- ಯಕ್ಷ ಗೋವಿಂದನ ಅರ್ಥವೈಭವ.. - October 4, 2011
- ಪಾಠ ಪುಸ್ತಕಲ್ಲಿ 'ಪಳ್ಳತ್ತಡ್ಕ ಕೇಶವ ಮಾವ' - August 10, 2011
- ಮನಸ್ಸಿಂಗೆ ಮುದ ಕೊಡುವ ಯಕ್ಷಗಾನ ಸಿ.ಡಿ. "ಮುದ್ದಣ ಗೇಯ ಸೌಂದರ್ಯ" - May 24, 2011
ನಮಸ್ಕಾರ ಹೇಳ್ತ ವಿಷಯದ ಬಗ್ಗೆ ಹಲವು ಜೆನ ಈ ಹಿಂದೆ ಹಲವು ರೀತಿಲ್ಲಿ ಬರದ್ದವು . ಕೆಲವು ಮಾಹಿತಿಗೋ ಬೈಲಿಲ್ಲಿ ಹಂಚಿಗೊಂಬ ಹೇಳಿ ಕಂಡತ್ತು . ಅದಕ್ಕಾಗಿ ಈ ಕಿರು ಪ್ರಯತ್ನ .
ನವಗೆ ತಿಳುದ ಹಾಂಗೆ ಮಾತಿನ ಮುನ್ನುಡಿಯೇ ನಮಸ್ಕಾರ ..ನಮ್ಮ ಸಂಸ್ಕೃತಿಲಿ ಆರನ್ನೇ ಆಗಲಿ ಮೊದಲು ಕಂಡಪ್ಪಗ ಗೌರವಪೂರ್ವಕವಾಗಿ ಮಾತಿಂಗೆ ತೊಡಗುದು ನಮಸ್ಕಾರಂದಲೇ…
ದೇವರ ಪ್ರಾರ್ಥನೆಗೂ ನಮಸ್ಕಾರದ ಹಲವು ಬಗೆಗೋ ಇದ್ದು .
ಶಿರಸಾ ಉರಸಾ ದೃಷ್ಟ್ಯಾ ಮನಸಾ ವಚಸಾ ತಥಾ |
ಪದ್ಭ್ಯಾಂ ಕರಾಭ್ಯಾಂ ಕರ್ಣಾಭ್ಯಾಂ ಪ್ರಣಾಮೋಷ್ಟಾಂಗ ಉಚ್ಯತೇ ||
ದೇವರಿಂಗೆ ನಮಸ್ಕಾರ ಮಾಡುವಾಗ ಹೇಳಿರೆ ಹೊಡಾದುದಕ್ಕೆ ಸಾಷ್ಟಾಂಗ ನಮಸ್ಕಾರ ಹೇಳ್ತವು .
ಸಾ ಅಷ್ಟಾಂಗ (ಎಂಟು ಅಂಗ ಸಹಿತ ) ಹೇಳಿರೆ ಯಾವುದು ?
