Oppanna.com

ಅಧಿಕಮಾಸದ ಮಹತ್ವ

ಬರದೋರು :   ಜಯರಾಮ್ಮಾವ ಮಾಂಬಾಡಿ    on   09/09/2012    13 ಒಪ್ಪಂಗೊ

ಮಾಂಬಾಡಿ ಜಯರಾಮ ಮಾವ ನಮ್ಮ ಬೈಲಿಂಗೆ ಹೊಸಬ್ಬರಲ್ಲ, ಶುದ್ದಿ ಹೇಳುಲೆ ಹೊಸಬ್ಬರಷ್ಟೇ.
ಕೊಡೆಯಾಲದ ಎಮ್.ಆರ್.ಪಿ.ಎಲ್ ಲಿ ಇನ್‍ಸ್ಪೆಕ್ಷನ್ ಡಿಪಾರ್ಟ್‍ಮೆಂಟಿಲಿ ಚೀಫ್ ಮೆನೇಜರ್ ಆಗಿದ್ದುಗೊಂಡು, ಎಡೇಡೇಲಿ ಬೈಲಿಂಗೂ ಬಂದು ಶುದ್ದಿಗಳ ಇನ್‍ಸ್ಪೆಕ್ಷನ್ ಮಾಡಿಗೊಂಡಿತ್ತಿದ್ದವು.
ಶರ್ಮಪ್ಪಚ್ಚಿ ಹತ್ತು ಹಲವು ಬಾರಿ ಒತ್ತಾಯಿಸಿದ ಮತ್ತೆ, ಈಗ ಬೈಲಿಂಗೆ ಬಂದು ಶುದ್ದಿ ಹೇಳ್ತಾ ಇದ್ದವು.
ಅಧಿಕ ಮಾಸದ ಬಗ್ಗೆ ಮಾಹಿತಿಪೂರ್ಣ ಲೇಖನಂದ ಶುದ್ದಿ ಆರಂಭ ಮಾಡ್ತವು. ಎಲ್ಲೋರುದೇ ಪ್ರೋತ್ಸಾಹಿಸೇಕು ಹೇಳ್ತದು ಕೋರಿಕೆ.
~
ಬೈಲಿನ ಪರವಾಗಿ

 

ಅಧಿಕಮಾಸದ ಮಹತ್ವ:

ಅಧಿಕಮಾಸೇ  ಅಧಿಕಾಧಿಕ  ಫಲಂ   ಹೇಳುದರ ಎಲ್ಲರೂ  ಕೇಳಿಕ್ಕು.  ಅಂದರೇ   ಅಧಿಕಮಾಸಲ್ಲಿ  ಮಾಡುವ   ಉತ್ತಮ   ಕೆಲಸಂಗೊಕ್ಕೆ   ಹೆಚ್ಚು ಫಲ ಹೇಳುವ ಅರ್ಥ.     ಈ”ಅಧಿಕಮಾಸ “ಹೇಳಿರೆ ಎಂತಾಳಿ ನೋಡುವ.

ದ್ವಾತ್ರಿಂಶದ್ಭಿಃ ಗತೈಃ ಮಾಸೈಃ ದಿನೈಃ ಶೋಡಶಭಿಸ್ತಥಾ
ಘಟಿಕಾನಾಂ ಚತುಷ್ಕೇಣ ಪತತ್ಯಧಿಕಮಾಸಕಃ
।।

ಅಧಿಕ ಮಾಸ” ಶಬ್ದವೇ  ಹೇಳುವಾಂಗೆ  ಹೆಚ್ಚಿನತಿಂಗಳು.
ಚಾಂದ್ರಮಾನ  ರೀತಿಲಿ  ವರ್ಷಕ್ಕೆ೩೫೪ ದಿನಂಗೊ. ಇದರ  ಸರಿಮಾಡುಲೆ ೩೩ತಿಂಗಳಿಂಗೊದರಿ  ಒಂದು ತಿಂಗಳು  ಜಾಸ್ತಿಬತ್ತು. ಆ ಜಾಸ್ತಿ  ತಿಂಗಳನ್ನೇ “ಅಧಿಕ ಮಾಸಹೇಳಿ  ಹೇಳುತ್ತವು. ಹೇಳಿದಾಂಗೆ  ಈ  ವರ್ಷ  ಅಧಿಕ  ಭಾದ್ರಪದ  ಮಾಸ  ಆಗಸ್ಟ್ ೧೮ ಶನಿವಾರಂದ   ಸುರುವಾಗಿ  ಸಪ್ಟಂಬರ ೧೬  ಆದಿತ್ಯವಾರದ ವರೆಗೆ ಇದ್ದು.  ಸಪ್ಟಂಬರ ೧೭ ರಿಂದ  ನಿಜ  ಭಾದ್ರಪದ ಮಾಸ. ಸಪ್ಟಂಬರ ೧೯ ಕ್ಕೆ ಗಣೇಶ ಚತುರ್ಥಿ.

