Oppanna.com

ನೀರ್ಕಜೆ ಅಪ್ಪಚ್ಚಿ ಪಟ ತೆಗವಲೆ ಸುರು ಮಾಡಿದವು!

ಬರದೋರು :   ನೀರ್ಕಜೆ ಮಹೇಶ    on   13/02/2010    13 ಒಪ್ಪಂಗೊ

ನೀರ್ಕಜೆ ಮಹೇಶ

ನೀರ್ಕಜೆ ಅಪ್ಪಚ್ಚಿಯ ಗುರ್ತ ಆತಾ?
ಆಗಿರ ನಿಂಗೊಗೆ, ಎಂತಕೇಳಿರೆ – ಅವು ಈಗ ನೀರ್ಕಜೆಲಿ ಇಪ್ಪದಲ್ಲ, ಬೆಂಗುಳೂರಿಲಿ.
ಊರಿಲಿ ಚೆಂಬರ್ಪು ಮಾಷ್ಟ್ರಣ್ಣನ ನೆರೆಕರೆ, ಬೆಂಗುಳೂರಿಲಿ ಪೆರ್ಲದಣ್ಣನ ನೆರೆಕರೆ!
ರಾಮಜ್ಜನ ಕೋಲೇಜಿಲಿ ಕಲ್ತು, ಕೊಡೆಯಾಲದ ದೊಡ್ಡಕೋಲೇಜಿಲಿ ದೊಡ್ಡದರ ಕಲ್ತು, ಬೆಂಗುಳೂರಿಲಿ ಇಂಜಿನಿಯರು ಆಗಿ ಸೇರಿದ್ದವಡ ಮದಲಿಂಗೇ!
ಅಂದೇ ಬೆಂಗುಳೂರಿಲಿ ಕೆಲಸ ಮಾಡ್ತರೂ, ಎಲ್ಲೋರ ಹಾಂಗೆ ಸೊಂತದ್ದು ಹೇಳಿಗೊಂಡು ಜಾಗೆ – ಮನೆ ಇನ್ನೂ ಮಾಡಿದ್ದವಿಲ್ಲೆ.
ಮಾಡ್ತವೂ ಇಲ್ಲೆಡ – ಎಂತಕೇಳಿರೆ, ಅವಕ್ಕೆ ಪೇಟೆ ಜೀವನ ಇಷ್ಟವೇ ಇಲ್ಲೆ!
ಹಳ್ಳಿಗೆ ಹೋಯೇಕು, ದೊಡ್ಡ ಕೃಷಿಭೂಮಿ ಮಾಡೇಕು, ತೋಟ ಮಾಡಿ ನೆಮ್ಮದಿಯ ಅಶನ ಉಣ್ಣೇಕು, ದನ, ಕಂಜಿ, ಶುದ್ಧ ಹಾಲು, ಶುದ್ಧ ನೀರು, ಶುದ್ಧ ಅಳತ್ತೊಂಡೆ, ಚೆಕ್ಕರ್ಪೆ – ತರಕಾರಿಗೊ ಎಲ್ಲ ತಿಂದುಗೊಂಡು ಮನೆ-  ಮಕ್ಕಳ ಬೆಳೆಶೇಕು ಹೇಳಿಯೇ ಅವರ ಯೋಜನೆ!
ಕೊಶೀ ಆತು ಒಪ್ಪಣ್ಣಂಗೆ ಅದರ ಕೇಳಿ!
ಈಗ ಆಪೀಸಿಲಿ ಕೂದಂಡು ಕೆಲಸ ಮಾಡುವಗ ಹಳ್ಳಿ ಜೀವನವೇ ನೆಂಪಪ್ಪದು.
ಆಪೀಸಿನ ಮೆಟ್ಳು ಹತ್ತುವಗ ಉಪ್ಪರಿಗೆ ಮೇಲಾಣ ಪತ್ತಾಯಕ್ಕೆ ಹತ್ತಿದ ಹಾಂಗೆ ಆವುತ್ತು!
ಆಣು ಬಂದು ಕಾಪಿ ಕೊಡುವಗ ಅಕ್ಕಚ್ಚು ಕೊಟ್ಟಹಾಂಗೆ ಆವುತ್ತು.
ಕಂಪ್ಯೂಟರು ಕುಟ್ಟುವಗ ಬತ್ತ ಮೆರುದ ಹಾಂಗೆ ಆವುತ್ತು.
ಬೋಸು (Boss) ದಿನಿಗೆಳಿರೆ ಗೋಣ ಕೆಲದ ಹಾಂಗೆ ಆವುತ್ತು!
ಒಟ್ಟಿಲಿ ಈ ಪೇಟೆ ಜೀವನ ಬೇಡ್ಳೇ-ಬೇಡ ಹೇಳಿ ಅನುಸುತ್ತು!!
ಅವರ ಯೆಜಮಾಂತಿ – ನೀರ್ಕಜೆ ಚಿಕ್ಕಮ್ಮಂದೇ ಅದೇ ಮನಸ್ಸಿನವು ಅಡ.
ಗಣಿತ ಕಲ್ತು ಕೋಲೇಜು ಮುಗುಶಿದ್ದವು, ಈ ಪೇಟೆ ಹರಟೆಲಿ ಗಣಿತದ ಸಮಸ್ಯೆ ಬಿಡುಸುಲೇ ಎಡೆತ್ತಿಲ್ಲೆ – ಹೇಳಿ ಚಿಕ್ಕಮ್ಮಂಗೆ ಬೇಜಾರು!
ಎಲ್ಲೊರು ಪೇಟೆ ಪೇಟೆ ಹೇಳಿ ಹಾರುವಗ, ಹಳ್ಳಿಜೀವನವೇ ಒಳ್ಳೆದು ಹೇಳಿ ‘ಮರಳಿ ಮಣ್ಣಿಂಗೆ’ ಹೋವುತ್ತ ಈ ಮನಸ್ಸುಗಳ ತುಂಬ ಕೊಶಿ ಆವುತ್ತು. ಅಲ್ಲದೋ?!
ಬರಳಿ – ಬೇಗ ನಮ್ಮ ನೆರೆಕರೆಗೆ ಬರಳಿ!
ಅದೇನೇ ಇರಳಿ,
ಅವರ ರಂಗಪ್ರವೇಶ ಆದ್ದದೇ ಒಪ್ಪಣ್ಣನ ‘ಇಂಗ್ರೋಜಿಯ’ ಶುದ್ದಿಗೆ ಒಪ್ಪಕೊಟ್ಟೊಂಡು, ಒಂದು ತಾತ್ವಿಕ ಪೋಯಿಂಟಿನ ಹಿಡ್ಕೊಂಡು!
ಚಿಂತನೆ ಅವರ ನೆತ್ತರಿನ ಗುಣ. ಚಿಂತನಾ ಲೇಖನ ಬರವದು ಅವರ ಹವ್ಯಾಸಂಗಳಲ್ಲಿ ಒಂದು.
ಮೊನ್ನೆ ಊರಿಂಗೆ ಬಂದಿಪ್ಪವು ಸಿಕ್ಕಿದವು, ಒಪ್ಪಣ್ಣನ ಬೈಲಿಂಗೆ ಬಂದು ಶುದ್ದಿ ಹೇಳ್ತಿರಾ ಕೇಳಿದೆ. ಈಗ ರಜಾ ಅಂಬೆರ್ಪು.. ನಿದಾನಕ್ಕೆ ಹೇಳ್ತೆ.
ಹೊಸ ಕೆಮರ ತೆಗದ್ದೆ, ಪಟತೆಗವಲಿದ್ದು – ಹೇಳಿಕ್ಕಿ ಮೆಲ್ಲಂಗೆ ಬೇಗು ಹಿಡ್ಕೊಂಡವು. ‘ಇದಾ, ಈ ಪಟಂಗಳ ನೋಡುಸು ನೀನು, ಎಲ್ಲೊರಿಂಗುದೇ’ ಹೇಳಿದವು.
ಪಟ ಕೊಟ್ಟು ಕಳುಸಿದ್ದವು. ಕೊಶಿ ಆದರೆ  ಪಟಂಗೊಕ್ಕೆಒಪ್ಪ ಕೊಡಿ.
ಶುದ್ದಿ ಬೇಗಲ್ಲೇ ಬರೆತ್ತವಡ, ಕಾದೊಂಡಿಪ್ಪ..
ಆತೋ?
~
ಒಪ್ಪಣ್ಣ

