- ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ? - September 28, 2017
- ನೆಗೆ ಚಿತ್ರಂಗೊ - September 19, 2015
- ಹಸುರು ದಿನಿಗಿತ್ತೆನ್ನ ಮತ್ತೊಂದರಿ - July 13, 2015
(ಈ ಕತೆಲಿ ಬಪ್ಪ ಎಲ್ಲ ವ್ಯಕ್ತಿಗಳುದೇ, ಸ್ಥಳ, ಘಟನೆಗಳುದೇ ಕೇವಲ ಕಾಲ್ಪನಿಕ, ಯಾವದೇ ವ್ಯಕ್ತಿ ಅತವಾ ಘಟನೆಗೆ ಸಾಜ ಕಂಡತ್ತು ಹೇಳಿ ಆದರೆ ಅದು ಕೇವಲ ಕಾಕತಾಳೀಯ. ಈ ಕತೆ ಐವತ್ತು ವರ್ಷದ ಮೊದಲು ನಡದ್ದು ಹೇಳಿ ತಿಳ್ಕೊಳ್ಳೆಕ್ಕು.)
————————————————————————————————-
ಇಲ್ಯಾಣವರೇಗೆ…..
ಕೊರಳಿಲಿ ರುದ್ರಾಕ್ಷಿಯ ದಪ್ಪದ ಎರಡೆಳೆಯ ಮಾಲೆ. ಪೋಳೆ ಕಣ್ಣು…. ಹಣೆಗೆ ಭಸ್ಮ ಹಾಕಿದ ಗುರ್ತ ಇದ್ದು…
ಮುಂದೆ ಓದಿ…..
——————————————————————————————-
ಮಾರ್ನೇ ದಿನ ಸಬ್ಬಿನಿಸ್ಪೇಟನ ಮನೆಲಿ ಒಳಾಣ ರೂಮಿಲಿ ಸಬ್ಬಿನಿಸ್ಪೇಟ ಮರಿಯಪ್ಪಂದೆ ಹೆಡ್ಡು ಕನಿಷ್ಟಬಿಲ್ಲೆ ಕಿಷ್ಣಪ್ಪಂದೆ ಮೇಜಿನ ಎದುರು ಕೂಯಿದವು. ಎದುರು ಮೇಜಿನ ಮೇಲೆ ಒಂದು ವಸ್ತ್ರ ಹಾಸಿದ್ದು. ಅದರ ಮೇಲೆ ಮಡಿಕ್ಕೊಂಡಿಪ್ಪ ವಸ್ತುಗಳ ಲೆಕ್ಕ ತೆಗದು ಆಯಿದು.
ಎಂತ ಇದ್ದು?
ಎಂಕಣ್ಣಂದ ವಸೂಲು ಮಾಡಿದ ಪೈಸೆ.
ಲಿಂಗಪ್ಪನ ಹೆದರಿಸಿ ಕಿಷ್ಣಪ್ಪ ವಸೂಲು ಮಾಡಿದ್ದು ಎಪ್ಪತ್ತೈದು ರೂಪಾಯಿ. ಕಿಷ್ಣಪ್ಪ ಲಿಂಗಪ್ಪನ ಸರೀ ಹೆದರಿಸಿದ್ದು. ಕಡೆಂಗೆ ಜೈಲಿಂಗೆ ಹೋಗದ್ದೆ ಒಳಿಯೆಕ್ಕಾರೆ ಅಷ್ಟಾದರೂ ಕೊಡೆಕ್ಕೇ ಹೇಳಿದ್ದಕ್ಕೆ ಲಿಂಗಪ್ಪ° ಮನೆಲಿ ಪರಡಿ ಪರಡೀ ಇತ್ತ ಪೈಸೆಯ ಎಲ್ಲ ಒಟ್ಟು ಹಾಕಿ, ಹೆಂಡತ್ತಿ ಆಪತ್ತಿಂಗೆ ಇರ್ಲಿ ಹೇಳಿ ತೆಗದು ಮಡುಗಿದ್ದು ಸೇರ್ಸಿ ಒಟ್ಟಾದ್ದು ಎಪ್ಪತ್ತೈದು ರೂಪಾಯಿ.
ಅದ್ರಾಮನ ಮನೆಲಿ ಜಾಸ್ತಿ ಸಿಕ್ಕಿದ್ದಿಲ್ಲೆ. ಮೂವತ್ತು ರೂಪಾಯಿ ಮಾತ್ರ ಸಿಕ್ಕಿದ್ದು.
ತ್ಯಾಂಪನ ಮಕ್ಕಳ ಟೇಶನಿಂಗೆ ಬಪ್ಪಲೆ ಹೇಳಿ ಅವರ ಸರೀ ಹೆದರ್ಸಿದ್ದು ಸಬ್ಬಿನಿಸ್ಪೇಟ°. ಕಡೇಂಗೆ ಅವರ ಕೈಲಿ ನೂರೈವತ್ತು ರೂಪಾಯಿ ಕಕ್ಕಿಸಿದ್ದು. ಅವು ಕಡೇಂಗೆ ತ್ಯಾಂಪನ ಬೈಕ್ಕೊಂಡೇ ಹೋದ್ದು ಮನೆಗೆ. ಇನ್ನು ತ್ಯಾಂಪನ ಬೊಜ್ಜವನ್ನಾದರೂ ಮಾಡ್ತವೋ ಇಲ್ಲೆಯೋ… ಅದು ಮನೆಲಿ ಸರೀ ಇರ್ತಿದ್ದರೇ ಹೀಂಗೆ ಬಿದ್ದು ಸಾವಲೆ ಇತ್ತಾ? ಈ ಸಬ್ಬಿನಿಸ್ಪೇಟಂಗೆ ಹೀಂಗೆ ಪೈಶೆ ಕಕ್ಕುಲೆ ಇತ್ತಾ?
“ಆಯೆಗುಲಾ, ಎಂಕ್ಳೆಗ್ಲಾ ನನ ವಾ ಸಂಬೊಂದ ಇಜ್ಜಿ” ಹೇಳಿ ನಿರ್ಧಾರ ಮಾಡಿದ್ದವು.
ಇನ್ನೆಂತ ಇದ್ದು?
ಚಿನ್ನದ ಬಳೆಗ ಆರು. ಒಂದೊಂದು ಬಳೆಗಳುದೆ ಒಂದೂವರೆ ಪವನು ಇಕ್ಕು. ಚಿನ್ನದ ಉಂಗಿಲಂಗ ಎರಡು , ಸಾದಾರಣ ಅರ್ಧರ್ಧ ಪವನು ಇಕ್ಕು. ಬೆಳ್ಳಿಯ ಕಾಲುಗೆಜ್ಜೆ ಮೂರು ಜೆತೆ. ಅರ್ಧರ್ಧ ಪವನಿನ ಕೆಮಿಗೆ ಹಾಕುವ ಜುಮ್ಕಿ ಎರಡು ಜೆತೆ. ಎರಡು ಚೈನುಗ, ಒಂದೊಂದು ಚೈನುದೆ ಕಮ್ಮಿಲಿ ಮೂರು ಪವನು ಗೇರಂಟಿ.
ಇದೆಲ್ಲಿಂದ ಸಿಕ್ಕಿತ್ತು ಈ ಸಬ್ಬಿನಿಸ್ಪೇಟಂಗುದೆ ಕಿಷ್ಣಪ್ಪಂಗುದೆ? ತ್ಯಾಂಪ ಸೆಟ್ಟಿಯ ಅ ಚಡ್ಡಿ ಕಿಸೆಲಿ.
