Oppanna.com

ಗರುಡ ಪುರಾಣ – ಅಧ್ಯಾಯ 01 – ಭಾಗ 02

ಬರದೋರು :   ಚೆನ್ನೈ ಬಾವ°    on   18/07/2013    8 ಒಪ್ಪಂಗೊ

ಚೆನ್ನೈ ಬಾವ°

ಕಳುದ ವಾರದ ಭಾಗಲ್ಲಿ ಗರುಡ° ಶ್ರೀಮಹಾವಿಷ್ಣುವಿನತ್ರೆ ಪಾಪಿಗೊ ಹೋಪ ಯಮಮಾರ್ಗದ ಬಗ್ಗೆ ವಿವರುಸೆಕು ಹೇಳಿ ಕೇಳಿಗೊಂಡ°. ಅದಕ್ಕೆ ಭಗವಂತ° ಎಂತ ಹೇಳಿದ° ನೋಡುವೋ° –
 
 ಗರುಡ ಪುರಾಣ – ಅಧ್ಯಾಯ೦ 1 – ಭಾಗ ೦2images
ಶ್ರೀ ಭಗವಾನುವಾಚ-
ವಕ್ಷ್ಯೇಹಂ ಶ್ರುಣು ಪಕ್ಷೀಂದ್ರ ಯಮಮಾರ್ಗಂ ಚ ಯೇನ ಯೇ ।

