- ಮಹಾನಗರದ ಮಹಾನ್ ಸಾಧಕಿ – ಡಾ.ಸುನಂದ ನಾರಾಯಣ ಭಟ್. - May 18, 2015
- ರಾಮಾಯಣ ಅಲ್ಲ ಪಿಟ್ಕಾಯನ - April 4, 2015
- ಪಾರುವ ಸ್ವಗತ - June 23, 2014
ಚಿತ್ರದುರ್ಗ ! – ಹೆಸರು ಕೇಳಿಯಪ್ಪಗ ‘ಮದಕರಿನಾಯಕ’ನ ಹೆಸರು, ಅಲ್ಯಾಣ ‘ಕೋಟೆ’, ತನ್ನಷ್ಟಕ್ಕೆ ನಮ್ಮ ಮನಸ್ಸಿಲಿ ಮೂಡಿ ಬತ್ತು. ಅದಕ್ಕೆ ಕಾರಣ ಚಿತ್ರದುರ್ಗದ ಭವ್ಯ ಇತಿಹಾಸ. ಚಿತ್ರದುರ್ಗ ಮತ್ತೆ ಮದಕರಿನಾಯಕ ಒಂದಕ್ಕೊಂದು ಬಿಟ್ಟು ಇಲ್ಲೆ. ಚಿತ್ರದುರ್ಗದ ನಾಯಕ ವಂಶಲ್ಲಿ ಹಲವು ಮದಕರಿನಾಯಕರುಗೊ ಆಳಿದರೂ, ಇತಿಹಾಸಲ್ಲಿ ನೆಂಪಿಲಿ ಒಳುದ್ದದು ಅಕೇರಿಯಾಣ ‘ಚಿಕ್ಕ ಮದಕರಿನಾಯಕ’ನ ಹೆಸರು. ಅವನ ದುರಂತಮಯ ಜೀವನ, ಅವನ ಶೌರ್ಯ, ಸಾಹಸಂಗೊ ಅದಕ್ಕೆ ಕಾರಣ. ಕನ್ನಡದ ಧೀಮಂತ ಕಾದಂಬರಿಕಾರ -ತ.ರಾ.ಸು., ಚಿತ್ರದುರ್ಗದ ನಾಯಕ ವಂಶದವರ ಇತಿಹಾಸವ ಆಧರಿಸಿ ಕಾದಂಬರಿ ಸರಮಾಲೆಯನ್ನೇ ಬರದ್ದವು. ‘ಕಂಬನಿಯ ಕುಯಿಲು’ ವಿಂದ ‘ದುರ್ಗಾಸ್ತಮಾನ ‘ದ ವರೆಗಾಣ ಎಲ್ಲ ಕಾದಂಬರಿಗೊ ಕನ್ನಡಿಗರ ಪಾಲಿಂಗೆ ಸಾಹಿತ್ಯದ ರಸಗವಳ.! ಚಿತ್ರದುರ್ಗದವರೇ ಆಗ್ಯೊಂಡು, ತ.ರಾ.ಸು. ಗೆ ಚಿತ್ರದುರ್ಗದ ಮೇಲಾಣ ಅಭಿಮಾನ ಈ ಎಲ್ಲಾ ಕಾದಂಬರಿಗಳಲ್ಲಿ ಎದ್ದು ಕಾಣುತ್ತು. ಚಿತ್ರದುರ್ಗದ ಪೂರ್ಣ ಇತಿಹಾಸವ ಅಭ್ಯಾಸ ಮಾಡಿ, ತನ್ನ ವೈಶಿಷ್ಟಪೂರ್ಣ ಕಲ್ಪನಾಶಕ್ತಿಂದ ಬರದ ಎಲ್ಲ ಎಂಟು ಕಾದಂಬರಿಗೊ ಓದುಗರ, ಇತಿಹಾಸದ ಆ ಕಾಲ ಘಟ್ಟಕ್ಕೆ ತೆಕ್ಕೊಂಡು ಹೋವ್ತದರಲ್ಲಿ ಸಂಶಯ ಇಲ್ಲೆ.!
