- ಮಸರು ಕಡದು ಬೆಣ್ಣೆ ಕೂಡ್ತದಕ್ಕೆ ಗೌಜಿ ಮಾಡುದೆಂತಕೆ? - May 29, 2019
- ಒಪ್ಪಣ್ಣ ಪ್ರತಿಷ್ಠಾನಂದ ಇಸಿಜಿ ಯಂತ್ರ ಕೊಡುಗೆ - January 8, 2019
- ಬಾಳಿಲ ಪರಮೇಶ್ವರ ಭಟ್ಟ ಸ್ಮಾರಕ ಪ್ರಶಸ್ತಿ ಪ್ರದಾನ – ವರದಿ - April 29, 2015
ಎಂಥ ಬೇಕಾರೂ ಆಗಲಿ.. ಜೀವನ ಮುಂದೆ ಸಾಗಿಗೊಂಡೇ ಇರೆಕು!..
ಮೊನ್ನೆ ಬೆಂದಕಾಳೂರಿಂದ(ಬೆಂಗ್ಳೂರು) ಊರಿಂಗೆ ಬಸ್ಸಿಲ್ಲಿ ಹೋಪಗ ಮೊಬೈಲಿಲ್ಲಿ ಎಫ್‌ಎಂ ಕೇಳಿಗೊಂಡಿತ್ತೆ. ಹೊತ್ತು ಹೋಯೆಕನ್ನೆ ರಾಜಹಂಸ ಬಸ್ಸಿಲ್ಲಿ. ೧೧ ಎಫ್‌ಎಂ ಸ್ಟೇಷನ್ ಸಿಕ್ಕುತ್ತಿದಾ. ಸುಮಾರು ೬೦ ರಿಂದ ೭೦ ಕಿಲೋ ಮೀಟರ್‌ವರೆಗೆ ಸರಾಗವಾಗಿ ಎಫ್‌ಎಂ ಕೇಳ್ತಿದಾ. ಚಾನಲ್ ಬದಲಿಸಿಗೊಂಡಿಪ್ಪಗ ಯಾವುದೋ ಒಂದರಲ್ಲಿ (ಸರಿ ನೆಂಪಿಲ್ಲೆ) ಸುದೀಪ ಏಕ್ಟ್ ಮಾಡಿದ್ದ ಮುಸ್ಸಂಜೆ ಮಾತು ಪಿಚ್ಚರಿನ ಪದ್ಯ. ಏನಾಗಲಿ.. ಮುಂದೆ ಸಾಗೂ ನೀ… ಬಯಸಿದ್ದೆಲ್ಲಾ ಸಿಗದು ಬಾಳಲಿ… ಪದ್ಯ ಬಂದುಗೊಂಡಿತ್ತು.
ಈ ಪದ್ಯವ ಈ ಹಿಂದೆ ಸುಮಾರು ಸರ್ತಿ ಕೇಳಿತ್ತೆ. ಆದರೆ ಮೊನ್ನೆ ಕೇಳುವಾಗ ಮಾತ್ರ ಏನೋ ಒಂದು ರೀತಿ ಫೀಲು ಆತು ಮನಸ್ಸಿಂಗೆ..ಬಸ್ಸಿಲ್ಲಿ ಒಬ್ಬನೇ ಇತ್ತನ್ನೆ ಆ ಕಾರಣಕ್ಕೆ ಆ ರೀತಿ ಆದ್ದಾದಿಕ್ಕು. ಉಮ್ಮಪ್ಪ!
ಆ ಪದ್ಯದ ಚರಣದ ಸಾಲುಗ ಅಷ್ಟಾಗಿ ಕಾಡಿದ್ದಿಲ್ಲೆ. ಮೊದಲೆರಡು ಸಾಲು ಇದ್ದನ್ನೆ …. ಅದರ ಕೇಳುವಾಗ ಮಾತ್ರ ಏನೋ ಒಂದು ರೀತಿ ಆವ್ತು. ಅದರ ಎಂಥ ಹೇಳಿ ಹೇಳ್ಳೆ ಎಡ್ತಿಲ್ಲೆ. ಆ ಮಾತು ಎಷ್ಟು ಸತ್ಯ ಹೇಳಿ ಅಂಬಗಂಬಗ ಎನಗೆ ಅನುಸಿತ್ತು.
ಎನ್ನನ್ನು ಸೇರಿಸಿ ಎಲ್ಲರೋದೆ ಜೀವನಲ್ಲಿ ಎಂತೆಂಥಾ ಕನಸು ಕಾಣ್ತವು, ಕಂಡಿರ‍್ತವು. ಆದರೆ ಅದೆಲ್ಲಾ ನಡೆತ್ತಾ? ಹಾಂಗೆ ಒಂದು ವೇಳೆ ನಡೆದರೆ ಎಷ್ಟು ನಡೆತ್ತು? (ಕೆಲವೇ ಕೆಲವು ಶೇಕಡಾದಷ್ಟು.) ನಡೆದರೆ ನಾವು ಹೀಂಗಿರ‍್ತಾ? ನಮ್ಮ ಕಲ್ಪನೆಂಗಳೇ, ಕನಸುಗಳೇ ಬೇರೆ, ಅವನ (ದೇವರು) ಯೋಜನೆಗಳೇ ಬೇರೆ.. ಸುಮ್ಮನೆ ಹೇಳ್ತಾ ನಾವು ಅವನ ದೇವರು ಹೇಳಿ!.