ನಮ್ಮ ತಲೆ , ಹೊಟ್ಟೆ , ಕಣ್ಣುಗೋ , ಮನಸ್ಸು ,ಮಾತು , ಮೊಣಕಾಲು ,ಕೈಗೋ , ಕೆಮಿಗೋ ಇತ್ಯಾದಿ ಎಂಟು ಅಂಗಗಳಲ್ಲಿ (ನಮೂನೆಲಿ ) ಒಟ್ಟಿ೦ಗೆ ಮಾಡುವ ಶ್ರೇಷ್ಠ ನಮಸ್ಕಾರವೇ ಸಾಷ್ಟಾಂಗ ನಮಸ್ಕಾರ .ದೇವರಿಂಗೆ , ಗುರುಗೊಕ್ಕೆ , ಕುಟುಂಬದ ಅತ್ಯಂತ ಹಿರಿಯರಿಂಗೆ , ಅಮ್ಮಂಗೆ ಮಾಡಲೇ ಬೇಕಾದ ನಮಸ್ಕಾರ ಇದು. ವೇದ ಪಾಠ ಕಲಿವಾಗ ಗುರುಗೊಕ್ಕೆ ನಮ್ಮ ನಮ್ಮ ಗೋತ್ರ ,ಸೂತ್ರ , ಪ್ರವರ ಹೇಳಿ ಅಭಿವಾದನ ಮಾಡ್ತು. ಸಾಷ್ಟಾಂಗ ನಮಸ್ಕಾರ ಅದಕ್ಕಿಂತಲೂ ಮೇಲಿನದ್ದು ಹೇಳ್ತದ್ದು ಸನಾತನೀಯ ನಂಬಿಕೆ .ಸಾಷ್ಟಾಂಗ ನಮಸ್ಕಾರಕ್ಕೆ “ಉದ್ದಂಡ ನಮಸ್ಕಾರ” ದಂಡ ನಮಸ್ಕಾರ “ ಹೇಳಿಯೂ ಹೇಳ್ತವು
ದೇವರ ಪೂಜೆ ಮಾಡಿಕ್ಕಿ
ಯಾನಿ ಕಾನಿ ಚ ಪಾಪಾನಿ ಜನ್ಮಾಂತರ ಕೃತಾನಿ ಚ
ತಾನಿ ತಾನಿ ವಿನಶ್ಯಂತಿ ಪ್ರದಕ್ಷಿಣ ಪದೇ ಪದೇ
ಯಾವುದೇ ಪಾಪ ಮಾಡಿದ್ದರೂ ಪ್ರದಕ್ಷಿಣ ನಮಸ್ಕಾರ ಮಾಡಿರೆ ಅದು ನಾಶ ಹೊಂದುತ್ತು ಹೇಳ್ತದ್ದು , ಪೂಜೆಲಿ ಮಾಡುವ ಪ್ರದಕ್ಷಿಣೆ ನಮಸ್ಕಾರ ಉದ್ದೇಶ .
ದೇವಸ್ಥಾನಲ್ಲಿ ಪ್ರದಕ್ಷಿಣೆ ಬಪ್ಪಗಳೂ ಮೇಲಾಣ ಶ್ಲೋಕ ಹೇಳ್ತವು .
ತರ್ಪಣ -ನಮಸ್ಕಾರ ಹೇಳ್ತದ್ದು ಷಟ್ಕರ್ಮಲ್ಲಿ ಒಂದು ಪ್ರಧಾನ ಕ್ರಿಯೆ . ಶಾಂತಿ ಕರ್ಮಂಗಳಲ್ಲಿ , ಅಪರ ಕ್ರಿಯೆಗಳಲ್ಲಿ ತರ್ಪಣ -ನಮಸ್ಕಾರ ಮಾಡುವ ಕ್ರಮ ಇದ್ದು.
ನಮಸ್ಕಾರ ಹೇಳ್ತದ್ದು ಸೂರ್ಯ ದೇವರಿಂಗೆ ಅತ್ಯಂತ ಪ್ರಿಯವಾದ್ದಡ ಅದಕ್ಕೆ ನಮಸ್ಕಾರ ಪ್ರಿಯೋ ಭಾನು … ಹೇಳ್ತವು ಶ್ಲೋಕಲ್ಲಿ … ಸೂರ್ಯ ನಮಸ್ಕಾರ ಒಳ್ಳೆ ವ್ಯಾಯಾಮ ಕೂಡ .ಇನ್ನು ಶಿವ ದೇವರಿಂಗೆ ಅಭಿಷೇಕ ಮಾಡುವಾಗ ನಾವು ಹೇಳುವ ರುದ್ರಕ್ಕೆ ನಮಕ ಹೇಳ್ತವು. ರುದ್ರ ಪ್ರಶ್ನಲ್ಲಿ ಅತ್ಯಂತ ಹೆಚ್ಚು ಸರ್ತಿ ನಮ: ಹೇಳ್ತದ್ದು ಬಪ್ಪ ಕಾರಣಂದಲೇ ಅದಕ್ಕೆ ನಮಕ ಹೇಳ್ತವು . ದುರ್ಗಾ ನಮಸ್ಕಾರ ಪೂಜೆ ಎಲ್ಲೋರೂ ಮಾಡ್ಸುತ್ತನ್ನೆ .
