- ಕಾಲ - March 25, 2013
- ಒಂದು ಮಳೆ, ಒಂದು ಕೊಡೆ - March 18, 2013
- ದೇವರು: ಜೀವನದ ಅನುಭವಂಗೊ - March 11, 2013
ನಮ್ಮ ಜೀವನಲ್ಲಿ ಬರೇ ಕಷ್ಟಂಗಳೇ ಬಂದರೂ ಆಗ. ಸುಖವೇ ಬರೆಕ್ಕು ಹೇಳಿ ಬಯಸಿದರೂ ಹಾಂಗೆ ನಡೆಯ.
ಸುಖ ಕಷ್ಟ ನಮ್ಮ ಅನಿಸಿಕೆ. ನಾವು ಸುಖ ಪಡುತ್ತಾ ಬೇರೆಯೋರ ಸುಖಲ್ಲೇ ತನ್ನ ಸುಖವಿದ್ದು ಹೇಳಿ ಕಾಂಬ ಜನ ಕಮ್ಮಿ.
ಇನ್ನೊಬ್ಬರ ಕಷ್ಟವ ನೋಡಿ ಮರುಕ ಪಡುವೋರು ಇದ್ದ ಹಾಂಗೆ ಅವರ ಕಷ್ಟ ನೋಡಿ ಕುಶಿ ಪಡುವೋರೂ ಇದ್ದವು. ಅದು ಸರಿಯಲ್ಲ ಹೇಳುವದು ಎನ್ನ ಅಭಿಪ್ರಾಯ.
ಎಲ್ಲೋರ ಮನಸ್ಸೂ ಒಂದೇ ಆಗಿಕ್ಕು ಹೇಳಲೆಡಿಯ. ಸಹಜೀವನ ಮಾಂತ್ರ ನಮ್ಮ ಇಹಲೋಕದ ಸುಖವ ಅನುಭವುಸುಲೆ ಸಹಾಯಕ ಅಕ್ಕು ಹೇಳುವದು ಒಂದು ಅಭಿಪ್ರಾಯ.
ಎಲ್ಲೋರ ಒಟ್ಟಿಂಗೆ ತನ್ನ ಸುಖವನ್ನೋ ಕಷ್ಟವನ್ನೋ ಹಂಚ್ಯೊಂಡು ಬದುಕ್ಕುವಗ ಇದ್ದಷ್ಟು ದಿನ ಧನ್ಯತೆ ಕಾಂಬಲಕ್ಕು ಹೇಳಿ ಗ್ರೇಶುತ್ತೆ.
ದೇವರು ಪ್ರತ್ಯಕ್ಷವಾಗಿ ಕಾಂಬಲೆ ಸಿಕ್ಕದ್ದರೂಒಂದೊಂದು ಸಂದರ್ಭಲ್ಲಿ ತನ್ನ ನಂಬಿದೋರ ಕೈಬಿಡುತ್ತ ಇಲ್ಲೆ ಹೇಳುವದು ಖಂಡಿತ.
ಸಮಯ ಸಂದರ್ಭ ನೋಡಿ ಕಾಲೋಚಿತವಾಗಿ ಕರುಣಾದೃಷ್ಟಿ ಬೀರಿ ತನ್ನ ಮೇಲಾಣ ನಂಬಿಕೆಯ ಒಳಿಶಿಗ್ಳ್ಳುತ್ತ ಹೇಳುವದಕ್ಕೆ ಎನ್ನ ಅನುಭವವ ಹೇಳಿದರೆ ನಿಂಗೊ ನಂಬುವಿರೋ .
ನಮ್ಮ ದೇಶಲ್ಲಿ ಅದರಲ್ಲೂ ಕರ್ನಾಟಕಲ್ಲಿ ಗೇಸ್ ವಿತರಣೆಯ ಕ್ರಮದ ಬಗ್ಗೆ ಗೊಂತಿದ್ದನ್ನೆ. ಬುಕ್ ಮಾಡಿ ಹದಿನೈದು ದಿನವಾದರೂ ತಂದು ಕೊಡುತ್ತವಿಲ್ಲೆ. ಕೇಳಿದರೆ ಸ್ಟೋಕ್ ಇಲ್ಲೆ ಹೇಳಿ ಹೇಳುತ್ತವು.
