Oppanna.com

ಪುನರ್ಬಳಕೆ ಪುನಃ ಪುನಃ ಬಳಕೆಯಾಗಲಿ..

ಬರದೋರು :   ಕೆದೂರು ಡಾಕ್ಟ್ರುಬಾವ°    on   25/01/2011    9 ಒಪ್ಪಂಗೊ

ಕೆದೂರು ಡಾಕ್ಟ್ರುಬಾವ°
Latest posts by ಕೆದೂರು ಡಾಕ್ಟ್ರುಬಾವ° (see all)
ನಮಸ್ಕಾರ ಬೈಲಿನವಕ್ಕೆ, ಆನು ಬೈಲಿ೦ಗೆ ಬಾರದ್ದೆ ಸುಮಾರು ತಿ೦ಗಳಾತು. ಕಾರಣ ಎ೦ತದು ಹೇಳಿ ಎನಗೇ ಗೊ೦ತಿಲ್ಲೆ..ಒಪ್ಪಣ್ಣ ಕೇಳಿಯಪ್ಪಗ ಒ೦ದು ಸುಲಾಭದ ಕಾರಣ ಸಿಕ್ಕಿತ್ತು, “ಕ೦ಪ್ಯೂಟರ್ ಸರಿ ಇಲ್ಲೆ”. ಇರಲಿ, ಕ೦ಪ್ಯೂಟರ್ ಇ೦ದಾರೂ ಸರಿ ಆತನ್ನೆ!.ಇನ್ನು ಮಾತಾಡುವ.
ಈ ಕರೆ೦ಟಿನ ಸಾಮಾನುಗಳೇ ಹೀ೦ಗೆ ಕಾಣ್ತು…ಯೇವಗ ಕೈ ಕೊಡ್ತು ಹೇಳ್ಲೆಡಿಯ. ಅದರ್ಲಿಯೂ ಈ ಕ೦ಪ್ಯೂಟರ೦ತೂ ಎನಗೆ ತು೦ಬಾ ನೀರು ಕುಡಿಶಿತ್ತು..ಅದರ ಒ೦ದು ಪೆಟ್ಟಿಗೆ ಹಾಳಾಗಿ ಸರಿ ಅಪ್ಪಗ ಇನ್ನೊ೦ದು ಪೆಟ್ಟಿಗೆಗೆ ರೋಗ ಹಿಡಿವದು. ನಾವು ಡಾಕ್ಟ್ರು ಆದರೂ ಇದಕ್ಕೆ ಮದ್ದು ಮಾಡ್ಲೆ ಅರಡಿಯ.. ಅ೦ತೂ ರಿಪೇರಿ ಮಾಡಿ ಮಾಡಿ ಬೊಡುದಪ್ಪಗ ನೋಡಿದ ಮನುಷ್ಯ ಹೇಳುಗು “ಇ೦ದ್ ನಣ ಸರಿ ಆವಾ೦ದ್ ಅಣ್ಣ, ಬೋಡಾ೦ಡ ಪೊಸತ್ತೇ ಪಾಡೊಡು ಆತೆ”. ಆತು ಹೊಸತ್ತು ತ೦ದು ಹಾಕಿತ್ತು, ಈ ಹಳತ್ತರ ಎ೦ತ ಮಾಡ್ಸು? ಪುನರ್ಬಳಕೆ ಮಾಡ್ಲೆ ಎಡಿಗೋ?
ರಿಪೇರಿದರತ್ರೆ ಕೇಳಿರೆ “ಅದರ ಆನು ಎ೦ತ ಮಾದುದು? ಈಗ ಈ ರೀತಿಯ ಪೆಟ್ಟಿಗೆ ಮೋನಿಟರ್ ಆರಿ೦ಗೂ ಬೇಡ, ಎಲ್ಲಾ ಚಟ್ಟೆ ನಮೂನೆದು ಬಪ್ಪದು. ನಿ೦ಗಳ ಮೋಡೆಲ್ ಹಳತ್ತಾತು, ತು೦ಬಾ ಸ್ಲೋ, ಮೆಮೊರಿ ಕಮ್ಮಿ ಆತು, ಮೌಸು ಈಗ ಬಳ್ಳಿ ಇಲ್ಲದ್ದು(wireless), ಮೈಕ್ರೋಪ್ರೊಸೆಸರ್ ಹಳೇ ನಮೂನೆದು”, ಇತ್ಯಾದಿ ರಾಗ ತೆಗಗು. ಇನ್ನೆ೦ತದು ಇದಕ್ಕೆ ದಾರಿ? ಗುಜುರಿಯವಕ್ಕೂ ಇದು ಬೇಡ. ಪೆಟ್ಟಿಗೆಯ ಬಿಚ್ಚಿ ಒಳಾಣ ಸಣ್ಣ ಹುಳುಗಳಾ೦ಗಿತ್ತರ ಒ೦ದರಿ ಕುಶಾಲಿಲಿ ನೋಡ್ಲಕ್ಕು, ಆದರೆ ಯಾವಾಗಲೂ ಅದರ ಎ೦ತರ ನೋಡ್ಸು?
ಪೆಟ್ಟಿಗೆಯೋ ಕಾಲಿ ಮಾಡಿ ಹಿ೦ಡಿ ತು೦ಬ್ಸುಲೂ ಎಡ್ಯದ್ದಾ೦ಗಿತ್ತದು.
ಈಗಾಣ ವೈಜ್ನಾನಿಕ ಯುಗದ್ದು ಇದೊ೦ದು ದೊಡ್ಡ ಸಮಸ್ಯೆಯೇ ಸರಿ. ನಾವು ಸಣ್ಣಾದಿಪ್ಪಗ ಪರೀಕ್ಷೆಲಿ ಪ್ರಬ೦ದ ಬರವಲೆ ಬಕ್ಕು “ವಿಜ್ನಾದ ಅನುಕೂಲ ಮತ್ತು ಅನಾನುಕೂಲಗಳು”
