- ಉಪ್ಪಿನಕಾಯಿ ಮೆಡಿ - April 13, 2013
- ಒಪ್ಪುವ ಉಡುಗೆ. . . - March 4, 2013
- ಆನಡ್ಕ ಜಲಪಾತ – ಧಾರೆ 2 - February 18, 2013
ಡಾರ್ವಿನ್‍ನ (ವಿಕಾಸ!)ವಾದ ಕೇಳುವಾಗೆಲ್ಲ ಕೆಲವೊಕ್ಕೆ ಮೈ ಉರಿತ್ತು.
ಎನ್ನ ಅಪ್ಪನ, ಅಪ್ಪನ…..ಅಪ್ಪ ಮಂಗ ಆಗಿತ್ತವೊ? ಹೇಳುವವರ ಮಂಡೆ ಶುದ್ಧ ಇಲ್ಲೆ! ಮತ್ತೆ ಕೆಲವೊಕ್ಕೆ ನಮ್ಮ ಹಿಂದಾಣೋರು ಮಂಗಂಗಳೋ, ಕರಡಿಗಳೋ ಎಂತಾಗಿದ್ದರೆಂತ?
ಕೆಲವು ಸರ್ತಿ ನಾವೇ ಮಂಗಂಗಳ ಹಾಂಗೋ, ಕರಡಿಗಳ ಹಾಂಗೋ ವರ್ತಿಸುವಾಗ ನಮ್ಮ ಮೂಲ ಪೂರ್ವಜರು ಅರಾದರೆಂತ?
ಅವಂದ ನಮಗೆಂತ ಸಮಸ್ಯೆಗೊ ಹುಟ್ಟಿ ಬಯಿಂದಿಲ್ಲೆನ್ನೆ ಎಂಬ ಸಮಾಧಾನ. ಹೇಂಗಿದ್ದರೂ ಈ ಎರಡೂ ಗುಂಪಿನೋರಿಂಗೆ ನಮ್ಮ ಮಾಣಿ ಮಂಗಂದ ಮನುಷ್ಯ ಅಪ್ಪ ಯಾವ ಘಟ್ಟಲ್ಲಿ ಅಂಗಿ ಚಡ್ಡಿ ಹಾಕುಲೆ ಸುರು ಮಾಡಿದ ಎಂಬುದೇ ಯೋಚನೆ, ಸಮಸ್ಯೆ.
ಈ ಸಮಸ್ಯೆಂದಲೂ ಮೊದಲು ಹೇಂಗೆ ಹೇಂಗೋ ಮಾನ ಮುಚ್ಚಿಕೊಳ್ಳುತ್ತಿದ್ದವೊ? ಅಲ್ಲ ಮಾನ ಅಪಮಾನದ ಕಲ್ಪನೆಆದರೂ ಇತ್ತೊ? ಗೊಂತಿಲ್ಲೆ.
ಎಂತಗೆ ಹೇಳಿದರೆ ಇಂದಿಂಗೂ ಕೆಲವು ದಟ್ಟಿಯ ಜನಂಗಳಲ್ಲಿ ಇಪ್ಪದೆ ಮರ್ಯಾದೆ ಹೇಳಿ ಇಪ್ಪಾಗ ಅಂಗಿ ಚಡ್ಡಿಗೆ ಎಲ್ಲಿಯ ಸ್ಥಾನ? ಹಾಂಗದ ಕಾರಣ ಮಾನ ಮರ್ಯಾದೆ ದೃಷ್ಟಿಂದಲ್ಲದ್ದರುದೇ ಷೋಕಿಂಗೆ ಹೇಳಿ ಮೈಯ ಅಲ್ಲಿ ಇಲ್ಲಿ ಮುಚ್ಚಿಕೊಂಬ ಬಿಚ್ಚಿಕೊಂಬ ಅಭ್ಯಾಸ ಅಗಿರಕ್ಕು.
