Oppanna.com

ಹೊಟ್ಟೆ (ಮುಂದುವರುದ್ದು)

ಬರದೋರು :   ಸುಬ್ಬಣ್ಣ ಭಟ್ಟ, ಬಾಳಿಕೆ    on   27/06/2012    8 ಒಪ್ಪಂಗೊ

ಸುಬ್ಬಣ್ಣ ಭಟ್ಟ, ಬಾಳಿಕೆ
Latest posts by ಸುಬ್ಬಣ್ಣ ಭಟ್ಟ, ಬಾಳಿಕೆ (see all)

ಬಾಳಿಕೆ ಮಾವ ಹೊಟ್ಟೆಯ ಬಗ್ಗೆ ಹೇಳಿದ ಶುದ್ದಿಯ ಎರಡ್ಣೇ ಭಾಗ ಇದು.
ಕಳುದ ವಾರ ಹೇಳಿದ ಮೊದಲನೇ ಭಾಗ ಇಲ್ಲಿದ್ದು: https://oppanna.com/lekhana/hotteya-shuddi

ಹೊಟ್ಟೆ (ಮುಂದುವರುದ್ದು)

ಹೊಟ್ಟೆ ಮುಂದುವರುದ್ದು ಹೇಳಿರೆ ತಪ್ಪು ಅರ್ಥ ಗ್ರೇಶೆಡಿ! 😉
ಹೊಟ್ಟೆಯ ಕುರಿತಾದ ಲೇಖನ ಮುಂದುವರುದ್ದು ಹೇಳಿ.

ಹೊಟ್ಟೆ ದೊಡ್ಡ ಅಕ್ಕಷ್ಟೆ ಹೊರತು ಮುಂದುವರಿವಲೆ ಸಾಧ್ಯ ಇದ್ದೋ ನಿಂಗಳೇ ಹೇಳಿ. ಹೊಟ್ಟೆಯ ವಿಷಯಲ್ಲಿ ಬರದಷ್ಟೂ ಮುಗಿಯ.
ಕೇಳಿದ್ದೀರೋ? ಭೀಮನ ಹೊಟ್ಟೆಗೆ ಕಾಸಿನ ಮಜ್ಜಿಗೆ ಹೇಳುತ್ತವು. ಎಂತಗೆ?
ಭೀಮನ ಹೊಟ್ಟೆ ದೊಡ್ಡ ಇದ್ದು. ಅವನ ಹೊಟ್ಟೆ ತುಂಬುಸುಲೆ ಏಕಚಕ್ರಪುರಲ್ಲಿಪ್ಪಗ ತುಂಬ ಕಷ್ಟ ಆಗಿತ್ತಡೊ. ದಿನಾ ಬೇಡಿತಂದ ಆಹಾರವ ಎರಡು ಪಾಲು ಮಾಡಿ ಒಂದು ಪಾಲು ಭೀಮಂಗೇ ಕೊಟ್ಟು ಒಳುದ್ದರ ಒಳುದೋರು ತಿಂದುಗೊಂಡಿತ್ತವಡೊ.
ಊರಿನ ಲೆಕ್ಕದ ಬಲಿಯ ಗಾಡಿಲ್ಲಿ ತುಂಬುಸಿಗೊಂಡು ಬಕಾಸುರಂಗೆ ಕೊಡುಲೆ ತೆಕ್ಕೊಂಡು ಹೋಪಗ ಕೊದಿ ತಡೆಯದ್ದ ತಿಂಬಲೆ ಸುರುಮಾಡಿದೋನು, ತಿಂದಡೋ,ತಿಂದಡೋ ಎಷ್ಟು? ಗಾಡಿಲ್ಲಿದ್ದದು ಎಲ್ಲ ಮುಗುತ್ತಡೊ.
ಎಷ್ಟೊ ಲೆಕ್ಕ ಹೇಳುತ್ತವು ಕುಟ್ತುಗಲ್ಲಿದ್ದದರ ಎಲ್ಲ ತಿಂದುಗೊಂಡಿಪ್ಪಗ ದೂರಂದ ನೋಡಿದ ರಾಕ್ಷಸ ಹಶು ತಡೆಯದ್ದೆ ಬೊಬ್ಬೆ ಹಾಕಿತ್ತಡೊ. “ಬೇಗ ಬಾ” ಹೇಳಿತ್ತಡೊ. ಅಂಬಗ ಭೀಮ “ನಿಲ್ಲು ಮಾರಾಯ ಇನ್ನು ರಜ ಪಾತ್ರೆಲ್ಲಿ ಹಿಡುಕ್ಕೊಂಡಿದ್ದು ಅದರ ಮುಗುಸೀತೆ. ಮತ್ತೆ ನಿನ್ನತ್ರೆ ಮಾತಾಡುತ್ತೆ” ಹೇಳಿದಡೊ.
ಅಂಬಗ ಗ್ರೇಶುಲಕ್ಕು ಎಷ್ಟು ದೊಡ್ಡ ಭಿಮನ ಹೊಟ್ಟೆ ಹೇಳಿ. ಅವಂಗೆ ಬೇಡಿ ತಂದದು ಕಾಸಿನ ಮಜ್ಜಿಗೆಯೇ ಅಲ್ಲದೋ?

