ಬರದೋರು :   ಕೇಜಿಮಾವ°    on   05/10/2010    25 ಒಪ್ಪಂಗೊ

ನಮ್ಮ ಜಾತಿಯ ಊಟದ ಹಾಂಗೆ ಯಾವದೂ ಆವುತ್ತಿಲ್ಲೆನ್ನೆ ದಾಕ್ಟ್ರೆ ಹೇಳಿ ಸುರು ಮಾಡಿದ° ಪ್ರಕಾಶ° ನಿನ್ನೆ.
ಎಂತಕೆ ಹೇಳಿರೆ,ಅವಂಗೆ ಸುಮ್ಮನೆ ಕೂಪಲೆ ಅರಡಿಯ. ಏನಾರೂ ಮಾಡಿಯೊಂಡಿರೆಕು.
ನಮ್ಮಲ್ಲಿ ಒಂದು ಮಧುಮೇಹದ ಶಿಬಿರ ಮಾಡುವೊ° ಆಗದೊ ಮಾವ ಹೇಳಿ ಕೇಳ್ಲೆ ಬಂದವ°.
ನಮ್ಮ ಜಾತಿಯ ಆಹಾರ ಒಳ್ಳೆದು ಹೇಳಿ ಎಲ್ಲಾ ಜಾತಿಯವೂ ಹೇಳಿಗೊಂಬದು ಇಪ್ಪದೇ.
ಆದರೆ ಹವಿಕರ ಆಹಾರ ಕ್ರಮ ಅಲ್ಲದ್ದೆ ಉಂಬ ಕ್ರಮ ಆನು ನೋಡಿದ್ದದರಲ್ಲಿ ಒಳ್ಳೆದು ಹೇಳುತ್ತದು ಬರೀ ಜಾತಿ ಅಭಿಮಾನಲ್ಲಿ ಅಲ್ಲ. ವೈಜ್ಞಾನಿಕವಾಗಿ ವಿಮರ್ಶೆ ಮಾಡಿದರೂ ನವಗೆ ಗೊಂತಪ್ಪ ವಿಶಯವೇ.
ಈಗಾಣ ಕಾಲದ ನಮ್ಮ ಆಹಾರ ಕ್ರಮ ನಮ್ಮ ಬಾಕಿ ಬದಲಾವಣೆಗಳ ಹಾಂಗೇ ಆಯಿದು. ಎನ್ನ ಪ್ರಾಯದವಕ್ಕೆ ಗೊಂತಿಕ್ಕು, ಒಂದು ಮೂವತ್ತೈದು ನಲ್ವತ್ತು ವರ್ಶದ ಹಿಂದೆ ನಮ್ಮ ಆಹಾರ ಕ್ರಮ ಹೇಂಗಿತ್ತು ಹೇಳಿ.
ನಮ್ಮದು ಅಕ್ಕಿ,ತರಕಾರಿ,ಹಾಲು ಮಜ್ಜಿಗೆ,ತಕ್ಕ ಮಟ್ಟಿಂಗೆ ಹಣ್ಣುಗೊ ಅಲ್ಲದ್ದೆ ರಜ ರಜ ಧಾನ್ಯ ಇಪ್ಪ ಊಟ ತಿಂಡಿ ಅಲ್ಲದೊ?
ಒಂದು ಜೆಂಬ್ರಕ್ಕೆ ಎಂತ ಎಲ್ಲ ಮಾಡುತ್ತವು ಹೇಳಿ ಯೋಚನೆ ಮಾಡಿ.
ಮೂರೋ ನಾಲ್ಕೋ ತಾಳು,ಒಟ್ಟಿಂಗೆ ಅವಿಲು.
ಕೊಡಿ ಬಾಳಗೆ ಬಳುಸಲೆ ಹಸರಿನ ಬೇಳೆ ಕೋಸಂಬ್ರಿ,ಮಸರಿದ್ದರೆ ಚೆಕ್ಕರ್ಪೆ ಕೊಚ್ಚು ಸಳ್ಳಿ/ಬಟಾಟೆ ಗೊಜ್ಜಿ.
ಸಾರಿಂಗೆ ಹಪ್ಪಳ ಬೇಕನ್ನೆ, ಕೊದಿಲು, ಮೇಲಾರ, ಪಾಯಸ, ಮಜ್ಜಿಗೆ ನೀರು(ಮಜ್ಜಿಗೆ ನೀರು ಇಂದುದೇ ಎಂತಕೆ ಬಳುಸುತ್ತದು ಹೇಳಿ ಎನಗರಡಿಯ)
ಮದುವೆಗಳಲ್ಲಿ ಕೂಡಾ ಭಕ್ಶ್ಯ ಎಲ್ಲ ದಿಕ್ಕಿಲ್ಲಿಯೂ ಮಾಡುವ ಕ್ರಮ ಇತ್ತಿಲ್ಲೆನ್ನೆ. ಎಲ್ಲಿಯೋ ತೊಂಬಾ ಪೈಸ ಇಪ್ಪವು ಮಾಡಿಯೊಂಡಿತ್ತವಶ್ಟೆ.
ಅರುವತ್ತರ ದಶಕಲ್ಲಿ ಜೆಂಬ್ರಂಗಳಲ್ಲಿ ಭಕ್ಶ್ಯ ಮಾಡಿರೆ ಅದೊಂದು ಶುದ್ದಿ ಆಗಿಯೊಂಡಿತ್ತು. ಮನಗೆ ಬಂದಿಕ್ಕಿ ಅಪ್ಪನೋ ಅಪ್ಪಚ್ಚಿಯೊ ಹೇಳುಗು ಅದೂ ಒಂದು ದೊಡ್ಡ ಸಂಗತಿಯ ಹಾಂಗೆ,ಅಲ್ಲಿ ಇಂದು ಹೋಳಿಗೆ ಮಾಡಿತ್ತಿದ್ದವು ಹೇಳಿ.
ಆ ಊಟದ ವಿಮರ್ಶೆ ಮಾಡಿರೆ ಗೊಂತಕ್ಕು ನಮ್ಮ ಜಾತಿಯ ಊಟ ಎಂತಕೆ ಒಳ್ಳೆದು ಹೇಳಿ.
ಶರೀರಕ್ಕೆ ಶಕ್ತಿಗೆ ಸಕ್ಕರೆಯ ಅಂಶ,ಸಸಾರಜನಕ,ಕೊಬ್ಬು ಮತ್ತೆ ವಿಟಮಿನ್ ಬೇಕು ಹೇಳಿ ನವಗೆಲ್ಲ ಗೊಂತಿಪ್ಪದೇ.ಹಾಂಗೇ ಹೆಚ್ಚು ಎಣ್ಣೆ,ಸಕ್ಕರೆ ನಮ್ಮ ಶರೀರಕ್ಕೆ ಬೇಡ ಹೇಳ್ತದೂ ಗೊಂತಿಪ್ಪದೇ.
ಅಂಬಗ ನಾಲ್ಕು ಬಗೆ ತಾಳು,ಸಾರು,ಮೆಣಸುಕಾಯಿ ಇದೆಲ್ಲ ಸುಮ್ಮನೆ ಮಾಡುದೊ ಹೇಳಿ ಅಲ್ಲ.
ಅಶ್ಟು ಜೆನ ಬಪ್ಪಗ ಎಲ್ಲೊರೂ ಹೊಟ್ಟೆ ತುಂಬ ಉಣ್ಣೆಕ್ಕಲ್ಲದೊ, ಒಬ್ಬಂಗೆ ಸಾರು ಬೇಡ, ಒಬ್ಬಂಗೆ ಕೊದಿಲು ಆಗ ಹೇಳಿ ಆದರೆ ಅವ° ಉಂಬಲಿಲ್ಯೊ?
ಅದಕ್ಕೆ ಬೇಕಾಗಿ,ಅಲ್ಲದ್ದೆ ಒಂದು ತರಕಾರಿಲಿ ಇಲ್ಲದ್ದ ಸತ್ವ ಇನ್ನೊಂದರಲ್ಲಿಕ್ಕು,ಒಟ್ಟಿಲ್ಲಿ ಎಲ್ಲೊರೂ ಹೊಟ್ಟೇ ತುಂಬಾ ಉಣ್ಣೇಕ್ಕು ಅಲ್ಲದ್ದೆ ಶರೀರಕ್ಕೆ ಬೇಕಾದ ಎಲ್ಲ ಸತ್ವಂಗಳೂ ಸಿಕ್ಕೆಕ್ಕು ಹೇಳ್ತ ಉದ್ದೇಶ.