ಚಾಂದ್ರಮಾನ  ರೀತಿಲಿ  ವರ್ಷಕ್ಕೆ೩೫೪ ದಿನಂಗೊ  ಅಂದರೆ೧೧ದಿನಂಗೊ  ಕಮ್ಮಿ ಆತು.

ಒಂದನೇ ವರ್ಷಕ್ಕೆ (12 ತಿಂಗಳು)- 11ದಿನ
ಎರಡನೇವರ್ಷಕ್ಕೆ(12 ತಿಂಗಳು)- 11ದಿನ
ಮತ್ತಾಣ 8 ತಿಂಗಳಿಂಗೆ    – 7.5 (ಏಳೂವರೆ)ದಿನ
ಮತ್ತಾಣ 16 ದಿನ, 4 ಗಳಿಗೆಗೆ – 0.5 (ಅರ್ಧದಿನ)
ಒಟ್ಟು 33 ತಿಂಗಳಿಂಗೆ= 30 ದಿನ(ಒಂದುಮಾಸ)  

ಆದರೆ  ಕೆಲಸರ್ತಿ  ಗ್ರಹಸಂಚಾರಂಗಳಲ್ಲಿ   ವ್ಯತ್ಯಾಸ  ಅಪ್ಪಕಾರಣ  ೨೯,೩೦,೩೧,೩೫  ತಿಂಗಳಿಂಗೊಂದರಿಯೂ ಅಧಿಕಮಾಸ ಬಪ್ಪ ಕ್ರಮ  ಇದ್ದು.
ಸೌರಮಾನರೀತಿಲಿ  ವರ್ಷಕ್ಕೆ೩೬೫ದಿನಂಗೊ  ಬಪ್ಪಕಾರಣ “ಅಧಿಕಮಾಸ” ಇಲ್ಲೆ. ಆದರೆ  ಸೌರಮಾನ ರೀತಿಯ ಅನುಸರಿಸುವವು ಕೂಡಾ ಸಂಕಲ್ಪ ಮಾಡುವಗ ಚಾಂದ್ರಮಾನತಿಂಗಳ ಹೆಸರು ಹೇಳುತ್ತವು.
(ಉದಾ: ಶ್ರಾವಣಮಾಸೇ, ಕೃಷ್ಣಪಕ್ಷೇ….) ಹಾಂಗಾಗಿ ನಮ್ಮಲ್ಲಿ ಕೆಲವರಿಂಗೆ ಎರಡೂ ಲಗಾವು ಆವುತ್ತು.

ಅಧಿಕಮಾಸದ ಅಧಿಪತಿ “ಪುರುಷೋತ್ತಮ ಅರ್ಥಾತ್ ಕೃಷ್ಣ.
ಭಗವದ್ಗೀತೆಲಿ ಪುರುಷೋತ್ತಮಯೋಗ -15 ನೇಅಧ್ಯಾಯಲ್ಲಿ ಕೃಷ್ಣ  ಆನೇಪುರುಷೋತ್ತಮಹೇಂಗೆ  ಹೇಳಿ   ಎಷ್ಟು   ಚೆಂದಕೆ   ಹೇಳುತ್ತ   ಅಲ್ಲದಾ!