ನರಕೇ ಪಾಪಿನೋ ಯಾಂತಿ ಶೃಣ್ವತಾಮಪಿ ಭೀತಿದಮ್ ॥೧೩॥
ಭಗವಂತ° ಹೇಳಿದ°-
ಏ ಪಕ್ಷಿರಾಜನೇ!, ಯಾವ ಮಾರ್ಗಲ್ಲಿ ಪಾಪಿಗೊ ನರಕದ ಯಾತ್ರೆ ಮಾಡ್ತವೋ, ಯಾವುದರ ಕೇಳಿದ ಮಾತ್ರಕ್ಕೆ ಜನಂಗೊ ಹೆದರಿಗೊಳ್ತವೋ ಅಂಥ ಯಮಮಾರ್ಗದ ಕುರಿತಾಗಿ ಹೇಳ್ತೆ, ಕೇಳು-
(ಭಗವಂತ° ಹೇಳಿರೆ – ಭ=ಸೃಷ್ಟಿ, ಗ=ಸಂರಕ್ಷಣೆ, ವ=ಪರಿವರ್ತನೆ. ಈ ಮೂರರನ್ನೂ ಮಾಡ್ಳೆ ಸಮರ್ಥನಾಗಿಪ್ಪಂವ = ಭಗವಂತ°.)
ಯೇಹಿ ಪಾಪರತಾಸ್ತಾರ್ಕ್ಷ್ಯ ದಯಾಧರ್ಮವಿವರ್ಜಿತಾಃ ।
ದುಷ್ಟ ಸಂಗಾಶ್ಚ ಸಚ್ಛಾಸ್ತ್ರ ಸತ್ಸಂಗತಿಪರಾಙ್ಮುಖಾಃ ॥೧೪॥
ಆತ್ಮಸಂಭಾವಿತಾಃ ಸ್ತಬ್ಧಾ ಧನಮಾನಮದಾನ್ವಿತಾಃ ॥
ಆಸುರಂ ಭಾವಮಾಪನ್ನಾ ದೈವೀಸಂಪದ್ವಿವರ್ಜಿತಾಃ ॥೧೫॥
ಅನೇಕಚಿತ್ತ ವಿಭ್ರಾಂತಾ ಮೋಹಜಾಲಸಮಾವೃತಾಃ ।
ಪ್ರಸಕ್ತಾಃ ಕಾಮಭೋಗೇಷು ಪತಂತಿ ನರಕೇsಶುಚೌ॥೧೬॥
ಆರು ಪಾಪಕಾರ್ಯಂಗಳಲ್ಲಿ ಇಚ್ಛೆಯುಳ್ಳವರಾಗಿದ್ದವೋ, ಆರು ದಯೆ ಮತ್ತೆ ಧರ್ಮವ ಬಿಡ್ತವೋ, ಆರು ದುಷ್ಟರ ಸಹವಾಸಲ್ಲಿರುತ್ತವೋ, ಆರು ಒಳ್ಳೆಯ ಶಾಸ್ತ್ರಂಗಳಿಂದಲೂ, ಒಳ್ಳೆವರ ಸಹವಾಸಂದಲೂ ಮಿಮುಖರಾಗಿರುತ್ತವೋ,
ಆರು ದುರಹಂಕಾರಿಗಳೋ, ಆರು ಕಠಿಣ ಹೃದಯರೋ, ಆರು ಧನಮಾನಂಗಳ ಗರ್ವಂದ ಕೂಡಿಗೊಂಡಿದ್ದವೋ, ಆರು ಆಸುರೀ ಭಾವವ ಹೊಂದಿಗೊಂಡಿದ್ದವೋ, ಆರು ದೈವೀ ಸಂಪತ್ತಿನ ದೂರ ಮಾಡಿಗೊಂಡಿದ್ದವೋ,
ಆರ ಮನಸ್ಸು ಮೋಹದ ಬಲೆಲಿ ಸಿಕ್ಕಿ ಅನೇಕ ರೀತಿಲಿ ಭ್ರಾಂತಿಗೊಂಡಿರುತ್ತೋ, ಆರು ಕಾಮಭೋಗಲ್ಲಿ ಆಸಕ್ತರಾಗಿದ್ದವೋ ಅವೆಲ್ಲರೂ ಕಲ್ಮಶಪೂರಿತವಾದ ನರಕಲ್ಲಿ ಬೀಳುತ್ತವು.
ಯೇ ನರಾ ಜ್ಞಾನಶೀಲಾಶ್ಚ ತೇ ಯಾಂತಿ ಪರಮಾಂ ಗತಿಮ್ ।
ಪಾಪಶೀಲಾ ನರಾ ಯಾಂತಿ ದುಃಖೇನ ಯಮಯಾತನಾಮ್ ॥೧೭॥
ಯಾವ ಮನುಷ್ಯರು ಜ್ಞಾನಶೀಲರಾವ್ತವೋ, ಅವ್ವು ಉತ್ತಮ ಗತಿಯ ಪಡೆತ್ತವು. ಪಾಪಶೀಲರಾದೋರು ದುಃಖಂದ ಯಮಯಾತನೆಯ ಅನುಭವುಸುತ್ತವು.
ಪಾಪಿನಾಮೈಹಿಕಂ ದುಃಖಂ ಯಥಾ ಭವತಿ ತಚ್ಛೃಣು ।
