Oppanna.com

ಅಂತರಿಕ್ಷ -04: ವಿಶ್ವ ಪರ್ಯಟನೆ

ಬರದೋರು :   ಪಟಿಕಲ್ಲಪ್ಪಚ್ಚಿ    on   26/12/2012    6 ಒಪ್ಪಂಗೊ

ಪಟಿಕಲ್ಲಪ್ಪಚ್ಚಿ

ಈ ಸರ್ತಿ ಬೇರೆ ಬೇರೆ ಆಕಾಶ ಕಾಯಂಗಳ ಹುಟ್ಟು-ಬೆಳವಣಿಗೆ-ಅಂತ್ಯ ಈ ಕುರಿತು ನೋಡುವ.

ನಮ್ಮ ಸೂರ್ಯ

ನಮ್ಮ ಸೌರ ವ್ಯೂಹ ಹೇಳಿದರೆ ಸೂರ್ಯ ಮತ್ತು ಅವನ ಸುತ್ತ ಸುತ್ತುತ್ತಾ ಇಪ್ಪ ಆಕಾಶ ಕಾಯಂಗಳ ಒಂದು ಸಮೂಹ.

ಸುಮಾರು ಐದು ಬಿಲಿಯ ವರ್ಷಕ್ಕೂ ಹಿಂದೆ  ಸೂರ್ಯ, ಭೂಮಿ, ಸೌರ ವ್ಯೂಹ ಇತ್ತಿದ್ದವಿಲ್ಲೆ. ಬದಲಿಂಗೆ ಧೂಳು ಮತ್ತು ಅನಿಲ (gas) ದ ಒಂದು ದೊಡ್ಡ ಮೋಡ ಅಂತರಿಕ್ಷಲ್ಲಿ ಉರುಳುತ್ತಾ ಸ್ಥಾನ ಪಲ್ಲಟ ಆಗಿಗೊಂಡು ಇತ್ತು. ತನ್ನದೇ ಗುರುತ್ವಾಕರ್ಷಣ ಶಕ್ತಿಂದಾಗಿ ಅದು ಸಂಕುಚಿತ ಆವ್ತಾ ಇದ್ದ ಹಾಂಗೇ ಅದರ ದ್ರವ್ಯ ರಾಶಿ ಹೆಚ್ಚುತ್ತಾ ಹೋತು, ಒಟ್ಟಿಂಗೆ ತಾಪಮಾನವೂ.

ನಂತರ ಸರಿ ಸುಮಾರು ಐದು ಬಿಲಿಯ ವರ್ಷ ಹಿಂದಿನ ಕಾಲಲ್ಲಿ, ಈ ಮೋಡಲ್ಲಿಪ್ಪ ಎಲ್ಲ ಅನಿಲವೂ ಒಂದು ಉರಿಯುವ ಗೋಲವಾಗಿ ಮಾರ್ಪಟ್ಟು, ಅದರ ಕೇಂದ್ರ ಭಾಗಲ್ಲಿ ಉಷ್ಣತೆ ವಿಪರೀತ ಏರಿತ್ತು. ಆಗ ಆ ಗೋಲಲ್ಲಿದ್ದ ಜಲಜನಕ ಅಣು-ಸಂಯೋಜನೆಗೊಳಪಟ್ಟು ಹೀಲಿಯಮ್ ಆಗಿ ಬದಲಪ್ಪಲೆ ಸುರು ಆತು.  ಬೆಳಕು ಮತ್ತು ಉಷ್ಣತೆಯ ಹೊರ ಬೀರುಲೆ ಸುರು ಮಾಡಿತ್ತು ಈ ಗೋಲ. ಆ ಗೋಲವೇ ಒಂದು ನಕ್ಷತ್ರ ಆತು. ಅದುವೇ ನಮ್ಮ ಸೂರ್ಯ.

ಆ ಗೋಲಲ್ಲಿದ್ದ ಎಲ್ಲ ಅನಿಲವೂ ಸೂರ್ಯನ  ಒಳ ಭಾಗಲ್ಲೇ ಸೇರದ್ದ ಕಾರಣ, ಒಳುದ ಅನಿಲದ ಭಾಗ ಒಂದು ತಟ್ಟೆಯಾಕಾರಲ್ಲಿ ಸೂರ್ಯನ ಸುತ್ತಲೂ ಸುತ್ತುತ್ತಾ ಕ್ರಮೇಣ ಸೌರ ವ್ಯೂಹದ ಗ್ರಹ, ಉಪಗ್ರಹ, ಧೂಮಕೇತು, ಇತ್ಯಾದಿ ಆಕಾಶ ಕಾಯಂಗ ಆಗಿ ಪರಿವರ್ತನೆ ಆತು.

