ಎನ್ನ ಅಕ್ಕ° ಅಂಬಗ ಒಂದು ಹದ್ನೆಂಟು ವರ್ಷದ್ದಾಗಿದ್ದಿಕ್ಕು.ಮಧ್ಯಾಹ್ನದ ಹೊತ್ತು,ಒಬ್ಬ ದೂರದ ಸಂಬಂದಿಕ ಬಂದ,ಏನೋ ಎನಗೆ ಅಂದು ರಜೆ,ಎಂಟೋ ಒಂಬತ್ತೋ ಕ್ಲಾಸಿಲ್ಲಿ ಕಲ್ತೊಂಡಿದ್ದ ಸಮಯ.
ಮಧ್ಯಾಹ್ನ ಆರೇ ಬಂದರೂ ಅಂಬಾಗ ಉಣ್ಣದ್ದೆ ಹೋಪ ಕ್ರಮ ಇಲ್ಲೆದ.ಈಗಾಣ ಹಾಂಗೆ ಹೋಟ್ಳುಗಳೂ ಇಲ್ಲದ್ದ ಕಾಲ.
ಉಂಡು ಎಲೆ ತಿಂದೊಂಡು ಸುರು ಮಾಡಿದ°,ಕೂಸಿನ ಕೊಡುವ ಅಭಿಪ್ರಾಯ ಇದ್ದೋ ಹೇಂಗೆ ಹೇಳಿ.
ನಮ್ಮ ಕ್ರಮದ beauty ಇದು.ಜಾತಕ ಕೊಟ್ಟ ಕೂಡ್ಳೇ ಏನೂ ಒಪ್ಪಿಗೆ ಹೇಳಿ ಅಲ್ಲ.ಅದೂ ಸೀದಾ ಮಾಣಿಯ ಅಪ್ಪನೋ ಅಣ್ಣನೋ ಬಂದು ಕೇಳುದಲ್ಲ.
ಜಾತಕಲ್ಲಿ ಸರಿ ಆವುತ್ತು ಹೇಳಿ ಮಾಣಿಯ ಕಡೆಯವಕ್ಕೆ ಕಂಡ್ಱೆ ಕೂಸಿನ ನೋಡುವ ಕಾರ್ಯಕ್ರಮ ಯಾವಗ ಮಡಿಕ್ಕೊಂಬೋ ಹೇಳಿ ಕೇಳುಗು.
ಹೇಳಿದ ದಿನ ಮಾಣಿಯೊಟ್ಟಿಂಗೆ ಅಪ್ಪನೋ ಸೋದರ ಮಾವನೋ ಹೀಂಗೆ ಒಂದು ನಾಲ್ಕು ಜೆನ ಬಕ್ಕು.ನಾಳಂಗೆ ಆಗ ಹೇಳಿ ಆದರೆ ಬೇಡ ಹೇಳ್ಲೆ ಕಷ್ಟ ಅಪ್ಪಲಾಗ ಹೇಳುವ ಉದ್ದೇಶಲ್ಲಿ ನೋಡ್ಳೆ ಬಂದಿಪ್ಪಗ ಊಟ ಮಾಡ್ತ ಕ್ರಮವೂ ಇಲ್ಲೆ.ರಜ ಅವಲಕ್ಕಿ ಸಜ್ಜಿಗೆಯಒಟ್ಟಿಂಗೆ ಕೇಸರಿ ಭಾತೋ ಏನಾರೂ ಇದ್ದರೆ ಹೆಚ್ಚು.
ಸಣ್ಣ ಪ್ರಾಯಲ್ಲೇ ಮದುವೆ ಮಾಡ್ತ ಕಾರಣ ಕೂಸುದೇ ಮಾಣಿಯುದೇ ನೋಡುದು ಎಲ್ಯಾರೂ ಕೂಸು ತುಪ್ಪ ಬಳುಸುಲೋ ಕಾಪಿ ಕೊಡ್ಳೋ ಬಪ್ಪಗ.ಕೂಸಿನ ಮಾತಾಡ್ಸುದು ಒಟ್ಟಿಂಗೆ ಬಂದ ಹಿರಿಯೋರೋ ಅಲ್ಲದ್ದರೆ ಹೆಮ್ಮಕ್ಕೊ ಬಂದಿದ್ದರೆ ಅವು.ಮತ್ತೆ ಕೂಸುದೇ ಮಾಣಿಯುದೇ ಮಾತಾಡುವ ಕ್ರಮ ಇಲ್ಲೆ.