ತತಸ್ತೇ ಮರಣಂ ಪ್ರಾಪ್ಯ ಯಥಾ ಗಚ್ಛಂತಿ ಯಾತನಾಃ ॥೧೮॥
ಪಾಪಿಗೊಕ್ಕೆ ಈ ಲೋಕದ ದುಃಖಂಗೊ ಹೇಂಗೆ ಉಂಟಾವ್ತು, ಮರಣಹೊಂದಿದ ಮತ್ತೆ ಯಾತನೆಂಗಳ ಅವ್ವು ಹೇಂಗೆ ಪಡೆತ್ತವು ಹೇಳ್ವದರನ್ನೂ ಕೇಳು.
ಸುಕೃತಂ ದುಷ್ಕೃತಂ ವಾಪಿ ಭುಕ್ತ್ವಾಪೂರ್ವಂ ಯಥಾರ್ಜಿತಮ್ ।
ಕರ್ಮಯೋಗಾತ್ತದಾ ತಸ್ಯ ಕಶ್ಚಿದ್ವ್ಯಾಧಿಃ ಪ್ರಜಾಯತೇ ॥೧೯॥
ಹಿಂದೆ ಸಂಪಾದಿಸಿದ ಸತ್ಕರ್ಮಂಗಳ ಮತ್ತೆ ದುಷ್ಕರ್ಮಂಗಳ ಫಲವನ್ನೂ ಕರ್ಮನಿಯಮಾನುಸಾರವಾಗಿ ಅನುಭವಿಸಿಗೊಂಡಿಪ್ಪಗ ಏವುದಾರು ಒಂದು ರೋಗ ಬತ್ತು.
ಆಧಿವ್ಯಾಧಿಸಮಾಯುಕ್ತಂ ಜೀವಿತಾಶಾಸಮುತ್ಸುಕಮ್ ।
ಕಾಲೋ ಬಲೀಯಾನಹಿವದಜ್ಞಾತಃ ಪ್ರತಿಪದ್ಯತೇ ॥೨೦॥
ಮಾನಸಿಕ ಮತ್ತೆ ದೈಹಿಕ ಕಾಯಿಲೆಂದ ಕೂಡಿದ್ದರೂ ಬದುಕ್ಕೆಕು ಹೇಳ್ವ ಆಸೆಂದ ಉತ್ಸುಕನಾಗಿಪ್ಪವವನತ್ರಂಗೆ  ಅವಂಗೆ ಗೊಂತಾಗದ್ದ ಹಾಂಗೆ ಬಲಶಾಲಿಯಾದ ಕಾಲ° ಹಾವಿನ ಹಾಂಗೆ ಅವನ ಮೇಲೆ ಬೀಳುತ್ತ°.
ತತ್ರಾಪ್ಯಜಾತನಿರ್ವೇದೋ ಭ್ರಿಯಮಾಣಃ ಸ್ವಯಂಭೃತೈಃ ।
ಜರಯೋಪಾತ್ತವೈರೂಪ್ಯೋ ಮರಣಾಭಿಮುಖೋ ಗೃಹೇ ॥೨೧॥
ಜೀವನಲ್ಲಿ ಇನ್ನೂ ತಾತ್ಸಾರ ಹೊಂದದ್ದೆ ತಾನು ಪೋಷಿಸದವರಿಂದಲೇ ಸಾಕಲ್ಪಟ್ಟುಗೊಂಡು ಮುದಿತನಂದ ವಿರೂಪನಾಗಿ ಮರಣಾಭಿಮುಖನಾಗಿ ಮನೇಲಿ ಇರುತ್ತ°.
ಆಸ್ತೇsವಮತ್ಯೋಪನ್ಯಸ್ತಂ ಗೃಹಪಾಲ ಇವಾಹರನ್ ।
ಆಮಯಾವ್ಯಪ್ರದೀಪ್ತಾಗ್ನಿರಲ್ಪಾಹಾರೋsಲ್ಪಚೇಷ್ಟಿತಃ ॥೨೨॥
ತನ್ನ ಮನೆಯೋರು ತಿರಸ್ಕಾರಭಾವಂದ ಹಾಕಿದ ಅಶನವ ನಾಯಿಯ ಹಾಂಗೆ ತಿನ್ನುತ್ತ°. ರೋಗಂದ ಜಠರಾಗ್ನಿ ದುರ್ಬಲವಾಗಿ ಅಲ್ಪಾಹಾರವ ತಿಂದುಗೊಂಡು ನಡವಲೂ ಶಕ್ತಿಯಿಲ್ಲದ್ದೋನಾವ್ತ°.
ವಾಯುನೋತ್ಕ್ರಮತೋತ್ತಾರಃ ಕಫಸಂರುದ್ಧನಾಡಿಕಃ ।
ಕಾಸಶ್ವಾಸಕೃತಾಯಾಸಃ ಕಂಠೇ ಘುರಘುರಾಯತೇ ॥೨೩॥
ಉಸುಲು, ಕಫ ತುಂಬಿದ ಶ್ವಾಸನಾಳಂದ ಹೆರಬಾರದ್ದೆ, ಕಣ್ಣಗುಡ್ಡೆ ಮೇಗಂತಾಗಿ ತಿರುಗಿ, ಸೆಮ್ಮ ದಮ್ಮುಗಳಿಂದ ಆಯಾಸಪಟ್ಟುಗೊಂಡಿಪ್ಪಗ ಅವನ ಗಂಟಲ್ಲಿಲಿ ಘುರುಘುರು ಶಬ್ದ ಬತ್ತು.
