ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್
ಕೆಲವು ಸರ್ತಿ ಹಲವು ಜೆನಂಗಕ್ಕೆ ಅನಿಸುತ್ತು –
ಎನ್ನತ್ರೆ ಅದಿದ್ದು, ಇದಿದ್ದು, ಅಷ್ಟಿದ್ದು, ಇಷ್ಟಿದ್ದು, ಹಾಂಗೆ ಮಾಡಿದೆ, ಹೀಂಗೆ ಮಾಡುವೆ…. ಇತ್ಯಾದಿ..
ಮಮ ಸಮೀಪೇ ತದಸ್ತಿ, ಏತದಸ್ತಿ, ತಾವದಸ್ತಿ, ಏತಾವದಸ್ತಿ, ತಥಾ ಕೃತವಾನ್, ಏವಂ ಕರಿಷ್ಯಾಮಿ…ಇತ್ಯಾದಿ ಭಾವನಾಃ ಭವಂತಿ!
ಶಂಕರಾಚಾರ್ಯರು ಅಷ್ಟಪ್ಪಗ ಕೇಳ್ತವು — so what? ಹೇಳಿ । ಅವು ಕೇಳ್ತವು ಹೇಳುವದಕ್ಕಿಂತ ಪ್ರತಿಯೊಬ್ಬನೂ ಕೇಳೆಕು ಹೇಳಿ ಪ್ರೇರಣೆ ಕೊಟ್ಟಿದವು ಹೇಳ್ಳಕ್ಕು.
ಶಂಕರಾಚಾರ್ಯರ ಶ್ಲೋಕಂಗಳೇ ಹಾಂಗೆ — ಸಮಾಜದ ಎಲ್ಲಾ ರೀತಿಯ ಜೆನಂಗಳ ಭಾವನೆಯನ್ನೂ/ಅವಸ್ಥೆಯನ್ನೂ ಶ್ಲೋಕಲ್ಲಿ ವ್ಯಕ್ತಪಡಿಸಿ ಸರಿದಾರಿಗೆ ಬಪ್ಪ ಹಾಂಗೆ ಮಾಡುವ ಶೈಲಿ ಅದು.
ಎನ್ನತ್ರೆ ಅದು ಇದ್ದು ಇದು ಇದ್ದು ಹೇಳಿ ಅಪ್ಪಗ ನಾವು ಕೇಳಿಯೊಳ್ಳೆಕು – ತತಃ ಕಿಮ್?
ಬಾಕಿ ಎಲ್ಲ ಇದ್ದರುದೆ ಗುರುವಿನಲ್ಲಿ ಮನಸ್ಸು ಲೀನ ಆಗದ್ರೆ ಎಂತ ಲಾಭ?
ಇಲ್ಲಿ ಕೆಲವು ಶ್ಲೋಕಂಗ ಇದ್ದು – ಗುರ್ವಷ್ಟಕಂದ ಹೆರ್ಕಿದ್ದದು –
ಅತ್ರ ಕೇಚಿತ್ ಶ್ಲೋಕಾಃ ಸಂತಿ – ಗುರ್ವಷ್ಟಕತಃ ಸ್ವೀಕೃತಾಃ ।
ನೋಡುವ° (ಪಶ್ಯಾಮ)
~~~~
ಒಬ್ಬಂಗೆ ಅನಿಸಿತ್ತಡ – ಆನು ಭಾರೀ ದೊಡ್ಡ ದಾನಶೂರ° ಹೇಳಿ. ಮತ್ತೆಂತಾತು?
ಯಶೋ ಮೇ ಗತಂ ದಿಕ್ಷು ದಾನಪ್ರತಾಪಾತ್
ಜಗದ್ವಸ್ತು ಸರ್ವಂ ಕರೇ ಯತ್ಪ್ರಸಾದಾತ್ ।
ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ
ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ ॥
ದಾನಪ್ರತಾಪಾತ್ = ದಾನ ಮಾಡುವ ಸಾಮರ್ಥ್ಯಂದಾಗಿ
ದಿಕ್ಷು = ಎಲ್ಲಾ ದಿಕ್ಕುಗಳಲ್ಲಿ
ಮೇ ಯಶಃ = ಎನ್ನ ಯಶಸ್ಸು
ಗತಂ = ಪಸರಿಸಿದ್ದು.
