Oppanna.com

ವ್ಯಾಪಾರ

ಬರದೋರು :   ಗೋಪಾಲಣ್ಣ    on   04/01/2011    19 ಒಪ್ಪಂಗೊ

ಗೋಪಾಲಣ್ಣ

ಉದಿಯಪ್ಪಗ ಕಾಫಿ ಕುಡಿವಲೆ ಕೂದಪ್ಪಗ ಹೆರಂದ “ಭಟ್ರೆ” ಹೇಳಿ ದಿನುಗೋಳಿದ ಹಾಂಗೆ ಕೇಳಿತ್ತು.
ಶಂಭಟ್ರು ಎದ್ದವು.

ಅವರ ಮನೆ ಬಾಗಿಲಿಲಿ ಒಂದು ಬ್ಯಾರಿ; ಅವರ ಚಿರಪರಿಚಿತನೆ. ಅಬ್ಬಾಸ್ ಬ್ಯಾರಿ;ಎಲ್ಲೊರೂ ಅಂಬಚ್ಚು ಹೇಳುಗು.
ಅಡಕ್ಕೆ ಸೊಲಿದ ವಿಶಯ ಬ್ಯಾರಿಗೆ ಹೇಂಗೊ ಗೊಂತಾಗದ್ದೆ ಇರುತ್ತಿಲ್ಲೆ. ಅದಕ್ಕೆ ಶಂಭಟ್ರ ಹತ್ತರೆ ಬಂದು ಚೆರೆಪೆರೆ ಮಾಡಿ ರಜ ಅಡಕ್ಕೆಯೊ,ಇಲ್ಲದ್ದರೆ ಕೋಕವೊ ಎಂತಾದರೂ ಕೊಂಡೋಗದ್ದೆ ಇದ್ದರೆ ತಿಂದದು ಕರಗ.
ಮನಸ್ಸಿಲೆ ಬೈದೊಂಡು “ಎಂದೆ?” ಹೇಳಿ ಕೇಳಿದವು.
“ಅಡಕ್ಕ ಉಲಿಚ್ಚಿಟ್ಟಾಯೊ?ಕೋಕ ಇಂಡಾ?”[ಅಡಕ್ಕೆ ಸೊಲಿದಾತೊ?ಕೋಕ ಇದ್ದೊ?]
ಶಂಭಟ್ರು ಇದ್ದು ಹೇಳಿ ಒಳಂದ ಒಂದು ಸಣ್ಣ ಕುರುವೆಲಿ ಕೋಕ ಹೆರ ತಂದವು.ಅಡಕ್ಕೆಗೆ ಅದು ಸರೀ ಕ್ರಯ ಕೊಡ ಹೇಳಿ.

ಬ್ಯಾರಿ ಬಿಡೆಕ್ಕನ್ನೆ?
ಅಡಕ್ಕೆ ತನ್ನಿ,ನೋಡುವೊ ಹೇಳಿತ್ತು.
ಸೊಲಿದ ಅಡಕ್ಕೆ ಗೋಣಿ ಹೆರ ಬಂತು.
ಬ್ಯಾರಿ ಅಡಕ್ಕೆಗೆ ಕೈ ಹಾಕಿತ್ತು, ಎರಡೂಕೈಲಿ ಹಿಡಿದು ಕುಟ್ಟಿ ನೋಡಿತ್ತು.  ಆಡಕ್ಕೆ ಕತ್ತರಿಲಿ ತುಂಡು ಮಾಡಿತ್ತು.ಒಳ್ಳೆ ಅಡಕ್ಕೆ,ಯಾವ ಕಸರೂ ಇತ್ತಿಲ್ಲೆ.

ಬ್ಯಾರಿ ಎಪ್ಪತ್ತೈದು ರೂಪಾಯಿ ಕ್ರಯ ಹೇಳಿತ್ತು. ಎಪ್ಪತ್ತೇಳು ಆವಗ ಕ್ಯಾಂಪ್ಕೊಲ್ಲಿ ಸಿಕ್ಕಿಕೊಂಡಿತ್ತು. ಶಂಭಟ್ರು ಎಂಬತ್ತೈದಕ್ಕೆ ಕಮ್ಮಿಗೆ ಕೊಡೆ ಹೇಳಿದವು.
“ಎಂಬದ?ಎವ್ವತ್ತೇದಿನಿ ‍ಞಾನ್ ವೇಣಾಂಗಿಲ್ ತೆರಾಂ. ಎಡ್ ಕುನ್ನಾ?”[ಎಪ್ಪತ್ತೇಳು ರೂಪಾಯಿಗೆ ಆನು ಕೊಡುತ್ತೆ; ತೆಕ್ಕೊಂಬಿರೊ?]
ಬ್ಯಾರಿ ಸವಾಲು ಹಾಕಿತ್ತು ಶಂಭಟ್ರಿಂಗೆ!

