Oppanna.com

ಸುಭಾಷಿತ

ಬರದೋರು :   ಡಾಮಹೇಶಣ್ಣ    on   22/06/2012    19 ಒಪ್ಪಂಗೊ

ಸುಭಾಷಿತಮ್

ಸಂಸ್ಕೃತಂ ವಿಸ್ಮೃತಂ ವಾ?
(ಸಂಸ್ಕೃತ ಮರತ್ತು ಹೋತೊ?)

ನ ವಿಸ್ಮೃತಂ ಖಲು?
(ಮರದ್ದಿಲ್ಲೆನ್ನೆ?!)

~~

ಅದ್ಯ ವಯಂ ಸುಭಾಷಿತಸ್ಯ ವಿಷಯೇ ಕಿಂಚಿತ್ ಜಾನೀಮ ।
ಇಂದು ನಾವು ಸುಭಾಷಿತದ ಬಗ್ಗೆ  ರಜ್ಜ ತಿಳ್ಕೊಂಬ.

ಸುಭಾಷಿತಮ್ ಇತ್ಯುಕ್ತೇ ಕಿಮ್?
ಸುಭಾಷಿತ ಹೇಳಿರೆ ಎಂತರ?

ಸುಭಾಷಿತಮ್  ಇತ್ಯುಕ್ತೇ  “ಒಳ್ಳೆ ಮಾತು” ಇತಿ ಅರ್ಥಃ ।
ಸುಭಾಷಿತ ಹೇಳಿರೆ “ಒಳ್ಳೆ ಮಾತು” ಹೇಳಿ ಅರ್ಥ .

ಸು+ಭಾಷಿತಮ್ = ಲಾಯ್ಕಕೆ/ಚೆಂದಕೆ ಹೇಳಲ್ಪಟ್ಟದು.
ಉತ್ತಮ ವಿಚಾರವ ಚೆಂದದ ಮಾತಿಲ್ಲಿ  ಹೇಳಿರೆ ಅದೊಂದು ಚೆಂದ. ಅದು ಹಾಸ್ಯಮಯವಾಗಿಯೂ ಇದ್ದರೆ ಮತ್ತುದೆ ಚೆಂದ.

ತಾದೃಶ-ಸುಭಾಷಿತಸ್ಯ ವಿಷಯೇ ಅಪಿ ಕಾನಿಚನ ಸುಭಾಷಿತಾನಿ ಸಂತಿ।
ಅಂತಹ ಸುಭಾಷಿತದ ಬಗ್ಗೆಯೂ ಕೆಲವು ಸುಭಾಷಿತಂಗ ಇದ್ದು,

ಸುಭಾಷಿತದ ಸವಿ ಎಷ್ಟಿದ್ದು ಹೇಳಿರೆ ಹೀಂಗಿದ್ದಡ — ಅದರ ರುಚಿಯ ಮುಂದೆ ಯಾವ ರುಚಿಯೂ ಸರಿಸಮ ಅಲ್ಲಡ.
ಸುಭಾಷಿತಸ್ಯ ಮಾಧುರ್ಯಂ ಕಿಯತ್ ಅಸ್ತಿ ಇತ್ಯುಕ್ತೇ  —

~ ~ ~

ದ್ರಾಕ್ಷಾ ಮ್ಲಾನಮುಖೀ ಜಾತಾ
ಶರ್ಕರಾ ಚಾಶ್ಮತಾಂ ಗತಾ ।

ಸುಭಾಷಿತರಸಸ್ಯಾಗ್ರೇ
ಸುಧಾ ಭೀತಾ ದಿವಂಗತಾ ॥

ಮ್ಲಾನಮುಖೀ = ಬಾಡಿದ ಮುಖದೋಳು
ಚ+ಅಶ್ಮತಾಂ = ಚಾಶ್ಮತಾಂ
(ಅಶ್ಮ=ಕಲ್ಲು )
ಸುಭಾಷಿತರಸಸ್ಯ+ಅಗ್ರೇ =
ಸುಭಾಷಿತರಸಸ್ಯಾಗ್ರೇ
ಸುಭಾಷಿತರಸಸ್ಯ = ಸುಭಾಷಿತದ ರುಚಿಯ
ಅಗ್ರೇ = ಎದುರು

ಭೀತಾ = ಹೆದರಿದ

ಸುಧಾ = ಅಮೃತ

ದಿವಂಗತಾ = ಸ್ವರ್ಗವಾಸಿ ಆತು.