ಮದಲೊಂದು ಹಡಗು ತುಂಬುಸುಲೆ ಹೋದ್ದು ತುಂಬುಸಿಕ್ಕಿ ಬಯಿಂದಡೊ.
ಹೊಟ್ಟೆ ತುಂಬುಸುಲೆ ಹೋದ್ದು ಬಯಿಂದಿಲ್ಲೆಡೊ.ಏಕೆ ಕೇಳಿ. ತುಂಬುಸಿದ ಹಾಂಗೆ ಖಾಲಿ ಆವುತ್ತು. ಮತ್ತೆ ತಿಉಂಬುಸೆಕ್ಕು. ಎಲ್ಲಿ ವರೆಗೆ? ಜೀವ ಇಪ್ಪಲ್ಲಿ ವರೆಗೆ.
ಆಮ್ಬಗ ತಿಳುದೋರು ಜ್ಞಾನಿಗೊ ಹೇಳುತ್ತವು ಬದುಕ್ಕುಲೆ ತಕ್ಕ ತಿನ್ನೆಕ್ಕು ಹೇಳಿ. ಮೃಷ್ಟಾನ್ನ ತಿಂದರುದೇ ಬರೇ ತೆಳಿ ಕುಡುದರುದೇ ಹೊಟ್ಟೆ ತುಂಬುತ್ತು.
ಹೊಟ್ಟೆ ಅದರ ಕೇಳುತ್ತಿಲ್ಲೆ. ಎಂತಕೆ ಎನಗೆ ಒಳ್ಳೆ ಊಟ ಕೊಟ್ಟಿದಿಲ್ಲೆ ಹೇಳಿ ಕೇಳುತ್ತೋ? ಒಟ್ಟಾರೆ ಪಸುಂಬೆ ತುಂಬಿದರೆ ಸಾಕು ಅಲ್ಲದೋ?
ಅಂಬಗ ನಿಂಗೊ ಕೇಳುವಿ – ಪ್ರಾಣಿಗೊ ಹೊಟ್ತೆ ತುಂಬುಸಿಗೊಳ್ಳುತ್ತ ಹಾಂಗೆ ನಾವು ತುಂಬುಸುವುದೋ!
ಅಲ್ಲಲ್ಲ. ಅಂಬಗ ಬೇಶಿದ್ದರ ತುಂಬುಸಲೂ ಅಕ್ಕು. ನಿನ್ನೆಯಾಣದ್ದೋ,ಮನ್ನೆಯಾಣದ್ದೋ ಹಳಸಿದ್ದರನ್ನೋ ಕೊಳದ ಹಣ್ನನ್ನೋ ತಿಂದರುದೆ ಹೊಟ್ತೆ ತುಂಬುತ್ತು.
ಆದರೆ ಈಗ ಫ್ರಿಜಿಲ್ಲಿ ಮಡಗಿದ್ದು ನಾಳೆಯೂ ತಿಂತಿಲ್ಲೆಯೋ ಕೇಳುವಿ – ಪದ್ಮಾಸನ ಹಾಕಿ ಕೂದು ಉಂಬದು ಕ್ರಮ ಪ್ರಕಾರ ಉಂಬದು ಮರ್ಯಾದಿ. ಆದರೆ ನಿತ್ಯಕ್ಕೂ ನಿಂದೊಂಡೋ,ಅತ್ಲಾಗಿ ಇತ್ಲಾಗಿ ನಡಕ್ಕೊಂಡೊ ಅದು ಉಂಬದಲ್ಲ. ಎಂತಾದರೂ ತಿಂಬದು ಹೇಳಿ ಎನ್ನ ಅಭಿಪ್ರಾಯ.

ಹೊಟ್ತೆ ತುಂಬುಸುವದೇ.ತಾಳ್ಮೆಂದ ಕೂದುಗೊಂಡು ಭೋಜನ ಕಾಲೇ ಆ ದೇವರ ಮನಸ್ಸಿಲ್ಲೇ ಗ್ರೇಶ್ಯೊಂಡು ಮಾಡುವ ಊಟ ಅದು ಕ್ರಮದ ಊಟ ಹೇಳಿ ಎನ್ನ ಅನಿಸಿಕೆ.
ಏನಾದರೂ ಬೇರೆ ಯೋಚನೆಲ್ಲಿ ನೀರು ಕುಡಿವಗ ತೆರಂಬು ಹೋವುತ್ತಿಲ್ಲೆಯೋ? ನಿಂಗಳೇ ಹೇಳಿ.ನಮ್ಮ ಕ್ರಮ ನೋಡಿ ನಮ್ಮ ಮಕ್ಕೊ ಕಲಿತ್ತವು. ಇನ್ನೂ ರಜ ದೂರ ಹೊವುತ್ತವು.
ಆಲದ ಮರ ಅಜ್ಜ ನೆಟ್ಟದು ಹೇಳಿ ಸುತ್ತ ಬಪ್ಪದು ಬೇಡ. ಆಲದ ಮರಲ್ಲಿ ತ್ರಿಮೂರ್ತಿಗಳೇ ವಾಸವಾಗಿದ್ದವು ಹೇಳಿ ಗ್ರೇಶ್ಯೊಂಡು ಭಕ್ತಿಂದ ಸುತ್ತ ಬಂದರೆ ರಜ ಹೊತ್ತಾದರು ನಮ್ಮ ಬೇರೆ ಯೋಚನೆಗೆ ಕಡಿವಾಣ ಹಾಕಿದ ಹಾಂಗೇ ಅಲ್ಲದೋ?
ಒಬ್ಬ ಊಟ ಆತೋ ಹೇಳಿ ಕೇಳಿದ್ದಕ್ಕೆ ಮುಂಡಾಸು ಮೂವತ್ತು ಮೊಳ ಹೇಳಿದರೆ ಅಕ್ಕೋ?