ಎನ್ನ ಮನೆ ವರೆಗೆ ವಾಹನ ಹೋವುತ್ತಾದರೂ ಆನು ಆಯ್ಕೆ ಮಾಡಿಗೊಂಡ ಕಂಪೆನಿ ಏಜೆಂಟ್ ಎಂಗಳ ರಿಕ್ಶ ಮೇಲೆ ಬತ್ತಿಲ್ಲೆ, ಬಂದು ಕೊಂಡು ಹೋಗಿ ಹೇಳಿದವು.
ಮತ್ತೆ ಜಗಳ ಮಾಡಿದ್ದಕ್ಕೆ ಒಂದರಿ ಮನೆಗೆ ಹೊತ್ತು ತಂದು ಕೊಟ್ಟವು. ಮತ್ತಾಣ ಸರ್ತಿ ಅವು ಹೊತ್ತು ತಂದಿಪ್ಪಗ ಎಂಗೊ ಮನೆಲ್ಲಿಲ್ಲದ್ದೆ ವಾಪಾಸು ಕೊಂಡು ಹೋಗಿತ್ತಿದ್ದವಡೊ.
ಒಟ್ಟಾರೆ ಎಂಗಳದ್ದೇ ತಪ್ಪು. ಅಂದು ಎಂಗೊ ಏನೋ ಮಲ್ಲದ ದೇವರ ನೆನಪಾಗಿ ಅಲ್ಲಿಗೆ ಹೋಗಿತ್ತಿದ್ದೆಯೊ “ಒದರಿ ಹೊತ್ತು ತಂದಾತು ನಿಂಗೊ ಇಲ್ಲದ್ದದಕ್ಕೆ ಆನು ಹೊಣೆಯೋ? ” ಕೇಳಿದವು.
ಅವು ಹೇಳಿದ್ದು ಸರಿ. ಆದರೆ ಎಂತ ಮಾಡುವದು! ಸಾಲದ್ದದಕ್ಕೆ ಮುಖ್ಯ ರಸ್ತೆಂದ ಮನೆ ವರೆಗೆ ಕೋಂಕ್ರೇಟ್ ರೋಡ್ ಆದ್ದಷ್ಟೆ ಬೇರೆ ವಾಹನವೂ ಮನೆ ವರೆಗೆ ಹೋಗ.
ಒಂದರಿ ಹತ್ತರಾಣ ಮನೆಯೋರುಸಿಕ್ಕಿದ್ದರಿಂದ ಮನೆ ವರೆಗೆ ತಪ್ಪಲೆಡಿಗಾಯಿದು. ಬೇರೆ ರಿಕ್ಶಾಲ್ಲಿಯೋ ಕಾರಿಲ್ಲಿಯೋ ಮನೆ ವರೆಗೆ ತಪ್ಪಲೆಡಿಯ. ಅಂದು ತಾರದ್ದರೆ ಬುಕಿಂಗ್ ಕೇನ್ಸಲ್ ಆವುತ್ತು.
ಬೇರೆ ದಾರಿ ಕಾಣದ್ದೆ, ಯೋಚನೆ ಮಾಡಿ ಖಾಲಿ ಸಿಲಿಂಡರ್ ಕೊಂಡು ಹೋದೆ. ಅದೇ ರಿಕ್ಶಾಲ್ಲಿ ಗೇಸ್ ತಂದೂ ಆತು.
ಆದರೆ ಸಮಸ್ಯೆ ಇಪ್ಪದು ಇನ್ನು. ಮೇಲೆ ಮನೆಗೆ ಹೊತ್ತಿಉಗೊಂಡು ಹೋಯೆಕ್ಕು. ನಿಂಗೊಗೆ ಅಂದಾಜು ಇದ್ದನ್ನೆ. ಮುದುಕ ದುಸ್ಸಾಹಸಕ್ಕೆ ಕೈಹಾಕಿದರೆ ನಿಂಗೊ ಎನ್ನ ಬೈಯೀರೋ?
ಬೇರೆ ಜನ ಸಿಕ್ಕಿದವಿಲ್ಲೆ. ಸುಮಾರು ಹೊತ್ತು ಕಾದು ನೋಡಿದೆ. ಮತ್ತೆ ಆದ ಹಾಂಗೆ ಆವುತ್ತು ಹೇಳಿ ಮೆಲ್ಲಂಗೆ ಕೈಕೊಟ್ಟು ಹೆಗಲಿಂಗೆ ಮಡಗುಲೆಡಿತ್ತೋ ನೋಡಿದೆ.