ಆ ತ್ಯಾಂಪ ಸೆಟ್ಟಿ ಇದ್ದಲ್ಲ… ಮಹಾ ಕದೀಮ… ಹೆಂಡತ್ತಿ ಸತ್ತ ಕೂಡ್ಳೆ ಅದರ ಮನೆಲಿ ಜಗಳ ಸುರು ಆಗಿತ್ತು ಹೇಳುದು ನೆಂಪಿದ್ದಲ್ಲದಾ? ಎಂತಕೆ ಜಗಳ ಸುರು ಆದ್ದು? ಚಿನ್ನ ಕಾಣೆ ಆಯಿದು ಹೇಳಿ. ಆ ಚಿನ್ನ ಎಲ್ಲ ಎಲ್ಲಿ ಹೋತು? ಅದರ ಈ ತ್ಯಾಂಪನೆ ತೆಗದು ಮಡುಗಿದ್ದು. ಬೇರೆ ಎಲ್ಲಿಯಾದರೂ ಮಡುಗಿದರೆ ಆರಾದರೂ ಕದ್ದರೆ ? ಅದಕ್ಕೆ ಎಲ್ಲ ಚಿನ್ನವನ್ನುದೇ ಇದು ತೆಗದು ಅದರ ಚಡ್ಡಿ ಕಿಸೆಲಿಯೇ ತುಂಬುಸಿಗೊಂಡು ಇತ್ತಿದ್ದು. ಆರಾದ್ರು ಹತ್ತರೆ ಬಂದು ಗುಟ್ಟು ರಟ್ಟಾದರೆ? ಅದಕ್ಕೆ ಗಿರ್ಮಿಟ್ಟು ಹಿಡುದೋರ ಹಾಂಗೆ ಮಾಡಿಕೊಂಡು ಇತ್ತಿದ್ದು. ಕಳ್ಳಂಗೊಕ್ಕೆ ಸಿಕ್ಕುಲಾಗ ಹೇಳಿ ಪಳಿಕ್ಕೆಲಿಯೇ ಇಪ್ಪಲೆ ಸುರು ಮಾಡಿದ್ದು. ಪಳಿಕ್ಕೆಗೆ ಆರು ಕಳ್ಳಂಗ ಬತ್ತವಿಲ್ಲೆ ಅಲ್ಲದಾ?. ಹಾಂಗಿಪ್ಪ ಕೆಣಿಯ ಅದು…
ಗುರ್ಮೆಲಿ ಇಳುದ ಮತ್ತೆ ಕಿಷ್ಣಪ್ಪ ಸಬ್ಬಿನಿಸ್ಪೇಟನೇ ಇಳಿಯೆಕ್ಕು ಹೇಳಿ ದಿನಿಗಿದ್ದು ನೆನಪ್ಪಿದ್ದಾ? ತ್ಯಾಂಪನ ಚಡ್ಡಿ ಕಿಸೆಲಿ ಎಂತಾರೂ ಇದ್ದಾ ಹೇಳಿ ಕಿಷ್ಣಪ್ಪ° ಗುರ್ಮೆಲಿಯೇ ಹುಡುಕ್ಕಿದ್ದು. ಅದರ ನೋಡಿ ಅಪ್ಪಗ ಅಲ್ಲಿ ಈ ಚಿನ್ನ ಎಲ್ಲ ಕಟ್ಟಿ ಮಡಿಕ್ಕೊಂಡು ಇತ್ತಿದ್ದು ಅದಕ್ಕೆ ಗೊಂತಾತು. ಈ ಚಿನ್ನವ ಒಳ ಹಾಕುವ ಅಂದಾಜಿಲಿಯೇ ಸಬ್ಬಿನಿಸ್ಪೇಟನ ಕೆಳ ದಿನಿಗಿದ್ದು. ಇಂತಾ ಒಳ ಗುಟ್ಟುಗ ಗೊಂತಿದ್ದೇ ಗುರ್ಮೆಗೆ ಸಬ್ಬಿನಿಸ್ಪೇಟ ಒಂದೇ. ಇಳುದ್ದು. ಅದುದೆ ಕಿಷ್ಣಪ್ಪಂದೇ ತ್ಯಾಂಪಸೆಟ್ಟಿಯ ಹೆಣವ ಪೂರಾ ಹುಡ್ಕಿ ಅಪ್ಪಗ ಅದರ ಕಿಸೆಲಿ ಈ ಚಿನ್ನ ಎಲ್ಲ ಸಿಕ್ಕಿದ್ದು. ಅದರ ಪೂರ ತೆಗದು ಇವ್ವೇ ಕಿಸೆಯೊಳ ತುಂಬುಸಿಗೊಂಡಿದವು.
ಪಂಚನಾಮೆ ಬರವಗ ಆರುದೇ ಇಂತಾದ್ದೊಂದು ಇಕ್ಕು ಹೇಳಿಯೇ ಗ್ರೇಶಿದ್ದವಿಲ್ಲೆ ಹಾಂಗಾಗಿ ಇವು ಸುದ್ದಿ ಬಿಟ್ಟಿದವಿಲ್ಲೆ.
ಈಗ ಅದರ ಪಾಲು ಮಾಡಿ ಹಂಚಿಗೊಂಬಲೆ ಹೇಳಿ ಕೂದ್ದು. ಪಾಲಿನ ಲೆಕ್ಕಾಚಾರಂಗ ಇದ್ದು ಅವಕ್ಕೆ, ಆರಾರಿಂಗೆ ಎಷ್ಟೆಷ್ಟು ಹೇಳಿ. ಡಾಟ್ರಂಗುದೆ ಒಂದು ಪಾಲು ಇದ್ದು. ಹೊರುದ ಮೀನಿನ ಕಟ್ಟು ಒಂದು ಡಾಟ್ರಂಗೆ ನಿನ್ನೆಯೇ ಸಿಕ್ಕಿದ್ದು. ಚಿನ್ನಲ್ಲಿ, ಪೈಶೆಲಿ ಪಾಲು ಇನ್ನು ತಲುಪುತ್ತು. ಒಳಂದೊಳ ಅವ್ವೆಲ್ಲಾ ಒಂದೇ.
————————————————————————————————————–
” ಓ ಜೋಯಿಷರು ಬನ್ನಿ… ಬನ್ನಿ…” ಎಂಕಣ್ಣ ಹೇಳಿದ°.
ಬಂದದು ಬುರ್ಡೆ ಜೋಯಿಷರು. ಎಂತಕ್ಕಾದರೂ ದಿನ ನೋಡ್ತರೆ, ಬೇರೆ ಎಂತಾರೂ ಜಾತಕ ಗೀತಕ ನೊಡ್ಸೆಕ್ಕಾರೆ ಈ ಜೋಯಿಷರ ಹತ್ತರೆಯೇ ಎಂಕಣ್ಣ ಹೋಪದು. ಬುರ್ಡೆ ಹೇಳ್ತ ಊರಿಲಿ ಅವರ ಮೂಲ ಮನೆ ಇತ್ತದಾದ ಕಾರಣ ಇವರ ಬುರ್ಡೆ ಜೋಯಿಷರು ಹೇಳಿಯೇ ಎಲ್ಲೋರುದೆ ದಿನಿಗುದು. ಇವರ ನಿಜವಾದ ಹೆಸರು ಸುಬ್ಬಣ್ಣ ಜೋಯಿಷರು ಹೇಳಿ.