ಊಟ ಮಾಡುವಗ ಬೇರೆ ಯೋಚನೆ ಬಂದರೆ ಉತ್ತರ ಯದ್ವಾ ತದ್ವಾ ಆವುತ್ತು. ಊಟವನ್ನೂ ಸಮಯ ತಪ್ಪಿ ಮಾಡುವದು ಹೇಳಿದರೆ ಒಟ್ಟಾರೆ ಹೊಟ್ಟೆ ತುಂಬುಸಿಗೊಂಬದೇ ಅಲ್ಲದೋ?
ಈಗ ಮೇಜಿ ಮೇಲೆ ಕುರ್ಚಿಲ್ಲಿ ಕೂದು ಉಂಬಗಳೂ ಅಷ್ಟೆ ಹೊಟ್ಟೆ ಉದ್ದಿಗೊಂಡು ಏಳೆಡ. ನೆಲಕ್ಕೆ ಕೂದು ಅಪ್ಪಗ ಏಳುಲೂ ಕಷ್ಟ ಹೇಳಿ ಬಕ್ಕು.
ಆದರೆ ಆರೋಗ್ಯವಂತ ಆದರೆ ಅವಂಗೆ ಯೋಗಾಸನ ಗೊಂತಿದ್ದವಂಗೆ ಕಷ್ಟ ಆಗ ಹೇಳಿ ತೋರುತ್ತು. ಪ್ರಾಯ ಆದ ಮೇಲೂ ಚುರುಕಾಗಿ ಇಪ್ಪೋವು ಎಷ್ಟೋ ಜನ ಇದ್ದವು. ಎಲ್ಲ ಅಭ್ಯಾಸ ಬಲ!
ಸ್ವಾಭಾವಿಕವಗಿ ರಜ ಹೊಟ್ತೆ ದೊಡ್ದ ಇದ್ದರೂ ಅವಕ್ಕೆ ತಿಂಬಲೆ ಹೆಚ್ಚು ಬೇಕಾವುತ್ತಿಲ್ಲೆ. ಮಾಂತ್ರ ಅಲ್ಲ ಅವು ವೇಷ ಹಾಕಿ ಕೊಣಿವಗ ಮಜ ಇತ್ತು.

ತಿಂಬ ಶುದ್ದು ಹೇಳುವಗ ಒಂದು ಹಳೆ ಶುದ್ದಿ ನೆಂಪಾತು.
ಎಂಗಳ ಊರಿಲ್ಲಿ ಕಪ್ಪಲು ಹೇಳಿ ಒಂದು ಮನುಷ್ಯ ಇತ್ತು. ಎಲ್ಲಿ ಊಟ ಇದ್ದರೂ ದಿನಿಗೇಳಿದರೆ ಬಕ್ಕು. ತಿಂಬ ವಿಷಯಲ್ಲಿ ಅದಕ್ಕೆ ನಾಚಿಕೆ ಇಲ್ಲೆ. ಆ ಮನುಷ್ಯ ಬಂದರೆ ಪುಳ್ಳರುಗೊಕ್ಕೆಲ್ಲ ತಮಾಶೆ.
ಊಟಕ್ಕೆ ಕೂದರೆ ಅಶನ,ಸಾಂಬಾರು ಬೇಕಾದಷ್ಟು ತಿಂದಿಕ್ಕಿ,ಮತ್ತೆ ಪಾಯಸ,ಒಂದು ಕವಂಗ ತಂದರೆ ಸಾಲ!
ಹಸರು ಪಾಯಸ ಆಯೆಕ್ಕು. ಸರಿಯಾಗಿ ಸೀವು ಇರೆಕ್ಕು. ಎರಡು ಕವಂಗ ತುಂಬ ಆದರೂ ಮುಗಿಗು.ಆದರೆ ಅಲ್ಲಿಂದ ಎದ್ದು ಒಂದು ಕಡೆಲ್ಲಿ ಬಿದ್ದರೆ ಅದಕ್ಕೆ ಲೋಕ ಇಲ್ಲದ್ದ ಒರಕ್ಕು.
ಏನಾದರೂ ಹೇಳಿದರೂ ಬೇಜಾರು ಇಲ್ಲೆ. ಈಗಳೋ ಒಂದು ಕವಂಗ ಇನ್ನೂರು ಜನ ಸೇರಿದ ಒಂದು ಹಂತಿಗೆ ಸಾಕು. ತಿಂಬೋತೂ ಇಲ್ಲೆ. ಎಲ್ಲ ಕೇಳಿದರೆ “ಎನಗೆ ರಜ ಶುಗರ್ ಇದ್ದು” ಹೇಳುತ್ತವು.
ಆದರೆ ಹಿಂದಾಣೋರು ಹೆಚ್ಚು ಉಂಬೋರು ಇದ್ದರೂ ಕೆಲಸವು ಮಾಡುಗು. ಈಗಾಣೊವಕ್ಕೆ ಎದ್ದು ಸುತ್ತ ಬಪ್ಪದೇ ಕಷ್ಟ೧ ಒಂದು ಮೈಲು ನಡೆಯಕ್ಕಾರೂ ವಾಹನ ಬೇಕು.
ಅದರೆ ನಾವು ಮಕ್ಕೊಗೆ ಪ್ರೀತಿಂದ ಐಸ್ಕೇಂಡಿಯೋ ಬೇರೆ ಕಾಟಂಕೋಟಿಯೋ ತಿಂದುಗೊಳ್ಳಲಿ ಪೈಸೆ ಕೊಟ್ಟರೆ ಅವು ತಿಂದರೂ ಹೊಟ್ಟೆ ಹಾಳಾವುತ್ತಲ್ಲದೋ?