ಕೆಮರ ಮೋಡೆಲು: Fujifilm S200EXR

ಇನ್ನೂ ಹೆಚ್ಚು ಪಟಂಗ ಬೇಕಾರೆ ಈ ಸಂಕೊಲೆ ಒತ್ತಿ: http://www.flickr.com/photos/mpneerkaje

ನಮಸ್ಕಾರ!

13 thoughts on “ನೀರ್ಕಜೆ ಅಪ್ಪಚ್ಚಿ ಪಟ ತೆಗವಲೆ ಸುರು ಮಾಡಿದವು!

  1. ತುಂಬಾ ಖುಷಿ ಆತು ಈ ವಿಚಾರದ ಮೇಲಾಣ ಚರ್ಚೆ ನೋಡಿ…
    ಪೇಟೆ ಬಿಟ್ಟು ಹಳ್ಳಿಗೆ ಹೋಪ ವಿಚಾರಲ್ಲಿ ಅಟ್ಲೀಸ್ಟ್ ನಾಕು ಜನ ಮಾತಾಡಿದ್ದು ಕಂಡು ಸಂತೋಷ ಆತು…
    ಎನ್ನ ಅಭಿಪ್ರಾಯವೂ ಅದೇ… ಆನು ಪೇಟೆಲಿ ಕೂಪವ ಅಲ್ಲ… ಎಷ್ಟೇ ಕಲ್ತರೂ, ಪ್ರಪಂಚದ ಯಾವುದೇ ಮೂಲೇಲಿ ಎಷ್ಟೇ ದೊಡ್ಡ ಕೆಲಸ ಸಿಕ್ಕಿರೂ, ಆನು ಹುಟ್ಟಿ ಬೆಳೆದ ಮನೆಗೆ ಹೊಪವನೇ…. ಸದ್ಯದ ಅವಶ್ಯಕತೆ (ಎನ್ನ ವಿದ್ಯಾಭ್ಯಾಸದ ಲೋನು ತೀರ್ಸುವ ವರೆಗೆ) ಎನ್ನ ಬೆಂಗ್ಳೂರಿಲಿ ಇಪ್ಪ ಹಾಂಗೆ ಮಾಡಿದ್ದು…. ಆದರೆ ಈ ಬಂಧ ಎನ್ನ ಇಲ್ಲೆಯೆ ಕಟ್ಟಿ ಹಾಕುತ್ತು ಹೇಳುವ ಅಗತ್ಯ ಇಲ್ಲೆ….
    ಸೀಡಿ, ಕಂಪ್ಯೂಟರ್ ತಿಂಬಲೆ ಇಡಿಯ ಹೇಳುವ ಸತ್ಯ ಮನುಷ್ಯಂಗೆ ಯಾವಾಗ ಅರ್ಥ ಆವ್ತೋ ?
    ದೇವರಿ0ಗೆ ಗೊಂತು !!!
    ಕೃಷಿಲಿ ಎಂತಾರೂ ಮಾಡಿ ಮೇಲೆ ಬರೆಕ್ಕು, ಸಾಧಿಸಿ ತೋರ್ಸೆಕ್ಕು ಹೇಳುವ ಆಶೆ ಎನಗೆ… ಅದಕ್ಕೆ ಬೇಕಾಗಿಯೇ horticulture ಲಿ BSc ಮಾಡಿ ಈಗ MSc ಮಾಡ್ತಾ ಇದ್ದೆ…. ಮುಂದೊಂದು ದಿನ ಎನ್ನ ಹಳ್ಳಿಗೆ ಹೋಗಿ, ಎನ್ನ ಪಿತ್ರಾರ್ಜಿತ ಜಾಗೆಯ ನೋಡಿ ಕೊಳ್ಳೆಕ್ಕು ಹೇಳುವ ಕನಸು ಎನ್ನದು. ಇದು “ಅಪ್ಪ ಹಾಕಿದ ಆಲದ ಮರಕ್ಕೆ ನೇಣು ಹಾಕಿಕೊಂಬ” ನಿರಾಶೆಯ ನಿರ್ಧಾರ ಅಲ್ಲ… ಆನು ಹುಟ್ಟಿದ ಮನೆಲಿಯೇ, ಮಣ್ಣಿಲಿಯೇ ಆನು ಮಣ್ಣಾಯೆಕ್ಕೂ ಹೇಳುವ ಸಣ್ಣ ಆಸೆ…… ಹಳ್ಳಿ ಲಿ ಇದ್ದು ಎಂತ ಸಾಧ್ಸುಲೇ ಎಡಿಯ ಹೇಳಿ ಹೇಳುವವಕ್ಕೆ ಒಂದು ಉತ್ತರ ಕೊಡುವ ಪ್ರಯತ್ನ ಎನ್ನದು…
