ಶಿಷ್ಟಾಚಾರ
ಅಂದೊಂದರಿ ಕೆಲವು ಶಬ್ದಾರ್ಥಂಗಳ ನಾವು ಕಲ್ತದು ನೆಂಪಿದ್ದಾ?
ಶಿಷ್ಟಾಚಾರಲ್ಲಿ ಉಪಯೋಗುಸುವ ಕೆಲವು ಶಬ್ದಂಗಳ ಬಗ್ಗೆ ಇಂದುದೆ ರಜ್ಜ ತಿಳ್ಕೊಂಬನಾ?
ಶಿಷ್ಟಾಚಾರ ಹೇಳುವ ಶಬ್ದವನ್ನೇ ಮದಲು ನೋಡುವೊ.
‘ಶಿಷ್ಟಾಚಾರ’ ಇದರಲ್ಲಿ ಎರಡು ಶಬ್ದಂಗ ಇದ್ದಲ್ಲದಾ?
ಶಿಷ್ಟಾಚಾರ = ಶಿಷ್ಟ + ಆಚಾರ
‘ಶಿಷ್ಟಾಚಾರಃ’ ಹೇಳಿರೆ “ಶಿಷ್ಟಾನಾಂ ಆಚಾರಃ” (ಶಿಷ್ಟರ ನಡವಳಿಕೆ) ಹೇಳಿ ಅರ್ಥ.
ಶಿಷ್ಟ ಹೇಳಿರೆ ಒಳ್ಳೆಯವು, ಕ್ರಮಲ್ಲಿಪ್ಪವು.
ಆಚಾರ ಹೇಳಿರೆ ನಡವಳಿಕೆ.
ಶಿಷ್ಟರು ಆರು?
ವ್ಯವಹಾರಲ್ಲಿ ಕೆಲವು ರೀತಿ ನೀತಿಗ ಇದ್ದರೆ ಒಳ್ಳೆದು ಹೇಳ್ಯೊಂಡು ನಮ್ಮ ಪೂರ್ವಿಕರು ಅವರ ನಡವಳಿಕೆಲ್ಲಿ ಕೆಲವು ಕ್ರಮಂಗಳ ಅಳವಡಿಸಿಕೊಂಡವು. ಅದನ್ನೇ ನಾವು ‘ಇದು ಮೊದಲಿಂದ ಬಂದ ಕ್ರಮ’ ಹೇಳಿ ಅನುಸರಿಸಿಯೊಂಡು ಬಪ್ಪದು.
ಶಿಷ್ಟಾಚಾರದ ಮಾತುಗ ಯಾವ್ಯಾವುದಿದ್ದು?
ನಮಸ್ತೇ
ನಮಸ್ತೇ = ನಮಃ + ತೇ
ತೇ ಹೇಳಿರೆ ನಿನಗೆ ಹೇಳಿ ಅರ್ಥ.
ನಮಸ್ತೇ = ನಿನಗೆ ನಮಸ್ಕಾರ.
ನಮಃ ಹೇಳಿರೆ ಬಗ್ಗುವದು. ನಮಸ್ತೇ ಹೇಳಿರೆ ನಿನ್ನ ಮುಂದೆ ಆನು ಬಗ್ಗುತ್ತೆ ಹೇಳಿ ಅರ್ಥ.
ನಮೋ ನಮಃ
ನಮೋ ನಮಃ = ನಮಃ + ನಮಃ (ವಿಸರ್ಗದ ಮುಂದೆ ‘ನ’ ಅಕ್ಷರ ಬಂದ ಕಾರಣ ‘ಮಃ’ ಇಪ್ಪದು ‘ಮೋ’ ಆತು).
ಒಂದೇ ಶಬ್ದದ ದ್ವಿರುಕ್ತಿ (ಎರಡು ಸರ್ತಿ ಹೇಳಿರೆ) ಅರ್ಥಕ್ಕೆ ಪುಷ್ಟಿ ಕೊಡ್ತು.
ನಮೋನ್ನಮಃ ಹೇಳಿ ಹೇಳ್ಳಾಗ.
ಧನ್ಯೋಸ್ಮಿ
ಇಲ್ಲಿಯೂ ಎರಡು ಪದಂಗ ಇದ್ದು. ನೋಡುವ –
ಧನ್ಯೋಸ್ಮಿ = ಧನ್ಯಃ + ಅಸ್ಮಿ| (ವಿಸರ್ಗದ ಮುಂದೆ ಅಕಾರ ಇದ್ದು, ಹಾಂಗಾಗಿ ಓ ಹೇಳಿ ಆತು)
ನಿಂಗ ಮನೆಗೆ ಬಯಿಂದಿ. ಅಹಂ ಧನ್ಯೋಸ್ಮಿ (ಆನು ಧನ್ಯನಾದೆ.) ಹೇಳಿ ಹೇಳ್ಳಕ್ಕು.
ಧನ್ಯವಾದ ಇಲ್ಲಿ ಧನ್ಯ ವಾದ ಹೇಳಿ ಎರಡು ಶಬ್ದಂಗ ಇದ್ದು
ಕೃತಜ್ಞ
ಕೃತಜ್ಞ = ಕೃತ+ಜ್ಞ = ಮಾಡಿದ್ದದು (ಉಪಕಾರವ) ನೆಂಪಿಪ್ಪವ.