ಕಷ್ಟ ಹೇಳಿ ತೋರಿತ್ತು. ಅಷ್ಟರ ವರೆಗೆ ನೋಡ್ಯೊಂಡಿದ್ದ ಜನಂಗೊ ಎನ್ನ ಅವಸ್ಥೆಯ ನೋಡ್ಯೊಂಡೇ ಇತ್ತಿದ್ದವು.
ಅಶ್ಟು ಹೊತ್ತಿಂಗೆ ಎಲ್ಲಿಂದಲೋ ಬಂದ ಮನುಷ್ಯ ಎನ್ನ ಹತ್ತರಂಗೆ ಬಂದು ಎನ್ನ ಹೆಗಲಿಂಗೆ ಮಡಗುಲೆ ಸಹಾಯ ಮಾಡಿತ್ತು. ಆದರೆ ಈ ಮುದುಕ್ಕಂದ ಈ ಕೆಲಸ ಆಗ ಹೇಳಿಅವಂಗೆ ಕಂಡತ್ತೋ ಏನೋ!
ತಾನೇ ಹೆಗಲ್ಲಿ ಮಡಿಕ್ಕೊಂಡು ನಿಂಗಳ ಮನೆ ಎಲ್ಲಿ ಹೇಳಿ ಕೇಳಿ, ಹೊತ್ತುಗೊಂಡು ಮನೆ ವರೆಗೆ ತಂದು ಕೊಟ್ಟವ ದೇವರೋ ಹೇಂಗೆ?
ಹೊತದಕ್ಕೆ ಎಷ್ಟು ಕೊಡೆಕ್ಕು ಕೇಳಿದ್ದಕ್ಕೆ ಎಂತದೂ ಬೇಡ ಹೇಳಿ ಹೆರಟು ಹೋಪೋನ ಮತ್ತೆ ದಿನಿಗೇಳಿ ಏನೋ ರಜ ಕೂಲಿ ತೆಕ್ಕೋಳಿ ಹೇಳಿ ಆನು ಕೊಟ್ಟದರ ತೆಕ್ಕೊಂಡು ಹೋದ.
ಈಗ ನಿಂಗಳತ್ರೆ ಎನ ಪ್ರಶ್ನೆ ದೇವರು ಅವನೇ ಬಂದು ಹಂಡೆಯ ಹೊರೆಕ್ಕಾತೊ?
ಅಥವಾ ಆರೋ ಒಬ್ಬಂಗೆ ಸದ್ಬುದ್ಧಿ ಕೊಟ್ಟು ಇವಂಗೆ ಸಹಾಯ ಮಾಡುವೋ ಒಬ್ಬನ ಕಷ್ಟ ಕಾಲಲ್ಲಿ ಒದಗಿ ಬಪ್ಪದೋ ನಿಂಗಳೇ ಹೇಳಿ.
~
ಇನ್ನೊಂದರಿ ಮಂಗ್ಳೋರಿಲ್ಲಿ ಆನು ಮಾಡಿಗೊಂಡ ಜಾಗೆಲ್ಲಿ ಏಳೆಂಟು ತೆಂಗಿನ ಮರ ಇತ್ತು.
ಶುರು ಶುರುವಿಂಗೆ ಊರಿಂದ ಎನ್ನೆ ಹಳೆ ಕೆಲಸದೋನ ಬಪ್ಪಲೆ ಮಾಡಿ ತೆಂಗಿನ ಕಾಯಿ ತೆಗೆಶಿಗೋಂಡಿತ್ತಿದ್ದೆ. ಮತ್ತೆ ಅವಂಗೆ ಕೈಮುರುದು ಬಪ್ಪಲೆಡಿಯದ್ದಾಗಿ ಹೋತು.
ಅಂಬಗ ಪ್ರದೇಶಲ್ಲಿ ಬೇರೆ ಮರಂಗಳಿಂದಲೇ ಕಾಯಿ ತೆಗವ ಮನುಷ್ಯನ ಬಪ್ಪಲೆ ಹೇಳಿದೆ. ಎರಡು ಸರ್ತಿ ಬಂದಿತ್ತಿದ್ದ.
