- ಭರಣಿ ಒಡದ ಮುದಿಯಜ್ಜ - June 21, 2013
- ಅಂತರಿಕ್ಷ -05: ಎರಡನೇ ಸುತ್ತಿನ ವಿಶ್ವ ಪರ್ಯಟನೆ - January 2, 2013
- ಅಂತರಿಕ್ಷ -04: ವಿಶ್ವ ಪರ್ಯಟನೆ - December 26, 2012
ಈ ವಿಶ್ವದ ಪ್ರಯಾಣವ ನಾವು ಒಂದಲ್ಲ, ಎರಡು ಸರ್ತಿ ಮಾಡುವ. ಒಂದು ಸರ್ತಿ ಮೇಲೆಂದ ಮೇಲೆ – ಒಟ್ಟು ಕಲ್ಪನೆ ಬಪ್ಪಲೆ. ಮತ್ತೆ ಇನ್ನೊಂದು ಸರ್ತಿ ವಿವರವಾಗಿ ಎಲ್ಲ ಅಂಶಂಗಳನ್ನೂ ಶುರುವಾಣ ಸರ್ತಿಯ ಮಾಹಿತಿಯ ಬೆಳಕಿಲಿ.
ನಮ್ಮ ಸೌರ ವ್ಯೂಹ ಹೇಳಿದರೆ ಸೂರ್ಯ ಮತ್ತು ಅವನ ಸುತ್ತ ಸುತ್ತುತ್ತಾ ಇಪ್ಪ ಆಕಾಶ ಕಾಯಂಗಳ ಒಂದು ಸಮೂಹ. ಇಲ್ಲಿ ನಾವು ಈಗಾಗಲೇ ನೋಡಿದ ಗ್ರಹಂಗ, ಅವುಗಳ ಉಪಗ್ರಹಂಗ, ಧೂಮ ಕೇತುಗ, ಕ್ಷುದ್ರ ಗ್ರಹಂಗ, ಇನ್ನು ಸೌರ ವ್ಯೂಹದ ಹೆರಾಣ ಅಂಚಿಲಿಪ್ಪ ಕುಬ್ಜ ಗ್ರಹಂಗಳ ಗಡಣ. ಅಲ್ಲಿಂದ ಮತ್ತೆ ಸೌರ ವ್ಯೂಹದ ಸಾಂದ್ರತೆ ಕಡಮ್ಮೆ ಆವ್ತಾ ಹೋವ್ತು. ಅಲ್ಲಿ ಸೂರ್ಯನ ಪ್ರಭಾವ ಕ್ಷೀಣ ಆವ್ತಾ ಹೋಗಿ, ಸೂರ್ಯನ ಕ್ಷೇತ್ರಂದ ಹೆರದಿಕ್ಕೆ ಇಪ್ಪ ಇತರ ಆಕಾಶ ಕಾಯಂಗ (heavenly bodies) ಗಳ ಪ್ರಭಾವ ಅನುಭವಕ್ಕೆ ಬಪ್ಪಲೆ ಶುರು ಆವ್ತು. ವೋಯೇಜರ್ ಈ ಜಾಗೆಗೆ ತಲುಪುತ್ತಾ ಇದ್ದು ಹೇಳಿ ಸುದ್ದಿ.
ಕ್ಷೀರ ಪಥ (milky way) ಹೇಳ್ತ ಹೆಸರಿನ ನಮ್ಮ ಗೆಲಾಕ್ಸಿ.