ಅದಕ್ಕೇ ನಾರು, ಚರ್ಮ, ಎಲೆ ಎಲ್ಲಾ ಸುತ್ತಿಕೊಳ್ಳುತ್ತಿದ್ದವೋ ಏನೋ! ಷೋಕಿಂಗೇಳಿಯೇ ಆಗಿದ್ದರೆ ಆಯಾ ಜಂಬ್ರಕ್ಕೆ ಸರಿಯಾಗಿ ಇವುಗಳೆಲ್ಲಾ ಸುತ್ತಿಕೊಂಡಿಪ್ಪಲೂ ಸಾಕು.
ಆಯಾ ಜಾಗೆಗೆ ಹೊಂದುವ ಹಾಂಗೆ ಇದ್ದಿಪ್ಪಲೂ ಸಾಕು.
ಷೋಕಿಂಗೇಳಿಯೇ ಆಗಿದ್ದರೆ ಮೈ ಬಣ್ಣ ಚೆಂದ ಮಡಿಕ್ಕೊಂಬಲೂ ಆದಿಕ್ಕು. ಬರೇ ಚಳಿ, ಮಳೆ, ಗಾಳಿ, ಬೆಶಿಲಿಂದ ಬಚಾವಪ್ಪಲೆ ಹೇಳಿ ಹೇಳುದು ಬರೇ ಪಡ್ಪೋಷಿ ಯೋಚನೆ ಆವುತ್ತಲ್ಲದೋ?!
ಉಡುಗೆ ತೊಡುಗೆ ಬಗ್ಗೆ ಎನೋ ತಿಳ್ಕೊಳ್ಳಕ್ಕು, ಹೇಳಕ್ಕು ಹೇಳಿ ಇಪ್ಪೋನಿಂಗೆ ಈ ಉಪಕತೆಗೊ ಎಂತಗೇಳಿ ಕಂಡರೂ ಹೇಳದ್ದೆ ನಿರ್ವಾಹ ಇಲ್ಲೆ.
ಎಂತಗೆ ಹೇಳಿದರೆ ಈಗ ಕಾಂಬ ಉಡುಪುಗೊ, ಹಿಂದೆ ಇದ್ದವು ಎಲ್ಲಾ ಗ್ರೇಂಶುವಾಗ ತಲೆ ಗಿರ್ರಾವುತ್ತು. ನೆನಪಾವುತ್ತು – ಬಾಲಮಿತ್ರ, ಚಂದಮಾಮಲ್ಲಿ ರಾಜ ರಾಣಿಯರ ಪೋಷಾಕು.
ಕೆಲವಕ್ಕೆ ಮೋರೆ ಬಿಟ್ಟರೆ ಬಾಕಿ ಎಲ್ಲಾ ಮುಚ್ಚುವ ಜಿಗಿ ಜಿಗಿ ದಿರಸುಗೊ. ಮತ್ತೆ ಕೆಲವಕ್ಕೆ ಉಂಗುರಿಂದ ನೆತ್ತಿವರೆಗೆ ಪೂರ್ತಿ ಮುಚ್ಚುವ ದಿರಸು. ಇಷ್ಟೆಲಾ ವಸ್ತ್ರ ಸುತ್ತಿಕೊಂಡು ಕಚ್ಚುವ ನಾಯಿ ಬಂದರೆ ಹೇಂಗೆ ಓಡುಗೊ?
ಇದಕ್ಕೆ ವಿರುದ್ದ ಆಗಿ ಬರೇ ಕನಿಷ್ಟ ವಸ್ತ್ರಲ್ಲಿ ಮೈ ಮುಚ್ಚಿಕೊಂಬ ಹೆಮ್ಮಕ್ಕೊ ಗೆಂಡುಮಕ್ಕಳ ಚಿತ್ರಂಗಳೂ ಧಾರಾಳ.