ಜಗದ್ವಸ್ತು ಸರ್ವಂ= ಜಗತ್ತಿನ ಪ್ರತಿಯೊಂದು ವಸ್ತು
ಕರೇ = ಕೈಯಿಲ್ಲಿ (ಇದ್ದು.)
ಯತ್ಪ್ರಸಾದಾತ್ = ಆರ ಅನುಗ್ರಹಂದವೋ ಆ
ಗುರೋಃ = ಗುರುವಿನ
ಅಂಘ್ರಿಪದ್ಮೇ=ಪಾದಕಮಲಲ್ಲಿ
ಮನಃ =ಮನಸ್ಸು
ನ ಲಗ್ನಂ ಚೇತ್ = ಸೇರಿದ್ದಿಲ್ಲೆ ಹೇಳಿ ಆದರೆ
ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್= ಅದರಿಂದೆಂತ ಅದರಿಂದೆಂತ ಅದರಿಂದೆಂತ ಅದರಿಂದೆಂತ (ಪ್ರಯೋಜನ)?
ಆನು ಮಾಡಿದ ದಾನದ ಪ್ರಭಾವಂದಾಗಿ ಎಲ್ಲಾ ಕಡೆಲ್ಲಿಯುದೆ ಎನ್ನ ಹೆಸರು ಪ್ರಸಿದ್ಧ ಆಯಿದು. ಜಗತ್ತಿನ ಎಲ್ಲ ವಸ್ತುಗಳೂ ಎನ್ನ ಕೈಗೆಟುಕುವ ಹಾಂಗಿದ್ದು. ಆದರೆ ಇದು ಯಾರ ಅನುಗ್ರಹಂದವೊ ಆ ಗುರುವಿನ ಚರಣಕಮಲಲ್ಲಿ ಮನಸ್ಸು ನೆಲೆಗೊಂಡಿದಿಲ್ಲೆ ಹೇಳಿ ಆದರೆ ಮತ್ತೆಂತ? ಮುಂದೆಂತದು? ಅದರಿಂದೆಂತ ಪ್ರಯೋಜನ?
~~~~~
ಮತ್ತೊಬ್ಬಂಗೆ ಹೀಂಗಾತು – ಆನು ದೊಡ್ಡ ಜೆನ ಆಯಿದೆ. ಒಳ್ಳೆ ಗುಣನಡತೆ ಇದ್ದು – ಆದರುದೆ `ತತಃ ಕಿಮ್?’ ಹೇಳಿ ಪ್ರಶ್ಣೆ ಬಂತು.
ವಿದೇಶೇಷು ಮಾನ್ಯಃ ಸ್ವದೇಶೇಷು ಧನ್ಯಃ
ಸದಾಚಾರವೃತ್ತೇಷು ಮತ್ತೋ ನ ಚಾನ್ಯಃ ।
ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ
ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ ॥
ಪದಾರ್ಥಃ
ವಿದೇಶೇಷು = ವಿದೇಶಂಗಳಲ್ಲಿ
ಮಾನ್ಯಃ = ಗೌರವಿಸಲ್ಪಟ್ಟವ.
ಸ್ವದೇಶೇಷು =ತನ್ನ ದೇಶಲ್ಲಿ
ಧನ್ಯಃ =ಧನ್ಯ ಆಯಿದೆ.
ಸದಾಚಾರವೃತ್ತೇಷು = ಸದಾಚಾರದ ವಿಷಯಂಗಳಲ್ಲಿ
ಮತ್ತಃ = ಎನ್ನಂದ ಹೆಚ್ಚು
ನ ಚ ಅನ್ಯಃ =ಇನ್ನೊಬ್ಬ ಇಲ್ಲೆ.