    ಹಳ್ಳಿ ಲಿ ಇದ್ದು ಸಾಧನೆ ಮಾಡಿದವರ ಪಟ್ಟಿ ದೊಡ್ಡ ಇದ್ದು.. ಅಡಿಕೆ ಪತ್ರಿಕೆ ಓದಿರೆ ಗೊಂತಕ್ಕು…. ಆದರೆ ನಮ್ಮ ಕಣ್ಣಿಂಗೆ ಸುಲಭಲ್ಲಿ ಕಾಂಬದು ಪೇಟೆ ಯ “ಗಿ ಜಿಗಿ” ಬೆಣಚ್ಚು…. ಸೌಕರ್ಯ ಇದ್ದು ಹೇಳಿ ಹೇಳುವವು ನೆಮ್ಮದಿಯ ಮರದೇ ಬಿಡ್ತವು… ದಿನ ನಿತ್ಯ ಇಪ್ಪ ಟೆನ್ಶನ್ ನ ಬಗ್ಗೆ ಚಕಾರ ಎತ್ತುತ್ತವಿಲ್ಲೆ !!! ಕೂಪಲೇ ಎಸಿ ರೂಮೆ ಆಯೆಕ್ಕು ಹೇಳುವವು, ಅದರಂದ ಅಪ್ಪ ದುಷ್ಪರಿಣಾಮದ ಬಗ್ಗೆ ಜಾಣ ಕುರುಡು ತೋರ್ಸುತ್ತವು… ಗೂಗಲ್ ಲಿ ಹೋಗಿ ರಜ್ಜ ನೋಡುಲೆ ಪುರ್ಸೊತ್ತಿಲ್ಲೇ !!!! ಒಂದು ವೇಳೆ ಅಂತದ್ದು ಏನಾದರೂ ಇದ್ದರೂ ಪೈಸೆ ಕೊಟ್ಟು ಸರಿ ಮಾಡಿಕೊಂಬಲಕ್ಕು ಹೇಳುವ ಯೋಚನೆ ಇಪ್ಪಲೂ ಸಾಕು !!!
    ಬರತ್ತಾ ಹೋದರೆ ಇನ್ನೂ ಸುಮಾರು ಪುಟ ಇದ್ದು… ಹಳ್ಳಿ ಮತ್ತೆ ಪೇಟೆಯ ಜೀವನದ ಬಗ್ಗೆ ಒಂದು ವಿಸ್ತೃತ ಚರ್ಚೆ ಆಯೆಕ್ಕಾದ್ದೆ…. ಬರೀ ಚರ್ಚೆ ಆಗಿ ಪ್ರಯೋಜನ ಇಲ್ಲೆ… ನಾಕು ಜನ ನಮ್ಮಂತವು ಮತ್ತೆ ಹಳ್ಳಿಗೆ ಹೋಗಿ ಬದುಕ್ಕಿ ತೋರ್ಸೆಕ್ಕು… ಅನಾಥಾಶ್ರಮಕ್ಕೆ, ವೃದ್ಧಾಶ್ರಮಕ್ಕೆ ನಮ್ಮ ಅಪ್ಪ ಅಮ್ಮ ನ ಕಳ್ಸದ್ರೆ ಸಾಕು…

    1. ಧನ್ಯವಾದ. ಅದು “ಕಾಪಿ ರೈಟ್”. ಅದರ ಪಟಕ್ಕೆ ಹಾಕುದರ “ವಾಟರ್ ಮಾರ್ಕ್” ಹೇಳಿ ಹೇಳ್ತವು. ಇಂಟರ್ನೆಟ್ ಲಿ ಪಟಂಗಳ ಹಾಕುವಗ ಆರಾರೋ ಅದರ ಡೌನ್ ಲೋಡ್ ಮಾಡಿ ಉಪ್ಯೋಗ್ಸದ್ದ ಹಾಂಗೆ ಇಪ್ಪದು ಅದು. ಪಟಂಗಳ ಹಂಚಿಗೊಂಬ ವೆಬ್ ಸೈಟಿಲಿ ಹಾಕುವಗ ಅದು ಬೇಕಾವುತ್ತು. ಆ ಪಟಂಗಳ ಒಪ್ಪಣ್ಣನ ಸೈಟಿಲಿ ಹಾಕುವಗ ಹಾಂಗೇ ಹಾಕಿದೆ. ವಾಟರ್ ಮಾರ್ಕ್ ತೆಗವಲೆ ಉದಾಸೀನ ಆತು ಅಷ್ಟೆ. 🙂