ಉಂಬಗ ತಡವಾದರೆ ಸಾರಿಲ್ಲಿ ಉಂಡರೆ ಹೊಟ್ಟೆ ಸಮಸ್ಯೆ ಇಪ್ಪವಕ್ಕೆ ತೊಂದರೆ ಹೇಳಿ ಗೊಂತಿಪ್ಪದೇ. ಅದಕ್ಕೆ ಬೇಕಾಗಿ ತಾಳಿಲ್ಲಿ ಊಟ ಸುರು.
ಸುರೂ ಬಳುಸುವಗಳೇ ತುಂಬ ಬಳ್ಸಿರೆ ಬಿಟ್ಟಿಕ್ಕಿ ಏಳ್ತವಲ್ಲದೊ,ಅದಕ್ಕೇ ವಿಚಾರಣೆ,ಪ್ರತಿಯೊಂದು ಬಗೆಯನ್ನೂ ಎರಡ್ಣೆ ಸರ್ತಿ ವಿಚಾರಣೆ ನಮ್ಮ ಜಾತಿಲಿ ಮಾಂತ್ರ ಕಾಂಬ ಕ್ರಮ ಅಲ್ಲದೊ?
ಅದರ ಹಿಂದಂದಲೇ ಅಶನ ವಿಚಾರಣೆ,ಕೊದಿಲು,ಮೇಲಾರ.ಇಶ್ಟಾದ ಮೇಲೆ ಪರಮಾನ್ನ.ಬಾಯಿ ರಜಾ ಹುಳಿ ಖಾರ ಅಪ್ಪಗ ಒಟ್ಟಿಂಗೆ ಸೀವಾಕ್ಕಲ್ಲದೊ!
ಪುನಃ ಮೆಲಾರ ವಿಚಾರಣೆ ಮಾಡಿ ಮಜ್ಜಿಗೆ ಅಶನಲ್ಲಿ ಮುಕ್ತಾಯ.
ಈ ಆಹಾರಲ್ಲಿ ಮನುಶ್ಯಂಗೆ ಬೇಡ ಹೇಳುತ್ತ ಯಾವದೇ ಬಗೆ ಇಲ್ಲೆ. ದಿನ ನಿತ್ಯದ ಅಡಿಗೆಯೇ ಆಗಲಿ,ಉದ್ದು,ಹಸರು ಇತ್ಯಾದಿ ಧಾನ್ಯಲ್ಲಿ ಪ್ರೋಟೀನ್ ,ಒಗ್ಗರಣೆಲಿ ಅಥವಾ ತುಪ್ಪಲ್ಲಿ ಕೊಬ್ಬು,ಆಶನಲ್ಲಿ ಶರ್ಕರ ಪಿಷ್ಟ ಎಲ್ಲವೂ ಇದ್ದು.
ಹೊರುದ ತಿಂಡಿ ದಿನಾಗಲೂ ಇಲ್ಲವೇ ಇಲ್ಲೆ.ಅಲ್ಲದೋ?
ಇಂದು ಮಾಂತ್ರ ನಾವು ಬೇರೆಯವರ ಅನುಕರಣೆ ಮಾಡಿ ಎರಡು ಮೂರು ಬಗೆ ಪಾಯಸ,ಪಲಾವ್(ಸರೀ ಮಾಡಲೆ ಅರಡಿಯದ್ದ ಅಡಿಗೆಯವಾದರೂ!) ಪೋಡಿ, ಮಿಕ್ಸ್ಚರ್, ಎರಡು ಬಗೆ ಭಕ್ಶ್ಯ, ಉದಿಯಪ್ಪಗಾಣ ತಿಂಡಿಗುದೇ ಕೇಸರಿ ಭಾತು ಇತ್ಯಾದಿ ಮಾಡಲೆ ಸುರು ಮಾಡಿದ್ದು.
ಆದರೆ ಇಂದು ನವಗೆ ಇದೆಲ್ಲಾ ಮಾಡಲೆ ಅನುಕೂಲ ಇದ್ದು,ತಿಂಬ ಯೋಗ್ಯತೆ ಇಪ್ಪವು ಮಾಂತ್ರಾ ಭಾರೀ ಕಮ್ಮಿ.
ನಮ್ಮ ಅಪ್ಪ ಅಜ್ಜನ ಕಾಲಲ್ಲಿ ಉದಿಯಪ್ಪಗ ಎದ್ದರೆ ಮಧ್ಯಾಹ್ನ ,ಉಂಡಿಕ್ಕಿ ರಜಾ ಕಣ್ಣು ಅಡ್ಡ ಹಾಕಿಕ್ಕಿ ಪುನಃ ಕಸ್ತಲೆ ವರೇಗೆ ದುಡ್ಕೊಂಡಿಪ್ಪಗ ಇಶ್ಟು ತಿಂದು ಆರೋಗ್ಯ ಮಡಿಕ್ಕೊಂಡಿತ್ತಿದ್ದವು.
ನವಗೆ ಇಂದು ಕೆಲಸ ಮಾಡಲೆ ಮೈ ಬಗ್ಗುತ್ತಿಲ್ಲೆ,ಅರ್ಧ ಮೈಲು ಬೈಲಿಲ್ಲಿ ನೆಡವದರ ಬದಲು ಸ್ಕೂಟರಿಲ್ಲಿ ಬೈಕಿಲ್ಲಿ ಹೋಪದು,ಪೇಟೆಲಿಪ್ಪವಾದರೆ ಆಫೀಸಿಲ್ಲಿ ಕೂದೇ ಕೆಲಸ,
ಹೀಂಗಿಪ್ಪಗ ಅನುಕೂಲ ಇದ್ದು ಹೇಳಿ ಸಿಕ್ಕಿದ್ದು ತಿಂದರೆ ಕಸ್ತಲಪ್ಪಗ “ಡಾಕ್ತ್ರು ಮಾವ°,ರಜ ವಾಯು,ಹೊಟ್ಟೆ ಬೇನೆ” ಹೇಳೆಕ್ಕಾದ ಪರಿಸ್ತಿತಿ.ಮತ್ತೆ ಜೆಂಬ್ರಲ್ಲಿ ಹೋಗಿ ಜೀಗುಜ್ಜೆ ಕೊಂಕಣಿಗಳ ಹಾಂಗೆ ಪೋಡಿ ಮಾಡಿದ್ದರ ತಿಂದರೆ ಎಂತಕ್ಕು?
ಎನ್ನ ಅಜ್ಜ ಹೇಳುಗು”ನಿಂಗೊಗೆ ತಿಂಬಲೂ ಎಡಿಯ ದುಡಿವಲೂ ಎಡಿಯ“ಹೇಳಿ.
ಅದರೊಟ್ಟಿಂಗೆ ಇಂದು ಮದಲಾಣ ಹಾಂಗೆ ಮದ್ದು ಹಾಕದ್ದೆ ಬೆಳೆಶಿದ್ದು ಏನೂ ಸಿಕ್ಕದ್ದದು ಸಮಸ್ಯೆಯ ಇನ್ನೂ ಗಂಭೀರ ಮಾಡುತ್ತಾ ಇದ್ದು ಹೇಳುದೂ ಅಶ್ಟೇ ಸತ್ಯ.
ಹಾಂಗಿಪ್ಪಗ ನಾವಿಂದು ನಮ್ಮ ಅಡಿಗೆಯ ಬಗ್ಗೆ ಯೊಚನೆ ಮಾಡೆದದೊ?
ನಮ್ಮೋರು ಮದುವೆಗಳಲ್ಲಿ ತಪ್ಪ ಸಾಮಾನಿನ ಗುಣಮಟ್ಟ ಸರಿಯಾಗಿ ಗಮನಿಸುದು ಕಾಣ್ತಿಲ್ಲೆ ಅಲ್ಲದ್ದೆ ಮಜ್ಜಿಗೆ ನೀರಿನ ಬಿಟ್ಟು ಮಸರು ಬಳಸಲೆ ಸುರು ಮಾಡಿದ್ದವಿಲ್ಲೆ ಇತ್ಯಾದಿ ಇನ್ನೊಂದು ಸರ್ತಿ.
(ಕೇಜಿಮಾವ°)
Dr.K.G.Bhat,M.B;B.S
Palace Road,
VITTAL.-574243,Karnataka
pH;9448850635,9902695250
kgbhatvittal.blogspot.com
ಕೇಜಿಮಾವ°
Latest posts by ಕೇಜಿಮಾವ° (see all)