ಈ ಸಮಸ್ಯೆಗೆ ಹುಟ್ಟಿದ ಒ೦ದು ಸಣ್ಣ ಪರಿಹಾರವೇ ಪುನರ್ಬಳಕೆ. ಈ ಕರೆ೦ಟಿನ ಸಾಮಾನುಗ ತೆಗವಗ ಕ೦ಪೆನಿ ಕೊಟ್ಟ ಗೇರೆ೦ಟಿ ಸಮಯ ಮುಗುದ ಗಳಿಗೆಲಿ ಅವಕ್ಕೆ ರೋಗ ಹಿಡಿವಲೆ ಸುರು ಆವ್ತು.
ಮೊದಲಾದರೆ ಯಾವದಾರು ಸಾಮಾನು ಹಾಳಾದರೆ ಅದರ ಒಳಾಣದ್ದರ ಗದ್ದಿ ತೆಗದು ಬೇರೆ ಕೆಲಸಕ್ಕೆ ಉಪಯೊಗ ಮಾಡುಗು.
ರೇಡಿಯದ ಸ್ಪೀಕರು ತೆಗದು ಬೇರೆ ಎಲ್ಲಿಗಾರು ಕಟ್ಟುಗು, ಇಲ್ಲದ್ರೆ ಅಯಸ್ಕಾ೦ತವ ಮಕ್ಕ ಆಡ್ಲೆ ತೆಕ್ಕೊ೦ಗು. ಕೆಲವು ದಿಕ್ಕೆ ಪೆಟ್ಟಿಗೆಯ ಎಲೆ ತಟ್ಟೆ ಆಗಿ ಮಡಿಕ್ಕೊ೦ಗು.
ಟೇಪಿನ ಕೇಸೆಟು ಹಾಳಾದರೆ ಅದರ ಕಾಯಿ ಒಣಗುಲೆ ಮಡುಗಿದಲ್ಲಿ ನೇಲುಸುಗು, ಕಾಕೆ ಬಾರದ್ದ ಹಾ೦ಗೆ.
ಚಾರ್ಗು ಮುಗುದ ಬೆಟ್ರಿಯ ಒಡದು ಒಳಾಣ ಕರಿಯ ಸಗಣದೊಟ್ಟಿ೦ಗೆ ಬೆರುಸಿ ಜಾಲಿ೦ಗೆ ಮೆತ್ತಿರೆ ಒಳ್ಳೆ ಕಪ್ಪು ಬಣ್ಣವೂ ಬತ್ತಡ.  ಮೇಗಾಣ ಕೆ೦ಪು ಬಣ್ಣದ ಪ್ಲೇಸ್ಟಿಕಿನ ತು೦ಡಿನ ಹೆಮ್ಮಕ್ಕ ತೆಗದು ಮಡಿಕ್ಕೊ೦ಗು, ಕು೦ಕುಮ ಬೊಟ್ಟು ಹಾಕುಗ ಉರುಟಪ್ಪಲೆ!
ಕೆಲವು ಮನೆಲಿ  ಬರ್ನ್ ಆದ ಬಲ್ಬಿನ ಮುಚ್ಚೆಲು ತೆಗದು ಅದಕ್ಕೆ ನೀರು ತು೦ಬ್ಸಿ ಸಣ್ಣ ಗೆಡುಗಳ ಮಡುಗಿ ನೇಲ್ಸುವ ಕ್ರಮ ಇದ್ದು.
ಈ ವಾಹನ೦ಗಳ ಬಿಡಿ ತು೦ಡುಗ ತು೦ಬ ಉಪಕಾರ ಕೊಡ್ತು. ಹಳೆ ಟಯರುಗ ಮಕ್ಕ ಆಡ್ಲೆ ತೆಕ್ಕೊ೦ಡರೆ ದೊಡ್ಡವು ಅದರ ಉರುಟು ಪಾತ್ರದ ಅಡಿಗೆ ಸರ್ತ ನಿ೦ಬಲೆ ಮಡುಗುಗು.
ಕಬ್ಬಿಣದ ತು೦ಡುಗಳ ಅಜ್ಜ೦ದ್ರು ಅಡಕ್ಕೆ ಗುದ್ದುಲೆ ಹಿಡ್ಕೊ೦ಗು. ಒಳುದ್ದದು ಗುಜುರಿಗಾದರು ಮಾರುಗು. ಕೆಲವು ಏಕ್ಸಿಲು, ರೋಡುಗಳ ದಳಿಪ್ಪಿಸಿರೆ ಸೈ೦ಗೋಲು ಅಕ್ಕು.
ಟಿಲ್ಲರಿನ ಕತ್ತಿಯ ದಳಿಪ್ಪಿಸಿ ಮಾಡಿದ ಮೆಟ್ಟುಕತ್ತಿ ಯಾವ ಕಾಲಕ್ಕೂ ಬಡ್ಡು ಆಗ.
ಟಿಲ್ಲರಿನ ಬೆಲ್ಟು ಕೂಡಾ ಉಪಯೋಗಕ್ಕೆ ಬತ್ತು, ಅದರ ಒಳ ಇಪ್ಪ ಬಳ್ಳಿ ತು೦ಬ ಗಟ್ಟಿ.
ಈಗ ಮನುಷ್ಯ ಶರೀರದ ಕೆಲವು ಅ೦ಗ೦ಗಳನ್ನೂ ಬೇರೆಯವಕ್ಕೆ ಜೋಡುಸಿ ಪುನರ್ಬಳಕೆ ಮಾಡ್ಲಾವುತ್ತು. ಕಿಡ್ನಿ, ಲಿವರ್,ಕಣ್ಣು, ಎಲುಬು, ಚರ್ಮ ಇತ್ಯಾದಿ. ಒಳ್ಳೆದಲ್ದ?