ನೀನು ತುಂಬ ಉಪಕಾರ ಮಾಡಿದೆ. ಆನು ನಿನಗೆ ಕೃತಜ್ಞನಾಗಿ ಇದ್ದೆ (ಆನು ಮರದ್ದಿಲ್ಲೆ) ಹೇಳಿ ಅರ್ಥ.
ಕೃತಜ್ಞತೆ = ಮಾಡಿದ್ದದು ಗೊಂತಿಪ್ಪದು/ನೆಂಪಿಪ್ಪದು
ಮಾಡಿದ ಉಪಕಾರ ನೆಂಪಿಲ್ಲೆ, ಅವಂಗೆ ಕೃತಜ್ಞತೆ ಹೇಳುದೇ ಇಲ್ಲೆ. ಹೇಳಿ ಹೇಳ್ತಿಲ್ಲೆಯ.
ಋಣಿ
ಋಣ ಹೇಳಿರೆ ಸಾಲ
ಋಣೀ = ಋಣ ಇಪ್ಪವ ಅರ್ಥಾತ್ ಸಾಲ ತೆಕ್ಕೊಂಡವ.
ಕನ್ನಡಲ್ಲಿ ‘ಋಣಿ’ ಹೇಳಿ ಬಳಕೆ.
ಕ್ಷಮಿಸಿ / ಕ್ಷಮ್ಯತಾಮ್
ಕ್ಷಮಾ ಹೇಳುವದು ಒಂದು ಗುಣ.
ಕ್ಷಮೆ ಹೇಳಿರೆ ತಾಳಿಗೊಂಬದು/ತಡಕ್ಕೊಂಬದು.
ಎನ್ನ ಕ್ಷಮಿಸಿ ಹೇಳಿರೆ ಎನ್ನ ತಪ್ಪಿನ ಸಹಿಸಿಯೊಳ್ಳಿ, ಎನ್ನಂದ ನಿಂಗೊಗೆ ಕಷ್ಟ ಆತು, ತಡಕ್ಕೊಳ್ಳಿ ಹೇಳಿ ಅರ್ಥ.
ಭೂದೇವಿಯ ಹತ್ರೆ ನಾವು ಕೇಳ್ಯೊಳ್ತು – ಪಾದಸ್ಪರ್ಶಂ ಕ್ಷಮಸ್ವ ಮೇ = ಎನ್ನ ಪಾದಸ್ಪರ್ಶವ ತಡಕ್ಕೊ/ ಸಹಿಸಿಕೊ. ಹೇಳಿ.
ಕೇಳಿದ್ದೀರಾ? ` ಶಕ್ತಾನಾಂ ಭೂಷಣಂ ಕ್ಷಮಾ‘ ಹೇಳಿ ಒಂದು ಮಾತು ಇದ್ದು. ಇದರ ಅರ್ಥ “ಶಕ್ತಿವಂತರ ಭೂಷಣ (ಶೋಭೆ) ಕ್ಷಮೆ” ಹೇಳಿ.
ಶಕ್ತಿವಂತ ಆದರೆ ಅವಂಗೆ ತಡಕ್ಕೊಂಬ ಸಾಮರ್ಥ್ಯ ಹೆಚ್ಚು ಹೆಚ್ಚು ಬೇಕು!
- ಸೌಂದರ್ಯಮಾಧುರ್ಯಶೋಭೇ!(ಅನುರಾಗ-ಗೀತಮ್) - November 13, 2014
- Hello world! - October 22, 2014
- ಅನುರಾಗ ರಾಗ - June 13, 2014
ಖುಶಿ ಆತು ಮಹೇಶಣ್ಣಾ 🙂
ಧನ್ಯವಾದ 🙂
ನಮಸ್ತೇ ಮಹೇಶಣ್ಣ, ತು೦ಬಾ ಒಳ್ಳೆ ವಿಚಾರ೦ಗೊ.ಸಕಾಲಿಕ ಮಾಹಿತಿಗೊ.ಅಹ೦ ಧನ್ಯೋಸ್ಮಿ.
ತು೦ಬಾ ಚೆ೦ದದ ಶಬ್ದಾರ್ಥ ವಿವರಣೆ.
ಭೂದೇವಿಯ ಹತ್ರೆ ನಾವು ಕೇಳ್ಯೊಳ್ತು – ಪಾದಸ್ಪರ್ಶಂ ಕ್ಷಮಸ್ವ ಮೇ = ಎನ್ನ ಪಾದಸ್ಪರ್ಶವ ತಡಕ್ಕೊ/ ಸಹಿಸಿಕೊ. ಹೇಳಿ.
ಇದು ಭಾರತೀಯ ಜೀವನ ಮೌಲ್ಯ.
ಅಲ್ಲದೋ ಮಹೇಶಾ?
[ನಮಃ ಹೇಳಿರೆ ಬಗ್ಗುವದು. , (ವಿಸರ್ಗದ ಮುಂದೆ ‘ನ’ ಅಕ್ಷರ ಬಂದ ಕಾರಣ ‘ಮಃ’ ಇಪ್ಪದು ‘ಮೋ’ ಆತು). ನಮೋನ್ನಮಃ ಹೇಳಿ ಹೇಳ್ಳಾಗ. ಕೃತ+ಜ್ಞ = ಮಾಡಿದ್ದದು (ಉಪಕಾರವ) ನೆಂಪಿಪ್ಪವ. ] – ಕೊಶಿ ಆತು. ಹಾಂಗಾಗಿ ಇತ್ಲಾಗಿಂದ ಹೇಳುವದು – ‘ಧನ್ಯೋಸ್ಮಿ’