ಶಂಭಟ್ರಿಂಗೆ ಅವರ ಬೆಳೆಗೆ ಒಳ್ಳೆ ಕ್ರಯ ಸಿಕ್ಕಿರೆ ಸಾಕು,ಬ್ಯಾರಿಯ ಕೈಂದ ಅಡಕ್ಕೆ ತೆಗವಲೆ ಅವಕ್ಕೆಂತ ಗ್ರಾಚಾರವೊ?
ಸುರು ಅತದ ಚರ್ಚೆ. ಈ ವರುಷ ಮೂಡಮನೆಂದ ಎಷ್ಟಕ್ಕೆ ತೆಗೆದೆ; ಮೂಲೆಮನೆಂದ ಎಷ್ಟಕ್ಕೆ ಕೊಟ್ಟವು-ಎಲ್ಲಾ ಹೇಳಿತ್ತು.
ಅವರ ಜಾಲು ಎತ್ತರಲ್ಲಿದ್ದು;ನಿಂಗಳದ್ದು ಹೊಂಡಲ್ಲಿಪ್ಪದು-ಬೇಗ ಒಣಗದ್ದ ಕಾರಣ ಬಣ್ಣ ಕಮ್ಮಿ-ಒಣಗಲೆ ಹಾಕುವ ಮೊದಲು ಅವು ಜಿಗ್ಗು ಎಲ್ಲ ತೆಗೆದು ಬೇರೆ ಮಾಡುತ್ತವು-ನಿಂಗೊ ಹಾಂಗೆ ಮಾಡಿದ್ದಿಲ್ಲೆಯಿ-ಹೇಳಿ ವಾದಿಸಿತ್ತು.

ಶಂಭಟ್ರು ಒಪ್ಪಿದ್ದವೇ ಇಲ್ಲೆ.
ಅದ,ಅದೇ ಸಮಯಕ್ಕೆ ಸಾಹುಕಾರ ಮಾವನ ಸವಾರಿ ಬಂತು.

ಸಾಹುಕಾರ ಮಾವ ಶಂಭಟ್ರಿಂಗೆ ದೂರಲ್ಲಿ ಮಾವ.ಅವು ದೊಡ್ಡ ಅಡಕ್ಕೆವ್ಯಾಪಾರಿ; ಹಾಂಗಾಗಿ ಅವಕ್ಕೆ ಸಾಹುಕಾರ ಹೇಳಿ ಹೆಸರು-ಪ್ರಾಯವೂ ಐವತ್ತು ದಾಂಟುಗು.
“ಎಂತ ಮಾವ,ಬನ್ನಿ,ಆಸರಿಂಗೆ ಬೇಕೊ?”ಹೇಳಿ ಸ್ವಾಗತಿಸಿದವು.
“ಆಸರಿಂಗೆ ಎಂತದೂ ಬೇಡ,ಓ,ಇದೆಂತ ಕಾಲಂಟೆಯೇ ವ್ಯಾಪಾರ?”

ಶಂಭಟ್ರೂ,ಅಂಬಚ್ಚುವೂ ಆವೇಶಲ್ಲಿ ಅವರವರ ಪಕ್ಷವ ವಿವರಿಸಿದವು.