ಇಂದ್ರಾಣ ದಿನಂಗಳೂ ರಾಜ ರಾಣಿಯರ ದಿನಂಗೊಕ್ಕೆ ಬೇರೆ ಆಗಿ ಇಲ್ಲೆ. ಒಂದೆಡೆ ಟಾಕಿಗಟ್ಟಲೆ ವಸ್ತ್ರ ಸುತ್ತಿಕೊಂಡಿದ್ದರೆ ಮತ್ತೊಂದು ದಿಕ್ಕೆ ಸಣ್ಣ ಕರ್ಚೀಪಿನಷ್ಟು ವಸ್ತ್ರವೇ ಜಾಸ್ತಿ.
ಇದರಲ್ಲೂ ಬೆರಕ್ಕೆ. ಅಂಗಿ ವಸ್ತ್ರ ಅಂಗಿ ಚಡ್ಡಿ ಅಥವಾ ಪ್ಯಾಂಟು, ಸೀರೆ ರವಕ್ಕೆ, ಲಂಗ ರವಕ್ಕೆ ಇವೆಲ್ಲಾ ಏನು ಹೇಂಗೆ ಹೇಳುವ ವಸ್ತ್ರದ ವಿನ್ಯಾಸ ವಿಕಾಸ.
ಅಥವಾ ಬರ್ಗರ್, ಸ್ಯಾಂಡ್ವಿಚ್, ಪಿಜ್ಜಾಂಗೊ ಇಡ್ಲಿ, ದೋಸೆ, ಕೊಟ್ಟಿಗೆಯ ಯಪ್ಪೀ ಮಾಣಿ ಕೂಸುಗಳ ತಟ್ಟೆಂದ ಓಡಿಸಿದ ಹಾಂಗೆ ಲಂಗ ರವಕ್ಕೆ, ಅಂಗಿ ಚಡ್ಡಿಗಳ ಲೆಗ್ಗಿ, ಟೋಪ್, ಟೀ ಶರ್ಟ, ಬರ್ಮುಡಂಗೊ ಓಡ್ಸುಲೆ ಮಾಡುವ ಅರಪ್ಪೋ?
ವಸ್ತ್ರದ ವಿನ್ಯಾಸವೋ ಉಡುಗೆಯ ವಿನ್ಯಾಸವೊ. ಹೇಂಗಿದ್ದರೂ ಎನ್ನ ಹಾಂಗಿಪ್ಪ ತೋಟಲ್ಲಿ ಅಡಕ್ಕೆ ಹೆರುಕ್ಕುವೋನಿಂಗೆ ಅರ್ಥ ಅಪ್ಪದು ಒಂದೇ.
ಇನ್ನು ವಿನ್ಯಾಸಲ್ಲಿ ಬರ್ಕತ್ತಾಯಕ್ಕಾರೆ ಎಲ್ಲಾ ಹೊಸ್ತು ಹೊಸ್ತೇ ಕಾಣಕ್ಕು ಹೇಳಿ ಇಲ್ಲೆ. ಹಾಂಗೆ ಅವುತ್ತೂ ಇಲ್ಲೆ . ಇಂದಿನ ತಲೆಮಾರಿನೋರ ಅಂಗಿ ವಸ್ತ್ರ ಮುಂದಾಣೋರಿಂಗೆ ಹಳೆಯ, ಪಡ್ಪೋಷಿದು ಹೇಳಿ ಕಂಡರೂ ನಂತ್ರಾಣೋರಿಂಗೆ ಅದೇ ಹೊಸತ್ತು, ಷೋಕಿಂದು. ಬಹುಷಃ ಇದೇ ಕಾರಣಕ್ಕಿರಕ್ಕು ಸೀರೆ ರವಕ್ಕೆ, ಅಂಗಿ ವಸ್ತ್ರ ಎಲ್ಲಾ ತಲೆಮಾರಿಂಗು ಹೊಸತ್ತಾಗಿಯೇ ಒಳ್ದು.
