Oppanna.com

ಸ್ವಯಂವರ : ಕಾದಂಬರಿ : ಭಾಗ 40 – ಪ್ರಸನ್ನಾ. ವಿ. ಚೆಕ್ಕೆಮನೆ

ಬರದೋರು :   ಪ್ರಸನ್ನಾ ಚೆಕ್ಕೆಮನೆ    on   09/03/2020    2 ಒಪ್ಪಂಗೊ

ಸ್ವಯಂವರ 40

ಚಂದ್ರಣ್ಣ ಸರಿಯಾಗಿ ಕಣ್ಣೊಡದು ನೋಡಿದವು. ಸುಶೀಯೇ..ಆದರೆ ಗುರ್ತ ಸಿಕ್ಕದ್ದಷ್ಟು ಬಚ್ಚಿ ಬರೀ ಎಲುಗು ಚೋಲಿ ಮಾಂತ್ರ ಇಪ್ಪದದು. ಥಕ್! ಇದಕ್ಕೆ ಬೇಕಾಗಿ ಆ ದಿನೇಸನೊಟ್ಟಿಂಗೆ ಓಡಿದೆಯಾ ಮಗಳೇ..ಇನ್ನಾದರೂ ಅದರ ಬಿಟ್ಟಿಕ್ಕಿ ಬಾ..ನಿನಗೆ ಕಲಿವಲಕ್ಕು. ಅಕ್ಕನ ಹಾಂಗೆ ಟೀಚರು ಕೆಲಸಕ್ಕೆ ಹೋಪಲಕ್ಕು.. ..! ಆಸ್ಪತ್ರೆಂದ ಮನಗೆ ಹೋದ ಕೂಡ್ಲೇ ಕೇಶವನತ್ರೆ ಹೇಳಿ ಸುಶೀಗೆ ಒಂದು ವೆವಸ್ಥೆ ಮಾಡ್ಸೆಕು….’ ಹೀಂಗೆಲ್ಲ ಅವು ಮನಸಿಲ್ಲಿ ಗ್ರೇಶಿದ್ದು ಮಾಂತ್ರ!

ಒಂದರಿ ಕಣ್ಣು ಮುಚ್ಚಿ ಒಡದಪ್ಪಗ ಅವು ಕಂಡದು ಶಾರದೆ ಸುಶೀಗೆ ಬಡಿವದರ..
“ಬೇ…..ಬೇ…..ಡಾ…..” ಹೇಳ್ಲೆ ಬೇಕಾಗಿ ಭಾರೀ ಬಂಙಲ್ಲಿ ಅವು ನೆರಕ್ಕಿದವು. ಅಷ್ಟಪ್ಪಗ ಶೈಲನು ,ಎರಡು ನರ್ಸುಗಳೂ ಸೇರಿ ಶಾರದಕ್ಕನ ಕರೇಂಗೆ ಬಲ್ಗಿ ನಿಲ್ಸಿದ್ದು ಕಂಡತ್ತು.

“ಸುಶೀ…ಮಗಳೂ…..” ಚಂದ್ರಣ್ಣ ಎಡಿಗಾದಷ್ಟು ದೊಡ್ಡಕೆ ಬೊಬ್ಬೆ ಹಾಕಿರೂ ದೊಂಡೆಂದ ಗೊರಗೊರ ಶಬ್ದ ಹೆರಟದಷ್ಟೆ ಹೊರತು ಬೇರೆಂತದೂ ಆಯಿದಿಲ್ಲೆ.