ಆದರೆ ಇವರ ಹೆಸರು ಅಪಬ್ರಂಶ ಆಗಿ ಬುರುಡೆ ಜೋಯಿಷರು ಹೇಳಿ ಕೆಲವು ಜೆನಂಗ ಹಿಂದಂದ ಹೇಳ್ತವು. ಅದಕ್ಕುದೇ ಕಾರಣ ಇದ್ದು. ಇವು ಮಾತಾಡುವಗ ಇವರ ಮಾತಿಲಿ ಸುಮಾರು ಶುದ್ದಿಗ ಬತ್ತು. ಶುದ್ದಿಗ ಹೇಳಿರೆ ಸುಮ್ಮನೆ ಅಲ್ಲ. ಅದರ ಕತೆಯಾಂಗೆ ಹೇಳುದು. ಹೇಳುವಗ ಶುದ್ದಿಗೆ ಸುಮಾರು ಮಸಾಲೆ ಬೆರೆಸಿ ಬಾರಿ ರಂಜನೆ ಮಾಡಿ ಹೇಳುಗು. ಹೇಳಿದ ಸುದ್ದಿಲಿ ಇಪ್ಪತ್ತೈದು ಅಂಶ ಸತ್ಯ ಇದ್ದರೆ ಒಳುದ ಎಪ್ಪತ್ತೈದು ಅಂಶ ಬರೀ ಲಾಟು. ಹಾಂಗಾಗಿ ಇವು ಬಿಡುದು ಬರೀ “ಬುರುಡೆ” ಹೇಳಿ ಕೆಲವು ಜೆನಂಗ ಇವಕ್ಕೆ “ಬುರುಡೆ ಜೋಯಿಷರು” ಹೇಳುದು….ಹಾಂಗೇಳಿ ಇವು ಆರಿಂಗೂ ಉಪದ್ರದ ಜೆನ ಅಲ್ಲ.
ಜೆನಂಗ ಇವರ ಹತ್ತರೆ ಸುಮಾರು ವಿಷಯಂಗೊಕ್ಕೆ ಹೋವುತ್ತವು. ಎಂತಾರೂ ಕಾಣೆ ಆದರೆ, ಜಾತಕ ನೋಡ್ಸುತ್ತರೆ, ಮನೆ ಕಟ್ಟುಸುತ್ತರೆ ಜಾಗೆ ತೋರ್ಸುಲೆ, ಕೆರೆ ತೆಗೆಸುತ್ತರೆ ನೀರು ಸಿಕ್ಕುಗಾ ಕೇಳ್ಲೆ, ಬಲಿಮ್ಮೆ ಕೇಳ್ಲೆ… ಹೀಂಗೆ ಸುಮಾರು ವಿಷಯಂಗೊಕ್ಕೆ ಹೋವ್ತವು. ಹಾಂಗೆ ಹೋದೋರ ಹತ್ತರೆ ನಂಬ್ರ ಕೇಳಿಯೋ, ಇಲ್ಲದ್ರೆ ಕವಡೆ ಹಾಕಿಯೋ, ಅಲ್ಲದ್ರೆ ಪಂಚಾಂಗ ಮಡುಗಿಯೋ ಅವಕ್ಕೆ ಪರಿಹಾರ ಹೇಳ್ತವು ಜೋಯಿಷರು.
ಒಂದು ಸರ್ತಿ ಮನೆ ಹತ್ತರೆ ಬಂದ ಶೀನ ಶೆಟ್ಟಿ ಜೆಗಿಲಿಲಿ ಜೋಯಿಷರ ಕಂಡಪ್ಪಗ ಮಾತಾಡ್ಸಿತ್ತು.
“ಅಣ್ಣೇರೆ… ಒಂಜಿ ಪ್ರಶ್ಣೆ ಇತ್ತ್ಂಡ್…..”
“ಅಂದಾ? ಎಂಚಿನ?”
“ಒಂಜಿ ವಿಶಯೋ …ಕಾಣೆ ಆಯಿನ ವಿಶಯೊಡು ಕೇಣ್ರೆ ಇತ್ತುಂಡ್”
“ಅಂದಾ ? ತುಕಾ ಒಂಜಿ ನಂಬರು ಪಣು”
“ಎಣ್ಮ”
ಜೋಯಿಷರು ಕವಡೆ ಹಾಕಿದವು.ಕವುಂಚಿ ಬಿದ್ದದರ ಬೇರೆ, ಮೊಗಚ್ಚಿ ಬಿದ್ದದರ ಬೇರೆ ಮಾಡಿದವು, ಎರಡನ್ನೂ ಬೇರೆ ಬೇರೆ ಲೆಕ್ಕ ಮಾಡಿದವು.. ಕೈ ಬೆರಳಿಲಿ ಎಂತದೋ ಲೆಕ್ಕಾಚಾರ ಹಾಕಿದವು.
“ನಿನ್ನ ಇಲ್ಲಡ್ ಈ ಜೆಪ್ಪುನ ಕೋಣೆ ಉಂಡತ್ತಾ?”
“ಅಂದ್ ಅಣ್ಣೇರೆ”
“ಅಳ್ಪ ಗೋಡೆಡು ಒಂಜಿ ಕಪಾಟು ಉಂಡತ್ತಾ?”
“ಅಂದು ಅಣ್ಣೇರೆ…”
“ಆ ಕಪಾಟುದ ಉಳಾಯಿ ಉಂಡೂ… ಪೋದು ತೂಲ, ತಿಕ್ಕುಂಡು.. ದಾನೆ….”
“ಕಪಾಟುದ ಉಳಾಯಿಯಾ?”
ಶೀನ ಶೆಟ್ಟಿಯ ಹೂಡುವ ಹೋರಿಗಳಲ್ಲಿ ಮಾತದ ಹೋರಿ ಬೊಳ್ಳೋಣಿ ಮನೆಗೆ ಬಾರದ್ದೆ ಮೂರುದಿನ ಆಯಿದು. ಈ ಬೊಳ್ಳೋಣಿ ಇದ್ದಲ್ಲದಾ? ಇದು ಬಾರೀ ಕದೀಮ ಹೋರಿ. ಮನೆಲಿ ಕುಡು ಬೇಶಿ ಕೊಡ್ಳೆ ಸುರು ಮಾಡಿದ ಕೂಡ್ಳೆ ಇನ್ನು ಗೆದ್ದೆ ಹೂಡುಲೆ ಸುರು ಆವ್ತು ಹೇಳಿ ಅದಕ್ಕೆ ಗೊಂತಾವ್ತು. ಕೂಡ್ಳೆ ಹೆರ ಬಿಟ್ಟ ಹೋರಿ ಹುಗ್ಗಿ ಕೂಪದು. ಈ ಶೀನ ಶೆಟ್ಟಿ ಹುಡ್ಕುಲೆ ಹೋಪಗ ಇದರ ತಲೆ ಕಂಡ ಕೂಡ್ಳೆ ಅದಕ್ಕೆ ಗೊಂತಾವ್ತು. ಎಲ್ಲಿಯಾದರೂ ಮರದ ಹಿಂದೆ, ಕಲ್ಲಿನ ಅಡ್ಡಕ್ಕೆ ಕಾಣದ್ದ ಹಾಂಗೆ ನಿಂದು ತಪ್ಪುಸಿಕೊಳ್ತಷ್ಟು ಬುದ್ದಿ ಇದ್ದು ಅದಕ್ಕೆ.