ಶಯಾನಃ ಪರಿಶೋಚದ್ಭಿಃ ಪರಿವೀತಃ ಸ್ವಬಂಧುಭಿಃ ।
ವಾಚ್ಯಮಾನೋsಪಿ ನ ಬ್ರೂತೇ ಕಾಲಪಾಶವಶಂಗತಃ ॥೨೪॥
ದುಃಖಪಟ್ಟುಗೊಂಡಿಪ್ಪ ತನ್ನ ನೆಂಟ್ರುಗಳಿಂದ ಸುತ್ತುವರ್ಕೊಂಡು ಹಾಸಿಗೆಲಿ ಮನಿಕ್ಕೊಂಡಿಪ್ಪ ಅಂವ° ಕಾಲಪಾಶಕ್ಕೆ ಅಧೀನವಾಗಿ ಮಾತಾಡಿಸಿರೂ ಮಾತಾಡ°.
ಏವಂ ಕುಟುಂಬಭರಣೇ ವ್ಯಾಪೃತಾತ್ಮಾsಜಿತೇಂದ್ರಿಯಃ ।
ಮ್ರಿಯತೇ ರುದತಾಂ ಸ್ವಾನಾಮುರುವೇದನಯಾsಸ್ತಧೀಃ ॥೨೫॥
ಈ ರೀತಿ ತನ್ನ ಕುಟುಂಬದ ಪೋಷಣೆಲಿಯೇ ಮನಸ್ಸಿಪ್ಪಂವನೂ, ಇಂದ್ರಿಯಂಗಳ ಗೆಲ್ಲದ್ದೆ ಇಪ್ಪವನೂ ಆದ ಅಂವ°, ಬಂಧುಗೊ ರೋದಿಸಿಗೊಂಡಿಪ್ಪಗ, ಒಳ್ಳೆತ ಬೇನೆಂದ ಮೂರ್ಛಿತನಾಗಿ ಮರಣ ಹೊಂದುತ್ತ°.
ತಸ್ಮಿನ್ನಂತಕ್ಷಣೇ ತಾರ್ಕ್ಷ್ಯ ದೈವೀ ದೃಷ್ಟಿಃ ಪ್ರಜಾಯತೇ ।
ಏಕೀಭೂತಂ ಜಗತ್ಸರ್ವಂ ನ ಕಿಂಚಿದ್ವಕ್ತುಮೀಹತೇ ॥೨೬॥
ಆ ಅಂತಿಮ ಕ್ಷಣಲ್ಲಿ ಅವಂಗೆ ದೈವೀದೃಷ್ಟಿಯು ಬತ್ತು. ಅದರಿಂದ ಅಂವ ಇಡೀ ಜಗತ್ತಿನ (ಇಹಲೋಕ, ಪರಲೋಕ) ಏಕೀಭೂತವಾಗಿ ನೋಡುತ್ತ°. ಆದರೆ ರಜಾರು ಬಾಯಿಬಿಟ್ಟು ಹೇಳ°.
ವಿಕಲೇಂದ್ರಿಯ ಸಂಘಾತೇ ಚೈತನ್ಯೇ ಜಡತಾಂ ಗತೇ ।
ಪ್ರಚಲಂತಿ ತತಃ ಪ್ರಾಣಾ ಯಾಮ್ಯೈರ್ನಿಕಟವರ್ತಿಭಿಃ ॥೨೭॥
ಇಂದ್ರಿಯಂಗಳ ವಿಕಲತೆಂದ ಚೈತನ್ಯವು ಜಡವಾವ್ತು. ಯಮದೂತರು ಹತ್ರೆ ಬತ್ತವು. ಅಷ್ಟಪ್ಪಗ ಪ್ರಾಣ ಹೋವ್ತು.
ಸ್ವಸ್ಥಾನಾಚ್ಚಲಿತೇ ಶ್ವಾಸೇ ಕಲ್ಪಾಖ್ಯೋ ಹ್ಯಾತುರಕ್ಷಣಃ ।
ಶತವೃಶ್ಚಿಕದಷ್ಟಸ್ಯ ಯಾ ಪೀಡಾ ಸಾನುಭೂಯತೇ ॥೨೮॥
ಸ್ವಸ್ಥಾನಂದ ಶ್ವಾಸವು ಹೆರಡುವಾಗ ಮರಣಕಾಲದ ಒಂದು ಕ್ಷಣ ಒಂದು ಕಲ್ಪದಾಂಗೆ ತೋರುತ್ತು. ಅಷ್ಟೊತ್ತಿಂಗೆ ನೂರು ಚೇಳು ಕಚ್ಚಿದಷ್ಟು ಬೇನೆಯ ಅಂವ ಅನುಭವುಸುತ್ತ°.
ಫೇನಮುದ್ಗಿರತೇ ಸೋsಥ ಮುಖಂ ಲಾಲಾಕುಲಂ ಭವೇತ್ ।
ಅಧೋದ್ವಾರೇಣ ಗಚ್ಛಂತಿ ಪಾಪಿನಾಂ ಪ್ರಾಣವಾಯವಃ ॥೨೯॥
ನೊರೆ ಉಕ್ಕಿ ಬಂದು ಬಾಯಿ ಇಡೀ ಜೊಲ್ಲಿಂದ ತುಂಬಿರುತ್ತು. ಪಾಪಿಯ ಪ್ರಾಣವಾಯು ಕೆಳಾಣ ದ್ವಾರಂದ ಹೆರಹೋವ್ತು.
 