‘ದುರ್ಗಾಸ್ತಮಾನ ‘ ಚಿತ್ರದುರ್ಗವ ಆಳಿದ ಅಕೇರಿಯಾಣ ಪಾಳೆಯಗಾರ ಮದಕರಿನಾಯಕನ ಕತೆ. ಆ ಕಾಲ ಬ್ರಿಟಿಷರು, ಪೋರ್ಚುಗೀಸರು, ನಿಜಾಮರು ಮತ್ತೆ ಮೈಸೂರಿನ ಸರ್ವಾಧಿಕಾರಿ ಹೈದರಾಲಿ – ಇವರ ಆಕ್ರಮಣಂದ ಸುತ್ತು ಮುತ್ತಲಾಣ ಪಾಳೆಯಗಾರಂಗೊ ತತ್ತರಿಸಿ ತಮ್ಮ ಅಳಿವು – ಉಳಿವಿಂಗೆ ಹೋರಾಡಿಗೊಂಡು ಜೀವನ ಸಂಕಷ್ಟಮಯ ಆಗಿತ್ತಿದ್ದ ಸಮಯ. ಚಿತ್ರದುರ್ಗ ಕೋಟೆ ಹೈದರಾಲಿಗೆ ಸೋತು ಪತನ ಆದರುದೇ, ಇದಕ್ಕೆ ಎರಡು ದೀರ್ಘ ವರ್ಷವರೆಗೆ ಹೋರಾಟ ಮಾಡೆಕ್ಕಾಗಿ ಬಂದದು ಮದಕರಿನಾಯಕನ ಅಪ್ರತಿಮ ಸಾಹಸ, ಶೌರ್ಯಕ್ಕೆ ಸಾಕ್ಷಿ. ಆದ ಕಾರಣ ಮದಕರಿನಾಯಕ ಸೋತರೂ ಜೆನಂಗಳ ಮನಸ್ಸು ಗೆದ್ದ ಮಹಾನ್ ಶೂರ.
‘ದುರ್ಗಾಸ್ತಮಾನ’ ಇತಿಹಾಸದ ನೀರಸ ವರದಿಯಾಗದ್ದೆ, ನವರಸ ಕಾವ್ಯಗಂಗೆಯಾಗಿ ಮೂಡಿ ಬಯಿಂದು. ಇದು ತ.ರಾ.ಸು. ಅವರ ಅಕೇರಿಯಾಣ ಕಾದಂಬರಿಯೂ ಅಪ್ಪು. ಈ ಕಾದಂಬರಿ ಓದುವಾಗ ಮದಕರಿನಾಯಕನ ಚಿತ್ರ ನಮ್ಮ ಕಣ್ಣ ಮುಂದೆ ಬಂದ ಅನುಭವ ಆವುತ್ತು. ರಾಜಕೀಯದ ಚದುರಂಗದಾಟಲ್ಲಿ ನಡಸಿದ ನಡೆಗೊ, ಅರಮನೆಯ ಪಿತೂರಿ, ಅಧಿಕಾರಲ್ಲಿಪ್ಪವು ಅಧಿಕಾರ ಒಳುಶಿಗೊಂಬಲೆ ತೋರ್ಸುವ ಮುತ್ಸದ್ಧಿತನ, ಕಪಟಿಗಳ ಕುತಂತ್ರ ಇವೆಲ್ಲದರ ತ.ರಾ.ಸು. ಈ ಕಾದಂಬರಿಲಿ ಒಂದು ಅದ್ಭುತ, ಅಮೋಘ ಪ್ರಪಂಚವನ್ನೇ ಅನಾವರಣ ಮಾಡಿದ್ದವು. ಇದೊಂದು ಅದ್ವಿತೀಯ ಅಮರ ಕೃತಿ .!