ದ್ರಾಕ್ಷೆಯ ಮೋರೆ ಬಾಡಿ ಹೋತು. ಸಕ್ಕರೆ ಕಲ್ಲಾಗಿ ಹೋತು. ಸುಭಾಷಿತದ ಸವಿಯ ಎದುರು (ನಿಲ್ಲಲೆಡಿಯದ್ದೆ) ಹೆದರಿದ ಸುಧೆ  (ಅಮೃತ)  ಸ್ವರ್ಗಕ್ಕೆ ಹೋತು (ದಿವಂಗತೆ  ಆತು).

ಎಂತಕೆ ಅಮೃತ ಸ್ವರ್ಗಲ್ಲಿ ಮಾಂತ್ರ ಸಿಕ್ಕುವದು ಹೇಳಿ ಗೊಂತಾತಾ?  🙂

ಕಿಮರ್ಥಮ್  ಅಮೃತಂ  ಕೇವಲಂ  ಸ್ವರ್ಗೇ ಏವ ಲಭ್ಯತೇ ಇತಿ ಜ್ಞಾತಂ ವಾ?

~ ~ ~ ~

ಸುಭಾಷಿತಸ್ಯ ಮೌಲ್ಯಂ ಅಲ್ಪಂ ನ! ಸುಭಾಷಿತಂ ಇತ್ಯುಕ್ತೇ ರತ್ನಮ್ !!

ಪೃಥಿವ್ಯಾಂ ತ್ರೀಣಿ ರತ್ನಾನಿ
ಜಲಮನ್ನಂ ಸುಭಾಷಿತಮ್ ।
ಮೂಢೈಃ ಪಾಷಾಣಖಂಡೇಷು
ರತ್ನಸಂಜ್ಞಾ ವಿಧೀಯತೇ ॥

ಪೃಥಿವ್ಯಾಂ = ಭೂಮಿಲ್ಲಿ
ತ್ರೀಣಿ  ರತ್ನಾನಿ = ಮೂರು ರತ್ನಂಗ (ಇದ್ದು)
ಜಲಮ್+ಅನ್ನಂ = ಜಲಮನ್ನಂ
ಪಾಷಾಣಖಂಡೇಷು = ಕಲ್ಲಿನ ತುಂಡುಗಳಲ್ಲಿ

ಅರ್ಥಃ ಅವಗತಃ ವಾ?

~ ~ ~

ಭಾಷಾಸು ಮುಖ್ಯಾ ಮಧುರಾ
ರಮ್ಯಾ ಗೀರ್ವಾಣಭಾರತೀ ।
ತಸ್ಮಾದ್ಧಿ ಕಾವ್ಯಂ ಮಧುರಂ
ತಸ್ಮಾದಪಿ ಸುಭಾಷಿತಮ್ ।।

ಭಾಷಾಸು = ಭಾಷೆಗಳಲ್ಲಿ
ಗೀರ್ವಾಣಭಾರತೀ = ದೇವಭಾಷೆ ಸಂಸ್ಕೃತ
ಮುಖ್ಯಾ = ಪ್ರಮುಖವಾದ್ದು
ರಮ್ಯಾ = ಖುಷಿ ಕೊಡುವಂಥಾದ್ದು
ಮಧುರಾ = ರುಚಿರುಚಿಯಾಗಿಪ್ಪದು
ತಸ್ಮಾತ್ ಹಿ = ಅದರಿಂದಲೂ
ಕಾವ್ಯಂ ಮಧುರಂ = ಕಾವ್ಯ ಮಧುರ
ತಸ್ಮಾತ್ ಅಪಿ = ಅದರಿಂದಲುದೆ
ಸುಭಾಷಿತಮ್ = ಸುಭಾಷಿತ (ಮಧುರ)

~ ~ ~ ~

ಅಧೋಲಿಖಿತಂ ಸುಭಾಷಿತಂ ವಿದ್ಯಾಯಾಃ ಮಹತ್ತ್ವಂ ವದತಿ — (ಕೆಳ ಬರದ ಸುಭಾಷಿತ ವಿದ್ಯೆಯ ಮಹತ್ತ್ವವ ಹೇಳ್ತು.)