ಇದಕ್ಕೆ ನಮ್ಮ ಸುತ್ತ ಮುತ್ತ ಹಲವು ಉದಾಹರಣೆಗ ಸಿಕ್ಕುಗು. ಎನಗೆ ಗೊಂತಿಪ್ಪ ಎರಡು ಘಟನೆಗಳ ಬಗ್ಗೆ ಆನು ಹೇಳೆಕ್ಕು..
ಕೆಪ್ಪಣ್ಣನ ಪೈಕಿಲಿ ಒಂದು ಕೂಸಿತ್ತು. (ಈಗಲೂ ಇದ್ದು) ಅವಕ್ಕೆ ಖಂಡಿಗಟ್ಲೆ ಅಡಕ್ಕೆ ಆಗ. ಕೆಲವು ಮಣ ಅಕ್ಕು. ಹಾಂಗೆ ಹೇಳಿ ಉಂಬದಕ್ಕೆ ಎಲ್ಲಾ ಏನೂ ಕೊರತೆ ಇತ್ತಿಲ್ಲೆ. ಈಗಾಣ ಕೂಸುಗಳ ಹಾಂಗೆ ಪೇಷನ್ ಎಲ್ಲಾ ಅರಡಿಯಾ ಕೂಸಿಂಗೆ. ವಿದ್ಯೆ ಕಲಿಯೆಕ್ಕು ಹೇಳ್ತ ಭಾರಿ ಆಸೆ ಇತ್ತು, ಅಂಬಗಂಬಗ ಅದರ ಆತ್ಮೀಯರ ಹತ್ತರೆ ಹೇಳುಗು. ಕನಿಷ್ಠ ಪಕ್ಷ ಪೋಸ್ಟ್ ಗ್ರಾಜ್ಯುವೇಷನ್ ಮಾಡಿ ಲೆಕ್ಚರರ್ ಆಯೆಕ್ಕು ಹೇಳ್ತದು ಕೂಸಿನ ಮಹಾತ್ವಾಕಾಂಕ್ಷೆ ಆಗಿತ್ತು. ಪ್ರೈಮರಿ, ಹೈಸ್ಕೂಲಿಲ್ಲಿ ಎಲ್ಲ ಒಳ್ಳೆ ಮಾರ್ಕು ತೆಗೆದಿತ್ತು. ಕೂಸಿನ ಗುರಿ ಮುಂದಿನ ಶಿಕ್ಷಣದತ್ತ ಹೊರಳಿತ್ತು. ಅದೇ ಕನಸಿಲ್ಲಿದೆ ಇತ್ತು. ಕೂಸಿನ ಕನಸು ಇದಾದರೆ, ಅದರ ಅಬ್ಬೆ ಅಪ್ಪನ ಕನಸೇ ಬೇರೆ ಮದುವೆ ಮಾಡುದು! ಎಸ್‌ಎಸ್‌ಎಲ್‌ಸಿ ಅಪ್ಪಗ ಅದಕ್ಕೆ ಹದ್ನಾರು ವರ್ಷ ಇದಾ. ಇನ್ನೂ ಮೈನರು ಹೇಳಿ ಪಿಯುಸಿಗೆ ಸೇರಿಸಿದವು.
ಮೊದಲನೇ ಪಿಯುಸಿ ಕಳಿವಾಗಲೇ ಜಾತಕ ಪಟ ಕೊಡ್ಲೆ ಸುರು ಮಾಡಿದವು. ಇದರ ಎಡಕ್ಕಿಲ್ಲೆ ಅಂಬಗಂಬಗ ಎನಗೆ ಈಗಲೇ ಮದುವೆ ಬೇಡ, ಇನ್ನೂ ಓದೆಕ್ಕು ಹೇಳಿ ಕೂಸು ಹೇಳಿಕ್ಕೊಂಡಿತ್ತು. ಆದರೂ ಅಪ್ಪ ಕೇಳೇಕ್ಕನ್ನೆ. ಅಂದರೂ ಕೂಸಿನ ಮನಸ್ಸಿಲ್ಲಿ ಏನೊ ಒಂದು ಮೊಂಡು ಧೈರ್ಯವೋ, ಅಲ್ಲ ಭರವಸೆಯೋ ಇತ್ತು..ಎನಗರಡಿಯ. ಅದು ದೇವರಿಂಗೆ ಹೊಡಾಡುವಾಗ ಮಾಡುವ ಪ್ರಾರ್ಥನೆಗಳ ಪಟ್ಟಿಲ್ಲಿ ಎನ್ನ ಮದುವೆ ಇನ್ನೂ ಮುಂದೆ ಹೋಪಾಂಗೆ ಮಾಡು ದೇವರೆ ಹೇಳ್ತದು ಇತ್ತು. ಎರಡನೇ ಪಿಯುಸಿಯ ಅಕೇರಣ ಕಿರುಪರೀಕ್ಷೆ ಅಪ್ಪಗಳೆ ಒಳ್ಳೆ ಪೊದು ಬಂತಿದಾ.. ಹೆಚ್ಚು ಕಮ್ಮಿ ಮದುವೆ ನಿಗಂಟಾದಾಂಗೆ ಆತು. ಮಾಣಿ ಕಡೆಯವರ ಮೊದಲ ಷರತ್ತೇ ಮದುವೆ ಆದ ಮೇಲೆ ಕಾಲೇಜಿಂಗೆ ಹೋಪಲೆ ಇಲ್ಲೆ ಹೇಳಿ!.
