Oppanna.com

ಮಕ್ಕೊಗೆ ರಾಮಾಯಣ ಅಧ್ಯಾಯ – 4 ಭಾಗ – 3

ಬರದೋರು :   ಕೈಲಾರು ಚಿಕ್ಕಮ್ಮ    on   13/11/2013    3 ಒಪ್ಪಂಗೊ

ಇಲ್ಲಿಯವರೆಗೆ
ಸೀತೆ, ರಾಮ, ಲಕ್ಷ್ಮಣರು ರಾಜಕುಮಾರಂಗಳ ಆಭರಣಗಳ, ಜರಿವಸ್ತ್ರಂಗಳ ಎಲ್ಲ ತೆಗದು ಮಡುಗಿದವು. ನಾರುಮಡಿಯ ಕಾವಿ ವಸ್ತ್ರಂಗಳ ಸುತ್ತಿದವು. ಕಾಡಿಂಗೆ ಹೆರಡುವಗ ಒಟ್ಟಿಂಗೆ ಬಿಲ್ಲುಗೊ ಬಾಣಂಗಳ ಮಾತ್ರ ತೆಕ್ಕೊಂಡವು. ಆ ಸಮಯಲ್ಲಿ ಈ ದುಃಖದ ಶುದ್ದಿ ಇಡೀ ಅಯೋಧ್ಯಾ ನಗರಕ್ಕೇ ಕಾಡು ಕಿಚ್ಚಿನಾಂಗೆ ಹಬ್ಬಿತ್ತು. ರಾಮ ನಮ್ಮ ರಾಜ° ಆವ್ತಾ° ಇಲ್ಲೇಳಿ ಗೊಂತಾದ ಜೆನಂಗೊ ಬಿಕ್ಕಿ ಬಿಕ್ಕಿ ಕೂಗಿದವು. ಋಷಿಮುನಿಗಳಾಂಗೆ ಸೀತೆ, ರಾಮ, ಲಕ್ಷ್ಮಣರು ಕಾಡಿಲಿ ನಡವದರ ಅವಕ್ಕೆಲ್ಲ ಗ್ರೇಶುಲೇ ಕಷ್ಟ ಆತು. “ಹೇ, ವಿಧಿ ಎಷ್ಟು ಕ್ರೂರ ಆಯಿದು?” ಹೇಳಿ ಕೆಲವರು ಮಾತಾಡಿದರೆ, ಕೆಲವರು ಈ ಮೂರು ಜೆನಕ್ಕೆ ಕಾಡಿಲಿ ಎದುರಪ್ಪ ಆಪತ್ತು ಅಪಾಯಂಗಳ ಎದುರಿಸಿ ಪಾರಪ್ಪಲೆಡಿಗಾ? ಹೇಳಿ ಎಲ್ಲ ಮಾತಾಡಿ ಚಿಂತೆಲಿ ಮುಳುಗಿದವು.
ಸೀತೆ, ರಾಮ, ಲಕ್ಷ್ಮಣರು ಅಖೇರಿಗೆ ದಶರಥನ ಕೋಣೆಗೆ ಬೀಳ್ಕೊಂಬಲೆ ಹೋದವು. ಕೋಣೆಯ ಒಳ ಹೋದ ಮೇಲೆ ಅವರ ನೋಡುವಗ ದಶರಥಂಗೆ ನಿರಾಶೆ, ದುಃಖವ ತಡವಲೇ ಆಯ್ದಿಲ್ಲೆ. “ರಾಮಾ, ಎನ್ನ ಕಂದಾ, ಹೀಂಗಿಪ್ಪ ಕ್ರೂರವಾದ ದೃಶ್ಯವ ನೋಡದ್ದಾಂಗೆ ಎನ್ನ ಕಣ್ಣು ಕುರುಡಾಗಿದ್ದರೇ ಒಳ್ಳೆದಿತ್ತು. ಎನ್ನ ಕ್ಷಮಿಸುವೆಯ ಮಗನೇ?” ಹೇಳಿಗೊಂಡು ಗಳಗಳನೆ ಕೂಗಿಬಿಟ್ಟ. ರಾಮ ಅಪ್ಪನ ಕಣ್ಣೀರಿನ ಮೃದುವಾಗಿ ಉದ್ದಿದ°. “ಅಪ್ಪಾ, ನೀನು ಕೊಟ್ಟ ವಚನವ ಪಾಲಿಸುದು ಎನ್ನ ಕರ್ತವ್ಯ. ದಯಮಾಡಿ ಎಂಗೊಗೆ ನೀನು ಆಶೀರ್ವಾದ ಮಾಡಿ ಕಳುಸಿಕೊಡು” ಹೇಳಿದ°.
ಇತ್ಲಾಗಿ ಕೈಕೇಯಿಯ ಮನಸ್ಸಿನ ಬದಲುಸಿ ಪರಿವರ್ತನೆ ಮಾಡುಲೂ ದಶರಥಂಗೆ ಸಾಧ್ಯ ಆಯ್ದಿಲ್ಲೆ. ಅತ್ಲಾಗಿ ರಾಮನ ಕಾಡಿಂಗೆ ಹೋಗೆಡಾಳಿ ತಡವಲೂ ಎಡಿಯ. ನಡುಗುವ ಸ್ವರಲ್ಲಿ ದಶರಥ ಮಂತ್ರಿ ಸುಮಂತ್ರನ ಹತ್ತರಂಗೆ ಬಪ್ಪಲೇಳಿದ°. ರಾಮನೊಟ್ಟಿಂಗೆ ಸೈನಿಕರೂ, ಸೇವಕರೂ ಕಾಡಿಂಗೆ ಹೋಗಲಿ ಹೇಳಿ ತಿಳಿಶಿದ°. ಇದರ ಕೇಳಿದ ಕೈಕೇಯಿಗೆ ಮತ್ತಷ್ಟು ಕೋಪ ಬಂತು. “ಮಹಾರಾಜಾ, ಇಡೀ ಸೇನೆಯನ್ನೂ, ಸೇವಕರನ್ನೂ ಕಾಡಿಂಗೆ ಕಳ್ಸುದು ನ್ಯಾಯವಾ? ಜೆನವೇ ಇಲ್ಲದ್ದ, ಸೈನ್ಯ ಇಲ್ಲದ್ದ ಖಾಲಿ ಖಾಲಿ ಅಯೋಧ್ಯೆಯ ಎನ್ನ ಮಗ° ಭರತ° ಆಳೆಕ್ಕಾ? ಬೇಡ. ಅದು ಸಾಧ್ಯ ಇಲ್ಲೆ. ರಾಮನೊಟ್ಟಿಂಗೆ ಯಾವ ಸೈನಿಕರೂ, ಸೇವಕರೂ ಹೋಪಲೆಡಿಯ” ಹೇಳಿ ಕೈಕೇಯಿ ನಿರ್ಧಾರದ ಮಾತಿಲಿ ಹೇಳಿತ್ತು.
ದಶರಥ° ಪೂರ್ತಿ ಸೋತು ಹೋದ ಹಾಂಗೆ ಕುಸುದು ಕೂದ°. ಅದರೂ ದಶರಥ°, “ಸೀತೆ, ರಾಮ, ಲಕ್ಷ್ಮಣರ ಅಯೋಧ್ಯೆಯ ಗಡಿಯವರೆಗಾದರೂ ರಥಲ್ಲಿ ಕೂರ್ಸಿ ಕರಕ್ಕೊಂಡೋಗಿ ಬಿಟ್ಟು ಬಾ. ಅಯೋಧ್ಯೆಯ ಬೀದಿಗಳ ಮೇಲೆ ಅವು ನಡಕ್ಕೊಂಡು ಹೋಪದರ ಎನ್ನಂದ ನೋಡುಲೆಡಿಯ” ಹೇಳಿ ಸುಮಂತ್ರಂಗೆ ಆದೇಶ ಕೊಟ್ಟ°. ಕೈಕೇಯಿದೆ ಅದಕ್ಕೆ ಅಡ್ಡಿ ಹೇಳಿದ್ದಿಲ್ಲೆ.
ಸುಮಂತ್ರ° ರಥವ ತಂದ°. ಶ್ರೀರಾಮ, ಸೀತೆ, ಲಕ್ಷ್ಮಣರು ಹಿರಿಯೋರ ಪಾದ ಮುಟ್ಟಿ ನಮಸ್ಕಾರ ಮಾಡಿ ಅವರ ಆಶೀರ್ವಾದವ ಪಡಕ್ಕೊಂಡವು. ಶ್ರೀರಾಮ, ಸೀತೆ, ಲಕ್ಷ್ಮಣರು ರಥಲ್ಲಿ ಕೂಪದ್ದೆ, ಇಡೀ ಅಯೋಧ್ಯೆಯ ಪ್ರಜೆಗೊ ದುಃಖವ ತಡವಲೆಡಿಯದ್ದೆ ಕೂಗಿದವು. “ಮಹಾರಾಜ ಎಂತಕೆ ಹೀಂಗೆ ಮೂರ್ಖನಾಂಗೆ ಮಾಡಿದ°?” ಹೇಳಿ ಕೆಲವರು ಟೀಕೆ ಮಾಡಿದವು. ಮುದುಕರಾದ ಅಪ್ಪ ಅಮ್ಮಂದಿರಿಂಗೆ ಅವರ ಪ್ರೀತಿಯ ಮಗನ ಬಿಟ್ಟು ಬದುಕ್ಕುಲೆಡಿಗಾ? ಹೇಳಿಯೂ ಕಂಡತ್ತು.