“ಇರಲಿ,ಆನು ನೋಡ್ತೆ”

ಸಾಹುಕಾರರು ಅಡಕ್ಕೆಯ ಐದು ನಿಮಿಶ ನೋಡಿದವು-“ಶಂಭು,ಇದು ಫಷ್ಟು ಅಡಕ್ಕೆ.ಆನು ಎಂಬತ್ತೆರಡಕ್ಕೆ ತೆಕ್ಕೊಂಬೆ;ನಿನ್ನ ಕ್ರಯವೂ ಬೇಡ;ಅಂಬಚ್ಚುವ ಕ್ರಯವೂ ಬೇಡ-ಆಗದೊ?ಎಂತ ಹೇಳ್ತೆ ನೀನು?”
ಶಂಭಟ್ರಿಂಗೆ ಗೊಂದಲ ಆತು,ಅವು ಹೇಳಿದ ಕ್ರಯ ಸಿಕ್ಕದ್ದರೂ ಮಾವ ಬ್ಯಾರಿಂದ ಹೆಚ್ಚಿಗೆ ಹೇಳಿದ್ದಕ್ಕೆ ಸಮಾಧಾನ ಆತು,ಕೊಡಲೆ ಒಪ್ಪಿದವು.
“ಆಯಿ,ಪಟ್ರು ಎಡುಕ್ಕುನ್ನಾಂಗಿಲಿ ಎಡುಕ್ಕಟ್ಟ್, ಬೆರಿನ್ನ್ ಆವೇ”[ಆಗಲಿ,ಭಟ್ರು ತೆಗೆತ್ತರೆ ತೆಗೆಯಲಿ, ಬತ್ತೆ ಆತೊ?]-ಅಂಬಚ್ಚು ಇಷ್ಟು ಹೇಳಿ ಮನಸ್ಸಿಲೆ ಪರಂಚಿಯೊಂಡು ಹೋತು.

ಶಂಭಟ್ರು ಮಾವನ ಒಳ ಕರಕ್ಕೊಂಡು ಹೋದವು.
ತಿಂಡಿ,ಕಾಫಿ ಬಂತು.ಅದೂ,ಇದೂ ಮಾತಾಡಿಯೊಂಡು ಆಸರಿಂಗೆ ತೆಕ್ಕೊಂಡವು.

“ಮಾವ,ಆಳುಗೊ ಯಾವಾಗ ಬಕ್ಕು ಅಡಕ್ಕೆ ಕೊಂಡೋಪಲೆ?”:ಶಂಭಟ್ರು ಕೇಳಿದವು.
“ಹೊತ್ತೋಪಗ ಕಳುಸುತ್ತೆ…..ಹೇಳಿದ ಹಾಂಗೆ ಶಂಭು,ಒಂದು ವಿಶಯ ಹೇಳ್ತೆ,ಬೇಜಾರ ಮಾಡ್ಲಾಗ…..”

“ಎಂತರ ಮಾವ?”

“ನೋಡು ನಿನ್ನೆ ಕ್ಯಾಂಪ್ಕೊಲ್ಲಿ ಕ್ರಯ ಎಪ್ಪತ್ತೇಳೇ ಇದ್ದದು.ಹೆರ ಬ್ಯಾರಿಗೊ ಒಂದೆರಡು ರೂಪಾಯಿ ಹೆಚ್ಚಿಗೆ ಕೊಡುಗೊ ಎಂತ್ಸೊ?ಆದರೆ ಇಲ್ಲಿಂದ ಅಡಕ್ಕೆ ಪೇಟೆಗೆ ಎತ್ತುಸೆಕ್ಕನ್ನೆ?”
ಶಂಭಟ್ರಿಂಗೆ ಮಾವಂದೆಂತದೊ ಕೊಸರಂಕೊಳ್ಳಿ ಇದ್ದು ಹೇಳಿ ತಲಗೆ ಹೋತು-“ಹಾಂಗಾಗಿ…ಎಂತ ಮಾವ?”ಕೇಳಿದವು ಮಾವನ ಬಾಯಿಂದಲೆ ಬರಲಿ ಹೇಳಿ.

“ನೋಡು ಶಂಭು,ಈಗ ಅಡಕ್ಕೆಗೆ ಸಮಗಟ್ಟು ಕ್ರಯ ಬತ್ತಿಲ್ಲೆ. ದೊಡ್ಡ ಲಾಭ ಇಲ್ಲದ್ದರೂ ಎನ್ನ ರಥ ಹೋಯೆಕ್ಕನ್ನೆ ಹೇಳಿ ಆನು ವ್ಯಾಪಾರ ಮಾಡುತ್ತಾ ಇದ್ದೆ.ಕೆಲಸಕ್ಕೂ ಜೆನ ಇಲ್ಲೆ,ಟೆಂಪೊ,ಲಾರಿ ಬಾಡಿಗೆ ಎಲ್ಲ ಕೊಟ್ಟು ಪೂರೈಸುತ್ತಿಲ್ಲೆ…”