ಕೂಸಿಂಗೆ ತಾನು ಕಂಡ ಕನಸು ಗಾಳಿಗೋಪುರ ಹೇಳಿ ತೋಚಲೆ ಸುರು ಆದ್ದು ಅಂಬಗಳೇ.. ಹಾಂಗೇಳಿ ಅದು ಒದುತ್ತರ ಕಮ್ಮಿ ಮಾಡಿತ್ತಿಲ್ಲೆ. ಕೈಗೆ ಹಾಲ್ಟಿಕೇಟು ಸಿಕ್ಕುವ ದಿನ ಇದರ ಬದ್ದ. ಫ್ರೆಂಡಿನತ್ತರೆ ಹೇಳಿ ಹಾಲ್ಟಿಕೇಟು ತರಿಸುತ್ತು ಕೂಸು. ಗುರಿಕ್ಕಾರ್ರು, ಕುಲ ಪೌರೋಹಿತ್ಯರ ಉಪಸ್ಥಿತಿಲಿ ಕಾಗದವೂ ಬರದವು. ಒಳ್ಳೆ ಗಟ್ಟಿ ಕುಳವರಿದಾ, ಕೂಸಿನ ಅಪ್ಪಂಗೆ, ಸೋದರ ಮಾವಂಗೆ ಭಾರಿ ಹಿಡಿಸಿತ್ತು. ನಿಶ್ವಯ ಆದ ಮೇಲೆ ಮತ್ತೆ ಸಮಯ ಮುಂದೆ ಕೊಂಡು ಹೋಪಲೆ ಇಲ್ಲೆ ಇದಾ. ಪರೀಕ್ಷೆ ಮುಗಿದ ಮೇಲೆ ಪರೀಕ್ಷೆ ಹೇಳಿ ನಿಗಂಟು ಮಾಡಿದವು. ಅದಕ್ಕೆ ಸರಿಯಾದ ಮೂರ್ತವುದೇ ಸಿಕ್ಕಿತ್ತು.
ಪರೀಕ್ಷೆ ಲಾಯ್ಕಾ ಮಾಡಿತ್ತನ್ನೆ ಕೂಸು. ಆದರೆಂತ ಮಾಡುದು. ಮದುವೇ ಹೇಳ್ತ ಜೀವನದ ಪರೀಕ್ಷೆ ಬರವಲೆ ಮನೆಯವು ಬಲವಂತವಾಗಿಯೇ ಕಟ್ಟಿಸಿತ್ತವು! ಅದಕ್ಕೆ ಓದೆಕ್ಕೇಳಿ ಇಲ್ಲೆ ಇದಾ. ಅದರಲ್ಲೂ ಕೂಸು ಪಾಸಾತು. ಅದರ ಆಸೆ ನೀರಿಲ್ಲಿಪ್ಪ ಗುಳ್ಳೆಯಾಂಗೆ ಕ್ಷಣಾರ್ಧಲ್ಲಿ ಒಡೆದು ಹೋತು. ಕಾಲೇಜಿಂಗೆ ಹೋಯೆಕ್ಕೆ ಹೇಳ್ತ ಆಸೆಯ ಕೊರಳಿಂಗೆ ತಾಳಿ ಬೀಳುವ ಸಂದರ್ಭಲ್ಲಿ ಬಿಟ್ಟು ಬಿಟ್ಟತ್ತು. ಇನ್ನೆಏನಿದ್ದರು, ಗೆಂಡ, ಅತ್ತೆ ಮಾವಂ, ಅತ್ತಿಗೆಕ್ಕೊ, ಮೈದುನರು ಹೇಳ್ತ ಭಾವನೆ ಅಂಬಗಳೇ ಕೂಸಿನ ಮನಸ್ಸಿಲ್ಲಿ ಹುಟ್ಟಿಯಾಗಿತ್ತು. ಎನಗೆ ಕಾಲೇಜಿಂಗೆ ಹೋಪಲೆ ಎಡಿಗಾಯಿದಲ್ಲನ್ನೇ ಹೇಳಿ ಅದೆಂತು ಸುಮ್ಮನೆ ಕೂಯಿದಿಲ್ಲೆ. ಸಂಸಾರವ ಚೆಂದಕ್ಕೆ ನಿಭಾಯಿಸಿಕೊಂಡು ಹೋಯಿದು. ಈಗ ಮಕ್ಕಳೂ ಇದ್ದವು. ಈಗ ಅದಕ್ಕೇನಿದ್ದರೂ ಅದರ ಮಕ್ಕಳೇ ಪ್ರಪಂಚ. ಎನ್ನ ಮಕ್ಕ ಭವಿಷ್ಯಲ್ಲಿ ಒಳ್ಳೆಯವರಾಗಿರೆಕ್ಕು ಹೇಳ್ತ ಉದ್ದೇಶ ಮಾತ್ರ ಕೂಸಿಂಗೆ. (ಈಗ ಹೆಮ್ಮಕ್ಕೊ!)