ನಾಸ್ತಿ ವಿದ್ಯಾಸಮೋ ಬಂಧುಃ
ನಾಸ್ತಿ ವಿದ್ಯಾಸಮಃ ಸುಹೃತ್ ।
ನಾಸ್ತಿ ವಿದ್ಯಾಸಮಂ ವಿತ್ತಂ
ನಾಸ್ತಿ ವಿದ್ಯಾಸಮಂ ಸುಖಮ್ ॥

ವಿದ್ಯಾಸಮಃ ಬಂಧುಃ ನಾಸ್ತಿ = ವಿದ್ಯೆಗೆ ಸಮವಾದ ಬಂಧು ಇಲ್ಲೆ
ವಿದ್ಯಾಸಮಃ ಸುಹೃತ್ ನಾಸ್ತಿ = ವಿದ್ಯೆಗೆ ಸಮನಾದ ಗೆಳೆಯ ಇಲ್ಲೆ
ನಾಸ್ತಿ ವಿದ್ಯಾಸಮಂ ವಿತ್ತಂ = ವಿದ್ಯೆಗೆ ಸರಿಸಮವಾದ ಪೈಸೆ/ಸಂಪತ್ತು ಇಲ್ಲೆ
ನಾಸ್ತಿ ವಿದ್ಯಾಸಮಂ ಸುಖಮ್ = ವಿದ್ಯೆಗೆ ಸಮವಾದ ಸುಖ ಇಲ್ಲೆ.

ಏತತ್ ಸತ್ಯಂ ವಾ?

~ ~ ~ ~

ಆರಿಂಗೆ ಆರು ಭೂಷಣ?

ತಾರಾಣಾಂ  ಭೂಷಣಂ ಚಂದ್ರಃ
ನಾರೀಣಾಂ  ಭೂಷಣಂ ಪತಿಃ ।
ಪೃಥಿವ್ಯಾಃ  ಭೂಷಣಂ  ರಾಜಾ
ವಿದ್ಯಾ  ಸರ್ವಸ್ಯ ಭೂಷಣಮ್ ॥

ಶಬ್ದಾರ್ಥ –

ಭೂಷಣಂ = ಅಲಂಕಾರ
ತಾರಾಣಾಂ = ತಾರೆಗಳ
ನಾರೀಣಾಂ = ಹೆಮ್ಮಕ್ಕಳ
ಪೃಥಿವ್ಯಾಃ = ಭೂಮಿಯ
ಸರ್ವಸ್ಯ = ಪ್ರತಿಯೊಬ್ಬನ/ಎಲ್ಲೋರ

ಅರ್ಥಃ  ಜ್ಞಾತಃ ಕಿಲ?
ಸರ್ವಸ್ಯ  ಭೂಷಣಂ  ಕಿಮ್?

– – – –

ಡಾಮಹೇಶಣ್ಣ
Latest posts by ಡಾಮಹೇಶಣ್ಣ (see all)

19 thoughts on “ಸುಭಾಷಿತ

  1. ಮಹೇಶಣ್ಣ, ನಿಂಗೋ ಸುಭಾಷಿತದ ಶಬ್ದಶಃ ಅರ್ಥ ಬರದ್ದಿ. ತುಂಬಾ ಲಾಯಕ್ಕಾಯ್ದು. ಆನು ಆದಕ್ಕೇ ರಜಾ ವಿವರಣೆ ಕೊಟ್ಟು ಈ ಸುಭಾಷಿತಂಗಳ ಬರೆಯೆಕ್ಕಾ?

  2. ಧನ್ಯವಾದಗಳು!
    ಮುಂದಿನ ಶ್ಲೋಕದ ಅರ್ಥ ಎಂತದು ಹೇಳಿದರೆ ತುಂಬಾ ಉಪಕಾರ ಆವುತಿತುಃ
    “ಅಜ್ನಾನ ತಿಮಿರಾಂಧಸ್ಯ್ಯಜ್ನಾನೇಂದ್ರಿಯ ಶಲಾಕಯ, ತತ್ಪದಂ ದರ್ಶಿತಂ ಏವ ತಸ್ ಮೆಇ ಶ್ರೀ ಗುರವೇ ನಮಃ

  3. ಭೋಃ ಶ್ರೀಮನ್ ಅಹಂ ಯದ್ಯಪಿ ಸಂಸ್ಕೃತಜ್ಷಃ ಅಸ್ಮಿ ತಥಾಪಿ ಹವ್ಯಕಃ/ವೈದಿಕಃ ವಾ ನಾಸ್ಮಿ| ಕಿಂತು ಭವತಾಂ ಗೀರ್ವಾಣವಾಣ್ಯಾಃ ಸಂಭಾಷಣಂ ದೃಷ್ಟ್ವಾ ಮೋದಃ ಜಾಯತೇ ಮೇ,| ಸಂಸ್ಕೃತೇ ಏವ ಪ್ರತಿಕ್ರಿಯಾಂ ಯಚ್ಛತಃ ಭವತಃ ಮನೋಭೂಮಿಕಾಂ ದೃಷ್ಟ್ವಾ ಪ್ರಮೋದಃ ಜಾಯತೇ ಮೇ, ಕೃಪಯಾ ಅನುವರ್ತತಾಮ್ |

    1. ಭೈರಪ್ಪ ಮಹೋದಯ!

