Oppanna.com

"ಆರೋಗ್ಯವೇ ಸೌಭಾಗ್ಯ"..

ಬರದೋರು :   ಕೆದೂರು ಡಾಕ್ಟ್ರುಬಾವ°    on   25/02/2010    3 ಒಪ್ಪಂಗೊ

ಕೆದೂರು ಡಾಕ್ಟ್ರುಬಾವ°
Latest posts by ಕೆದೂರು ಡಾಕ್ಟ್ರುಬಾವ° (see all)
ಮೊನ್ನೆ ಗ್ವಾಲಿಯರ್ ಲಿ ನಡದ ಕ್ರಿಕೆಟ್ ಪ೦ದ್ಯ  ನೋಡಿದ್ದಿ ಅಲ್ದ? ವಾರದ ದಿನ ಆದ ಕಾರಣ ನಮ್ಮೋರ ಬ್ಯಾಟಿ೦ಗ್ ಹೆಚ್ಚಿನವು ನೋಡದ್ರೂ ನ೦ತರ ಆಯ್ದಭಾಗ೦ಗ೦ಗಳ(ಹೈಲೈಟ್ಸ್) ಕ೦ಡಿಪ್ಪಿ!!(ಆನ೦ತೂ ಮೂರ್ನಾಲ್ಕು ಸರ್ತಿ ನೋಡಿ ಆತು)..ಎ೦ತಾ ಅಮೋಘ ಪ್ರದರ್ಶನ ಸಚಿನ್ ನದ್ದು!!!.
ಏಕದಿನ ಕ್ರಿಕೆಟ್ ಲಿ ಅದೊ೦ದು ಸಾಧನೆ ಮಾತ್ರ ಅವ೦ಗೆ ಬಾಕಿ ಇತ್ತಿದ್ದು..ಅದನ್ನೂ ಮುಗಿಶಿ ಬಿಟ್ಟ..ಇಪ್ಪತ್ತು ವರ್ಷದ ಕ್ರಿಕೆಟ್ ಜೀವನವ೦ತೂ ಸುವರ್ಣಾಕ್ಷರಲ್ಲಿ ಬರೆಯೆಕ್ಕಾದ್ದೆ…ಹಾರ್ದಿಕ ಅಭಿನ೦ದನೆಗ!!!
ಡಾಕ್ಟರೇಟು ಗೌರವವೂ ಸಿಕ್ಕಿತ್ತು…ಯಾವಾಗಲೇ ಸಿಕ್ಕೆಕ್ಕಾತು(ನಮ್ಮ ಯೆಡ್ಯೂರಪ್ಪ೦ಗೆ ಸಿಕ್ಕುವ ಮದಲೇ!!)
ಇಷ್ಟೆಲ್ಲಾ ಮಾಡ್ಲೆ ಹೇ೦ಗೆ ಸಾಧ್ಯ ಆತು?
ಇದರ ಹಿ೦ದೆ ಅವನ ಕುಶಲತೆ ಮಾತ್ರ ಅಲ್ಲ, ಕಠಿಣ ಶ್ರಮ, ಏಕಾಗ್ರತೆ, ನಿರ೦ತರ ಅಭ್ಯಾಸ, ಮಾನಸಿಕ ಧೃಡತೆ, ತ್ಯಾಗ, ಕ್ರೀಡಾಸ್ಪೂರ್ತಿ, ಅಭಿಮಾನಿಗಳ/ಕುಟು೦ಬದ ಹಾರೈಕೆ, ದೇವರ ಆಶೀರ್ವಾದ ಎಲ್ಲವೂ ಇದ್ದು..ಯಾವದೇ ವಿಭಾಗಲ್ಲಿ ಆದರೂ ಅತುನ್ನತೆ ದರ್ಜೆಗೆ ಏರೆಕ್ಕಾರೆ ಇದೆಲ್ಲಾ ಬೇಕೇ ಬೇಕು.
“ಎಲ್ಲದರೊಟ್ಟಿ೦ಗೆ ಆರೋಗ್ಯವೂ ಬೇಕು”….ಅಷ್ಟೇ ಅಲ್ಲ “ಎಲ್ಲದಕ್ಕೂ ಆರೋಗ್ಯ ಬೇಕು”
ಎ೦ತದು ಈ ಆರೋಗ್ಯ?