ಇದು ಕೂಸಿನ ಕತೆಯಾದರೆ ಮತ್ತೊಬ್ಬ ಮಾಣಿಯ ಕತೆ ಇನ್ನೊಂದು ರೀತಿಯದ್ದು. ಹೀಂಗೆ ಒಂದರಿ ಅವನ ವ್ಯತೆಯ ಕತೆಯ ಎನ್ನತ್ತರೆ ಹೇಳಿತ್ತಂ. ಆದರೆ ಆ ಕಥೆಯ ಆರತ್ರೂ ಹೇಳ್ಳಾಗ ಎಂಬ ಕಂಡೀಷನ್ನಿನ ಮೇಲೆ. ಹಾಂಗಾಗಿ ಅವನ ಹೆಸರು ಹೇಳುವ ಅವಕಾಶ ಎನಗೆ ಇಲ್ಲಿಲ್ಲೆ.
ಮಾಣಿಯ ಮನೆಲಿ ಪೈಸೆಗೆಂತವುದೆ ಕೊರತೆ ಇಲ್ಲೆ. ಖಂಡಿಗಟ್ಲೆ ಅಡಕ್ಕೆ ಆವುತ್ತಿದಾ. ಮತ್ತೆ ತೆಂಗುದೆ ಇದ್ದು. ತೋಡದ ಎಡಕ್ಕಿಲ್ಲಿ ಬಾಳೆಯುದೆ, ಕೊಕ್ಕೊ ನೆಟ್ಟಿದವು. ಅಂವ ಹೇಳಿದ ಕಾಲೇಜು, ಕೋರ್ಸಿಂಗೆ ಸೇರಿಸಿತ್ತವು. ಅವಂಗೆ ಸಾಪ್ಟುವೇರು ಇಂಜಿನಿಯರು ಆಯೆಕ್ಕು ಹೇಳ್ತ ಆಸೆ. ಹಾಂಗಾಗಿ ಅದೇ ಕೋರ್ಸಿಂಗೆ ಸೇರಿದಂ. ಮೋರೆಲಿ ಮೀಸೆ ಚಿಗುರುಲೆ ಸುರು ಮಾಡಿಯಪ್ಪ ಮನಸ್ಸಿಲ್ಲೂ ಪ್ರೀತಿ ಮಾಡುವ ಭಾವನೆ ಹುಟ್ಟುತ್ತು ಹೇಳ್ತ ಮಾತು ಹಿಂದಿನಿಂದಲೇ ಇದ್ದಿದಾ.!
ಮಾಣಿಯ ಕೋಲೇಜಿಲ್ಲಿ ಮತ್ತೊಂದು ಕ್ಲಾಸಿಲ್ಲಿ ಒಂದು ಕೂಸುದೆ ಕಲ್ತುಗೊಂಡಿತ್ತು. ಆ ಕೂಸಿನ ಮೇಲೆ ಮಾಣಿಗೆ ಸಾಫ್ಟ್ ಕಾರ್ನರು!. (ಲವ್ವಿನ ಮೊದಲ ಸ್ಟೇಜಡ ಇದು, ಎನಗೆ ಗೊಂತಿಲ್ಲೆ ಬಿಂಗಿ ಮಾಣಿಯೊಬ್ಬ ಹೇಳಿದ್ದು!). ಕೂಸಿನ ಹತ್ತರೆ ನೇರ ಮಾತಾಡ್ಲೆ ಇವಂಗೆ ಬೆಟ್ರಿ ಇಲ್ಲದ್ದೋ, ಅಥವಾ ಮನಸ್ಸಿನ ಭಾವನೆ ವೆಕ್ತಪಡಿಸಲೆ ಅಂಜಿಕೆಯೋ ಎನಗರಡಿಯ. ಅಂತು ಇಂತು ಅದರ ಕಂಡಪ್ಪಗ ಸಣ್ಣಕ್ಕೆ ನೆಗೆ ಮಾಡ್ಲೆ ಸುರು ಮಾಡಿದ ಮಾಣಿ. ಇವಂ ಹಲ್ಲು ಗಿಂಜುದರ ನೋಡಿ ಕೂಸುದೇ ಸ್ಮೈಲ್ ಕೊಡ್ಲೆ ಸುರುಮಾಡಿತ್ತು ನಮ್ಮ ಜಾತಿ ಮಾಣಿ ಅಲ್ಲದಾ ಹೇಳಿ!.