25 thoughts on “ಪಾಚ

  1. ಏ! ಸತ್ಯ ಹೇಳ್ತೆ. “ಪಾಚ” ಕ್ಕೆ ಬಂದ ಒಪ್ಪಂಗಳ ನೋಡುವಾಗಳೇ ಗೊಂತಾವುತ್ತಿಲ್ಲೆಯೋ ನಮ್ಮೋರು ಎಷ್ಟು ಊಟ ಪ್ರಿಯರು ಹೇಳಿ!. ಆನಂತೂ ಹೇಳಿಕೆ ಬಂದದರ ಒಂದೂ ಬಿಡಲೆ ಇಲ್ಲೆ. ಎಂತ ಕೆಲಸ ಇದ್ದರೂ ನಂತ್ರ.

  2. ಡಾಕ್ಟ್ರು ಎ೦ತ ಹೇಳ್ತವು ಗೊ೦ತಿಲ್ಲೆ ಆದರೆ ಹರೀಶೋ ಈ ಪ್ರಾಯಲ್ಲೇ ತಿನ್ನೆಕಾದ್ದು ನೀನೆಲ್ಲ ಈಗಳೇ ತಿ೦ಬಲೆ ಹೆದರೀರೆ ಎನ್ನ ಹಾ೦ಗಿಪ್ಪವರ ಗೆತಿ ಎ೦ತಪ್ಪ.ತಿ೦ಬ ಪ್ರಾಯಲ್ಲಿ ತಿ೦ಬಲೇ ಬೇಕು ಅದರ ಜೀರ್ಣಿಸುತ್ತ ಹಾ೦ಗಿಪ್ಪ ಕೆಲಸ ಮಾಡೆಕು ಅದೇ ಹಿ೦ದಾಣವರ ಆರೋಗ್ಯದ ಗುಟ್ಟು. ಒ೦ದು ಸಾದ್ಯ ಇದ್ದಷ್ಟು ಒ೦ದೇ ಸಮಯಕ್ಕೆ ತಿನ್ನೆಕು.ಮತ್ತೆ ಜೆ೦ಬಾರದ ಊಟಲ್ಲಿಯೂ ಕೋರ್ಟಿ೦ಗೆ (ಈಗ ಕಮ್ಮಿ ಆಯಿದು) ಹೋಪದರಲ್ಲಿಯೂ ಹವೀಕರ ಬಿಟ್ಟೇ ಬಾಕಿಪ್ಪವು.ಜೇ೦ಬಾರಕ್ಕೆ ಹೋಗಿಪ್ಪಾಗ ಬಫೆಲಿ ಆದರೂ ಹ೦ತೀಲಿ ಆದರೂ ಎಲ್ಲಾ ಬಗೆ ತಿ೦ದು ನೋಡ್ಲೇ ಬೇಕು.ನಮ್ಮ ಆಹಾರ ಪದ್ದತೀಲಿ ಒ೦ದರಲ್ಲಿ ಬತ್ತ ದೋಷವ ಮತ್ತೊ೦ದರಲ್ಲಿ ತೆಗವಲೆಡಿತ್ತು ಹಾ೦ಗಾಗಿ ಊಟ ಸರೀ ಮಾಡೆಕು.ಆನು ಈ ಪ್ರಾಯಲ್ಲಿಯೂ ಊಟಲ್ಲಿ ಯಾವದೇ ಬಗೆ ಬಿಡ್ಲಿಲ್ಲೆ.ಒಪ್ಪ೦ಗಳೊಟ್ಟಿ೦ಗೆ