ವಸ್ತುಗೊ ಹಾಳಗದ್ದ ಹಾಂಗೆ ಉಪಯೋಗಿಸಿದ ಐಸುದೆ ಅವಕ್ಕೆ ಕಮ್ಮಿಗೆ ಸಿಕ್ಕಿದರೆ ಅದಕ್ಕೆ ಬಣ್ಣ ಹಾಕಿ ಮಾರುತ್ತವಡೊ. ತಿಂದರೆ ಹೊಟ್ಟೆ ಹಾಳವುತ್ತಿಲ್ಲೆಯೋ/ ನಾವುದೆ ಹೋಟೆಲಿಲ್ಲಿ ನಿವೃತ್ತಿ ಇಲ್ಲದ್ದಕ್ಕೆ ಉಣ್ಣೆಕ್ಕಷ್ಟೆ ಹೊರತು ನಿತ್ಯ ಉಂಡರೆ ಹೊಟ್ತೆ ಹಾಳಾವುತ್ತು.
ಸೋಡದ ಹೊಡಿಯೋ ಎಲ್ಲ ಉಪಯೋಗುಸುತ್ತವಡೊ.
ಬೇರೆ ಕುರು ಕುರು ತಿಂಡಿ ತಿಂಬಲೆ ಕೊಡುವದೂ ಹಾಂಗ. ಆನೊಂದು ಮಾಗಜಿನ್ ಓದಿತ್ತಿದ್ದೆ – ದನಗಳ ಚರ್ಬಿಯೂ ಕಮ್ಮಿಗೆ ಸಿಕ್ಕುತ್ತಡೊ.ಅದರಲ್ಲಿಯೂ ಹೊರಿತ್ತವಡೊ.ಒಟ್ಟಾರೆ ಆರೋಗ್ಯ ಹಾಳು.
ಮತ್ತೆ ಡಾಕ್ಟ್ರಕ್ಕೊಗೆ ಗಿರಾಕಿ ಬೇಕನ್ನೆ. ಅವು ಕಲ್ತದಕ್ಕೆ ಸಾರ್ಥಕ ಆಯೆಕ್ಕನ್ನೆ. ಅಂತೂ ನಮ್ಮ ಸಂಪಾದನೆಲ್ಲಿ ಎಲ್ಲೋರಿಂಗೂ ಹೀಂಗೆ ಪಾಲು ಕೊಟ್ಟರೂ ಗೇಸ್ ಟ್ರಬ್ಲ್ ಹಾಂಗೇ ಮುಂದುವರಿತ್ತು.
ಆನು ಡಾಕ್ಟ್ರಕ್ಕಳ ವಿರೋಧಿ ಅಲ್ಲ! ಹೊಟ್ಟೆಯ ಸಾಂಕುಲೆ ಹೋಗಿ ಮತ್ತೆ ಚಿಂತೆಗೆ ಬೀಳೆಕ್ಕನ್ನೇ ಹೇಳಿ.
ಎಂಗೊ ಸಣ್ಣಾದಿಪ್ಪಗ ಹೊಟ್ಟೆ ಹುಳುವಿಂಗೆ ಮದ್ದು ತೆಕ್ಕೊಂಬದಿತ್ತು. ಸಿಕ್ಕಿದ್ದೆಲ್ಲ ತಿಂದು ಜೀರ್ಣ ಆಗದ್ದರೆ ಹುಳು ತುಂಬುತ್ತು. ಮತ್ತೆ ಮದ್ದು ತೆಕ್ಕೊಳ್ಳೆಕ್ಕು.
ಒಳ್ಳೆ ಆಹಾರವನ್ನೇ ತೆಕ್ಕೊಂಡರೆ ಮಕ್ಕೊಗೆ ನಾವು ಬೇರೆ ತಂದು ಕೊಡುವ ಬೂಸ್ಟ್ ಕೋಂಪ್ಲೇನ್ ಹೀಂಗೆ ತಂದು ಕೊಡೆಕ್ಕಾಗ ಹೇಳಿ ಕಾಣುತ್ತು.
ಮತ್ತೆ ಕೆಲವು ಜನ ತಿಂಬದರ ಬಗ್ಗೆ  “ಅವ ಮೂಗಿನವರೆಗೆ ತಿಂದರೆ ಜೀರ್ಣ ಅಪ್ಪದು ಹೇಂಗೆ?” ಕೇಳುತ್ತವು.
ಮೂಗಿನ ವರೆಗೆ ತಿಂಬದು ಹೇಂಗೆ ಎನಗೆ ಗೊಂತಿಲ್ಲೆ. ಆದರೆ ಎನ್ನ ಲೆಕ್ಕಲ್ಲಿ ಹೀಂಗೆ ಕಾಣುತ್ತು. ಮೂಗಿನ ಮೂಲಕ ನಾವು ಉಸಿರಾಡುವದು. ಉಸಿರಾಟ ಸರಿಯಿರೆಕ್ಕಲ್ಲದೋ?
ಉಸಿರು ತೆಕ್ಕೊಂಬದು,ಬಿಡುವದು ಉಛ್ವಾಸ,ನಿಶ್ವಾಸ ನಡವದು ಮೂಗಿನ ಮೂಲಕ ಆದರೂ ಬಾಯಿಂದ ಮುಂದೆ ಹೋಪದು ಶ್ವಾಸ ಕೋಶಕ್ಕೆ ತಿರುಗುವ ದಾರಿ ವರೆಗೆ ಒಂದೇ ದಾರಿಲ್ಲೇ ಅಲ್ಲದೋ?
ಹೊಟ್ಟೆ ತುಂಬಿ ಉಸಿರು ಬಿಡುಲೇ ಕಷ್ಟ ಆದರೆ ಹೇಂಗಕ್ಕು? ಹೊಟ್ಟೆಗೆ ಆಹಾರ ಎತ್ತಿದ ಮೇಲೆಯೂತಿಮ್ದದು ಜೀರ್ಣ ಆಯೆಕ್ಕಾದರೆ ಹೊಟ್ಟೆಯೊಳದಿಕ್ಕೆ ಅದರ ಹೊಟ್ತೆಲ್ಲಿದ್ದ ಆಮ್ಲಂಗಳೊಂದಿಗೆ ಮಿಶ್ರ ಆಯೆಕ್ಕಲ್ಲದೋ?
ಅಲ್ಲಿ ತಿರುಗುಲೆ ಜಾಗೆ ಇಲ್ಲದ್ದರೆ ಜೀರ್ಣ ಅಪ್ಪದು ಹೇಂಗೆ? ಅದಕ್ಕೆ ಹಾಂಗೆ ಡಮ್ಮುಕಟ್ಟುವ ಹಾಂಗೆ ತಿಂಬಲಾಗ ಹೇಳಿ ಹಿಂದಾಣೋರು ಹೇಳುಗಷ್ಟೆ.ಎನ್ನ ಲೆಕ್ಕಲ್ಲಿ ಈ ಉಸಿರಾಟ ಪ್ರಕ್ರಿಯೆ ಸರಿಯಾಗಿ ನಡೆಯೆಕ್ಕಾರೆ ಹೊಟ್ಟೆಯ ಸಹಾಯ ಬೇಕು.ಉಸಿರು ಹೆರ ಬಿಡುವಗ ಹೊಟ್ಟೆ ಒತ್ತಿಗೊಳ್ಳೆಕ್ಕಾವುತ್ತು.
ಹೊಟ್ಟೆ ತುಂಬಿಗೊಂಡು ಇದ್ದರೆ ಉಸಿರಾಟಕ್ಕೆ ಕಷ್ಟ ಅಕ್ಕು. ಅದಕ್ಕೆ ಹಿಂದಾಣೋರು ಹೇಳಿಗೊಂಡಿದ್ದದು ಇನ್ನೂ ಒಂದು ದೋಸೆ ತಿಂಬಲೆಡಿಗು ಹೇಳಿ ತೋರುವಗಲೇ ತಿಂಬದರ ನಿಲ್ಲುಸೆಕ್ಕು.
ಹಾಂಗೆ ಹದ ಹಾಳಿತ ತಿಳುದು ಉಂಡಿ ತಿಂದು ರಜ ವ್ಯಾಯಮವೂ ಮಾಡಿಗೊಂಡಿದ್ದರೆ ಹೊಟ್ಟೆ ನಮ್ಮ ಹತೋಟಿಲ್ಲಿಕ್ಕು ಹೇಳಿ ಎನ್ನ ಅಭಿಪ್ರಾಯ.
ಮತ್ತೆ ಕೆಲವು ಜನ ಹೇಳುವದಿದ್ದು.”ಎಲ್ಲ ಹೊಟ್ಟೆಲ್ಲಿ ಹಾಕಿಗೊಂಡು ಕ್ಷಮಿಸೆಕ್ಕು” ಹೇಳಿ.ಎಂತರ ಇಲ್ಲಿ ಹೊಟ್ಟೆಲ್ಲಿ ಹಾಕೆಕ್ಕಾದ್ದು?
ಏನಾದರೂ ಎನ್ನಂದ ತಪ್ಪಾಗಿದ್ದರೆ ಅದರ ಕ್ಷಮಿಸಿ ತಪ್ಪಿನ ಮನ್ನಿಸೆಕ್ಕು ಹೇಳಿ.ಅಂಬಗ ಈ ಕ್ಷಮೆ ಹೇಳುವದು ಹೊಟ್ಟೆಯೊಳ ಇದ್ದೋ?
ಇಲ್ಲಿ ಹೊಟ್ಟೆ ಹೇಳುವದು ಹೃದಯ ಮನಸ್ಸು ಅಲ್ಲದೋ? ಹೊಟ್ಟೆಲ್ಲಿ ಕರುಳು ಇದ್ದು. ಕರುಳ ಪಾಶ ಹೇಳುತ್ತವು. ಅಬ್ಬೆಗೆ ಮಕ್ಕಳತ್ರೆ ಇಪ್ಪ ಪಾಶವನ್ನೇ ಕರುಳ ಪಾಶ ಹೇಳಿ ಇಲ್ಲ್ ಹೇಳುವದು.
ಅವಂಗೆ ಆನು ಒಳ್ಲೆದಪ್ಪದು ಇಷ್ಟ ಇಲ್ಲೆ ಹೇಳುತ್ತವು. ಅದರ ಹೊಟ್ಟೆ ಕಿಚ್ಚು ಹೇಳುತ್ತವು.ಇದುದೇ ಹೊಟ್ಟೆಲ್ಲಿಪ್ಪದಲ್ಲ. ಅವನ ಹೊಟ್ಟೆ ತುಂಬ ಕೇಡೇ ತುಂಬಿದ್ದು. ಹಾಂಗೆ ಅವ ಡೊಳ್ಳೊಟ್ಟೆ ಎದ್ದು ಕಾಣುತ್ತು ಹೇಳುತ್ತವು.
ಎಲ್ಲ ಮನಸ್ಸು ಕಂಡ ಹಾಂಗೆ ಹೇಳುವದಷ್ಟೆ ಹೊರತು ಹೊಟ್ಟಗೂ ಇದು ಯಾವುದಕ್ಕೂ ಸಂಬಂಧ ಇದ್ದೋ?
ಒಬ್ಬ ಬೈವಗ ಸುಮ್ಮನೆ ಕೇಳಿಗೊಂಡಿದ್ದು ಎಂತಾದರೂ ಬಾಯಿ ಒಡದರೆ ಅದಾ ಅವನ ಹೊಟ್ಟೆಲ್ಲಿಪ್ಪದೆಲ್ಲ ಹೆರ ಬತ್ತದಾ ಹೇಳುತ್ತವು.ಎಲ್ಲದಕ್ಕೂ ಎಂತ ಹೇಳಿದರು ಹೊಟ್ಟೆ ಮಾತಾಡುತ್ತಿಲ್ಲೆ.
ಮೌನವಾಗಿರುತ್ತು. ಹೊಟ್ಟೆ ಕೆಟ್ಟರೆ ಮಾಂತ್ರ ಕೇಳುವದೇ ಬೇಡ! ಕೆಡದ್ದ ಹಾಂಗೆ ನೋಡ್ಯೊಳ್ಲೆಕ್ಕಾದ್ದು ನಮ್ಮ ಕರ್ತವ್ಯ! ಮತ್ತೆ ಒಬ್ಬನ ನಾವು ಬ್ರಹ್ಮಾಂಡೋದರ ಹೇಳುತ್ತಲ್ಲದೋ?
ಇಡೀ ಲೋಕಂಗಳೇ ಅವನ ಹೊಟ್ಟೆಯೊಳದಿಕ್ಕೆ ಇದ್ದಡೋ? ಅದರೂ ಅವನ ಹೊಟ್ಟೆ ದೊಡ್ಡ ಇಲ್ಲೆ.ಆದರೂ ಅವನ ಭಕ್ತಿಂದ ನಂಬಿದರೆ ನಾವು ಮಾಡಿದ ತಪ್ಪುಗಳ ಎಲ್ಲ ಹೊಟ್ಟೆಲ್ಲಿ ಹಾಕಿಗೊಂಡು ನಮ್ಮ ಕ್ಷಮಿಸುತ್ತಡೋ?
ಅವನನ್ನೇ ಕೇಳಿಗೊಂಬೋ ಎಂಗೊಗೆಲ್ಲ ಒಳ್ಳೆದೇಮಾಡಪ್ಪ ನಿನ್ನನ್ನೇ ನಂಬಿದ್ದೆಯೋ ಹೇಳಿ ಕೇಳಿಗೊಂಡು ಹದಕ್ಕೆ ತಿಂದುಗೊಂಡು ಆರೋಗ್ಯವಾಗಿ ಇಪ್ಪೊ. ಅಂತೂ ಈ ಹೊಟ್ಟೆಗೆ ತುಂಬುಸುಲೆ ಆಹಾರ ಮಾಂತ್ರ ಅಲ್ಲ ಬೇರೆ ವಿಷಯಂಗಳೂ ಇದ್ದು ಹೇಳಿ ಆತು.