ಇನ್ನೊಂದು ಐದು ಬಿಲಿಯ ವರ್ಷದ ವರೆಗೆ ಉರಿಯುವಷ್ಟು ಜಲಜನಕ ಸೂರ್ಯನಲ್ಲಿದ್ದು. ಈ ರೀತಿ ಎಲ್ಲ ಜಲಜನಕ ಅನಿಲವೂ ಮುಗುದ ಮೇಲೆ, ಸೂರ್ಯ ಈಗಿಪ್ಪ ಗಾತ್ರಕ್ಕಿಂತ ಎಷ್ಟೋ ಪಾಲು ಹಿಗ್ಗಿ ‘ಕೆಂಪು ದೈತ್ಯ’ (red giant) ಆವ್ತು. ಹೀಂಗೆ ಹಿಗ್ಗಿದ ಸೂರ್ಯ ತನ್ನ ವ್ಯಾಪ್ತಿಲಿ ಬಪ್ಪ ಒಂದೊಂದೇ ಗ್ರಹಂಗಳ ಕಬಳಿಸುತ್ತಾ ಬತ್ತು. ಸೂರ್ಯ ಮುಂದುವರಿತ್ತಾ ಭೂಮಿಯನ್ನೂ ನುಂಗಿ ಹಾಕುಗು.  ಆದರೆ ಅದಕ್ಕೆ ಎಷ್ಟೋ ಮದಲೇ  ಸೂರ್ಯ ಹತ್ತರೆ ಹತ್ತರೆ ಬಂದ ಕಾರಣ ಭೂಮಿಯ ಉಷ್ಣತೆ ವಿಪರೀತ ಹೆಚ್ಚಿ, ಜೀವಿಗಳ ವಾಸಕ್ಕೆ ತಕ್ಕುದಾಗಿರ್ತಿಲ್ಲೆ. ಈ ಭೂಮಿಲಿಪ್ಪ ಜೀವಿಗ ಎಲ್ಲ ನಶಿಸಿ ಹೋಗಿರ್ತವು ಆ ಸಮಯಕ್ಕಪ್ಪಗ. ಈ ಹಿಗ್ಗುತ್ತಾ ನುಂಗುತ್ತಾ ಹೋಪ ಕಾರ್ಯ ಕೆಲವು ಮಿಲಿಯ ವರ್ಷಂಗಳ ವರೆಗೆ ನಡಗು. ಕೊನೆ ಕೊನೆಗೆ ತನ್ನ ಹೊರ ಕವಚದ ಹೆಚ್ಚಿನ ಭಾಗವ ಕಳಚಿ ಹಾಕಿದ ಸೂರ್ಯ ಪ್ರಖರವಾಗಿ ಉರಿವ ಕೇಂದ್ರ ಭಾಗ ಮಾತ್ರ ಹೊಂದಿದ್ದು ಶ್ವೇತ ಕುಬ್ಜ (white dwarf) ಆಗಿ ಪರಿವರ್ತನೆ ಹೊಂದುತ್ತು.

 NGC_4414_(NASA-med)

ಹಿಂದೆ ಸೂರ್ಯ ಈಗ ಇಪ್ಪ ಹಾಂಗೆ ಇತ್ತಿಲ್ಲೆ ಹೇಳಿ ಕಲ್ಪಿಸಿಗೊಂಬದು ರಜಾ ಕಷ್ಟವೇ, ಆದರೆ ಒಂದು ಕಾಲಲ್ಲಿ ಬಹಳ ಹಿಂದೆ ಸೂರ್ಯನೇ ಇತ್ತಿಲ್ಲೆ. ಹಾಂಗೇ ಭೂಮಿ ಮತ್ತು ನಮ್ಮ ಸೌರ ವ್ಯೂಹದ ಸಕಲ ಗ್ರಹಂಗಳೂ ಇಲ್ಲದ್ದ ಕಾಲ ಘಟ್ಟ ಒಂದಿತ್ತು.