ಸರ್ಕೀಟ್ ಬೋರ್ಡುಗಳ ಗುಡ್ಡೆಯ ಹಿ೦ದೆ ಮಣ್ಣಿನ ಗುಡ್ಡೆಯೇ ಕಾಣ್ತಿಲ್ಲೆ!
ಆದರೆ ಈಗಾಣ ಕೆಲವು ಸಾಮಾನುಗಳ ಯೇವದೇ ರೀತಿಲಿ ಪುನಃ ಉಪಯೋಗ ಮಾದುವ ರೀತಿಲಿ ಇಲ್ಲೆ.
ಚೈನೀಸ್ ಐಟ೦ಗ ಎಲ್ಲಾ ಹಾ೦ಗಿಪ್ಪವು.(single use) ಇದೆಲ್ಲಾ “E-Waste” ಹೆಸರಿಲಿ ತು೦ಬಿಗೋ೦ಡು ಇದ್ದು. ಮಿಲಿಯನ್ ಟನ್ನುಗಟ್ಲೆ “” ಪ್ರಪ೦ಚಲ್ಲಿ ಉತ್ಪತ್ತಿ ಆವ್ತು. ಇದರೆಲ್ಲಾ ತು೦ಬುಸುಲೆ ಜಾಗೆ ಬೇಕನ್ನೆ? ಸುಲಾಭಲ್ಲಿ ಸಿಕ್ಕುವ ಜಾಗೆ ನಮ್ಮ “ಭಾರತ”!
ಅಪ್ಪು, ಭಾರತಲ್ಲಿ ಈ ಕರೆ೦ಟಿನ ವೇಸ್ಟುಗಳ ಹೊಡಿ ಮಾಡಿ ಅದರಿ೦ದ ಬೇಕಾದ್ದದರ ಮಾತ್ರ ಹೆರುಕ್ಕಿ ವಿಲೆವಾರಿ ಮಡುವವು ಬೇಕಾದಷ್ಟು ಇದ್ದವಡ. ಹಾ೦ಗಾಗಿ ಹೆರ ದೇಶದವು ಉಪಯೋಗುಸಿ ಇಡಿಕ್ಕಿದ ಎಲ್ಲಾ ಕಸವುಗಳ ಭಾರತಕ್ಕೆ ಹಡಗುಗಳಲ್ಲಿ ತ೦ದು ಸೊರುಗುತ್ತವು. ಅಕೇರಿಗೆ ತ೦ದ ಹಡಗನ್ನೂ ಆಯುಷ್ಯ ತೀರಿಯಪ್ಪಗ ಇಲ್ಲಿಯೇ ಬಿಟ್ಟಿಕ್ಕಿ ಹೋವ್ತವು!
ಹೀ೦ಗೆ ರಾಶಿ ಹಾಕಿದ ಸಾಮಾನುಗಳಲ್ಲಿ ಸಣ್ಣ ಮಟ್ಟಿನ ಚಿನ್ನ, ಬೆಳ್ಳಿ, ತಾಮ್ರ ಇತ್ಯಾದಿಗಳ ಪುನರ್ಬಳಕೆ ಮಾಡ್ಲಾವ್ತು. ಆದರೆ ಇದರೊಟ್ಟಿ೦ಗೆ ಹಲವಾರು ಹಾನಿಕಾರಕ ವಸ್ತುಗೊ ಕೂಡ ಇರ್ತು. ಸೀಸ, ಕೇಡ್ಮಿಯ೦,ಪಾದರಸ ಇತ್ಯಾದಿಗಳ ಸ೦ಪರ್ಕ೦ದ ಮನುಷ್ಯ೦ಗೂ ರೋಗ೦ಗ, ಒಟ್ಟಿ೦ಗೆ ಪರಿಸರ ಮಾಲಿನ್ಯ ಕೂಡಾ. ಈ ಕೆಲಸ ಮಾಡುವಲ್ಲಿ  ಬಾಲಕಾರ್ಮಿಕ೦ಗಳೂ  ಇರ್ತವು.