“ಅಪ್ಪು ಮಾವ,ಇಲ್ಲಿಂದ ಪೇಟೆಗೆ ಜೀಪಿಂಗೆ ನೂರು ಹೇಳ್ತವು”

“ಅಡಕ್ಕೆ ಬ್ಯಾರಿಗೆ ಹೋಪದು ಬೇಡ ಹೇಳಿ ಆನು ಎಂಬತ್ತೆರಡು ಹೇಳಿದೆ, ಪರಮಾರ್ಥಕ್ಕಾದರೂ ಈಗ ಅಷ್ಟು ಕ್ರಯ ಇಲ್ಲೆ, ಹಾಂಗೆ ಹೇಳಿ ನಿನಗೂ ನಷ್ಟ ಅಪ್ಪಲಾಗ.
ನಿನಗೆ ಪೇಟೆಗೆ ಕೊಂಡೋಪ ಕರ್ಚು ಉಳಿತ್ತನ್ನೆ,ಆನು ಕ್ಯಾಂಪ್ಕೊದವು ಕೊಡುದರಿಂದ ಒಂದು ರುಪಾಯಿ ಜಾಸ್ತಿ-ಎಪ್ಪತ್ತೆಂಟು ಕೊಡುತ್ತೆ ಆಗದೊ? ಬೇಜಾರ ಮಾಡೆಡ…..”
ಬೆಣ್ಣೆಲಿ ಕೂದಲು ತೆಗೆದ ಹಾಂಗೆ ಮೆಲ್ಲಂಗೆ ಹೇಳಿದವು ಸಾಹುಕಾರ ಮಾವ!

ಶಂಭಟ್ರು ಎಂತ ಹೇಳುದು? ಆತು ಮಾವ-ಹೇಳಿ ತಲೆ ಆಡಿಸಿದವು.

19 thoughts on “ವ್ಯಾಪಾರ

  1. Thumba layika iddu, Kathe. Oduvaga modalu manege bandukondidda byarigala nenapavuthu.

    Really a good article by Gopala

    Keep it up!!! Gopala——=-Ninna Akka,
    Indire

  2. ಸಂತೋಷ ಆತು ನಿಂಗೋ ಬರದ್ದಕ್ಕೆ.
    ಸಾಂತಾಣಿ ಕತೆ ಆನೂ ಕೇಳಿದ್ದೆ.ಅದರ ಬರದು ಒಪ್ಪಣ್ಣರಿಗೆ ಕಳಿಸಿದ್ದೆ.[ಬದಲಾವಣೆ ಮಾಡಿ]
    ನಮ್ಮ ಹಳೆ ಕಾಲದ ಕತೆಗೋ ತುಂಬಾ ಇದ್ದು.ಲಾಯ್ಕಿದ್ದು.
    ಅಂಗ್ರಿ ಅಣ್ಣ ಯ್ಯಜ್ಜ ಹೇಳಿ ಇದ್ದಿದ್ದವು,ಆಶು ಕವಿ.
    ಅವರ ಆಶು ಕವಿತ್ವದ ಕತೆಗೋ ತುಂಬಾ ಇದ್ದು.ಕನ್ಯಾನ ಹೊಡೆಯವು ಆರಾದರೂ ಬೈಲಿಲಿ ಇದ್ದರೆ ಸಂಗ್ರಹದ ಕೆಲಸ ಮಾಡಿದರೆ ನಮ್ಮ ಸಮಾಜಕ್ಕೆ ತುಂಬಾ ಉಪಕಾರ ಅಕ್ಕು.

    1. ಆನುದೇ ಅಂಗ್ರಿ ಅಣ್ಣಯ್ಯಜ್ಜನ ಬಗ್ಗೆ ಎನ್ನ ದೊಡ್ಡಪ್ಪ° “ದಿ. ಪರ್ತಜೆ ರಾಮಕೃಷ್ಣ ಭಟ್ಟ ವರ್ಮುಡಿ” ಹೇಳಿಗೊಂಡಿತ್ತಿದ್ದದರ ಕೇಳಿದ್ದೆ.