ಅಷ್ಟಕ್ಕೆ ಮಾಣಿ ಪೆರ್ಚಿ ಕಟ್ಲೆ ಸುರು ಮಾಡಿದಂ. ಸ್ವರ್ಗಕ್ಕೆ ಇನ್ನು ಮೂರೇ ಗೇಣು ಹೇಳ್ತ ಮಾತು ಎನಗೆ ಅಂಬಗ ಅವನ ನೋಡುವಾಗ ನೆಂಪಾಗಿಗೊಂಡು ಇತು!. ಅದರ ಮೊಬೈಲು ನಂಬರುರುದೆ ಸಿಕ್ಕಿತ್ತಿದಾ ಇವಂಗೆ. ಸುರು ಅದಾ… ಹೊಟ್ಟೆಂದ ಹೋಪಲೆ ಸುರು ಅಪ್ಪ ಹಾಂಗೆ ಇವನ ಮೆಸೇಜು ಕೂಸಿಂಗೆ ಕಳೂಹಿಸಲೆ!. ಪಾಪಾ ಕೂಸುದೆ ನಮ್ಮವನೇ ಮಾಣಿ ಅಲ್ಲದಾ ಹೇಳಿ ರಿಪ್ಲೈ ಮಾಡಿಗೊಂಡಿತ್ತು. ಮಾಣಿ ಅದನ್ನೇ ಲವ್ ಹೇಳಿ ಗ್ರೇಶಿದ. ಇಷ್ಟಾದರೂ ತನ್ನ ಮನಸ್ಸಿಲ್ಲಿ ಇಪ್ಪ ಭಾವನೆಗಳ ಕೂಸಿನ ಹತ್ರೆ ಹೇಳ್ಳೆ ಹೆರಟಿದಾಂಲ್ಲೆ. ಹೀಂಗೆ ಮೆಸೇಜು ಕಳಿಸಿಗೊಂಡೇ ಕಾಲ ಕದಂ. ಏಕೋ ಎನೋ ಕೂಸಿಂಗೆ ಮಾಣಿಯ ರೂಟು ತಪ್ಪಿದ್ದು ಹೇಳ್ತ ಸಂಶಯ ಬಂತು. ಅಷ್ಟು ಹೊತ್ತಿಂಗೆ ಕೋಲೇಜು ಕೂಡ ಮುಕ್ಕೊಂಡು ಬಂತಿದಾ…ಕೂಸು ಮಾಣಿಯ ಎವಾಯ್ಡ್ (ದೂರ ಹೋಪಲೆ) ಮಾಡ್ಲೆ ಸುರು ಮಾಡಿತ್ತು. ಅವಂ ಹತ್ತು ಮೆಸೇಜು ಕಳಿಸಿದರೆ ಕೂಸು ಒಂದು ಕಳಿಸಿಕೊಂಡು ಇತ್ತು. ರೈಲಿನ ಚಕ್ರ ಪಟ್ಟಿಂದ ಕೆಳ ಜಾರ‍್ತಾ ಇದ್ದು ಹೇಳ್ತ ಭಾವನೆ ಮಾಣಿಗೆ ಬಪ್ಪಲೆ ಸುರಾತು.
ಅದರ ಒಂದು ಮೆಸೇಜು ಬಾರದ್ದೇ ಹೋದರೆ ಮಾಣಿಯ ಮನಸ್ಸಿಂಗೆ ಸಮಾಧಾನ ಆಗಿಯೊಂಡಿತ್ತಿಲ್ಲೆ. ಮೆಸೇಜು ಮಾಡು ಹೇಳಿ ಕೂಸಿನ ಪೀಡ್ಸಲೆ ಸುರು ಮಾಡಿದ. ಅಷ್ಟರ ಮಟ್ಟಿಂಗೆ ಅವ ಕೂಸಿನ ಲವ್ವು ಮಾಡಿಗೊಂಡಿತ್ತಂ ಇದಾ. ಒಂದು ದಿನ ಕೂಸು ನೇರವಾಗಿ ಹೇಳಿತ್ತು ’ಎನಗೆ ನಿನ್ನ ಹಾಂಗೆ ಸುಮಾರು ಜನ ಫ್ರೆಂಡ್ಸುಗ ಇದ್ದವು. ಹಾಂಗಾಗಿ ಏವಾಗಲೂ ಮೆಸೇಜ್ ಮಾಡ್ಲೆ ಎಡಿಯ’. ಕೂಸಿನ ಬಾಯಿಂದ ಏವ ಮಾತಿನ ಮಾಣಿ ನಿರೀಕ್ಷಿಸಿದ್ದಾಂಲ್ಲೆಯೋ ಆ ಮಾತು ಅದರ ಬಾಯಿಂದ ಬಂದು ಹೋತು. ಆಗ ಜಾರ‍್ತ ಇದ್ದು ಹೇಳಿ ಜಾನ್ಸಿದ ರೈಲಿನ ಚಕ್ರ ಪಟ್ಟಿಂದ ಈಗ ಜಾರಿಯಾಗಿತ್ತು!.