‘ಕ್ಷೀರ ಪಥ’ (milky way) ಹೇಳ್ತದು ಒಂದು ಗೆಲಾಕ್ಸಿ (ನಕ್ಷತ್ರಂಗಳ ಸಮೂಹ). ನಮ್ಮ ಸೂರ್ಯ ಮತ್ತು ಸೂರ್ಯನ ಹಾಂಗಿಪ್ಪ ಅನೇಕ ನಕ್ಷತ್ರಂಗಳ ಒಳಗೊಂಡ ಗೆಲಾಕ್ಸಿ ಇದು. ಗೆಲಾಕ್ಸಿಗೆ ನೀಹಾರಿಕೆ ಹೇಳುದು ನಮ್ಮ ಪರ್ಯಾಯ ಪದ. ಸುಮಾರು ನೂರು ಬಿಲಿಯಂದ ನಾನ್ನೂರು ಬಿಲಿಯ ನಕ್ಷತ್ರಂಗಳ ಒಳಗೊಂಡ ನಮ್ಮ ಗೆಲಾಕ್ಸಿಯ ಉದ್ದ – ಅಗಲಂಗಳ ಬಗ್ಗೆ ಹೇಳ್ತರೆ – ಅದು ಒಂದು ತಟ್ಟೆಯಾಕಾರಲ್ಲಿದ್ದು ಹೇಳಿ ಅಂದಾಜು ಮಾಡಿದ್ದವು. ಸಾಧಾರಣ ವೃತ್ತಾಕಾರಲ್ಲಿಪ್ಪ ಈ ತಟ್ಟೆಯ ವ್ಯಾಸ (ಒಂದು ಕೊನೆಂದ ಇನ್ನೊಂದು ಕೊನೆ) ಒಂದು ಲಕ್ಷ ಜ್ಯೋತಿರ್ವರ್ಷ. ಮತ್ತು ಇದು ಸಾವಿರ ಜ್ಯೋತಿರ್ವರ್ಷ ದಪ್ಪ. ಈ ಗೆಲಾಕ್ಸಿಯ ಬಿಲಿಯಾಂತರ ನಕ್ಷತ್ರಂಗೊಕ್ಕೆ ಇಪ್ಪ ಗ್ರಹಂಗ, ಮತ್ತೆ ಕೆಲವು ತಿರ್ಗಾಡಿ ಗ್ರಹಂಗ (ಇವಕ್ಕೆ ಅವರದ್ದೇ ಆದ ನಕ್ಷತ್ರಂಗ ಇಲ್ಲೆ ಸುತ್ತು ಹೊಡವಲೆ, ಒಟ್ಟ್ರಾಸಿ ಅಲ್ಲಿ ಇಲ್ಲಿ ಒಡಾಡಿಗೊಂಡು ಇರ್ತವು) ಒಟ್ಟು ಸೇರಿ ಹತ್ತರೆ ಹತ್ತರೆ ನಕ್ಷತ್ರಂಗಳಷ್ಟೇ ಸಂಖ್ಯೆಲಿ ಇಪ್ಪದರ ವಿಜ್ಞಾನಿಗ ಪ್ರಯೋಗ ಮೂಲಕ ಕಂಡಿದವು. ಒಂದೊಂದು ನಕ್ಷತ್ರಕ್ಕೂ ಅದರದ್ದೇ ಆದ ಗ್ರಹಂಗಳ ವ್ಯೂಹ ಇದ್ದು ಅಲ್ಲಿ ಜೀವ ವಿಕಾಸ ಆಗಿಪ್ಪ ಸಾಧ್ಯತೆ ಇದ್ದು.
ಈ ಗೆಲಾಕ್ಸಿಯ ಮಧ್ಯಲ್ಲಿ ನಕ್ಷತ್ರಂಗ ಇಪ್ಪ ಸಾಂದ್ರತೆ ಹೆಚ್ಚು. ಕೇಂದ್ರಂದ ದೂರ ಹೋದ ಹಾಂಗೇ ನಕ್ಷತ್ರಂಗಳ ಸಾಂದ್ರತೆ ಕಡಮ್ಮೆ ಆವ್ತಾ ಹೋವ್ತು. ಈ ನಕ್ಷತ್ರಂಗಳ ಮಧ್ಯೆ ಇಪ್ಪ ‘ಅವಕಾಶ'(space)ವ ಒಂದು ರೀತಿಯ ಅನಿಲ (gas) ಮತ್ತು ಧೂಳು (dust) ಕೂಡಿಪ್ಪ ತಟ್ಟೆ ಆವರಿಸಿ ಇದ್ದು.