ಭಲೇ ಹೊಟ್ಟೆ. ನಿನಗೆ ನೀನೇ ಸಮ!
ಇಷ್ಟಕ್ಕೇ ಮುಗುದ್ದಿಲ್ಲೆ. ಹೊಟ್ಟೆ ಬಾಯಿ ಕಟ್ಟಿಗೊಂಡು ಮಕ್ಕಳ ಸಾಂಕುವೋರೂ ಇದ್ದವನ್ನೇ.
ಮಕ್ಕೊಗೆ ಕೇಳಿದ್ದರ ತಿಂಬಲೆ ಕೊಟ್ಟಿಕ್ಕಿ ಉಪಾಸ ಇಪ್ಪ ಅಬ್ಬೆಕ್ಕಳೂ ಇದ್ದವನ್ನೆ.ಅವರ ತ್ಯಾಗ ದೊಡ್ಡದು. ಅವು ತಿಂಬದು ಎಲ್ಲೋರಿಂಗೂ ಆದಮೇಲೆ.
ಅ ಹೊತ್ತಿಂಗೆ ಮದಲೆ ತಿಂದಾದ ಮಕ್ಕೊ ಅಲ್ಲಿಗೆ ಓಂಗ್ಯೊಂಡು ಹೋದರೆ ಅವರ ಪಾಲಿಂದ ಮಕ್ಕೊಗೂ ಕೊಡುತ್ತವನ್ನೆ. ಅವಕ್ಕೆ ಬೇಡ ಹೇಳಿ ಅಲ್ಲ. ಅವಕ್ಕೂ ತಿಂಬಲೆ ಆಶೆ ಇದ್ದು. ಆದರೆ ಮಕ್ಕೊಗೆ ತಿಂಬಲೆ ಕೊಡುವ ಆಶೆಯೂ ಇದ್ದು. ಅದರಲ್ಲಿ ಮಕ್ಕೊಗೆ ಕೊಡುವ ದೊಡ್ಡ ಮನಸ್ಸೇ ಹೆಚ್ಚು!
ಹಾಂಗಾಗಿ ಅಬ್ಬೆಕ್ಕಳ ತ್ಯಾಗ ದ್ಒಡ್ಡದಲ್ಲದೋ?ಇನ್ನು ಕೆಲವು ಜನ ಇದ್ದವಡೊ.