ಮನ್ನೆ ಎಂಗೊಗೆ ಅಮೇರಿಕಕ್ಕೆ ಹೋಯೆಕ್ಕು. ಹೋಯೆಕ್ಕಾರೆ ಮದಲೆ ಒಂದರಿ ಕಾಯಿ ತೆಗೆಶುವದು ಫೋನ್ ಮಾಡಿದ್ದಕ್ಕೆ ದಿನ ಮುಂದೆ ಹಾಕಿದ.
ಎನಗೆ ಕೋಪ ಬಂದು ನೀನು ಬತ್ತೆಯೋ ಇಲ್ಲೆಯೋ ಖಂಡಿತ್ ಹೇಳು. ಎನ್ನ ಅಲಪ್ಪುಸೆಡ ಹೇಳಿದೆ. ಇಲ್ಲೆ ಆನು ಬತ್ತೊ ಇಲ್ಲೆ ನೀನು ಬೇರೆ ಜನ ಮಾಡಿಗೊ ಹೇಳಿಬಿಟ್ಟ.
ಮೂರನೆ ದಿನ ಎಂಗೊ ಬೆಂಗಳೂರಿಂಗೆ ಹೆರಡೆಕ್ಕು. ಎಮ್ತ ಮಾಡುವದು ಚಿಂತೆ ಆತು. ಎಂಗಳ ಮನೆಂದ ಮೇಗಾಣ ಮನೆಗೆ ಒಬ್ಬ ಬಪ್ಪದಿದ್ದಡೊ.
ಮನ್ನೆ ಅವ ಬಂದು ಕಾಯಿ ತೆಗೆಯೆಕ್ಕೋ ಹೇಳಿ ಕೇಳಿಯೂ ಆಗಿತ್ತು.ಆದರೆ ಇನ್ನೊಬ್ಬನತ್ರೆ ಹೇಂಗೆ ಹೇಳುವದು ಹೇಳಿ ಸುಮ್ಮನಾದೆ.
ಅವ ಎಲ್ಲಿಯಾದರೂ ಸಿಕ್ಕುಗೋ ಹೇಂಗೆ ಹೇಳುವ ಯೋಚನೆ ಬಂತು.ಅಥವಾ ಬೇರೆ ಆರಾದರೂ ಸಿಕ್ಕುಗೋ ಎಂತದೋ ಹೀಂಗೆಲ್ಲ ಯೋಚನೆ,
ಚಿಂತೆ ಮಾಡ್ಯೊಂಡಿದ್ದ ಹಾಂಗೆ ಅದೇ ಮನುಷ್ಯ ಬಂದೇ ಬಿಟ್ಟ. ಕಾಯಿ ತೆಗೆವಲೆ ಹೇಳಿದೆ. ಕಾಯಿ ತೆಗೆದೂ ಆತು.
ಎಂಗಳ ಚಿಂತೆ ಪರಿಹಾರವೂ ಆತು. ಆನು ಎನ್ನ ಹೆಂಡತ್ತಿ ಹತ್ತರೆ ಹೇಳಿದೆ ”ದೇವರು ಅವನೇ ಬಂದು ನಮ್ಮ ಕೆಲಸ ಮಾಡಿಕೊಡುತ್ತ ಇಲ್ಲೆ. ಸಮಯ ಸಂದರ್ಭ ನೋಡಿ ನಮ್ಮ ಅಗತ್ಯಕ್ಕೆ ಒದಗಿ ಬತ್ತ ಹೇಳುವದು ಖಂಡಿತ ಹೇಳಿದೆ.
~
ಹಾಂಗೆ ಇನ್ನೊಂದು ಅನುಭವ ಆದ್ದದರ ಹೇಳಿರೆ ಹೆಚ್ಚಾಗ ಹೇಳಿ ಕಾಣುತ್ತು.
ಅಂದು ಉದಯ ಕಾಲಕ್ಕೆ ಐದೂವರೆ ಗಂಟೆಗೆ ಎಂಗಳ ವಲಯಲ್ಲೇ ಒಂದು ಮನೆಲ್ಲಿ ರುದ್ರ ಕಲ್ತೋರೆಲ್ಲ ಸೇರಿ ಶತರುದ್ರ ಇದ್ದು ಬರೆಕ್ಕು ಹೇಳಿ ಮನೆಯ ಯಜಮಾನ ಹೇಳಿತ್ತಿದ್ದವು.