ನಮ್ಮ ಗೆಲಾಕ್ಸಿಯ ಹಾಂಗಿಪ್ಪ ಗೆಲಾಕ್ಸಿಗ ಈ ವಿಶ್ವಲ್ಲಿ ಕೋಟಿಗಟ್ಟಲೆ ಇದ್ದವಡ. ನಮ್ಮ ಗೆಲಾಕ್ಸಿಗೆ ಅತೀ ಹತ್ತರೆ ಇಪ್ಪ ಗೆಲಾಕ್ಸಿಗೆ ಏಂಡ್ರೋಮೀಡಾ ಹೇಳಿ ಹೆಸರು. ಅದರ ಆಕಾರ ರಜಾ ಬೇರೆ ರೀತಿ. ಮುಂದೆ ಎಂದೋ ಒಂದು ದಿನ (?) – ಸುಮಾರು ನಾಲ್ಕು ಬಿಲಿಯ ವರ್ಷ ನಂತರ, ನಮ್ಮ ಗೆಲಾಕ್ಸಿಯೂ, ಈ ಏಂಡ್ರೋಮೀಡಾವೂ ಪರಸ್ಪರ ಢಿಕ್ಕಿ ಹೊಡವಲೆ ಇದ್ದಡ. ಅದರಂದ ಮತ್ತೆ ಎಂತ ಅಕ್ಕು ಹೇಳಿ ಅಂದಾಜಿ ಮಾಡಿದ್ದವು ವಿಜ್ಞಾನಿಗ. ಅದರ ನಮ್ಮ ಎರಡನೇ ಸುತ್ತಿನ ‘ವಿಶ್ವ ಪರ್ಯಟನೆ’ಲಿ ಚರ್ಚೆ ಮಾಡುವ.
ನಾವೇನಾದರೂ ಬೆಳಕಿನ ವೇಗಲ್ಲಿ (ಈಗಾಣ ಭೌತ ಶಾಸ್ತ್ರದ ಪ್ರಕಾರ ಹೇಳ್ತರೆ ಅದು ಅಸಾಧ್ಯ) ಹೋದರೆ ಈ ಗೆಲಾಕ್ಸಿಯ ಒಂದು ಅಂಚಿಂದ ಇನ್ನೊಂದು ಅಂಚಿಂಗೆ ತಲುಪುಲೆ ಒಂದು ಲಕ್ಷ ವರ್ಷ ಬೇಕು. ಅದರಂದ ಕಡಮ್ಮೆ ವೇಗಲ್ಲಿ ಹೋವ್ತರೆ ಇನ್ನೂ ಹೆಚ್ಚು ಸಮಯ ಬೇಕು. ಹಾಂಗಿಪ್ಪ ಕೋಟ್ಯಂತರ ಗೆಲಾಕ್ಸಿಗ ಇಪ್ಪ ಈ ವಿಶ್ವವ ಸಂಪೂರ್ಣ ಪ್ರಯಾಣ ಮಾಡೆಕ್ಕಾದರೆ? ಇಪ್ಪ ದೂರವನ್ನೂ, ಬೇಕಪ್ಪ ಸಮಯವನ್ನೂ ನಮ್ಮ ಮನಸ್ಸಿಲೇ ಕಲ್ಪಿಸಿಗೊಂಬ. ಅದರ ಮುಂದೆ ನಮ್ಮ ಆಯುಷ್ಯ? ಎಷ್ಟು ಗೌಣ!
ಹೋಲಿಕೆ ಮಾಡುದಕ್ಕಾಗಿ ಈ ವಿಶ್ವವ ಒಂದು ಆನೆ ಹೇಳಿ ತಿಳ್ಕೊಂಡರೆ, ನಮ್ಮ ಗೆಲಾಕ್ಸಿ ಅದರ ಮುಂದೆ ಒಂದು ಎರುಗು ಅಲ್ಲ ಅದಕ್ಕಿಂತಲೂ ಸಣ್ಣ. ಹಾಂಗೇ ಈ ವಿಶ್ವದ ಈಗಾಣ ಪ್ರಾಯವ ಒಂದು ನೂರು ವರ್ಷ ಹೇಳಿ ತಿಳ್ಕೊಂಡರೆ ನಮ್ಮ ನೂರು ವರ್ಷದ ಆಯುಷ್ಯ ಒಂದು ರೆಪ್ಪೆ ಮುಚ್ಚುವಷ್ಟು ಹೊತ್ತು (ಎವೆ ಇಕ್ಕುವಷ್ಟು) ಕೂಡಾ ಅಲ್ಲ. ಅದಕ್ಕಿಂತಲೂ ಕಡಮ್ಮೆ.
ನಮ್ಮ ಸೂರ್ಯ (ಮತ್ತು ಅದರ ಒಟ್ಟಿಂಗೆ ಇಪ್ಪ ನಮ್ಮ ಭೂಮಿ, ಸೌರ ವ್ಯೂಹ) ಈ ಕ್ಷೀರ ಪಥ ಗೆಲಾಕ್ಸಿಯ ಕೇಂದ್ರಂದ ಚೂರು ದೂರಲ್ಲಿ ಇದ್ದು. ಅದರ ಈ ಚಿತ್ರಲ್ಲಿ ಕಾಂಬಲಕ್ಕು.