ನಮ್ಮ ಕ್ರಮ ಪ್ರಕಾರ ಇಷ್ಟಾದರೆ ಮತ್ತೆ ಮಾಣಿಯ ಕಡೆಂದ ಶುದ್ದಿ ಬರೆಕದ.
ಇದುದೇ ನಮ್ಮ ಜಾತಿಯ ವಿಷೇಶ.ಮನೆ ನೋಡ್ಳೆ ಯಾವಗ ಬತ್ತಿ,ಎಂಗೊಗೆ ಒಪ್ಪಿಗೆ ಹೇಳಿರೆ ಮತ್ತೆ ಮಾಣಿಯ ಕಡೆಂಗೆ ಬೇಡ ಹೇಳ್ತ ಅಧಿಕಾರ ಇಲ್ಲೆ.ಅಕಸ್ಮಾತ್ ಮಾಣಿಗೆ ಕೂಸು ಇಷ್ಟ ಆಯಿದಿಲ್ಲೆ ಹೇಳ್ತ ಸಂದರ್ಭಲ್ಲಿ ದೈವ ಯೋಗ ಇಲ್ಲೆ,ಈ ಸಂಬಂಧ ಕೂಡಿ ಬತ್ತಿಲ್ಲೆ ಹೇಳುಗಷ್ಟೆ ಅಲ್ಲದ್ದೆ ಕೂಸು ಕಪ್ಪು,ಕಣ್ಣು ಓರೆ ಎಲ್ಲ ಕೊರತ್ತೆ ಹೇಳ್ತ ಕ್ರಮವೂ ಇಲ್ಲೆ.
ಇನ್ನು ಕೂಸಿನ ಕಡೆಂದ ಮಾಣಿಯ ಮನೆ ನೋಡ್ಳೆ ಹೋಪ ಕಾರ್ಯಕ್ರಮ.ಇಲ್ಲಿಯೂ ಅಷ್ಟೆ,ತುಂಬ ಜೆನ ಹೋಪ ಕ್ರಮ ಇಲ್ಲೆ.ಅಕ್ಕನೋ ಅಲ್ಲದ್ದರೆ ಸೋದರತ್ತೆಯೋ,ಒಟ್ಟಿಂಗೆ ಸೋದರ ಮಾವ°,ಭಾವಂದ್ರೋ ಒಂದು ನಾಲ್ಕಾರು ಜೆನ ಅಷ್ಟೆ,ಹೋಗಿ ಮನೆ ನೋಡುದು ಹೇಳಿರೆ ಈ ಮನೆಲಿ ನಮ್ಮ ಕೂಸಿಂಗೆ ಜೀವನ ಮಾಡ್ಳೆಡಿಗೋ ಹೇಳೀ ನೋಡುದು.ಇಷ್ಟಾದರೂ ಕೂಸಿನ ಕಡೆಂದ ಒಪ್ಪಿಗೆ ಇದ್ದು ಹೇಳಿ ತಿಳ್ಕೊಂಬ ಕ್ರಮ ನಮ್ಮಲ್ಲಿಲ್ಲೆ.
ಈ ನಮುನೆಯ ಸುಸಂಸ್ಕೃತ ಒಂದು ಏರ್ಪಾಡು ಆನು ಕಂಡ ಹಾಂಗೆ ಯೇವ ಜಾತಿಲಿಯೂ ಇಲ್ಲೆ.ಸಾಕಷ್ಟು ಜಾತಿಯ ಸ್ನೇಹಿತರ ಮದುವೆಯ ಆನು ನೋಡಿದ್ದೆ.ಕೆಲವು ಜಾತಿಲಿ ಮಾಣಿಯ ಸ್ನೇಹಿತರನ್ನೂ ಕೂಸು ನೋಡ್ಳೆ ಕರಕ್ಕೊಂಡು ಹೋಪ ಕ್ರಮ ಇದ್ದು.
ಇದರಲ್ಲಿ ಇನ್ನೊಂದು ಅನುಕೂಲ ಹೇಳಿರೆ ಆರಿಂಗೂ ಹೆಚ್ಚು ಕರ್ಚಿಲ್ಲೆ.ಒಂದು ಕೂಸಿನ ಮದುವೆ ಆಯೆಕ್ಕಾರೆ ಏಳೋ ಎಂಟೋ ಮಾಣಿಯಂಗೊ ನೋಡಿ ಬೇಡ ಹೇಳಿದ್ದೂ ಇದ್ದು,ಈಗಳೂ.ಅಂಬಗ ಕೂಸಿನ ಅಪ್ಪಂಗೆ ಹೊರೆ ಎಷ್ಟಕ್ಕು ಹೇಳಿ ಯೋಚನೆ ಮಾಡಿ.