    1. ಆನು ಮದಲೇ ಹೇಳಿದ್ದೆ ನವಗೆ ಈಗ ತಿಂಬಲೂ ಅರಡಿಯ,ಜೀರ್ಣ ಮಾದಲೂ ಅರಡಿಯ ಹೇಳಿ.ಜೀರ್ಣ ಮಾಡಲೆ ಎಡಿಗಾರೆ ತಿನ್ನದ್ದೆ ಇಪ್ಪ ಅಗತ್ಯ ಇಲ್ಲೆನ್ನೆ.
      ಎನ್ನ ಅಜ್ಜ ಹೇಳುಗು ಜವ್ವನಿಗರ ಬೊಂಡ ಕುಡುದು ಕಾಯಿಯ ಅವಲಕ್ಕಿಯೊಟ್ಟಿಂಗೆ ತಿಂದು ಜೀರ್ಣ ಮಾಡೆಕ್ಕು ಹೇದು.
      ನವಗೆ ಎಡಿಗೋ?

  3. ಕೆ.ಜಿ. ಮಾವನ ಲೇಖನ ಲಾಯ್ಕಾಯಿದು. ಹವೀಕರ ಊಟ ಕ್ರಮಪ್ರಕಾರವಾದ ಊಟ ಹೇಳಿ ಎನಗೆ ಕಾಣುತ್ತು. ಬ್ರಾಹ್ಮಣರಲ್ಲೇ ಬೇರೆ ಪಂಗಡದವು ಮಾಡ್ಸುತ್ತ ಐಟಮ್ ಲೆಕ್ಕ ಹಾಕಿದರೆ, ನೋಡಿದರೆ ನಮ್ಮ ಆರೋಗ್ಯ ಹೇಂಗಪ್ಪ ಕಾಪಾಡುದು ಹೇಳ್ತಷ್ಟು ಆವುತ್ತು. ಹೆರಾಣವರ ಸಂಗತಿ ಬಿಡಿ. ಅವರದ್ದರಲ್ಲಿ ಕ್ರಮವೇ ಇಲ್ಲೆ. ಬಫ಼ೆ ಊಟದ ಬಗ್ಗೆ ಎನ್ನ ತಕರಾರು ಎಂತದೂ ಇಲ್ಲೆ. ಅದು ಕಾಲಕ್ಕೆ ತಕ್ಕ ಕೋಲ ಅಷ್ಟೇ. ಅರ್ಧ, ಮುಕ್ಕಾಲು ಗಂಟೆ ಹಂತಿಲಿ ಕೂದೊಂಡು ಊಟ ಮಾಡುವಷ್ಟು ವ್ಯವಧಾನ ಈಗಾಣ ಆರತ್ರೂ ಇಲ್ಲೆ. ಎನಗೂ. ಕಾರ್ಯಕ್ರಮಕ್ಕೆ ಪಟ ತೆಗವಲೆ ಹೋದರೆ ಹೇಂಗಾರೂ ಊಟ ಸಿಕ್ಕುವಾಗ ಗಂಟೆ 3 ಆವುತ್ತು. ಮತ್ತೆ ಬಫ಼ೆ ಊಟದ ಕಡೇಂಗೆ ಹೋಪದು. ಅಲ್ಲಿ ಏನಾದರೂ ರಜ್ಜ ಇದ್ದದರ ತಿಂಬದು, ವಾಪಸ್ ಬಪ್ಪದು. ಕೆಲಾವು ಸರ್ತಿ ಈ ಸ್ವೀಟ್ ಇತ್ಯಾದಿ ತಿಂಬಲೇ ಇಲ್ಲೆ. ಅಲ್ಲ, ಜೆಂಬ್ರದ ಸೀಸನ್‌ಲ್ಲಿ ಏವಾಗಲೂ ಸ್ವೀಟ್ ತಿಂದರೆ ಹೇಂಗಕ್ಕು? ಈಗ ಸಣ್ಣ ಪ್ರಾಯದವಕ್ಕೇ ಎಂತೆಲ್ಲ ಸೀಕುಗೊ ಬತ್ತಡ.

  4. ಒ೦ದಲ್ಲ ಮತ್ತು ಒ೦ದಷ್ಟು ಪುಟ೦ಗಳೇ ಬೇಕಾರು ಇದು ಬರವಲೇ ಬೇಕಾದ ವಿಷಯ ಹೇಳಿ ಎನ್ನ ಅಬಿಪ್ರಾಯ.ಒ೦ದು ರಜ ದಿನ ತೆಕ್ಕೊ೦ಡಾದರು ಒ೦ದು ಲೇಖನ ಬರೆಯಿ.ಬಯಲಿನೋರಿ೦ಗೆಲ್ಲ ಉಪಕಾರ ಆಗಲಿ.ಸಾಕಷ್ಟು ತಯಾರಿ ಯೊಟ್ಟಿ೦ಗೇ ಲೇಖನ ಬರಳಿ.ಪ್ರೀತಿಯೊಟ್ಟಿ೦ಗೆ ಒಪ್ಪ೦ಗಳೂ.