ರಥದ ಚಕ್ರ ತಿರುಗಿತ್ತು. ದಶರಥ° ಅಖೇರಿಗೆ ಒಂದರಿ ಮಗನ ನೋಡುಲೆ ಆಶೆ ಪಟ್ಟ°. ಇದು ರಾಮಂಗೆ ಕಂಡತ್ತು. ರಾಮ ರಥವ ಜೋರು ಕೊಂಡೋಪಲೆ ಹೇಳಿದ°. ರಥ ಮುಂದೆ ಹೋತು. ಆದರೂ ಮುದುಕ್ಕ ರಾಜ°, “ರಾಮಾ, ರಾಮಾ, ಲಕ್ಷ್ಮಣಾ” ಹೇಳಿಗೊಂಡು ರಥದ ಹಿಂದೆಯೇ ಓಡಿ ಬಂದ°. ಕೌಸಲ್ಯೆಯೂ ಓಡಿಗೊಂಡು ರಥದ ಹಿಂದೆಯೇ ಬಂತು. ಆ ಬೇಜಾರಿನ ದೃಶ್ಯವ ನೋಡುಲೆಡಿಯದ್ದೆ  ಜೆನ ಬೇರೆ ಹೊಡೆಂಗೆ ಮೋರೆ ಮಾಡಿದವು. ಇದರ ಎಲ್ಲ ನೋಡಿ ರಾಮಂಗೂ ದುಃಖ ಬಂತು. ಅವನ ಕಣ್ಣಿಲಿ ನೀರು ತುಂಬಿತ್ತು.
ರಥ ಜೋರಾಗಿ ಹೋಪಗ ಇನ್ನೂ ಮುಂದೆ ಹೋಪಲೆಡಿಯದ್ದೆ ದಶರಥ ಬೀದಿಲಿಯೇ ಕುಸುದು ಬಿಟ್ಟ. ಆವಗ ಕೈಕೇಯಿ ಅವಂಗೆ ಸಹಾಯ ಮಾಡುಲೆ ಹೋತು. “ಇನ್ನು ಮುಂದೆ ನೀನು ಯಾವಗಳೂ ಎನ್ನ ಮುಟ್ಟೆಡ. ನಿನ್ನ ಮೋರೆಯ ಆನು ನೋಡ್ತಿಲ್ಲೆ. ತೊಲಗತ್ಲಾಗಿ” ಹೇಳಿದ ದಶರಥ ತಿರಸ್ಕಾರಲ್ಲಿ.
ರಥ ಮುಂದೆ ಮುಂದೆ ಹೋಯ್ಕೊಂಡಿತ್ತು. ಜೆನಗೊ ರಥದ ಹಿಂದೆಯೇ “ರಾಮಾ, ಹೋಗೆಡ” ಹೇಳಿ ಕೂಗಿಗೊಂಡಿತ್ತಿದ್ದವು.”ನಿಂಗೊ ಎಲ್ಲ ಎನ್ನ ಮೇಲೆ ತುಂಬಾ ಪ್ರೀತಿ ವಿಶ್ವಾಸ ಮಡುಗಿದ್ದಿ ಹೇಳಿ ಎನಗೆ ಗೊಂತಿದ್ದು. ಆದರೆ ಇಂದಿಂದ ಭರತ° ನಿಂಗಳ ರಾಜ°. ಎನ್ನ ಮೇಲೆ ತೋರ್ಸುವ ಪ್ರೀತಿ, ಆದರ, ಗೌರವಂಗಳ ಅವನ ಮೇಲೂ ತೋರ್ಸೆಕ್ಕು” ಹೇಳಿ ಅಯೋಧ್ಯೆಯ ಜೆನಂಗಳ ಹತ್ತರೆ ರಾಮ° ಕೇಳಿಗೊಂಡ. “ಎಂಗಳೂ ಕಾಡಿಂಗೆ ಬತ್ತೆಯೊ°” ಹೇಳಿ ಅಯೋಧ್ಯೆಯ ಜೆನಂಗೊ ರಥದ ಹಿಂದೆಯೇ ಹಠ ಹಿಡುದು ಬಂದವು. ರಥ ತಮಸಾ ನದಿಯ ಕರೆಂಗೆ ಬಂದೆತ್ತಿತ್ತು. ಹಿಂದೆಯೇ ತುಂಬಾ ದೂರಂದ ಓಡಿ ಬಂದ ಜೆನಂಗೊ ಬಚ್ಚಿ ಸೇಂಕಿಗೊಂಡಿತ್ತಿದ್ದವು. ಅವು ಮರದ ನೆರಳಿಲಿ ಮನುಗಿದವು. ಅವಕ್ಕೆ ಅಲ್ಲಿಗೇ ಒರಕ್ಕು ಬಂತು. ಇವರಂದ ತಪ್ಪಿಸಿಗೊಂಬಲೆ  ಈಗಳೇ ಒಳ್ಳೆ ಸಮಯ ಹೇಳಿ ಶ್ರೀರಾಮ ಗ್ರೇಶಿದ°. ಎಂಗಳ ಕೋಸಲ ದೇಶದ ಗಡಿಯವರೆಗೆ ಬಿಡು” ಹೇಳಿ ಸುಮಂತ್ರಂಗೆ ಹೇಳಿದ°. ರಾಮ, ಲಕ್ಷ್ಮಣ, ಸೀತೆ ಗಂಗಾ ನದಿಯ ಕರೆಂಗೆ ಉದಿಯಪ್ಪಗ ಎತ್ತಿದವು.
ಅಯೋಧ್ಯೆಯ ಬಂದ ಜೆನಂಗೊಕ್ಕೆ ಉದಿಯಪ್ಪಗ ಎಚ್ಚರಿಕೆ ಆತು. ಅವು ಸುತ್ತುಮುತ್ತು ನೋಡಿದವು. ರಾಮ, ಲಕ್ಷ್ಮಣ, ಸೀತೆಯರ ಅವಕ್ಕೆ ಕಂಡತ್ತಿಲ್ಲೆ. ಬೇರೆಂತ ಮಾಡುಲೂ ದಾರಿ ಕಾಣದ್ದೆ ಅವು ಅಯೋಧ್ಯೆಗೇ ಹೋದವು.
ರಾಮ ಗಂಗಾನದಿಯ ದಾಂಟಿ ಮುಂದೆ ಹೋಪ ನಿರ್ಧಾರ ಮಾಡಿದ. ಅಲ್ಲಿ ಹತ್ತರಾಣ ಕಾಡಿಲಿ ಗುಹ ಹೇಳ್ತ ಬೇಟೆಗಾರ ದೊರೆ ವಾಸವಾಗಿತ್ತಿದ್ದ. ಅವ ಶ್ರೀರಾಮನ ಗೆಳೆಯ° ಆಗಿತ್ತಿದ್ದ°. ಅವಂಗೆ ಅಲ್ಲಿಗೆ ಬಂದ ರಾಮನ ನೋಡಿ ತುಂಬಾ ಕುಶಿ ಆತು. ಅವ ರಾಮ, ಲಕ್ಷ್ಮಣ, ಸೀತೆಯರ ಸ್ವಾಗತ ಮಾಡಿ, ಅವರ ಆದರಿಸಿ ಉಪಚಾರ ಮಾಡಿದ°. ತಿಂಬಲೆ ಬಗೆಬಗೆಯ ತಿಂಡಿಗಳ ಕೊಟ್ಟ. ಆದರೆ ರಾಮ° ಅದರ ಎಲ್ಲ ತೆಕ್ಕೊಂಡಿದಾ°ಯಿಲ್ಲೆ. ವನವಾಸ ಸುರುವಾದ ಮೇಲೆ ಸರಳವಾದ ಆಹಾರ ಮಾತ್ರ ತೆಕ್ಕೊಳ್ತೇಳಿ ರಾಮ ಹೇಳಿದ°. ಆ ದಿನ ಇರುಳು ಅವು ಬರೀ ನೆಲದ ಮೇಲೆ ಮನುಗಿದವು. ಆದರೆ ಅಪ್ಪನ ನೆನಪು ಆಗಾಗ ಕಾಡುವ ಕಾರಣ ದುಃಖ ಬಂದುಗೊಂಡಿತ್ತು. ಒರಗುಲೆ ಎಡಿತ್ತಿದಿಲ್ಲೆ. ಮರದಿನ ಉದಿಯಪ್ಪಗ ಸುಮಂತ್ರನತ್ತರೆ “ಅಯೋಧ್ಯೆಗೆ ನೀನು ವಾಪಾಸು ಹೋಗು” ಹೇಳಿದ°. “ಎನ್ನ ಅಪ್ಪ, ಅಮ್ಮಂದಿರ ಲಾಯ್ಕಕ್ಕೆ ನೋಡಿಗೊಳ್ಳೆಕ್ಕು” ಹೇಳಿದ°. ಸುಮಂತ್ರ° ಅದಕ್ಕೆ ಒಪ್ಪಿ ಅಯೋಧ್ಯಾ ನಗರದ ಹೊಡೆಂಗೆ ತಿರುಗಿ ಹೋದ°. ಮತ್ತೆ ಮೂರು ಜೆನವೂ ಗುಹನಿಂದ ಬೀಳ್ಕೊಂಡು ದೊಡ್ಡ ಕಾಡಿನ ಹೊಡೆಂಗೆ ಮುಂದೆ ನಡದವು.