ಇಷ್ಟಾದ ಮೇಲೆಯೇ ಕೂಸಿನ ಒಪ್ಪಿಗೆ ಕೇಳುದು.ಹಿರಿಯರೆಲ್ಲ ನೋಡಿ ಒಪ್ಪಿದ ಮೇಲೆ ಕೂಸು ಸಾಮಾನ್ಯವಾಗಿ ಬೇಡ ಹೇಳಿ ಹೇಳ,ಆದರೆ ಹೇಳುವ ಅವಕಾಶ ಮಾಂತ್ರ ನಮ್ಮ ಜಾತಿ ಪದ್ಧತಿಲಿ ಇಪ್ಪದು.
ಅಖೇರಿಗೂ ಋಣಾನುಬಂಧ ಇಲ್ಲೆ ಹೇಳ್ತ ಅವಕಾಶ ಬೇರೆ ಜಾತಿಲಿ ಇಲ್ಲೆ.ಹಾಂಗೆ ಹೇಳಿತ್ತು ಹೇಳಿ ಕೊರತ್ತೆ ಹೇಳಿ ತಿಳ್ಕೊಂಬಲೂ ಇಲ್ಲೆ ಮಾಣಿ.
ಎರಡೂ ಕಡೆಯವಕ್ಕೂ ಒಪ್ಪಿಗೆ ಹೇಳಿ ಆದ ಮೇಲೆ ಬದ್ಧ ಹೇಳಿ ಮಾಡ್ತವು,ಅದಕ್ಕೆ ಮಾಂತ್ರ ಹತ್ತರಾಣವಕ್ಕೆಲ್ಲ ಹೇಳಿ ಕರಕ್ಕೊಂಡು ಹೋಪ ಕ್ರಮ ಇಪ್ಪದು.ನೆರೆಕರೆಯವೋ ಸಂಬಂಧಿಕರೋ ಕೂಸಿನ ಮನಗೆ ಹೋಪದು ಬದ್ಧಕ್ಕೇ.
ಒಂದು ಹತ್ತು,ತಪ್ಪಿರೆ ಹದ್ನೈದು ಜೆನ ಹೋಕು.
ಈಗಾಣ ಹಾಂಗೆ ಶಾಮಿಯಾನ ಹಾಕಿ ಅಡಿಗೆ ಬಟ್ಟಕ್ಕಳ ಬಪ್ಪಲೆ ಹೇಳಿ ಒಂದು ಮದುವೆಯೇ ಮಾಡುವಷ್ಟು ಜೆನ ಸೇರ್ಸುವ ಕ್ರಮ ನಮ್ಮಲ್ಲಿಲ್ಲೆ.ನಿಶ್ಚಯದ ದಿನ ಮಾಣಿ ಹೋಪ ಕ್ರಮವೂ ನಮ್ಮಲ್ಲಿಲ್ಲೆ.ಉಂಗಿಲು ಕೊಡುದು,ಸೀರೆ ಕೊಡುದು ಹೇಳಿ ಕರ್ಚಿನ ದಾರಿ ಎಂತದೂ ಇಲ್ಲೆ.
ಜೋಯ್ಸರ ಬಪ್ಪಲೆ ಹೇಳಿ ಗುರಿಕ್ಕಾರರ ಸಮಕ್ಷಮ ಮಾಣಿಯ ಅಪ್ಪನೂ ಕೂಸಿನ ಅಪ್ಪನೂ ಎಲೆ ಅಡಕ್ಕೆ ಪಗರಿರೆ ಆತು.
ಈಗ ಮಾತು ಕಥೆ ಅಕ್ಕು,ಮದುವೆ ಹೇಂಗೆ ಮಾಡ್ತು,ಎಷ್ಟು ಜೆನ ಅಕ್ಕು(ಎಲ್ಲಿ ಮಾಡ್ತು ಹೇಳಿ ಕೇಳೆಕ್ಕು ಹೇಳಿ ಇಲ್ಲೆ,ಮನೆಲೇ),ಹೇಂಗೂ ನೆರೆಕರೆಯವು,ಗುರಿಕಾರ°,ನೆಂಟ್ರು ಎಲ್ಲೊರೂ ಇಪ್ಪಗಳೇ ಆಯೆಕ್ಕದಾ.