  3. =
    ಬ್ಯಾರಿಯ ಸಾಂತಾಣಿ(ಬೇಶಿದ ಹಲಸಿನ ಬೇಳೆ) ಕಚ್ಚೋಡ ನೆಂಪಾತು=
    ಭಟ್ರಮನೆ ಜಾಲಿಲಿ ಸಾಂತಾಣಿ ಒಣಗಲೆ ಹಾಕಿತ್ತಿದ್ದವಡ.
    ಬ್ಯಾರಿ ಬಂತಡ.
    “ಇದೆಂದೆ ಸಾಮಿ ಈಡ ಬೆಚ್ಚದ್?”(ಇದೆಂತ ಸ್ವಾಮಿ ಇಲ್ಲಿ ಮಡಗಿದ್ದು?) ಹೇಳಿ ಕೇಳಿಗೊಂಡು ಒಂದು ಸಾಂತಾಣಿ ಹೆರ್ಕಿ ಕಚ್ಚಿ ನೋಡಿತ್ತಡ. ನೋಡಿಕ್ಕಿ “ಇದ್ ನಲ್ಲೆದಿಲ್ಲ”(ಇದು ಒಳ್ಳೆದಿಲ್ಲೆ) ಹೇಳಿ ಹೇಳಿಕ್ಕಿ ಕಚ್ಚಿ ಎಂಜೆಲು ಮಾಡಿದ ಸಾಂತಾಣಿಯ ರಾಶಿಗೇ ಹಾಕಿ ಇಡೀ ರಾಶಿಯನ್ನೇ ಎಂಜೆಲು ಮಾಡಿತ್ತಡ.
    “ಸಾಮಿ, ನಲ್ಲೆದಿಲ್ಲಂಗ್ಲೂ ಎನೆಕ್ಕಾವು, ಕೊಡ್ಕುನ್ನೋ?”(ಸ್ವಾಮಿ, ಒಳ್ಳೆದಿಲ್ಲದ್ರೂ ಎನಗಕ್ಕು ಕೊಡ್ತಿರೋ) ಕೇಳಿತ್ತಡ.
    ಭಟ್ರ ಗೆತಿ ಗೋವಿಂದ- ಎಂಜೆಲು ಸಾಂತಾಣಿ ಆರಿಂಗೆ ಬೇಕು? ಬೇರೆಯವಕ್ಕೆ ಮಾರುಲೂ ಎಡಿಯ- ತಿಂಬಲೂ ಎಡಿಯ.
    ಬ್ಯಾರಿ ಲಾಯಕಿಲ್ಲೆ ಹೇಳಿ ಕಮ್ಮಿಗೇ ಕೇಳುತ್ತಷ್ಟೆ.
    ಭಟ್ರಿಂಗೆ ಬೇರೆ ಗೆತಿ ಇಲ್ಲೆ.
    ಬ್ಯಾರಿ ಕೇಳಿದ್ದಕ್ಕೆ ಕೊಟ್ಟು ಚೌಕ ಎಳದ ಬಿಗುದವಡ.

  4. ಗೋಪಾಲ ಮಾವ,ಕಥೆ ಫಷ್ಟಾಯಿದು..ಈ ಕಥೆ ಎಂಗೋ ಸಣ್ಣ ಪ್ರಾಯಲ್ಲಿಪ್ಪಗ ಅಪ್ಪ ಮಾಡಿಯೊಂಡಿದ್ದ ವೆವಹಾರವ ನೆಂಪು ಮಾಡಿತ್ತು..ಇನ್ನಷ್ಟು ಹೀನ್ಗಿಪ್ಪ ಕತೆಗ ಬರಲಿ….ಧನ್ಯವಾದಂಗೋ!!!!!!!!!!

  5. ಎಲ್ಲರ ಪ್ರೀತಿಗೂ ಧನ್ಯವಾದ.
    ನಮ್ಮ ಭಾಷೇಲಿ ಬರೆದರೆ ನಮ್ಮವರ ವಿಚಾರವ ಸರಿ ಬರವಲಾವುತ್ತಿದ ,
    ಇದೂ ಎನಗೆ ಒಂದು ಒಳ್ಳೆ ಪಾಠ .
    ಮೋಸ ಹೇಳುವದು ಲೋಕಲ್ಲಿ ಇದ್ದು,ಕಮ್ಮಿ ಆದರೂ ನಮ್ಮವರಲ್ಲೂ ಇಲ್ಲದ್ದೆ ಇರ,ಕತೆ ಹೇಳುವಾಗ ಎಲ್ಲಾ ಬರೆಯೇಕ್ಕಾವುತ್ತು,ಅನಿವಾರ್ಯ!