ಆ ದೊಡ್ಡ ಕಾಡಿಲಿ ನಡವಗ ಲಕ್ಷ್ಮಣ ಎಲ್ಲರಿಂದ ಮುಂದೆ ಇತ್ತಿದ್ದ. ಅವ ಕಳ್ಳಿ, ಗೆಡು, ಮುಳ್ಳು, ಬಲ್ಲೆ, ಬಳ್ಳಿಗಳ ಬಿಡಿಸಿ ಕಡುದು ದಾರಿ ಮಾಡಿಕೊಟ್ಟು ಮುಂದೆ ಹೋಯ್ಕೊಂಡಿತ್ತಿದ್ದ. ಸೀತೆ ಮಧ್ಯಲ್ಲಿ, ರಾಮ ಅದರ ಹಿಂದೆ ನಡದು ಮುಂದರುದವು. ಕಲ್ಲುಮುಳ್ಳುಗಳ ಹಾದಿಲಿ ನಡವದು ಸುಲಭ ಅಲ್ಲ. ಆದರೂ ಅವು ಕಾಡಿನ ಪ್ರಕೃತಿಯ ಚೆಂದವ ಅಲ್ಲಲ್ಲಿ ನಿಂದು ನೋಡಿಗೊಂಡು ಮುಂದೆ ನಡಕ್ಕೊಂಡು ಇತ್ತಿದ್ದವು. ಇರುಳು ಅವು ಗುಡ್ಡೆಯ ಇಳಿಜಾರಿಲಿ ಮನುಗಿ ಒರಗಿಗೊಂಡಿತ್ತಿದ್ದವು. ದಾರಿಲಿ ಸಿಕ್ಕಿದ ದೊಡ್ಡ ದೊಡ್ಡ ಮರಂಗೊ, ಹೂಗಿನ ಗೆಡುಗೊ, ಹಾತೆಗೊ, ಕೀಟಂಗೊ ಎಲ್ಲಾ ವಿಷಯಂಗಳ ಅವಕ್ಕವಕ್ಕೆ ಗೊಂತಿಪ್ಪದರ ಒಬ್ಬಕ್ಕೊಬ್ಬ ಹೇಳಿಗೊಂಡು ಮುಂದೆ ನಡದವು. ಹೀಂಗೆ ಹೋಪ ದಾರಿಲಿ ಅವಕ್ಕೆ ಭಾರದ್ವಾಜ ಮುನಿಗಳ ಆಶ್ರಮ ಸಿಕ್ಕಿತ್ತು. ಭಾರದ್ವಾಜ ಮುನಿಗೊಕ್ಕೆ ಅವರ ಕಂಡು ತುಂಬ ಸಂತೋಷ ಆತು.ಅವು  ಸ್ವಾಗತ ಮಾಡಿ ಸತ್ಕಾರ ಮಾಡಿದವು. ಮತ್ತೆ “ಚಿತ್ರಕೂಟದ ಪ್ರಕೃತಿ ತುಂಬ ಚೆಂದ ಇದ್ದು. ನಿಂಗೊಗೆ ಅಲ್ಲಿ ಕುಟೀರ ಕಟ್ಟಿ ವಾಸ ಮಾಡುಲಕ್ಕು” ಹೇಳಿ ತಿಳಿಶಿದವು.

ವನಗಮನ    ಚಿತ್ರ ಃ ಮಧುರಕಾನನ ಬಾಲಣ್ಣ
ವನಗಮನ                            ಚಿತ್ರ ಃ ಮಧುರಕಾನನ ಬಾಲಣ್ಣ

ಭಾರದ್ವಾಜ ಮುನಿಯ ಸಲಹೆಯಾಂಗೆ ಮೂವರೂ ಯಮುನಾನದಿಯ ದಾಂಟಿ ಚಿತ್ರಕೂಟಕ್ಕೆ ಮುಟ್ಟಿದವು.ರಾಮಂಗೆ ಆ ಜಾಗೆ ತುಂಬಾ ಕುಶಿ ಆತು. ಹಾಂಗಾಗಿ ಅವ° ಅಲ್ಲಿಯೇ ನಿಂಬ ಯೋಚನೆ ಮಾಡಿದ°. ಲಕ್ಷ್ಮಣನತ್ತರೆ “ಪರ್ಣಕುಟೀರವ ತಯಾರ್ಸುವೊ°” ಹೇಳಿದ°. ಎಲೆ, ಹುಲ್ಲು, ಬೆದುರು, ಹಾಕಿ ಮಾಡು ಮಾಡಿದವು. ಆ ಪರ್ಣಕುಟೀರ ತಯಾರಪ್ಪದ್ದೆ ರಾಮ ಅದರ ಕ್ರಮ ಪ್ರಕಾರ ಸಾಧ್ಯ ಇದ್ದಷ್ಟು ಪೂಜೆ, ವಿಧಿಗಳ ಮುಗಿಶಿ, ಹಿರಿಯರ ಪ್ರಾರ್ಥಿಸಿಗೊಂಡು ಒಕ್ಕಲಾದ°. ಅಲ್ಲಿಯೇ ಹತ್ತರೆ ಮಾಲ್ಯವತಿ ನದಿ ಜುಳುಜುಳುನೆ ಶಬ್ದ ಮಾಡಿಗೊಂಡಿತ್ತು. ಗೆಡುಗಳಲ್ಲಿ, ಮರಂಗಳಲ್ಲಿ ಬಣ್ಣಬಣ್ಣದ ಹೂಗಿನ ಗೊಂಚಲುಗೊ ಅರಳಿಗೊಂಡಿತ್ತು. ಕೆಲವು ಮರಂಗಳಲ್ಲಿ ಹಣ್ಣುಗೊ ನೇತುಗೊಂಡಿತ್ತು. ಚೆಂದದ ಹಾತೆಗೊ ಅತ್ತೆ ಇತ್ತೆ ಹೂಗಿಂದ ಹೂಗಿಂಗೆ ಹಾರಿಗೊಂಡಿತ್ತಿದ್ದವು. ಹಕ್ಕಿಗಳ ಚಿಲಿಪಿಲಿ ಶಬ್ದವೂ ಕೇಳಿಗೊಂಡಿತ್ತು. ಸೀತೆಗೂ ಆ ಜಾಗೆ ತುಂಬ ಹಿಡಿಸಿತ್ತು.
ಸುಮಂತ್ರ ಅಯೋಧ್ಯೆಗೆ ಹಿಂದೆ ಹೋಗಿ ಮುಟ್ಟಿದ°. ಅಷ್ಟಪ್ಪಗ ರಾಮ, ಸೀತೆ, ಲಕ್ಷ್ಮಣರು ಚಿತ್ರಕೂಟಕ್ಕೆ ಮುಟ್ಟಿದ ಶುದ್ದಿ ಸುಮಂತ್ರಂಗೆ ಗೊಂತಾತು. ಸುಮಂತ್ರಂಗೆ ರಾಮ ಇಲ್ಲದ್ದೆ ಅಯೋಧ್ಯೆ ಖಾಲಿಖಾಲಿ ಆದಾಂಗೆ ಕಂಡತ್ತು. ಜೆನಂಗೊಕ್ಕೆ ಯಾವದರಲ್ಲೂ ಮನಸ್ಸಿಲ್ಲೆ. ಸುಮಂತ್ರ ಒಬ್ಬನೇ ಬಂದದು ನೋಡಿ ಅಪ್ಪಗ ದುಃಖ ತಡವಲೆಡಿಯದ್ದೆ ಕೂಗಿದವು.