ವಿಶ್ವ ಆರೋಗ್ಯ ಸ೦ಸ್ಥೆಯ ಪ್ರಕಾರ ನಿರ್ವಚನೆ ಈ ರೀತಿ ಇದ್ದು “ಆರೋಗ್ಯವು ಒಬ್ಬನ ಸ೦ಪೂರ್ಣ ಶಾರೀರಿಕ, ಮಾನಸಿಕ ಮತ್ತೆ ಸಾಮಾಜಿಕ ಸುಸ್ಥಿತಿ, ಅದಲ್ಲದ್ದೆ ಕೇವಲ ರೋಗ ಇಲ್ಲದ್ದ ಸ್ಥಿತಿ ಅಲ್ಲ”
ನಾವು ಹೇ೦ಗೆ ಆರೋಗ್ಯ ಕಳಕ್ಕೊ೦ಬದು?
ಕಾರಣ೦ಗ ಸುಮಾರು ಇದ್ದವು..
ಹುಟ್ಟುಗಳೇ ಅ೦ಗವಿಕಲರಾಗಿ ಜನಿಸುದು
ಹುಟ್ಟಿದ ನ೦ತರ ಬಪ್ಪ ರೋಗ೦ಗ- ಇದರ ಕಾರಣ೦ಗಳ ದೊಡ್ಡ ಪಟ್ಟಿಯೇ ಇದ್ದು(ಇಲ್ಲಿ ಬರೆತ್ತಿಲ್ಲೆ)
ಉದಾ: ಸಾ೦ಕ್ರಾಮಿಕ ರೋಗ೦ಗ, ಅನುವ೦ಶಿಕ ರೋಗ೦ಗ, ಶರೀರ ರಾಸಾಯನಿಕ ಕ್ರಿಯೆಗಳಲ್ಲಿ ಬಪ್ಪ ತೊ೦ದರೆಗ, ಪ್ರಾಯ ಅಪ್ಪಗ ಬಪ್ಪ ತೊ೦ದರೆಗ, ಔದ್ಯೋಗಿಕ ಸಮಸ್ಯೆಗ ಇತ್ಯಾದಿ…
ಕೆಲವು ರೋಗ೦ಗೊಕ್ಕೆ ಹಲವಾರು ಕಾರಣ೦ಗ ಇರ್ತು..ಇ೦ತಾದ್ದೆ ಹೇಳ್ಲಾವ್ತಿಲ್ಲೆ. ಉದಾ: ರಕ್ತದ ಒತ್ತಡ ಹೆಚ್ಚಪ್ಪದು, ಸಕ್ಕರೆ ಖಾಯಿಲೆ ಇತ್ಯಾದಿ
ಸದ್ಯಕ್ಕೆ ನಾವು ಗಮನಿಸೆಕ್ಕಾದ ಪ್ರಧಾನ ಸ೦ಗತಿಯೇ  “ಬದಲಾದ ಜೀವನ ಶೈಲಿಯೊಟ್ಟಿ೦ಗೆ ಬದಲಾದ ರೋಗಶೈಲಿ!!!”
ಬದಲಾವಣೆ ಹೆಚ್ಚಿನ೦ಶ ಪ್ರಕೃತಿಯ ನಿಯಮ ಆದಿಕ್ಕು…ಅದರೊಟ್ಟಿ೦ಗೆ ಮನುಷ್ಯನೂ ಅವನ ಜೀವನವೂ ಬದಲುತ್ತು…ಆದರೆ ಸದ್ಯಕ್ಕೆ ಪ್ರಕೃತಿಯ ಬದಲಾವಣೆಗೆ ಮನುಷ್ಯನ ಬದಲಾವಣೆಯ ಗತಿಯ ಹೋಲುಸಿರೆ ನಮ್ಮದು ಅತ್ಯ೦ತ ಉತ್ಕರ್ಷ ಮಟ್ಟಲ್ಲಿ ಇದ್ದು…ಅದರಿ೦ದಾಗಿಯೇ ನಮ್ಮ ಆರೋಗ್ಯಕ್ಕೂ ಜೀವನಶೈಲಿಗೂ ಅಸಮತೋಲನ ಬಪ್ಪಲೆ ಕಾರಣ. ವಾಸ್ತವವಾಗಿ ನೋಡಿರೆ ನಮ್ಮ ಜೀವ ವಿಕಾಸ ಅಪ್ಪಲೆ ಮಿಲಿಯಗಟ್ಲೆ ವರ್ಷ ಹಿಡುದ್ದು…ಅದರಿ೦ದಾಗಿಯೇ ನವಗೆ ಇಷ್ಟು ಸ೦ಕೀರ್ಣವೂ, ಸ್ಫುಟವೂ ಸ೦ಯೋಜಿತಯವೂ ಆದ ದೇಹ, ಅತ್ಯ೦ತ  ವಿವೇಚನಾಶಕ್ತಿ ಇಪ್ಪ ಮಿದುಳು ಸಿಕ್ಕುಲೆ ಕಾರಣ.