ಗುರೋಃ = ಗುರುವಿನ
ಅಂಘ್ರಿಪದ್ಮೇ=ಪಾದಕಮಲಲ್ಲಿ
ಮನಃ =ಮನಸ್ಸು
ನ ಲಗ್ನಂ ಚೇತ್ = ಸೇರಿದ್ದಿಲ್ಲೆ ಹೇಳಿ ಆದರೆ
ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್= ಅದರಿಂದೆಂತ ಅದರಿಂದೆಂತ ಅದರಿಂದೆಂತ ಅದರಿಂದೆಂತ (ಪ್ರಯೋಜನ)?
ದೇಶವಿದೇಶಂಗಳಲ್ಲಿ ಹೆಸರು ಗಳಿಸಿದ್ದೆ, ಧನ್ಯತೆಯ ಭಾವನೆ ಇದ್ದು. ಒಳ್ಳೆ ನಡತೆಲ್ಲಿ ಎನ್ನಂದ ಮೇಲೆ ಆರೂ ಇಲ್ಲೆ. ಆದರೆ ಇದರಿಂದ ಎಲ್ಲ ಎಂತ ಪ್ರಯೋಜನ – ಮನಸ್ಸು ಗುರುವಿನ ಪಾದಲ್ಲಿ ನೆಲೆಗೊಳ್ಳದ್ದೇ ಇದ್ದರೆ?
~~~~~~
ತುಂಬ ಕಲ್ತು, ಚೆಂದಕೆ ಪದ್ಯ, ಗದ್ಯ ಬರೆತ್ತವಂಗೆ ಎಂತ ಅನ್ಸಿತ್ತೋ–
ಷಡಂಗಾದಿವೇದೋ ಮುಖೇ ಶಾಸ್ತ್ರವಿದ್ಯಾ
ಕವಿತ್ವಾದಿ ಗದ್ಯಂ ಸುಪದ್ಯಂ ಕರೋತಿ।
ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ
ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ ॥
ಷಡಂಗಾದಿವೇದಃ = ಆರು ಅಂಗಗಳಿಂದ ಕೂಡಿದ ವೇದ
ಶಾಸ್ತ್ರವಿದ್ಯಾ = ವಿವಿಧ ಶಾಸ್ತ್ರಂಗ
ಮುಖೇ = ಬಾಯಿಲ್ಲಿ ಇದ್ದು.
ಕವಿತ್ವಾದಿ ಗದ್ಯಂ ಸುಪದ್ಯಂ ಕರೋತಿ = ಕವಿತ್ವವೇ ಮೊದಲಾದ ಪ್ರತಿಭೆ ಗದ್ಯಕಾವ್ಯ ಪದ್ಯಕಾವ್ಯಂಗಳ ರಚನೆ ಮಾಡುತ್ತು.
ಆದರೆ,
ಗುರೋರಂಘ್ರಿಪದ್ಮೇ =ಗುರುವಿನ ಪಾದಪದ್ಮಲ್ಲಿ
ಮನಃ ನ ಲಗ್ನಂ ಚೇತ್ = ಮನಸ್ಸು ನೆಲೆಗೊಳ್ಳದ್ದೇ ಇದ್ದರೆ
ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ = ಮತ್ತೆಂತ ಇದ್ದು?
~~~
ಛಂದಸ್ಸಿನ ಬಗ್ಗೆ –
ಮೇಲೆ ಹೇಳಿದ ಶ್ಳೋಕಂಗ `ಭುಜಂಗಪ್ರಯಾತ‘ ಛಂದಸ್ಸಿಲ್ಲಿ ಇಪ್ಪದು. ಒಂದು ಗೆರೆಲ್ಲಿ ನಾಲ್ಕು `ಯ’ಗಣಂಗ — ಒಟ್ಟು ೧೨ ಅಕ್ಷರಂಗ ಇರ್ತು.