  2. ಚೆಂದ ಇದ್ದು ಪಟಂಗ…..
    ಎನಗೂ ಮೊದಲು ಅವರ ಪರಿಚಯ ಇತ್ತಿಲ್ಲೆ.. ಒಪ್ಪಂಣ ಲಾಯ್ಕಲ್ಲಿ ಗುರ್ತ ಮಾಡಿ ಕೊಟ್ಟಂ

  3. ನೀರ್ಕಜೆ ಸಣ್ಣಪ್ಪಚ್ಚಿ ಊರಿಂಗೆ ವಾಪಸ್ ಹೋಪ ಸಂಗತಿ ಕೇಳಿ ಬೇಜಾರಾತು. ಮೊದಲೇ ಕೃಷಿಕೋ ಜಾಸ್ತಿ ದುರ್ಭಿಕ್ಷ್ಯಂ. ನಿಂಗೊಳಾಂಗಿಪ್ಪವು ಹೋಗಿ ಅವಕ್ಕೆ ಇನ್ನೂ ಕಾಂಪಿಟೀಷನ್ ಕೊಡುದು ಎಂತಕೆ?
    ಪಟಂಗೊ ಮಾತ್ರ ಭಾರೀ ಲಾಯ್ಕಿದ್ದು.

    1. ಪೆರ್ಲದಣ್ಣ, ಇನ್ನೂ ಹೊಯಿದಿಲ್ಲೆ ಊರಿಂಗೆ… ನಿಂಗ ಎಲ್ಲ ಇಲ್ಲೇ ಸೆಟ್ಲ್ ಆದರೆ ಅಲ್ಲಿ ಆರಿದ್ದವು ಎನಗೆ? 🙂