ಮಕ್ಕಳ ಕದ್ದೊಂಡು ಹೋಗಿ ಕೈಕಾಲು ಎಲ್ಲ ಊನ ಮಾಡಿ ಮಾರ್ಗದ ಕರೆಲ್ಲಿ ಬೇಡುಲೆ ಮನುಶಿಕ್ಕಿ ಹೋಪದು. ಅದು ಹೊಟ್ಟೆ ಪಾಡಿಂಗಲ್ಲ.
ಅದು ಹಂಕಾರಂದ ಜನಂಗಳ ಮೋಸ ಮಾಡಿ ಪೈಸೆ ಮಾಡುಲಿಪ್ಪ ಬುದ್ಧಿವಂತಿಕೆ. ಆದರೆ ಅ ಮಕ್ಕಳ ನೋಡುವಗ ಪಾಪನೆ ಕಾಣುತ್ತು. ಪೈಸೆಗೆ ಬೇಕಾಗಿ ಮನುಷ್ಯ ಎಂತದೂ ಮಾಡುತ್ತವಲ್ಲದೋ?
ಅಂಥವಕ್ಕೆ ನಾಳೆಯಾಣ ಯೋಚನೆ ಇಲ್ಲೆ. ಎಲ್ಲ ಅವನ ಲೀಲೆಗೊ.
ಅವಂಗೇ ಗೊಂತು ಎಲ್ಲ. ನಾವು ಚಿಂತೆ ಮಾಡಿ ಪ್ರಯೋಜನ ಇದ್ದೋ? ಮಾಡಿದ್ದುಣ್ಣೋ ಮಹರಾಯ ಹೇಳಿ.
ಅವು ಅವು ಮಾಡಿದ್ದರ ಅವವು ತಿಂತವು. ಅಷ್ಟಕ್ಕೇ ಬಿಡುವೊ.