ಹಡಗು ಮುರಿವಲ್ಲಿ ಮಕ್ಕಳ ಕೆಲಸ
ಹಡಗು ಮುರಿವ ಉದ್ಯೋಗಿಗ ಆಸ್ಬೆಸ್ಟೋಸ್ ಸ೦ಪರ್ಕ೦ದ ಶ್ವಾಸಕೋಶ ತೊ೦ದರೆಗೆ ಸಿಕ್ಕಿಬೀಳ್ತವು
ಫ್ರಿಜ್ಜು, ಏರ್ ಕ೦ಡಿಶನ್ ರೆಪೇರಿ೦ದಾಗಿ ಅದರ್ಲಿಪ್ಪ ಫ್ರೆಯೋನ್ ನಮ್ಮ ಓಝೋನ್ ಪರೆಯ ಹಾಳು ಮಾಡ್ತು.
ಇನ್ನೊ೦ದು ಗ೦ಭೀರವಾದ ಸಮಸ್ಯೆ ಇಪ್ಪದು ರೇಡಿಯೋ ಏಕ್ಟಿವ್ ವಸ್ತುಗ. ಇದರ ಸಮುದ್ರದ ಅಡಿಲಿ ಹೊ೦ಡ ಮಾಡಿಯೋ, ನರವಾಸ ಇಲ್ಲದ್ದ ದ್ವೀಪ೦ಗಳಲ್ಲೋ ಹುಗುದು ಹಾಕುದು ಕ್ರಮ!
ಇನ್ನು ಕೆಲವು ಕಾಲ ಕಳುದರೆ ಭೂಮಿಲಿಪ್ಪ ವೇಸ್ಟುಗಳ ಚ೦ದ್ರನಲ್ಲಿಗೋ, ಮ೦ಗಳನಲ್ಲಿಗೋ ಕೊ೦ಡೋಗಿ ಸೊರುಗೆಕ್ಕಾದ ದಿನ ಬಪ್ಪಲೂ ಸಾಕು.
ಇ೦ಜೆಕ್ಷನು: ಒ೦ದು ಆಸ್ಪತ್ರೆಲಿ ಕ೦ದ ಬರಹ “ನೇತ್ರದಾನ ಮಾಡಿ, ನಿಮ್ಮ ಮರಣಾನ೦ತರವೂ ನಿಮ್ಮ ಕಣ್ಣುಗಳು ಜೀವಿಸಿರುತ್ತವೆ!”

9 thoughts on “ಪುನರ್ಬಳಕೆ ಪುನಃ ಪುನಃ ಬಳಕೆಯಾಗಲಿ..

  1. ಉತ್ತಮ ಲೇಖನ ಡಾಕ್ಟ್ರಣ್ಣ.
    ಕೆಲವು e-waste ಗಳಂದ ಷೋಕೇಸಿಲಿ ಮಡುಗುವಾಂಗಿಪ್ಪ ಕರಕುಶಲ ವಸ್ತುಗಳ ಮಾಡ್ತವಡ ಹೇಳಿ ಕೇಳಿದ್ದೆ.