ಎರಡು ದಿನ ಮಾಣಿಯ ಮೋರೆ ನೋಡ್ಲೆ ಎಡಿಯ… ಅಷ್ಟೂ ಫೀಲು ಮಾಡಿಕೊಂಡು ಇತ್ತಿದಂ. ಈ ಎರಡು ದಿನಲ್ಲಿ ಹಿಂದೆ ಕೂಸು ಮಾಡಿದ ಮೆಸೇಜುಗಳೆಲ್ಲಾ ಮತ್ತೊಂದರಿ ಓದಿದ!.. ಕಣ್ಣೀರು ಹಾಕಿದಂ…. ಹಾಂಗೆ ಎಷ್ಟು ದಿನ ಕೂರುಗು ಮಾಣಿ…. ಅವನ ಜೀವನ ಅಲ್ಲಿಗೆ ಮುಗುದತ್ತಾ.. ಮುಂದೆ ಇನ್ನೂ ಇಲ್ಲೆಯಾ?…
ಎಂಥಾತೋ ಏನೋ ಸೀದಾ ಸೆಲೂನಿಂಗೆ ಹೋದ.. ಲಾಯಿಕಲ್ಲಿ ತಲೆ ಕುಚ್ಚಿ ತೆಗೆಸಿ ಬಂಡಾರಿಯತ್ರೆ ನವರತ್ನ ಎಣ್ಣೆಲೆ ಮಸಾಜುದೆ ಮಾಡ್ಸಿದಂ…ಎಲ್ಲವೂ ಇಂದಿಗೆ ಕೊನೆಯಾಗಲಿ ಹೇಳಿ..! ಮನೆಗೆ ಬಂದು ಬೆಶಿ ಬೆಶಿ ನೀರಿಲ್ಲಿ ಮಿಂದು ಲಾಯ್ಕಲ್ಲಿ ಬಿದ್ದು ಒರಗಿದ… ಎನ್ನ ಜೀವನಲ್ಲಿ ಆದ ಕೆಟ್ಟ ಘಟನೆ ಹೇಳಿ ಆ ಘಟನೆಗಳ ಮರವ ನಿರ್ಧಾರ ಮಾಡಿದಂ….
ಈಗ ಮಾಣಿ ಬೆಂಗ್ಲೂರಿಲ್ಲಿ ಒಂದು ಸಾಫ್ಟ್‌ವೇರ್ ಕಂಪೆನಿಯಲ್ಲಿ ಕೆಲಸ ಮಾಡ್ತಾ ಇದ್ದ… ಎನಗೆ ಸಿಕ್ಕುವಾಗ ಸಿಕ್ಕುವಾಗ ಹೇಳ್ತ …ನಾವು ಗ್ರೇಶಿದ್ದೆಲ್ಲಾ ಸಿಕ್ಕಿದರೆ ಅಥವಾ ಆದರೆ ನಾವು ಹೀಂಗಿರ‍್ತಾ.. ಭಾವ ಹೇಳಿ!… ಆ ಮಾತಿಂಗೆ ಆನುದೆ ತಲೆ ಅಪ್ಪು ಹೇಳಿ ತಲೆ ಆಡ್ಸುತ್ತೆ. ಎಂತಕೆ ಹೇಳಿದರೆ ಆ ಮಾತು ಅಷ್ಟು ಸತ್ಯವಾದ ಮಾತು…
ಕೆಲವು ತಿಂಗಳ ಹಿಂದೆ ಆ ಕೂಸಿಂಗೆ ಮದುವೆ ಆದ ವಿಷಯ ಗೊಂತಾತು ಈ ಮಾಣಿಗೆ. ಇಲ್ಲಿಂದಲೇ ಮನಸ್ಸಿಲ್ಲಿ ಅದಕ್ಕೆ ವಿಶ್ ಮಾಡಿದಂ!. ಜೀವನ ಅವನ ಸಂಪೂರ್ಣವಾಗಿ ಬದಲಾಯಿಸಿದ್ದು. ತುಂಬ ಪ್ರಾಕ್ಟಿಕಲ್ ಆಗಿ ಅವಂ ಆಲೋಚನೆ ಮಾಡ್ಲೆ ಸುರು ಮಾಡಿತ್ತಂ
ಇದು ಕೇವಲ ಎರಡು ಉದಾಹರಣೆಗೊ. ಹೀಂಗಪ್ಪದೇ ಅಥವಾ ಬೇರೆ ಬೇರೆ ನಮೂನೆಯ ಘಟನೆ ಪ್ರತಿಯೊಬ್ಬರ ಜೀವನಲ್ಲಿ ನಡೆದಿಕ್ಕು. ಆದರೆ ಭವಿಷ್ಯ ಹೇಳ್ತದು ಇರ್ತಲ್ಲಾ. ಅದು ಎಲ್ಲಾ ಘಟನೆಂಗಳ ಮರವ ಹಾಂಗೆ ಮಾಡ್ತು.