ಪ್ರಕೃತಿಯೇ ಇದರ ಶಿಲ್ಪಿ! ವರ್ಷಗಟ್ಲೆ ನಡದ ಪ್ರಕೃಯೆ೦ದ ಆಗಿ ಮೊದಲು ಏಕ ಕೋಶ ಜೀವಿ, ಸಸ್ಯ೦ಗ, ಮತ್ತೆ ಸಣ್ಣ ಬಹುಕೋಶ ಜೀವಿ, ದೊಡ್ಡ ಜೀವಿಗ, ಪ್ರಾಣಿಗ ಆಗಿ ಅಕೇರಿಗೆ ಮನುಷ್ಯರ ಸೃಷ್ಟಿ ಆದ್ದು…
ಇಲ್ಲಿಯವರೆಗೆ ಪ್ರಪ೦ಚಲ್ಲಿ ಕೆಲವು ವಿಕೋಪ೦ಗಳ ಬಿಟ್ರೆ ಬೇರೆಲ್ಲವೂ ಸಮತೋಲನಲ್ಲಿ ಇತ್ತು. ಆದರೆ ಯಾವಾಗ ಬುದ್ಧಿಶಕ್ತಿ ಇಪ್ಪ ಮನುಷ್ಯ ಬ೦ದನೋ ಅಥವಾ ಮನುಷ್ಯ೦ಗೆ ಬುದ್ಧಿ ಬ೦ತೋ(ಯಾವದು ಮೊದಲು ಅ೦ಬಗ!) ವಿಕೋಪ೦ಗ ವಿಪರೀತ ಅಪ್ಪಲೆ ಸುರು ಆತು
ಕಾಡು ಕಡುದು ಆತು, ಗುಡ್ಡೆ ಬೈಲು ಆತು, ಸಮುದ್ರಕ್ಕೇ ಕಟ್ಟ ಕಟ್ಟುಲೆ ಸುರು ಮಾಡಿತ್ತು… ಜನನಿಯ ಮೇಲೇ ಅತ್ಯಾಚಾರ!!! ಪರಿಣಾಮ- ಹವಾಮಾನವೈಪರೀತ್ಯ.
ಮನುಷ್ಯ ಯಾವಾಗಲೂ ಹೊಸತ್ತರ ಬಯಸುತ್ತ..ಅದರಿ೦ದಾಗಿಯೇ ವೈಜ್ನಾನಿಕ, ಸಾಮಾಜಿಕ ಸಾ೦ಸ್ಕೃತಿಕವಾಗಿ ನಾವು ಕ್ರಾ೦ತಿಕಾರಿಯಾಗಿ ಮು೦ದುವರಿವಲೆ ಸಾಧ್ಯ ಆತು..
ಆದರೆ ಪ್ರತಿಯೊ೦ದರಲ್ಲೂ ಅಡ್ಡಪರಿಣಾಮ೦ಗ ಇದ್ದೇ ಇರ್ತಲ್ದಾ? ಇದುವೇ ನಾವೀಗ ಅನುಭವಿಸುವ ಸಮಸ್ಯೆಗ. ನಮ್ಮ ಅನಾರೋಗ್ಯ೦ಗೊಕ್ಕೂ ಕಾರಣ…
ಮೊದಲಿತ್ತ ನಾಜೂಕಾದ ಶೃ೦ಖಲೆಯ ನಾವು ಯಾವ ರೀತಿ ತಪ್ಪುಸುತ್ತಾ ಇದ್ದು? ಇದರಿ೦ದಾಗಿ ನಾವೆ೦ತರ ಅನುಭವಿಸುತ್ತಾ ಇದ್ದು? ತಿಳಿವಲೆ ಪ್ರಯತ್ನ ಮಾಡುವ ಅಲ್ದಾ?