    2. ನೀರ್ಕಜೆ ಅಪ್ಪಚ್ಚಿಯ ಒಳ್ಳೆ ಡಿಸಿಶನ್ ಕೇಳಿ ಕೊಶಿ ಆತು ಎನಗುದೆ. ಈಗ ಹಳ್ಳಿಲಿಪ್ಪ ಮಾಣಿಯಂಗೊ, ಕೂಸುಗೊ ಎಲ್ಲ ಪೇಟೆಯೇ ಆಯೆಕ್ಕು ಹೇಳಿ ಹೋಪಗ ಇವರದ್ದು ನಿಜವಾಗಿಯೂ ವಿಶೇಷ ಹೇಳಿ ಕಾಣುತ್ತು. ವಿಶೇಷ ಹೇಂಗೆ ಹೇಳಿ ಕೇಳಿದರೆ ಜವ್ವನಿಗರು ಹಳ್ಳಿ ಬದುಕೇ ಬೇಡ ಹೇಳ್ತಾ ಇಪ್ಪ ಈ ಕಾಲಲ್ಲಿ ಹಳ್ಳಿ ಬದುಕೇ ನೆಮ್ಮದಿ ಹೇಳ್ತಾ ಇಪ್ಪದು ವಿಶೇಷ.
      ವಿಷಯ ನಿಜವಾಗಿಯೂ ಚಿಂತನಾರ್ಹವೇ ಸರಿ. ಏಕೆ ಹೇಳಿರೆ ಈಗ ಒಂದು ಕಾಲಲ್ಲಿ ಹಳ್ಳಿ ಬದುಕು ಮೂರಾಬಟ್ಟೆ ಆಗಿಪ್ಪದು ನಿಜವೇ ಆದರೂ, ಇನ್ನೊಂದು ಕಾಲ ಬಕ್ಕು. ಹಳ್ಳಿಲಿ ಬದುಕುವದೇ ದೊಡ್ಡ ಸಂಗತಿ ಹೇಳಿಗೊಂಡು. ಏಕೆ ಹೇಳಿರೆ ಈ ಸೋಫ್ಟ್ವೇರ್ ಮತ್ತೊಂದು ಎಲ್ಲ ಹೆಚ್ಚು ದಿನ ಒಳಿಗು ಹೇಳಲೆ ಬತ್ತಿಲ್ಲೆ. ಮತ್ತೂದೆ ಇದ್ದು. ನಮ್ಮ ಮಾಣಿಯಂಗೊ ಕೂಸುಗೋ ಅಬ್ಬೆ ಅಪ್ಪನ ಊರಿಲ್ಲಿ ಬಿಟ್ಟಿಕ್ಕಿ ಹೋಗಿ ಬೆಂಗ್ಳೂರಿಲ್ಲಿ ಕೂದುಗೊಂಡು ಮಜಾ ಮಾಡಿರೆ ಹಳ್ಳಿಲಿ ಇಪ್ಪಲೆ ಅವಕ್ಕಾದರೂ ಮನಸ್ಸು ತೋರುಗಾ? ಹಾಂಗೆ ಅವುದೇ ಇಪ್ಪ ಜಾಗೆಯ ಕೊಟ್ಟಿಕ್ಕಿ ನಾವುದೇ ಬೆಂಗ್ಳೂರಿಲ್ಲಿ ಕೂಪ ಹೇಳಿಗೊಂಡು ಹೋದರೆ ಮತ್ತೆ ನಮ್ಮ ಹಳ್ಳಿಲಿಪ್ಪ ಜಾಗೆ ಪೂರಾ ಬ್ಯಾರಿಗಳ (ಮಾಪ್ಳೆಗಳ) ಕೈಲಿ ಇಕ್ಕು. ಅಷ್ಟಪ್ಪಗ ಅವಕ್ಕೆ ಬೇಸಾಯ ಮಾಡಿ ಕೊಡ್ಲೆ ಆಳುಗಳೂ ಸಿಕ್ಕುಗು. ಏಕೆ ಹೇಳಿರೆ ಈ ದೂಮ ಚೋಮ ಎಲ್ಲ ಕಲ್ತು ಕಲೆಕ್ಟರ್ ಅಪ್ಪಲಿಲ್ಲೆ ಹೇಂಗಾರೂ. ಮತ್ತೆ ಹಾಲು, ತರಕಾರಿ, ಅಕ್ಕಿ ಎಲ್ಲದಕ್ಕೂ ಅವು ಹೇಳಿದ ಕ್ರಯ ಕೊಟ್ಟು ನಮ್ಮಾಂಗಿಪ್ಪವು ತೆಕ್ಕೊಳೆಕಕ್ಕು. ಈಗಲೇ ಪೆಟ್ರೋಲ್ ಟ್ಯಾಂಕಿ ಪೂರಾ ಅವರ ಕೈಲೇ ಇಪ್ಪದು. ಇನ್ನು ತಿಂಬ ಸಾಮಾನುದೇ ಅವೇ ಬೆಳಶುದು ಹೇಳಿ ಆದರೆ ಮತ್ತೆ ಕೇಳೆಡ. ಮತ್ತೆ ಅವು ಬಹುಸಂಖ್ಯಾತರು ಆವ್ತವು. ನಾವು ಅಲ್ಪ ಸಂಖ್ಯಾತರು ಆವುತ್ತು. ನಾವು ಅಲ್ಪಸಂಖ್ಯಾತರಾಗಿಯಪ್ಪಗ ನವಗೆ ಈಗ ಇವಕ್ಕೆ ಸಿಕ್ಕುತ್ತ ಫೆಸಿಲಿಟಿಗೋ ಒಂದುದೇ ಸಿಕ್ಕ. ನಾವು ಹಲ್ಲುಗಿಂಜಿಯೊಂಡು ‘ಇಚ್ಚಾ ಇಚ್ಚ್ಚಾ’ ಹೇಳಿಯೊಂಡು ಅವರ ಅಕ್ಕಿಯೋ, ತರಕಾರಿಗೋ ಬಾಯಿ ಬಿಡೆಕಾಗಿ ಬಕ್ಕು.
      ಒಂದು ಸರ್ತಿ ಅವರ ಕೈಗೆ ಹೋದ ಜಾಗೆ ಮತ್ತೆ ನಮ್ಮವರ ಕೈಗೆ ಹೇಂಗೂ ಬಾರ. ಹಾಂಗಾಗಿ ಈಗ ಇಪ್ಪ ನಮ್ಮವರ ಜಾಗೆಯ ಎಲ್ಲ ಒಳುಶಿಗೊಂಬ ಪ್ರಯತ್ನ ಮಾಡುವ°. ನಿಂಗೊ ಬೆಂಗ್ಳೂರು ಬಿಟ್ಟು ಹೋಪದೆಂತಕೆ ಹೇಳ್ತ ಸಿಲ್ಲಿ ಪ್ರಶ್ನೆಗಳ ಕೇಳುದರ ರಜ್ಜ ನಿಲ್ಲುಸುವ°. ಹಳ್ಳಿ ಬದುಕಿಲ್ಲಿ ರಜ್ಜ ಗ್ಲಾಮರ್ ಕಮ್ಮಿ ಆಗ್ಯೊಂಡಿಕ್ಕು. ಆದರೆ ತೋಟ ನೋಡ್ಯೊಂಬ ಖುಷಿ ಪೇಟೆ ಬದುಕಿಲಿ ಖಂಡಿತ ಸಿಕ್ಕ ಹೇಳ್ತದು ಎನ್ನ ಅಭಿಪ್ರಾಯ.