      ಸ್ವಾಗತಮ್! ಭವತಃ ಸಂತೋಷಂ ದೃಷ್ಟ್ವಾ ಮಮ ಅಪಿ ಆನಂದಃ ಅಭವತ್ ।
      ಭವತಃ ಪರಿಚಯಂ ವದತಿ ವಾ?

  4. Subhashithangalottinge matthe da! maheshana sanskrita patha(paatha)da shubharamba aaddu nodi santhosha aathu. Mundina vaara gurupoornima eppa karana guruvina bagge Subhashithangala sarani (artha sahitha)suru aavuthholi!

    1. ಜಯರಾಮಣ್ಣ!

      ಸ್ವಾಗತಮ್! ಭವತಃ ಆಗಮನಂ ಆನಂದದಾಯಕಮ್ ಅಸ್ತಿ ।

      ಭವತಃ ಸೂಚನಾ ಅತ್ಯುತ್ತಮಾ ಅಸ್ತಿ ।

      ನಿಶ್ಚಯೇನ ಗುರುಸ್ಮರಣಂ ಕರಣೀಯಮ್ । ಗುರುಮಹತ್ತ್ವಂ ಜ್ಞಾತವ್ಯಮ್ ।
      (ಖಂಡಿತವಾಗಿ ಗುರುಸ್ಮರಣೆ ಮಾಡೆಕು। ಗುರುವಿನ ಮಹತ್ತ್ವವ ತಿಳಿಯೆಕು)

  5. ಮಹೇಶ ಮಹೋದಯಂ ತಥಾ ಸಂಸ್ಕೃತಂ ಪುನರಪಿ ಅತ್ರ ದೃಷ್ಟ್ವಾ ಸಂತೋಷಂ ಭವತಿ|ಸುಸ್ವಾಗತಂ|
    ತತ್ರಾಪಿ ಸುಭಾಷಿತಾಣಿ ದೃಷ್ಟ್ವಾ ಅತೀವ ಸಂತೋಷಂ ಭವತಿ|

    ನಾಸ್ತಿ ವಿದ್ಯಾಸಮೋ ಬಂಧುಃ
    ನಾಸ್ತಿ ವಿದ್ಯಾಸಮಃ ಸುಹೃತ್ ।
    ನಾಸ್ತಿ ವಿದ್ಯಾಸಮಂ ವಿತ್ತಂ
    ನಾಸ್ತಿ ವಿದ್ಯಾಸಮಂ ಸುಖಮ್ ॥

    ಏತತ್ ಸತ್ಯಂ ವಾ?
    ಸತ್ಯಮೇವ| ನಾತ್ರ ಸಂಶಯ:

  6. { ಸಂಸ್ಕೃತಂ ವಿಸ್ಮೃತಂ ವಾ?} ಸದ್ಯ ಮಹೇಶಣ್ಣನನ್ನೂ ಮರವಲೆ ಶುರು ಆಗಿತ್ತು !
    ಸುಭಾಷಿತದ ಹಿರಿಮೆಯ ಹೊಗಳುಲೆ ಎಷ್ಟು ಚೆ೦ದದ ಸುಭಾಷಿತ೦ಗೊ !
    ಸವಿಯಾದ ಸುಧೆ ಹೀ೦ಗೇ ಸದಾ ಹರಿಯಲಿ ಬೈಲಿನುದ್ದಗಲಕ್ಕೂ..

  7. ಸುಭಾಷಿತಂಗಳ ಬಗ್ಗೆ ‘ಒಳ್ಳೆಮಾತು’ಗೊ ಲಾಯಿಕಿದ್ದು.

  8. ಲಾಯ್ಕ ಆಯಿದು.

  9. ಎನಗೆ ಅರ್ಥ ಆತು… ಆದರೆ ಚೆನ್ನೈ ಭಾವ ಬೈದ್ದೆಂತಕೆ ಹೇದು ಗೊಂತಾತಿಲ್ಲೆ.

    1. ‘ಬೋದಾಳ’ನ ಬೆನ್ನಾರೆ ಆಚ ಶುದ್ದಿಲಿ ಅದ್ವೈತ ಕೀಟ ಹಾಜರಪ್ಪ ಗುಟ್ಟು ಎನಗೆ ಅರ್ಥ ಆಗದ್ದು ಭಾವ.