ಶೀನ ಶೆಟ್ಟಿ ಈ ಹೋರಿಯ ಹುಡ್ಕಿಕೊಂಡು ಬಪ್ಪಗ ನಮ್ಮ ಜೋಯಿಷರ ಮನೆ ಹತ್ತರೆ ಬಂದದು. ಬಪ್ಪಗ ನಮ್ಮ ಜೋಯಿಷರು ಮನೆ ಜೆಗಿಲಿಲಿ ಎಂತದೋ ಲೆಕ್ಕಾಚಾರ ಮಾಡಿಗೊಂಡು ಕೂಯಿದವು. ಅವರ ಕಂಡಪ್ಪಗ ಅವರ ಹತ್ತರೆ ಪ್ರಶ್ಣೆ ಕೇಳುವಾ ಹೇಳಿ ಕಂಡತ್ತು ಶೆಟ್ಟಿಗೆ. ಸರಿ ಹಾಂಗೆ ಕೇಳಿದ್ದು ಅದು…
ಶೀನ ಪುನಾ ಕೇಳಿತ್ತು ” ಎಂಚಿನ ಅಣ್ಣೇರೆ? ಕಪಾಟುದ ಉಳಾಯಿ ಉಂಡಾ?”
ಜೋಯಿಷರದ್ದು ಕಡಕ್ಕು ಉತ್ತರ “ಅಂದುಯಾ… ಕಪಾಟುದ ಉಳಯಿ ಉಂಡು. ಪೋದು ತೂಲ. ತಿಕ್ಕುಂಡು”
“ಆಂಡ ಅಣ್ಣೇರೆ….!!!”
“ಎಂಚಿನ?”
“ಯಾನು ಕೇಂಡಿನೆ ಎಂಕ್ಳೆನ ಬೋರಿ ಬೋಳ್ಳೋಣಿ ಕಾಣೆ ಆತುಂಡ್ ಪಂಡುದು…!!!?”
ಕೆಲಸ ಕೆಟ್ಟತ್ತು… ಹೋರಿಯ ಕಪಾಟಿಲಿ ಹುಡ್ಕುದಾ?
ಹಾಂಗೇಳಿ ಜೋಯಿಷರು ಎಂತ ಪಡ್ಪೋಷಿ ಅಲ್ಲ…. ಇದೇ ಹೋರಿಯ ಹುಡ್ಕುಲೆ ಒಂದು ಎರಡು ತಿಂಗಳ ಹಿಂದೆ ಇದೇ ಶೀನ ಬಲಿಮ್ಮೆ ಕೇಳ್ಲೆ ಬಂದದು ರಪಕ್ಕ ನೆಂಪಾತು.
“ಎಂಚಿನ? ನಿನ್ನ ಬೋರಿ ಬೊಳ್ಳೋಣಿಯಾ…?”
“ಅಂದ್ ಅಣ್ಣೇರೆ…”
“ರಡ್ಡ್ ತಿಂಗೊಳು ದುಂಬು ಉಂದುವೇ ಬೋರಿನ್ ನಾಡುದ್ ಬಲಿಮ್ಮೆ ಕೇಣ್ಯಾರ ಬತ್ತಿತ್ತ ಅತ್ತಾ?”
“ಅಂದ್ ಆಣ್ಣೇರೆ..”
“ಆನಿ ಯಾನ್ ನಿಕ್ಕ್ ಒಂಜಿ ಉರ್ಕು ಮಂತ್ರವಾದ ಮಾಲ್ತುದು ಕೊರ್ದಿತ್ತೆ … ಅಂದಾ??”
“ಅಂದ್ ಆಣ್ಣೇರೆ..”
“ಐನ್ ಈ ಬೋರಿದ ಕೆಕ್ಕಿಲುಗ್ ಕಟ್ಟೋಡು ಪಂಡುದಿತ್ತೆ ಅಂದಾ…??”
“ಅಂದ್ ಆಣ್ಣೇರೆ..” ಉರ್ಕು ಕೊಟ್ಟದು ಅಪ್ಪು. ಆದಿನ ಹೋರಿ ‘ಅದರಷ್ಟಕ್ಕೆ ಮನೆಗೆ ಬತ್ತು, ಬಂದ ಕೂಡ್ಳೆ ಅದರ ಕೊರಳಿಂಗೆ ಈ ಉರ್ಕು ಕಟ್ಟೆಕ್ಕು’ ಹೇಳಿದ್ದು ಅಪ್ಪು. ಆದರೆ ಶೀನ ಮನೆಗೆ ಎತ್ತುದಕ್ಕೆ ಮೊದಲೇ ಹೋರಿ ಮನೆಗೆ ಬಯಿಂದು. ಶೀನ ಗಡಂಗಿಂಗೆ ಹೋಗಿ, ಮತ್ತೆ ಕಸ್ತಲೆಗೆ ಮನೆಗೆ ಎತ್ತುವಗ ಕಿಸೆಲಿ ಉರ್ಕು ಇತ್ತದು ಮರತ್ತೇ ಹೋಯಿದು. ಅದರ ಅಂಗಿ ಕಿಸೆಂದ ಉರ್ಕಿನ ತೆಗದು ಅದರ ಹೆಂಡತ್ತಿ ಕಪಾಟಿಲಿ ಮಡುಗಿದ್ದು. ಈ ಶೀನ ಕಪಾಟಿಂಗೆ ಕೈ ಹಾಕುವಗ ಎಲ್ಲ ಅದು ಸಿಕ್ಕುತ್ತು. ಮತ್ತೆ ಕಟ್ಟುವಾ ಹೇಳಿ ಅಲ್ಲಿಯೇ ಬಿಡ್ತು.
“ಕಟ್ಟುದಾನ ಐಕ್ಕು?” ಕಟ್ಟಿದ್ದಿಲ್ಲೆ ಹೇಳಿ ಜೋಯಿಷರಿಂಗೆ ಗೊಂತಿದ್ದು. ಹೇಂಗೆ? ಇಂದಷ್ಟೇ ಉದಿಯಪ್ಪಗ ನೆಲ್ಲಿಕಾಡಿನ ಹತ್ತರೆ ಬಪ್ಪಗ ಅಲ್ಲೇ ಕರೇಲಿ ಒಂದು ದೊಡ್ಡ ಕಪ್ಪು ಕಲ್ಲು ಇದ್ದಲ್ಲದಾ? ಅದರ ಹತ್ತರೆ ಒಂದು ಕುಂಟಾಲದ ಬಲ್ಲೆ ಇದ್ದು. ಆ ಬಲ್ಲೆಯ ಒಳದಿಕ್ಕೆ ರಜಾ ತಂಪಿಂಗೆ ಜಾಗೆ ಇದ್ದು. ಆ ಜಾಗೆ ಹತ್ತರೆ ಜೋಯಿಷರು ಬಂದುಗೊಂಡು ಇಪ್ಪಗ ಆ ಬಲ್ಲೆಯೊಳ ಎಂತದೋ ಶಬ್ದ ಆತು ಹೇಳಿ ಇಣ್ಕಿ ನೋಡಿದ್ದವು. ನೋಡಿರೆ, ಈ ಬೊಳ್ಳೋಣಿ ಅದರ ಒಳ ಹುಗ್ಗಿ, ಮನಿಕ್ಕೊಂಡು ಅದರಷ್ಟಕ್ಕೆ ಕಾಯಿ ಕಡೆತ್ತಾ ಇದ್ದು. ಜೋಯಿಷರಿಂಗೆ ಅದರ ಕೊರಳಿಲಿ ಉರ್ಕು ಕಂಡಿದಿಲ್ಲೆ.
“ಇಜ್ಜಿ ಅಣ್ಣೇರೆ..”
“ತೂಯನಾ… ಮೂಲು ಬಲಿಮ್ಮೆಡು ಎಂಕು ಆ ಉರ್ಕು ಓಲುಂಡು ಪಂಡುದು ತೋಜೋಂಡು ಉಂಡು. ಆ ಉರ್ಕು ಬೋರಿದ ಕೆಕ್ಕಿಲುಡು ಇತ್ತುಂಡ ಬೋರಿ ಓಲುಂಡು ಪಂಡುದು ಗೊತ್ತಾತು… ಉರ್ಕು ಓಲುಂಡು?”
“ಅವು …ಅಣ್ಣೇರೆ ಇಲ್ಲಡು ಕಪಾಟುಡು ಉಂಡು…”
“ಬುಕ್ಕ..? ತೂಯನಾ…? ನಿಕ್ಳೆಗ್ ಮಾಂತ ಪಂಡಿನೆನ್ ಮಾಲ್ಪೆರೆ ಆಪುಜ್ಜಿ… ಬುಕ್ಕ ಎಂಕ್ಳೇನವು ಸರಿ ಇಜ್ಜಿ ಪಂಡೊಂಡು ಬತ್ತುಂಡ ಎಂಕ್ಳು ಎಂಚಿನ ಮಾಲ್ಪೊಡು?”
“ತತ್ತುಂಡು ಅಣ್ಣೇರೆ… ಇತ್ತೆ ಬೋರಿನು ನಾಡುನೆ ಎಂಚ?
“ಎಂಚ ಪಂಡ? ಐಕ್ಕು ವಾಪಾಸು ಬಲಿಮ್ಮೆ ಪಾಡೊಡು ಆತೆ… ಊಂ… ಒಂಜಿ ನಂಬರು ಪಣು…”
“ಎಣ್ಮ…”
“ಎಂಚಿನ ಎಣ್ಮ…?? ಅವು ಒಂಜೇ ನಂಬರು ಇಪ್ಪುನ ನಿಕ್ಕ್? ಬೇತೆ ಪಣು…”
“ಊಂ… ಮೂಜಿ”
ಜೋಯಿಷರು ಪುನಾ ಕವಡೆ ಹಾಕಿದವು… ಕವುಂಚಿ ಬಿದ್ದದರ ಬೇರೆ, ಮೊಗಚ್ಚಿ ಬಿದ್ದದರ ಬೇರೆ ಮಾಡಿ ಎಣಿಸಿದವು… ಬೆರಳಿಲಿ ಎಂತದೋ ಲೆಕ್ಕಾಚಾರ ಮಾಡಿದವು… ಮುಣು ಮುಣು ಮಂತ್ರ ಹೇಳಿದವು…..
“ಆ.. ತಿಕ್ಕುಂಡ್….”
“ತಿಕ್ಕ್ಂಡ ಅಣ್ಣೇರೆ…?”
“ಮುಲ್ತು ಪಡ್ಡಯಿಗ್ ನೆಲ್ಲಿಕಾಡು ಉಂಡತ್ತಾ? ಬರಿಟ್ಟ್ ಒಂಜಿ ಮಲ್ಲ ಕಲ್ಲು ಉಂಡತ್ತ? ಐತ್ತ ಬರಿಟ್ ಒಂಜಿ ಮಲ್ಲ ಕುಂಟಾಲದ ಬಲ್ಲೆ ತೋಜೋಂಡು ಉಂಡು… ಅಲ್ಪ ಪೋದು ನಾಡ್ಳ… ಬೋರಿ ತಿಕ್ಕುಂಡು… ಅವು ವಾಪಾಸು ಬತ್ತಿ ಬುಕ್ಕ ಈ ಪೊಸತ್ತು ಉರ್ಕು ಕಟ್ಟೊಡು. ದಾನೆ…?” ಜೋಯಿಷರು ಒಂದು ಹೊಸ ಉರ್ಕಿನ ಮಂತ್ರಿಸಿ ಕೊಟ್ಟವು ಶೀನಂಗೆ. ಶೀನ ನೀಟಂಪ ಅಡ್ಡ ಬಿದ್ದು, ಒಂದು ರೂಪಾಯಿ ದಕ್ಷಿಣೆ ಮಡುಗಿಕ್ಕಿ ಹೋತು.
ಈ ಮಾಟ ಮಂತ್ರ ಎಲ್ಲ ಇದ್ದಲ್ಲದಾ…. ಈ ವ್ಯೆವಾರಲ್ಲಿಯುದೆ ಈ ಬುರುಡೆ ಜೋಯಿಷರು ಇದ್ದವು ಹೇಳಿ ಗುಸು ಗುಸು ಇದ್ದು. ಮಾಟ ಮಂತ್ರ ತೆಗೆಶುಲೆ ಜೆನಂಗ ಅವರ ಹತ್ತರೆ ಹೋಪದು ಇದ್ದು. ಮತ್ತೆ ಇವರ ತಿರುಗಾಟವುದೆ ಹಾಂಗೇ. ಏವ ಹೊತ್ತಿಂಗೂ ಇವು ಎಲ್ಲಿ ಬೇಕಾರೂ ಹೋವ್ತವು. ನಡೀರ್ಲು ಒಂದುವರೆ ಎರಡು ಗಂಟೆಗೂ ಹೋಕು.ಆ ಹೊತ್ತಿಂಗೆ ಹೋವ್ತರೆ ಇವಕ್ಕೆ ಜೆತೆ ಆರು? ಆವ್ವೇ ಹೇಳುವ ಪ್ರಕಾರ ಬೂತ, ಪ್ರೇತ ಗುಳಿಗ್ಗಂಗ ಎಲ್ಲ ಅವರ ಜೆತೆಯೇ ಅಡ. ಈ ಬೂತ ಪ್ರೇತಂಗಳ ಒಟ್ಟಿಂಗೇ ಸುಕ ದುಕ್ಕ ಮಾತಾಡಿಗೊಂಡು ಅವು ಹೋಪದಡ. ಇವು ಎಲ್ಲಿಯಾದರೂ ಹೋವ್ತರೂ ಹಾಂಗೆ… ಒಬ್ಬಂಟಿಯಾಗಿ ಹೋಪದು.
ಇನ್ನು ಇವಕ್ಕೆ ಸಿಕ್ಕುವ ಬೂತ ಪ್ರೇತಂಗಳ ಕತೆಗಳನ್ನೂ ಇವು ಹೇಳ್ತವು. ಕೇಳುವವು “ಅಪ್ಪು” ಹೇಳಿಯೇ ಗ್ರೇಷೆಕ್ಕು… ಹಾಂಗಿಪ್ಪ ಕತೆಗ. ಕೇಳುವಗ ಮೈ ರೋಮ ಎಲ್ಲ ಕುತ್ತ ಅಕ್ಕು. ಅಷ್ಟು ರೋಚಕವಾಗಿ ಇರ್ತು.
ಒಂದು ಸರ್ತಿ ಕಸ್ತಲಪ್ಪಗ ಹನ್ನೊಂದು ಗಂಟೆ ಹೊತ್ತಿಂಗೆ ಇವು ಎಲ್ಲಿಗೋ ಹೋಪಗ, ದಾರಿಲಿ ಒಂದು ಕಪ್ಪು ಪುಚ್ಚೆ ಕೂದುಗೊಂಡು ಇತ್ತಡ. ಅದರ ಓಡ್ಸುಲೆ ಹೇಳಿ ಇವು ಒಂದು ಕಲ್ಲು ತೆಗದು ಇಡ್ಕಿದವಡ. ಅದು ಅದರ ಪಚ್ಚೆ ಕಣ್ಣಿನ ದೊಡ್ಡ ಮಾಡಿ ಇವರ ಒಂದು ಸರ್ತಿ ನೋಡಿತ್ತಡ. ಮತ್ತೆ ದಬುಕ್ಕನೆ ಹಾರಿ ಓಡಿತ್ತಡ… ಓಡುವಗ “ಯಾನ್ ಕಲ್ಲುರ್ಟಿ… ಆಂ…” ಹೇಳಿಕ್ಕಿ ಓಡಿತ್ತಡ.