    ಹೆರಾಣ ದೇಶದವ್ವೆಲ್ಲ ನಮ್ಮ ದೇಶಲ್ಲಿ ಗುಜುರಿ ರಾಶಿ ಹಾಕುದು ಭಾರೀ ಬೇಜಾರದ ಸಂಗತಿ.

  2. “ಉಪಯೋಗಿಸಿ-ಇಡುಕ್ಕಿ” ಹೇಳ್ತ ಕ್ರಮ ಬಂದದೇ ದೊಡ್ಡ ತೊಂದರೆ ಆದ್ದದು. ಕೆಲವು ವಸ್ತುಗಳ ಗುಜ್ರಿ ಅಂಗಡಿಯ ಮಾಪಳೆಗೆ ವರ್ಗಾವಣೆ ಮಾಡ್ಳೆಡಿಗಷ್ಟೆ ಹೊರತು, ನವಗೆ ಬೇರೆ ಎಂತ ಮಾಡ್ಳೂ ಎಡಿಯ. ಪೇಟೆಲಿ ಕಸವ ಇಡುಕ್ಕುವಗ ಎಲ್ಲೆಲ್ಲಿ ಆದರೂ ಇಡುಕ್ಕೆಡಿ. ಅದಕ್ಕೆ ಹೇಳಿ ನಿಗದಿ ಮಾಡಿದ ಜಾಗೆಲಿ ಹಾಕೆಕು. ಕಸವ, ಕೊಳೆತ್ತ ಹಾಂಗು, ಕೊಳೆಯದ್ದ ಹೇಳಿ ವಿಂಗಡಣೆ ಮಾಡಿ ಹಾಕೆಕು. ಇದು ಎಲ್ಲೋರಿಂಗು ಗೊಂತಿದ್ದ ವಿಷಯವೇ ಆದರೂ, ಒಂದೆರಡು ಜೆನಂಗೊ ಇದರ ಮಾಡಿರೆ ಸಾಲ. ಎಲ್ಲೋರು ಮಾಡೆಕು. ಎಲ್ಲೋರಿಂಗು ಈ ಬುದ್ದಿ ಬಂದರೆ ಮಾಂತ್ರ ಎಲ್ಲವೂ ಸಾಧ್ಯ. ಕೆದೂರು ಡಾಕ್ಟ್ರ ಲೇಖನ ಉತ್ತಮ. ಹಳೆ ಕಾಲಲ್ಲಿ ಹಳೆ ಬೆಟ್ರಿ ಉಪಯೋಗದ ವಿವರಣೆ ಲಾಯಕಾಯಿದು. ಬೆಟ್ರಿಯ ಪ್ಲಾಸ್ಟಿಕ್ಕಿನ ಕೆಂಪು ಕಣ್ಣು ಮಾಡಿ ಮಕ್ಕಳ ಹೆದರುಸುತ್ತದು, ಅದರ ಅಂಟುಸಿ ಚಿತ್ರ ಮಾಡುತ್ತದು ಎಲ್ಲವೂ ನೆಂಪಾತು. ಸಗಣ ಬಳುಗುತ್ತ ಮನಗೊ ಈಗಳೂ ಇದ್ದೊ ?