  5. ವಿಷಯ ಎಲ್ಲ ಸರಿಯಾದ್ದೇ. ಇದೆಲ್ಲ ಬದಲಾವಣೆಗೊ ಕಾಲದ ಮಹಿಮೆ ಅಲ್ಲದೋ?
    ನಾವು ನಾರ್ತ್ ಇಂಡಿಯನ್ ಊಟಕ್ಕೆ ಹೊಂದಿಗೊಂಡ ಹಾಂಗೆ ನಾರ್ತ್ ಇಂಡಿಯನ್ಸ್ ನಮ್ಮ ಊಟಕ್ಕೆ ಹೊಂದಾಣಿಕೆ ಆಗದ್ದದು ಬೇಜಾರಿನ ವಿಷಯ.ಇರಲಿ ಬಿಡಿ. ನಮ್ಮ ಅನ್ಪತ್ಯದ ಹಿಂದಾಣ ದಿನ ಮೇಲಾರಕ್ಕೆ ಕೊರವ ಗೌಜಿಲಿ ಎಷ್ಟೋ ಸರ್ತಿ ತರಕಾರಿ ತೊಳವದೇ ಮರೆತ್ತವು. ಆದರೂ ಒಂದರಿ ಆದರೂ ಫುಡ್ ಪೋಯಿಸನ್ ಆದ್ದು ಆನು ಕೇಳಿದ್ದಿಲ್ಲೆ. ಇದೆಂತರಂದಾಗಿಯಪ್ಪ!! ಎಂತ ಇದ್ದರೂ ಕೆಜಿ ಮಾವನ ಊಟದ ಬೋಣಿ ಲಾಯಿಕಾಯಿದು. ಸುರುದು ಉಂಡಾಂಗಾತು.

  6. ಒ೦ದು ವಾರ ಊರಿಲ್ಲಿ ಇತ್ತಿದ್ದಿಲ್ಲೆ ಅಷ್ಟಪ್ಪಗ ಈ ಕೆ.ಜಿ.ಭಾವನ ಹವೀಕರ ಊಟ ಬ೦ತದ.ಅ೦ತು ಎ೦ಗಳ ಜವ್ವನದ ಊಟ ನೆ೦ಪು ಮಾಡ್ಸಿ ಕೊಟ್ಟದಕ್ಕೆ ಒ೦ದಷ್ಟ ಒಪ್ಪ೦ಗೊ.ಎನ್ನತ್ರೆ ಈ ಕೆ.ಜಿ.ಭಾವನ ಹಾ೦ಗೆ ಇಪ್ಪ ಒಬ್ಬ೦ ಡಾಕ್ಟ್ರ೦ ಈಗಾಣವು ಮದಲಾಣವರಿ೦ದ ಜಾಸ್ತಿ ಬದ್ಕುತ್ತವು ಹಾ೦ಗಾಗಿ ಇ೦ದ್ರಾಣ ಕ್ರಮವೇ ಸರಿ ಹೇಳಿದ೦.ಎನಗೆ ಕಾಣ್ತು ಅ೦ದ್ರಾಣವು ಆರೋಗ್ಯಲ್ಲಿ ಇದ್ದಷ್ಟೂ ದಿನ ಬದ್ಕಿಯೊ೦ಡಿತ್ತಿದ್ದವು.ಇ೦ದ್ರಾಣ ಹಾ೦ಗೆ ಕೂಬ್ಬಲೆಡಿತ್ತಿಲ್ಲೆ ಹೇಳಿ ಬೈಪ್ಪಣೆಲಿಯೊ ದಾರಿಲಿಯೋ ನೆಡಕ್ಕೊ೦ಡೊ ತಿನ್ನೆಕಾದ ಗೆತಿಗೆಟ್ಟು ಅವಕ್ಕೆ ಬ೦ದಿತ್ತಿದ್ದಿಲ್ಲೆ..ಅರುವತ್ತು ವರ್ಷಲ್ಲಿಯೂ ಐದು ಮಣ (ಅರುವತ್ತಯಿದು ಕಿಲೊ)ತಲೆಲಿ ಮಡಿಕ್ಕೊ೦ಡು ಆರಾಮಲ್ಲಿ ಹತ್ತು ಕಿಲೊ ಮಿಟರು ನೆಡಕ್ಕೊನ್ಡಿತ್ತಿದ್ದವರ ಎನಗೆ ಗೊ೦ತಿದ್ದು.ಹಾ೦ಗಾಗಿ ಕೆ.ಜಿ.ಭಾವ ಅ೦ದ್ರಣವರ ಆರೋಗ್ಯದ ಗುಟ್ಟೆ೦ತರ ಈಗ ಎ೦ತ ಮಾಡಿರೆ ತಕ್ಕ ಮಟ್ಟಿ೦ಗಾರು ಆರೋಗ್ಯಲ್ಲಿ ಬದ್ಕಲಕ್ಕು ಹೇಳಿ ಒ೦ದು ಚಿತ್ರ ಕೊಟ್ಟ್ರಕ್ಕು ಹೇಳಿ ಎನ್ನ ಅಭಿಪ್ರಾಯ.ಅ೦ತೂ ಈ ಲೆಖನದ ಬಗ್ಯೆ ಎರಡು ಮಾತಿಲ್ಲೆ ಭಾರಿ ಲಾಯಕಯಿದು.

    1. ಇದಕ್ಕೆ ಉತ್ತರ ಕೊಡೆಕ್ಕಾದರೆ ಅದರ ಬಗ್ಗೆಯೇ ಒಂದು ಪುಟ ಬರೆಯೆಕ್ಕಕ್ಕು,ಖ್ಹಂಡಿತಾ ಇನ್ನಾಣ ವಾರಲ್ಲಿ ಬರೆತ್ತೆ.ಎನಗೂ ನಿಂಗೊ ಹೇಳಿದ ವಿಷಯ ಪ್ರೀತಿದೇ.ಚರ್ಚಗೆ ಒಳ್ಳೆ ದಾರಿ.ಈ ವಿಷಯವ ಎರಡೂ ಕಡೆಂದ ಯೊಚನೆ ಮಾಡೆಕ್ಕಾವುತ್ತು.ತಯಾರಿಯೂ ಸಾಕಷ್ಟು ಮಾಡೆಕ್ಕು.

  7. ಅದಪ್ಪು ..ನಮ್ಮೊರ ಊಟದ ಕ್ರಮ ಒಂದು ಬಗೆ ಆದ ಮೇಲೆ ಇನ್ನೊಂದು ಅದರದ್ದೇ ಒಂದು ಸರಣಿಲಿ ..ಬಳ್ಸುದು ,ಉoಬದು ವಿಶೇಷವಾದ್ದೆ..
    ಇದು ಗೊಂತಿಲ್ಲದ್ದವು ಅರ್ದ ಬಗೆ ಅಪ್ಪಗಳೇ ಎದ್ದು ಹೋಪದು, ಯಾವುದು ಯಾವುದಕ್ಕೆ ಯಾವುದೊ ಬಗೆ ಸೇರ್ಸಿ ತಿoಬದು ನೋಡಿರೆ ರುಚಿ ಹೆಂಗಕ್ಕಪ್ಪ ..ಹೇಳಿ ಗ್ರೆಷಿ ನೆಗೆ ಬಪ್ಪದೆನಗೆ…