ಈ ಚಿತ್ರಲ್ಲಿ ಕಾಂಬ ಸುರುಳಿಯಾಕಾರದ ಬಾಹುಗಳಲ್ಲಿ ಓರಿಯೋನ್ ಹೇಳಿ ಹೆಸರಿಸಲಾದ ಬಾಹುವಿಲಿ ನಮ್ಮ ಸೂರ್ಯ ಇಪ್ಪದು. ಸೂರ್ಯನೊಟ್ಟಿಂಗೇ ಸೌರ ವ್ಯೂಹವೂ.
ನಾವು ಈಗಾಗಲೇ ನೋಡಿದ ಹಾಂಗೆ ನಮ್ಮ ಗೆಲಾಕ್ಸಿಯ ಹಾಂಗಿಪ್ಪ ಕೋಟಿ ಗಟ್ಟಲೆ ಗೆಲಾಕ್ಸಿಗ ಈ ವಿಶ್ವಲ್ಲಿ ಇದ್ದವಡ.
ಹಾಂಗಿಪ್ಪ ಒಂದು ಗೆಲಾಕ್ಸಿ ಸುಮಾರು 13.3 ಬಿಲಿಯ ಜ್ಯೋತಿವರ್ಷ ದೂರಲ್ಲಿಪ್ಪದರ ಗುರುತಿಸಿದ್ದವು. ನಾವು ಈಗ ಕಾಂಬ ಅದರ ಚಿತ್ರಣ ನಿಜವಾಗಿ 13.3 ಬಿಲಿಯ ವರ್ಷ ಮದಲಾಣ ಘಟನೆ. ನಮ್ಮ ಇಡೀ ವಿಶ್ವದ ಈಗಾಣ ಪ್ರಾಯ 13.75 ಬಿಲಿಯ ವರ್ಷ. ಹೇಳಿದರೆ ಈಗ ನಾವು ನೋಡುವ ಈ ಗೆಲಾಕ್ಸಿಯ ವಿದ್ಯಮಾನ ವಿಶ್ವ ಹುಟ್ಟಿದ ಕೆಲವೇ ಕಾಲದ ನಂತರ (ಆಗ ವಿಶ್ವ ಅದರ ‘ಬಾಲ್ಯ’ಲ್ಲಿ ಇತ್ತು, ಅದರ ಪ್ರಾಯ ಬರೇ ನಾನ್ನೂರು ಮಿಲಿಯ ವರ್ಷ, ಅದರ ಈಗಾಣ ಪ್ರಾಯದ 3 ಶೇಕಡಾ ಮಾತ್ರ). ಆದ್ದರಿಂದ ಈ ಗೆಲಾಕ್ಸಿ ಕೂಡ ಆಗ ತಾನೇ ಹುಟ್ಟಿದ ಒಂದು ಗೆಲಾಕ್ಸಿ ಹೇಂಗಿರ್ತು ಹೇಳುವ ಮಾಹಿತಿಯ ನವಗೆ ಕೊಡ್ತು.
ಮುಂದಿನ ಕಂತುಗಳಲ್ಲಿ ನಕ್ಷತ್ರಂಗಳ, ಗೆಲಾಕ್ಸಿಗಳ, ಮತ್ತು ಈ ವಿಶ್ವದ ಹುಟ್ಟು, ಬೆಳವಣಿಗೆ ಮತ್ತು ನಾಶ ಅಪ್ಪ ಸಾಧ್ಯತೆಗಳ ನೋಡುವ.
ಯಬ್ಬೋ, ಈ ವಿಶ್ವದ ಎದುರು ನಮ್ಮ ಸೂರ್ಯ, ನಮ್ಮ ಭೂಮಿ, ನಾವು ಎಷ್ಟು ಸಣ್ಣ ಹೇಳಿ ಕಲ್ಪನೆ ಮಾಡ್ಳೆ ಎಡಿತ್ತಿಲ್ಲೆ . “ಆ..ನು” ಹೇಳ್ತ ಹಮ್ಮಿಪ್ಪವು ಇದರ ಆಲೋಚನೆ ಮಾಡಿರೆ ನಿಜವಾಗಿಯೂ ಲೋಕಕ್ಕೆ ಒಳ್ಳೆದಕ್ಕು. ಅಪ್ಪಚ್ಚಿಯ ಮುಖಾಂತರ ಬೈಲಿನ ನಮ್ಮೆಲ್ಲೋರ ವಿಶ್ವಪರ್ಯಟನೆ ಆವ್ತಾ ಇಪ್ಪದು ತುಂಬಾ ಸಂತೋಷ.