ಒಂದು `ಲಘು’, ಎರಡು `ಗುರು’ ಅಕ್ಷರಂಗ ಇದ್ದರೆ ಅದು ಯಗಣ. `ಭುಜಂಗಪ್ರಯಾತ’ವ ಹೇಳುವ ಶೈಲಿ ಹಾವು ಹರಕ್ಕೋಂಡು ಹೋಪ ಹಾಂಗೆ ಅಡ !
- ಸೌಂದರ್ಯಮಾಧುರ್ಯಶೋಭೇ!(ಅನುರಾಗ-ಗೀತಮ್) - November 13, 2014
- Hello world! - October 22, 2014
- ಅನುರಾಗ ರಾಗ - June 13, 2014
ಹರೇ ರಾಮ ಮಹೇಶಣ್ಣ.
ನಿನ್ನೆ ಮಠಲ್ಲಿ ಸಾಮೂಹಿಕ ಪಾರಾಯಣ ಮಾಡ್ತಿದ್ದದ್ದ ಹೆಮ್ಮಕ್ಕ.
ಉಚ್ಚಾರಣೆ ಮಾಡುವಾಗ ತತ ಕಿಮ್ ತತ ಕಿಮ್ ಹೇಳ್ತಿದ್ದ,
ವಿಸರ್ಗದ ಮುಂದೆ ಕ್ ಬಂದಿಪ್ಪಾಗ್ ಅಕ್ ಹೇಳಿ ಉಚ್ಚಾರ ಮಾಡೆಕು ಹೇಳಿ
ತಿಳಿಸಿದ್ದೆ, ಬಹುತೇಕ ಕಡೆಗಳಲ್ಲಿ ಈ ಸಕ್ರಮ ಹೇಳೆಕ್ಕು ಕಾಣ್ತು.
ಗುರುವಿನ ಗುಲಾಮನಾಗುವ ತನಕ ದೊರೆಯದಣ್ನ ಮುಕುತಿ! ಗುರು ಪೂರ್ಣಿಮೆಯ ಸಂದರ್ಬದಲ್ಲಿ ಒೞೆಯ ಲೇಕನ
ಶಂಕರಾಚಾರ್ಯರ ಶ್ಲೋಕಂಗಳ ಎಷ್ಟು ಶ್ಲಾಘಿಸಿದರೂ,ವರ್ಣಿಸಿದರೂ,ಅರ್ಥ ಮಾಡಿಗೊಂಡರೂ ಸಾಲ… ಅಂತಹ ಮಾಧುರ್ಯ ಅದರಲ್ಲಿ ಇರುತ್ತು… ಮಹೇಶಣ್ಣ೦ಗೆ ಧನ್ಯವಾದಂಗ…
“ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್” ನಾವು ಒಂದು ಲೋಕಲ್ಲಿ ಮುಳುಗಿಪ್ಪಗ ಇದು ಎಷ್ಟೇ ಅರ್ಥ ಮಾಡಿಗೊಮ್ಬಲೆ ಪ್ರಯತ್ನಿಸಿರೂ ಅರ್ಥವೇ ಆವುತ್ತಿಲ್ಲೇ… ಯಾವುದೇ ಲೋಕಂದ ಒಂದು ಬಾಹ್ಯ ಪ್ರೇರಣೆ ಇಲ್ಲದ್ದೆ ನಾವು ಹೆರ ಬತ್ತೂ ಇಲ್ಲೇ… ಹಾಂಗಾರೆ ಇದು ಅರ್ಥ ಆಯೆಕ್ಕಾರೆ ನಾವು ಒಂದು ಲೋಕಲ್ಲಿ ಉತ್ತುಂಗದ ಸ್ಥಿತಿಗೆ ಎತ್ತಿ ಅಲ್ಲಿಂದ ಹೊಸ ಲೋಕಕ್ಕೆ ಬರೆಕು… ಅಲ್ಲಿ ನಾವು ಏನೂ ಗೊಂತಿಲ್ಲದ್ದವು ಎಲ್ಲದಕ್ಕೂ ದೇವರಿಂಗೆ ಶರಣು ಹೋವುತ್ತು… ಅಂತಹ ಸಂದರ್ಭಲ್ಲಿ ಗುರು ಸಿಕ್ಕೆಕ್ಕು… ಅಷ್ಟಪ್ಪಗ ಎಲ್ಲವೂ ಅರ್ಥ ಆವುತ್ತು…