ಲೋಕದ ಡೊಂಕಿನ ತಿದ್ದಲೆಡಿಗೋ?
ಎಲ್ಲಿ ಓರೆ ಕೋರೆಗೊ ಇದ್ದೊ ಅದರೆಲ್ಲ ಲೋಕ ಸೃಷ್ಟಿ ಮಾಡಿದೋನೇ ಸರಿಮಾಡಲಿ

~*~*~

8 thoughts on “ಹೊಟ್ಟೆ (ಮುಂದುವರುದ್ದು)

  1. ಅವಂಗೆ ನೆತ್ತಿಲಿ ಕಣ್ಣು ಇಪ್ಪದು ಹೇಳಿ ಕೆಲವು ಜನ ಬಗ್ಗೆ ಹೇಲುತ್ತು ಕೇಳಿದ್ದೆ.ಮೇಲೆ ನೋಡಿ ನಡವದು ಹೇಳಿರೆ ನಮ್ಮ ಹಾಂಗಿಪ್ಪೋರ ಕಾಣುತ್ತಿಲ್ಲೆ ಹೇಳುವ ಭಾವ! ಕಣ್ಣು ನೆತ್ತಿಗೇರುವಗ ಮೂಗು ಮೇಲೆ ಹೋಯೆಕ್ಕನ್ನೆ. ಒಂದಾದರೂ ಹೆಚ್ಚು ತಿಂಬಲೆಡಿಯದೋ?

  2. ಹೊಟ್ಟೆ ಇದ್ದು ವೇಷ ಮಾಡಿ ಕೊಣುದೋರು ಹಿಂದೆಯೇ ಬೇಕಾದಷ್ಟು ಜನ ಇತ್ತಿದ್ದವು. ಆದರೆ ಅವು ಹೆಚ್ಚು ಕೊಣಿಯದ್ರೂ ರಂಗಸ್ಥಳಕ್ಕೆ ಬಂದರೆ ವೇಷ ಎದ್ದು ಕಂಡೊಂಡಿತ್ತು. ಈಗಾಣ ವೇಷಂಗಳ ನೋಡುಲೆ, ಆನು ಸದ್ಯ ಹತ್ತಿಪ್ಪತ್ತು ವರ್ಷಂದಆಟ ನೋಡಿದ್ದೇ ಇಲ್ಲೆ.