1596 ರಿಂದ 1611 ರ ನಡುಗಾಣ 15 ವರ್ಷದ ಚಿತ್ರದುರ್ಗ ಇತಿಹಾಸದ ರಕ್ತಸಿಕ್ತ ವಿಷಘಟ್ಟವ ಆಧರಿಸಿ ರಚಿಸಿದ ಕಾದಂಬರಿತ್ರಯಂಗೊ – ‘ಕಂಬನಿಯ ಕುಯಿಲು’, ‘ರಕ್ತರಾತ್ರಿ’ , ‘ತಿರುಗು ಬಾಣ’ . ದಳವಾಯಿ ಮುದ್ದಣ, ಅವನ ತಮ್ಮಂದಿರೊಟ್ಟಿಂಗೆ ಸೇರಿ ನಡಶುವ ಪಿತೂರಿ ‘ಕಂಬನಿಯ ಕುಯಿಲು’ ಕಾದಂಬರಿಯ ವಸ್ತು. ಓಲಗ ಶಾಲೆಲಿ ದೊರೆ ಓಬಣ್ಣ ನಾಯಕನ ಕೊಲೆ, ಕೊಲೆಯ ಆಘಾತ ತಡೆಯದ್ದೆ ನಾಗತಿಯರ ಆತ್ಮಹತ್ಯೆ, ಈ ಗದ್ದಲದ ಮಧ್ಯ ಜೆನಂಗಳ ಕಾಲ್ತುಳಿತಕ್ಕೆ ಸಿಕ್ಕಿ ಪ್ರಧಾನಿ ಭುವನಪ್ಪನವರ ಮರಣ. ಈ ದುರಂತ ಸರಮಾಲೆಗಳ ಕತೆಯ ಈ ಕಾದಂಬರಿಲಿ ಕಾಂಬಲಕ್ಕು. ಇದರ ಪೂರಕವಗಿ ಬರದ ‘ರಕ್ತರಾತ್ರಿ’ ಲಿ, ಲಿಂಗಣ್ಣನಾಯಕನ ಪಟ್ಟಾಭಿಷೇಕದ ಪ್ರಯತ್ನ, ಅವನ ಕೊಲೆ, ಮತ್ತಿ ಮನೆತನದವರ ಅವನತಿ, ಮುದ್ದಣನ ಸರ್ವಾಧಿಕಾರಿ ಆಡಳಿತದ ಚಿತ್ರಣ ಬತ್ತು. ಈ ದುರಂತದ ಖಳನಾಯಕ ಮುದ್ದಣ ಮತ್ತೆ ಅವನ ತಮ್ಮಂದಿರ ಬಾಳು ಜನರ ಆಕ್ರೋಶದ ಅಗ್ನಿಕುಂಡಲ್ಲಿ ಬಲಿಯಾಗಿ, ಇವರ ಮಾರಣ ಹೋಮದ ಕತೆಯ ಚಿತ್ರಣ ‘ತಿರುಗು ಬಾಣ’ ಲ್ಲಿ ವಿಸ್ತಾರವಾಗಿ ಬಯಿಂದು.
ಮುದ್ದಣನ ಅಂತ್ಯ ಕಾಣಿಸಿ ಚಿತ್ರದುರ್ಗಲ್ಲಿ ಹೊಸಹಗಲಿನ ಮೂಡಿಸಿ ತಂದು ಭವ್ಯವಾಗಿ ಬಾಳಿದ ಭರಮಣ್ಣ ನಾಯಕನ ಕತೆ ‘ಹೊಸಹಗಲು’ , ಮತ್ತೆ ಅದರ ಪೂರಕವಾಗಿ ಬರದ ‘ವಿಜಯೋತ್ಸವ’ ಕಾದಂಬರಿಗಳ ವಸ್ತು. ಭರಮಣ್ಣ ನಾಯಕ ಚಿತ್ರದುರ್ಗದ ಹಿರಿಮೆಯ ಉತ್ತುಂಗ ಶಿಖರಕ್ಕೆ ಏರಿಸಿದ ವ್ಯಕ್ತಿ. ಅದು ಕೀರ್ತಿಯ ಕಾಲವು ಅಪ್ಪು, ಸಾಲು ಸಾಲು ಕಾಳಗಂಗಳ ಕಾಲವೂ ಆಗಿತ್ತು. ಆ ಕಾಲ ಬರಿಯ ಸಮರಂಗೊ ಮಾಂತ್ರ ಸೀಮಿತವಾಗದ್ದೆ, ಚಿತ್ರದುರ್ಗ ಸರ್ವತೋಮುಖ ಅಭಿವೃದ್ದಿ ಕಂಡ ಸಮಯವೂ ಆಗಿತ್ತು.