ಮತ್ತೊಂದು ಸರ್ತಿ ನಟ ನಟ ಮದ್ಯಾನ ಕನ್ಯಾನಂದ ಕಾಡಿಲಿ ಕಾಲುದಾರಿಲಿ ನಡಕ್ಕೊಂಡು ಬಪ್ಪದು. ಕಾಡು ಹೇಳಿರೆ ರಣ ಕಾಡು ಅದು… ಸೂರ್ಯನ ಬೆಣ್ಚಿ ರಜವುದೆ ನೆಲಕ್ಕೆ ಬೀಳ್ತಿಲ್ಲೆ. ಅಲ್ಲಿ ಒಂದು ಹೊಡೆಲಿ ಒಂದು ಗುಳಿಗ್ಗನ ಬನ ಇದ್ದದ, ಅದರ ಹತ್ತರೆ ಬಪ್ಪಗ ಇವರ ಹಿಂದಂದ ಒಟ್ಟಿಂಗೆ ಆರೋ ನಡಕ್ಕೊಂಡು ಬಂದಾಂಗೆ ಚರ್ಮದ ಮೆಟ್ಟಿನ ಶಬ್ದ ಅಡ…”ಜಿರ್… ಜಿರ್… ಜಿರ್… ಜಿರ್…” ಹೇಳಿ. ಇವು ರಪಕ್ಕ ಹಿಂದೆ ತಿರುಗಿ ನೋಡಿದರೆ.. ಆರಿಲ್ಲೆ..!!! ರಜಾ ಹೊತ್ತಪ್ಪಗ ಎದುರಾಣ ಹೋಡೆಂದ ಹಾಂಗೇ “ಜಿರ್…ಜಿರ್…ಜಿರ್…” ಹೇಳಿ ಶಬ್ದ. ಇವು ನಿಂದರೆ ಶಬ್ದವುದೆ ನಿಲ್ಲುತ್ತು… ಮುಂದೆ ಹೋದರೆ ಪುನ ಒಟ್ಟಿಂಗೆ ಆರೋ ಬಂದ ಹಾಂಗೆ. “ದಾನೆ… ಎಂಕ್ ಜತೆ ಕೊರ್ಯಾರ ಬರ್ಪುನ ಈ? ಎಂಕ್ ಒರಿಯೆ ಪೋಯಾರ ಗೊತ್ತುಂಡ್ ದಾನೆ?” ಹೇಳಿದವಡ ಇವು…. ರಜಾ ಹೊತ್ತು ಬಿಟ್ಟು ಬನದ ಒಳಂದ “ಹೂಂ” ಹೇಳಿ ಹೂಂಕರಿಸಿದ ಹಾಂಗೆ ಕೇಳಿತ್ತಡ. ಅದರ ಹಿಂದಂದಲೇ….”ಕ್ಕೆ…ಕ್ಕೆ..ಕ್ಕೆ..ಕ್ಕೆ…” ಹೇಳಿ ನೆಗೆ ಮಾಡಿದ ಹಾಂಗೆ ಶಬ್ದ….. ಇವು ಎಂತ ಹೆದರುವ ಜಾತಿ ಅಲ್ಲ. ಜೆನಿವಾರದ ಗೆಂಟಿನ ಕೈಲಿ ಹಿಡುದು, ಗಾಯತ್ರಿ ಜೆಪ ಮಾಡಿಗೊಂಡು ಬಂದವಡ.
ಇನ್ನೊಂದು ಸರ್ತಿ ಕುಡ್ತಮುಗೇರಿಂದ ಒಳದಾರಿಲಿ ಇತ್ಲಾಗಿ ಬಪ್ಪದು. ಕಸ್ತಲಪ್ಪಗ ಎರಡು ಗಂಟೆ ಅಕ್ಕು. ಕೈಲಿ ಒಂದು ಸೂಟೆ ಬೀಜಿಗೊಂಡು ಬತ್ತಾ ಇದ್ದವು. ಅವರ ಒಟ್ಟಿಂಗೆ ಒಂದು ಕಾಟು ನಾಯಿದೆ ಬೀಲ ಆಡ್ಸಿಕೊಂಡು ಹಿಂದಂದಲೇ ಬಂದುಗೊಂಡು ಇತ್ತು. ಅಲ್ಲೆಲ್ಲಿಯೋ ಒಂದು ದೊಡ್ಡ ತೋಡು ಇದ್ದು. ಅದರ ಕರೇಲಿಯೇ ದಾರಿ ನಡಕ್ಕೊಂಡು ಬಪ್ಪದು. ನಡೂವಿಲಿ ತೋಡು ರಜಾ ಅಗಲ ಆಗಿ ಅಲ್ಲೊಂದು ಗುರ್ಮೆ ಇದ್ದು. ಆ ಗುರ್ಮೆಲಿ ಯಾವದೋ ಒಂದು “ಪಕ್ಕಳ” ಹೇಳ್ತ ಮನುಷ್ಯ ಹದಿನೈದು ವರ್ಷದ ಹಿಂದೆ ವಿಷ ಕುಡುದು ಸತ್ತಿದು. ಈಗಲ್ಲ… ಹದಿನೈದು ವರ್ಷದ ಹಿಂದೆ. ಈ ಪಕ್ಕಳ “ಪ್ರೇತ ಆಗಿ, ಮತ್ತೆ ಕೊಲೆ ಆಗಿ ಬದಲಾಯಿದು, ಸುಮಾರು ಸರ್ತಿ ಎನಗೆ ಸಿಕ್ಕಿದ್ದು” ಹೇಳಿ ಇದೇ ಜೋಯಿಷರು ಊರಿಲಿ ಇಡೀ ಹೇಳಿದ್ದು ಇದ್ದು.
ಈ ವಿಷ ಕುಡುದು ಆತ್ಮಹತ್ಯೆ ಮಾಡಿಗೊಂಡವು ಇರ್ತವಲ್ಲದಾ? ಅವಕ್ಕೆ ಸರಿಯಾಗಿ ಬೊಜ್ಜ ಗಿಜ್ಜ ಮಾಡದ್ದರೆ ಅವು ಪ್ರೇತ ಆಗಿ ಮೂರು ವರ್ಷ ಇರ್ತವಡ… ಮತ್ತುದೆ ಅದಕ್ಕೆ ಆರುದೇ ನಿವೃತ್ತಿ ಮಾಡದ್ದರೆ ಅದು ಕೊಲೆ ಆಗಿ ಪರಿವರ್ತನೆ ಆವುತ್ತಡ. ಹಾಂಗೆ ಹನ್ನೆರಡು ವರ್ಷ ಆದ ಮೇಲೆ ಅದು ರಣ ಆಗಿ ಬದಲಾವುತ್ತಡ. ಅದಕ್ಕೆ ಆರುದೇ ಬೊಜ್ಜ, ತಿಥಿ ಮಾಡದ್ದ ಕಾರಣ ಅದಕ್ಕೆ ಬಯಂಕರ ಹಶು ಆಸರ ಆಯ್ಕೊಂಡು ಇರ್ತಡ… ಅದು ಸತ್ತು ಹದಿನೈದನೇ ವರ್ಷ ಅಪ್ಪಗ ರಣ ಅಪ್ಪದದಾ… ಈ ರಣ ಆಗಿ ಬದಲಪ್ಪ ಸಮೆಯಕ್ಕೆ ಅದಕ್ಕೆ ತಡವಲೆಡಿಯದ್ದಷ್ಟು ಹಶು, ಆಸರ ಆವುತ್ತಾಡ… ಅಷ್ಟಪ್ಪಗ ಅದು ಕೈಗೆ ಸಿಕ್ಕುವ ಆರುದೇ ಅಕ್ಕು… ಪ್ರಾಣಿಯೂ ಅಕ್ಕು, ಮನುಷ್ಯರೂ ಅಕ್ಕು ಅವರ ಹಿಡುದು, ಅವರ ಹಸಿ ಹಸಿ ಮಾಂಸ ತಿಂದು, ನೆತ್ತರು ಕುಡಿತ್ತಡ.