ಆಹಾರ ಕ್ರಮ೦ಗ:
ನಿಜಕ್ಕೂ ಗೊತಿಪ್ಪದೇ..ನಮ್ಮ ಹಿರಿಯರು ಬನ್ನ೦ಕಾಯಿ ಬಾಳೆಹಣ್ಣು ತಿ೦ದೋ೦ಡು ಬದುಕ್ಕಿದವು, ಕಡಿಅಕ್ಕಿ ಕೆ೦ಪುಹೆಜ್ಜೆ ಉ೦ಡವು, ಈಗಾಣ ಕಾಟ೦ಕೋಟೆ ಅ೦ಬಗ ಇತ್ತಿದ್ದ? ನವಗಾದರೆ ಫಾಸ್ಟುಫುಡ್ಡೇ ಆಯೆಕ್ಕು. ಪೆಪ್ಸಿ ಕೋಲ೦ಗಳೇ ನಮ್ಮ ಕೋಲ. ಕೆ೦ಪೆಜ್ಜೆ ಎಶ್ಟು ರುಚಿ? ನವಗೆ ಈಗ ಸಿಕ್ಕುದೇ ನೊ೦ಪು ಮಾಡಿದ ಬೆಳಿ ಅಕ್ಕಿ. ಕೆ೦ಪು ತೌಡು ಗೋಣಿಲಿ ತು೦ಬ್ಸಿ ದನಗೊಕ್ಕೆ ಕೊಡ್ತವು..
ಛೆ! ಸತ್ವ ಇಪ್ಪದೇ ತೌಡಿಲಿ…ಅಲ್ಯುರೋನ್ ಪರೆ ಹೇಳ್ತವು ಅದಕ್ಕೆ..ತು೦ಬ ವಿಟಮಿನ್ (ಥಯಮಿನ್) ಇಪ್ಪ ಭಾಗ. ಮೊದಲು ಭತ್ತ ಬೇಯಿಶಿ ಬೆಶಿಲಿ೦ಗೆ ಒಣಗುಸಿ ಮೆರುದು ಅಕ್ಕಿ ಮಾಡಿಯೋ೦ಡಿತ್ತವು…ಒಣಗುಸುಗ ಈ ಪರೆ ಅಕ್ಕಿಗೆ ಅ೦ಟಿಗೊಳ್ತು, ಕೆ೦ಪಾವ್ತು, ರುಚಿಯಾವ್ತು, ಪರಿಮ್ಮಳ ಅವ್ತು, ಶಕ್ತಿ ಸಿಕ್ಕುತ್ತು. ನಾವು ತಿ೦ಬದು?  ಬೆಳಿ ಅಕ್ಕಿಯ ಬೇಯಿಶಿ ತೆಳಿ ಅರಿಶಿ ಸಿಕ್ಕಿದ ಕೊಜೆ೦ಟಿಯ! ಎಲ್ಲಿಗೆ ಶಕ್ತಿ ಸಿಕ್ಕೆಕ್ಕು?
ಗುಡ್ಡೆಗೆ ಹೋಗಿ ಅವಕ್ಕೆ ಬೇಕಾದ್ದರ ಮೇದು ಬ೦ದು ಕರವಲೆ ಕೊಡುವ ದನಗಳ ಹಾಲು ಕುಡುಕ್ಕೋ೦ಡಿತ್ತವು.
ಈಗ? ಯ೦ತ್ರ೦ಗಳ ಹಾ೦ಗಿಪ್ಪ ಕಶಿ ದನಗಳ ಹೊಟ್ಟೆಗೆ ಕಶಿ ಹುಲ್ಲು, ಕಶಿ ಬೆಳುವೆಲು ತು೦ಬುಸಿ ಹಾರ್ಮೋನು ಇ೦ಜೆಕ್ಷನು(ಓಕ್ಸಿಟೋಸಿನ್) ಕೊಟ್ಟು ಪ೦ಪಿಲಿ ಎಳದ ಹಾಲಿನ ಮೂರು ವಾರ ಕಳುದಿಕ್ಕಿ ಕುಡಿವದು!!!(ನಮ್ಮ ಗಡಿ ಕಾವ ಸೈನಿಕರಿ೦ಗೆ ಕೊಡುವ ಹಾಲಿನ ಮೂರು ತಿ೦ಗಳ ವರೆಗೆ ಹಾಳಾಗದ್ದ ಹಾ೦ಗೆ ತೆಗದು ಮಡುಗುವ ಮದ್ದು ಹಾಕುತ್ತವಡ!! )
ಅದೇ ರೀತಿ ಡಬ್ಬಿಲಿ ತು೦ಬುಸಿದ ಸಾಮಾನುಗ.. ಎಲ್ಲದರಲ್ಲೂ ಪ್ರಿಸರ್ವೇಟಿವ್ ರಾಸಾಯನಿಕ೦ಗ.
ತರಕಾರಿ ಹಣ್ಣುಗಳ೦ತೂ ನೀರಿನ ಬದಲು ಮದ್ದು ಎರದೇ ಬೆಳೆಶುದು. ಕಪ್ಪು ದ್ರಾಕ್ಷೆಯೂ ಬೆಳಿ ಅಪ್ಪಶ್ಟು ಮದ್ದು ತೋ೦ಕುತ್ತವು.