ಶಾರದೆ ಇಲ್ಲಿಯೇ ಅದರ ಬಡುದತ್ತೂಳಿ ಆದರೆ ಇನ್ನು ಮನಗೆ ಕರಕ್ಕೊಂಡು ಹೋದರೆ ಎಂತ ಮಾಡುಗು? ದಿನೇಸನ ಬಿಟ್ಟಿಕ್ಕಿ ಬಂದರೂ ಅದಕ್ಕೊಂದು ನೆಮ್ಮದಿಯ ಬದ್ಕು ಅನುಭವಿಸುಲೆ ಊರಿನವು ಬಿಡುಗಾ? ಶಾರದೆಯೇ ಹೀಂಗೆ ಮಾಡುಗ ಇನ್ನು ಬಾಕಿದ್ದವು ಎಂತ ಮಾಡುಗೂ… !’ ಅವಕ್ಕೆ ಕೇಶವನ ನೋಡೆಕೂಳಿ ಆತು..ತಲೆ ಹನ್ಸುಲೆ ಎಡಿಯದ್ದ ಕಾರಣ ಕಣ್ಣಿಲ್ಲೇ ಅತ್ಲಾಗಿತ್ಲಾಗಿ ನೋಡಿದವು. ಶಾರದಕ್ಕನ ಹಿಡುದು ನಿಂದ ಶೈಲನ ಕಂಡಪ್ಪಗ ಅದರತ್ರಾರು ಈ ವಿಶಯ ಹೇಳೆಕೂಳಿ . ಸುಶೀಲಂಗೆ ಎಂತಾರು ಸಕಾಯ ಮಾಡೆಕೂಳಿ ಆ ಅಪ್ಪನ ಹೃದಯ ಹೇಳ್ಲೆ ಸುರು ಮಾಡಿಯಪ್ಪಗ ಉಸಿಲು ಬಿಡ್ಲೆ ಬಂಙಪ್ಪ ಹಾಂಗಾದರೂ ಬಲದ ಕೈ ರಜ ಮೇಗೆ ಮಾಡಿ ಮೂಗಿಂಗೆ ಸಿಕ್ಸಿದ ವಯರಿನ ಹಿಡುದೆಳದು “ಶೈಲಾ..ಬಾ..” ಹೇಳಿ ಬೊಬ್ಬೆ ಹಾಕಿದವು.

ಅವರ ಹೀಂಗೆ ಮಾಡಿದ್ದು ಕಂಡಪ್ಪಗ ಡಾಕ್ಟರ,ನರ್ಸುಗೊ ಗಡಿಬಿಡಿ ಮಾಡಿಂಡು ಹತ್ತರೆ ಬಂದರೂ ಅವಕ್ಕೆ ಅಷ್ಟೊತ್ತಿಂಗೆ ಎಲ್ಲಿಂದ ಅಷ್ಟು ಶಕ್ತಿ ಬಂತೋ ಗೊಂತಿಲ್ಲೆ..

“ಶೈಲಾ…ನಮ್ಮ ಸುಶೀಯ ಕೈ ಬಿಡೆಡ ಮಗಳೂ…ಅಣ್ಣನತ್ರೆ ಹೇಳಿ ಅದಕ್ಕೆಂತಾರು ಸಕಾಯ ಮಾಡು..ಆನಿಲ್ಲದ್ರೆ ಅಬ್ಬೆ ಅದರ ಕೊಲ್ಲುಗು..ಅದರತ್ರೆ ಹಾಂಗೆ ಮಾಡ್ಲಾಗ ಹೇಳು….” ಹೇಳಿ ಬೊಬ್ಬೆ ಹಾಕಿದಾಂಗೆ ಹೇಳಿಕ್ಕಿ ಅಲ್ಲಿಗೇ ಮೊಗಚ್ಚಿದವು. ಡಾಕ್ಟರ,ನರ್ಸುಗೊ ಎಲ್ಲ ಎಷ್ಟು ಪ್ರಯತ್ನ ಪಟ್ಟರೂ ಅವರ ಉಸಿರಾಟ ನೇರ್ಪ ಮಾಡ್ಲೆ ಎಡಿಗಾಯಿದೇ ಇಲ್ಲೆ. ಅವಕ್ಕೆ ಕುತ್ತಿದ ವಯರಿಂಗೆ ಜೋಡಿಸಿದ ಮಿಶನು ಕುಯಿಂ…ಕುಯಿಂ….ಹೇಳಿ ಸಣ್ಣಕೆ ಶಬ್ದ ಮಾಡಿಕ್ಕಿ ಅಲ್ಲೇ ಆಫ್ ಆತು.