ಹೀಂಗೆ ಹೋಪಲಿದ್ದರೆ ಒಟ್ಟಿಂಗೆ ಹೋಪೊ° ಹೇಳಿ ಬೇರೆ ಅಲ್ಲಿಗೇ ಹೋಪೋರರತ್ರೆ ಹೇಳಿತ್ತಿದ್ದೆ.
ಅಕ್ಕು ಒಟ್ಟಿಂಗೆ ಹೋಪೊ ಎಂಗೊ ಹೋಪ ದಾರಿಲ್ಲಿ ಸ್ಕ್ಕಿರೆ ಒಟ್ಟಿಂಗೆ ಹೋಪಲಕ್ಕು ಹೇಳಿತ್ತಿದ್ದವು. ಮನೆಂದ ನಡದು ಹೋವುತ್ತರೆ ಒಂದೂವರೆ ಮೈಲು ದೂರ ಇದ್ದು.
ಆ ಹೊತ್ತಿಂಗೆ ಒಬ್ಬನೇ ನಡಕ್ಕೊಂಡು ಹೋಪಲೆ ಸರಿ ಆಗ ಹೇಳಿ ಅವರ ಜೆತೆಲ್ಲಿ ಹೋಪಲಕ್ಕು ಹೇಳಿ ಗ್ರೇಶಿತ್ತಿದ್ದೆ. ಅವು ಹೇಳಿದ ಹೊತ್ತಿಂಗೆ ಅವು ಹೇಳಿದಲ್ಲೇ ಕಾದು ಕೂದಿತ್ತಿದ್ದೆ.
ಅವು ಹೇಳಿದ ಹೊತ್ತು ಕಳಾತು. ಮತ್ತೆ ನಡಕ್ಕೋಂಡು ಹೋದರೆ ಅಲ್ಲಿಗೆ ಎತ್ತುವಗ ರುದ್ರ ಹೇಳಿ ಮುಗಿತ್ತೀತು. ಬೇಡ ಎನಗೆ ಅಂದ್ರಾಣ ರುದ್ರ ಹೇಳುವ ಯೋಗ ಇಲ್ಲೆ ಹೇಳಿ ಇನ್ನು ಮನೆಗೇ ಹೋಪದು ಹೇಳಿ ಬೆನ್ನು ಹಾಕಿ ಹೆರಟೆ.
ಅಷ್ಟಪ್ಪಗ ಆ ದಾರಿಲ್ಲಿ ಒಂದು ಬೈಕ್ ಎನ್ನ ದಾಂಟಿಕ್ಕಿ ಮುಂದೆ ಹೋದ್ದು ಮತ್ತೆ ಹಿಂದೆ ಬಂದು” ತುಳುವಿಲ್ಲಿ “ ಈರು ದಾನೆ ಈ ಪೊರ್ತುಗು ಏರೆನು ಕಾತೋಣ್ತುತ್ತುನೆ, ಈತು ಬೊಳ್ಪುಗು ಓಡೆಗು ಪಿದಾಡುನೆ? ” ಹೇಳಿ ಕೇಳಿದ.
ಮತ್ತೆ ಮೋರೆ ನೋಡುವಗ ಆನು ದಿನಾ ಹೋಪ ಬಸ್ಸಿನ ಡ್ರೈವರ್. “ ಅವ ಹೋಪದು ಆನು ಹೋಯೆಕ್ಕಾದ ವಿರೋಧ ದಿಕ್ಕಿಲ್ಲಿ . ಅದೇ ದಿಕ್ಕಿಲ್ಲಿ ಹೋದರೂ ಆವುತ್ತು. “ ಆನು ಹೀಂಗೆ ಒಂದು ಮನೆಗೆ ಪೂಜೆಗೆ ಹೇಳಿ ಹೆರಟದು. ಒಬ್ಬ ಇಲ್ಲಿ ಎನಗೆ ಸಿಕ್ಕಿಉತ್ತೆ ಹೇಳಿತ್ತಿದ್ದ. ಸಿಕ್ಕಿದರೆ ಒಟ್ಟಿಂಗೆ ಹೋಪಲಕ್ಕು ಹೇಳಿ ಬಂದೆ. ಆದರೆ ಅವ ಮುಂದೆ ಹೋದ ಹೇಳಿ ಕಾಣುತ್ತು. ಸಾರ ಇಲ್ಲೆ ಆನು ಇನ್ನು ಮನೆವ್ಗೇ ಹೋವುತ್ತೆ ಹೇಳಿ ಹೆರಟದು “ ಹೇಳಿದೆ. ಅಂಬಗ ಅವ ”ಬೋಡ್ಚಿ, ಬಲ್ಲೆ ಈರೆನು ಏನು ಅವ್ವೇ ಸಾದಿಟು ಬುಡ್ತು ಪೋಪೆ ಹೇಳಿ ಹಿಂದೆ ಕೂಪಲೆ ಹೇಳಿದ.