ಗದ್ಯರೂಪ :
ಭಗವಂತನಾದ ಮಹಾವಿಷ್ಣು ಹೇಳಿದ° – ಏ ಪಕ್ಷೀಂದ್ರನೇ!, ಯಾವ ಮಾರ್ಗಲ್ಲಿ ಪಾಪಿಗೊ ನರಕದ ಯಾತ್ರೆ ಮಾಡ್ತವೋ, ಯಾವುದರ ಕೇಳಿದ ಮಾತ್ರಕ್ಕೆ ಜನಂಗೊ ಹೆದರಿಗೊಳ್ತವೋ ಅಂಥ ಯಮಮಾರ್ಗದ ಕುರಿತಾಗಿ ಹೇಳ್ತೆ, ಕೇಳು.-
ಏ ವೈನತೇಯನೇ, ಸದಾ ಪಾಪಪರಾಯಣರಾದ, ದಯೆ ಮತ್ತೆ ಧರ್ಮರಹಿತ, ದುಷ್ಟ ಜನರುಗಳ ಸಂಗಲ್ಲಿಪ್ಪ, ಸತ್ಸಂಗ ಮತ್ತೆ ಸತ್ ಶಾಸ್ತ್ರಂದ ವಿಮುಖರಾದ ಸ್ವಯಂ ಪ್ರತಿಷ್ಠೆಂದ ಮೆರವ, ಅಹಂಕಾರಿಯಾದ, ಪೈಸೆ ಮತ್ತೆ ಗೌರವದ ಮದಂದ ಉನ್ಮತ್ತನಾದ, ಆಸುರೀ ಶಕ್ತಿಗಳ ಹೊಂದಿಪ್ಪ ಮತ್ತು ದೈವೀ ಸಂಪತ್ತಿಂದ ರಹಿತನಾಗಿಪ್ಪ, ಅನೇಕವಿಷಯಂಗಳಲ್ಲಿ ಆಸಕ್ತಿಂದ ಭ್ರಾಂತನಾದ, ಮೋಹದ ಬಲೆಲಿ ಸಿಲುಕಿಪ್ಪ ಹಾಂಗೂ ಕಾಮ-ಭೋಗಲ್ಲಿ ನಿರತನಾದ ವ್ಯಕ್ತಿಗೊ ಅಪವಿತ್ರ ನರಕಲ್ಲಿ ಬೀಳುತ್ತವು . ಆರು ಜ್ಞಾನಶೀಲರಾಗಿರುತ್ತವೋ ಅವ್ವು ಉತ್ತಮ ಗತಿಯ ಹೊಂದುತ್ತವು. ಪಾಪಿ ಮನುಷ್ಯ° ದುಃಖಪೂರಿತ ಯಮಯಾತನೆಯ ಹೊಂದುತ್ತ°.
ಪಾಪಿಗೊಕ್ಕೆ ಈ ಲೋಕಲ್ಲಿ ಹೇಂಗೆ ದುಃಖ ಪ್ರಾಪ್ತಿಯಾವ್ತು ಮತ್ತೆ ಮರಣದ ನಂತ್ರ ಯಾವ ರೀತಿಲಿ ಯಮಯಾತನೆ ಪ್ರಾಪ್ತಿಯಾವ್ತು ಹೇಳ್ವದರೆ ಮುಂದೆ ಹೇಳ್ತೆ ಕೇಳು – 
ಪೂರ್ವಕರ್ಮಾರ್ಜಿತ (ಪೂರ್ವ ಜನ್ಮಾರ್ಜಿತ)  ಪುಣ್ಯ ಮತ್ತೆ ಪಾಪಂಗಳ ಫಲಂಗಳ ಅನುಭವಿಸಿಗೊಂಡಿಪ್ಪಗ ಒಂದು ಹಂತಲ್ಲಿ ಶರೀರಕ್ಕೆ ಏವುದಾರೊಂದು ರೋಗ ಉಂಟಾವ್ತು. ಆಧಿ (ಮಾನಸಿಕ ರೋಗ) ಮತ್ತೆ ವ್ಯಾಧಿಂದ (ದೈಹಿಕ ರೋಗ) ಮುಕ್ತ ಜೀವನ ಧಾರಣೆ ಮಾಡ್ವ ಆಸೆಂದ ಉತ್ಸುಕನಾಗಿಪ್ಪ ಆ ಮನುಷ್ಯಂಗೆ (ಜೀವಿಗೆ) ಗೊಂತಾಗದ್ದಾಂಗೆ ಸರ್ಪದಾಂಗೆ ಬಲಿಷ್ಠನಾಗಿಪ್ಪ ಮೃತ್ಯು (ಕಾಲ°) ಅವನ ಹತ್ರಂಗೆ ಬಂದು ಎರಗುತ್ತ°. ಆ ಮೃತ್ಯುವಿನ ಸಂಪ್ರಾಪ್ತಿಂದಲೂ ಕೂಡ ಅವಂಗೆ ವೈರಾಗ್ಯ ಹುಟ್ಟುತ್ತಿಲ್ಲೆ. ಜೀವಿ ಆರ ಪಾಲನೆ ಪೋಷಣೆ ಮಾಡಿದ್ದನೋ (ಚಾಕ್ರಿ ಮಾಡಿ ಬೆಳೆಶಿದ್ದನೋ) ಅವರಿಂದಲೇ (ಮನೆಯವರಿಂದಲೇ) ಪಾಲನೆ ಪೋಷಣೆಗೆ ತುತ್ತಾವ್ತ°. ವೃದ್ಧಾವಸ್ಥೆಂದ ರೂಪವಿಕಾರವಾಗಿ (ವಿಕೃತರೂಪಧಾರಿಯಾಗಿ) ಮರಣಾಭಿಮುಖವಾಗಿಪ್ಪ ಆ ಜೀವಿ ಅವಮಾನಪೂರ್ವಕವಾಗಿ ಕೊಡುವ ಅಶನವ ನಾಯಿಯಾಂಗೆ ತಿಂದೊಂಡು ದಿನ ದೂಡುತ್ತ°. ಅಂವ ರೋಗಿಯಾಗಿ ಅಜೀರ್ಣ ಪೀಡಿತನಾವ್ತ°. ಅವನ ಉಂಬ ತಿಂಬ ಹಾಂಗೂ ಇತರ ಚಟುವಟಿಕೆಗಳ ಶಕ್ತಿ ಕಡಮ್ಮೆ ಆವ್ತು. ಪ್ರಾಣವಾಯು ಹೆರಹೋಪಗ ಕಣ್ಣು ಮೇಗಂತಾಗಿ ಕೆಳಂತಾಗಿ ಆವ್ತು. ನಾಡಿಗೊ ಕಫದ ಕಾರಣಂದ ಸ್ಥಗಿತಗೊಳ್ಳುತ್ತು. ಸೆಮ್ಮ ಸುರುವಾವ್ತು. ಉಸಿರೆಳವಲೂ ಕಷ್ಟಪಡುತ್ತ°. ಗಂಟಲಿಂದ ಘುರ್ರ್ ಘುರ್ರ್ ಶಬ್ದ ಹೆರಡುತ್ತು. ಚಿಂತಾಗ್ರಸ್ತ ಸ್ವಜರಿಂದ ಸುತ್ತುವರುದು ಹಾಸಿಗೆ ಹಿಡುದ ಆ ಜೀವಿ ಕಾಲಪಾಶದ ವಶನಾವ್ತ ಕಾರಣ ಸಜ್ಜನರು ದೆನಿಗೊಂಡ್ರು ಓಗೊಡ°. ಈ ರೀತಿ ಕುಟುಂಬದೋರ (ಮನೆಯೋರ) ಪಾಲನೆ-ಪೋಷಣೆಲಿ ಬಿದ್ದಿಪ್ಪ ಆ ಅಜಿತೇಂದ್ರಿಯ ವ್ಯಕ್ತಿ, ರೋದನ-ವಿಲಾಪಲ್ಲಿ ತೊಡಗಿದ ಬಂಧುಬಳಗದವರ ನೆಡುಕೆ ಸಂಜ್ಞಾಶೂನ್ಯನಾಗಿ ಉತ್ಕಟ ವೇದನೆಂದ ಮರಣ ಹೊಂದುತ್ತ°. ಆ ಅಂತಿಮ ಕ್ಷಣಲ್ಲಿ ಅವಂಗೆ ವ್ಯಾಪಕ (ದಿವ್ಯ) ದೃಷ್ಟಿ ಪ್ರಾಪ್ತಿಯಾಗಿ ಇಹ-ಪರ ಲೋಕಂಗಳ ಒಟ್ಟಿಂಗೆ ಕಾಣುತ್ತ°. ಅದರಿಂದ ಚಕಿತನಾಗಿ ಏನನ್ನೂ ಹೇಳ್ಳೆ ಎಡಿಯದ್ದಾವ್ತ°. ಯಮದೂತರು ಹತ್ರೆ ಬಂದಪ್ಪಗ ಅವನ ಸಮಸ್ತ ಇಂದ್ರಿಯಂಗೊ ಊನವಾವ್ತು, ಚೈತನ್ಯ ಜಡವಾವ್ತು, ಪ್ರಾಣವಾಯು ನಿಶ್ಚಲವಾವ್ತು. ಆತುರ ಕಾಲಲ್ಲಿ ಪ್ರಾಣವಾಯು ತನ್ನ ಸ್ಥಾನವ ಬಿಡುವದರಿಂದ ಒಂದೊಂದು ಕ್ಷಣವೂ ಒಂದೊಂದು ಯುಗದಾಂಗೆ ಅನುಸುತ್ತು. ನೂರು ಚೇಳುಗೊ ಏಕಕಾಲಲ್ಲಿ ಕಚ್ಚುತ್ತಷ್ಟು ಬೇನೆಯ ಅನುಭವುಸುತ್ತ°. ಮರಣಸನ್ನ ಆ ವ್ಯಕ್ತಿಯ ಬಾಯಿಂದ ನೊರೆ ಉಕ್ಕಿ ಬಂದು ಜೊಲ್ಲು ಹರಿವಲೆ ಸುರುವಾವ್ತು. ಪಾಪಿಗಳ ಪ್ರಾಣವಾಯು ಅಧೋಮಾರ್ಗಲ್ಲಿ (ಗುದದ್ವಾರದ ಮೂಲಕ) ಹೆರಹೋವ್ತು.   
[ಚಿಂತನೀಯಾ-