ಅಬ್ಬೆ ಬಡುದಪ್ಪಗ ಬೇನೆ ಆದರೂ ತಡಕ್ಕೊಂಡು ನಿಂದ ಸುಶೀಲಂಗೆ ಈಗ ಅಪ್ಪನ ಅವಸ್ಥೆ ನೋಡಿ ಎಂತದೋ ಅಪ್ಪಲಾಗದ್ದದು ಆಯಿದಾ ಹೇಳಿ ಸಂಶಯ ಬಂತು. ಹಾಂಗಾದ್ದದೂದೆ ಅದರ ತಲೆ ಒಳ ಎಂತದೋ ಆಗಿ ಅದೂದೆ ಬೊಬ್ಬೆ ಹಾಕಿತ್ತು. ಮೈ ಕೈ ನಡುಗಿ ಪಿಟ್ಸ್ ಬಂದವರ ಹಾಂಗೆ ಮಾಡುವ ಅದರ ನರ್ಸುಗೊಕ್ಕೆ ಹಿಡಿವಲೆ ಬಂಙಾತು.

ಅಂಬಗಳೇ ನಾಲ್ಕೈದು ಜನ ಡಾಕ್ಟರಕ್ಕ ಒಟ್ಟಿಂಗೆ ಬರೆಕಾಗಿ ಬಂತು ಸುಶೀಲನ ನೋಡ್ಲೆ.
“ಬಾಳಂತಿ ಆದ ಕಾರಣ ಮದ್ದು ಕೊಡ್ಲೂ ಬಂಙ ಆವ್ತನ್ನೇ. ಈಗ ಈ ಇಂಜೆಕ್ಷನ್ ಕೊಡ್ತೆ. ಪಾಪುವಿಂಗೆ ಎರಡು ದಿನ ಹಾಲು ಕೊಡುದು ಬೇಡ” ಡಾಕ್ಟರ್ ಪ್ರದೀಪ್ , ಸುಲೋಚನ ಡಾಕ್ಟರತ್ರೆ ಹಾಂಗೆ ಹೇಳಿಕ್ಕಿ ಇಂಜೆಕ್ಷನ್ ಕೊಟ್ಟವು. ಇಂಜೆಕ್ಷನ್ ಕೊಟ್ಟು ಹತ್ತು ನಿಮಿಷಲ್ಲಿ ಅದು ಕೈ ಕಾಲು ಬಡಿವದು ನಿಲ್ಸಿತ್ತು. ಒರಕ್ಕಿನ ಅಮಲಿಂಗೆ ತೇಲಿ ಹೋಪಗ ಅದಕ್ಕೆ ಇನ್ನೆಂದೂ ಅಪ್ಪನ ಮೋರೆ ನೋಡ್ಲೆ ಎಡಿಯ ಹೇಳುದು ಗೊಂತೇ ಆಯಿದಿಲ್ಲೆ.

ಇಷ್ಟು ಹೊತ್ತು ಅಲ್ಲಿ ನಡದ ವಿಚಾರಂಗಳ ನೋಡಿಂಡು ಹೆದರಿ ಒಂದು ಮೂಲೆಲಿ ನಿಂದು ನೋಡಿಂಡಿದ್ದ ಶೈಲಂಗೂ ಅಬ್ಬೆ ತಂಗಗೆ ಬಡುದ ಕಾರಣ ಹೀಂಗೆಲ್ಲ ಆದ್ದು ಹೇಳಿ ಅಬ್ಬೆಯತ್ರೆ ರಜ ಬೇಜಾರಾತು. ಆದರೆ ವಿಧಿಯ ತಪ್ಪುಸುಲೆ ಆರಿಂಗೂ ಎಡಿಯ!!

ಡಾಕ್ಟರ್ ಸತೀಶಂಗೆ ಶಾರದಕ್ಕತ್ರೆ ಒಳ್ಳೆತ ಕೋಪ ಬಂತು
“ನಿಂಗೊ ಪಾಪ ,ಗೆಂಡನ ಮೋರೆ ನೋಡದ್ದೆ ಬೇಜಾರಿಲ್ಲಿದ್ದಿ ಜಾನ್ಸಿ ಮೆಲ್ಲಂಗೆ ಒಳ ಬಿಟ್ಟದಕ್ಕೆ ಎಂಥಾ ಕೆಲಸ ಮಾಡಿದಿ!! ಈಗ ಸಮದಾನ ಆತಾ!! ನಿಂಗಳ ಒಂದು ಸಣ್ಣ ತಪ್ಪಿಂದಾಗಿ ಈಗ ಅವು ನಿಂಗಳ ಬಿಟ್ಟು ಹೋಪ ಹಾಂಗಾತದ. ಗೆಂಡನ ನೋಡ್ಲೆ ಹೋದವು ಎಂತಕೆ ಆ ರೋಗಿಗೆ ಬಡುದ್ದು? ”