ಯಸ್ಮಾತ್ಕ್ಷರಮತೀತೋಹಂ   ಅಕ್ಷರಾದಪಿಚೋತ್ತಮಃ|
ಅತೋಸ್ಮಿಲೋಕೇವೇದೇಚ   ಪ್ರಥಿತಃ  ಪುರುಷೋತ್ತಮಃ”||

ಹಾಂಗಾಗಿ     ಇದರ “ಪುರುಷೋತ್ತಮಮಾಸ ”   ಹೇಳಿಯೂ    ಹೇಳುತ್ತವು.
ಅಧಿಕಮಾಸಲ್ಲಿ   ಸಂಕ್ರಾಂತಿ   ಬತ್ತಿಲ್ಲೆ.ಹಾಂಗಾಗಿ    ಮದುವೆ, ಉಪನಯನ,  ಮನೆಒಕ್ಕಲು  ಇತ್ಯಾದಿ   ಶುಭಕಾರ್ಯಂಗೊ  ಆವುತ್ತಿಲ್ಲೆ.  ಮುಖ್ಯವಾಗಿ   ಅಧಿಕಮಾಸ   ದೈವಚಿಂತನೆಯ   ಸಮಯ. ಜೆಂಬ್ರದ  ಗವುಜಿ   ಇಲ್ಲದ್ದ  ಕಾರಣ  ಏಕಾಗ್ರತೆಗೆ ಸುಲಭ.
ಬೇರೆ  ಸಮಯಲ್ಲಿ   ಮಾಡುವದರಂದ   ಅಧಿಕಮಾಸಲ್ಲಿ    ನಾವು   ದಾನಧರ್ಮಂಗಳ  ಮಾಡಿದರೆ   ಹೆಚ್ಚು ಫಲ   ಇದ್ದೂಳಿ
ತಿಳಿದೋರು  ಹೇಳುತ್ತವು. ಮತ್ತೆ  ಈ   ಕೆಳಾಣದ್ದರನ್ನೂ  ಮಾಡಿದರೆ  ಒಳ್ಳೇದಡ

ತೀರ್ಥಸ್ನಾನಃ     ಅಧಿಕಮಾಸದ   ೩೦ದಿನವುದೆ   ಪವಿತ್ರತೀರ್ಥಂಗಳಲ್ಲಿ,  ನದಿಗಳಲ್ಲಿ,  ಸಮುದ್ರಲ್ಲಿ  ಸ್ನಾನ.
ನಕ್ತಭೋಜನಃ
 
    ಹಗಲೆಲ್ಲ    ಉಪವಾಸ, ಇರುಳು   ಊಟ.
ಧಾರಣಪಾರಣಃ
    ಒಂದುದಿನ    ಉಪವಾಸ   ಮರದಿನಊಟ- ಹೀಂಗೆ  ೧೫ದಿನ  ಉಪವಾಸ  ೧೫ದಿನ  ಊಟ.
ದೀಪದಾನಃ
   
       ಸಪಾತ್ರರಿಂಗೆ   ಅಥವಾ    ದೇವಸ್ಥಾನಕ್ಕೆ.
ತಾಂಬೂಲದಾನಃ
 
    ಬ್ರಾಹ್ಮಣ, ಸುವಾಸಿನಿಯರಿಂಗೆ.
ಫಲದಾನಃ
  
          ಮಾವಿನಹಣ್ಣು,  ಬಾಳೆಹಣ್ಣು  ಇತ್ಯಾದಿ
ಅಪೂಪದಾನಃ
 
        ಅಪ್ಪ(ಗಣಪತಿಗೆಪ್ರಿಯ)