ಬೈಕಿಲ್ಲಿ ಕೂದೆ.
ದಾರಿಲ್ಲಿ ಆನು ಮಾರ್ಗ ಬಿಟ್ಟು ತಿರುಗೆಕ್ಕಾದಲ್ಲಿಗೆ ಮುಟ್ಟುವಗ ಆನು ಇಳಿತ್ತೆ ಹೇಳಿದರೆ ಕೇಳ. “ ನಿಂಗಳ ಆ ಮನೆ ಮುಂದೆಯೇ ಬಿಡುತ್ತೆ ಹೇಳಿ ಆ ಮನೆ ಮುಂದೆಯೇ ಇಳಿಶಿಕ್ಕಿ ಹೋದ.
ಅಲ್ಲಿ ರುದ್ರ ಹೇಳುಲೆ ಶುರುವಾದ್ದುದೇ ಆನು ಅಲ್ಲಿಗೆ ಎತ್ತಿದ್ದುದೆ ಸರಿ ಆಯಿದು.
ಅವನಿಂದಾಗಿ ಎನಗೆ ರುದ್ರಲ್ಲಿ ಭಾಗವಹಿಸುಲೆ ಎಡಿಗಾತು.
ಇದುದೇ ದೇವರ ಮಹಿಮೆ ಹೇಳಿ ಗ್ರೇಶಿದೆ.
~
ನಮ್ಮ ಜೀವನಲ್ಲಿ ಇಂತಹ ಒಂದೊಂದು ಅನುಭವಂಗೊ ಆಗುತ್ತಿರುತ್ತು.
ಕಹಿ ಅನುಭವಂಗಳೂ ಅಪ್ಪದಿದ್ದು. ಸಿಹಿಯಾದರೆ ಹೆಚ್ಚು ಹಿಗ್ಗದ್ದೆಯೂ ಕಹಿಯಾದರೆ ಹೆಚ್ಚು ಕುಗ್ಗದ್ದೆಯೂ ಸಮಾನವಾಗಿ ತೆಕ್ಕೊಂಡರೆ ತೊಂದರೆ ಇಲ್ಲೆ ಹೇಳಿ ಕಾಣುತ್ತು.
ಡಿ ವಿ ಜೀ ಹೇಳಿದ ಹಾಂಗೆ” ಕಾರಿರುಳಾಗಸದಿ ತಾರೆ ನೂರಿದ್ದೇನು ದಾರಿಗನ ಕಣ್ಗೆ ಬೇಕೊಂದು ಮನೆ ಬೆಳಕು, ದೂರದಾ ದೈವವಂತಿರಲಿ ಮಾನುಷ ಸಖನ ಕೋರುವುದು ಬಡ ಜೀವ ಹೇಳಿದ ಹಾಂಗೆ;
ಪ್ರಾಯವು ಆತು ಮಕ್ಕಳೂ ಹತ್ತರೆ ಇಲ್ಲೆ, ಸ್ವಂತ ವಾಹನ ಓಡುಸಿ ಗೊಂತಿಲ್ಲೆ ಆರೋಗ್ಯ ಇದ್ದರೂ ಇಂತಹ ಮಾನುಷ ಸಖ ಬೇಕಾವುತ್ತು.
ವಿವೇಕಾನಂದರ ವಾಣಿ ನೆಂಪಾವುತ್ತು – ಬೆಟ್ಟ ಹತ್ತುವಗ ಮುಂದೆ ನೋಡಬೇಡ ಹಿಂದೆ ನೋಡು ಹೇಳುವದು ನಿತ್ಯ ಸತ್ಯ!