ಸುಮಂತ್ರ ಅಯೋಧ್ಯೆಗೆ ಹಿಂದೆ ಬಂದ ಶುದ್ದಿ ದಶರಥ ರಾಜಂಗೆದೆ ಸಿಕ್ಕಿತ್ತು. ಸುಮಂತ್ರ ರಾಮನ ಒಪ್ಪಿಸಿ ಹಿಂದೆ ಅಯೋಧ್ಯೆಗೆ ಕರಕ್ಕೊಂಡು ಬಂದಿಕ್ಕೋ ಹೇಳಿ ದಶರಥನ ಮನಸ್ಸಿಂಗೆ ಕಂಡತ್ತು. ಆದರೆ ಸುಮಂತ್ರ ಒಬ್ಬನೇ ಬಂದದು ನೋಡಿ ನಿರಾಶೆ ಆತು. “ರಾಮ ಇಲ್ಲದ್ದೆ ಎನಗೆ ಬದುಕ್ಕುಲೆಡಿಯ” ಹೇಳಿ ಅವ° ಕೂಗುಲೆ ಸುರು ಮಾಡಿದ°. ಅವಂಗೆ ರಾಮನ ಸಣ್ಣಾದಿಪ್ಪಗಾಣ ಆಟಂಗೊ, ಅವನ ಹುಟ್ಟು, ಮುನಿಗಳ ಯಜ್ಞ ರಕ್ಷಣೆ ಮಾಡಿದ್ದು, ಸೀತೆಯೊಟ್ಟಿಂಗೆ ಸ್ವಯಂವರ ಆದ್ದು ಎಲ್ಲ ಒಂದರ ಹಿಂದೊಂದು ನೆನಪಾಯ್ಕೊಂಡು ಇತ್ತು. “ಆನೆನ್ನ ಬಂಗಾರಿನಾಂಗಿದ್ದ ಮಗನ ಕಳಕ್ಕೊಂಡೆ. ಆನು ಯಾವ ಪಾಪ ಮಾಡಿದ್ದಕ್ಕೆ ಈ ಶಿಕ್ಷೆಯೋ?” ಹೇಳಿ ಗ್ರೇಶಿಗೊಂಡು ದಶರಥ° ಚಿಂತೆಲಿ ಬೆಂದ°. ಅಷ್ಟಪ್ಪಗ ಅವಂಗೆ ಅವ ಜವ್ವನಿಗ ಆದಿಪ್ಪಗ ನಡದ ಒಂದು ಘಟನೆ ನೆನಪಿಗೆ ಬಂತು.
ಒಂದರಿ ದಶರಥ° ಕಾಡಿಂಗೆ ಬೇಟೆಯಾಡುಲೆ ಹೋಗಿತ್ತಿದ್ದ°. ಬೇಟೆಯ ಹುಡ್ಕಿಗೊಂಡು ಅವ° ಸರಯೂ ನದಿಯ ಕರೆಂಗೆತ್ತಿದ. ಕಸ್ತಲಾಗಿತ್ತು. ಹೊಳೆಯ ಹೊಡೆಂದ ಗುಳುಗುಳು ಶಬ್ದ ಕೇಳುಲೆ ಸುರುವಾತು. ಯಾವದೋ ಪ್ರಾಣಿ ಹೊಳೆ ನೀರಿನ ಕುಡಿತ್ತಾ ಇದ್ದು ಹೇಳಿ ಗ್ರೇಶಿದ°. ಪ್ರಾಣಿಯ ನೋಡದ್ದರೂ ಶಬ್ದ ಬಂದ ದಿಕ್ಕಿಂಗೆ ಬಾಣ ಬಿಟ್ಟ°. ಆ ಬಾಣದ ಪೆಟ್ಟು ಶ್ರವಣ ಕುಮಾರ ಹೇಳ್ತ ಹುಡುಗಂಗೆ ತಾಗಿತ್ತು. ದಶರಥಂಗೆ ಶಬ್ದದ ದಿಕ್ಕಿಂಗೆ ಗುರಿ ಮಡುಗಿ ಬಾಣ ಬಿಡುವ ‘ಶಬ್ದವೇಧಿ’ ವಿದ್ಯೆ ಗೊಂತಿತ್ತು. ಶ್ರವಣ ಕುಮಾರ ಕಣ್ಣು ಕಾಣದ್ದ ಅವನ ಅಪ್ಪ ಅಮ್ಮಂಗೆ ನೀರು ಕುಡಿವಲೆ ತಪ್ಪಲೇಳಿ ಹೊಳೆ ಕರೆಂಗೆ ಹೋಗಿತ್ತಿದ್ದ°. ಶ್ರವಣಂಗೆ ಪೆಟ್ಟಾದ್ದರ ಕಂಡು ದಶರಥಂಗೆ ಗಾಬರಿ ಆತು. ವಿಷಯ ಗೊಂತಪ್ಪದ್ದೆ ದಶರಥ ಶ್ರವಣನ ಎತ್ತಿಗೊಂಡು ಕಣ್ಣು ಕಾಣದ್ದ ಅವನ ಅಪ್ಪ ಅಮ್ಮನ ಹತ್ತರಂಗೆ ಬಂದ°. ಆವಗಳೇ ಶ್ರವಣ ಕುಮಾರನ ಜೀವ ಹೋಗಿತ್ತು. ಸತ್ತು ಹೋದ ಮಗಂಗಾಗಿ ಅಪ್ಪ ಅಮ್ಮ ತುಂಬಾ ದುಃಖಿಸಿ ಕೂಗಿದವು. ದುಃಖವ ತಡವಲೆ ಎಡಿಯದ್ದೆ, ಶ್ರವಣನ ಅಪ್ಪ° ದಶರಥಂಗೆ, “ರಾಜನೇ, ನೀನು ಎನ್ನ ಮಗನ ಕೊಂದಿದೆ. ಎಂಗಳ ಈ ಪ್ರಾಯಲ್ಲಿ ಮಗಂದ ದೂರ ಮಾಡಿದ್ದೆ. ಈ ದುಃಖಲ್ಲಿಯೇ ಕೊರಗಿ ಆನು ಸತ್ತು ಹೋವುತ್ತೆ. ನೀನು ಕೂಡಾ ಮಗಂಗಾಗಿ ಕೊರಗಿ ಕೊರಗಿ ಸಾವಿನ ಅಪ್ಪುವೆ” ಹೇಳಿ ಶಾಪ ಕೊಟ್ಟ°. ಅದೆಲ್ಲ ದಶರಥಂಗೆ ನೆನಪ್ಪಾತು.
ದಶರಥ ಕೌಸಲ್ಯೆಯ ಕೈ ಹಿಡುಕ್ಕೊಂಡು ಮದಲು ನಡದ ಘಟನೆಯ ಎಲ್ಲ ಹೇಳಿದ°. “ಆ ಮುನಿಯ ಶಾಪ ಈಗ ನಿಜ ಆಯಿದು. ಆನು ಮಾಡಿದ ಪಾಪಕ್ಕೆ ಎನ್ನ ಕ್ಷಮಿಸು ಕೌಸಲ್ಯೆ” ಹೇಳಿದ° ಕೌಸಲ್ಯೆಯ ಹತ್ತರೆ. ದಶರಥ° ರಾಮನ ಚೆಂದದ ರೂಪವ ನೆನಪು ಮಾಡಿಗೊಂಡು ಕೂದುಗೊಂಡಿತ್ತಿದ್ದ°. ಅವನ ಕಣ್ಣಿಲಿ ನೀರು ಇಳ್ಕೊಂಡಿತ್ತು. ಒಂದರಿಯೇ ಅವ° ಜೋರು ಬೊಬ್ಬೆ ಹೊಡದ. “ಆನು ಸಾವಗ ಎನ್ನ ಹತ್ತರೆ ಮಗ ಇರೆಕ್ಕು ಹೇಳಿ ಗ್ರೇಶಿತ್ತಿದ್ದೆ. ಆದರೆ ಕೈಕೇಯಿ ಅದರ ಎಲ್ಲ ಹಾಳು ಮಾಡಿತ್ತು. ಅದುವೇ ಎನ್ನ ನಿಜವಾದ ಶತ್ರು. ಕೌಸಲ್ಯಾ! ಸುಮಿತ್ರಾ! ಆನಿನ್ನು ಹೆಚ್ಚು ಸಮಯ ಬದುಕ್ಕೆ. ಎನ್ನ ಕಣ್ಣುಗೊ ಸೋತಿದು. ರಾಮಾ, ಎನ್ನ ಕಂದಾ! ರಾಮಾ, ರಾಮಾ” ಹೇಳಿಗೊಂಡು ದಶರಥ ಮಹಾರಾಜ° ಅವನ ಕಡೇ ಉಸುಲು ಬಿಟ್ಟ°.