ಹಾಲು ಮಜ್ಜಿಗೆಂದ ಹಿಡ್ದು ಪಾತ್ರ ಸಾಮಾನು ಹಸೆ ವಸ್ತ್ರ,ಗ್ಲಾಸು ಮಣೆ ಹೇಳಿ ನೆರೆಕರೆಯವೇ ಸಹಕಾರ ಕೊಡುಗು.ಚೆಪ್ಪರ ಹಾಕಲೆ ನಾಲ್ಕು ಜೆನವೋ ಅಲ್ಲದ್ದರೆ ಒಂದಷ್ಟು ಮಡಲೋ ನೆರೆಕರೆಂದಲೇ.
ಪೈಸ ಕೊಟ್ಟರೆ ಸಿಕ್ಕಲೂ ಸಿಕ್ಕ,ಪೈಸ ಇದ್ದವೂ ಕಮ್ಮಿಯೇ.ನಮ್ಮ ಊಟಲ್ಲಿ ನೀರು ಮಜ್ಜಿಗೆ ಬಳುಸುವ ಕ್ರಮ ಇನ್ನೂ ಇಪ್ಪದರ ಮೂಲ ಇದುವೆಯೋ?
ಕೂಸಿಂಗೆಂತ ಕೊಡ್ತಿ,ಎಷ್ಟು ಚಿನ್ನ ಹಾಕುತ್ತಿ ಹೇಳಿ ಎಲ್ಲ ಕೇಳುವ ಕ್ರಮ ನಮ್ಮದರಲ್ಲಿ ಇಲ್ಲೆ.ಮಾಣಿಗೆ ಸ್ಕೂಟರು ಕಾರು,ಅಥವಾ ಬಂದವಕ್ಕೆ ಒಳ್ಕೊಂಬಲೆ ವ್ಯವಸ್ತೆ ಎಂತದೂ ಮಾಣಿಯ ಕಡೆಂದ ಕೇಳದ್ದಿಪ್ಪ ಕ್ರಮ ಇನ್ಯಾವ ಜಾತಿಲಿ ಇಕ್ಕು?(ಎನ್ನ ಪೈಕಿಲಿ ಕೂಸಿಂಗೆ ಎಷ್ಟು ಚಿನ್ನ ಹಾಕುತ್ತಿ ಹೇಳಿ ಲೋಕಾಭಿರಾಮಲ್ಲಿ ಕೇಳಿದ್ದಕ್ಕೆ ಸಂಬಂಧವೇ ಬೇಡ ಹೇಳಿದ ಉದಾಹರಣೆ ಇದ್ದು)
ಮುಹೂರ್ತ ನಿಘಂಟಾದ ಮೇಲೆ ಎಲ್ಲರ ಸಹಕಾರಲ್ಲೇ ಜೆಂಬಾರ ಅಪ್ಪದು ನಮ್ಮಲ್ಲಿ.ಮುಹೂರ್ತ ದಕ್ಶಿಣೆಂದ ಹಿಡುದು ಊಟ ದಕ್ಶಿಣೆ ವರೆಗೆ ಎರಡೂ ಕಡೆ ಒಪ್ಪಿಯೇ ಮಾಡುಗಷ್ಟೆ.
ಮದುವೆ ಕಳುದು ನಾಲ್ಕರಲ್ಲಿ ಚತುರ್ಥಿ ಮಾಡಿಯೊಂಡಿದ್ದದು ಮಾಷ್ಟ್ರು ಮಾವಂಗೋ,ಶರ್ಮಪ್ಪಚ್ಚಿಗೋ ನೆಂಪಿಕ್ಕು
ಎಲ್ಲಿಯೋ ಒಂದರಿ ಆಂಜಿದ ಹಾಂಗೆ ಆದ ಮಾಣಿಯ ಕೂಸೂ,ಕೂಸಿನ ಮಾಣಿಯೂ ತಿಳ್ಕೊಂಬಲೆ ಬೇಕಾಗಿ ಈ ಕ್ರಮ ಮಾಡಿರೆಕ್ಕು.ಇದರ ನಿಜವಾದ ಉದ್ದೇಶ ಬೇರೆಯೂ ಇದ್ದು.ಘಟ್ಟದ ಮೇಲೆಲ್ಲ ಪ್ರಸ್ತ ಹೇಳಿ ಮಾಡ್ತವು,ಅದಾದರೆ ಮದುವೆ ಕಳುದು ಎಷ್ಟೋ ದಿನ ಆಗಿ ಮಾಡುದು.