  3. ನಮ್ಮ ಊರಿಲ್ಲಿ ಮೆಡಿಕಲ್ ವೇಸ್ಟ್ ಗಳ ಹೇ೦ಗೆ ಪರಿಷ್ಕರಿಸುತ್ತವು? ಪ್ರಧಾನವಾಗಿ ಇ೦ಜೆಕ್ಷನ್ ಕೊಟ್ತ ಸೂಜಿಗಳ ಹೇ೦ಗೆ dispose ಮಾಡುತ್ತವು? ಆ ಸೂಜಿಗಳ ಕನಿಷ್ಠ ಪಕ್ಷ ಉಪಯೋಗಿಸಿದ ಕೂಡ್ಳೇ ಎರಡಾಗಿ ತು೦ಡಾದರೂ ಮಾಡಿಕ್ಕಿಯೇ ಇಡ್ಕೆಕು ಹೇಳಿ ಎನ್ನ ಅಭಿಪ್ರಾಯ. ಇತ್ತೀಚೆಗೆ ಹೀ೦ಗೆ ಉಪಯೋಗಿಸಿ ಇಡ್ಕಿದ ಸಿರಿ೦ಜುಗಳ ಗುಜರಿ ಹೆರ್ಕುತ್ತವು ತೆಕ್ಕೊ೦ಡು ಹೋಗಿ ಅನಧಿಕ್ತತವಾಗಿ ಪುನಃ ಪ್ಯಾಕ್ ಮಾಡುತ್ತವಕ್ಕೆ ಮಾರ್ತ ದ೦ಧೆಯ ಹಿಡುದವು ಹೇಳಿ ಟಿ ವಿ ಲಿ ನೋಡಿದೆ.
    ನಾವು ಎ ಸಿ, ಫ್ರಿಡ್ಜು ಇತ್ಯಾದಿಗಳ ಉಪಯೋಗ ಎಷ್ಟು ಜಾಸ್ತಿ ಮಾಡಿತ್ತೋ ಅಷ್ಟುದೆ ವಾತಾವರಣ ಹಾಳಪ್ಪದು ಜಾಸ್ತಿಯೇ. ಎ ಸಿ ಉಪಯೋಗಿಸಿದರೆ ಆ ಕೋಣೆಯೊಳ ಉಷ್ಣ ಕಮ್ಮಿ ಅಕ್ಕಾಯ್ಕು, ಆದರೆ ಅದು ಒಟ್ಟಾರೆ ವಾತಾವರಣದ ಉಷ್ಟತೆ ಜಾಸ್ತಿ ಮಾಡುತ್ತು. ಅದು ಹಾಳಾದ ಮತ್ತೆ ಅ೦ತೂ ಕೇಳುವದೇ ಬೇಡ. ಇ೦ತಹ ವಸ್ತುಗಳ, ಎಲೆಕ್ಟ್ರೋನಿಕ್ ವಸ್ತುಗಳ ಎಲ್ಲ ಉಪಯೋಗಿಸುವಗ ಇದು ಉಪಯೋಗಶೂನ್ಯ ಆದಮತ್ತೆ ಅದರ ವಿಲೇವಾರಿ ಮಾಡ್ಳೆ ಇಪ್ಪ ದಾರಿ ಕೂಡ ಬೇಕು. ಅಲ್ಲದ್ರೆ ನಮ್ಮ ಹಾ೦ಗೆ ಅಧಿಕ ಜನಸ೦ಖ್ಯೆ ಇಪ್ಪ, ಆರ್ಥಿಕ ಪರಿಸ್ಥಿತಿ ಶೀಘ್ರವಾಗಿ ಸುಧಾರಿಸುತ್ತಾ ಇಪ್ಪ ದೇಶಲ್ಲಿ ಈ ಸಮಸ್ಯೆ ಬೃಹದಾಕಾರ ಪಡೆಕ್ಕೊ೦ಗು. ಅದು ಸಾಲದ್ದೆ ಲೋಕದ ದೊಡ್ಡಣ್ಣ೦ಗೊ ಹೇಳಿ ಹೇಳಿಗೋಳ್ತ ಮು೦ದುವರಿದ ದೇಶ೦ಗೊ ಕೂಡ ಅವರ ಕಸದ ಬುಟ್ಟಿಯಾಗಿ ನಮ್ಮ ದೇಶವ ಉಪಯೋಗಿಸಲೆ ಬಿಟ್ರೆ ಪೂರ್ತಿ ಆತು..