ಅಯೋಧ್ಯೆಯ ಜೆನಂಗೊಕ್ಕೆ ರಾಮನ ವನವಾಸದ ದುಃಖವೇ ಮರದ್ದಿಲ್ಲೆ. ಈಗ ದಶರಥ ಮಹಾರಾಜ° ಸತ್ತ ಶುದ್ದಿ ಸಿಕ್ಕಿಯಪ್ಪಗ ಅದು ಜೆನಂಗಳ ದುಃಖ ಸಾಗರಲ್ಲಿಯೇ ಮುಳುಗಿಸಿತ್ತು. “ಛೆ! ಎಂಥಾ ದುರಂತ ಇದು? ಮಹಾರಾಜಂಗೆ ನಾಲ್ಕು ಮಗಂದ್ರು. ಎಲ್ಲಾ ಮಕ್ಕಳೂ ಅಪ್ಪನ ಪ್ರೀತಿ ಗೌರವಲ್ಲಿ ನೋಡಿಗೊಂಡಿತ್ತಿದ್ದವು. ಒಬ್ಬನೂ ಹತ್ತರೆ ಇಲ್ಲದ್ದಿಪ್ಪಗ ರಾಜನ ಅಂತ್ಯ ಆತಲ್ಲದಾ? ಅವನ ಅಂತ್ಯಸಂಸ್ಕಾರವ ಆರು ಮಾಡುದು?” ಹೇಳಿ ಜೆನಂಗೊ ಎಲ್ಲ ಅಲ್ಲಿಯಲ್ಲಿ ಗುಂಪು ಗುಂಪಾಗಿ ನಿಂದು ಮಾತಾಡುಲೆ ಸುರು ಮಾಡಿದವು. ಮಕ್ಕೊ ರಾಜ್ಯಲ್ಲಿ ಇಲ್ಲದ್ದ ಕಾರಣ ವಸಿಷ್ಠ ಮುನಿ ಮಹಾರಾಜನ ದೇಹವ ಹಾಳಾಗದ್ದ ಹಾಂಗೆ ಮಡುಗುವ ವ್ಯವಸ್ಥೆಯ ಮಾಡ್ಸಿದ°. ದಶರಥನ ಮಂತ್ರಿಗೊ ಎಲ್ಲಾ ಮುಂದಾಣ ಮಾರ್ಗದ ಬಗ್ಗೆ ಚರ್ಚೆ ಮಾಡಿ ವಸಿಷ್ಠ ಮುನಿಯ ಸಲಹೆಯ ಹಾಂಗೆ ಮುಂದರುದವು.
ಭರತ° ಅವನ ಸಂಬಂಧಿಕರ ಮನಗೆ ಶತ್ರುಘ್ನನೊಟ್ಟಿಂಗೆ ಹೋಗಿತ್ತಿದ್ದ°. ಅಲ್ಲಿಗೆ ದೂತನ ಹತ್ತರೆ ಕಾಗದ ಕಳುಸಿ ಭರತನ ಬರುಸುವ ನಿರ್ಧಾರ ಮಾಡಿದವು. ಅಲ್ಲಿಗೆ ಕಳುಸಿದ ಕಾಗದಲ್ಲಿ ರಾಮನ ವನವಾಸದ ವಿಷಯ, ದಶರಥ° ಸತ್ತು ಹೋದ ವಿಷಯ ಇತ್ತಿಲ್ಲೆ. ಅಯೋಧ್ಯೆಯ ಯಾವುದೇ ಶುದ್ದಿಯನ್ನೂ ಭರತ, ಶತ್ರುಘ್ನಂಗೆ ತಿಳಿಶೆಡಾಳಿ ದೂತಂಗೆ ಆಜ್ಞೆ ಮಾಡಿದವು. ದೂತ° ತಂದ ಕಾಗದಲ್ಲಿ ಕೂಡಲೇ ಅಯೋಧ್ಯೆಗೆ ಬಪ್ಪ ಹಾಂಗೆ ಸೂಚನೆ ಇತ್ತು. ಭರತಂಗೆ ಅದರ ಮುನ್ನಾಣ ದಿನವೇ ಅಪಶಕುನಂಗೊ, ಕೆಟ್ಟ ಕನಸುಗೊ ಬಿದ್ದ ಕಾರಣ ಅವ° ಅಯೋಧ್ಯೆಗೆ ಹೆರಡುವ ತಯಾರಿಲಿ ಇತ್ತಿದ್ದ°.
ಕಾಗದ ನೋಡಿದ ಕೂಡಲೇ ಹೆರಟ ಭರತಂಗೆ ಅಯೋಧ್ಯಾ ನಗರವ ಕಾಂಬಗ ಆಘಾತ ಆತು. ಜೆನಂಗೊ ಮೂಲೆ ಮೂಲೆಲಿ ಕೂದುಗೊಂಡು ಕೂಗುದು ಕಂಡತ್ತು. ದೇವಸ್ಥಾನಂಗಳಲ್ಲಿ ಗಂಟೆಯ ಶಬ್ದ, ಮಣಿಯ ಕಿಣಿಕಿಣಿ, ವೇದಘೋಷಂಗೊ ಯಾವ ಹೊಡೆಂದಲೂ ಕೇಳಿತ್ತಿಲ್ಲೆ. ಉದ್ಯಾನವನಂಗೊ, ಸಭಾಭವನಂಗೊ ಎಲ್ಲಾ ಖಾಲಿ ಖಾಲಿ ಕಂಡತ್ತು. ಬೀದಿಲಿ ಯಾವ ಮಕ್ಕಳೂ ಆಡುದು ಕಂಡಿದಿಲ್ಲೆ. ಏಕೇಳಿ ಗೊಂತಾತಿಲ್ಲೆ. ಇದೆಲ್ಲ ನೋಡಿ ಭರತ, ಶತ್ರುಘ್ನರಿಂಗೆ ಚಿಂತೆ ಆತು. ಅವ° ಸೀದಾ ದಶರಥನ ಮನುಗುವ ಕೋಣೆಗೆ ಹೋದ°. ಅದೂ ಖಾಲಿ ಆಗಿತ್ತು. ಅಪ್ಪ ಅಮ್ಮನ ಕೋಣೆಲಿಕ್ಕು ಹೇಳಿ ಅವ° ಅಲ್ಲಿಗೆ ಹೋದ°. ಅಲ್ಲಿ ಕೈಕೇಯಿ ಮಾತ್ರ ಇತ್ತು. “ಅಮ್ಮಾ! ಅಪ್ಪ° ಎಲ್ಲಿದ್ದ°? ಆನಿಲ್ಲದ್ದಿಪ್ಪಗ ಇಲ್ಲಿ ಎಂತಾತು?” ಹೇಳಿ ಕೇಳಿದ°.
‘ಆನು ನಿನ್ನ ಅಯೋಧ್ಯೆಯ ರಾಜ ಮಾಡಿ ಬಿಟ್ಟೆ’ ಹೇಳಿದರೆ ಅವಂಗೆ ಭಾರೀ ಸಂತೋಷ ಅಕ್ಕು ಹೇಳಿ ಕೈಕೇಯಿ ಗ್ರೇಶಿತ್ತು. ನಯವಾದ ಮಾತಿಲಿ, “ಕಂದಾ! ಸಾವದರ ಆರಿಂದಲಾದರೂ ತಡವಲೆಡಿಗಾ? ನಿನ್ನ ಅಪ್ಪ° ತೀರಿ ಹೋಯಿದ°” ಹೇಳಿತ್ತು. ಭರತಂಗೆ ಈ ಶುದ್ದಿ ಕೇಳಿ ಆಘಾತ ಆತು. ಅವಂಗೆ ವಿಪರೀತ ಬೇಜಾರಾತು. ಅವ° ಅತಿ ಪ್ರೀತಿಯ ಅಪ್ಪನ ಕಳಕ್ಕೊಂಡಿದ°. ಅವಂಗೆ ಈ ಶುದ್ದಿಯ ಕೇಳಿ ಕಣ್ಣೀರು ಇಳುದತ್ತು. ಅಪ್ಪ° ಸಾವ ಸಮಯಲ್ಲಿ ಆನು ಅವನತ್ತರೆ ಇದ್ದಿದ್ದರೆ ಎಷ್ಟು ಒಳ್ಳೆದಿತ್ತು ಹೇಳಿ ಗ್ರೇಶಿದ°. “ಸದ್ಯ, ರಾಮ ಲಕ್ಷ್ಮಣರಾದರೂ ಆ ಭಾಗ್ಯ ಪಡದವು” ಹೇಳಿ ಸಮಾಧಾನ ಮಾಡಿಗೊಂಡ. ಮತ್ತೆ ಅಮ್ಮನತ್ತರೆ ತಿರುಗಿ “ಆನೀಗಳೇ ಹೋಗಿ ರಾಮನ ಕಾಣ್ತೆ. ಅಪ್ಪ ಸಾವ ಮದಲು ಎನಗೆ ಹೇಳುವಾಂಗೆ ಏನಾದರೂ ಉಪದೇಶ ಕೊಟ್ಟಿದನೋ ಹೇಳಿ ಕೇಳಿ ತಿಳ್ಕೊಳ್ತೆ” ಹೇಳಿ ಭರತ ಅಲ್ಲಿಂದ ಏಳುಲೆ ಹೆರಟ.