ಶಾರದಕ್ಕಂಗೆ ತಲಗೆ ಬಡುದ ಹಾಂಗಾತು. ಅವಕ್ಕೆ ಚಂದ್ರಣ್ಣನ ಸ್ಥಿತಿ ಗೊಂತಿತ್ತಿದ್ದಿಲ್ಲೆ. ಸುಶೀ ಗೆಂಡನ ಕಾಲು ಹಿಡಿವದು ಕಂಡಪ್ಪಗ “ಅದು ಮಾಡಿದ್ದು ತಪ್ಪಾತೂಳಿ ಕ್ಷಮೆ ಕೇಳಿಯಪ್ಪಗ ಗೆಂಡ° ಎಲ್ಯಾರು ಒಪ್ಪಿರೆ ನಾಳಂಗೆ ಊರಿನವು, ನೆಂಟ್ರು ತಮಾಶೆ ಮಾಡುಗು, ಹೇಳಿ ಆಗಿ ಕೋಪ ಬಂದು ತಡೆಯದ್ದೆ ಅದಕ್ಕೆ ಪೆಟ್ಟು ಕೊಟ್ಟು ಹೋದ್ದದು. ಹೀಂಗಕ್ಕೂಳಿ ಗೊಂತಿದ್ದರೇ…..!
ಅವಕ್ಕೆ ಮುಂದೆ ನಡವಲೆ ದಾರಿ ಕಾಣದಷ್ಟು ಕತ್ತಲೆ ಕತ್ತಲೆ ಆದಾಂಗಾತು. ಶೈಲ ಅಬ್ಬೆಯ ಹೆಗಲು ಹಿಡುದು ನಡಶಿಂಡು ಹೆರ ಬಂದು ಅಲ್ಲಿಪ್ಪ ಕುರ್ಚಿಲಿ ಅಬ್ಬೆಯ ಕೂರ್ಸಿಕ್ಕಿ ಕೇಶವನ ಹತ್ತರಂಗೆ ಬಂತು. ಡಾಕ್ಟರ ಅಂಬಗ ಅವನತ್ರೆ ಶುದ್ದಿ ಹೇಳಿಕ್ಕಿ ಹೆರ ಹೋದ್ದಷ್ಟೆ.

ಶೈಲನ ಕಂಡಪ್ಪಗ ಅವಂಗೆ ದುಃಖ ತಡದ್ದಿಲ್ಲೆ
“ಆನೆಂತ ಮಾಡುದಕ್ಕ ಇನ್ನು? ಇಷ್ಟು ಬಂಙ ಬಂದು ಎಷ್ಟೆಷ್ಟೋ ಡಾಕ್ಟರಕ್ಕಳ ಹತ್ತರೆ ಹೋದರೂ ಅಪ್ಪಂಗೆ ಒಂದರಿ ನೇರ್ಪ ಎದ್ದು ಕೂಬಲೆ ಸಾನು ಎಡ್ತಿದಿಲ್ಲೆನ್ನೇ. ಈ ಸುಶೀಂದಾಗಿ ಅಂದು ಹಾಂಗಾತು. ಈಗ…..!!!! ”

ಶೈಲ ಮಾತಾಡಿದ್ದಿಲ್ಲೆ. ಅವನ ಮಾತು ಸತ್ಯವೇ. ಸುಶೀಯ ಹೆಚ್ಚು ಪ್ರೀತಿಸಿದ ಅಪ್ಪಂಗೆ ಅದರ ಅವಸ್ಥೆಯ ನೋಡ್ಲೆಡಿಯದ್ದೆ ಹೀಂಗಾದ್ದು. ಸಾವಲಪ್ಪಗ ಅಪ್ಪ ಬಂಙ ಬಂದು ಬೊಬ್ಬೆ ಹಾಕಿದಾಂಗೆ ಹೇಳಿದ್ದದು ಕೂಡ ‘ಸುಶೀಗೆ ಸಕಾಯ ಮಾಡ್ಲೆ ಕೇಶವನತ್ರೆ ಹೇಳು’ ಹೇಳಿ. ಅಂಬಗ ಅದರ ಅರ್ಥ ಅಪ್ಪ° ಅದರ ಕ್ಷಮಿಸಿದ್ದವು ಹೇಳಿಯೇ ಅಲ್ಲದಾ..