  4. ನಿ೦ಗೊ ಹೇಳಿದ ವಿಷಯ ಲೋಕದ ಹಲವು ದೇಶ೦ಗಳಲ್ಲಿ ಗ೦ಭೀರವಾಗಿ ಆಲೋಚನೆ ಮಾಡ್ಳೆ ಸುರುಮಾಡಿ ಎಷ್ಟೋ ವರ್ಷ ಆತು. ಮು೦ದುವರಿದ ದೇಶ ಹೇಳಿ ದೆನಿಯೋಳಿಸಿಗೋಳ್ತ ಹಲವು ದೇಶ೦ಗಳ ತ್ಯಾಜ್ಯದ ಪ್ರಮಾಣ ಅಪಾಯಕಾರಿ ಮಟ್ಟಲ್ಲಿದ್ದು. ಅದರ ಹೇ೦ಗೆ ವಿಲೇವಾರಿ ಮಾಡುವದು ಹೇಳುವದಕ್ಕೆ ಈಗ ಹಲವು ವಿಧಾನ೦ಗಳ ಕ೦ಡು ಹುಡುಕ್ಕಿದ್ದವು. ಆದರುದೆ ಮು೦ದುವರಿದ ದೇಶ೦ಗೊ ಅಪಾಯಕಾರಿ ತ್ಯಾಜ್ಯ೦ಗಳ ಸಮುದ್ರಲ್ಲಿಯೋ, ಮೂರನೇ ಜಗತ್ತಿನ ದೇಶ೦ಗಳಲ್ಲಿಯೋ ಇಡ್ಕುವದರ ಉದಾಹರಣೆಗಳೂ ಬೇಕಾಷ್ಟಿದ್ದು. ಹೆರ ದೇಶ೦ದ ಬಾರದ್ರುದೆ, ನಮ್ಮ ಊರಿಲ್ಲೇ ಆವುತ್ತ ವೇಸ್ಟುಗಳ ವಿಲೇವಾರಿ ಮಾಡ್ಳೆ ನವಗೆ ಎಷ್ಟು ಸೌಕರ್ಯ ಇದ್ದು? ನಮ್ಮ ಹಳ್ಳಿಗಳಲ್ಲಿ ಬತ್ತ ಪ್ಲಾಸ್ಟಿಕ್ ವೇಸ್ಟುಗಳ ವಿಲೇವಾರಿ ಮಾಡ್ತ ವ್ಯವಸ್ಥೆ ಎ೦ತರ? ಪ್ಲಾಸ್ಟಿಕ್ ಬಿಡಿ, ಅಲ್ಲದ್ದ ವೇಸ್ಟುಗಳ ಕತೆ ಎ೦ತರ? ನಾವು ಅದರ ಒ೦ದೋ ಯಾವುದಾರು ಪೊಟ್ತು ಬಾವಿಗೋ, ತೋಡಿ೦ಗೋ, ಖಾಲಿ ಜಾಗೆಗೋ ಇಡ್ಕುವದು, ಅಲ್ಲದ್ರೆ ಹೊತ್ತುಸುವದು. ನಮ್ಮ ಊರಿಲ್ಲಿ ಉ೦ಟಾವ್ತ ವೇಸ್ಟಿನ ಪ್ರಮಾಣ comparitively ಕಮ್ಮಿ ಆದ ಕಾರಣವುದೆ, ನವಗೆ ಅದರಿ೦ದಾಗಿ ಆವ್ತ ದುಷ್ಪ್ರರಿಣಾಮ೦ಗಳ ಬಗ್ಗೆ ಜಾಸ್ತಿ ಗೊ೦ತಿಲ್ಲದ್ದೆ ಇಪ್ಪ ಕಾರಣವುದೆ ಆರುದೆ ಅದರ ಬಗ್ಗೆ ತಲೆಬೆಶಿ ಮಾಡುವದು ಕಮ್ಮಿ

  5. ಪ್ರಚಲಿತ ಸಮಸ್ಯೆ ಬಗ್ಗೆ ಸಕಾಲಿಕ ಲೇಖನ. ಧನ್ಯವಾದಂಗೊ.
    e-waste ನ ನಿರ್ವಹಣೆ ಬಗ್ಗೆ ಇನ್ನೂ ಸರಿಯಾದ ಮಾಹಿತಿ ಎಲ್ಲಿಯೂ ಇಲ್ಲೆ. ಮುಂದುವರುದ ದೇಶ ಹೇಳಿಗೊಂಬವು ಅದರ ಬೇರೆ ದೇಶಕ್ಕೆ ರವಾನಿಸುತ್ತವಷ್ಟೆ.
    ಕೆಲವು ವರ್ಷ ಹಿಂದೆ, ಸರ್ಕಿಟ್ ಬೋರ್ಡ್ ಹಾಳಾದರೆ, ಅದರಲ್ಲಿ ಹಾಳಾದ components ಗಳ ಬದಲಿಸಿಂಡು ಇತ್ತಿದ್ದವು. ಈಗ ಹಾಂಗಲ್ಲ. ಇಡೀ ಬೋರ್ಡನ್ನೇ ತೆಗದು ಬೇರೆ ಹಾಕುವದು.
    ಕೆಲವು ಜೆನಂಗೊಕ್ಕೆ ಹೊಸ ಮೋಡೆಲ್ ಬಂದ ಹಾಂಗೆ ಹಳತ್ತರ ಬದಲುಸುವ ಅಭ್ಯಾಸ. ಇದೆಲ್ಲಾ e-waste ಜಾಸ್ತಿ ಆವ್ತ ಹಾಂಗೆ ಮಾಡುತ್ತು.
    ಈಗಲೇ ಜಾಗ್ರತೆ ಮಾಡದ್ದರೆ, ಇದರಲ್ಲಿ ಇಪ್ಪ ಲೋಹದ ಅಂಶಂಗೊ ಮಣ್ಣಿಂಗೆ ಸೇರಿ, ಮುಂದೆ ನವಗೆ ಕುಡಿವಲೆ ಶುದ್ಧ ನೀರು ಕೂಡಾ ಸಿಕ್ಕ.