ಇರುಳು ಹೋಮ ಊಟ ಎಲ್ಲ ಅಪ್ಪ್ಗ ತಡವಪ್ಪದು ಸಹಜವೇ ಆದ್ದರಿಂದಾಯಿಕ್ಕು,ಅಥವಾ ವಾಹನ ಸೌಕರ್ಯ ಇಲ್ಲದ್ದೆ ನೆಡದೇ ದಿಬ್ಬಾಣ ಹೋಯೆಕ್ಕರೆ ಸಮಯ ಬೇಕಲ್ಲದೋ ಅಂತೂ ಆರನೇ ದಿನವೇ ಸಟ್ಟುಮುಡಿ.
ಸತ್ತುಮುಡಿಗೂ ಅಷ್ಟೇ ಎಲ್ಲೋರಿಂಗೂ ಹೇಳುಗು ಅಥವಾ ಹೇಳೆಕ್ಕು ಹೇಳುವ ಕಡ್ಡಾಯ ಎಂತದೂ ಇಲ್ಲೆ.
ಆ ದಿನ ಕೂಸಿಂಗೆ ಉದಾಸನ ಅಪ್ಪಲಾಗ ಹೇಳಿ ಅಬ್ಬೆ ಅಪ್ಪ° ನಿಂದು ಮರದಿನ ಮದ್ಮಾಯ ಮದ್ಮಾಳ ಕರಕ್ಕೊಂಡು ಕೂಸಿನ ಮನಗೆ ಹೋಗಿ ಮತ್ತೆ ಪುನಃ ಮರದಿನ ಮಾಣಿ ಮನಗೆ ಬಿಟ್ಟಿಕ್ಕಿ ಬರೆಕದ.
ಈ ಇಡೀ ಆರು ದಿನಲ್ಲಿ ಎರಡೂ ಕಡೆಯವಕ್ಕೆ ಹೊರೆ ಹೇಳಿ ಅಪ್ಪ ಹಾಂಗಿಪ್ಪ ಯೇವ ಕ್ರಮವೂ ನಮ್ಮಲ್ಲಿಲ್ಲೆ.
ನೆಂಟ್ರಾಗಲೀ ನೆರೆಕರೆಯವಾಗಲೀ ಜೆಂಬಾರವ ಸುಧರಿಕೆ ಮಾಡದ್ದೆ ಓಡ್ತ ಕ್ರಮ ನಾವು ಈಗ ಕಲಿತ್ತಾ ಇದ್ದಷ್ಟೆ.
- ಉಡುಗೊರೆ - February 3, 2013
- ಈ ಮರ್ಯಾದಿ ನವಗೆ ಬೇಕೋ - January 31, 2013
- ಹೇಂಗೆ? - September 30, 2012
ಹವ್ಯಕರ ಮದುವೆ ಕ್ರಮ ಒೞೆದಿದ್ದು ಎಂಬದರಲ್ಲಿ ಎರಡು ಮಾತಿಲ್ಲೆ. ಹತ್ತು ವರ್ಷದ ಹಿಂದೆಯೇ, ಎನ್ನ ಭಾವನವರ ಮಗಳ ಮದುವೆಲಿ ಫೋಟೊ-ವಿಡಿಯೋ ಖರ್ಚು 50 : 50 ಮಾಡಿಕೊಂಡದ್ದಿದಾ. ಛತ್ರದ ಬಾಡಿಗೆಯುದೆ ಮದುವೆ ದಿನದ್ದು ಬಾವ ಹಾಕಿದ್ದು, ಸಟ್ಟುಮುಡಿ ದಿನದ್ದು ಅಳಿಯನ ಕಡೆಯವದ್ದು.
ಕೂಸು- ಮಾಣಿ-ಮನೆಯವು ಎಲ್ಲ ಒಪ್ಪಿ ಆತು ಹೇಳಿರೆ – ಪಟಾ ಪಟ್ ಹೇಳಿ ಎರಡು ತಿಂಗಳಲ್ಲಿ ಮದುವೆ ಗೌಜಿ ಮುಗುತ್ತು ! ಬೇರೆಯವು ವರ್ಷಾವಧಿ ಎಳೆವದು ನೋಡಿರೆ……… ರಾಮ ರಾಮ.