ದೇವಸ್ಥಾನಲ್ಲಿ ನಮಸ್ಕಾರ ಮಂಟಪ ಇಪ್ಪದು ಎಲ್ಲೋರಿಂಗೂ ಗೊಂತಿಪ್ಪ ವಿಷಯವೇ . ತೀರ್ಥ ಪ್ರಸಾದ ಕೊಡಲೇ ಹೇಳಿ ದೇವರ ಗರ್ಭ ಗುಡಿ ಮುಂದೆ ಇಪ್ಪ ಮಂಟಪವ ನಮಸ್ಕಾರ ಮಂಟಪ ಹೇಳ್ತವು.
ಯಕ್ಷಗಾನ ಕವಿಗೊ ಸಾಷ್ಟಾಂಗ ನಮಸ್ಕಾರವ ಪದ್ಯಂಗಳಲ್ಲಿ ಹೇಳಿದ್ದವು. ಪ್ರಸಿದ್ಧ ಸುಧನ್ವ ಮೋಕ್ಷ ಪ್ರಸಂಗಲ್ಲಿ ಬಪ್ಪ
“ಕಂಡು ಪುಳಕೊತ್ಸವದ ಹರುಷದಿ ದಿಂಡುಗೆಡದುರೆ ನಮಸಿ ಪೇಳಿದ |
ತನ್ನಯ ಗಂಡುತನಕಿದು ಸಾಕು | ಕೈಗೊಂಡ ಕೆಲಸ || ”
ಹೇಳಿ . ಬಲಿಪಜ್ಜನ ಸ್ವರಲ್ಲಿ ಬೇಲಿ ನಾಲ್ಕರ ಶ್ರುತಿಲ್ಲಿ ಇದರ ಕೇಳಿರೆ ಮೈ ಪುಳಕಗೋಳ್ಳುತ್ತು !
ಹಾಂಗೆಯೇ ಆರಿಂಗೆ ಮೊದಲು ನಮಸ್ಕಾರ ಮಾಡೆಕ್ಕು ಹೇಳಿ ಹಿರಿಯರು ಹೇಳಿದ್ದವು ಸುಭಾಷಿತ ಮಂಜರಿಲಿ
ದುರ್ಜನಂ ಪ್ರಥಮಂ ವಂದೇ ಸಜ್ಜನಂ ತದನಂತರಂ |
ಮುಖ ಪ್ರಕ್ಷಾಳನಾತ್ ಪೂರ್ವಂ ಗುದ ಪ್ರಕ್ಷಾಳನಾತ್ ಯಥಾ ||
ಕೆಟ್ಟ ಜನರಿಂಗೆ ಮೊದಲು ನಮಸ್ಕಾರ ಮಾಡಿ ಅವರ ಸಾಗ ಹಾಕೆಕ್ಕಡ ಸಜ್ಜನರಿಂಗೆ ನಿಧಾನಕ್ಕೆ ನಮಸ್ಕಾರ ಹೇಳಿರೂ ಅವಕ್ಕೆ ಅರ್ಥ ಅವ್ತದ ! ಹೇಂಗೆ ಹೇಳ್ತದ್ದಕ್ಕೆ ಉದಾಹರಣೆ ಚೆಂದಕೆ ಕೊಟ್ಟಿದವು.
ಆರಿಂಗೆ ನಮಸ್ಕಾರ ಮಾಡುಲೆ ಆಗ ಹೇಳ್ತದ್ದು ಹೇಳಿದ್ದವು
“ದೂರಸ್ಥಂ ಜನಮಧ್ಯಸ್ಥಂ ,ಧಾವಂತಂ ನಿಜ ಗರ್ವಿತಂ ……”
ಮುಂತಾದವಕ್ಕೆಲ್ಲ ನಮಸ್ಕಾರ ಮಾಡ್ಲೆ ಹೊಪಲಾಗ . ಮಾಡಿರೆ ನಿಂಗಳ ನಮಸ್ಕಾರಕ್ಕೆ ತಿರಸ್ಕಾರ ಸಿಕ್ಕುಗು ಹೇಳಿ!