ಮನುಷ್ಯ° (ಜೀವಿ) ತನ್ನ ಜೀವನಲ್ಲಿ ಪುಣ್ಯಕಾರ್ಯಂಗಳ ಮಾಡ್ಳೆ ಅವಕಾಶ ಆಗದ್ರೂ ಅಥವಾ ಇಷ್ಟ ಇಲ್ಲದ್ರೂ ಪಾಪಕಾರ್ಯಂಗಳ ಮನಸ್ಸಿಲ್ಲಿಯೂ ಕೂಡ ಗ್ರೇಶುಲಾಗ. ಅದು ಪಾಪ ಕಾರ್ಯ ಮಾಡುವದರಿಂದ ಎಷ್ಟೋ ಉತ್ತಮ ಆಗಿರುತ್ತು. ಇನ್ನೊಬ್ಬಂಗೆ ಸಕಾಯ ಮಾಡ್ಳೆ ಅವಕಾಶ ಸಿಕ್ಕದ್ರೂ ಅಥವಾ ಮನಸ್ಸಿಲ್ಲದ್ರೂ ಇತರರಿಂಗೆ ದುಃಖವುಂಟುಮಾಡ್ಳೆ ಮನಸ್ಸಿಲ್ಲಿಯೂ ಗ್ರೇಶಲಾಗ. ಕರ್ಮವ ಧರ್ಮಂದ ಧರ್ಮಕ್ಕಾಗಿ ಮಾಡೆಕು. ದುಷ್ಟರ ಮಾತಿಂಗೆ ಕೆಮಿಕೊಡ್ಳಾಗ, ಅಂಥವರ ಹತ್ರೆಯೂ ಸುಳಿವಲಾಗ. ಶಾಸ್ತ್ರೋಕ್ತ ಗುಣಸ್ವಭಾವವ ತನ್ನಲ್ಲಿ ಅಭಿವೃದ್ಧಿಪಡಿಸಿಗೊಳ್ಳೆಕು. ಒಳ್ಳೆವರ ಸಹವಾಸಲ್ಲಿಪ್ಪಲೆ ಪ್ರಯತ್ನಿಸೆಕು. ತನ್ನ ಸ್ವಯಂ ಪ್ರತಿಷ್ಠೆಯ ಮೆರೆಸುಲೆ ಅಥವಾ ಆರನ್ನೋ ಸಂತೋಷಪಡುಸಲೆ ತನ್ನ ಸದ್ಗುಣವ ಬಿಡ್ಳಾಗ. ಅಶಾಶ್ವತ ವಸ್ತು ವಿಷಂಗಳ ಮೇಗೆ ವ್ಯಾಮೋಹ ಮಡಿಕ್ಕೊಂಡಿಪ್ಪಲಾಗ. ಅದರಿಂದ ದುಃಖವೇ ಮುಂದೆ ಉಂಟಪ್ಪದು. ನಮ್ಮ ಆಪ್ತರ ನೆಂಟ್ರುಗಳ ಮೇಗೆ ನಾವು ತೋರುಸುವ ಅತಿ ಪ್ರೀತಿ ಸಹಾನುಭೂತಿ ಅಲ್ಲ, ಅದು ಭ್ರಾಂತಿ. ಎಂದೋ ಮಣ್ಣು ಪಾಲಪ್ಪ ಈ ಭೌತಿಕ ಶರೀರ ಶಾಶ್ವತ ಅಲ್ಲ. ಇದು ಶಾಶ್ವತ ಹೇಳಿ ಗ್ರೇಶಿ ಅಜ್ಞಾನವ ತುಂಬಿಗೊಂಡು ಇಂದ್ರಿಯ ವಿಷಾಯಾಸಕ್ತಿಗೆ ಬಲಿಯಾಗಿ ಜೀವನದ ಮುಂದಾಣ ದಾರಿ ನರಕಯಾತನೆ ಅಪ್ಪಲೆ ಬಿಡ್ಳಾಗ. ಸತ್ಕರ್ಮವಾಗಲಿ ದುಷ್ಕರ್ಮವಾಗಲಿ ಮಾಡಿದ ಕರ್ಮಕ್ಕೆ ಫಲ ಅನುಭವಿಸಿಯೇ ತೀರೆಕು. ಹಾಂಗಾಗಿ ಸದಾ ಸತ್ಕರ್ಮನಿರತನಾಗಿಪ್ಪದೇ ಶ್ರೇಯಸ್ಕರ. ಸದ್ಗುಣ ಬೆಳಸುವದರಿಂದ ತ್ರಿಗುಣಂಗಳಲ್ಲಿ ಸಾತ್ವಿಕತೆ ಅಧಿಕವಾಗಿ ಆಧಿ-ವ್ಯಾಧಿ (ಮಾನಸಿಕ ದೈಹಿಕ) ಮುಂದೆ ಬಾರದ್ದಾಂಗೆ ನೋಡಿಗೊಳ್ಳೆಕ್ಕಾದ್ದು ಕರ್ತವ್ಯ ಹೇಳ್ವ ಪ್ರಜ್ಞೆ ಸದಾ ನಮ್ಮಲ್ಲಿರೆಕು. ಮೃತ್ಯು ಎಲ್ಲಿ ಬಂತು ಹೇಂಗೆ ಬತ್ತು ಗೊಂತಾಗ. ಬರೆಕ್ಕಪ್ಪ ಕಾಲಕ್ಕೆ ಗಿಡುಗ ಬಂದು ಕೋಳಿಕುಂಞಿ ಹಿಡಿತ್ತಾಂಗೆ ಹಿಡ್ಕೊಳ್ಳುತ್ತು. ಅದರಿಂದ ಮತ್ತೆ ತಪ್ಪುಸಲೆ ಎಡಿಯಲೇ ಎಡಿಯ. ಮನುಷ್ಯಂಗೆ ಬುದ್ಧಿಶಕ್ತಿಯ ಭಗವಂತ ಕೊಟ್ಟಿಪ್ಪದ್ದರಿಂದ ಸದಾ ಭಗವತ್ಪ್ರಜ್ಞೆಲಿ ಕರ್ಮ ತತ್ಪರನಾಗಿ ಸುಖಾಂತ್ಯವ ಕಾಂಬಲೆಡಿಗು.]
 