ನಮ್ಮ ಜೋಯಿಷರು ಈ ದಾರಿಲಿ ಬಪ್ಪದೂ, ಈ ಪಕ್ಕಳನ ಕೊಲೆ ರಣ ಆಗಿ ಬದಲಪ್ಪ ಸಮೆಯವೂ ಒಂದೇ ಆಯಿದು. ಆ ಪಕ್ಕಳ ಸತ್ತ ಜಾಗೆ ಹತ್ತರೆ ಬಪ್ಪಗ ಹಿಂದೆ ಬಂದುಗೊಂಡಿತ್ತ ನಾಯಿ ಒಂದೇ ಸಮ ಬೊಗಳುಲೆ ಸುರು ಮಾಡಿತ್ತು. ಜೋಯಿಷರು ಎಂತ ಹೇಳಿ ನೋಡಿರೆ, ಎದುರಿಲಿ ದಾರಿ ಕರೆಲಿ ಒಂದು ಮಂಗಳ ಬಣ್ಣದ ಪುಚ್ಚೆ. ಇವರನ್ನೆ ದುರುಗುಟ್ಟಿ ನೋಡ್ತಾ ಇದ್ದು. ಕೆಂಪು ಕಣ್ಣು. ಇವಕ್ಕೆ ನೋಡಿದ ಕೂಡ್ಳೆ ಗೊಂತಾತು, ಇದು ಪಕ್ಕಳನ ಕೊಲೆ. “ದಾನೆ ? ಅಂಚ್ ತೂವೊಂದುಳ್ಳ…?? ಯಾನ್ ದಾನೆ ಪೋಡ್ಪುನಾಯೆ ಅತ್ತು.. ದಾನೆ?” ಹೇಳಿದವಡ. ಕೈಲಿ ಜೆನಿವಾರ ಗೆಂಟು ಹಿಡ್ಕೊಂಡವಡ. ಇವು ಅದರ ದಾಂಟದ್ದೆ ದಾರಿಲಿ ಅತ್ಲಾಗಿ ಹೋಪಂಗೆ ಇಲ್ಲ್ಲೆ. ಇವು ದೈರ್ಯಲ್ಲಿ ಹನುಮ ಜೆಪ ಮಾಡಿಗೊಂಡು ಮುಂದೆ ಮುಂದೆ ಹೋದವು… ಹತ್ತರೆ ಹತ್ತರೆ ಹೋದಾಂಗೆ ಪುಚ್ಚೆ ದೊಡ್ಡ ದೊಡ್ಡ ಬೆಳದು ನಾಯಿಂದಲೂ ರಜ ದೊಡ್ಡ ಗಾತ್ರಕ್ಕೆ ಬೆಳತ್ತು, ನಾಯಿಪಿಲಿಯ ಹಾಂಗೆ ಕಂಡತ್ತು.
ಇವು ಕ್ಯಾರೆ ಮಾಡದ್ದೆ ಅದರ ದಾಂಟಿದವು. ಇದು ರಣ ಆಗಿ ಬದಲಪ್ಪ ಕಾಲ ಬೈಂದು ಹೇಳಿ ಇವಕ್ಕೆ ಗೊಂತಾಯಿದು. ಆದರೆ ಇವು ಜೋಯಿಷರಲ್ಲದಾ… ಇವರ ಮುಟ್ಟುವ ಹಾಂಗೆ ಇಲ್ಲೆ…. ಇವರ ಹಿಂದಂದ ನಾಯಿ ಬೊಗಳಿಕೊಂಡು ಬತ್ತಾ ಇದ್ದು…. ಇವು ದಾಂಟಿದವಾ..? ಇದ್ದಕ್ಕಿಂದ ಹಾಂಗೆ ನಾಯಿ “ಕೈಂಯ್… ಕೈಂಯ್…” ಹೇಳಿ ಬೊಬ್ಬೆ ಹೊಡವಲೆ ಸುರು ಮಾಡಿತ್ತು. ಇವು ಎಂತ ಹೇಳಿ ಹಿಂದೆ ತಿರುಗಿ ನೋಡುವಗ… ಈ ಕೊಲೆ, ನಾಯಿಯ ಹಿಡುದ್ದು… ಅದರ ಎಳಕ್ಕೊಂಡು ತೋಡಿಂಗೆ ಹಾರಿತ್ತು. ಇವು ಕೂಡ್ಳೆ ಹಿಂದೆ ತಿರುಗಿ ಓಡಿಕೊಂಡು ಬಂದವು. ಈ ಕೊಲೆ ತೋಡಿನ ಒಳಂಗೆ ಹಾರಿದ್ದಲ್ಲದಾ? ಒಳಂಗೆ ಇಣ್ಕಿ ನೋಡಿದವು….
ನೋಡಿದರೆ… ದೇವರೇ… ಕಂಡ ದೃಷ್ಯ ಎಂತದು..!!!? ಭಯಂಕರ……!!!!
————————————————————————————————
ನಮ್ಮ ಜೋಯಿಷರಿಂಗೆ ತೋಡಿನ ಒಳ ಕಂಡದೆಂತರ…? ತೆಗಲೆ ಗಟ್ಟಿ ಇಪ್ಪೋರು ಮಾಂತ್ರ ಬಪ್ಪವಾರದ ಕಂತು ಓದಿ….. ಮತ್ತೆ ಎನ್ನ ಬೈಯಡಿ…
ಇನ್ನಾಣ ಸರ್ತಿಲಿ ಹೇಂಗಿಕ್ಕು ಹೇಳ್ತದೇ ಭಯಂಕರ ಕುತೂಹಲ ಈಗ.
ಪ್ರತಿ ಕಂತನ್ನೂ ಕುತೂಹಲ ಘಟ್ಟಲ್ಲಿ ನಿಲ್ಲಿಸುವ ಈ ನಿರೂಪಣೆ ಕೊಶೀ ಆವ್ತು.
ಕತೆಯ ಒಳಾಣ ಉಪಕತೆ, ಜೋಯಿಶರದ್ದು ಭಾರೀ ರೈಸಿದ್ದು.
ಮುಂದಾಣ ವೃತ್ತಾಂತ್ರಕ್ಕೆ ಕಾಯುತ್ತ ಇದ್ದೆ.
ಹು. ಜೋಯಿಷರ ಕವಡೆ ಲೆಕ್ಕಾಚಾರ ರೈಸಿದ್ದು.ಬೋರಿಯ ಕಪಾಟಿಲಿ ಹುಡುಕ್ಕಲೆ ಹೇಳಿದ ಘಟನೆ ಓದಿ ನೆಗೆ ತಡೆಯ..