ಹಾಂಗೇ ಮುಂದೆ (ಬಹಳ ವರ್ಷಗಳ ನಂತರ) ಸೂರ್ಯನೂ, ಅದರ ಒಟ್ಟಿಂಗೆ ಇಡಿಯ ಸೌರ ವ್ಯೂಹವೂ ಇಲ್ಲೆ ಹೇಳಿ ಅಪ್ಪಲೆ ಇದ್ದು. ಮತ್ತೆ ಕೆಲವು ಮಿಲಿಯ ವರ್ಷಂಗಳ ನಂತರ ಈ ಶ್ವೇತ ಕುಬ್ಜದ ಉಷ್ಣತೆ ಕಡಮ್ಮೆ ಆವ್ತಾ ಬಂದು, ಕೊನೆಗೆ ಸೂರ್ಯ ಹೇಳಿರೆ ಒಂದು ಕ್ಷೀಣ ಮಸುಕು ಮಸುಕು ಕಾಯವಾಗಿ ಮಂಕಾದ ಮುದ್ದೆ ಆಗಿ ಕಣ್ಮರೆ ಆವ್ತು.  ಅದರ ಕಲ್ಪಿಸಿಗೊಂಬಗ ಮನಸ್ಸು ರಜಾ ದು:ಖಕ್ಕೆ ಒಳಗಾವ್ತು.

T.S.Eliot ಹೇಳುವ ಆಂಗ್ಲ ಕವಿ ಒಂದು ಕವಿತೆಲಿ ಹೇಳ್ತ – This is the way the world ends – not with a bang, but with a whimper. – ಈ ಜಗತ್ತು ಭಯಂಕರ ಸ್ಫೋಟದ ಮೂಲಕ ಕೊನೆ ಆವ್ತಿಲ್ಲೆ, ಅದರ ಬದಲಾಗಿ ಒಂದು ಕ್ಷೀಣ ಅಳುವಿನೊಟ್ಟಿಂಗೆ ಕಥೆ ಮುಗಿಸುತ್ತು ಹೇಳಿ ಅವನ ಕವಿತೆಯ ತಾತ್ಪರ್ಯ. ರವಿ ಕಾಣದ್ದದರ ಕವಿ ಕಾಣ್ತ ಹೇಳೊದಿದಕ್ಕೆಯೋ ಏನೋ.

ನಕ್ಷತ್ರ

ನಕ್ಷತ್ರಂಗಳ ಜೀವನವೂ ಹೀಂಗೇ. ಕೊನೆಯ ಹಂತ ಮಾತ್ರ ಅವುಗಳ ಗಾತ್ರದ ಮೇಲೆ ಅವಲಂಬಿಸಿಗೊಂದು ಚೂರು ಬದಲಾಗಿರ್ತು.

ಸಣ್ಣ ಮತ್ತು ಮಧ್ಯಮ ಗಾತ್ರದ ನಕ್ಷತ್ರಂಗ (ನಮ್ಮ ಸೂರ್ಯ ಮಧ್ಯಮ ಗಾತ್ರದ್ದು) ಶ್ವೇತ ಕುಬ್ಜವಾಗಿ ಕೊನೆಗೊಂಡರೆ, ಅದಕ್ಕಿಂತ ದೊಡ್ಡ ನಕ್ಷತ್ರಂಗ ಅಂತ್ಯ ಕಾಲಕ್ಕೆ ನ್ಯೂಟ್ರಾನ್ ನಕ್ಷತ್ರ ಆಗಿ ಜೀವನವ ಮುಗಿಸುತ್ತವು. ಅತೀ ದೊಡ್ಡ ನಕ್ಷತ್ರಂಗ ಕೊನೆಗೆ ಎಷ್ಟು ಗುರುತ್ವಾಕರ್ಷಣ ಶಕ್ತಿಯ ಹೊಂದುತ್ತವು ಹೇಳಿರೆ ಬೆಳಕು ಕೂಡಾ ಅದರಿಂದ ಹೆರ ಹೋಪಲೆ ಆವ್ತಿಲ್ಲೆ.  ಯಾವದೇ ಬೆಳಕನ್ನೂ ಬೀರದ್ದ ಕಾರಣ ಅವು ಕಪ್ಪಾಗಿ ಭಾಸ ಆವ್ತವು. ಹಾಂಗಾಗಿಯೇ ಅವಕ್ಕೆ black hole ಹೇಳಿ ಹೆಸರು ಮಡುಗಿದ್ದವು. ನಾವು ಪರ್ಯಾಯ ಪದವಾಗಿ ‘ಕೃಷ್ಣ ರಂಧ್ರ’ ಹೇಳುತ್ತು.