  6. ಗೋಪಾಲಣ್ಣ, ಶುದ್ದಿ ಪಷ್ಟಾಯಿದಿದಾ.. ಕಥೆ ಓದಿಗೊಂಡು ಹೋದ ಹಾಂಗೆ ಎನಗೆ ಎನ್ನ ಮನೆಗೆ ಬಂದುಗೊಂಡಿದ್ದ ಇಬ್ರಾಯಿಯ ನೆಂಪಾತು.. ಅಡಕ್ಕೆ ಸೊಲುದು ಮಡುಗಿದ ಮರದಿನವೇ ಆಸಾಮಿ ಹಾಜರು.. ಎಂಗ ಮಕ್ಕೊ ಎಲ್ಲ ಅದು ಬಂದಪ್ಪದ್ದೆ “ಬಜ್ಜೆಯಿ ಕಳೆತ್ತ್ಂಡಾ” ಬಂತು ಹೇಳಿಗೊಂಡಿತ್ತಿದ್ದೆಯ° .. ಗಂಟೆಗಟ್ಲ ಚೆರೆಪೆರೆ ಮಾಡಿ ಹೆಂಗಾರು ಎನ್ನ ಅಜ್ಜನನ್ನೂ ಅಪ್ಪನನ್ನೂ ಮಂಕಳ್ಸಿ, ತಕ್ಕಡಿಲಿ ತೂಗಿ ಒಂದು ರೇಟು ಹಾಕಿ, ಮತ್ತೆ ಅರ್ಧ ಮುಕ್ಕಾಲು ಗಂಟೆ ಚರ್ಚೆ ಮಾಡಿಯೇ ಅದರೂ ಅಡಕ್ಕೆಯೋ ಕೋಕವೋ ತೆಕ್ಕೊಂಡು ಹೋಗದ್ದೆ ಒಳಿಯ.. ಈಗಳುದೆ ಅದು ಫೋನು ಮಾಡ್ಲಿದ್ದು, “ಬಜ್ಜೆಯಿ ಕಳೆತ್ತ್ಂಡಾ?” ಹೇಳಿ ಕೇಳ್ಲೆ . ಅಡಕ್ಕೆ ಸೊಲಿವಲೆ ಕೂದಪ್ಪದ್ದೆ ಫೋನು ಬತ್ತು ಈಗ! 😉 ದೈವದತ್ತವಾಗಿ ಬಪ್ಪ ಆರನೇ ಇಂದ್ರಿಯವೋ ಏನೋ!
    ತಮಾಷೆ, ಎಡೇಲಿ ಮಲಯಾಳದ ಮಧ್ಯೆ, ನಮ್ಮೋರು ನಮ್ಮೋರಿಂಗೇ ಕೈಕೊಡ್ತ ಮಾಮೂಲಿ ಅಭ್ಯಾಸವ ಸೂಕ್ಷ್ಮಲ್ಲಿ ಮಡುಗಿದ್ದಿ! ಮನಸಿಂಗೆ ರಜ ಬೇಜಾರಾತು.. ಒಂದು ಬ್ಯಾರಿ ಸೋತರೆ ಹತ್ತು ಬ್ಯಾರಿಗೋ ಆಧರ್ಸುತ್ತವು, ಸಹಾಯ ಮಾಡ್ತವು.. ನಮ್ಮಲ್ಲಿ ಒಬ್ಬ° ಸೋತರೆ ನಾವೆಷ್ಟು ಜೆನ ಅವಂಗೆ ಸಕಾಯ ಮಾಡ್ಲೆ ತಯಾರಿರ್ತು?? ಅಲೋಚನೆ ಮಾಡೆಕ್ಕು, ಎಣ್ಸುಲೆ ಬೆರಳುಗೊ ಸಾಕಕ್ಕು..
    ಒಳ್ಳೆ ಲೇಖನ ಗೋಪಾಲಣ್ಣ!