ಸೀದಾ ಗೆಂಡನ ಹತ್ತರೆ ಹೋಗಿ ಒಳ ನಡದ ವಿಶಯವ ಎಲ್ಲ ಹೇಳಿತ್ತು ” ಸುಶೀಯ ನಾವೀಗ ಅರ್ಧಲ್ಲಿ ಬಿಟ್ಟಿಕ್ಕಿ ಹೋದರೆ ಅಪ್ಪನ ಆತ್ಮಕ್ಕೆ ಶಾಂತಿ ಸಿಕ್ಕ. ನಿಂಗಳೇ ಕೇಶವನತ್ರೆ ಹೇಳಿ”

ರಾಮಚಂದ್ರ ಹೆಂಡತಿಯ ಮೋರೆ ನೋಡಿದ°. ಇನ್ನೀಗ ಆಲೋಚನೆ ಮಾಡಿಂಡು ಕೂಬಲೆ ಪುರ್ಸೊತ್ತಿಲ್ಲೆ. ಮಾವನ ಮುಂದಾಣ ಕೆಲಸಂಗೊ ಆದಷ್ಟು ಬೇಗ ಆಯೆಕು. ಮದಾಲು ಮನಗೆ ಪೋನು ಮಾಡಿ ವಿಶಯ ತಿಳಿಶೆಕು. ಅದರೆಡೆಲಿ ಈ ಸುಶೀಲನ ವಿಶಯ ಬಂದರೆ ಊರಿನವು ಎಂತ ಹೇಳುಗು! ಶೈಲ ಹೇಳುದು ಕೇಳುಗ ಅದರ ಈಗ ಆಸ್ಪತ್ರೆಂದ ಕರಕ್ಕೊಂಡು ಹೋಪ ಸ್ಥಿತಿ ಇಲ್ಲೆ. ಅದರ ಕರಕ್ಕೊಂಡು ಹೋದರೆ ದಿನೇಸ ,ಅದರ ಮನೆಯವು ಬಂದರೆ ಎಂತ ಮಾಡುದು? ಎಲ್ಲಾ ಹೊಡೆಂದಲೂ ಸರಿಯಾಗಿ ಆಲೋಚನೆ ಮಾಡದ್ದೆ ಒಂದು ತೀರ್ಮಾನ ತೆಕ್ಕೊಂಬ ವಿಶಯ ಅಲ್ಲ ಸುಶೀಲನದ್ದು. ಕೇಶವಂಗೂ ಈಗಾಣ ಪರಿಸ್ಥಿತಿಲಿ ಗಟ್ಟಿಯಾದ ತೀರ್ಮಾನ ತೆಕ್ಕೊಂಬಲೆ ರಜ ಬಂಙವೇ ಅಕ್ಕು. ಇಷ್ಟು ಬೇಗ ಮಾವಂಗೆ ಹೀಂಗಕ್ಕೂಳಿ ಜಾನ್ಸಿದ್ದಿಲ್ಲೆ. ಎಷ್ಟು ಎಡಿಯದ್ರೂ, ಚಾಕ್ರಿ ಮಾಡಿಂಡಿದ್ದರೂ ಆ ಜೀವ ಮನೆಲಿಪ್ಪದು ಕೇಶವಂಗೆ ಎಷ್ಟೋ ಸಮದಾನ ಕೊಟ್ಟು ಕೊಂಡಿದ್ದತ್ತು. ಫಕ್ಕನೆ ಈ ಅವಸ್ಥೆ ಬಂದಪ್ಪಗ ಅವ° ಅದರ ಹೇಂಗೆ ನಿಭಾಯಿಸುತ್ತನೋ….!! ಇನ್ನೀಗ ಆದಷ್ಟು ಬೇಗನೆ ಆಸ್ಪತ್ರೆಯ ಪೈಸೆ ಕಟ್ಟಿ ಮಾವನ ದೇಹವ ಕೊಂಡೋಯೆಕು.ಮುಂದಾಣ ಕಾರ್ಯಕ್ಕೆ ಏರ್ಪಾಡು ಮಾಡ್ಲನೆರೆಕರೆಯವಕ್ಕೆ , ಗುರಿಕ್ಕಾರಂಗೆ ವಿಶಯ ತಿಳುಶೆಕು. ಬಟ್ಟಮಾವಂಗೆ ಪೋನು ಮಾಡೆಕು.ಆಳುಗಳ ಬಪ್ಪಲೆ ಹೇಳೆಕು.ಎಲ್ಲದಕ್ಕೂ ಮುಂದೆ ನಿಂದು ಮಾಡ್ಸಲೆ ಬೇರೆ ಆರೂ ಇಲ್ಲೆ….’ ಹೀಂಗಿದ್ದ ಆಲೋಚನೆಲಿ ಅವ° ಇಪ್ಪಗ ಕುರ್ಚಿಲಿ ಕೂದ ಶಾರದಕ್ಕ “ಎನಗೊಂದರಿ ಸುಶೀಯ ತೋರ್ಸಿ, ಇಲ್ಲಿಂದ ಹೋಪ ಮೊದಲು ಎನ್ನ ಮಗಳ ಒಂದರಿ ನೋಡೆಕೆನಗೆ” ಹೇಳಿ ಎಕ್ಕಿ ಎಕ್ಕಿ ಕೂಗಲೆ ಸುರು ಮಾಡಿದವು.
“ಭಾವಾ°” ಹೇಳಿ ಎಂತೋ ಹೇಳ್ಲೆ ಬಂದ ಕೇಶವಂಗೂ ಅಬ್ಬೆ ಕೂಗುದು ಕಂಡತ್ತು.
ಮೂರು ಜನಕ್ಕೂ ಎಂತ ಮಾಡುದು ಹೇಳಿ ಗೊಂತಾಗದ್ದಾಂಗಾಗಿ ಮೋರೆ ಮೋರೆ ನೋಡಿಂಡು ಅಲ್ಲೇ ನಿಂದವು.