ಗೆಲಾಕ್ಸಿಲಿಪ್ಪ ಇತರ ಅನಿಲ, ಧೂಳು, ಇತ್ಯಾದಿಗಳ ಪ್ರಭಾವಂದಾಗಿ ಈ ನಕ್ಷತ್ರಂಗಳ ಹುಟ್ಟು-ಬೆಳವಣಿಗೆ-ಸಾವಿನ ಪ್ರಕ್ರಿಯೆ ಸಾಗುತ್ತಲೇ ಇರ್ತು. ಎಲ್ಲಿ ವರೆಗೆ ಹೇಳಿರೆ ಗೆಲಾಕ್ಸಿಗಳ ಜೀವಿತ ಅವಧಿ ವರೆಗೆ.

ಗೆಲಾಕ್ಸಿ

ಪರಸ್ಪರ ಗುರುತ್ವಾಕರ್ಷಣೆಂದ ಒಟ್ಟಾಗಿ ಇಪ್ಪ ಆಕಾಶ ಕಾಯಂಗಳ ಗುಂಪಿಂಗೆ ಗೆಲಾಕ್ಸಿ ಹೇಳುದು. ಈ ಆಕಾಶ ಕಾಯಂಗ ಯಾವದು ಹೇಳಿದರೆ – ನಕ್ಷತ್ರ, ಅವುಗಳ ಗ್ರಹ-ಉಪಗ್ರಹಂಗ, ಕೆಲವು ನಾಶ ಹೊಂದಿದ ನಕ್ಷತ್ರ ಇತ್ಯಾದಿಗಳ ಪಳೆಯುಳಿಕೆ, ಮತ್ತು ಆಕಾಶ ಕಾಯಂಗಳ ನಡುವೆ ಇಪ್ಪ ಧೂಳು, ಅನಿಲಂದ ಕೂಡಿಪ್ಪ ದ್ರವ್ಯ ಮಾಧ್ಯಮ ಇತ್ಯಾದಿ. ಇದಲ್ಲದ್ದೆ ಇನ್ನೂ ಸರಿಯಾಗಿ ಅರ್ಥ ಆಗದ್ದ dark matter ಈ ಗೆಲಾಕ್ಸಿಗಳ ಹೆಚ್ಚಿನ ಭಾಗ. ಈ  dark matter ನ ನಾವು ‘ಕೃಷ್ಣ ದ್ರವ್ಯ’ ಹೇಳಿ ಹೇಳುಲಕ್ಕು. ಹೆಚ್ಚಿನ ಗೆಲಾಕ್ಸಿಗಳಲ್ಲಿ ಸುಮಾರು 90 ಶೇಕಡಾ ದ್ರವ್ಯ ಈ ಕೃಷ್ಣ ದ್ರವ್ಯದ ರೂಪಲ್ಲಿ ಇರ್ತು. ಗೆಲಾಕ್ಸಿಗಳ ಚಲನೆಯ ವೇಗ, ನಕ್ಷತ್ರಂಗಳ ಜನನದ ಸಂಖ್ಯೆ ಮತ್ತು ಜನನದ ಆವರ್ತನೆಗೆ ಅನುಗುಣವಾಗಿ ಅವುಗಳ ಅಳತೆ ಮಾಡಿದ ದ್ರವ್ಯ ಕಂಡು ಬಾರದ್ದ ಕಾರಣ ಕೃಷ್ಣ ದ್ರವ್ಯ ಹೇಳುವದು ಇದ್ದು – ಅದು ಈ ವಿದ್ಯಮಾನಕ್ಕೆ ಕಾರಣ ಹೇಳುವ ಕಲ್ಪನೆಗೆ ಎಡೆ ಮಾಡಿದ್ದು. ಈ ಕಲ್ಪನೆ ಗೆಲಾಕ್ಸಿಗಳ ಚಟುವಟಿಕೆಗೆ ಒಂದು ಅರ್ಥ ಪೂರ್ಣ (ಸಮರ್ಥನೀಯ) ವಿವರಣೆ ಕೊಡುಲೆ ಸಾಧ್ಯ ಮಾಡ್ತು.