ದಾನಂಗಳ   ಕೊಡುವಗ   ೩೩ಸಂಖ್ಯೆಲಿ (ಉದಾಃ ೩೩ಜನಂಗೊಕ್ಕೆ  ತಾಂಬೂಲ, ಹಣ್ಣು   ಇತ್ಯಾದಿ)    ಕೊಟ್ಟರೆ ಒಳ್ಲೆದಡ.
ಹಾಂ! ಒಟ್ಟಿಂಗೆ    ದಕ್ಷಿಣೆಯೂ   ಕೊಡೆಕ್ಕಡ.
ಒಂದುವೇಳೆ   ಎಲ್ಲಾ೩೦ದಿನ   ಎಡಿಯದ್ದರೆ     ಶುಕ್ಲಪಕ್ಷ     ದ್ವಾದಶಿ, ಹುಣ್ಣಿಮೆ, ಕೃಷ್ಣಪಕ್ಷ ಅಷ್ಟಮಿ, ನವಮಿ, ದ್ವಾದಶಿ, ಚತುರ್ದಶಿ, ಅಮಾವಾಸ್ಯೆ  ಹೀಂಗೆ     ಯಾವುದಾದರೂ     ಒಂದುದಿನ  ದಾನಕೊಟ್ಟರೂ  ಅಕ್ಕೂಳಿ  ಶಾಸ್ತ್ರಲ್ಲಿ   ಹೇಳ್ತು.
ಅಧಿಕಮಾಸ  ವ್ರತ  ಮಾಡುವದರಿಂದ     ಬ್ರಹ್ಮಹತ್ಯಾ ದೋಷಂಗಳಂಥಾ  ದೊಡ್ಡಪಾಪಗಳೂ ಪರಿಹಾರ  ಆವುತ್ತಡ.  ಅಧಿಕಮಾಸಲ್ಲಿ    ದೇವರ    ಕೋಣೆಲಿ    ನಂದಾದೀಪ    ಹಗಲಿರುಳೂ  ಹೊತ್ತಿಗೊಂಡೇ   ಇರೆಕ್ಕಡ.
ತಿಂಗಳುಪೂರ್ತಿ  ಅಯಾಚಿತ    ವ್ರತ ಲ್ಲಿ (ಆರತ್ರೂದೇ ಎಂತದೂ ಬೇಡದ್ದೇ) ಇರೆಕ್ಕಡ.

ಅಧಿಕಮಾಸಲ್ಲಿ  ಈ  ಕೆಳಾಣ  ಶ್ಲೋಕವ   ದಿನಾಗ್ಳೂ   ಉದಿಯಪ್ಪಗ  “ನಾಹಂಕರ್ತಾ ಹರಿಃಕರ್ತಾ”(ಮಾಡು(ಸು)ವವ ಆನಲ್ಲ ,ದೇವರೂ)ಳಿ ಗ್ರೇಶಿಗೊಂಡು, ಜ್ಞಾನ ,  ಭಕ್ತಿ,  ವೈರಾಗ್ಯ  ಬೇಡಿಗೊಂಡು   ೩೩  ಸರ್ತಿ   ಜಪಮಾಡೆಕ್ಕಡ.

ಗೋವರ್ಧನಧರಂ    ವಂದೇ   ಗೋಪಾಲಂ     ಗೋಪರೂಪಿಣಂ |
ಗೋಕುಲೋತ್ಸವ     ಮೀಶಾನಂ   ಗೋವಿಂದಂ   ಗೋಪಿಕಾಪ್ರಿಯಂ” || 

ಜಯರಾಮ್ಮಾವ ಮಾಂಬಾಡಿ
Latest posts by ಜಯರಾಮ್ಮಾವ ಮಾಂಬಾಡಿ (see all)

13 thoughts on “ಅಧಿಕಮಾಸದ ಮಹತ್ವ

  1. ಬೈಲಿನ ಎಲ್ಲೋರ ಆತ್ಮೀಯತೆಗೆ ಧನ್ಯವಾದಂಗೊ

    1. ನಿಂಗೊ ಈಗ ಕೇಳಿದ್ದೇ ಆಯ್ಕೊ ಮಾವ? ಬೇಜಾರು ಮಾಡಿಕ್ಕೆಡಿ ತಮಾಷೆಗೆ ಹೇಳಿದೆ ಆತೊ. ಈಗಳೇ ತಪ್ಪು ಕಟ್ಟಿದ್ದೆ.

    2. ಯಕ್ಷಲೋಕಲಿ,ಕೆಲವು ಸರ್ತಿ,ಪ್ರಸ೦ಗ ಅಧಿಕವೊ/ವೈಯುಕ್ತಿಕವೋ ಆದರೆ,ಈ ಅಸ್ತ್ರ ಪ್ರಯೋಗ ಅಪ್ಪದು ಇದ್ದು ಹೇಳಿ ,ಕಾಣುತ್ತು?. ಅಲ್ಲಿಗೆ ಮುಗುತ್ತು ಗೊತ್ತಿ೦ಪ್ಪ ಈ ಪ್ರಸ೦ಗದ ವಿಷಯ.

    3. ಒಂದೇ ‘ಪ್ರಸಂಗ’ ಅಲ್ಲದ್ದೆ ಹೆಚ್ಚಿಗೆ ಇದ್ದರೆ ‘ಅಧಿಕ ಪ್ರಸಂಗ’ ಹೇಳ್ತ ಅರ್ಥ ತೆಕ್ಕೊಂಡರೆ, ಒಂದು ವಿಶಯ ‘ಅಧಿಕ ಮಾಸ’ ದೊಟ್ಟಿಂಗೆ ಇನ್ನೊಂದು ವಿಶಯ ಬಂದರೆ ಅದು “ಅಧಿಕ ಪ್ರಸಂಗ” ಆಗಿಕ್ಕೋ..?