ಇನ್ನೂ ಇದ್ದು, ಇನ್ನಾಣ ವಾರಕ್ಕೆ >>>

~*~*~

ಕಳುದ ವಾರದ ಸಂಚಿಕೆ:

ಪ್ರಸನ್ನಾ ಚೆಕ್ಕೆಮನೆ

2 thoughts on “ಸ್ವಯಂವರ : ಕಾದಂಬರಿ : ಭಾಗ 40 – ಪ್ರಸನ್ನಾ. ವಿ. ಚೆಕ್ಕೆಮನೆ

  1. ಸುಶಿ ಅಪ್ಪನ ನೋಡಿರು,ಅಪ್ಪ ಸುಷಿಯ ನೋಡಿರು ಒಂದು ಬೆಳವಣಿಗೆ ಆತಿಲ್ಲೆನ್ನೆ..ಇದರ ಒಂದು ತಪ್ಪಿಂದಾಗಿ ಇನ್ನೂ ಮುಂದೆ ಅಪ್ಪನ ಮೋರೆಯೆ ನೋದದ್ದಾಂಗೆ ಆತನ್ನೆ.. ಕುಟುಂಬದ ವು ಸುಷಿಯ ನೋಡುದ ಅಪ್ಪನ ಕಾರ್ಯ ಮಾಡುದಾ.. ಎಂಥಾ ಒಂದು ಪರಿಸ್ಥಿತಿ ಬಂತು..ಅಪ್ಪನತ್ರೆ ಕ್ಷಮೆ ಕೇಳಿದೆ ಹೇಳಿ ಅಪ್ಪಗಳೆ ಅವೇ ಇಲ್ಲದ್ದ ಸ್ಥಿತಿ ಬಂತನ್ನೆ…ಯಾವ ದುಃಖ ತದಕ್ಕೊಂಬ ಶಕ್ತಿ ಆರಿಂಗೂ ಇರ..ಸುಷಿಯ ಕಂಡ ಸಂತೋಷ..ಅದರ ಸ್ಥಿತಿ…ಅಪ್ಪ ಇಲ್ಲದ್ದ ಬೇಜಾರು ಛೆ ಇದರ ಎಲ್ಲ ತದಕ್ಕೊಂಬ ಶಕ್ತಿ ಎಲ್ಲೋರಿಂಗೂ ದೇವರು ಕೊಡಲಿ

  2. Kaadambarili ee thiruvu karulu hinduthu.. saavanda modale appange magala more nodledigaatu.. adu madida ondu thappinge saaki salahida abbe appa naraluvaangaatu.. susheela saavallivaregu paschathapada benkili beyekkaste.. durvidhi..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×