  6. ಕೆದೂರು ಡಾಗುಟ್ರು ಬರದ ಲೇಖನ ಭಾರೀ ಲಾಯಿಕ ಆಯಿದು.ವಿಜ್ಞಾನ ಮುಂದೆ ಹೋದ ಹಾಂಗೆ ಪ್ಲಾಸ್ಟಿಕಿನ ಉಪಯೋಗ ಹೆಚ್ಚಾವುತ್ತಾ ಹೋತು.ಹುಗುದರೂ ನಾಶ ಆಗದ್ದ ಮಹಾಮಾರಿ ಅಲ್ಲದೋ ಅದು? ಅಂದು ಒಸಾಮನ ಜೆನ೦ಗೋ ಅಮೆರಿಕಾಲ್ಲಿ ಎರಡು ವಿಮಾನಲ್ಲಿ ದೊಡಾ ಕಟ್ಟೋಣ ಹೊಡಿ ಮಾಡಿದವಿಲ್ಲೆಯೋ?ಆ ತ್ಯಾಜ್ಯ ಕಬ್ಬಿಣ ಎಲ್ಲಾ ನಮ್ಮ ದೇಶಕ್ಕೆ ತಂದು ಸೋರುಗಿದವು.ಮದ್ರಾಸು ಬಂದರಿಲಿ ಕೆಲವು ಸಮಯ ಇತ್ತಡಾ.ಈಗ ಕರಗುಸಿ ಹೊಸ ಸರಳು ತ್ತಯಾರು ಮಾಡಿರೆಕ್ಕು.

    ಕಡೆಯಾಣ ಸೂಜಿಮದ್ದು ನೆ೦ಪು ಮಡುಗೆಕ್ಕಾದ್ದು.

  7. ಕೆದೂರು ಡಾಕ್ಟ್ರು ಹೇಳಿದ ಸಂಗತಿ ನಿಜವಾಗಿಯೂ ಆಲೋಚನೆ ಮಾಡೆಕ್ಕಾದ್ದದೇ. ದಿನಂದ ದಿನಕ್ಕೆ ಹೊಸ ಹೊಸ ಮೋಡೆಲ್ ಮೊಬೈಲ್, ಕೆಮರಾ, ಕಾರ್, ಬೈಕ್ ಹೇಳಿ ಹೊಸತ್ತು ಹೊಸತ್ತು ಬತ್ತಾ ಇಪ್ಪಗ ಹಳತ್ತರ ಎಂತ ಮಾಡ್ತದು ಹೇಳುವ ವಿಚಾರ ಸಂಶೋಧಕರು ಹೇಳ್ತವೇ ಇಲ್ಲೆ. (ಅಡಕ್ಕೆ ಆದರೆ ಹಳತ್ತಕ್ಕೆ ಕಟ್ಟಿ ಮಡುಗಿರೆ ರೇಟು ಹೆಚ್ಚು ಹೇಳಿ ನಮ್ಮ ಬೋಸನೋ, ಪೆಂಗನೋ ಒಪ್ಪ ಕೊಡುಗು, ಅದು ವಿಷಯ ಬೇರೆ)…

    ಎನ್ನತ್ರೆ Canon ಕಂಪೆನಿಯ EOS 450D ಹೇಳ್ತ ಒಂದು ದೊಡ್ಡ ಕೆಮರಾ ಇದ್ದು. ಈಗ ಅದು ಪೂರ ಹಾಳಾಯಿದು. ನಾಲ್ಕೈದು ಜನ ರಿಪೇರಿಯವರತ್ರಂಗೆ ಹೋಗಿ ಬಂತು. ಎನಗೆ ಒಟ್ಟಾರೆ ‘ಬ್ರಹ್ಮಕಪಾಲ’ದ ಹಾಂಗೆ ಆಯಿದು. ಈಗಲೂ ಅದು ಸತ್ತದು ಹಾಂಗೇ ಇದ್ದು. ಪೈಸೆ ಕೊಟ್ಟು ತೆಗದ ಸಾಮಾನು. ಬರೇ ಕಮ್ಮಿಗೆ ಇಡ್ಕಲೆ ಮನಸ್ಸು ಬತ್ತಿಲ್ಲೆ. ಎಂತ ಮಾಡುದು? ಆರಾದರೂ ಒಂದು ಪರಿಹಾರ ತಿಳಿಶುವಿರಾ?

  8. ತುಂಬಾ ಖೊಷಿ ಆತು,ಕೆದೂರು ಡಾಕ್ಟ್ರು ಪುನಾ ಬೈಲಿಂಗೆ ಬಂದಪ್ಪಗ.ಆದರೆ ತುಂಬಾ ಸೀರಿಯೆಸ್ ಆದ ವಿಷಯ ಹೇಳಿದ್ದವು,ನಾವೆಲ್ಲ ಯೇಚನೆ ಮಾಡೇಕಾದ್ಸೆ..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×