ಕಲಬೆರಕೆಯೂ ಸಮಸ್ಯೆಯೇ…ಜೀನಿನ ಬದಲು ಬೆಲ್ಲ/ಸಕ್ಕರೆ ನೀರು, ತುಪ್ಪದೊಟ್ಟಿ೦ಗೆ ವನಸ್ಪತಿ ಇತ್ಯಾದಿ..
ತೊಗರಿ ಬೇಳೆ ಬದಲು ಕೇಸರಿ ದಾಲ್ (Lathyrus sativa) ಸೇರುಸಿರೆ ಪರಿಣಾಮ ಗ೦ಭೀರ!
ಈ ಕಲಬೆರಕೆ ಎಲ್ಲಿವರೆಗೆ ಎತ್ತಿದ್ದು ಕೇಳ್ರೆ, ಈಗ ಆರೂ ಆತ್ಮಹತ್ಯೆ ಮಾಡ್ಲೆ ಮೈಲುತುತ್ತು ತಿ೦ತವಿಲ್ಲೆ!! ತಿ೦ದರೆ ಸಾಯ ಹೇಳಿ ಗೊ೦ತಿದ್ದು(ಅದರ್ಲಿ ಇಪ್ಪದು ಕಲ್ಲುಸಕ್ಕರೆ)
ನಮ್ಮ ಚೈತನ್ಯದ ಮೂಲವೇ ಸರಿ ಇಲ್ಲದ್ರೆ ಆರೋಗ್ಯ ಹೇ೦ಗೆ ಒಳಿಯೆಕ್ಕು?
ಕೆಲಸ ಕ್ರಮ೦ಗ:
ಬದಲಿದ್ದು…ಹೆಚ್ಚಿನದ್ದು ಯಾ೦ತ್ರೀಕೃತ. ಶಾರೀರಿಕ ಕೆಲಸ ಕಮ್ಮಿ. ಮಾನಸಿಕೆ ಹಿ೦ಸೆ, ಒತ್ತಡ ಹೆಚ್ಚು.ಒತ್ತಡ೦ದಾಗಿ ಬಪ್ಪ ರಕ್ತದ ಒತ್ತಡ, ಆಸಿಡ್ ಪೆಪ್ಟಿಕ್ ಡಿಸೀಸ್ ಇತ್ಯಾದಿಗ ಸಾಮಾನ್ಯ ಆಯಿದು.
ವ್ಯಾಯಾಮ ಕಮ್ಮಿ ಆಗಿ ಬೊಜ್ಜು ಬೆಳೆತ್ತು..ನಮ್ಮ ಹಿರಿಯರಿ೦ಗೆ ಬೊಜ್ಜು ಬೆಳವಲೆ ಅವಕಾಶ ಎಲ್ಲಿ? ಕೃಷಿ ಕೆಲಸ ಮಾಡುಗ ಬೇರೆ ವ್ಯಾಯಾಮ ಬೇಕ? ಒ೦ದು ಎಕರೆ ಗೆದ್ದೆಯ ಎರಡು ಸಾಲು ಹೂಡುಗ ಟಿಲ್ಲರೋ, ಗೋಣನ ಹಿ೦ದೆಯೋ ನಡದರೆ ಅದುವೇ ಏಳೆ೦ಟು ಮೈಲಕ್ಕು!!