ಮರವಲೆ ಎಡಿಯದ್ದವು ಆತ್ಮಹತ್ಯೆಯಂಥ ನಿರ್ಧಾರವ ತೆಕ್ಕೋಳ್ತವು…ಈ ನಿರ್ಧಾರಕ್ಕೆ ಆರುದೆ ಬಪ್ಪಲಾಗ..
ಎಂತಕೆ ಹೇಳಿದರೆ ಜೀವನ ಹೇಳಿದರೆ ಇಷ್ಟೇ ಅಲ್ಲಾ.. ಭವಿಷ್ಯ ಇನ್ನೂ ಇರ‍್ತು…ನಮ್ಮ ಎದುರುಗೊಂಬಲೆ.. ಬಪ್ಪ ಎಲ್ಲಾ ಸವಾಲಿನ ಸ್ವೀಕರಿಸಿಯಪ್ಪಗಳೇ ಜೀವನಕ್ಕೆ ಒಂದು ಅರ್ಥ ಬಪ್ಪದು. ಎಂತ ಹೇಳ್ತಿ..
ಏನಾಗಲೀ.. ಮುಂದೆ ಸಾಗು ನೀ…
ಬಯಸಿದ್ದೆಲ್ಲಾ ಸಿಗದು ಬಾಳಲಿ…. ಬಯಸಿದ್ದೆಲ್ಲಾ ಸಿಗದು ಬಾಳಲಿ….
ಬೆಂಗಳೂರಿಂಗೆ ಬಂದ ನಂತರ ಹವ್ಯಕ ಭಾಷೆ ಒಂದೇ. ಊರಿಲಿ ಆದರೆ ಪಂಜ ಸೀಮೆ, ಕುಂಬಳೆ ಸೀಮೆ, ಕೋಳ್ಯೂರು ಸೀಮೆ, ವಿಟ್ಲ ಸೀಮೆ ಹೇಳಿ ಭೇದ ಇಪ್ಪದು ಗೊಂತಿದ್ದಲ್ಲ. ಇರಲಿ, ಪಂಜ ಸೀಮೆಲಿ ಬೆಶಿನೀರಿಂಗೆ ಮಿಂದ ನೀರು ಹೇಳಿ ಹೇಳುತ್ತವಡ. ಈಗ ಆ ಪದ ಬಳಕೆ ಇದ್ದ ಹಾಂಗೆ ಇಲೆಲ. ಆನು ಸಣ್ಣ ಇಪ್ಪಗ ಒಂದು ಸಲ ಹೀಂಗೆ ತಮಾಷೆ ಆಗಿತ್ತು. ಎಂಗೊ ಕುಂಬಳೆ ಸೀಮೆಂದ ಪಂಜಕೆಕ ಬಂದವು. ಮಿಂದ ನೀರು ಕೊಡು ಮಾಣಿ ಹೇಳಿ ಅಜ್ಜಿ ಹೇಳಿದಾಗ ’ಅಜಿಜ , ಆಗಳೇ ಮಿಂದು ಆಯಿದನೆನ, ನೀರೆಲ್ಲ ಬೆಶಿನೀರು ಕೊಟ್ಟಗಿಂದ ಹೆರ ಹೋಗಿ ಆಯಿದು ಎಂದು ಹೇಳುವಾಗ ಮನೇಲಿದ್ದವೆಲ್ಲ ಬಿದ್ದು ಬಿದ್ದು ಬಿದುದ ನೆಗೆ ಮಾಡಿದ್ದವು. ಕುಂಬ್ಳೆ ಸೀಮೆಯ ಚೀಂಚಟ್ಟಿ ಎಂಬ ಶಬ್ದ ಈಗ ಆರಿಂಗೆ ಗೊಂತಿದುದ ಹೇಳಿ… ಇರಲಿ, ಇದೆಲ್ಲ ಸುಮ್ಮನೆ ಕಾಲಕ್ಷೇಪಕೆಕ ಹೇಳಿದೆ. ಬೆಂಗಳೂರಿಲಿ ಹವ್ಯಕ ಭಾಷೆ ಮಾತನಾಡುದು ಕೇಳುಲೆ ಅಪರೂಪ. ಬಟ್ಟಕ್ಕಳ ಸಹವಾಸ ಬೇಡ ಹೇಳಿ ಒಂದೊಂದು ಸತಿð ಕಂಡರೂ ಅವರ ಬಿಡುಲೆ ಆವುತ್ತಾ ಹೇಳಿ ಮತೆತ. ಸರಿ, ಸಿಕುಕತೆತ ಮತೆತ….