ಚೆನ್ನೈಭಾವ ಅಲ್ಲಿ ಭಗವಂತನ ವಿಶ್ವರೂಪ ದರ್ಶನವ ತೋರ್ಸುತ್ತಾ ಇದ್ದವು, ನಿಂಗೊ ವಿಶ್ವ ದರ್ಶನವ ತೋರ್ಸುತ್ತಾ ಇದ್ದಿ. ಅದ್ಭುತ !!!
ಇಬ್ರಿಂಗೂ ಜೈ ಹೋ..! ಬೈಲಿಂಗೂ ಜೈ ಹೋ..!
ಎನ್ನದೂ ಒ೦ದು ಜೈ ಹೋ..!.. 🙂
ಲಾಯ್ಕ ಆಯಿದು
ಕಲ್ಪನೆಗೆ ಮೀರಿದ ಅದ್ಭುತ ವಿಶಯ, ಸರಳ ನಿರೂಪಣೆ.
ಧನ್ಯವಾದಂಗೊ
ಎಂಗಳಾಂಗೆ ಉದ್ದ ಉದ್ದ ಮಾಡದ್ದೆ ಅತೀ ಸರಳ ರೀತಿಲಿ ದೊಡ್ಡ ಹಾಂಗೂ ಘನ ವಿಷಯವ ಸಣ್ಣ ಶುದ್ದಿ ಮಾಡಿ ಅಪ್ಪಚ್ಚಿ ಹೇಳ್ವ ಕ್ರಮ ತುಂಬಾ ಕೊಶಿ ಆವ್ತು ಅಪ್ಪಚ್ಚಿ. ಸೌರವ್ಯೂಹದ ವಿಸ್ಮಯಂಗಳ ಪರಿಚಯಿಸಿದ್ದು ಲಾಯಕ ಆಯ್ದು.
[ಏ ಬೋಸಬಾವೋ… ನಿಂಗ ಎಲ್ಲಿದ್ದೀಪ! ಇದಾ.. ಎರಡು ಸುತ್ತು ವಿಶ್ವ ಪಯಾಣ ಮಾಡ್ಳೆ ಇದ್ದಡೋ. ನವಗೆ ಒಂದಾರಿ ನೋಡೇಡಾದೋ.. 😀 ]
ಏ ಭಾವ,
ನಿ೦ಗೊ ಎರಡೇ ಸರ್ತಿಯೊ? ಆನು ದಿನಾಗುಳು ಇರುಳು.. ರೋಕೆಟಿಲ್ಲಿ ಚ೦ದ್ರ ಗ್ರಹಕ್ಕೆ ಹೋಗಿ ಬತ್ತೆ…
ಅದರಡಿಗೊ?? 😉
ಹೋ..! ಆ ದಿನಾ ಹೊತ್ತೋಪಗ ಹೋಪ ರೋಕೆಟ್ಟು ನಿಂಗಳದ್ದೇಯೋ…. !
ಹಾ° ಸಮ. ಇನ್ನಾಣ ಸರ್ತಿ ಹೋಪಗ ‘ಇದು ಎಂಗಳದ್ದೇ ಬಂಡಿ. ನವಗೆ ಟಿಕೇಟು ಬೇಡ ಸ್ವಾಮಿ’ ಹೇಳ್ತೆ ಆತ.
ಬಾವೋ.. ವಾರಕ್ಕೊಂದರಿ ಆದರೂ ಬೈಲಿಂಗೆ ಬಂದುಗೊಂಡಿರಿಪಾ.
ಅಬ್ಬಾ… ಹೇಳೊದರಿ೦ದ ಹೆಚ್ಚೇನೂ ಹೇಳುಲೆಡಿಯದ್ದ ಶುದ್ದಿ ಅಪ್ಪಚ್ಚಿ.ನಾವು ಈ ಬ್ರಹ್ಮಾ೦ಡಲ್ಲಿ ಒ೦ದು ಧೂಳಿನ ಕಣವೂ ಅಲ್ಲ !
ಸಮಯದ ವಿರುದ್ಧಗತಿಯ ಚಲನೆಯ ಕಲ್ಪನೆಯೇ ಹೊಸ ಅನುಭವ ಕೊಡ್ತು.