ಆದರೆ ಅವುಗಳ ಹಾಕಿಕೊಂಬ, ಸುತ್ತಿಕೊಂಬ ರೀತಿ ಮಾತ್ರ ಕಾಲ ಕಾಲಕ್ಕೆ ಬದ್ಲಾಯಿಕ್ಕೊಂಡು ಬತ್ತೋ ಏನೊ. ಮದುವೆ, ಜಂಬ್ರಂಗಳಲ್ಲಿ ಬಾರೀ ಶೋಕಿನ ಹರ್ಕು ಪರ್ಕು ಕಾಂಬ ಟು ಪೀಸ್ ತ್ರೀ ಪೀಸ್ ಉಡುಗೆಗಳ ಮದ್ಯೆಯೂ ಸೀರೆ, ವೇಸ್ಟಿಯೇ ಕಣ್ಣಿಂಗೆ ಕಾಂಬದು.
ಕೂಸು ಮಾಣಿಯಂಗಳ ಕಾಲೇಜು ಡೆ, ಸೆಂಡಾಫ್ಲಿ ಕುಶಾಲಿಂಗಾದರುದೆ ಕಣ್ಣಿಂಗೆ ಹೊಳವದು ಸೀರೆ ವೇಸ್ಟಿಯೇ ಹೇಳಿದರೆ ನಂಬದ್ದೆ ನೆಗೆಮಾಡುಗು!
ಸುತ್ತುವ ವಸ್ತ್ರಲ್ಲಿ ಎಂತೆಲ್ಲ ಪ್ರಯೋಗ ಬದಲಾವಣೆಗೊ ಆವುತ್ತರು ಒಪ್ಪುವಂತದ್ದಾಯಕ್ಕನ್ನೆ.
ಒಪ್ಪುವಂತಾದ್ದು ಹೇಳುವಾಗ ಬಪ್ಪ ಸಮಸ್ಯೆ ದೇಹಕ್ಕೆ ಒಪ್ಪುವಂತಾದ್ದೊ,
ಮನಸ್ಸಿಂಗೊಪ್ಪುವಂತದ್ದೊ?
ಹೆಂಡತಿ ಮೆಚ್ಚುವಂತಾದ್ದೊ,
ಅಬ್ಬೆಗೆ ಕುಶಿ ಅಪ್ಪದೊ? ಆ ಜಂಬ್ರಕ್ಕೆ ಸಾಕೋ, ಈ ಹೋಟ್ಲಿಲಿ ಬಿಡುಗೊ?
ಇದರ ಹಾಕ್ಕಿಕೊಂಡು ಹೋದರೆ ಜನಂಗೊ ಎಂತ ಹೇಳುಗು? – ಒಟ್ಟು ಗೊಂದಲವೆ.
ರಾಜಾರಾಮ ಮೋಹನ ರಾಯನ ಕೋಟಿನ ಕತೆ ನೆನಪ್ಪಾವುತ್ತು. ಕೆಲವು ಸರ್ತಿ. ನಮ್ಮ ಕತೆಯೂ ಹಾಂಗೇ ಆವುತ್ತಾಯಿಕ್ಕು.
ಕಂಪಣೆ ಅಂಗಿಯನ್ನೋ ಬನಿಯನ್ನೋ ಹಾಕಿಕೊಂಡು, ಬಣ್ಣದ ಕಂಬಾಯಿ ಸುತ್ತಿಕೊಂಡು ಮನೆಯ ಹಿತ್ಲೇ ಆದರು ಕೈಲಿ ಕತ್ತಿಯೋ ಕೊಟ್ಟೋ ಹಿಡ್ಕೊಂಡು ತಿರ್ಗಾಡ್ತಿದ್ದರೆ ದಾರಿಹೋಪೋರು ಕೇಳುಗು “ದಾನೆ, ನಣಲಾ ತಾರೆದ ಕಟ್ಟ ಕಟ್ಟುನ ಮುಗಿತ್ತಿದ್ಯಾ? ಮುಗಿ ಕೂಡ್ಲೆ ಎನ್ನಾಡೆಗ್ ಬಲ್ಲ.” ಹೇಳಿ.
