡುಗು.. ಹಾಂಗಾಗಿ ಅಮ್ಮ ಡಿವೋರ್ಸ್ ಕೊಡು ಅದಕ್ಕೆ ಹೇಳಿದವು… ಈ ವಿಷಯ ಗೊಂತಾದರೆ ಆರುದೇ ಕೂಸು ಕೊಡ್ಲೆ ಮುಂದೆ ಬಾರ ಹೇಳಿ ಅದು ಸತ್ತತ್ತು ಹೇಳಿ ಸುಳ್ಳು ಹೇಳಿದ್ದು..” ಹೇಳಿಕ್ಕಿ ತಲೆ ಕೆಳ ಹಾಕಿದ. ಶರತ್ಚಂದ್ರ, “ಸಮಾಜವ ಹಾಳು ಮಾಡ್ಲೆ ನಿಂಗಳಾಂಗಿಪ್ಪವೇ ಬೇಕಾದ್ದು.. ಮನುಷ್ಯತ್ವ ಹೇಳ್ತದು ಈಗ ಕಾಂಬಲೇ ಅಪರೂಪ ಆಯ್ದು.. ಸಣ್ಣ ಸಣ್ಣ ವಿಷಯವ ನಿಂಗ ನಿಂಗ ಮಾತಾಡಿಗೊಂಬ ಬದಲು ದೊಡ್ಡ ಮಾಡಿ ಡಿವೋರ್ಸ್ ವರೆಗೂ ಕೊಂಡೋಗಿ, ಕೂಸುಗಳ ಭವಿಷ್ಯ ಹಾಳು ಮಾಡುದು.. ಅದೆರಡೆಲಿ ಇನ್ನೊಂದು ಕೂಸಿನ ಭವಿಷ್ಯ ಹಾಳು ಮಾಡ್ಲೆ ಹೆರಟಿದವು. ನೀನೊಬ್ಬ ಜನವೇ… ಅಮ್ಮಂದೆ ಹೆಂಡತಿದೆ ಜಗಳ ಮಾಡಿಗೊಂಬಗ ನಿಂದುಗೊಂಡು ನೋಡುದಲ್ಲ.. ಇಬ್ರನ್ನೂ ಕೂರ್ಸಿಕ್ಕಿ ಮಾತಾಡ್ಸೆರೆ ಇಷ್ಟೆಲ್ಲಾ ಆವ್ತಿತ್ತಾ.. ಇದೆಲ್ಲಾ ಹೇಳಿ ಬಪ್ಪದಲ್ಲ ಅವಕ್ಕವಕ್ಕೆ ತಿಳಿಯೆಕ್ಕು.. ಸ್ವಂತ ಬುದ್ಧಿ ಇಲ್ಲದ್ದ ನಿನ್ನಾಂಗಿಪ್ಪವು ಭೂಮಿಗೆ ಭಾರವೇ..” ಹೇಳಿಯಪ್ಪಗ ಅರವಿಂದಂಗೆ ಉರಿ ದರ್ಸಿತ್ತು ,” ಮಿಸ್ಟರ್ ಶರತ್ಚಂದ್ರ ಮೈಂಡ್ ಯುವರ್ ಟಂಗ್..” ಹೇಳಿ ಕೋಪಲ್ಲಿ ಹಾರಿಯಪ್ಪದ್ದೇ ಶರತ್ಚಂದ್ರ, ” ಯಬ್ಬಾ.. ಕೋಪವುದೇ ಬತ್ತಾ.. ಅಂಜಲಿಯನ್ನುದೇ ಹೀಂಗೆ ಕೋಪಲ್ಲಿಯೇ ಕೊಂದದೋ ಹೇಂಗೆ..?” ಹೇಳಿ ಒಂದು ಹುಬ್ಬಿನ ಮೇಲೆ ಮಾಡಿ ಕೇಳಿಯಪ್ಪದ್ದೇ ಕೋಪಲ್ಲಿ ಹಾರಿಗೊಂಡಿತ್ತ ಅರವಿಂದಂಗೆ ಆಶ್ಚರ್ಯ ಆತು. ಅರವಿಂದನ ಅಮ್ಮಂಗುದೇ ಆಶ್ಚರ್ಯಲ್ಲಿ ಅದಕ್ಕೇ ಗೊಂತಾಗದ್ದಾಂಗೆ ಬಾಯಿಂದ “ಹ್ಞೇಂ…” ಹೇಳಿ ಉದ್ಘಾರ ಬಂತು. ಅರವಿಂದ, “ಅಂಜಲಿಯ ಕೊಲೆಯ?? ಆರು ಕೊಂದದು..??” ಹೇಳಿ ಕೇಳಿದ. ಅರವಿಂದನ ಮನೆಯವಕ್ಕೆ ಅಂಜಲಿ ಸತ್ತಿದು ಹೇಳಿಯಪ್ಪಗ ಆಶ್ಚರ್ಯ ಆತು. ಶರತ್ಚಂದ್ರಂಗೆ ಅಲ್ಲಿಯೇ ಟಿವಿ ಸ್ಟೇಂಡಿಲಿ ಒಂದು ಸೆಂಟಿನ ಕುಪ್ಪಿ ಕಂಡತ್ತು. ಅದರ ಅಂಗೈಗೆ ಸ್ಪ್ರೇ ಮಾಡಿ ಮೂಸಿದ. ಅದರ ಘಾಟಿಂಗೆ ಬಂದ ಎರಡು ಮೂರು ಅಕ್ಷಿ ಅವನ ತನಿಖೆಗೆ ಅಡ್ಡಿ ಆಯ್ದಿಲ್ಲೆ. ಆದರೆ ಶರತ್ಚಂದ್ರಂಗೆ ಲೆಟರ್ ಬಂದ ದಿನದ ಸೆಂಟಿನ ಪರಿಮಳವುದೇ ಇಲ್ಲಿಪ್ಪ ಸೆಂಟಿನ ಪರಿಮಳವುದೇ ಬೇರೆ ಆಗಿತ್ತು. ಆದರೂ ತನಿಖೆ ಮುಂದುವರೆಸಿದ. ” ಆರು ಕೊಂದದು ಹೇಳಿ ಗೊಂತಾಗಿದ್ದರೆ ಆನೆಂತಕೆ ಇಲ್ಲಿ ಇನ್ವೆಸ್ಟಿಗೇಷನ್ ಮಾಡ್ಲೆ ಬರ್ತಿತ್ತೆ..?? ಆರು ಕೊಂದದು ಹೇಳಿ ನಿಂಗಳೇ ಹೇಳೆಕ್ಕು..” ಹೇಳಿ ಶರತ್ಚಂದ್ರ ಎಲ್ಲರ ಮೇಲೆ ಕಣ್ಣಾಡ್ಸಿದ. ಅರವಿಂದ ಸಮಾಧಾನಲ್ಲಿ, ” ನೋಡಿ.. ನಿಂಗಳ ಪೋಲಿಸು ಕಣ್ಣಿಂಗೆ ಎಲ್ಲರೂ ಕೊಲೆಗಾರರ ಹಾಂಗೆ ಕಾಂಬದು ಸಹಜ. ಹಾಂಗೆ ಹೇಳಿಗೊಂಡು ಇಲ್ಲದ್ದ ಅಪವಾದ ಪೂರಾ ಎಂಗಳ ಮೇಲೆ ಹಾಕೆಡಿ.. ದಮ್ಮಯ್ಯ ಈ ಕೊಲೆಗೂ ಎಂಗೊಗು ಎಂತ ಸಂಬಂಧವೂ ಇಲ್ಲೆ..” ಹೇಳಿ ಶರತ್ಚಂದ್ರನ ಮೋರೆ ಎದುರೆ ಕೈ ಮುಗುದು ದಡಬಡನೆ ಉಪ್ಪರಿಗೆ ಮೆಟ್ಲು ಹತ್ತಿದ.ಶರತ್ಚಂದ್ರಂಗೂ ಇವು ಕೊಲೆಗಾರರು ಅಲ್ಲ ಹೇಳಿ ನಿಗಾಂಟಾತು. ತಳೀಯದ್ದೇ ಬೈಕ್ ಹತ್ತಿಕ್ಕಿ ಸ್ಟೇಶನಿಂಗೆ ಹೋದ.
“ತನಿಖೆ ಕೋಡಿಮುಟ್ಟಿ ಕೊಲೆಗಾರ ಸಿಕ್ಕುತ್ತ ಹೇಳಿಯಪ್ಪಗ ನಮಗೆ ತಿರುಗಿ ಬಡಿತ್ತು.. ಥಕ್ ತಲೆ ಚಿಟ್ಟಿಡ್ದತ್ತು.. ನಾಗಾರಾಜ ಒಂದು ಸ್ಟ್ರಾಂಗ್ ಚಾಯವುದೇ ಬನ್ನುದೇ ತರ್ಸು” ಹೇಳಿಗೊಂಡು ಶರತ್ಚಂದ್ರ ಕುರ್ಶಿಲಿ ಕೂದ. ನಾಗಾರಾಜ ಸ್ಟೇಶನಿಂದ ಹೆರ ಹೋಗಿ, ” ರಾಘೂ.. ಒಂದು ಸ್ಟ್ರಾಂಗ್ ಟೀ, ಎರಡು ಬನ್ಸ್..” ಹೇಳಿ ಎದುರೆ ಇಪ್ಪ ಹೋಟ್ಲಿನ ಹುಡುಗಂಗೆ ಕೇಳುವಾಂಗೆ ಬೊಬ್ಬೆ ಹಾಕಿತ್ತು. ರಜ್ಜ ಹೊತ್ತಿಲಿ ಹುಡುಗ ತೋರ್ಬೆರಳಿಷ್ಟು ಸಣ್ಣ ಗ್ಲಾಸಿಲಿ ಅರೆವಾಶಿ ಚಾಯವನ್ನುದೇ ಒಂದು ಪೇಪರು ಕಟ್ಟಿಲಿ ಎರಡು ಬನ್ಸನ್ನುದೇ ತಂದು ಮೇಜಿಲಿ ಮಡುಗಿತ್ತು. ಶರತ್ಚಂದ್ರ ಚಾಯ ಕುಡ್ದು ಬನ್ಸ್ ತಿಂದಿಕ್ಕಿ ಪೇಪರಿನ ಮುದ್ದೆ ಮಾಡಿ ಇಡ್ಕುಲಪ್ಪಗ ಆ ಪೇಪರಿಲಿ ಶರತ್ಚಂದ್ರಂಗೆ ಒಂದು ಆಶ್ಚರ್ಯ ಕಾದಿತ್ತು.
-ಮುಂದುವರೆತ್ತು…..
|
10:45 (0 minutes ago) |
|||
|
- ಅವನೀಶ- SSLC 99.68% - May 20, 2023
- ಕಣ್ಣಾಮುಚ್ಚೇ ಕಾಡಾಗೂಡೇ - August 3, 2021
- ಮರಳಿ ಗೂಡಿಗೆ - May 31, 2021
ಕಥೆ ಲಾಯ್ಕ ಹೋವುತಾ ಇದ್ದು. ಹಳೆ ಹೆಂಡತಿ ಯ ಸುದ್ದಿ ಬಪ್ಪ ವಾರ ಗೊಂತಕ್ಕ?