ಆವಗ ಕೈಕೇಯಿ ನಡದ ವಿಚಾರಂಗಳ ಎಲ್ಲ ಹೇಳಿತ್ತು. ಮತ್ತೆ ಅದರ ಕೈಯ ಭರತನ ಮೇಲೆ ಮಡುಗಿ, “ಭರತ, ನಿನ್ನಣ್ಣ ರಾಮ, ಸೀತೆ ಲಕ್ಷ್ಮಣರ ಒಟ್ಟಿಂಗೆ ಈಗ ಕಾಡಿಲಿ ವನವಾಸಲ್ಲಿದ್ದ°. ಆನು ನಿನಗಾಗಿ ಅಯೋಧ್ಯೆಯ ಪಡದು ಕೊಟ್ಟಿದೆ. ಅಯೋಧ್ಯೆಯ ರಾಜನಾಗಿ ಆಡಳಿತ ನಡೆಶಿಗೊಂಡು ನೆಮ್ಮದಿಲ್ಲಿರು” ಹೇಳಿತ್ತು ಕೈಕೇಯಿ.
ಇದರ ಕೇಳಿ ಭರತ° ಅಳ್ಕಿ ಬಿದ್ದ°. ಕೋಪ ಆವೇಶಲ್ಲಿ ಅಮ್ಮನ ಬೈದ°. “ಛೆ! ನೀನು ಒಂದು ಅಮ್ಮನಾ? ನಿನ್ನ ‘ಅಮ್ಮಾ’ ಹೇಳುಲೇ ನಾಚಿಕೆ ಆವ್ತೆನಗೆ. ನೀನು ಒಂದು ಅನಿಷ್ಟ ಇದ್ದಾಂಗೆ. ನಮ್ಮ ಕುಲಕ್ಕೇ ಕೆಟ್ಟ ಹೆಸರು ತಂದು ಹಾಕಿದೆ. ಎನ್ನಂದ ಹೆಚ್ಚು ನೀನು ರಾಮನ ಪ್ರೀತಿ ಮಾಡಿಗೊಂಡಿತ್ತಿದ್ದೆ ಅಲ್ಲದಾ? ಅಯ್ಯೋ! ಅಂಥೋನನ್ನೇ ನೀನು ಕಾಡಿಂಗೆ ಅಟ್ಟಿದೆ ಅಲ್ಲದಾ? ಎನ್ನ ರಾಜ ಮಾಡುಲೆ ಹೋಗಿ ನೀನು ಅಪ್ಪನನ್ನೇ ಕೊಂದು ಬಿಟ್ಟೆ. ರಾಮ ಏರೆಕ್ಕಾದ ಸಿಂಹಾಸನಲ್ಲಿ ಆನು ಕೂರೆಕ್ಕು ಹೇಳಿ ಆಶೆಯಾ? ನಿನಗೆ ಧಿಕ್ಕಾರ ಇರಲಿ” ಹೇಳಿ ಭರತ ಹೇಳಿದ°.
ಭರತಂಗೆ ಅಮ್ಮನ ಮೇಲೆ ಕೋಪ ತಿರಸ್ಕಾರ ಹೆಚ್ಚಾಯ್ಕೊಂಡೇ ಬಂತು. ಅವ° ಅಮ್ಮ ಮಾಡಿದ ಪಾಪಂಗೊಕ್ಕೆ ಪ್ರಾಯಶ್ಚಿತ್ತ ಮಾಡಿಗೊಂಬ ನಿರ್ಧಾರ ಮಾಡಿದ°. “ಆನು ಕಾಡಿಂಗೆ ಹೋವ್ತೆ. ಎನ್ನ ಜೀವನದ ಒಳುದ ಭಾಗವ ಎಲ್ಲ ಕಾಡಿಲಿಯೇ ಕಳೆತ್ತೆ. ಅದಕ್ಕೆ ಮದಲು ಕಾಡಿಂದ ಅಣ್ಣನ ಕರಕ್ಕೊಂಡು ಬಂದು ಅವನನ್ನೇ ಅಯೋಧ್ಯೆಯ ರಾಜನಾಗಿ ಮಾಡ್ತೆ” ಹೇಳಿ ಭರತ° ಗ್ರೇಶಿಗೊಂಡ°.
ಮತ್ತೆ ಭರತ° ದುಃಖಲ್ಲಿ ಕೂಗಿಗೊಂಡು ಕೌಸಲ್ಯೆಯ ಕೋಣೆಗೆ ಹೋದ°. ಕೌಸಲ್ಯೆಯ ಕಾಲಿಂಗೆ ಬಿದ್ದು ಕೇಳಿಗೊಂಡ°, “ಅಮ್ಮಾ, ಆನು ಪಾಪಿ. ಎನ್ನ ಅಪ್ಪನ ಸಾವಿಂಗೆ ಆನು ಕಾರಣ ಆದೆ. ಎನ್ನ ಅಣ್ಣಂದ್ರು ಕಾಡಿಂಗೆ ಹೋಪಲೂ ಆನೇ ಕಾರಣ ಆದೆ. ನೀನು ಎನ್ನನ್ನೂ, ಎನ್ನ ಹೆತ್ತ ಅಮ್ಮನನ್ನೂ ದಯಮಾಡಿ ಕ್ಷಮಿಸುವೆಯಾ?” ಹೇಳಿ ಕೌಸಲ್ಯೆಯ ಹತ್ತರೆ ಕೇಳಿಗೊಂಡ°. ಕೌಸಲ್ಯೆ ಅವನ ಮನಸ್ಸಿನ ಸಮಾಧಾನ ಮಾಡಿತ್ತು. “ವಿಧಿಬರಹವ ಆರಿಂಗುದೆ ಬದಲ್ಸುಲೆ ಎಡಿಯ” ಹೇಳಿ ಕೌಸಲ್ಯೆ ಹೇಳಿತ್ತು. ಭರತನ ಶುದ್ಧ ಮನಸ್ಸಿನ, ನಿರ್ಮಲ ಹೃದಯವ ಅದು ಅರ್ಥ ಮಾಡಿಗೊಂಡಿತ್ತು. ಇದರಲ್ಲಿ ಭರತಂದು ಏನೂ ತಪ್ಪಿಲ್ಲೇಳಿ ಹೇಳಿತ್ತು.
ಭರತ° ಮಂತ್ರಿಗಳ ಭೇಟಿ ಆದ°. ವಸಿಷ್ಠ ಮಹರ್ಷಿಗೆ ಕೈ ಮುಗುದ°. ಭರತನ ಕಂಡ ವಸಿಷ್ಠ, ದಶರಥನ ಅಂತ್ಯಸಂಸ್ಕಾರಕ್ಕೆ ಬೇಕಪ್ಪ ವ್ಯವಸ್ಥೆಯ ಮಾಡ್ಸಿದ°. ಭರತ ಭಾರವಾದ ಮನಸ್ಸಿಲಿ ಅಪ್ಪನ ಅಂತ್ಯಸಂಸ್ಕಾರ ಮಾಡಿದ°.
ಕೈಕೇಯಿಗೆ ಕೆಟ್ಟ ಬುದ್ಧಿ ಹೇಳಿ ಕೊಟ್ಟ ಮಂಥರೆಗೆ ಶಿಕ್ಷೆ ಕೊಡುಸೆಕ್ಕು ಹೇಳಿದ° ಶತ್ರುಘ್ನ. ಮುದಿ ಹೆಂಗಸಾದ ಮಂಥರೆಗೆ ಶಿಕ್ಷೆ ಕೊಟ್ಟು ಕ್ರೂರವಾಗಿ ನಡವಲೆ ಭರತಂಗೆ ಮನಸ್ಸು ಆಯಿದಿಲ್ಲೆ. ಭರತ° ಮಂಥರೆಯ ಕ್ಷಮಿಸಿಬಿಟ್ಟ°.