ಊಟದ ಪಂಕ್ತಿ ಹಾಕುವ ಕ್ರಮಲ್ಲಿ ಎನಗೆ ರಜ್ಜ ಸರಿ ಮಾಡಿಕೊೞೆಕ್ಕು ಹೇಳಿ ಕಾಣ್ತು. ಸುಮಾರು ಕಡೆ ಪಂಕ್ತಿ ಮಧ್ಯೆ ಎರಡು ಅಡಿ ಜಾಗವನ್ನು ಬಿಡ್ತವಿಲ್ಲೆ. ಎಲೆಗೆ ಕಾಲಿನ ದೂಳು ಬೀಳ್ತು ಹೇಳಿ ಊಟ ನೆಮ್ಮದಿ ಆವ್ತಿಲ್ಲೆ. ಕನಿಷ್ಟ ಮೂರು ಅಡಿ (ಇಬ್ಬರು ನಡೆದು ಹೋಪಷ್ಟು) ಜಾಗ ಬಿಡೆಕ್ಕು. ಅದೊಂದು ಬದಲಾವಣೆ ಮಾಡ್ಲೆ ಎಡಿಯದಾ ?
ನಮ್ಮ ಕ್ರಮದ ಮದುವೆಯ ಗಮ್ಮತ್ತೇ ಬೇರೆ ಇದ್ದು. ಅದು ಬೇರೆಲ್ಲಿಯುದೆ ಸಿಕ್ಕ.
ಲೇಖನ ಒಪ್ಪ ಆಯಿದು.
{ಒಂದು ಕೂಸಿನ ಮದುವೆ ಆಯೆಕ್ಕಾರೆ ಏಳೋ ಎಂಟೋ ಮಾಣಿಯಂಗೊ ನೋಡಿ ಬೇಡ ಹೇಳಿದ್ದೂ ಇದ್ದು,ಈಗಳೂ…}
ಈಗ ಕೂಸುಗೊ ಮಾಣಿಯಂಗಳ ಬೇಡ ಹೇಳ್ವದು… 😉
ಬಂಟಕ್ಕಳ ಒಂದು ಮದುವೆ ಸೀರೆ ಕರ್ಚಿಲ್ಲಿ, ಹವ್ಯಕ ಮದುವೆಯೊಂದರ ಕರ್ಚಿನ ಸುದಾರುಸಲೆ ಎಡಿಗು ಹೇಳ್ತವು. ನಮ್ಮ ಜಾತಿಲಿ ವರದಕ್ಷಿಣೆ ಇಲ್ಲದ್ದೆ, ಸರಳವಾಗಿ ನೆಡೆತ್ತ ಇಂತ ಮದುವೆಗೊ ನಿಜವಾಗಿಯೂ ಎಲ್ಲೋರಿಂಗುದೆ ಒಂದು ಮಾದರಿಯಾಗಿದ್ದು. ಮದುಮ್ಮಾಯನ ಕಡೆ, ಮದುಮ್ಮಾಳಿನ ಕಡೆ ಹೇಳಿ ಬೇಧ ಭಾವ ತೋರುಸದ್ದೆ, ಎಲ್ಲೋರು ಒಟ್ಟಾಗಿ ಸೇರಿ ಸುದರಿಕೆ ಮಾಡಿ ಚೆಂದಕೆ ನೆಡೆತ್ತ ಹವ್ಯಕ ಮದುವೆ ಕ್ರಮ ನಿಜವಾಗಿಯೂ ಚೆಂದ. ಆದರೆ ಇತ್ತೀಚೆಗೆ …….. ಎಲ್ಲಾ ಬದಲಾವ್ತಾ ಇದ್ದು. ಜೆನಂಗವಕ್ಕೆ ಪೈಸೆಯ ಎಂತ ಮಾಡ್ತದು, ಹೇಂಗೆ ಮುಗುಶತ್ತದು ಹೇಳ್ತದೇ ತಲೆಬೆಶಿ ಆಗಿಬಿಟ್ಟಿದು. ನಮ್ಮ ಹಳೆ ಕ್ರಮವ ಮರವಲಾಗ ಹೇಳಿ ಮರೆಯದ್ದೆ ಹೇಳಿದ ಡಾಕ್ಟ್ರಿಂಗೆ ಮರೆಯದ್ದೆ ಅಭಿನಂದನೆ ತಿಳುಸುತ್ತಾ ಇದ್ದೆ.
ನಮ್ಮ ಮದುವೆ,ಉಪನಯನ೦ಗಳಲ್ಲಿ ಇಪ್ಪ ಸರಳತೆ ಬೇರೆಲ್ಲಿಯೂ ಸಿಕ್ಕ. ಕೂಸಿನ ಕಡೆ೦ದ ಪೈಸೆ,ಚಿನ್ನ ಅಪೇಕ್ಷೆ ಮಾಡುವವಕ್ಕೆ ಮರ್ಯಾದೆಯೂ ಇರ.