ಬರದ್ದು ಲಾಯಿಕ್ ಆಯಿದು.ಕೆಲಾವು ಜನಂಗೊಕ್ಕೆ ಹೀಂಗಿಪ್ಪ ಅನುಭವ ಇಕ್ಕು. ಬಯಸಿದ್ದು ಸಿಕ್ಕದಿಪ್ಪಗ ನಾವು ಹೇಂಗೆ ಜೀವನವ ಎದುರುಸುತ್ತು ಹೇಳುವದರಲ್ಲಿ ನಮ್ಮ ಭವಿಷ್ಯ ಇಪ್ಪದು. ನಮ್ಮ ಇತಿ ಮಿತಿಲಿ ಆಕಾಶಕ್ಕೆ ಏಣಿ ಹಾಕೆಕ್ಕು. “ಬಾನಿಗೊಂದು ಎಲ್ಲೆ ಎಲ್ಲಿದೆ, ನಿನ್ನಾಸೆಗೆಲ್ಲಿ ಕೊನೆ ಇದೆ”
ಶರ್ಮ ಅಪ್ಪಚ್ಚಿ, ನಿಂಗಳ ಮಾತು ಅಕ್ಷರಶಃ ನಿಜ.. ಶೇ..೧೦೦ರಷ್ಟು ಸತ್ಯ ಮಾತು, ಧನ್ಯವಾದ ಪ್ರತಿಕ್ರಿಯೆಗೆ…ಹೀಂಗೆ ಒಪ್ಪ ಕೊಡ್ತಾ ಇರಿ…
ಆ ಪದ್ಯವುದೆ ಭಾರಿ ಅರ್ಥಗರ್ಭಿತವಾದ್ದು…
ಕೆಪ್ಪಣ್ಣ,… ಲಾಯಿಕಾಯಿದು ಬರದ್ದು.. ಎನಗೇನೋ.. ಲವ್ ಸ್ಟೋರಿ ತಮ್ಮದೆಯಾ ಹೇಳಿ ಡೌಟ್ 🙂 ಹೆಹ್ಹೆ….
ಇರಲಿ.. ಆರುದೇ ಎಷ್ಟೇ ಬೇಜಾರಾದರೂ ಸಾಯಿವ ನಿರ್ಧಾರಲ್ಲ ಮಾಡುಲಾಗಲ್ಲ…!!
ದಿವ್ಯ, ನಿಂಗಳ ಪ್ರತಿಕ್ರಿಯೆಗೆ ಧನ್ಯವಾದ…ನಿಂಗೊ ಬಾರಿ ಚೆಂದಲ್ಲಿ ನೆಗೆ ಮಾಡ್ತಿರಿ… ಹೀಂಗೆ ಓದುತ್ತಾ ಇರಿ.. ಹಾಂಗೆ ಲೇಖನಂಗೊಕ್ಕೆ ಒಪ್ಪವುದೆ ಕೊಟ್ಟಿಕ್ಕಿ ಆತೋ..
ಲಾಯ್ಕ ಆಯಿದು..ಬರದ್ದು.
ಧನ್ಯವಾದ ಡಾಕ್ಟ್ರೆ.. ಹೀಂಗೆ ಓದುತ್ತಿರಿ.. ಒಪ್ಪವುದೇ ಕೊಟ್ಟಿಕ್ಕಿ..
ಹವ್ಯಕ ಭಾಷೆಲಿ ಒಂದು ಒಳ್ಳೆ ಪ್ರೇಮಕಥೆ ಬರವಲೆ ಎಡಿತ್ತೂ ಹೇಳುತ್ತಕ್ಕೆ ಉದಾಹರಣೆ ಕೆಪ್ಪಣ್ಣನ ಲೇಕನಲ್ಲಿ ಬತ್ತ ಮಾಣಿಯ ಕಥೆ. ಕೆಪ್ಪಣ್ಣನ ಬರೆತ್ತ ಶೈಲಿ ಲಾಯಕಿದ್ದು. ಅವನದ್ದೇ ಕಥೆ ಆಯಿಕ್ಕೋ ಹೇಳ್ತ ಸಂಶಯವೂ ಬತ್ತು. ಹೇಳಿರೆ , ಕಥೆಯ ಫೀಲ್ ಹಾಂಗಿತ್ತು. ಗುಡ್. ಕೆಪ್ಪಣನ ಮುಂದಾಣ ಲೇಖನದ ನಿರೀಕ್ಷೆಲಿ ಇದ್ದೆ.
ಗೋಪಾಲ ಮಾವ, ನಿಂಗಳ ಪ್ರತಿಕ್ರಿಯೆಗೆ ಧನ್ಯವಾದ….ಖಂಡಿತವಾಗಿಯೂ ನಿಂಗ ಸಂಶಯ ಪಡುವ ಅಗತ್ಯ ಇಲ್ಲೆ..ಎಂತಕೆ ಹೇಳ್ರೆ ಇದು ಎನ್ನ ಕಥೆ ಅಲ್ಲ… ಅವಂ ಹೇಳಿದ ಕಥೆಯ ಕೆಪ್ಪಣ್ಣ ರಜ್ಜ (ಜಾಸ್ತಿ!) ಮಸಾಲೆ ಹಾಕಿ ಬರದ್ದಂ ಅಷ್ಟೆ..
ಹೀಂಗೆ ಓದಿಕೊಂಡು ಇರಿ ಹಾಂಗೆ ಒಪ್ಪವುದೇ ಕೊಟ್ಟಿಕ್ಕಿ ಅತೋ..