ಗುರುಪೂಜಗೆ ಹೋಯೆಕ್ಕೋದು ಗ್ರೇಶಿಂಡು ಮನುಗಿದ್ದು ನಿನ್ನೆ ಇರುಳು. ಎಂತ ಮಾಡುದು? ಏಳುವಗಳೇ ಘಂಟೆ ಎಂಟು…. 🙁
ಉತ್ತಮಾಃ ಶ್ಲೋಕಾಃ
ಚತುರ್ ಯಂಗಳಿಂದಾ ಭುಜಂಗಪ್ರಯಾತಂ-ಹೇಳುವ ಮಾತು ನೆನಪಾತು.ಎಲ್ಲರಿಂಗೂ ಗುರು ಪೂರ್ಣಿಮೆಯ ಶುಭಾಶಯ.ಸಕಾಲಿಕ ಬರಹಕ್ಕೆ ಮಹೇಶಣ್ಣಂಗೆ ಧನ್ಯವಾದ.ಇಡೀ ಶ್ಲೋಕಂಗಳ [ಅಷ್ಟಕ]ವಿವರಣೆ ಕೊಡಿ ಹೇಳಿ ವಿನಂತಿ.
“ಭುಜಂಗಪ್ರಯಾತಂ ಭವೇದ್ಯೈಶ್ಚತುರ್ಭಿಃ” ಹೇಳಿ ಸಂಸ್ಕೃತಲ್ಲಿ ಇಪ್ಪದು.
ಭವೇತ್+ಯೈಃ+ ಚತುರ್ಭಿಃ =ಭವೇದ್ಯೈಶ್ಚತುರ್ಭಿಃ
ಧನ್ಯವಾದ
ಉತ್ತಮಾಃ ಶ್ಲೋಕಾಃ | ಧನ್ಯವಾದಃ | ಏತದೇವ ಅನುವರ್ತಯತು |
ಹರೇ ರಾಮ ಮಹೇಶಣ್ಣಾ..
ಲಾಯ್ಕಾಯಿದು.
ಬಹು ಸಮೀಚೀನಮ್
🙂
ಸಮಾಜದ ಎಲ್ಲಾ ರೀತಿಯ ಜೆನಂಗಳ ಭಾವನೆಯನ್ನೂ/ಅವಸ್ಥೆಯನ್ನೂ ಶ್ಲೋಕಲ್ಲಿ ವ್ಯಕ್ತಪಡಿಸಿ ಸರಿದಾರಿಗೆ ಬಪ್ಪ ಹಾಂಗೆ ಮಾಡುವ ಶಂಕರಾಚಾರ್ಯರ ಶೈಲಿಯ ಪರಿಚಯ ಮಾಡಿ ಕೊಟ್ಟದಕ್ಕೆ ಧನ್ಯವಾದಗಳು
ಇಲ್ಲಿ ಎಲ್ಲವೂ ಇದ್ದು. ಅದರೆ ಗುರುವಿನ ಮಾರ್ಗದರ್ಶನ, ಅನುಗ್ರಹ ಇಲ್ಲದ್ದೆ ಯಾವದೂ ಪ್ರಾಪ್ತಿ ಆಗ.
ಹಾಂಗಿಪ್ಪಗ, ಗುರುಸ್ಮರಣೆ ಅತೀ ಅಗತ್ಯ.
ಮಹೇಶಾ,
ತತಃ ಕಿಂ?
ಗುರುಪೂರ್ಣಿಮೆಯ ಸಮಯಲ್ಲಿ ಶ೦ಕರಾಚಾರ್ಯರ ಅರ್ಥಪೂರ್ಣ ಪ್ರಶ್ನೆಗೊ.
‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣಾ ಮುಕುತಿ’-ದಾಸರ ಈ ನುಡಿ ನಿತ್ಯಸತ್ಯ.