ತಿಂಗಳ ಅಕೇರಿಗೆ ಕೆಲವು ಜೆನ “ನಮಸ್ಕಾರ ಅಣ್ಣೆರೆ ” ಹೇಳಿ ಬಪ್ಪದು ಎಂತಕೆ ಹೇಳಿ ಗೊಂತಿದ್ದನ್ನೇ ?
ಇನ್ನು ಗಟ್ಟದ ಮೇಲೆ ನಿನ್ನ ಸಹವಾಸ ಸಾಕಪ್ಪಾ ಸಾಕು ಹೇಳುಲೂ “ಗುರುವೇ ನಿನ್ನ ಸರ್ವಾ೦ಗಕ್ಕೂ ಸಾಷ್ಟಾಂಗ ನಮಸ್ಕಾರ” ಹೇಳಿ ಬಳಕೆ ಮಾಡ್ತವು
ಸದ್ಯಕ್ಕೆ ಇಷ್ಟು ಸಾಕಲ್ಲದ ?
ಮತ್ತೆ ಕಾಂಬೋ ಹಾಂಗಾರೆ
ನಮಸ್ಕಾರ !
ಒಳ್ಳೆ ಲೇಖನ:)
aa kusu madida hange namaskara maduvadu rajakaaranigookke raja doorandale.mathe dodda bhavanadde samshaya enagu bantu namaskara T.V.go devaringo heli.ennu kusugo hodaaduvadu heli hiriyavu heltadu keli gontu.ade posavanike subbanna helidange keppe hange.urulu seve kuuda puurva kaalalli hemmakkoge nishidda.eegaana sarvaru samaana heltha kaalalli ellavu nedethu,devastanakko,pujayavakko paise aadare aatu.saastanga namaskara om kaara ella hemmakkala aarogyakke haalu heli kelidde haangaagi adakke nisheda matte avara sanna madle alla.aararu eegana kusuga vaadamadle bathare aanu elle benninge haale katiyondu pudicho.
oppannange yatha prakaara oppa oppango.
ತುಂಬಾ ಉತ್ತಮವಾದ ವಿಷಯವ ತಿಳುಸಿದ್ದಕ್ಕೆ ಧನ್ಯವಾದಗಳು.
ಎನಗೆ ಒಂದು ಸಣ್ಣ ಸಂಶಯ .
ತರ್ಪಣ ನಮಸ್ಕಾರ ದ ಬಗ್ಗೆ ನಿಂಗ ಹೇಳಿದ್ದದದರಲ್ಲಿ ಒಂದು ಶಬ್ದ ಅಪಾರ ಹೇಳಿ ಇದ್ದು. ಅದು ಅಪರ ಹೇಳಿ ಅಯೆಕ್ಕ ?…
“ಅಪರ” ಶಬ್ದದ ಪೂರ್ವಾಪರ ತಿಳುದು ಅಕ್ಷರದೋಶ ಸರಿಪಡುಸಿದ ಸೌಮ್ಯತ್ತೆಗೆ “ಅಪಾರ” ವಂದನೆಗೊ ವೇಣೂರಣ್ಣ ಹೇಳುಗು..!! 😉
ಸರಿಯಾಗಿ ಊಹಿಸಿದ್ದೆ ನೆಗೆಗಾರ !
adu typing mistake. actually adu “ಅಪರ” heli ayekku.
ಎನ್ನದು ಒಂದು ವಿಚಾರ ಇದ್ದು, ಅನು ಕೇಳಿದ ಹಾಂಗೆ ಮಾಣಿಯ೦ಗೊ ಮಾಂತ್ರ ಸಾಷ್ಟಾಂಗ ನಮಸ್ಕಾರ ಮಾಡ್ಳೆ ಅಕ್ಕು, ಹೆಮ್ಮಕ್ಕೊ ಮತ್ತೆ ಕೂಸುಗೊ ಮಾಡ್ಳೆ ಆಗಾ ಹೇಳಿ ವಿವರ ಇದ್ದು….