  8. ಕೆ ಜಿ ಮಾವ ಬರದ ನಮ್ಮ ಹವ್ಯಕ ವರ್ಗದವರ ಊಟದ ವಿಷಯ ಭಾರೀ ಲಾಯಕ ಆಯಿದು!! ಮನಸ್ಸರ್ತು ಅಭಿನಂದಿಸುತ್ತಾ ಇದ್ದೆ

    ಮಾವ; ಈಗಾಣ ನಮ್ಮವು ಹಳೆ ಸಂಪ್ರದಾಯವ ಒಳುಶುಲೆ ನೋಡ್ತವಿಲ್ಲೆನ್ನೇ ! ಒಬ್ಬಂದ ಒಬ್ಬ ಭಲ ಆಯೆಕ್ಕು ಹೇಳಿಗೊಂದು,ಎಲ್ಲಿಯಾದರೂ ಜೆಮ್ಬ್ರನ್ಗೊಕ್ಕೆ ಹೋಯಿಕ್ಕಿ ಬಂದು ಅಲ್ಲಿ ಮಾಡಿದ್ದರಂದ ಒಂದು ಪಟ್ಟು ಹೆಚ್ಹು ಮಾಡಿ ಹೆಸರು ಮಾಡಿಗೊಂಬ ಹೇಳುವ ದುಷ್ಟ ಮನಸ್ಸು ದೂರ ಅಪ್ಪಲ್ಲಿಯವರೆಗೆ ನವಗಿನ್ನು ಹಳೆ ಸಂಪ್ರದಾಯವ ಕಾಮ್ಬಲೆಡಿಗು ಹೇಳಿ ಕಾಣ್ತಿಲ್ಲೆ !! ಅಲ್ಲಾ ನಮ್ಮವರಲ್ಲೀಗ ಬೈಪ್ಪಣೆ ಊಟ ಸುರು ಮಾಡಿದ್ದು “ಊಟ ದಕ್ಷಿಣೆ” ಯಾ ದೂರ ಮಾಡ್ಲೆಯೋ ಎಂತದೋ ?!

    1. { ಬೈಪ್ಪಣೆ ಊಟ ಸುರು ಮಾಡಿದ್ದು “ಊಟ ದಕ್ಷಿಣೆ” ಯಾ ದೂರ ಮಾಡ್ಲೆಯೋ }
      ರಾಜಬಾವ, ಅದು ಗೊಂತಾದ ಮತ್ತೆ ಅಜ್ಜಕಾನಬಾವನ ಕೆಣಿಯೇ ಬೇರೆ!
      ಸುರೂವಾಣ ಹಂತಿಲಿ ಕೂದು ಪಾಯಿಸದ ಒರೆಂಗೆ ಉಂಬದು. ಮತ್ತೆ ಸೀತ ಬಂದು ಬೈಪ್ಪಣೆಲಿ ನಿಂದೊಂಡು ಪಾಯಿಸಂದ ಮಜ್ಜಿಗೆ ಒರೆಂಗೆ ಉಂಬದು!! 😉
      ಹೋಳಿಗೆ ಎಷ್ಟು ಹೊಡದರೂ ಚಿಂತೆ ಇಲ್ಲೆ ಇದಾ!

      ಶ್ಶ್! ಕೇಳೆಡಿ ಅವನತ್ರೆ..!!
      ಕೇಳಿರೂ ಆನು ಹೇಳಿದೆ ಹೇಳಿಕ್ಕೆಡಿ, ಹಾಂ!

      1. ಯೆ ನೆಗೆಬಾವ ಬೈಪ್ಪಣೆಲಿ ನವಗೆ ಆಗ, ಅಲ್ಲಿ ಎಲ್ಲರು ಬೇಡ ಹೇಳುವಾಗ ನಮ್ಮನ್ನೆ ನೋಡುಗು ಎಲ್ಲ..
        ಕೂದೋಂಡು ಉಂಬಗ ಆಚೆಂದ ಈಚೆಂದ ನಾಕು ಬಿದ್ದರೆ ತಿಂದು ಹೋಕು..
        ಪಂಜ ಚಿಕ್ಕಯ್ಯನಲ್ಲಿ ಜಂಬರ ಆದರೆ ಕಮ್ಮಿಲಿ ಹತ್ತು ಬೀಳುಗು ನಿನಿಗೆ..

        ಮತ್ತೆ ನೀನು ಬೈಪ್ಪಣೆಗೆ ಇನ್ನೊಂದು ಹೆಸರು ಮಡಗಿದ್ದೆ ಅಲ್ಲದೋ ಎಂತರ ಮರತ್ತು, ಹೇಳುತ್ತೆಯೋ..?