ಇ೦ದು ಓಡಾಟದ ಜೀವನಲ್ಲಿ ಹಬ್ಬದ ವಾತಾವರಣ ಕಮ್ಮಿ ಆಗಿ ಯಾ೦ತ್ರಿಕತೆ ಬಪ್ಪಲೆ ಶುರು ಆಯಿದು ಹೇಳ್ತದು ಬೇಜಾರದ ಸ೦ಗತಿ.ಒಳ್ಳೆಯ ಚಿ೦ತನೆಗೆ ಧನ್ಯವಾದ,ಮಾವ.
ಎನ್ನ ಅಕ್ಕನ ಮದುವೆಯೂ ಆರು ದಿನದ್ದಾಗಿತ್ತು,ಆ ಆರು ದಿನದ ಹಬ್ಬದ ವತಾವರಣ ಇನ್ನೂ ಮೊನ್ನೆ ಮೊನ್ನೆ ನೋಡಿದ ಹಾಂಗೇ ನೆಂಪಿದ್ದು.ಈಗ ಹಾಂಗೆ ಮಾಡ್ಳೆ ಸಾಧ್ಯವೂ ಇಲ್ಲೆ,ಇತ್ತೀಚೆಗೆ ಮುಳಿಯದ ಚಿನ್ನದ ಅಂಗ್ಡಿಯವರ ಪೈಕಿ ಆರದ್ದೋ ಆರು ದಿನದ ಮಸುವೆ ಆದ್ದು ಹೇಳಿ ನೆಂಪು.
ಹಿಂದಾಣ ಕಾಲದ ಮದುವೆ ಸಂಪ್ರದಾಯವ, ಜಾತಕ ಕೊಡ್ತಲ್ಲಿಂದ ಸುರು ಮಾಡಿ ಮದುವೆ ವರೆಗಿನ ಸಂಪ್ರದಾಯಂಗಳ ತಿಳಿಶಿ ಕೊಟ್ಟದು ಲಾಯಿಕ ಆಯಿದು.
ನಮ್ಮಲ್ಲಿ ಈಗಳೂ ಕೂಸು ನೋಡ್ಲೆ ಹೋಪಗ ಅಥವಾ ಮಾಣಿ ಮನೆಗೆ ಹೋಪಗ ಹೆಚ್ಚು ಜೆನ ಹೋಪ ಸಂಪ್ರದಾಯ ಇಲ್ಲೆ ಹೇಳಿಯೇ ಹೇಳ್ಲಕ್ಕು
[ಮದುವೆ ಕಳುದು ನಾಲ್ಕರಲ್ಲಿ ಚತುರ್ಥಿ ಮಾಡಿಯೊಂಡಿದ್ದದು ಮಾಷ್ಟ್ರು ಮಾವಂಗೋ,ಶರ್ಮಪ್ಪಚ್ಚಿಗೋ ನೆಂಪಿಕ್ಕು]- ಈ ವಿಚಾರ ಕೇಳಿ ಗೊಂತು ಮಾತ್ರ. ಎನ್ನ ಅಕ್ಕನ ಮದುವೆ 1975 ರಲ್ಲಿ. ಅಂಬಗ ಎರಡು ದಿನದ ಮದುವೆಗೆ ಬಂದು ಎತ್ತಿದ್ದು ಹೆಚ್ಚಿನ ಕಡೆ.
ಈಗ ಒಂದು ದಿನ, ಒಂದು ಹೊತ್ತಿಂಗೆ ಬಂದು ಎತ್ತಿದ್ದದೂ ಇದ್ದು.
ಆ ಚೆಪ್ಪರ ಹಾಕುತ್ತ ಗೌಜಿ, ಪಾತ್ರೆ ಸಾಮಾನುಗಳ ಕ್ರೋಢೀಕರಿಸುವದು, ಹೇಳಿಕೆ ಹೇಳಲೆ ಅಕ್ಷತೆ ಹಿಡ್ಕೊಂಡು ಇಬ್ರಿಬ್ರು ಹೋಪದು (ಗ್ರಾಮಲ್ಲಿ) ಇದೆಲ್ಲಾ ಈಗ ಅಪರೂಪ ಹೇಳಿಯೇ ಕಾಣುತ್ತು.