ಭರತಂಗೆ ಈಗ ಯಾವ ವಿಚಾರಲ್ಲಿಯೂ ಮನಸ್ಸಿಲ್ಲೆ. ಆಸಕ್ತಿಯೂ ಇಲ್ಲೆ. ಅಮ್ಮನ ನಡತೆ ಅವಂಗೇ ಕೋಪ ತಾಪ, ಅವಮಾನ ಹುಟ್ಟುಸಿದ್ದು. ಅಪ್ಪನ ಸಾವು, ರಾಮನ ವನವಾಸ, ರಾಮ ಇಲ್ಲದ್ದ ಕೊರತೆ ಎಲ್ಲಾ ಯೋಚನೆ ಮಾಡಿಗೊಂಡು ಅವ° ಗಂಟೆಗಟ್ಲೆ ಒಬ್ಬನೇ ಕೂದುಗೊಂಡಿತ್ತಿದ್ದ°. ರಾಜ ಆಗಿ ಸಿಂಹಾಸನಲ್ಲಿ ಕೂಪಲೆ ಅವ° ಒಪ್ಪಿದ್ದನೇ ಇಲ್ಲೆ. “ಈವರೆಗೆ ರಘುವಂಶಲ್ಲಿ ಸಣ್ಣ ಮಗ ಸಿಂಹಾಸನ ಏರಿದ್ದಾಯಿಲ್ಲೆ. ಸಿಂಹಾಸನ ಖಾಲಿ ಒಳುದ್ದು. ರಾಮನ ಆನು ಕಾಡಿಂದ ಕರಕ್ಕೊಂಡು ಬತ್ತೆ. ಸಿಂಹಾಸನಲ್ಲಿ ಅವನ ಕೂರ್ಸಿ ಅವನ ಬದಲಿಂಗೆ ಆನೇ ಕಾಡಿಲಿ ವನವಾಸ ಮಾಡ್ತೆ” ಹೇಳಿ ಭರತ° ಶಪಥ ಮಾಡಿದ°.
ಮರದಿನ ಭರತ° ದೊಡ್ಡ ಸೈನ್ಯವನ್ನೂ ಜೆತೆಲ್ಲಿ ಕರಕ್ಕೊಂಡು ಅಯೋಧ್ಯೆಂದ ಹೆರಟ°. ಅಯೋಧ್ಯೆಯ ಕೆಲವು ಜೆನಂಗೊ, ಕೈಕೇಯಿ, ರಾಣಿಯರು, ಎಲ್ಲ ಒಟ್ಟಾಗಿಯೇ ಕಾಡಿಂಗೆ ಹೆರಟವು. ಈಗ ಕೈಕೇಯಿಗೆ ತಾನೆಂಥ ದೊಡ್ಡ ತಪ್ಪು ಮಾಡಿಬಿಟ್ಟೆ ಹೇಳಿ ಕಾಂಬಲೆ ಸುರುವಾಗಿತ್ತು. ರಾಮನತ್ತರೆ ಕ್ಷಮೆ ಕೇಳೆಕ್ಕು ಹೇಳಿ ಆತು. ಅದಕ್ಕೆ ಪಶ್ಚಾತ್ತಾಪ ಆಗಿತ್ತು.
ದೊಡ್ಡ ಸೈನ್ಯದೊಟ್ಟಿಂಗೆ ಗುಹ ಇಪ್ಪ ಜಾಗೆಗೆ, ಲೆಖ್ಖ ಇಲ್ಲದ್ದಷ್ಟು ಜೆನಂಗ ಬಪ್ಪದು ಗುಹಂಗೆ ಕಂಡತ್ತು. ಇದರ ನೋಡಿದ ಗುಹ°, ಭರತ° ಈಗ ರಾಮನ ಕೊಲ್ಲುಲೇಳಿ ಬಪ್ಪದು ಹೇಳಿ ಗ್ರೇಶಿದ°. ಹದಿನಾಲ್ಕು ವರ್ಷ ಕಳುದ ಮೇಲೆಯೂ ರಾಜ್ಯವ ಅವನ ಕೈ ತಪ್ಪದ್ದ ಹಾಂಗೆ ಮಾಡುವ ಆಲೋಚನೆಯಾ? ಹೇಳಿದೆ ಗುಹಂಗೆ ಕಂಡತ್ತು. ಹಾಂಗಾಗಿ ಭರತ° ಹತ್ತರೆ ಬಪ್ಪ ಮದಲೇ, “ಎಂತಕೆ ಇಷ್ಟು ದೊಡ್ಡ ಸೈನ್ಯವ ತೆಕ್ಕೊಂಡು ಬಯಿಂದೆ? ರಾಮನ ಮೇಲೆ ಯುಧ್ಧಕ್ಕೆ ಬಂದದಾ? ಹಾಂಗಾದರೆ ಮದಲು ಎನ್ನ ಸೋಲ್ಸು” ಹೇಳಿದ°.
ಗುಹನ ಅನುಮಾನಂದಾಗಿ ಭರತಂಗೆ ತುಂಬ ಬೇಜಾರಾತು. ಅವ° ಬಂದ ಕಾರಣವ ಗುಹಂಗೆ ಬಿಡಿಸಿ ವಿವರವಾಗಿ ಹೇಳಿದ°. ರಾಮನ ರಾಜನಾಗಿ ಮಾಡುದೇ ತನ್ನ ಆಶೆ ಹೇಳಿದ°. ಭರತನ ಮಾತುಗಳ ಕೇಳಿದ ಗುಹಂಗೆ ಭಾರೀ ಸಂತೋಷ ಆತು. ಅವ°, ಭರತ ಮತ್ತೆ ಅವನೊಟ್ಟಿಂಗೆ ಬಂದೋರಿಂಗೆಲ್ಲ ಗಂಗಾನದಿಯ ದಾಂಟುಲೆ ಸಹಾಯ ಮಾಡಿದ°. ಅವು ಎಲ್ಲ ಚಿತ್ರಕೂಟದ ಹೊಡೆಂಗೆ ಮುಂದರುದವು.
ಭರತ° ಮತ್ತೆ ಅವನ ಸೇನೆ ಚಿತ್ರಕೂಟದತ್ತರೆಂಗೆ ಬಂದು ಮುಟ್ಟಿತ್ತು. ಇದರ ಲಕ್ಷ್ಮಣ ನೋಡಿದ°. “ಅಣ್ಣಾ, ನೋಡಲ್ಲಿ. ಬೇಗ ನಿನ್ನ ಬಿಲ್ಲು ಬಾಣಂಗಳ ಎತ್ತಿಗೊ. ಭರತ° ದೊಡ್ಡ ಸೈನ್ಯದ ಒಟ್ಟಿಂಗೆ ನಿನ್ನ ಕೊಲ್ಲುಲೆ ಬತ್ತಾ ಇದ್ದ°. ಅವನ ಅಮ್ಮ ನಿನ್ನ ಕಾಡಿಂಗೆ ಅಟ್ಟಿತ್ತು. ಭರತ° ಈಗ ನಿನ್ನ ಕೊಲ್ಲುಲೂ ತಯಾರಾದಾಂಗೆ ಕಾಣ್ತು. ಆನು ಭರತನೊಟ್ಟಿಂಗೆ ಹೋರಾಡ್ತೆ. ಅವನ ಕೊಲ್ಲುತ್ತೆ.” ಹೇಳಿದ°. ಅವನ ಸ್ವರಲ್ಲಿ ಕೋಪ ತುಂಬಿಗೊಂಡಿತ್ತು.
ರಾಮ, ಲಕ್ಷ್ಮಣ ಹೇಳಿದ್ದರ ಶಾಂತವಾಗಿ ಕೇಳಿದ°. “ಲಕ್ಷ್ಮಣಾ, ನೀನು ಭರತನ ಬಗ್ಗೆ ತಪ್ಪಾಗಿ ತಿಳ್ಕೊಂಡಿದೆ. ಅಯೋಧ್ಯೆಗೆ ಹಿಂದೆ ಬನ್ನಿ ಹೇಳುಲೇಳಿ ಅವ ನಮ್ಮತ್ತರಂಗೆ ಬಪ್ಪದಾದಿಕ್ಕು. ಭರತನ ವಿಚಾರ ಹಾಂಗೆಲ್ಲ ಕೆಟ್ಟದಾಗಿ ಯೋಚನೆ ಮಾಡೆಡ. ಯಾವಗಳೂ ಹಿಂದೆ ಮುಂದೆ ನೋಡದ್ದೆ ಆಲೋಚನೆ ಮಾಡದ್ದೆ ಮಾತಾಡುಲಾಗ.” ಹೇಳಿ ರಾಮ° ಲಕ್ಷ್ಮಣಂಗೆ ಹೇಳಿದ°. ಲಕ್ಷ್ಮಣ ಎಂದುದೆ ಅಣ್ಣನ ಮಾತಿಂಗೆ ಎದುರು ಉತ್ತರ ಕೊಟ್ಟೋನಲ್ಲ. ವಾದ ಮಾಡಿದೋನಲ್ಲ. ಹಾಂಗಾಗಿ ಅವ° ಸುಮ್ಮನೆ ಕೂದ°.