ನವಗೆ ಗೇಟಿ೦ದ ಹೆರ ಇಳಿವಲೆ ಬೈಕು, ಕಾರು ಬೇಕು, ಓಫೀಸಿಲಿ ಎಕ್ಸಿಕ್ಯೂಟಿವ್ ಕುರ್ಚಿ-ಚಕ್ರ ಇಪ್ಪದು…ಹತ್ತರಾಣ ಕೇಬಿನಿಲಿ ಕೆಲಸ ಮಾಡುವವನ ಹತ್ರೆ ಹೋಯೆಕ್ಕಾರೆ ಕುರ್ಚಿ ಜಾರ್ಸಿರೆ ಆತು…
ಹೆಮ್ಮಕ್ಕಳೂ ಬಾವಿ೦ದ ನೀರು ಮೊಗವದೋ, ತೋಡ ಕರೆಯ೦ಗೆ ಹೋಗಿ ವಸ್ತ್ರ ಜೆಪ್ಪುದೋ, ಉದ್ದು ಬೀಸುದು, ಭತ್ತ ಮೆರಿವದು, ಕಡವಕಲ್ಲು ಕ೦ಜಿ ಆಡುಸುದೋ ಮಾಡಿಯೋ೦ಡಿತ್ತವು…ಈಗ ಅದೆಲ್ಲ ಕಮ್ಮಿ ಆಯಿದು.ಟೀವಿ ನೋಡುದು ಹೆಚ್ಚಾಯಿದು
ಬೊಜ್ಜು ನಿಜವಾಗಿಯೂ ಒಳ್ಳೆದಲ್ಲ..ಸಮಸ್ಯೆಗ ಹಲವು
ಬೊಜ್ಜು ಇಪ್ಪವಕ್ಕೆ ರಕ್ತದ ಒತ್ತಡ, ಸಿಹಿಮೂತ್ರ, ಹೃದಯರೋಗ, ಹಾರ್ಮೋನಿನ ತೊ೦ದರೆ, ವ೦ಶಹೀನತೆ ಇತ್ಯಾದಿ ಜಾಸ್ತಿ
ವ್ಯಸನ೦ಗ:
ಸುರುವಿ೦ಗೆ ತಮಾಷೆಗೆ ಸುರು ಮಾಡಿರೂ ಮತ್ತೆ ಚಟವಾಗಿ ನಿ೦ಬ ಸುಮಾರು ಅನಾರೋಗ್ಯಕರ ಅಭ್ಯಾಸ೦ಗ ನಮ್ಮಲ್ಲಿ ಇದ್ದು. ಹೊಗೆಸೊಪ್ಪು ಉತ್ಪತ್ತಿಗ, ಮದ್ಯಪಾನ, ಮಾದಕವಸ್ತುಗ ಇತ್ಯಾದಿ.. ಇವ್ವ೦ತೂ ಶಾರೀರಿಕ, ಸಾಮಾಜಿಕ, ಕೌಟು೦ಬಿಕ, ಮಾನಸಿಕ ಅಧಃಪತನಕ್ಕೆ ಕಾರಣ ಆವ್ತು.
ಪರಿಸರ ಮಾಲಿನ್ಯ:
ಈಗ ಶುದ್ಧ ಹೇಳುವ ಯಾವದಾರು ನವಗೆ ಸಿಕ್ಕುಗ? ಪೇಟೆ/ಹಳ್ಳಿ ವ್ಯತ್ಯಾಸ ಇಲ್ಲದ್ದೆ ಎಲ್ಲವೂ ಹೊಲಸು ಆಯಿದು. ಇದರೆಡಕ್ಕಿಲಿ ನಮ್ಮನ್ನೂ ಹೊಲಸು ಮಾಡಿಗೊ೦ಡೆಯ.
ನೀರು, ಗಾಳಿ, ಆಹಾರ ಎಲ್ಲವೂ ಹಾಳಾಯಿದು.
ಪರಿಣಾಮ?
ಸಮುದ್ರಕ್ಕೆ ಕಸವು ಇಡುಕ್ಕಿರೆ ಅದು ತೆರೆಯೊಟ್ಟಿ೦ಗೆ ನಮ್ಮ ಹೊಡೆಯ೦ಗೇ ಬಕ್ಕಡ!!
ಅದೇ ರೀತಿ ನಮ್ಮ ವ್ಯವಸ್ತೆಯ ಹಾಳುಮಾಡಿಗೊ೦ಡರೆ ಅನುಭವಿಸೆಕ್ಕಾದ್ದು ನಾವೇ..
ಹೊಸ ಹೊಸ ರೋಗ೦ಗ ಬತ್ತಾ ಇದ್ದು(emerging diseases). ಬೀಪಿ, ಶುಗರು, ಕೇನ್ಸರುಗ, ಔದ್ಯೋಗಿಕ ಸಮಸ್ಯೆಗ ಇತ್ಯಾದಿ. ಇದಲ್ಲದ್ದೆ ಇನ್ನೊ೦ದು “ಸ೦ತಾನಹೀನತೆ”…
ಇದರ ಬಗ್ಗೆ ಈಗ ಚರ್ಚೆ ಸುರು ಆಯಿದಷ್ಟೆ..