      1. ನಮಸ್ತೆ. ನಿಂಗಳ ಅಭಿಪ್ರಾಯವೇ ಎನ್ನದುದೆ. ಬ್ಯಾರಿಗಳ ವಿಷಯಕ್ಕೆ ಬಂದರೆ ನವಗೆ ಎಂತಾರು ಮಾಡುಲೆಡಿಗು ಹೇಳಿ ಅನ್ಸುತ್ತಿಲ್ಲೆ. ಒಂದಲ್ಲ ಒಂದು ದಿನ ನಾವುದೆ ಬ್ಯಾರಿಗೊ ಆಯೆಕ್ಕಕ್ಕು. ಈ ವಿಷಯ ಬಿಟ್ಟರುದೆ ಈ ಪೇಟೆಲಿಪ್ಪ ಗ್ರಹಚಾರ ಎನಗೆ ಸರಿ ಕಾಣುತ್ತಿಲ್ಲೆ. ಪೇಟೆ ಎನಗೆ ಕಾಂಬ ಹಾಂಗೆ ವ್ಯವಹಾರಕ್ಕೆ ಸೈ. ಮಾರ್ಕೆಟ್ಟು, ಅಂಗಡಿ ಜಾತ್ರೆ ಎಲ್ಲ ಸರಿ. ಆರೆ ಅಲ್ಲಿ ಮನೆ ಮಾಡಿಯೊಂಡು ಇಪ್ಪಲೆ ಎನಗೆ ಇಷ್ಟ ಇಲ್ಲೆ. ಲಕ್ಷಗಟ್ಲೆ (ಇನ್ನಿನ್ನು ಲಕ್ಷವೂ ಸಾಕಾಗ, ಕೋಟಿ ಹತ್ತರೆ ಬೇಕು) ಕೊಟ್ಟು ಮನೆ ಮಾಡುಲುದೆ ಎನಗೆ ಎಡಿಯ, ಎಡಿಗಾರು ಮಾಡ್ತಿಲ್ಲೆ. ಆ ಲಕ್ಷಲ್ಲಿ ಒಂದು ದೊಡ್ಡ ಜಾಗೆ ತೆಗದು ಕೃಷಿ ಮಾಡುಲಕ್ಕು ಹೇಳಿ ಕಾಂಬದು ಎನಗೆ. ಎಂತ ಹೇಳ್ತಿ?
        ಬ್ಯಾರಿಗಳ ವಿಚಾರಕ್ಕೆ ಬಂದರೆ ಅವರ ಮೇಲಾಟಕ್ಕೆ ಕಾರಣ ಇದ್ದು. ಕಾರಣ ಇಲ್ಲದ್ದೆ ಎಂತಾರು ಆವುತ್ತ? ಅವರ ಒಳ್ಳೆ ಗುಣಂಗಳ ನಾವು ಅಳವಡ್ಸಿದರೆ ಮಾತ್ರ ನಮ್ಮ ಪರಿಸ್ಥಿತಿ ಸರಿ ಅಕ್ಕು. ಹಾಂಗೆ ಮಾಡುಲೆ ನಾವು ರೆಡಿ ಇಲ್ಲೆ. ಮತ್ತೆ ಎಲ್ಲಿಗೆ ಸರಿ ಅಪ್ಪದು? ಬ್ಯಾರಿಗೊಕ್ಕೆ ಒಳ್ಳೆ ಗುಣ ಇದ್ದ ಹೇಳಿ ಕೇಳುವಿ ನಿಂಗ. ಎಂತಕ್ಕೆ ಇಪ್ಪಲಾಗ? ಬಲಿ ಚಕ್ರವರ್ತಿಗೆ, ರಾವಣಂಗೆ, ಕರ್ಣಂಗೆ ಒಳ್ಳೆ ಗುಣ ಇತ್ತಿಲ್ಲೆಯಾ? ಎಲ್ಲಾ ಒಳ್ಳೆ ಗುಣಂಗೊ ಇದ್ದುದೆ ಅವು ಅಸುರರ ಪರ ವಹಿಸಿ ಅಪ್ಪಗ ಎಲ್ಲಾ ಬಣ್ಣ ಮಸಿ ನುಂಗಿತ್ತು ಹೇಳಿದ ಹಾಂಗೆ ಆತು ಅಷ್ಟೆ. ಹಾಂಗೆ ಬ್ಯಾರಿಗೊಕ್ಕು ಒಂದು ದಿನ ಆವುತ್ತು. ಆದರೆ ಅಷ್ಟಪ್ಪಗ ನಮ್ಮ ಗತಿ ಎಂತ ಆವುತ್ತೋ ಆ ದೇವನೇ ಬಲ್ಲ. ಎಂತ ಹೇಳ್ತಿ?
        ಈ ವಿಷಯ ಬಗ್ಗೆ ಬೇರೆಯೇ ಪುಟ ಬರವಲಕ್ಕು ಹೇಳಿ ಕಾಣುತ್ತು. ಅಲ್ಲದೋ ಒಪ್ಪಣ್ಣ ?? 🙂

        1. ನೀರ್ಕಜೆ ಅಪ್ಪಚ್ಚಿಯ ನಿರ್ಧಾರ ಭಾರಿ ಲಾಯ್ಕಿದ್ದು….!!!!
          ಅಭಿನ೦ದನೆಗ….