  10. ಸರಳ ಸುಭಾಷಿತಂಗೊ, ಮುತ್ತಿನ ಹಾಂಗಿಪ್ಪ ಮಾತುಗಳ ಬೈಲಿಂಗೆ ಒದಗುಸಿಕೊಟ್ಟ ಮಹೇಶಣ್ಣಂಗೆ ಧನ್ಯವಾದಂಗೊ. ಕೆಲವು ದಿನ ಕಳುದು ಮತ್ತೆ ಬೈಲಿಂಗೆ ಬತ್ತಾ ಇಪ್ಪದಕ್ಕೆ ಮಹೇಶಂಗೆ ಸ್ವಾಗತವೂ ಕೂಡಾ. ಸುಭಾಷಿತದ ಸರಣಿ ಮುಂದುವರಿಯಲಿ. ಶ್ರುತಿ ಸೇರಿದ ಸುಭಾಷಿತಂಗೊ, ಸ್ವರದ ರೂಪಲ್ಲಿಯುದೆ ಬೈಲಿಲ್ಲಿ ಕೇಳಿ ಬರಲಿ.

  11. ಭೋಃ ಶ್ರೀಮನ್ । ಬಹುದಿನಾನಂತರಂ ಇದಾನೀಂ ಭವತಃ ಆಗಮನಂ ! ಮಹಾನ್ ಸಂತೋಷಃ ಅಸ್ತಿ । ಭವತೇ ಪುನರಪಿ ಸ್ವಾಗತಂ । ಸರ್ವೇ ಕುಶಲಂ ಖಲು ?

    ಸುಭಾಷಿತಾನಿ ಬಹುಸಮ್ಯಕ್ ಅಸ್ತಿ । ಭವತಃ ಯಥೇಷ್ಟಂ ಸುಭಾಷಿತಾನಿ, ಶ್ಲೋಕಾನ್ ಅತ್ರ ವಯಂ ಪ್ರತೀಕ್ಷ್ಯಾಮಹೇ ।

    1. ಸುಸ್ವಾಗತಮ್!!
      ಆಮ್! ವಯಂ ಸರ್ವೇ ಕುಶಲಿನಃ ।
      ——
      ಲಘುಪರಿಷ್ಕಾರಃ —
      {ಸರ್ವೇ ಕುಶಲಂ ಖಲು ?}
      ಸರ್ವಂ ಕುಶಲಂ ಖಲು? (ಎಲ್ಲ ಚೆನ್ನಾಗಿದ್ದಲ್ಲದ?)//
      ಸರ್ವೇ ಕುಶಲಿನಃ ಖಲು? (ಎಲ್ಲೋರು ಚೆನ್ನಾಗಿದ್ದವಲ್ಲದ?)

      {ಸುಭಾಷಿತಾನಿ ಬಹುಸಮ್ಯಕ್ ಅಸ್ತಿ }
      ಅತ್ರ ಪರಿಷ್ಕಾರಃ ಆವಶ್ಯಕಃ । ಕರ್ತುಂ ಶಕ್ನೋತಿ ವಾ?

      {ಪ್ರತೀಕ್ಷ್ಯಾಮಹೇ } ಪ್ರತೀಕ್ಷಾಮಹೇ

      1. ಹಾ°..
        ಪ್ರಥಮತಃ ಸರ್ವಂ ಇತಿ ಏವ ಲಿಖಿತವಾನ್ | ಅನಂತರಂ ಸರ್ವೇ (ಪ್ರ.ವಿ.ಬ.ವ) ಪ್ರಯೋಗಃ ಏವ ಉತ್ತಮಂ ಇತಿ ಚಿಂತಿತವಾನ್ ., ಪರಂತು, ಸರ್ವೇ ಇತಿ ಪ್ರಯೋಗಃ ಭವತಿ ಚೇತ್ ಕುಶಲಿನಃ ಇತಿ ಪ್ರಯೋಗಿತವ್ಯಂ ಇತಿ ಇದಾನೀಂ ಅವಗಚ್ಛಂ ।

        ಸುಭಾಷಿತಾನಿ ಬಹುಸಮ್ಯಕ್ ಸಂತಿ ಇತಿ ಸಮೀಚೀನಂ ಇತಿ ಮನ್ಯೇ ।

        ಪ್ರತೀಕ್ಷಾಮಹೇ ಏವ ಉದ್ಧೇಶಿತಂ ಪರಂತು ತತ್ರ ಲೇಖನಸಮಯೇ ಕ್ಷ್ಯಾ ಇತಿ ಅಕ್ಷರದೋಷಃ ಅಭವತ್ ।

        ಅಸ್ತು, ಇದಾನೀಮ್ ಸಮ್ಯಕ್ ಅಭವತ್ ವಾ ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×