  9. ಕೇಜಿ ಮಾವನ ಪಾಚದ ಊಟ ರುಚಿ ಆಯಿದು.
    (ಅರುವತ್ತರ ದಶಕಲ್ಲಿ ಜೆಂಬ್ರಂಗಳಲ್ಲಿ ಭಕ್ಶ್ಯ ಮಾಡಿರೆ ಅದೊಂದು ಶುದ್ದಿ ಆಗಿಯೊಂಡಿತ್ತು) ಎನಗರಡಿಯದ್ದ ಒಂದು ವಿಷಯ ಗೊಂತಾತದ.ಮಾವ° ಹೇಳಿದ ಹಾಂಗೆ ನವಗೆ ಮದಲಾಣೋರ ಹಾಂಗೆ ದುಡುದೂ ಅರಡಿಯ ತಿಂದೂ ಅರಡಿಯ.ಮದಲು ಬೆನ್ನು ಬಗ್ಗಿಸಿ ದುಡಿವ ಹೆರಿಯೋರಿಂಗೆ ತಿಂದದು ಜೀರ್ಣ ಆಗಿಗೊಂಡಿತ್ತು.ಈಗ ಕಸಂಬಟ್ಟೆ ತಿ೦ಬಲೆ ಮಾತ್ರ ಗೊಂತು,ಮತ್ತೆ ಎಲ್ಲ ಸ್ಟಾಕು ಅಪ್ಪೊದದ. ಈಗ ಪಾಚ ವಿಚಾರಣೆ ಮಾಡೊಗ ಬಳುಸುಲೆ ಬಗ್ಗೆಕ್ಕಾವುತ್ತಿಲ್ಲೆ,ಉದ್ದಾಕೆ ಹಂತಿ ನೆಡುಕೆ ಸೌಟು ಬೀಸಿಗೊಂದು ನೆಡದರೆ ಮುಗಾತು,ಭೀಮನ ಗದೆಯ ಹಾಂಗೆ.ಇನ್ನು ಪಾಚ ಬಳುಸುಲೆ ಚಮಚ ಸಾಕಕ್ಕು ಅಲ್ಲದೋ? ಆದರೆ ಪೋಡಿ ರಜಾ ಹೆಚ್ಚು ಮಾಡೆಕ್ಕಕ್ಕೋ? ಬೈಪ್ಪಣೆ ಊಟವೂ ಅಜ್ಜಕಾನ ಭಾವನ ನಮ್ಮತನದ ಅಭಾವಕ್ಕೆ ಮುಖ್ಯ ಕಾರಣ ಅಲ್ಲದೋ?
    ಅನುಪ್ಪತ್ಯಲ್ಲಿ ಹವ್ಯಕರ ಊಟದ ಗುಣಮಟ್ಟ ಕಮ್ಮಿ ಅಪ್ಪಲೇ ಶುರು ಆದ್ದು ನಿಂಗೊ ಮತ್ತೆ ಬೊಳುಂಬು ಮಾವ ಹೇಳಿದ ಎಣ್ಣೆ ತಿಂಡಿಗಳ ಸೇರ್ಪಡಿಕೆಂದಾಗಿ. ನಾವು ತೆಂಗಿನ ಎಣ್ಣೆ ತಿಂಬೋದು ಹೇಳೋಗ ಎಲ್ಲಾರು ಒಂದರಿ ನಮ್ಮ ಮೊರೆ ನೋಡುತ್ತವು.ಅವಕ್ಕೆಂತ ಗೊಂತು,ನಮ್ಮ ಎಣ್ಣೆ ಖರ್ಚು ಎಷ್ಟು ಹೇಳಿ.ಗುಜರಾತಿಲಿ ಒಂದು ಸಣ್ಣ ಕುಟುಂಬಕ್ಕೆ ಒಂದು ತಿಂಗಳಿನ್ಗೆ 20 ಲೀಟರು ಎಣ್ಣೆ ಬೇಕು.ಎನಗೆ ಸಂಶಯ ಬಪ್ಪೊದು ಇವು ನೀರಿನಾಂಗೆ ಇದರನ್ನೂ ಕುಡಿತ್ತವೋ ಹೇಳಿ.
    ಆಯ-ವ್ಯಯ ಸರಿಸಮ ಇದ್ದರೆ ಆರೋಗ್ಯ ಅಲ್ಲದೋ.ಮಾವ,ಇನ್ನಾಣ ರಸದೂಟಕ್ಕೆ ಕಾದು ಕೂಯಿದೆ.

    1. ಪೋಡಿ ಮಾಡೊದು ಬಿಡುದೂ ಅವಕ್ಕವಕ್ಕೆ ಬಿಟ್ಟ ವಿಷಯ.ತಿಂಬವು ನಾವು ಜಾಗ್ರತೆ ಮಾಡಿರೆ ಮಾಡುತ್ತವೂ ಜಾಗ್ರತೆ ಮಾಡುಗಲ್ಲದೋ?
      ಎಣ್ಣೆ ತಿಂಡಿಯುದೇ ನಮ್ಮಲ್ಲಿ ಮದಲು ಡಬ್ಬಿಲಿ ಮಡಿಕ್ಕೊಂಡಿರ.ತಿಥಿಗೋ,ಸತ್ಯನಾರಾಯಣ ಪೂಜಗೋ ಒಡೆ(ತಿಥಿಗೆ ಸುಟ್ಟವು) ಮಾಡಿರೆ ಹೆಚ್ಚು.
      ತೆಂಗಿನೆಣ್ಣೆ ಹೊರಿವಲೆ ಈಗ ಇಪ್ಪ ಎಣ್ಣೆಗಳಲ್ಲಿ ಒಳ್ಳೆದು.(ಹೊರಿಯೆಕ್ಕು ಹೇಳುತ್ತ ಆಗ್ರಹ ಇದ್ದರೆ)ಎಣ್ಣೆಯ ೧೬೦°ಯ ಮೇಲೆ ಬೆಶಿ ಮಾಡುದು ಒಳ್ಳೆದಲ್ಲ.
      ಬೈಪ್ಪಣೆ ಊಟ ಈಗಾಣ ಕಾಲಕ್ಕೆ ಬೇಕಾವುತ್ತು,ನಾವು ನಮ್ಮ ಸ್ನೇಹಿತರ ಬೆಂಗ್ಳುರಿಂದಲೋ,ಮೈಸೂರಿಂದಲೋ ಬಪ್ಪಲೆ ಹೇಳಿ ಅವಕ್ಕೆ ಅಭ್ಯಾಸ ಇಲ್ಲದ್ದೆ ಕಷ್ಟ ಅಪ್ಪಲಾಗ ಹೇಳುತ್ತ ಉದ್ದೇಶ,ಅಷ್ಟೆ.ಅದಲ್ಲದ್ದೆ ಪ್ರಾಯದವು ಇಂದು ಕಾಲು ಬೇನೆ ಹೇಳಿ ನೆಲಲ್ಲಿ ಕೂದೊಂಡು ಉಂಬಲೆ ಬಂಙ ಬಪ್ಪದು ಕಾಣ್ತು.ಅಲ್ಲದೊ?

  10. ನಿಂಗೊ ಹೇಳಿದ್ದು ಸರಿ. ಅರಾರೋ ತಿಂದ, ಮನಾರ ಇಲ್ಲದ್ದ ತಟ್ಟೆಲಿ ತಿಂಬದಕ್ಕಿಂತ ಹಾಳೆ ತಟ್ಟೆಯೋ, ಬಾಳೆ ಎಲೆಯೋ ಆದರೆ hygenic ದೃಷ್ಟಿಂದಲೂ ಒಳ್ಳೆದು