 Milky_Way_Galaxy_and_a_meteor

ಸತತ ವೀಕ್ಷಣಂದ ಎಂತ ಗೊಂತಾಯಿದು ಹೇಳಿದರೆ ಹೆಚ್ಚಿನ ಗೆಲಾಕ್ಸಿಗಳ ಕೇಂದ್ರ ಪ್ರದೇಶಲ್ಲಿ ಅಗಾಧವಾದ ಗಾತ್ರದ ಕೃಷ್ಣ ರಂಧ್ರಂಗ ಇಪ್ಪ ಸಾಧ್ಯತೆ ಹೆಚ್ಚಾಗಿದ್ದು. ಈ ಕೃಷ್ಣ ರಂಧ್ರಂಗ ತನ್ನ ವ್ಯಾಪ್ತಿಲಿ ಬಂದ ಎಲ್ಲವನ್ನೂ ಗುರುತ್ವಾಕರ್ಷಣೆಂದ ನುಂಗಿ ಬಿಡುತ್ತವು – ಬೆಳಕು ಸಹಿತ. ಅವುಗಳಿಂದ ಯಾವದೂ ತಪ್ಪಿಸಿಗೊಂಡು ಹೋಪಲೆ ಎಡಿತ್ತಿಲ್ಲೆ. ಹಾಂಗಾಗಿ ಅವುಗಳ ಬಗ್ಗೆ ಹೆಚ್ಚಿನ ಮಾಹಿತಿ ಸದ್ಯಕ್ಕೆ ಇಲ್ಲೆ. ಕನಿಷ್ಟ ಒಂದಾದರೂ ಕೃಷ್ಣ ರಂಧ್ರ ನಮ್ಮ ಗೆಲಾಕ್ಸಿಲೂ ಇದ್ದು ಹೇಳಿ ವಿಜ್ಞಾನಿಗಳ ಅಂದಾಜಿ. ಅದಕ್ಕಿಂತಲೂ ಹೆಚ್ಚು ಇಪ್ಪಲೂ ಸಾಕು.

ಸಣ್ಣ, ದೊಡ್ಡ ಎಲ್ಲ ಸೇರಿಸಿ ಲೆಕ್ಖ ಹಾಕಿದರೆ ಈ ವಿಶ್ವಲ್ಲಿ ಕಡಮ್ಮೆ ಹೇಳಿರೂ 125  ಬಿಲಿಯದಷ್ಟು (ಈಗ ವೀಕ್ಷಿಸಿ ಅಂದಾಜಿ ಮಾಡಿದ ಹಾಂಗೆ, ಹಾಂಗೆ ವೀಕ್ಷಣೆಗೆ ಸಿಕ್ಕದ್ದ ಇನ್ನೂ ಅನೇಕ ಇಕ್ಕು – ಹೇಳಿ ಅಭಿಪ್ರಾಯ) ಗೆಲಾಕ್ಸಿಗ ಇದ್ದು. ಅವುಗಳ ಗಾತ್ರವೂ ಹಾಂಗೆ – ಸಣ್ಣ ಗೆಲಾಕ್ಸಿಗ ಹತ್ತು ಮಿಲಿಯ ನಕ್ಷತ್ರಂಗಳ ಹೊಂದಿದ್ದರೆ, ದೊಡ್ಡವು ಕೆಲವಲ್ಲಿ ನೂರು ಟ್ರಿಲಿಯ ನಕ್ಷತ್ರಂಗ ಇದ್ದವಡ. ಒಂದು ಮಿಲಿಯದಷ್ಟು ಮಿಲಿಯಂಗ ಇಪ್ಪದಕ್ಕೆ ಒಂದು ಟ್ರಿಲಿಯ (ನೂರು ಲಕ್ಷ ಕೋಟಿ) ಹೇಳುದು.