‘ಕಂಬನಿಯ ಕುಯಿಲು’ , ‘ರಕ್ತರಾತ್ರಿ’ ಕತೆಯ ಕಾಲಘಟ್ಟದ ನಡುವೆ ನಡದ ಐತಿಹಾಸಿಕ ಘಟನೆಯ ಆಧರಿಸಿ ಬರದ ಕಾದಂಬರಿ ‘ರಾಜ್ಯದಾಹ’ . ಇದರಲ್ಲಿ ಸರ್ವಾಧಿಕಾರಿ ಮುದ್ದಣನ ಕೈಗೊಂಬೆ ಆಗಿ ಸಿಂಹಾಸನಲ್ಲಿದ್ದುಗೊಂಡು ಆಳಿದ ಚಿಕ್ಕಣ್ಣ ನಾಯಕನ ಜೀವನದ ಕತೆ ಇದ್ದು. ಕಸ್ತೂರಿರಂಗಪ್ಪ ನಾಯಕನ ಆದಳಿತಾವಧಿಯ ಕತೆಯ ಆಧರಿಸಿ ಬರದ ಕಾದಂಬರಿ ‘ಕಸ್ತೂರಿ ಕಂಕಣ’.
ಇವೆಲ್ಲದಕ್ಕೂ ಮುಕುಟಪ್ರಾಯವಾಗಿಪ್ಪದು,‘ದುರ್ಗಾಸ್ತಮಾನ’. ಈ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯವು 1985 ರಲ್ಲಿ ಮರಣೋತ್ತರ ಪುರಸ್ಕಾರ ಕೊಟ್ಟು ಗೌರವಿಸಿದ್ದವು.
~*~*~
ಅದ್ಭುತವಾದ ಶಬ್ದಗಳ ಬಳಕೆ.
ದುರ್ಗಾಸ್ತಮಾನದ ಭಾಷೆ ಅದ್ಭುತ.ಒಂದಾರಿ ಅದರ ಓದಿರೆ,ತುಂಬಾ ದಿನ ಅದರ ಗುಂಗು ಇರುತ್ತು.ತ.ರಾ.ಸು.ಬರೆದ ಕೃತಿಗಳಲ್ಲಿ ಸಂಭಾಷಣಾ ಕ್ರಮ ಬಹಳ ಮನ ತಟ್ಟುವ ಹಾಂಗೆ ಇರುತ್ತು. ರಾಜ ಕುಟುಂಬದವು ,ಸ್ವಾಮಿಗಳು ಮಾತಾಡುವ ಕ್ರಮ,ವಾಕ್ಯಂಗಳಲ್ಲಿ ಇಪ್ಪ ಗೌರವದ ಭಾವ ಅನ್ಯಾದೃಶ.
ಲೇಖನ ಲಾಯ್ಕ ಆಯಿದು.
ವ° – ಹೀಂಗೆ ಮೇಲೆ ಸೊನ್ನೆ ಬರೆಯಕರೆ ಎಂಥ ಮಾಡೆಕು ಮಾವ ?
ಅಂದೊಂದರಿ ಗುತ್ತು ಸದಾಶಿವ ಮಾವ° ಇದೇ ಪ್ರಶ್ನೆ ಕೇಳಿತ್ತಿದ್ದವು:
ನಿಂಗಳ ಕೀಬೋರ್ಡಿಲಿ ALT ಸುಚ್ಚು ಒತ್ತಿ, ಬಲತ್ತಿಂಗೆ ಇಪ್ಪ NumberPad ಲಿ 248 ಒತ್ತೆಕ್ಕು.