  7. ಗೋಪಾಲಣ್ಣ,
    ಎನ್ನ ಬಾಲ್ಯಲ್ಲಿ ಆಡಕ್ಕೆ ತೆಗವಲೆ ಮಮ್ಮದೆ ಹೇಳಿ ಒಂದು ಬ್ಯಾರಿ ಬಂದುಗೊಂಡಿತ್ತು,ಇದೇ ಭಾಷೆ,ಇದೇ ಮಾತುಗೋ. ನಾವು ಒಗ್ಗಟ್ಟಿಲಿರೆಕ್ಕು,ನಮ್ಮವು ಸೋಲುಲೆ ಬಿಡುಲಾಗ ಹೇಳಿ ಸೂಚ್ಯಲ್ಲಿ ಹೇಳಿದ್ದಿ .ಒಳ್ಳೆ ಶೈಲಿ.

  8. ಬ್ಯಾರಿಗಳ ಕಚ್ಚೋಡದ ವಿವರ ಭಾರೀ ಲಾಯಿಕ ಆಯಿದು. ಬ್ಯಾರಿ ಮಲಯಾಳಲ್ಲಿ ಎಡೆಲೆಡಿಲಿ ವಾಕ್ಯಂಗೊ ಕೊಟ್ಟದು ಲಾಯಿಕ ಆಯಿದು.
    “ಕೊರ್ಚ ಕೊರಕ್ಕಿ” ಹೇಳ್ತದು ಅವರ ಟ್ರೇಡ್ ಮಾರ್ಕ್ ವಾಕ್ಯ
    ಎಲ್ಲಿ ಅಡಕ್ಕೆ ಸೊಲುದರೂ ಅವ್ರ ಮೂಗಿಂಗೆ ಪರಿಮಳ ಬತ್ತು.
    ತಕ್ಕಡಿ ನಮ್ಮ ಹತ್ರೆ ಇಲ್ಲದ್ದರೆ ಅವರ ಹತ್ರೆ ಒಂದು ಸ್ಪ್ರಿಂಗ್ ಬಾಲೆನ್ಸ್ ಇರ್ತು. ಅದರಲ್ಲಿ ತೂಗಿರೆ, ಅವಕ್ಕೆ ಎಷ್ಟು ಬೇಕೋ ಅಷ್ಟೇ ತೋರುಸುಗಷ್ಟೆ.
    ನಮ್ಮಲ್ಲಿಗೆ ಬಂದಪ್ಪಗ ಅವರ ರಾಗ ಯಾವಾಗಲೂ ಒಂದೇ. “ಈಗ ಕ್ರಯ ಕಮ್ಮಿ ಆಯಿದು” ಹೇಳಿಯೇ.
    ಹಾಂಗೆ ಹೇಳಿಂಡು ಕಚ್ಚೋಡಕ್ಕೆ ಬಪ್ಪದು ಬ್ಯಾರಿಗೊ ಮಾತ್ರ.
    ಒಳ್ಳೆ ಕತೆ ಕೊಟ್ಟ ಗೋಪಾಲಂಗೆ ಧನ್ಯವಾದಂಗೊ

  9. (ಅಡಕ್ಕೆ ಸೊಲಿದ ವಿಶಯ ಬ್ಯಾರಿಗೆ ಹೇಂಗೊ ಗೊಂತಾಗದ್ದೆ ಇರುತ್ತಿಲ್ಲೆ)
    ಎನಗುದೆ ಮೊದಲಿಂದಲೇ ಆಶ್ಚರ್ಯ ಇವಕ್ಕೆ ಹೇಂಗೆ ಗೊಂತಾವುತ್ತು ಹೇಳಿ…

    1. { ಇವಕ್ಕೆ ಹೇಂಗೆ ಗೊಂತಾವುತ್ತು }
      ಗೊಂತಾಗದ್ದೆ ಎಂತ ವೆಂಕಟೇಶಣ್ಣೋ..
      ಅಡಕ್ಕೆ ಸೊಲಿತ್ತ ಅಣ್ಣುದೇ, ಕಚ್ಚೋಡದ ಅದ್ರಾಮನೂ ಒಟ್ಟಿಂಗೇ ಅಲ್ಲದೋ ಚಾಯಕುಡಿತ್ತದು, ಚೇಟನ ಹೋಟ್ಳಿಲಿ..!!?