ಈ ಗೆಲಾಕ್ಸಿಲಿ ಇಪ್ಪ ನಕ್ಷತ್ರಂಗ ಗೆಲಾಕ್ಸಿಯ ಕೇಂದ್ರದ ಸುತ್ತ ಸುತ್ತು ಬತ್ತಾ ಇರ್ತವು. ನಮ್ಮ ಗೆಲಾಕ್ಸಿಲೂ ಹಾಂಗೇ. ನಮ್ಮ ಸೂರ್ಯ ತನ್ನ ಸೌರ ವ್ಯೂಹವ ಕಟ್ಟಿಗೊಂಡು ಸುತ್ತು ಬತ್ತಾ ಇದ್ದು.

 613px-Hoag's_object

ಗೆಲಾಕ್ಸಿಗಳ ಆಕಾರ, ಚಿತ್ರಂಗೊಕ್ಕೆ ಈ ಸಂಕೋಲೆ ಉಪಯೋಗ ಮಾಡಿ –

ಗೆಲಾಕ್ಸಿಗಳ ಹುಟ್ಟು ಹೇಂಗಾತು, ಮುಂದೆ ಎಂತ ಅಕ್ಕು ಹೇಳುದರ ಮುಂದಾಣ ಕಂತಿಲಿ, ಈ ವಿಶ್ವ (ಸದ್ಯಕ್ಕೆ ಈ ಎಲ್ಲಾ ಗೆಲಾಕ್ಸಿಗಳ ತನ್ನೊಳಗೆ ಹುದುಗಿಸಿಪ್ಪ ಒಂದು ವ್ಯವಸ್ಥೆಯ ವಿಶ್ವ ಹೇಳಿ ತಿಳ್ಕೊಂಬ) – ಹುಟ್ಟು-ಬೆಳವಣಿಗೆಯ ಒಟ್ಟೊಟ್ಟಿಂಗೇ ನೋಡುವ.

6 thoughts on “ಅಂತರಿಕ್ಷ -04: ವಿಶ್ವ ಪರ್ಯಟನೆ

  1. ಸೂರ್ಯನ ಹುಟ್ಟು, ಅಳಿವು ಎಲ್ಲವೂ ತುಂಬಾ ವಿಸ್ಮಯಕಾರಿ.
    ಅರ್ಥ ಆವ್ತ ಹಾಂಗಿಪ್ಪ ವಿವರಣೆಗೆ ಧನ್ಯವಾದಂಗೊ.

  2. ಓದಿ ಒಪ್ಪ ಕೊಟ್ಟ ನಿಂಗೊಗೆ ಎಲ್ಲೋರಿಂಗೂ ಧನ್ಯವಾದಂಗ.

  3. ವಿಸ್ಮಯಕಾರಿ ವಿಷಯ. ಕೆಂಪು ದೈತ್ಯ ಆಗಿ, ಶ್ವೇತ ಕುಬ್ಜಕ್ಕೆ ತಿರುಗಿ ಕ್ಷೀಣ ಕ್ಷೀಣ ಆಯ್ಕೊಂಡು ನಕ್ಷತ್ರ /ಸೂರ್ಯ ಅಳಿವದು – ಆಶ್ಚರ್ಯದ ಸಂಗತಿ.

  4. ” ನಮ್ಮ ಸೂರ್ಯ ತನ್ನ ಸೌರ ವ್ಯೂಹವ ಕಟ್ಟಿಗೊಂಡು ಸುತ್ತು ಬತ್ತಾ ಇದ್ದು.” ಈ ವಿಷಯ ಗೊ೦ತೇ ಇಲ್ಲೆ.ರಾಟೆ ತೊಟ್ಲಿಲಿ (Giant wheel) ನಾವು ತಿರುಗೊದು ಮಾ೦ತ್ರ ಗೊ೦ತು.ನೋಡಿರೆ ಇಡೀ ತೊಟ್ಲೇ ಜಾಗೆ ಬದಲ್ಸುತ್ತಾ ಇದ್ದು.ಇದೆಲ್ಲಾ ವ್ಯವಸ್ಥಿತವಾಗಿ ನೆಡವೊದೇ ಅದ್ಬುತ.ನೆಡೆಶುವ ಆ ಅಗೋಚರ ಶಕ್ತಿಗೆ ನಮೋ ನಮೋ.
    ಇ೦ಧನ ಮುಗುದ ಮೇಲೆ ಸೂರ್ಯ ಹಿಗ್ಗೊದು ಹೇ೦ಗೆ ಹೇಳಿ ಅರ್ಥ ಆತಿಲ್ಲೆ ಅಪ್ಪಚ್ಚಿ.