~*~*~
ನಾವುದೆ ಇನೂಬ್ಬರಿನ್ಗೆ ಕsshtaಲಲ್ಲ್ ಇಪ್ಪಗ ಸಹಾಯ ಮದಿದರೆ ಒಲ್ಲೆಯದು
ದೇವರು ಕಣ್ಣಿಂಗೆ ಕಾಂಬಲೆ ಸಿಕ್ಕಡೊ.ಆದರೆ ಯಾವುದೋ ರೂಪಲ್ಲಿ ಬಂದು ತನ್ನ ನಂಬಿದೋರಿಂಗೆ ಸಹಾಯ ಮಾಡುತ್ತ ಹೇಳುವದು ತಿಳುದೋರ ಹೇಳಿಕೆ. ಹಾಂಗೆ ಉಪಕಾರಕ್ಕೆ ಸಿಕ್ಕಿದೋನಲ್ಲಿ ದೇವರ ಕಾಂಬದು ಕೂಡಾ ದೇವರಲ್ಲಿ ನಮಗಿಪ್ಪ ನಂಬಿಕೆಯ ತೋರುಸುತ್ತು ಹೇಳುವದು ಎನ್ನ ಅಭಿಪ್ರಾಯ! ಒಪ್ಪ ಕೊಟ್ಟೋವಕ್ಕೆ ಧನ್ಯವಾದಂಗೊ.
“ಯದ್ಭಾವಾ ತದ್ಭವತಿ” ಹೇಳುತ್ತವು ತಿಳುದೋವು.ನಮ್ಮಲ್ಲಿ ಒೞೆ ಭಾವನೆಗೊ ಇದ್ದರೆ ಒೞೆದೇ ಆಯೆಕ್ಕು. ಅಂತೂ ಕಷ್ಟ ಸುಅಂಗೊ ನಮ್ಮ ನಿರೀಕ್ಷೆಯಂತೆಯೇ ಇರೆಕ್ಕು ಹೇಳುವದು ತಪ್ಪಲ್ಲದೋ?ಎಕಲ್ಲವನ್ನೂ “ಹಂಸ-ಕ್ಷೀರ ನ್ಯಾಯ”ದಂತೆ ಜೀವನವ ಸ್ವೀಕರಿಸಿದರೆ ದುಃಖ ಮಾಡುಲೆ ಅವಕಾಶ ಇಕ್ಕೋ! ಒಟ್ಟಾರೆ ಶಿವ ಮಡಗಿದ ಹಾಂಗೆ ನಾವೆಲ್ಲ ಇರೆಕ್ಕು. ಒಪ್ಪ ಕೊಟ್ಟವಕ್ಕೆಲ್ಲ ಧನ್ಯವಾದಂಗೊ
ಎನ್ನ ಪ್ರಕಾರ ನಾವು ದೇವರ 100% ನಂಬಿದ್ದೇ ಆದಲ್ಲಿ ಅವ ಖಂಡಿತವಾಗಿ ನಮ್ಮ ಕೈ ಬಿಡ.
ನಾವು ಪ್ರತಿ ಕೆಲಸ/ವಸ್ತುಗೊಕ್ಕೆ ದೇವರ ಮೊರೆ ಹೋಪ ಬದಲು ಆ ಕೆಲಸ/ವಸ್ತುಗಳಲ್ಲಿಯೇ ದೇವರ ಕಾಣೆಕ್ಕು ಅಲ್ಲದಾ..? ಎಂತ ಹೇಳ್ತಿ?
ಮಾವ, ದೇವರು ನಿ೦ಗೊಗೆ ಬೇರೆ ಬೇರೆ ರೀತಿಲಿ ಸಹಾಯ ಮಾಡಿದ್ದು ಓದಿ ಖುಶಿ ಆತು.ಅದರಿ೦ದ ಹೆಚು ಖುಶಿ ಆದ್ದು ನಿ೦ಗೊ ಭಗವ೦ತನ ಗುರುತಿಸಿದ ರೀತಿ. “ಅಗತ್ಯ ಇಪ್ಪವಕ್ಕೆ ಸಹಾಯ ಮಾಡುಲೆ ಎನಗೆ ಎಡಿಗಾತನ್ನೆ” ಹೇಳಿ ಅವಕ್ಕೆ ನಿ೦ಗಳಿ೦ದಲು ಹೆಚ್ಹು ಖುಶಿ ಆದಿಕ್ಕು.
