Oppanna.com

ಸಣ್ಣ ಪುಟ್ಟ ಬದಲಾವಣೆ

ರೂಪಾಪ್ರಸಾದ್ ಕೋಡಿಂಬಳ.

ಬರದೋರು :   ಶರ್ಮಪ್ಪಚ್ಚಿ    on   18/04/2020    2 ಒಪ್ಪಂಗೊ

ಬೈಲ ಬಾಂಧವರೇ,
ಇಂದು ಬೈಲಿಂಗೆ ಹೊಸ ಲೇಖಕಿಯ ಪರಿಚಮಾಡಿಸಿಕೊಡಲೆ ಕೊಶೀ ಆವ್ತು.

ಇವೇ    ರೂಪಾಪ್ರಸಾದ್ ಕೆ.(ರೂಪಶ್ರೀ)

ರೂಪಾಪ್ರಸಾದ್ ಕೋಡಿಂಬಳ.
ರೂಪಾಪ್ರಸಾದ್ ಕೋಡಿಂಬಳ.
ಬಂಟ್ವಾಳ ತಾಲೂಕಿನ ನೇರಳಕಟ್ಟೆ ನಿವಾಸಿ ಶ್ರೀಯತ ಇಂದುಮುಗೇರು ಸದಾಶಿವ ಭಟ್ ಹಾಗೂ ರಾಜೇಶ್ವರಿ ದಂಪತಿಗಳ ಸುಪುತ್ರಿ. ನೇರಳಕಟ್ಟೆಲಿ ಪ್ರಾಥಮಿಕ ವಿಧ್ಯಾಭ್ಯಾಸ, ಕರ್ನಾಟಕ ಹೈಸ್ಕೂಲ್‌ ಮಾಣಿಲಿ ಪ್ರೌಢ ಶಿಕ್ಷಣ,ವಿವೇಕಾನಂದ ಕಾಲೇಜಿಲ್ಲಿ  ಶಿಕ್ಷಣ ತೆಕ್ಕೊಂಡು ಮೈಸೂರು ಮಾನಸಗಂಗೋತ್ರಿಯ ದೂರಶಿಕ್ಷಣ ಕೋರ್ಸ್   ಮೂಲಕ  M.A  ಎಕನಾಮಿಕ್ಸ್ ಪದವಿ ಪೂರೈಸಿರುತ್ತವು.
ಕೃಷಿಕ ಶ್ರೀ ಕೃಷ್ಣ ಪ್ರಸಾದ್ ಎಡಪತ್ಯ ಇವರ ಧರ್ಮಪತ್ನಿ ಯಾಗಿ, ಕಡಬ ತಾಲುಕು ಕೋಡಿಂಬಳಗ್ರಾಮದ ನಾಕೂರು ನಿವಾಸಿ.
ಮಗ ಅನೀಶ್.ಕೆ ಪ್ರಸ್ತುತ ದ್ವಿತೀಯ ಪಿ.ಯು.ಸಿ.ವಿದ್ಯಾರ್ಥಿ.
ಇವರ ಹವ್ಯಾಸಂಗೊ:-ಕೃಷಿ,ಹೈನುಗಾರಿಕೆ,ಹೂತೋಟ,ತರಕಾರಿ,ಹಣ್ಣುಗಳ ಬೆಳೆಸುವುದು,ಅಡುಗೆ,ಓದು,ಸಂಗಿತ ಕೇಳುವುದು ಅಲ್ಲದ್ದೆ ಇತ್ತೀಚೆಗೆ ಬರವಣಿಗೆಲಿಯೂ  ತೊಡಗಿಸಿಕೊಂಡಿರುತ್ತವು.
ಕವನ,ಚಿತ್ರಕವನ,ಒಂದೆರಡು ಭಜನೆ,ಚುಟುಕು,ರುಬಾಯಿ,ಸಣ್ಣಕಥೆಗಳು, ಅಡುಗೆ ಲೇಖನ, ಇತರೆ ಕೆಲವು ಲೇಖನಂಗಳನ್ನೂ ಬರೆವ ಪ್ರಯತ್ನ  ಮಾಡಿರುತ್ತವು.
ಹವ್ಯಕ  ಭಾಷೆಲಿ ಇದು  ಮೊತ್ತ ಮೊದಲ ಪ್ರಯತ್ನ. ಈಗಾಗಲೇ ಈ ಲೇಖನ upayuktha.com ನಲ್ಲಿ ಪ್ರಕಟಗೊಂಡಿದು ಹೇಳಿ ತಿಳಿಶಿದ್ದವು.
ವಿಳಾಸ: ರೂಪಾಪ್ರಸಾದ್. ಕೆ
W/ O.ಕೃಷ್ಣ ಪ್ರಸಾದ್. ಕೆ
ನಾಕೂರು ಮನೆ.
ಕೋಡಿಂಬಳ ಪೋಸ್ಟ್
ಕಡಬ ತಾಲೂಕು
Pin.,574221
 E mail add:Roopa.prasd@ gmail.com