ತ್ಯಾ೦ಪನ ಕಿಸೆಲಿದ್ದ ಚೈನ್ ಆರ ಕಿಸೆಗೆ ಸೇರುಗೋ?ತೋಡಿನ ಒಳ ಕ೦ಡ ದೃಶ್ಯ ನೋಡುಲೆ ಕಾದು ಕೂಪದಿನ್ನು.
ಕೊಲೆ ಕೇಸಿನ ಕತೆಲಿ ೨ ಕ೦ತುಗಳಲ್ಲಿ ಹಾಸ್ಯ ಪ್ರಸ೦ಗ೦ಗೊ ಓದುಲೆ ಕುಶಿ ಕೊಟ್ಟತ್ತು. ಶ್ಯಾಮಣ್ಣ ಜೋಯಿಸರ ಸ೦ಗತಿ ಹೇಳುದು ಕೇಳುವಾಗ ಸದ್ಯ ತೆ೦ಕ್ಲಾಗಿ ಹೋಗಿ ಬ೦ದ ಹಾ೦ಗೆ ಇದ್ದು.
ಚಿತ್ರಗಾರನ ಕೈ ಹೇಂಗೆ ತಿರುಗಿರೂ ಅದರ್ಲಿ ಒಂದು ಕಲಾ ರೇಖೆ ಮೂಡ್ತಡ , ಹಾಂಗೇ ಈ ಚಿತ್ರಗಾರಣ್ಣನ ಕತೆಯೂ. ಎಲ್ಲಿಂದ ಎಲ್ಲೆಲ್ಲಿಗೋ ಹೋಗ್ಯೊಂಡಿದ್ದರೂ ಅಲ್ಲೆಲ್ಲ ಒಂದೊಂದು ಸ್ವಾರಸ್ಯವ ತೋರ್ಸಿಗೊಂಡು ಹೋಪ ಕ್ರಮ ಭಾರೀ ಪಷ್ಟಾಯ್ದು. ಜೋಯಿಸಣ್ಣನ ಕತೆಲಿ ಎಡಿಯಪ್ಪ!
ಭಲೇ ಶ್ಯಾಮಣ್ಣ. ಈ ವಾರವೂ ರೈಸಿದ್ದು. ಅಕೇರಿಗೆ… ಒಳ ಇಣ್ಕಿಯಪ್ಪಗ ಕಂಡದೆಂತದಪ್ಪ ಈಗ !! ಸ್ವಾರಸ್ಯ ಕುತೂಹಲವಾಗಿಯೇ ಉಳುದತ್ತನ್ನೇ. ನೋಡ್ವೋ ಬಪ್ಪ ವಾರ
ಬಲಿಮೆಯ ಕಣ್ಕಟ್ಟು ಬಾರೀ ಲಾಯಕ್ಕ ಆಯಿದು !ಈಗ ಕೂಡಾ ಬಲಿಮೆ ಹೆಸರಿಲಿ ಮೋಸ ಮಾಡುವೋರು ಇದ್ದವು ,ಅದನ್ನೇ ಸತ್ಯ ಹೇಳಿ ನಂಬುವೋರು ಇದ್ದ್ದವು ,ಇತ್ತೀಚಿಗೆ ಎನ್ನ ಪರಿಚಯದ ಟೀಚರ್ ಒಬ್ರು ಒಬ್ಬ ಕೇರಳದ ನಾಡಿ ಜ್ಯೋತಿಷರ ಬಗ್ಗೆ ಎಂಗ ಆರು ಎಂತ ಹೇಳಿ ಗೊಂತಿಲ್ಲದ್ದೆ ಕಾಲಿ ಗ್ರಂಥ ನೋಡಿ ಎಂಗಳ ಮನೆ ಹೆಸರು ಊರು ಎಲ್ಲ ಹೇಳಿದ್ದವು ಹೇಳಿ ಹೇಳಿದವು .ಆನುದೇ ಕುತೂಹಲಲ್ಲಿ ರಜ್ಜ ವಿಚಾರಿಸಿದೆ ಮತ್ತೆ ನೋಡುವಾಗ ಎಂತರ?,ಅವು ಹೆಸರು ಹೇಳಿದ್ದು ಅಪ್ಪು ,ಹೇಂಗೆ ಹೇಳುದು ಇಲ್ಲಿನ ಗುಟ್ಟು ! ಎಂಗ ಸಣ್ಣಾದಿಪ್ಪಗ ಒಂದು ಆತ ಆಡಿಗೊಂಡು ಇತ್ತಿದೆಯ .ಒಬ್ಬನ ಹೆರ ಕಳುಸುದು ,ನಂತರ ಎಲ್ಲ ಸೇರಿ ಒಂದು ವಸ್ತು ಹೂಗು ಗಡಿಯಾರ ,ಕೊಡೆ ಬಳೆ ಇತ್ಯಾದಿ ಗುರುತಿಸಿ ಒಬ್ಬಂಗೆ ಹೇಳುದು ನಂತರ ಹೆರ ಹೋದೋನು ಒಳ ಬಂದು ಈ ಗುಂಪಿನೋರು ಗುರಿತಿಸಿದ ವಸ್ತುವಿನ ಹೇಳಕ್ಕು ಅವ ಆರು ಪ್ರಶ್ನೆ ಕೇಳ್ತ ಅದಕ್ಕೆ ಇವು ಸರಿಯಾದ ಉತ್ತರ ಕೊಡಕ್ಕು ಅವ ಜೀವ ಇಪ್ಪದ ಇಲ್ಲದ್ದದ ಜೀವ ಇಪ್ಪದಾದರೆ ಪ್ರಾಣಿಯ ಸಸ್ಯವ ,ಸಸ್ಯ ಆದ್ರೆ ಹೂಗ ಕಾಯಿಯ ಹೂಗು ಆದ್ರೆ ಪರಿಮಳದ್ದ ಅಲ್ಲದ್ದದ ,ನಮ್ಮ ಜಾಲಿಲಿ ಇದ್ದ ಇಲ್ಲೆಯ ಹೇಳಿ ಕೇಳಿ ಉತ್ತರ ಕಂಡು ಹಿಡಿತ್ತ!ಇದೇ ಉಪಾಯ ಬಳಸಿ ಆ ಜ್ಯೋತಿಷಿ ಇವರ ಬಾಯಿಂದಲೇ ಉತ್ತರ ಹೆರ್ಕಿಕ್ಕಿ ನಾಡಿ ಗ್ರಂತಲ್ಲಿ ಕಂಡಿದು ಹೇಳಿದ್ದು !ಇದನ್ನೂ ನಂಬುತ್ತವಲ್ಲ ಹೇಳಿ ನೆಗೆ ಬತ್ತು
ಏನೇ ಆದರೂ ಈ ವೃತ್ತಾಂತ ಬಾರಿ ಚಂದಕ್ಕೆ ಬೈಂದು ,ಒಳ್ಳೆ ಕುತೂಹಲಕಾರಿ ಕಥೆ ಕೊಡುತ್ತಾ ಇಪ್ಪದಕ್ಕೆ ಧನ್ಯವಾದಂಗ ಶ್ಯಾಮಣ್ಣ
ಕವುಂಚಿ ಬಿದ್ದರೂ ಜೋಯಿಷರ ಮೂಗು ಮಾಂತ್ರ ಮೇಗೆ ಆಯಿದು.ಕೊಶಿ ಆತು.