(Make sure Num lock is ON)
ಅಲ್ಲದ್ರೆ ಇದರ Copy ಮಾಡಿ, ಬೇಕಾದಲ್ಲಿಂಗೆಲ್ಲ Paste ಮಾಡಿಗೊಳ್ಳಿ: °
ಹೆಗ್ಡೆ ಸಾರ್…!(ಮಗನ(ಪ್ರಣವ) ಸಾರ್ ನ ಆನುದೇ ಹಾಂಗೆ ಸಂಬೋಧಿಸುದು, ಬೇಜಾರು ಮಾಡಿಕ್ಕೆಡಿ)
ಈ ವಿಷಯ ನವಗೂ ಈಗಳೇ ಗೊಂತಾದ್ದು.
ಅದೆಲ್ಲಾ ನವಗರಡಿಯ ಶ್ರೀಕಾಂತಣ್ಣ . ಗುರಿಕ್ಕರ್ರು ಕಲಿಶಿಕೊಡೆಕ್ಕಷ್ಟೇ.
ಎನಗೆ ಕೊಶೀ ಆದ್ದು – ನಿಂಗೊ ಎಂಗಳ ಹವ್ಯಕ ಭಾಷೆಲಿ ಬರದ್ದು ಭಾರೀ ಲಾಯಕ್ಕ ಆಯ್ದು.
ಈ ಕಾದಂಬರಿಗಳ ಪುಸ್ತಕ ಮುಖಪುಟಂಗಳ ನೋಡಿ ಖುಷಿ ಆತು. ಆರ್ಟಿಸ್ಟ್ ಚಂದ್ರನಾಥ ಬಿಡಿಸಿದ ಚಿತ್ರಂಗ. ಚಂದ್ರನಾಥ ಆನು ಪ್ರಜಾವಾಣಿಲಿ ಇದ್ದಿಪ್ಪಗ ಎಂಗಳ ಚೀಫ್ ಆರ್ಟಿಸ್ಟ್. ಎನಗೆ ಗುರು.ದೊಡ್ಡ ಕಲಾವಿದ. ಪುತ್ತೂರಿನ ಜೆನ.
ಈ ವಿಷಯ ಗೊಂತಿತ್ತಿಲೆ. ಪುಸ್ತಕಲ್ಲಿ ಎಲ್ಲಿಯೂ ಈ ಹೆಸರು ಕಂಡಿದಿಲೆ. ಬೈಲಿಲಿ ಹಂಚಿಗೊಂದದಕ್ಕೆ ಧನ್ಯವಾದ ಶ್ಯಾಮಣ್ಣ.
‘ದುರ್ಗಾಸ್ತಮಾನ’ ಶೀರ್ಷಿಕೆ ನೋಡಿಯಪ್ಪದ್ದೆ ವೀರ ಸಾಹಸ ಶೌರ್ಯ ಇತಿಹಾಸ ಹೇಳಿ ಶುರುವಿಂಗೇ ಗ್ರೇಶಿದೆ. ಚಿತ್ರದುರ್ಗದ ಕತೆ ಹೇಳುವಾಗಳೇ ರೋಮಾಂಚನ ಅನುಭೂತಿ. ಅದ್ಭುತ, ಅಮೋಘ ಪ್ರಪಂಚವನ್ನೇ ಅನಾವರಣ ಮಾಡಿದ ಈ ಅದ್ವಿತೀಯ ತ.ರಾ.ಸು.ರವರ ಕೃತಿಗೆ ಪ್ರಶಸ್ತಿ ಲಭಿಸಿದ್ದು ಸಂತೋಷ. ತೆ.ಕು.ಮಾ. ಮಾಡಿದ ತ.ರಾ.ಸು. ‘ದುರ್ಗಾಸ್ತಮಾನ’ ಪುಸ್ತಕ ಪರಿಚಯ ಲಾಯಕ್ಕ ಆಯ್ದು ಹೇಳಿ ‘ಚೆನ್ನೈವಾಣಿ’.