ಇವಕ್ಕೆ ನಮ್ಮ ಪ್ರೋತ್ಸಾಹ ಕೊಟ್ಟು,  ಹವ್ಯಕ ಭಾಷೆಯ ಸಾಹಿತ್ಯ ಕ್ಷೇತಲ್ಲಿ ಇನ್ನೂ ಹೆಚ್ಚು ಕೃಷಿ ಮಾಡಲಿ ಹೇಳಿ ಹಾರೈಸುವೊ°

-ಶ್ರೀಕೃಷ್ಣ ಶರ್ಮ ಹಳೆಮನೆ

ಸಣ್ಣ ಪುಟ್ಟ ಬದಲಾವಣೆ

“ಈ  ಹಾಳಾದ ವೈರಸ್ಸಿಂದಾಗಿ ಸರಿಯಾಗಿ ಪಾತ್ರೆ ತೊಳವಲೂ ಎಡಿಯದ್ದ ಹಾಂಗಾತು” ಹೇಳಿಕೊಂಡು ಇಂದು ಉದಿಯಪ್ಪಗ ಆನು ಚೂರು ಜೋರಿಲಿಯೇ ಪಾತ್ರೆಗಳ ತೊಳದು ಕುಕ್ಕಿಕೊಂಡಿತ್ತಿದ್ದೆ.ಅಷ್ಟಪ್ಪಗ ಹೆರಂದ ಪತಿಮಹಾಶಯರು,”ಎಂತಾತು ಈಗ,ಸ್ಕ್ರಬ್ಬರ್ ಮುಗುದರೆ ತೆಂಗಿನನಾರು ಹಾಕಿ ತಿಕ್ಕು,ಹಿಂದಾಣವು ಅದರಲ್ಲೇ ಪಾತ್ರೆ ತೊಳಕ್ಕೊಂಡು ಇದ್ದದಲ್ಲದಾ? ಆಗಾಣಕಾಲಲ್ಲಿ ಸ್ಕ್ರಬ್ಬರು,ಆಚದು,ಈಚದು ಹೇಳಿ ಎಂತ ಇತ್ತು? ತೆಂಗಿನನಾರಿನ ಬೂದಿಲಿ ಮುಳುಗಿಸಿ ಪಾತ್ರೆ ತಿಕ್ಕಿದರೆ ಹೇಂಗೆ ಫಳಪಳ ಹೊಳಗು ಗೊಂತಿದ್ದಾ? ನಿಂಗೊಗೆ ಎಲ್ಲವೂ ಸುಲಭಲ್ಲಿ ಆಯೆಕ್ಕು,ಪೇಟೆದೇ ಆಯೆಕ್ಕು” ಹೇಳಿ ದಬಾಯಿಸಿದವು.ಆನು ಬಿಡೆಕ್ಕೇ..?   “ನಿಂಗಳ ತೆಂಗಿನನಾರಿಲಿ ತಿಕ್ಕಿ ನೋಡಿದೆ,ಹೆರ ಪಾತ್ರೆ ತೊಳತ್ತರೆ ಅಕ್ಕು,ಅಡುಗೆ ಮನೆ ಸಿಂಕಿಲಿಡೀ ಅದರದ್ದೇ ಕಸವು ತುಂಬುತ್ತು.ಎನಗೆಡಿಯ ಅದರಲ್ಲಿ ತೊಳವಲೆ.ಒಳ-ಹೆರ ಹೇಳಿ ನಲ್ಪಿ ಸಾಕಾವುತ್ತೆನಗೆ” ಹೇಳಿ ಮುಸುಡು ಬೀಗಿಸಿದೆ.
ಹೊತ್ತೋಪಗ ನೋಡಿರೆ,ಕೈಲಿ ಎರಡು ಬೋಳುಧಾರಳೆ ಒಣಗಿದ್ದರ ಹಿಡ್ಕೊಂಡು ” ಇದಾ,ನಿನಗೆ ಪಾತ್ರ ತೊಳವಲೆ,ಎಷ್ಟು ಬೇಕಾರೂ ತಿಕ್ಕುಲಕ್ಕಿನ್ನು” ಹೇಳಿ ಸಣ್ಣಕೆ ನೆಗೆಮಾಡಿಕೊಂಡು ಕೊಟ್ಟವು.’ ನಿಂಗೊಗೆ ಪೈಸೆ ಒಳುದತ್ತೂಳಿ ಖುಷಿ ಆದಿಕ್ಕು,ಹಾಂಗೆ ನೆಗೆ ಬಪ್ಪದು’. ಹೇಳಿ ಪರಂಚಿಕೊಂಡು ಹೇಂಗಾವುತ್ತು ನೋಡುವ ಹೇಳಿ ಮೆಲ್ಲಂಗೆ ಪಾತ್ರೆ ತಿಕ್ಕುಲೆ ಸುರು ಮಾಡಿದೆ.ಎನ್ನ ಕೈಗೆ ಅದರ ಗಾತ್ರ ಚೂರು ದೊಡ್ಡಾತು ಹೇಳಿ ಅನಿಸಿತ್ತು.ಪೀಶಕತ್ತಿಲಿ ಎರಡುಭಾಗ ಮಾಡಿದೆ.ಮೊದಲು ಚಾಯದ ಪಾತ್ರೆಯ ಮೇಲೆ ಪ್ರಯೋಗ ಆತು.