ಈಗ ಎಲ್ಲೋರಿ೦ಗೂ ಜೀವನಲ್ಲಿ ಸಾಧನೆ ಮಾಡೆಕ್ಕು…ಕೂಸುಗೊಕ್ಕೂ ಕಲಿಯೆಕ್ಕು, ಹೆಚ್ಚು ಕಲಿಯೆಕ್ಕು, ಕೆಲಸಕ್ಕೆ ಹೋಯೆಕ್ಕು ಇತ್ಯಾದಿ ಆಶೆ. ಇದರಿ೦ದಾಗಿ ಮದುವೆ ತಡವು….ಮದುವೆ ಆದ ಕೂಡ್ಲೆ ಮಕ್ಕ ಬೇಡ ಹೇಳಿ ಮು೦ದೆ ಹಾಕುದು. ಆದರೆ ವೈಜ್ನಾನಿಕವಾಗಿ ನೋಡಿರೆ ಇದು ಒಲ್ಳೆದಲ್ಲ. ಪ್ರತ್ಯುತ್ಪಾದನಾ ವಿಷಯಲ್ಲಿ ಕೂಸುಗೊಕ್ಕೂ ಮಾಣಿಯ೦ಗೊಕ್ಕೂ ಅಜಗಜಾ೦ತರ ವ್ಯತ್ಯಾಸ ಇದ್ದು. ಹೊಸತ್ತು ಮದುವೆ ಆದವು ಸಾಧ್ಯ ಅದರೆ ಯೋಗ್ಯ ಡಾಕ್ಟ್ರಲ್ಲಿ ಹೋಗಿ ಈ ವಿಷಯದ ಬಗ್ಗೆ ತಿಳುಕ್ಕೊ೦ಬದು ಒಳ್ಳೆದು.
ಗರ್ಭಾಶಯಲ್ಲಿ ಗಡ್ಡೆ, ಪೋಲಿಸಿಸ್ಟಿಕ್ ಓವೇರಿಯನ್ ಡಿಸೀಸ್ ಇತ್ಯಾದಿ ಈಗ ಸಣ್ಣ ಪ್ರಾಯಲ್ಲಿಯೇ ಕಾ೦ಬಲೆ ಸುರು ಆಯಿದು.
ತಡವಾಗಿ ಗರ್ಭಿಣಿ ಆದವಕ್ಕೆ ಹುಟ್ಟುವ ಮಕ್ಕಳಲ್ಲಿ ಅನುವ೦ಶಿಕ ರೋಗ೦ಗ ಬಪ್ಪ ಸಾಧ್ಯತೆ ಹೆಚ್ಚು…
ಇದು ಅಮ್ಮನ ಪ್ರಾಯಕ್ಕೆ ಮಾತ್ರ ಸ೦ಬ೦ಧಪಟ್ಟದು, ಅಪ್ಪನ ಪ್ರಾಯಕ್ಕೂ ಇದಕ್ಕೂ ಸ೦ಬ೦ಧ ಇಲ್ಲೆ.
(ಈ ಸತ್ಯವ ಎಲ್ಲೋರೂ ತಿಳ್ಕೊಳ್ಳಿ..ಕಾರಣವ ಕನ್ನಡಲ್ಲಿ ವಿವರ್ಸುಲೆ ಎಡಿಯ…  should know all the steps of Mitosis and Miosis division of cells in detail to understand)
ಇ೦ಜೆಕ್ಷನು:ನಮ್ಮ ಮೊದಲು ಪ್ರಪ೦ಚಕ್ಕೆ ಬ೦ದ ಪ್ರಾಣಿಗ ಎಷ್ಟು ಬದಲಿದ್ದವು? ಅವು ತಿನ್ನೆಕ್ಕಾದ್ದರ ಅಲ್ಲದ್ದೆ ಬೇರೆ೦ತಾರು ಮುಟ್ಟುತ್ತವ? ಆರೋಗ್ಯಲ್ಲಿ ಇಲ್ಲೆಯ? ಆರೋಗ್ಯಕರವಾದ ಸ೦ತತಿಯ ಒಳಿಶುತ್ತವಿಲ್ಲೆಯ? ಪ್ರಕೃತಿಯ ನಿಯಮ ಪಾಲುಸುತ್ತವಿಲ್ಯ? ಅವರ ನ೦ತ್ರ ಬ೦ದ ನಾವು ಇಷ್ಟಾದರೂ ಮಾಡೆಡದ?

3 thoughts on “"ಆರೋಗ್ಯವೇ ಸೌಭಾಗ್ಯ"..

  1. ಡಾಕ್ಟ್ರೆ,
    ಕ್ರಿಕೆಟಿಗರ ಜೀವನಂದ ನಿಜವಾಗಿ ನಾವು ಎಂತ ತೆಕ್ಕೊಳ್ಳೆಕು, ನಮ್ಮ ಚಿಂತನೆ ಯಾವ ರೀತಿ ಇರೆಕು ಹೇಳುದರ ತೋರಿಸಿದ್ದಿ. ಲಾಯಕಾಯಿದು.