    1. ಸೂರ್ಯನ ಕೇಂದ್ರ ಭಾಗಲ್ಲಿ ಹೈಡ್ರೋಜನ್ ಮೂಲ ವಸ್ತು ಹೀಲಿಯಂ ಆಗಿ ಪರಿವರ್ತನೆ ಆವ್ತಾ ಇದ್ದು. ಹೀಂಗೆ ಅಪ್ಪಗ, ಕೇಂದ್ರಂದ ಹೊರ ಹೊಮ್ಮುವ ಶಕ್ತಿಯ ಒತ್ತಡದ ಕಾರಣಂದಾಗಿ ಸೂರ್ಯ ತನ್ನದೇ ತೂಕಂದ ಕುಸಿದು ಹೋಗದ್ದ ಹಾಂಗೆ ಮಾಡುತ್ತು. ಯಾವಗ ಕೇಂದ್ರಲ್ಲಿಪ್ಪ ಹೈಡ್ರೋಜನ್ ಇಂಧನ ಮುಗಿತ್ತೋ ಅಷ್ಟಪ್ಪಗ ಕೇಂದ್ರಂದ ಬಪ್ಪ ಒತ್ತಡ ಕಡಮ್ಮೆ ಆವ್ತು. ಕೇಂದ್ರ ಭಾಗ ಕುಸಿದು ಹೋವ್ತು. ಆದರೆ ಹೊರ ಭಾಗಲ್ಲಿ ಆವ್ತಾ ಇಪ್ಪ ಅಣು ಪರಿವರ್ತನೆ ನಡೆತ್ತಾ ಇಪ್ಪ ಕಾರಣ ಅದರ ಹೊರ ಮೈ ಹಿಗ್ಗುತ್ತಾ ಹೋವ್ತು – ಕೆಂಪು ದೈತ್ಯದ ರೂಪಕ್ಕೆ ಬಪ್ಪಗ –

      ಗುರುತ್ವಾಕರ್ಷಣೆ ಮತ್ತು ಹೊರ ಮುಖವಾಗಿ ಹೊಮ್ಮುವ ಶಕ್ತಿಯ ಪ್ರವಾಹ ಇವುಗಳಲ್ಲಿ ಯಾವದು ಹೆಚ್ಚು, ಯಾವದು ಕಡಮ್ಮೆ ಅಥವಾ ಸಮ ಸಮವಾ – ಇದರ ಹೊಂದಿಗೊಂಡು ಸಂಕೋಚನ ಅಥವಾ ವಿಕಸನ ಇತ್ಯಾದಿಗ ಆವ್ತು. ಈ ಬಗ್ಗೆ ಹೆಚ್ಚಿನ ಮಾಹಿತಿ ನಿಂಗೊಗೆ
      http://www.nasa.gov/audience/forstudents/9-12/features/stellar_evol_feat_912.html
      ಇಲ್ಲಿ ಸಿಕ್ಕುತ್ತು.

  5. ವಿಸ್ಮಯ, ಕುತೂಹಲಕಾರಿ ವಿಷಯಂಗಳ ಕುತೂಹಲವಾಗಿ ಸರಳ ಶೈಲಿಲಿ ಬರವ ಅಪ್ಪಚ್ಚಿಯ ವೈಜ್ಞಾನಿಕ ಸುದ್ದಿ ಉತ್ತಮವಾಗಿ ಬತ್ತಾ ಇದ್ದು. ಬೈಲಿಲ್ಲಿ ವಿವರುಸುವೋ ಹೇಳ್ವ ಅಪ್ಪಚ್ಚಿಯ ಆಸಕ್ತಿಗೆ ಹರೇ ರಾಮ, ಧನ್ಯವಾದ. ಮುಂದಾಣ ಭಾಗವಾದ ಈ ವಿಶ್ವದ ಹುಟ್ಟು-ಬೆಳವಣಿಗೆಯ ಸುದ್ದಿಯ ಅಷ್ಟೇ ಆಸಕ್ತಿಂದ ಇನ್ನಾಣ ವಾರಕ್ಕೆ ಕಾಯ್ತಾ ಇರ್ತು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×