ಮರತ್ತು ಹೋದ ಒಂದು ಸಂಪ್ರದಾಯವ ನೆಂಪು ಮಾಡಿಸಿಕೊಟ್ಟದಕ್ಕೆ ಧನ್ಯವಾದಂಗೊ
ಈ ನಮುನೆಯ ಸುಸಂಸ್ಕೃತ ಒಂದು ಏರ್ಪಾಡು ಆನು ಕಂಡ ಹಾಂಗೆ ಯೇವ ಜಾತಿಲಿಯೂ ಇಲ್ಲೆ. – ಖಂಡಿತ ಸತ್ಯ. ಯೇವುದೇ ಆಚಾರ ವಿಚಾರ ವಿಷಯಲ್ಲೂ ಇಷ್ಟೊಂದು ಚೊಕ್ಕ ಚೆಂದ ವಿಷಯಯುಕ್ತ ನಮ್ಮಲ್ಲೇ ಒಪ್ಪ.
[ನೆಂಟ್ರಾಗಲೀ ನೆರೆಕರೆಯವಾಗಲೀ ಜೆಂಬಾರವ ಸುಧರಿಕೆ ಮಾಡದ್ದೆ ಓಡ್ತ ಕ್ರಮ ನಾವು ಈಗ ಕಲಿತ್ತಾ ಇದ್ದಷ್ಟೆ.] – ಸಮಯ ಇಲ್ಲೆ , ಅಂಬೇರ್ಪು ಹೇಳ್ವ ಒಂದು ಮಾನಸಿಕ ಸ್ಥಿತಿಗೆ ನಾವು ತಳ್ಳಲ್ಪಟ್ಟಿದು ಹೇಳ್ವದು ಭಾಗಿಕ ಸತ್ಯ ಹೇಳಿ ಆನು ಗ್ರೆಶೋದು.
ಬೈಲಿನ ಚಿಂತನೆಗೆ ನಿಂಗಳ ಬರಹ ಸ್ವಾಗತಾರ್ಹ ಹೇಳಿ ಕೇಜಿ ಮಾವಂಗೊಪ್ಪ.
ಕೇಜಿಮಾವ! ನಮ್ಮ ಕ್ರಮವ ತುಂಬಾ ಚೆಂದಕ್ಕೆ ನಿರೂಪಿಸಿದ್ದಿ.. ಎಂಗಳ ಪೀಳಿಗೆಗಪ್ಪಗ ಈ ಕ್ರಮಂಗಳಲ್ಲಿ ಸಾಕಷ್ಟು ಬದಲಾವಣೆಗೊ ಆಯ್ದು ಹೇಳುದು ನಿಜವೇ ಆದರೂ, ಕ್ರಮಂಗೊ ಇನ್ನೂದೆ ಒಳುಕ್ಕೊಂಡು ಬಯಿಂದು ಹೇಳುದೇ ಸಮಾಧಾನ ಪಡುವ ವಿಷಯ ಕಾಣ್ತು.. ಆದರೂ ನಮ್ಮ ಸಂಸ್ಕೃತಿಯ ಕ್ರಮಂಗೋ, ಆಚರಣೆಗೋ ಇನ್ಯಾವ ದಿಕ್ಕೂ ಸಿಕ್ಕ ಹೇಳ್ತ ನಿಂಗಳ ಮಾತು ಅಕ್ಷರಶಃ ನಿಜ..
ಸುಂದರ ನಿರೂಪಣೆಂದ ಎನ್ನ ಅಪ್ಪ ಅಮ್ಮಂಗೆ ಅವರ ಮದುವೆ ಸಟ್ಟುಮುಡಿಯ, ಮದ್ವೆ ಆಗಿ ಇಪ್ಪತ್ತೈದು ವರ್ಶ ಆದ ಸಂದರ್ಭಲ್ಲಿ ನೆನಪಿಸಿದ್ದಕ್ಕೆ ಧನ್ಯವಾದಂಗೋ!!
ಹಳೆ ನೆಂಪುಗ ಮತ್ತೆ ಕೆದಕ್ಕಿ ಬೈಲಿಲಿ ತಿಳಿಸಿದ್ದಕೆ ಮಾವಂಗೆ ಧನ್ಯವಾದ. “ಮರವಲಾಗ” ಹೇಳುದು ಬರಿಯ ಶಿರ್ಷಿಕೆ ಆಗಿ ಒಳಿಯದ್ದೆ ನಮ್ಮೆಲ್ಲರ ಆಶಯವು ಆಯೆಕ್ಕು ಹೇಳಿ ಒಪ್ಪ.
🙂
ಹಳೆ ಕಾಲದ ನೆಂಪು ಮಾಡಿದ ಮಾವಂಗೆ ಧನ್ಯವಾದ.