ಮಾವನ ಶುದ್ದಿ ಶೈಲಿಯೇ ಒಂದು ವಿಶೇಷ. ಶುದ್ದಿಯ ಕೊಂಡೋಪ ಚಮತ್ಕಾರ ಅದ್ಭುತ. ಶುದ್ದಿ ಸಂಗತಿ ಲಾಯಕ ಆಯ್ದು ಹೇಳಿ ಇತ್ಲಾಗಿಂದ ಒಂದು ಒಪ್ಪ.
“ದೈವಂ ಮಾನುಷ ರೂಪೇಣ” ಹೇಳುದು ಸತ್ಯವಾದ ಮಾತು.
ಎನಗೂ ಹೀಂಗಿಪ್ಪ ಅನುಭವ ಆಯ್ದು.
ಎಷ್ಟೋ ಸರ್ತಿ ಗುರ್ತವೇ ಇಲ್ಲದ್ದವ್ವು ಸಹಾಯ ಮಾಡಿದ್ದಿದ್ದು.
ಆಗೆಲ್ಲ ಆನು “ದೈವಂ ಮಾನುಷ ರೂಪೇಣ” ಹೇಳುವ ಮಾತಿನ ನೆನಪಿಸಿಗೊಳ್ತೆ.
ಈ ಸಹಾಯ ಹೇಳುದು ಸರಪಳಿಯ ಹಾಂಗೆ ಮುಂದುವರಿಯೆಕ್ಕು. ನಾವು ನಮ್ಮಿಂದ ಎಡಿಗಪ್ಪಗ ಇನ್ನೊಬ್ಬಂಗೆ ಸಹಾಯ ಮಾಡೆಕ್ಕು.
{ಸಿಹಿಯಾದರೆ ಹೆಚ್ಚು ಹಿಗ್ಗದ್ದೆಯೂ ಕಹಿಯಾದರೆ ಹೆಚ್ಚು ಕುಗ್ಗದ್ದೆಯೂ ಸಮಾನವಾಗಿ ತೆಕ್ಕೊಂಡರೆ ತೊಂದರೆ ಇಲ್ಲೆ ಹೇಳಿ ಕಾಣುತ್ತು}-ನಿಂಗ ಹೇಳುದು ಖಂಡಿತ ನಿಜ..
ಒಳ್ಳೆ ಲೇಖನ..ಕೆಲವೊಂದು ಸರ್ತಿ ಹೋಂಗಿಪ್ಪ ಅನುಭವಂಗ ಆವ್ತು..
ಬಾಳಿಕೆ ಮಾವ,
ಹರೇ ರಾಮ; ಬಾರೀ ಲಾಯಕಿನ ಅನುಭವ ಹ೦ಚಿದ್ದಿ! “ ನ೦ಬಿ ಕೆಟ್ಟವರಿಲ್ಲವೋ ಗೋವಿ೦ದನ .” ಹೇಳುವ ದಾಸರ ಮಾತುಗೊ ಹಾ೦ಗು “ ನ೦ಬಿ ನಚ್ಚಿ ಕರೆದಡೆ ಓ ಎನ್ನನೇ ಶಿವನು. ” ಹೇಳುವ ಶರಣರ ವಚನ೦ಗ ಅವರ ಜೀವನದ ಅನುಭವದ ಅನುಭಾವ೦ಗೊ ಹೇ೦ಗೆ ಸತ್ಯವೋ, ನಿ೦ಗಳ ಜೀವನದ ಈ ನೇರ ಅನುಭವ ಸತ್ಯವೂ ಅಷ್ಟೇ ಅನುಭಾವವಾಗಿ ಮೂಡಿ ಬಯಿ೦ದು.ಈ ಘಟನಗಳ ಯಥಾವತ್ತಾಗಿ[ಹಸಿ ಹಸಿಯಾಗಿ]ಬೈಲಿಲ್ಲಿ ಬರದ್ದಕ್ಕೆ ಕೃತಜ್ಞತಾ ಪೂರ್ವಕ ಧನ್ಯವಾದ೦ಗೊ+ನಮಸ್ತೇ+ಒ೦ದೊಪ್ಪ.