  10. ಅ೦ತೂ ಇ೦ತೂ ಬ್ಯಾರೀಗೂ ಭಟ್ರಿ೦ಗೂಒಟ್ಟು ಟೊಪ್ಪಿ ಆತೊ ಗೊಪಾಲಣ್ಣೋ?ಒಪ್ಪ೦ಗಳೊಟ್ಟಿ೦ಗೆ.

  11. ಒಳ್ಳೆದು ಮಾಡಿದವು ಇಬ್ರುದೆ ಸೇರಿ. ಬ್ಯಾರಿಗೊ ಭಾರಿ ನೈಸು ಮಾತಾಡಿ ಟೊಪ್ಪಿ ಹಾಕುದರಲ್ಲಿ ಉಶಾರಿ. ಒಂದು ರುಪಾಯಿ ಜಾಸ್ತಿ ಸಿಕ್ಕುತ್ತಾರು ಬ್ಯಾರಿಗೊಕ್ಕೆ ಕೊಡ್ಲಾಗ ಹೇಳಿ ಹೇಳುದು ಆನು.

    1. Appachhi…Mamamdegu adakkagu bare sambandhavali! Engala orili 3 mammade adakke vyapariggo iddavu!! So gurta hidivale Boldu mammade, Naaru mamamde, kari mamamde heliye hesaru madugiddu!!, adare byarigo illadde vyapara nedeya, astra varege vyaparada mele avara hold iddu

  12. ಕತೆ, ಆ ಕತೆಲಿ ಬಪ್ಪ ಕಚ್ಚೋಡದ ವಿವರಣೆ ಭಾರೀ ಲಾಯಕಾಯಿದು. ಮಾಪಳೆಗಳ ಹತ್ರೆ ಕಚ್ಚೋಡ ಮಾಡಿ ಅಭ್ಯಾಸ ಇದ್ದವಕ್ಕೆ, ಕಥೆಲಿ ಇಪ್ಪ ನೈಜತೆ ಅರ್ಥ ಅಕ್ಕು. ಎನ್ನ ಅಂದಾಜೆಗೆ, ಇಲ್ಯಾಣ ಸಾಹುಕಾರ ಮಾವ ರಜಾ ಕೊಂಕಣಿ ಬುದ್ದಿ ತೋರುಸಿದ್ದ. ಸಾಹುಕಾರ ಮಾವ ಬಾರದ್ರೆ, ಶಂಭಟ್ಟಂಗೆ ರಜಾ ರೇಟು ಜಾಸ್ತಿ ಖಂಡಿತಾ ಸಿಕ್ಕುತಿತು. ಹವ್ಯಕರ ಜೀವನ ಕ್ರಮಕ್ಕೆ ಹೇಳಿ ಮಾಡುಸಿದ ಹಾಂಗೆ ಇದ್ದು ಈ ಕತೆ. ಗೋಪಾಲಣ್ಣ ಬರದ ಇನ್ನೊಂದು ಕಥೆಯ ನಿರೀಕ್ಷೆಲಿ ಇದ್ದೆ.

  13. ಕತೆ ಒಪ್ಪ ಆಯಿದು ಗೋಪಾಲಣ್ಣಾ… ಎಲ್ಲಾ ಅಡಕೆ ವ್ಯಾಪಾರಿಗಳುದೇ ಸಾಹುಕಾರ ಮಾವನ ಹಾಂಗೆ ಯೋಚಿಸಿದರೆ ಅಡಕೆ ಕೃಷಿಕಂಗೊ ರಜ್ಜ ಉಶಾರಿ ಅಕ್ಕು ಅಲ್ಲದಾ… 😉

  14. ಗೋಪಾಲಣ್ಣಾ..
    ಕತೆ ಪಷ್ಟಾಯಿದು.

    ಕತೆಯ ಹಿಂದೆ ಇಪ್ಪ ಸಾರ ಇನ್ನೂ ಕೊಶಿ ಆತು ಒಪ್ಪಣ್ಣಂಗೆ.
    ನಾವು ನಮ್ಮೋರನ್ನೇ ಅವಲಂಬಿತ ಆಗಿದ್ದರೆ ಅದರಿಂದ ದೊಡ್ಡ ಸ್ವಾತಂತ್ರ್ಯ ಬೇರೆ ಇದ್ದೋ!
    ಗ್ರಾಮಸ್ವರಾಜ್ಯ!! ಅಲ್ಲದೋ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×