          1. ಕೃಷಿ ಕೆಲಸ ಈಗ ನಷ್ಟದ ಸಂಗತಿ ಹೇಳ್ತದರ ಆನು ಒಪ್ಪುತ್ತೆ. ಕೃಷಿಲಿ ಲಾಭ ಮಾಡ್ಲೆ ಅಷ್ಟು ಸುಲಭ ಇಲ್ಲೆ. ಈ ವಿಷಯ ಗೊಂತಿದ್ದೇ ನಮ್ಮ ಜವ್ವನಿಗರೆಲ್ಲ ಪೇಟೆ ಸೇರಿದ್ದು. ಸೋಫ್ಟ್ವೇರ್ ಕಂಪೆನಿಲಿ ಕೈ ತುಂಬ ಸಂಬಳ ಬಪ್ಪಗ ಇಡೀ ವರ್ಷ ತೋಟಲ್ಲಿ ಕೆಸರು ಮೆತ್ಯೊಂಡು ತಿರುಗುದು ಎಂತಕೆ?
            ಹಳ್ಳಿ ಜೀವನಲ್ಲಿ ಎಲ್ಲವೂ ಸುಲಭ ಇಲ್ಲೆ, ನಿಜ. ಕೆಲಸಂಗೊಕ್ಕೆ ರಜ್ಜ ದೈಹಿಕ ಶ್ರಮ ಹೆಚ್ಚು. ಆದರೆ ಮನಸ್ಸಿಂಗೆ ನೆಮ್ಮದಿ ಇರ್ತು. ಕೃಷಿ ಕೆಲಸಂಗಳಲ್ಲಿ ಇದ್ದುಗೊಂಡೇ ಬೇರೆಂತಾರು ವ್ಯವಹಾರವೂ ಮಾಡ್ಳಕ್ಕು. ಆದರೆ ಈ ಸೋಫ್ಟ್ವೇರಿನ ಜವ್ವನಿಗರಿಂಗೆ ದೈಹಿಕವಾದ ಶ್ರಮ ಇಲ್ಲದ್ರೂ ಮೆದುಳಿಂಗೆ ಎಲ್ಲಿಲ್ಲದ್ದ ಕೆಲಸ. ಕಣ್ಣಿಂಗೂ ಬಚ್ಚುತ್ತು. ಮದಲಾಣ ಕಾಲಲ್ಲಿ ಕನ್ನಡಕ ಹಾಕುದು ಹೇಳಿರೆ ರಜ್ಜ ನಾಚಿಕೆಯ ಸಂಗತಿ ಆಗಿದ್ದತ್ತು. ಈಗ ’ಇದಾ ಇವ° ಎನ್ನ ಅಳಿಯ°, ಬೆಂಗ್ಳೂರಿಲ್ಲಿ ಸೋಫ್ಟ್ವೇರು ಇಂಜಿನಿಯರು’ ಹೇಳಿ ಪರಿಚಯ ಮಾಡುಗು.
            ಮಗ° ಸೋಫ್ಟ್ವೇರು ಇಂಜಿನಿಯರ್ ಆದ° ಹೇಳಿರೆ ಮತ್ತೆ ಊರಿನ ಆಸ್ತಿ ಕೊಡ್ಳೆ ಅಂಬೆರ್ಪು ಸುರು ಆವುತ್ತು ಹಿರಿಯರಿಂಗೆ. ಆ ಕರಿ ಮಾಪಳೆ ಒಳ್ಳೆ ಕ್ರಯ ಹೇಳಿತ್ತು ಹೇಳಿ ಅದಕ್ಕೆ ಕೊಟ್ಟಿಕ್ಕಿ ಬೆಂಗ್ಳೂರಿಲ್ಲಿ ಮಗ° ತೆಗದ ಹೊಸಾ ಫ್ಲ್ಯಾಟಿಲ್ಲಿ ಹೋಗಿ ಕೂದವು, ಇಡೀ ದಿನ ಟೀವಿ ನೋಡ್ಯೊಂಡು. ದಿನಾ ಉದಿಯಪ್ಪಗ ಅಡಕ್ಕೆ ಹೆರ್ಕಲೆ ಹೋಗೆಡ, ತೋಟಕ್ಕೆ ನೀರು ಹಾಕೆಡ, ದನ ಕರವದು ಬೇಡ, ಅಂತೂ ಪರಮ ಸುಖ.
            ನಮ್ಮವು ಸೋತು ಹೋಪದು ಇಲ್ಲಿಯೇ. ಬ್ಯಾರಿಗಳ (ಮಾಪಳೆಗಳ) ಕೈಗೆ ಒಂದಾರಿ ಹೋದ ಜಾಗೆ ಮತ್ತೆ ಅವರ ಜಾತಿ ಅಲ್ಲದ್ದೆ ಹಿಂದುಗಳ ಕೈಗೆ ಬಾರ. ಬೇಕಾರೆ ಒಂದೇ ಆಸ್ತಿಯ ಸಣ್ಣ ಸಣ್ಣ ತುಂಡು ಮಾಡಿ ಎಲ್ಲದರಲ್ಲಿಯೂ ಮನೆ ಕಟ್ಟುಗು. ನಾವು ನಮ್ಮ ಕೈಲಿ ಇಪ್ಪ ಜಾಗೆಯ ಕೊಟ್ಟೋಂಡು ಹೋಪದು, ಅವು ಅದರ ತೆಗಕ್ಕೋಂಡು ಹೋಪದು. ಹಿಂದೂಸ್ಥಾನಲ್ಲಿ ಹಿಂದುಗೊಕ್ಕೆ ಜಾಗೆ ಬೇಡ, ಅಷ್ಟಪ್ಪಗ ಅದು ತನ್ನಷ್ಟಕೆ ಪಾಕಿಸ್ಥಾನ ಆವುತ್ತು.
            ಈ ವಿಷಯಲ್ಲಿ ಬ್ಯಾರಿಗಳ ಮೆಚ್ಚೆಕ್ಕಾದ್ದದೇ. ಕಳ್ಳ ನೋಟೋ, ಕಳ್ಳ ಪೈಸೆಯೋ ಎಂತ ಇದ್ದರೂ ಕಡೇಂಗೆ ತಂದು ಹಾಕುದು ಆಸ್ತಿಯ ಮೇಲೆ. ಅಷ್ಟಪ್ಪಗ ಅದು ಖಚಿತ ಆಸ್ತಿ ಆಗಿ ಅವರ ಕೈಲಿ ಒಳಿತ್ತು. ನಮ್ಮ ಕೈಗೆ ಸಿಕ್ಕುದು ಕಾಗದದ ಪೈಸೆ ಮಾಂತ್ರ.