    4. ಜಿ ವೆಂಕಟಸುಬ್ಬಯ್ಯನವರ “ಇಗೋ ಕನ್ನಡ-೨” ರಲ್ಲಿ “ಅಧಿಕ ಪ್ರಸಂಗಿ” ಹೇಳುವ ಶಬ್ದ ಇಂಗ್ಲಿಶಿನ Intruder ಶಬ್ದಕ್ಕೆ ಸಮಾನಾರ್ಥ ಹೇಳಿ ಕೊಟ್ಟಿದವು.

  2. ಅಧಿಕ ಮಾಸವ ಪುರುಷೋತ್ತಮ ಮಾಸ ಹೇಳುವ ವಿಷಯ ಎನಗೆ ಹೊಸತ್ತು. ಗೊಂತಿಲ್ಲದ ಹಲವು ಮಾಹಿತಿಗಳ ಕೊಟ್ಟತ್ತು ಈ ಶುದ್ದಿ. ಮಾಂಬಾಡಿ ಅಣ್ಣಂಗೆ ಸ್ವಾಗತ, ನಿಂಗಳ ವೈವಿಧ್ಯಮಯ ಸುದ್ದಿಗೊ ಬೈಲಿಂಗೆ ಬರಳಿ.

  3. ಅಧಿಕಮಾಸದ ಮಹತ್ವ ಹೇಳದ್ದು ಸಮಯೋಚಿತವಾಯಿದು

  4. ಮಾಂಬಾಡಿ ಭಾವಂಗೆ ಬೈಲಿಂಗೆ ಸ್ವಾಗತ. ಉಪಯುಕ್ತ ಮಾಹಿತಿಗೆ ಧನ್ಯವಾದ. ಬೈಲಿಂಗೆ ‘ಬಂದುಗೊಂಡಿರಿ – ಬರಕ್ಕೊಂಡಿರಿ’ (ಎಡೆ ಎಡಕ್ಕಿಲ್ಲಿ ಅಲ್ಲ, ಆವಗಾವಗ).

  5. ಜಯರಾಮಣ್ಣ೦ಗೆ ಬೈಲಿಗೆ ಸ್ವಾಗತ.

    ಒಳ್ಳೆಯ ಮಾಹಿತಿ. ಧನ್ಯವಾದ ಜಯರಾಮಣ್ಣಾ

  6. ಸಕಾಲಿಕ ಲೇಖನ. ನಾವು ಹೀಂಗೆ ಅಧಿಕಮಾಸ[ಸೌರಮಾನದ ಸಂಕ್ರಮಣ ಇಲ್ಲದ ಚಾಂದ್ರಮಾಸ]ಲೆಕ್ಕ ಹಿಡಿವ ಕಾರಣ ನಮ್ಮ ವರ್ಷದ ಲೆಕ್ಕ ಸರಿಯಾವ್ತು. ಹಿಜರಿ ಶಕಲ್ಲಿ ಹಾಂಗೆ ಹೊಂದಾಣಿಕೆ ಮಾಡುಲೆ ಇಲ್ಲೆ.ಹಾಂಗಾಗಿ ನವಗೆ ೩೪ ವರ್ಷ ಅಪ್ಪಾಗ ಹಿಜರಿಲಿ ೩೫ ಆಗಿರ್ತು!

  7. ಜಯರಾಮಂಗೆ ಬೈಲಿಂಗೆ ಸುಸ್ವಾಗತ.
    ಅಧಿಕ ಮಾಸದ ಈ ಸಮಯಲ್ಲಿ ಅದರ ಮಹತ್ವವ ತಿಳುಶುವ ಲೇಖನ ಸಕಾಲಿಕ.
    ಒಳ್ಳೆ ಮಾಹಿತಿ ಸಿಕ್ಕಿತ್ತು.

  8. ಅಧಿಕ ಮಾಸದ ವಿವರಣೆ, ಮಹತ್ವ ಲಾಯಿಕಾಯಿದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×