ಎಲ್ಲಿಯಾರು ದಾರಿ ತಪ್ಪಿ ಆಚಾರಿಗಳೋ ಮೇಸ್ತ್ರಿಗಳೋ ಕೆಲಸಮಾಡುವಲ್ಲಿಂಗೆ ಕಡು ಬಣ್ಣದ ಟೀ ಶರ್ಟು ಹಾಕಿಕೊಂಡು, ತಲೆ ಬಿಕ್ಕಿಕೊಂಡು ಹೋದರೆ ಅವೂ ಕೇಳುಗು ದಾನಯ, ಮರತ್ತ ಬೇಲೆಗ್ ಬತ್ತ್ನಾನ ಸಿಮೆಂಟ್ ದೇಕೊ?
ಅಪರೂಪಕ್ಕೆ ಕಚ್ಚೆ ಹಾಕ್ಕೊಂಡು ಶಾಲು ಹೊದಕ್ಕೊಂಡು ಹೆರ ಬಂದರೆ ಎಂತಾ, ಇಂದೆಲ್ಲಿ ಊಟ? ಹೇಳುವ ಕುತೂಹಲದ ಪ್ರಶ್ನೆ ಹತ್ತರಾಣ ಮನೆಯೋರಿಂದ.
ಎಂತದೋ ಪರಮೋಶಿಲಿ ಕಪ್ಪು ಅಂಗಿ ಬಣ್ಣದ ಕಂಬಾಯಿ ಸುತ್ತಿಕೊಂಡಿದ್ದರೆ, ಮನಸ್ಸಿಲಿ ಇವನ ಪೈಕಿ ಆರು ಸತ್ತವು? ಹೇಳಿ ಕೇಳಕ್ಕೇಳಿ ಕಂಡರೂ ಶಬರಿಮಲೆಗೆ ಯಾವಾಗ? ಹೇಳಿ ನಾಜೂಕಿಲಿ ಕೇಳುಗು.
ಇನ್ನು ಕೈಕಾಲಿಲ್ಲದ್ದೋರ ಅಂಗಿ ವಸ್ತ್ರದ ವಿವರಣೆ ಎಇ್ಟು ಜನರ ಪಟ್ಟಾಂಗಕ್ಕೆ ಅನುಕೂಲ ಆವುತ್ತೊ. ಖಾಕೀ ಹಾಕಿದೋರು ಪೋಲೀಸುಗೊ, ಕಾವಿ ಸುತ್ತಿಗೊಂಡೋರು ಸನ್ಯ್ಯಾಸಿಗೊ, ಖಾದಿಯೋರು ರಾಜಕಾರಣಿಗೊ ಹೇಳೆಲ್ಲ ಇಪ್ಪಾಗ ವೈವಿದ್ಯ ಉಡುಪಿಂದ ಕುಶಿ ನೆಮ್ಮದಿಯ ಬದಲು ಮಂಡೆ ಬೆಶಿ ಅಪ್ಪ ಸಂದರ್ಭ ಬೇಡಹೇಳಿದರೂ ಬಂದು ಬಿಡುಗೋ ಹೇಳಿ.
ಮತ್ತೆ ಅವರಿವರ ವಸ್ತ್ರದ ಬಗ್ಗೆ ಟೀಕೆ ಟಿಪ್ಪಣಿ ಮಾಡುದೂ ಗಲಾಟೆ ದೊಂಬಿಗೆ ದಾರಿ ಅಕ್ಕೋ ಹೇಳಿ. ಇಷ್ಟೆಲ್ಲಾ ಅಪ್ಪಗ ಮನಸ್ಸಿಲಿ ಹುಟ್ಟಿಕೊಂಬ ಪ್ರಶ್ನೆಗೊ ಒಪ್ಪುವ ಉಡುಗೆ ಹೇಳಿದರೆ ಯಾವುದು?