            ಬೆಂಗ್ಳೂರಿಲ್ಲಿ ಫ್ಲ್ಯಾಟಿಂಗೆ ಲಕ್ಷಗಟ್ಳೆ, ಕೋಟಿಗಟ್ಳೆ ಸೊರುಗಿ ಸಿಕ್ಕುದು ೩ ರೂಮಿನ ಒಂದು ಗೂಡು. ಹಾಂಗಿಪ್ಪ ರೂಮುಗಳ ಸಂತೆಗೆ ಅಪಾರ್ಟ್ಮೆಂ್ಟು ಹೇಳ್ತವು. ಆದರೆ ಅಚಮನೆಯವಕ್ಕೆ ಈಚಮನೆಯವರ ಪರಿಚಯವೇ ಇರ್ತಿಲ್ಲೆ. ಆ ಬಿಲ್ಡಿಂಗಿನ ಆಯುಷ್ಯ ಇಪ್ಪಷ್ಟು ಕಾಲ ಅಲ್ಲಿ ಬದುಕ್ಕಲಕ್ಕು. ಮತ್ತೆ? ಕೈಲಿ ಪೈಸೆ ಇರ್ತು, ಬೇರೆ ಫ್ಲ್ಯಾಟ್ ತೆಗೆದರಾತಿಲ್ಯೋ? ಗಾಳಿಗೋಪುರ ಹೇಳಲಕ್ಕು ಫ್ಲ್ಯಾಟಿಂಗೆ. ನಮ್ಮ ಜವ್ವನಿಗರು ಪೈಸೆ ಹಾಕುದು ಆ ಗಾಳಿಗೋಪುರಕ್ಕೆ. ಮಾಪಳೆಗೊ ಜಾಗೆ ಗಟ್ಟಿ ಮಾಡ್ಯೊಳ್ತವು.
            ಭೂಮಿ ಮೇಲಾಣ ಜಾಗೆ ಹೇಳಿರೆ ಅದು ಸ್ಥಿರ ಆಸ್ತಿ. ಅಲ್ಲಿ ಮನೆ ಕಟ್ಟಲಕ್ಕು, ಕೃಷಿ ಮಾಡ್ಲಕ್ಕು, ವ್ಯವಹಾರ ಮಾಡ್ತರೆ ಅದೂ ಎಡಿಗು. ಎಂತ ಇಲ್ಲದ್ರೆ ಗೆಣಂಗು ಆದ್ರೂ ಬೆಳಶಿ ತಿಂಬಲೆಡಿಗು. ಒಟ್ಟಿಲ್ಲಿ ಹೇಳ್ತರೆ ಬೇಂಕು, ಷೇರು, ಮ್ಯೂಚುವಲ್ ಫಂಡ್ ಇತ್ಯಾದಿ ಬರೇ ಕಾಗತದ ವಹಿವಾಟಿಂದ ಎಷ್ಟೋ ಅಕ್ಕು ಆಸ್ತಿ ನೋಡ್ಯೊಂಬದು. ಹಾಂಗೆ ಹೇಳಿ ಆನು ಆ ಕಾಗತದ ವ್ಯವಹಾರದ ವಿರೋಧಿ ಅಲ್ಲ, ಇದ್ದ ಜಾಗೆ ಕೊಟ್ಟು ಭೂಮಿ ಮೇಲೆ ನಮ್ಮ ಅಸ್ತಿತ್ವ ಇಲ್ಲದ್ದ ಹಾಂಗೆ ಮಾಡ್ಯೊಂಬದು ಎಂತಕೆ ಹೇಳುದು ಎನ್ನ ಪ್ರಶ್ನೆ.
            ಪೇಟೆಗೆ ಹಳ್ಳಿಂದ ತರಕಾರಿ, ಹಾಲು, ಅಕ್ಕಿ, ಗೋಧಿ ಎಂತ ಸಪ್ಲೈ ಆಗದ್ರೆ ಅವು ತಿಂಬದು ಎಂತರ ಹೇಳಿ ಎನಗೆ ಗೊಂತಿಲ್ಲೆ. ಸೋಫ್ಟ್ವೇರಿನ ತಿಂಬಲೆಡಿತ್ತೋ? ಅಲ್ಲ ಸೀಡಿ, ಕಂಪ್ಯೂಟರುಗಳ ತಿಂಬದೋ? ಅದು ಎಡಿಯ. ಹಾಲಿಂಗೆ ೨ ರೂಪಾಯಿ ಹೆಚ್ಚುಸುಲೆ ಹಿಂದೆ ಮುಂದೆ ನೋಡ್ತವು ಅದರ ಅಸಲು ಲೆಕ್ಕ ಹಾಕಿದ್ದವೋ? ಹಳ್ಳಿಯ ಉತ್ಪನ್ನಂಗೊ ಇಲ್ಲದ್ದೆ ಪೇಟೆಲಿ ಎಂತದೂ ನೆಡೆಯ. ಆದರೂ ಹಳ್ಳಿಯವರ ಕಂಡ್ರೆ ತಾತ್ಸಾರ, ಇರಳಿ. ಹೆಚ್ಚಿಗೆಂತ ಬೇಡ, ಒಂದು ವಾರ ಪೇಟೆಗೆ ಹಾಲಿನ ಸಪ್ಲೈ ನಿಲ್ಸಿದರೆ ಗೊಂತಕ್ಕು ಹಳ್ಳಿಯ ಮೇಲಾಣ ಅವಲಂಬನೆ ಎಷ್ಟಿದ್ದು ಹೇಳಿ. (ಒಪ್ಪಣ್ಣ ಅಂದು ಬರದ ಹಾಂಗೆ ತೊಟ್ಟೆ ಹಾಲು ಮಾತ್ರ ಕುಡುದು ಗೊಂತಿಪ್ಪವು ಕಂಗಾಲಕ್ಕು, ಖಂಡಿತ. ಅದು ಎಷ್ಟು ದಿನ ಮೊದಲಾಣದ್ದು ಹೇಳುದು ಪರಮಾತ್ಮಂಗೇ ಗೊಂತು! ಆದರೂ ಒಂದು ವಾರಂದ ಹೆಚ್ಚಿಗೆ ಸ್ಟೋಕು ಮಡುಗಲಿರ ಹೇಳಿ ಕಾಣುತ್ತು, ಮತ್ತೆ ಎನಗೆ ಗೊಂತಿಲ್ಲೆ!)
            ಕೈಲಿಪ್ಪ ಆಸ್ತಿಯ ಕೊಟ್ಟು ಬೆಂಗ್ಳೂರಿಲ್ಲಿ ಕೂಪದು ಒಳ್ಳೆಯ ಬೆಳವಣಿಗೆ ಖಂಡಿತ ಅಲ್ಲ. ಈಗಾಗಳೇ ಸುಮಾರು ಆಸ್ತಿಗೊ ನಮ್ಮವರ ಕೈಯಿಂದ ಹೋಗಿ ಆಯಿದು. ನವಗೆ ಬೇಕು ಹೇಳ್ತ ಕಾಲಕ್ಕೆ ಮೊದಲು ಕೊಟ್ಟ ಹಾಂಗಿಪ್ಪ ಆಸ್ತಿ ಸಿಕ್ಕ. ಅಷ್ಟು ಅರ್ತುಗೊಂಬದು ಒಳ್ಳೆದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×