            ಭಗವಂತ° ಯಮಮಾರ್ಗದ ಬಗ್ಗೆ ಮುಂದೆ ಎಂತ ಹೇಳಿದಾ?…       ಬಪ್ಪವಾರ ನೋಡುವೋ°.

8 thoughts on “ಗರುಡ ಪುರಾಣ – ಅಧ್ಯಾಯ 01 – ಭಾಗ 02

  1. ನಿಜಕ್ಕೂ.. ನಾಲ್ಕು ಜೆನಕ್ಕೆ ಉಪಕಾರ ಮಾಡುಲೆ ಎಡಿಯದ್ರೆ ಹೋಗಲಿ,ಉಪದ್ರ ಮಾ೦ತ್ರ ಮಾಡುಲಾಗ ಹೇಳಿ ಹೆರಿಯೋರು ಹೇಳೊದು.
    ಚೆನ್ನೈಭಾವನ ಶ್ಲೋಕಾರ್ಥ,ಗದ್ಯ ವಿವರಣೆ,ಚಿ೦ತನೆ ತು೦ಬಾ ಲಾಯ್ಕಿದ್ದು.ಗರುಡಪುರಾಣದ ಸಾರಾ೦ಶ ಮನುಷ್ಯ ಜಿವನಕ್ಕೆ ದಾರಿದೀಪ ಹೇಳಿ ಗೊ೦ತಾವುತ್ತು.ಕೃತಜ್ಞತೆಗೊ ಭಾವ.

  2. ಹರೇ ರಾಮ. ಬೆನ್ನು ತಟ್ಟಿ ಪ್ರೋತ್ಸಾಹಿಸುವ ಬೈಲ ಸಮಸ್ತ ಬಂಧುಗೊಕ್ಕೂ ನಮೋ ನಮಃ.

  3. ೨ –ನೇ ಭಾಗ ಮನುಷ್ಯನ ನಿಜವಾದ ಮನುಷ್ಯನನ್ನಾಗಿಸಲು ಸಹಾಯಮಾಡುತ್ತು. ಧನ್ಯವಾದ.

  4. ತು೦ಬ ಲಾಯ್ಕಲ್ಲಿ ಮೂಡಿ ಬತ್ತಾ ಇದ್ದು. ಧನ್ಯವಾದ೦ಗೊ.

  5. ಮನುಶ್ಯ ಹೇಂಗೆ ಜೀವನ ಮಾಡೆಕ್ಕು ಹೇಳುದರ ಗರುಡ ಪುರಾಣ ಲಾಇಕಲ್ಲಿ ವಿವರುಸುತ್ತು.. ಇದರ ಬಹುಶಃ ವ್ಯಕ್ತಿ ಜೀವಲ್ಲಿಪ್ಪಗಲೆ ಓದೆಕ್ಕು… ಪ್ರತಿ ಮನುಶ್ಯನು ಓದೆಕ್ಕು… ಹಾಂಗಾರೆ ಮಾತ್ರ ನಮ್ಮಲ್ಲಿಪ್ಪ ದ್ವೇಶ ಮತ್ಸರ ಎಲ್ಲ ದೂರ ಅಗಿ ಎಲ್ಲರು ಪ್ರೀತಿಯಿಂದ,ಒಬ್ಬರಿಂಗೊಬ್ಬರು ಸಹಕರಿಸಿಕೊಂಡು ಬಾಳುಲೆ ಸಾಧ್ಯ ಅಕ್ಕು..

  6. ಭಗವಂತ ಹೇಳಿರೆ ಎಂತ – ಒಳ್ಳೆ ವಿವರಣೆ. ಪಾಪಿಯ ಕೊನೆಯ ಕಾಲ ನೋಡುವಾಗ ಯಬ್ಬಾ ಹೇಳಿ ಕಂಡತ್ತು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×