ದೇಹಕ್ಕೋ, ಮನಸ್ಸಿಂಗೋ, ಹೆಂಡತಿಗೋ, ಸ್ನೇಹಿತಂಗೋ, ಸಮಾಜಕ್ಕೋ, ಸಮುದಾಯಕ್ಕೊ? ಆರಿಂಗೆ ಒಪ್ಪುವಂತಾದ್ದು? ಅದರ ಬದಲು ಹಿತ ಆದ ಹೇಳಿದರೂ ಇವೇ ಪ್ರಶ್ನೆಗೊ ಬಕ್ಕನ್ನೆ.
ಎಂತದೂ ಬೇಡ, ವಸ್ತ್ರ ಗಿಸ್ತ್ರ ಎಂತದೂ ಬೇಡ ಹೇಳಿದರೆ?
ಆರಿಂಗಾದರೂ ಪರಿಹಾರ, ಉತ್ತರ ತಲೆಗೆ ಹೊಳದರೆ ಹೇಳಿನೋಣ.
~*~
adakkE hEludu vikaasa athava evolution aadikku 🙂
ಕೆಲವು ಸರ್ತಿ ಕೆಲವು ಜೆನಂಗೊ ಉಪಾಯ ಇಲ್ಲದ್ದೆ ಕೆಲವು ವೇಷವ ಹಾಕುತ್ತವು. ಆದರೆ ಅದುವೇ ಮುಂದೆ ಒಂದು ಹೊಸ ಸ್ಟೈಲು ಆಗಿ ಬೆಳದ ಉದಾಹರಣೆಗೊ ಇದ್ದು ಅಲ್ಲದಾ? ಉದಾಹರಣೆಗೆ ಕುರಿ ಕಾಯುವ ಮಕ್ಕೊ ಸುಮ್ಮನೆ ಬಕ್ಕಿನ ಗೋಣಿ ಹೊದಕ್ಕೊಂಡು ಹೋವ್ತಾ ಇತ್ತಿತ್ತವಡ. ಅದನ್ನೇ ಮುಂದೆ ಜೀನ್ಸು ಹೇಳುಲೆ ಶುರು ಮಾಡಿದವಡ.
ಇದು ಸತ್ಯ ಅಪ್ಪೋ ಉಮ್ಮಪ್ಪ ನವಗರಡಿಯ 😉 ಗೊಂತಿಪ್ಪವು ಹೇಳೆಕ್ಕಷ್ಟೆ… 🙂
[ದೇಹಕ್ಕೆ ಒಪ್ಪುವಂತಾದ್ದೊ, ಮನಸ್ಸಿಂಗೊಪ್ಪುವಂತದ್ದೊ? ಹೆಂಡತಿ ಮೆಚ್ಚುವಂತಾದ್ದೊ,….] – ಪಷ್ಟಾಯ್ದು ಈ ಚಿಂತನ-ಮಂಥನ.
[ಒಪ್ಪುವ ಉಡುಗೆ ಹೇಳಿದರೆ ಯಾವುದು? ]- ಸಮಾಜದ ಕಣ್ಣಿಂಗೆ ಉರಿಯಾಗದ್ದಾಂಗೆ, ಸಂದರ್ಭಕ್ಕೆ ಸೂಕ್ತವಾಗಿಪ್ಪಂತಾದ್ದು ಹೇದು ಹೇಳಿರೆ ಸಮ ಅಕ್ಕೋ ?
ಅದೂ ಆಗ ಇದೂ ಆಗ ಹೇಳಿರೆ, – ‘ಲೋಕೋ ಭಿನ್ನರುಚಿಃ’ ಹೇದು ಸಮಾಧಾನ ನವಗೆ ನಾವೇ ಹೇಳಿಗೊಂಬದೇ ಸೂಕ್ತ ಅಲ್ಲದೊ.
lOkO bhinna ruchi hEli hechhu maMde beshi maadadde ippadu, olle upaaya 🙂