  3. ( ಸ್ವಾಭಾವಿಕೆ ಹೊಟ್ಟೆಯೋರು ಕೊಣಿವದು )ಬಾಳಿಕೆ ಮಾವ ಎನ್ನ ವೇಷ ಎಲ್ಲಿಯೋ ನೋಡಿ ಬರದ್ದದೋ ಹೇಳಿ ಒ೦ದು ಸಣ್ಣ ಸ೦ಶಯ !
    ಮಾವಾ,ಈಗೀಗ ಜೆ೦ಬ್ರದ ಹ೦ತಿಲಿ ಸೀವಿನ ಬಳುಸುಲೆ ಸೌಟು ಹಿಡಿವದು ನಿಲ್ಸಿ ಚಮಚ ತೆಕ್ಕೊ೦ಬಲೆ ಶುರು ಮಾಡಿದ್ದವಡಾ,ಸರ್ತ ಹ೦ತಿಯ ನೆಡೂಕೆ ನೆಡದರಾತಿದಾ.ಇನ್ನು ರಜ ಸಮಯ ಹೋಡರೆ ಹ೦ತಿಯ ಒ೦ದು ತಲೇಲಿ ನಿ೦ದು ಪಾಯ್ಸ ಬ೦ತು ಹೇಳಿ ಕವ೦ಗ ತೋರ್ಸಿರೆ ಸಾಕಕ್ಕು!
    ಈ ಮೂಗಿನ ವರೆಗೆ ಹೋಳಿಗೆ ತಿ೦ಬ ಎನ್ನ ಹಾ೦ಗಿರ್ತೋರಿ೦ಗೆ ಒ೦ದೊ೦ದರಿ ಕಾ೦ಬದು ಮೂಗು ನೆತ್ತಿಲಿ ಇದ್ದಿದ್ದರೆ ಕಾಯಿಹಾಲಿನೊಟ್ಟಿ೦ಗೆ ಎರಡು ಹೋಳಿಗೆ ಹೆಚ್ಚು ಹೊಡದಿಕ್ಕುಲಾವ್ತಿತ್ತು ಹೇಳಿ.ನಿ೦ಗೊ ಎ೦ತ ಹೇಳ್ತಿ?

  4. ಕೊಟ್ಟೆಯಾ ಒಳ ಹಿಟ್ಟನು ಸುರಿದು,ತಲೆಕಟ್ತಿ ಬೇಶಿದ ಕೊಟ್ಟಿಗೆಗೆ,
    ಕಾಯ್ಹಾಲ್ ಬೆರುಸಿ ತಿಂದರೆ, ಹೊಟ್ತೆಯದು ಮೊಟ್ಟೆಲ್ಲಿ
    ಬಂದು ಕೂರದ್ದಿಕ್ಕೋ ಹೇಳು, ಸರ್ವಜ್ಞ

  5. ತಿಂಬಲೆ ಬೇಕಾಗಿ ಬದುಕ್ಕುವುದಲ್ಲ, ಬದುಕ್ಕಲೆ ಬೇಕಾಗಿ ತಿನ್ನೆಕು ಹೇಳ್ತ ಸಂದೇಶವ ಬೀರಿದ ಮುಂದುವರುದ ಹೊಟ್ಟೆಯ ಲೇಖನ
    ತುಂಬಾ ವಿಚಾರಂಗಳ ತಿಳುಸಿಕೊಟ್ಟತ್ತು. ಬಾಳಿಕೆ ಮಾವಂಗೆ ಧನ್ಯವಾದಂಗೊ.

  6. ಎಲ್ಲಾರೂ ಮಾಡುವುದು ಹೊಟ್ಟೆಗಾಗಿ….
    ಅಲ್ಲದೊ? ಹೊಟ್ಟೆಯ ಬಗ್ಗೆ ಎಷ್ಟು ಬರದರೂ ಮುಗಿಯ…ಇನ್ನೂ ಮುಂದೆ ಬರಲಿ…

  7. ಹೊಟ್ಟೆಯ ವಿಷಯಲ್ಲಿ ಬೇಕಾದ್ದರ ತುಂಬುಸಿಗೊಂಡರೂ ಬೇಡದ್ದದರ ತುಂಬುಸಿಗೊಂಡರೂ ತುಂಬಿಯೋ ಹೋವುತ್ತು. ಬೆಕಾದ್ದು ಯಾವುದು ಹೇಳಿ ತಿಳುಕ್ಕೊಂಡು ತುಂಬುಸಿಗೊಂಡರೆ ಹಡಗಿನ ಹೊಟ್ಟೆಯೂ ಒಂದರಿ ಅನ್ಲೋಡ್ ಆಯೆಕ್ಕನ್ನೆ!ತಲೆಲ್ಲಿ ತುಂಬಿಗೊಂಡರೆ ಹೊಟ್ಟೆ ತುಂಬಿದ ಹಾಂಗೆ ಅಕ್ಕೋ?

  8. ಏ ಮಾವ°,
    ಇಲ್ಲಿ ಒಂದು … ಹೊಟ್ಟಗೆ ಹಶು ಆದರೆ ಎನಗೇನೆಡಿತ್ತಿಲ್ಲೆ, ತಿಂಬಲೆ ಕೊಟ್ರೆ .. ತಿಂದು ಹೊಟ್ಟಗೆ ಏನೆಡಿತ್ತಿಲ್ಲೆ ಹೇಳಿ ಅಡ್ಡಬಿದ್ದುಗೊಳ್ತು .

    ಮಾವನ ‘ಹೊಟ್ಟೆ’ಲಿ ಹಡಗಿಂದ ಹೆಚ್ಚು ವಿಷಯ ಇಪ್ಪದು ನೋಡಿ ಕೊಶಿಯಾತು ಹೇಳಿ – ‘ಚೆನ್ನೈವಾಣಿ’

    ಇನ್ನಾಣದ್ದೆಂತರಪ್ಪ …. ತಲೆಯೋ?!

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×