  11. ಕೇಜಿ ಅಣ್ಣ ಎಲ್ಲರಿಂಗೂ ಊಟ ಬಳುಸಿ , ಅದರಲ್ಲಿ ನಮ್ಮ ಆಹಾರದ ಕ್ರಮಂಗೊ ಮತ್ತೆ ಅದರಲ್ಲಿಯ ವಿಶೇಷತೆ ಬಗ್ಗೆ ಬರದ್ದು ಲಾಯಿಕ ಆಯಿದು. ಅವಿಲು ಬೆಂದಿಲಿ ಉಂಡ ಹಾಂಗೆ ಆತು.
    ಊಟ ಸುರು ಮಾಡುವಾಗಲೂ ನಮ್ಮಲ್ಲಿ ಪಾಯಸಂದ ಸುರು ಮಾಡುತ್ತವು. ಇದರಿಂದಾಗಿ ಜೊಲ್ಲು ರಸ ಸುರಿವಲೆ ಪ್ರಚೋದನೆ ಕೊಡುತ್ತು. ಇದು ಆಹಾರ ಜೀರ್ಣ ಅಪ್ಪಲೆ ಸಹಕರಿಸುತ್ತು. ಎಂಗೊ ಸಣ್ಣ ಇಪ್ಪಗ ಎರಡು ಬಗೆ (ಹೆಚ್ಚಾಗಿ ಹಸರು ಮತ್ತೆ ಕಡ್ಲೆ) ಪಾಯಸ ಮಾಡಿರೆ ದೊಡ್ಡ ಜೆಂಬಾರವೆ ಆತು. ಸ್ವೀಟ್ ಎಂತಾರೂ ಮಾಡಿರೆ ಅದು ಊರಿಲ್ಲಿ ಮಾತಾಡ್ಲೆ ಒಂದು ವಿಶಯ ಕೂಡಾ.
    ಕಾಲ ಬದಲಿದ ಹಾಂಗೆ ಅನುಕರಣೆಂದಾಗಿ ಆಚಾರ, ಆಹಾರಲ್ಲಿಯೂ ಬದಲಾವಣೆ ಕಾಣುತ್ತ ಇದ್ದು.
    ಉದಿಯಪ್ಪಗ ಅವಲಕ್ಕಿ ಸಜ್ಜಿಗೆ ಬದಲು ಈಗ ಮಾಡ್ತ ಇಡ್ಲಿ ಸಾಂಬಾರು/ಚಟ್ನಿ ಒಳ್ಳೆ ಬದಲಾವಣೆ ಹೇಳಿ ಎನ್ನ ಅಭಿಪ್ರಾಯ

    1. ಇಡ್ಲಿ ಒಳ್ಳೆದೇ.ಆದರೆ ತಿಂಬಲೆ ಬಾಳೆ ಎಲೆ ರಜಾ ಅನಾನುಕೂಲವೇ ಅಲ್ಲದೋ?ಮಸರು ಇದ್ದರೆ ಆರೋಗ್ಯಕ್ಕೆ ಮತ್ತೂ ಒಳ್ಳೆದು.ಹಾಳೆ ಪಾತ್ರ ಉಪಯೋಗ ಮಾಡಿರೆ ತಿಂಬಲೂ ಅನುಕೂಲ,ಕ್ರಿಷಿಕರಿಂಗೂ ಒಳ್ಳೆದು.

  12. ಹೊಟ್ಟೆ ತುಂಬಿತ್ತಿದಾ ಓದಿ….


    ನಿಂಗಳ
    ಮಂಗ್ಳೂರ ಮಾಣಿ…

  13. ನಮ್ಮೋರ ಊಟದ ಬಗ್ಗೆ ಲಾಯ್ಕಕ್ಕೆ ಬರದ್ದಿ :). ಬಳುಸುವ ಕ್ರಮ, ಬಾಳೆಲಿ ಎಲ್ಲಾ ಪದಾರ್ಥಂಗಳೂ ಅದರದ್ದೇ ಜಾಗೆಲಿಯೇ ಬಳುಸುದು….
    ಇನ್ನು ನಮ್ಮ ನಿತ್ಯದ ಆಹಾರಂಗಳಲ್ಲಿಯೂ ಅಷ್ಟೆ ಅಲ್ಲದಾ? ನಾವು ಉಪಯೋಗ್ಸುವ ಬೇರೆ ಬೇರೆ ರೀತಿಯ ಅಡಿಗೆಗೊ..ಉದಾಹರಣೆಗೆ..ತಂಬ್ಳಿ, ಹಸಿ/ಸಳ್ಳಿ, ಅವಿಲು,ಗೊಜ್ಜಿ, ಚಟ್ನಿ ಇತ್ಯಾದಿಗೊಕ್ಕೆ ಕಾರಣ ನಮ್ಮ ಆರೋಗ್ಯವ ಕಾಪಾಡಿಗೊಂಬದೇ ಅಲ್ಲದಾ? ಆರೋಗ್ಯ ಆತನ್ನೆ, ಇನ್ನು ನಾಲಗೆಗೂ ರುಚಿ ..ನಮ್ಮ ಅಡಿಗೆ.

  14. ಕೇಜಿ ಮಾವ ಹೇಳಿದ್ದು ನಿಜವಾಗಿಯೂ ಆಲೋಚನೆ ಮಾಡೆಕಾದ ವಿಷಯ. ಅನುಪತ್ಯ(ಜೆಂಬಾರ)ಲ್ಲಿ ಎಲ್ಲವನ್ನು ರಜ್ಜ ರಜ್ಜ ರುಚಿ ನೋಡಿ ಅಪ್ಪಗ ಹೊಟ್ಟೆ ತುಂಬುತ್ತು. ಊಟದ ವಿಷಯ ಈಗ ಎಂತಾಯಿದು ಹೇಳಿರೆ ಮರ್ಜಿಯ ಪ್ರಶ್ನೆ ಆಯಿದು. ಮಾವ, ಈಗಾಣ ಮದುವೆ ಊಟಲ್ಲಿ ಪಲಾವು ಮಾಂತ್ರ ಅಲ್ಲ, ರುಮಾಲು ರೊಟ್ಟಿ, ಮಸಾಲೆ ದೋಸೆ, ಸೇಮಗೆ ರಸಾಯನ, ನಾಲ್ಕೋ ಐದೋ ಸ್ವೀಟುಗೊ, ನೋರ್ತ್ (ನಾರುತ್ತ!)ಇಂಡಿಯನ್ ಡಿಶ್ಶು, ಎಲ್ಲವೂ ಇರುತ್ತು. ಎಲ್ಲವನ್ನು ತಿಂದಿಕ್ಕುವೆ ಹೇಳಿ ಗ್ರೇಶುವದೇ ಬೇಡ.

    ಒಳ್ಳೆಯ ಲೇಖನ, ಬರೆತ್ತಾ ಇರಿ.

  15. ಕೆ.ಜಿ. ಮಾವ ಬಾಯಿ ಚೀಪೆ ಮಾಡುದರಿಂದಲೇ ಶುರು ಮಾಡಿದ್ದು.
    ಡಾಗುಟ್ರು ಮಾದು ಕೊಡುವಾಗ ಮೊದಲು ಚೀಪೆ ಮದ್ದೇ ಕೊಡುದನ್ನೆ..

    ಲಾಯ್ಕಾ ಆಯಿದು ಬರದ್ದು.. ನಮ್ಮತನ ಅಭಾವ ಆಗದ್ದೇ ಮುಂದಂಗೂ ಉಳಿಯೆಕ್ಕಾದರೆ ಈ ಬಗ್ಗೆ ಯೋಚಿಸೆಕ್ಕೆ..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×