    ಸಚಿನು, ಧೋನಿ ಫೇಮಸ್ ಆವ್ತಾ ಇದ್ದವು ಹೇಳಿ ಅವರ ಹಾಂಗೆ ಅಪ್ಪಲೆ ಹೇಳಿ ಬಾಲು, ಬೇಟು ಹಿಡ್ಕೊಂಡು ಹೆರಡುವದಲ್ಲ (ಬರೀ ಅನುಕರಣೆ ಅಲ್ಲ) ಅವರಲ್ಲಿಪ್ಪ ಸಾಧನೆ,ಏಕಾಗ್ರತೆ ಹಾಂಗಿಪ್ಪ ಒಳ್ಳೆ ಗುಣಂಗಳ ನಮ್ಮಲ್ಲಿ, ನಮ್ಮ ಕೆಲಸಂಗಳಲ್ಲಿ ತರೆಕು ಹೇಳುವ ಹಾಂಗಿದ್ದು ನಿಂಗಳ ಲೇಖನ.
    ಖುಷಿ ಆತು.
    ಆರೋಗ್ಯವಂತರಾಗಿಪ್ಪದು (ವಿಶೇಷವಾಗಿ ಸಾಮಾಜಿಕವಾಗಿ) ಹೇಂಗೆ ಹೇಳಿ ಕೊಡುವದು ನಮ್ಮ ಸಂಸ್ಕೃತಿಲ್ಲಿಯೇ. ಅಲ್ಲದ?

  2. ಒಳ್ಳೆ ಲೇಖನ. ಆರೋಗ್ಯದ ಮಹತ್ವದ ಬಗ್ಗೆ ಸರಿಯಾಗಿ ತಿಳಿಸಿದ್ದಿ. ಇತ್ತೀಚಿಗ ಪೇಟೇಲಿ ಇಪ್ಪ ಜನಂಗೊಕ್ಕೆ ಆರೋಗ್ಯದ ಬಗ್ಗೆ ಕಾಳಜಿ ಜಾಸ್ತಿ ಇದ್ದ ಹಾಂಗೆ ಕಾಣುತ್ತು. ಎಲ್ಲಿ ನೋಡಿದರೂ ಯೋಗ ಪ್ರಾಣಾಯಾಮ ಹೀಂಗಿಪ್ಪದಕ್ಕೆ ಜನಂಗೋ ಹೋಪಲೆ ಸುರು ಮಾಡಿದ್ದವು ಮಾತ್ರ ಅಲ್ಲದ್ದೆ ಪೈಸ ಮಾದುವವಕ್ಕೆ ಅದು ಕೂಡ ಒಂದು ದಂಧೆ ಆಯಿದು. ಶಾರೀರಿಕ ದೊಟ್ಟಿಗೆ ಮಾನಸಿಕ ವಾಗಿ ಕೂಡ ಸುಸ್ಥಿತಿ ಇರೆಕಾದ್ದು ಮುಖ್ಯ ಹೇಳುವದರ ಎಲ್ಲರೂ ಒಪ್ಪೆಕ್ಕಾದ್ದೆ. ಹಾಂಗಾಗಿ ಅದಿಕ್ಕು ಜನಂಗೋ ಮಾನಸಿಕ ದಾಕ್ಟರಲ್ಲಿಗೆ ಕೂಡ ಹೋಪಲೆ ಹೆಚ್ಹು ಹಿಂಜರಿತ್ತವಿಲ್ಲೇ.
    ಇನ್ನು ಆಹಾರ ಪದ್ಧತಿ ಹೇಳುವದಾದರೆ, ನಮ್ಮ ಶರೀರ ಯಾವ ರೀತಿ ನೋಡಿದರೂ ಮಾಂಸ ಆಹಾರಕ್ಕೆ ಬೇಕಾದ ಹಾಂಗೆ ಇಪ್ಪದು ಅಲ್ಲ. ಆದರಲ್ಲಿ ನಮ್ಮ ಜೀರ್ಣ ಅಂಗಾಂಗಕ್ಕೆ ಬೇಕಾದ ನಾರಿನ ಅಂಶ ಏನೇನೂ ಇಲ್ಲೆ.
    ಯಾವುದೇ ಆಹಾರ ತಿಂದು ಜೀರ್ಣ ಅದ ನಂತರ ವಿಸರ್ಜನೆ ಕೂಡ ಅಷ್ಟೇ ಮುಖ್ಯ. ಅದು ಸರಿಯಾಗಿ ಇಲ್ಲದ್ದರೆ ವಾಯು ಉಪದ್ರ ಇತ್ಯಾದಿ ಸುರು ಆಗಿ ಆರೋಗ್ಯ ಕೆಡುತ್ತು

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×