ಆಶ್ಚರ್ಯ!! ಸುಮಾರು ದಿನಂದ ಚಾಯದ ಪಾತ್ರಲ್ಲಿ ಹಿಡ್ಕೊಂಡಿದ್ದ ಕಲೆ ಮಂಗಮಾಯ! ಸ್ಕ್ರಬ್ಬರ್ ಮಾಡದ್ದ ಕೆಲಸವ ಬೋಳುಧಾರಳೆ ಸುಗುಡು ಮಾಡಿತ್ತು. ಕೈಗೂ ಹಿತ ಹೇಳಿ ಅನಿಸಿತ್ತೆನಗೆ.ಒಳುದ್ದರ ತೊಳದಿಕ್ಕಿ ಕೈ ಉದ್ದಿಕೊಂಡು , “ಓಯೀ….ಹೊಳೆಕರೆಲಿ ಇನ್ನೂ ಇದ್ದರೆ ತನ್ನಿ,ಭಾರೀ ಲಾಯ್ಕಾವುತ್ತು ಪಾತ್ರೆತೊಳವಲೆ,ಇದು ಇದ್ದರೆ ಸ್ಕ್ರಬ್ಬರುದೆ ಬೇಡ,ತೆಂಗಿನ ಸುಗುಡುದೆ ಬೇಡ” ಹೇಳಿ ಹೇಳಿದೆ.ಪ್ಲಾಸ್ಟಿಕ್ ರೂಪಲ್ಲಿ ಬಂದ ಸ್ಕ್ರಬ್ಬರಿಂಗೆ ವಿದಾಯ ಹೇಳೆಕ್ಕೂಳಿ ಗ್ರೇಶಿಕೊಂಡು ನಿಸರ್ಗದ ಈ ಉಡುಗೊರೆಗೆ ಧನ್ಯವಾದ ಹೇಳಿದೆ ಮನಸ್ಸಿಲಿಯೆ.
ಅಯ್ಯೋ…..ಇದರಲ್ಲೆಂತ ಇದ್ದು ದೊಡ್ಡ  ಸಂಗತಿ ,ಎಂಗಳಲ್ಲಿಯೂ ಹೀಂಗಿಪ್ಪ ಸಣ್ಣ,ಪುಟ್ಟ ಬದಲಾವಣೆಗಳ ಮಾಡಿಕೊಂಡಿದೆಯ ಹೇಳಿ ಹೇಳ್ತೀರಾ…? ಒಳ್ಳೇದು…ಹಾಂಗೇ ಮುಂದುವರಿಯಲಿ.ಸಣ್ಣ,ಪುಟ್ಟ ಬದಲಾವಣೆಗಳಿಂದಲೇ ಸುರುಮಾಡಿ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕುವ ಆಗದೋ…
ಹಾಂ…ಹೇಳಿದ ಹಾಂಗೆ ಎಂಗಳಲ್ಲಿ ಪ್ರತಿವರ್ಷ ಬಿದ್ದು ಹಾಳಾಗಿ ಹೋಪ ನೊರೆಕ್ಕಾಯಿ ಈಗ ( ಸೋಪ್ ಮುಗುದ್ದು)ಲಾಯಿಕ್ಕಿಲಿ  ಬೋಳು ಧಾರಳೆ ಸ್ಕ್ರಬ್ಬರ್ಸದುಪಯೋಗ ಆವುತ್ತಾ ಇದ್ದು ಹೇಳ್ಳೆ ಹೆಮ್ಮೆ ಆವುತ್ತೆನಗೆ.
ರೂಪಾಪ್ರಸಾದ್ ಕೋಡಿಂಬಳ.
ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)

2 thoughts on “ಸಣ್ಣ ಪುಟ್ಟ ಬದಲಾವಣೆ

  1. ರೂಪಶ್ರೀ ಅಕ್ಕಂಗೆ ಸ್ವಾಗತ . “ಸಣ್ಣಪುಟ್ಟ ಬದಲಾವಣೆ”ಯ ಮೂಲಕ ಬೈಲಿಂಗೆ ಪರಿಚಯ ಆದ್ದದು ತುಂಬಾ ಸಂತೋಷ. ನಿಂಗೊ ಶುದ್ದಿ ಬರೆವ ಶೈಲಿ ಲಾಯಕಿದ್ದು. ನಿಂಗಳ ಲೇಖನಂಗೊ ಬೈಲಿಂಗೆ ಬತ್ತಾ ಇರಲಿ. ಪರಿಚಯ ಮಾಡಿದ ಶರ್ಮಪ್ಪಚ್ಚಿಗೆ ಧನ್ಯವಾದ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×