ಇದು ಯೆನಗೆ ಗೊಂತಿದ್ದಹಾಂಗೆ ಹೆಮ್ಮಕ್ಕೊ ಯಾವತು ಒಂದು “ಕೆಪ್ಪೇ” ಹಂಗೆ ನಮಸ್ಕಾರ ಮಡೆಕು. ಇದು ಯೆನ್ತಕೆ ಹೇಳಿರೆ ಹೆಮ್ಮಕ್ಕೊ ಅಂಗಾಂಗಂಗೊ ನೆಲಕ್ಕ ಮುಟ್ಟಲೆ ಆಗ ಹೇಳಿ ಶಾಸ್ತ್ರ ಇದ್ದು…. ಹೇಳಿ ಎನಗೆ ಆರೋ ಹೇಳಿದ್ದು…
ಓಹೋ ಎನಗೆ ಈ ವಿಷಯ ಗೊಂತಿತ್ತಿಲ್ಲೇ . ಆನು ತಿಳುದಮಟ್ಟಿ0ಗೆ ಎಲ್ಲಾರು ಉದ್ದಂಡ ನಮಸ್ಕಾರ ಮಾಡ್ಳಕ್ಕು. ಕೆಲವು ದೇವಸ್ಥಾನಲ್ಲಿ “ಉರುಳು ಸೇವೆ” ಇರುತ್ತು . ಅಲ್ಲಿ ಹೆಮ್ಮಕ್ಕಳೂ ಉರುಳು ಸೇವೆ ಸಲ್ಲಿಸುವ ಪದ್ಧತಿ ಇದ್ದು . ಅದರ ಸುರು ಮಾಡುದು ಕೂಡ ಸಾಷ್ಟಾಂಗ ನಮಸ್ಕಾರಂದಲೇ … ಇದರ ಬಗ್ಗೆ ಏನಾರು ವಿಧಿ ನಿಷೇದ ಇದ್ದ ಹೇಳಿ ಬಟ್ಟ ಮಾವನ ಹತ್ತರೆ ಕೆಳೆಕ್ಕಷ್ಟೇ
ಅಪ್ಪು .. ಒಂದ್ದರಿ ಭಾಟ್ಟ ಮಾವನ ಕೇಳಿ ಕಚಿತ ಪದುಸುದು ಓಳೆದು.. 😛 ಎನಗೆ ಇದು ಆರೋ ಹೀಂಗೆ ಮಾತಾಡುವಾಗ ಹೇಳಿದ್ದು.. 😛
ನಾವು ಹಿರಿಯರ ಕಾಲು ಹಿಡಿವದು ಹೇಳಿ ಬಗ್ಗಿ ಅಭಿವಾದನೆ ಮಾಡುವದು ಯಾವ ವಿಧಲ್ಲಿ ಬತ್ತು?
ಕಾಲು ಹಿಡಿವದು ಗೊಂತಿಲ್ಲೆ, ಆದರೆ ಕಾಲು ಹಿಡುದು ಎಳವದು ’ರಾಜಕಾರಣ ನಮಸ್ಕಾರ’ಲ್ಲಿ ಬತ್ತಡ ಅಪ್ಪಚ್ಚಿ!!! 😉
ಅಭಿವಾದನ ಸನಾತನೀಯ ನಮಸ್ಕಾರ ಕ್ರಮ . ಉದ್ದಂಡ ನಮಸ್ಕಾರ ಸಂಪೂರ್ಣ ಅರ್ಪಣಾ ಭಾವದ ನಮಸ್ಕಾರ ಅಲ್ಲದೋ ?
ಎಲ್ಲೋರಿ೦ಗೂ ನಮಸ್ಕಾರ!
ಕೇವಲ ನಮಸ್ಕಾರಲ್ಲಿಯೇ ಇಷ್ಟು ವಿಷಯ ಇದ್ದು ಹೇಳಿ ಈಗ ಗೊ೦ತಾತಷ್ಟೆ..
ಬರದ್ಸು ಲಾಯ್ಕ ಆಯಿದು. ಆ ಕೂಸು ಪ್ರದಕ್ಷಿಣೆ ಬಸ್ಸು ಕಂಡತ್ತು ಪಟಲ್ಲಿ, ಅದು ಟೀವಿಗೋ ದೇವರಿಂಗೋ ಹೇಳಿ ಮಾಂತ್ರ ಗೊಂತಾಯಿದಿಲ್ಲೆ….!!