ರಾಮನ ಕಂಡ ಕೂಡಲೇ ಭರತ° ಓಡಿ ಬಂದು ರಾಮನ ಪಾದಂಗಳ ಮೇಲೆ ತಲೆ ಮಡುಗಿದ°. ರಾಮ ಅವನ ಏಳಿಸಿ ಪ್ರೀತಿಲಿ ಅಪ್ಪಿಗೊಂಡ°. ರಾಮ ಭರತನ ಮೋರೆಲಿಪ್ಪ ದುಃಖವ ಗಮನಿಸಿದ°. ಹಾಂಗಾಗಿ ಅವ° ಭರತನತ್ತರೆ, “ಅಪ್ಪ° ಹೇಂಗಿದ್ದವು? ನೀನು ರಾಜ್ಯಭಾರವ ವಹಿಶಿಗೊಂಡೆಯಾ?” ಹೇಳಿ ಕೇಳಿದ°. ಭರತಂಗೆ ಆವಗ ದುಃಖ ತಡಕ್ಕೊಂಬಲಾತಿಲ್ಲೆ. ಬಿಕ್ಕಿ ಬಿಕ್ಕಿ ಕೂಗಿಗೊಂಡು, “ಅಪ್ಪ° ಎದೆ ಒಡದು ಸತ್ತು ಹೋದ°. ನೀನಿಲ್ಲದ್ದ ಕೊರತೆಯ ಅಪ್ಪಂಗೆ ಸಹಿಸುಲಾತಿಲ್ಲೆ” ಹೇಳಿ ಭರತ ಅಣ್ಣಂಗೆ ಹೇಳಿದ°.
ಈ ಶುದ್ದಿ ಕೇಳಿ ರಾಮನ ಕಣ್ಣಿಲಿ ನೀರು ತುಂಬಿತ್ತು. “ಭರತ, ಆನೆಂಥ ನತದೃಷ್ಟ! ಅಪ್ಪ° ಹಾಸಿಗೆ ಹಿಡುದಿಪ್ಪಗ ಅವರ ಸೇವೆ ಮಾಡುಲಾಯಿದಿಲ್ಲೆ. ಅಪ್ಪನ ಅಂತ್ಯಸಂಸ್ಕಾರದ ವಿಧಿಗಳ ಮಾಡುಲೂ ಎನಗೆ ಅವಕಾಶ ಸಿಕ್ಕಿದ್ದಿಲ್ಲೆ” ಹೇಳಿ ರಾಮ ಕಣ್ಣೀರು ಹಾಕಿ ದುಃಖಿಸಿದ°. ದಶರಥ ಮಹಾರಾಜನ ಸಾವಿನ ಶುದ್ದಿ ಕೇಳಿದ ಲಕ್ಷ್ಮಣ, ಸೀತೆ ಕೂಡಾ ತುಂಬಾ ದುಃಖ ಪಟ್ಟವು.
ಭರತ° ಸನ್ಯಾಸಿಯಾಂಗೆ ಕಾವಿ ವಸ್ತ್ರ ಸುತ್ತಿ ರಾಮನ ಕಾಂಬಲೆ ಬಂದಿತ್ತಿದ್ದ. ಅವ° ರಾಮನತ್ತರೆ ವಿನಯಲ್ಲಿ ಹೇಳಿದ. “ಅಣ್ಣಾ, ದಯಮಾಡಿ ಅಯೋಧ್ಯೆಗೆ ಬಾ. ರಾಜ ಆಗು. ನಿನ್ನ ಬದಲು ಕಾಡಿಲಿ ವನವಾಸವ ಆನು ಮಾಡ್ತೆ” ಹೇಳಿದ°. ಭರತಂಗೆ ಅಣ್ಣನ ಮೇಲೆ ಇಪ್ಪ ಪ್ರೀತಿ ವಿಶ್ವಾಸವ ಕಂಡು ರಾಮನ ಮನಸ್ಸು ತುಂಬಿ ಬಂತು. ಆದರೆ ಅವ° ಧೃಡವಾದ ಸ್ವರಲ್ಲಿ ಹೇಳಿದ°, “ಇಲ್ಲೆ ಭರತ, ಆನು ಅಪ್ಪ ಕೊಟ್ಟ ಮಾತಿನ ಒಳಿಶುಲೆ, ಅದರಂತೆ ನಡವಲೆ ಇಲ್ಲಿಗೆ ಬಂದದು. ನೀನುದೆ ಅವನ ಇಚ್ಛೆಯ ಪೂರೈಸೆಕ್ಕು. ಪೂರೈಸೆಕ್ಕಾದರೆ ಅಪ್ಪನ ಆಜ್ಞೆಯ ಪಾಲಿಸೆಕ್ಕು. ಅದು ನಿನ್ನ ಕರ್ತವ್ಯ. ವನವಾಸ ಮುಗುದ ಕೂಡಲೇ ಆನು ಬಂದು ಅಯೋಧ್ಯೆಯ ರಾಜ ಆವ್ತೆ” ಹೇಳಿ ರಾಮ ಹೇಳಿದ°.
ಆದರೂ ಭರತ ಅವನ ಪ್ರಯತ್ನವ ಬಿಟ್ಟಿದಾ°ಯಿಲ್ಲೆ. “ರಾಜ್ಯವ ಆಳುಲೆ ಆನು ಸಮರ್ಥನೂ ಅಲ್ಲ, ಯೋಗ್ಯನೂ ಅಲ್ಲ. ಎನಗಾಗಿಯಾದರೂ ನೀನು ಅಯೋಧ್ಯೆಗೆ ಬಾ. ರಾಜ್ಯವ ಆಳು” ಹೇಳಿ ತರತರಲ್ಲಿ ಬೇಡಿಗೊಂಡ°. ರಾಮ ಮುಗುಳು ನೆಗೆ ಮಾಡಿದ°. “ಭರತ, ನೀನು ಸಮರ್ಥ,  ಬುದ್ಧಿವಂತ. ನೀನು ಲಾಯ್ಕಕ್ಕೆ ರಾಜ್ಯವ ಆಳುವೆ. ಅದೂ ಅಲ್ಲದ್ದೆ ನಿನ್ನೊಟ್ಟಿಂಗೆ ಅನುಭವ ಇಪ್ಪ ಹಿರಿಯರಾದ ಮಂತ್ರಿಗಳೂ ಇದ್ದವು. ಅವು ನಿನಗೆ ಸಹಾಯ ಮಾಡುಗು. ಅಯೋಧ್ಯೆಯ ನೋಡಿಗೊಂಬ ಜವಾಬ್ದಾರಿ ನಿನ್ನದು. ಹೋಗು, ಲಾಯ್ಕಕ್ಕೆ ರಾಜ್ಯಭಾರ ಮಾಡು” ಹೇಳಿದ° ರಾಮ.
ಬೇರೆ ದಾರಿಕಾಣದ್ದೆ ಭರತ°, “ಅಣ್ಣಾ, ಆನು ನಿನ್ನ ಪರವಾಗಿ ರಾಜ್ಯ ಆಳುತ್ತೆ. ಆದ ಕಾರಣ ದಯಮಾಡಿ ನಿನ್ನ ಪಾದುಕೆಗಳ ಎನಗೆ ಕೊಡು. ಆನು ನಿನ್ನ ಪಾದುಕೆಗಳ ಸಿಂಹಾಸನದ ಮೇಲೆ ಮಡುಗುತ್ತೆ” ಹೇಳಿದ°. ರಾಮ ಅದಕ್ಕೆ ಒಪ್ಪಿದ°. “ರಾಮ ಬಪ್ಪಲೆ ಹದಿನಾಲ್ಕು ವರ್ಷಂಗಳ ಸಮಯ ಕಾಯ್ತೆ. ಅಷ್ಟು ಸಮಯ ರಾಜನ ವಸ್ತ್ರಾಭರಣಂಗಳ ಹಾಕುತ್ತಿಲ್ಲೆ. ರಾಮ ಬಪ್ಪವರೆಗೆ ಗೆಡ್ಡೆಗೆಣಸು, ಹಣ್ಣುಹಂಪಲುಗಳ ತಿಂದು ಆನು ಬದುಕುತ್ತೆ. ಹದಿನಾಲ್ಕು ವರ್ಷ ಕಳುದ ದಿನವೇ ರಾಮ ಬಾರದ್ದರೆ ಆನು ಕಿಚ್ಚಿಂಗೆ ಹಾರಿ ಜೀವ ಕಳಕ್ಕೊಳ್ಳುತ್ತೆ. ಇದು ಎನ್ನ ಪ್ರತಿಜ್ಞೆ.” ಹೇಳಿ ಭರತ° ಶಪಥ ಮಾಡಿದ°.
ಎರಡು ಜೆನ ಅಣ್ಣತಮ್ಮಂದಿರ ನಡುಗೆ ಅಷ್ಟು ಗಾಢ ಪ್ರೀತಿ ಇತ್ತು. ರಾಮ ಭರತನ ಪ್ರೀತಿಲಿ ಆಲಿಂಗನ ಮಾಡಿದ°. “ನಮ್ಮ ಅಮ್ಮನಾಗಿಪ್ಪ ಕೈಕೇಯಿಯ ಲಾಯ್ಕಕ್ಕೆ ನೋಡಿಗೊ. ಶಾಂತಿ, ಸಂತೋಷಲ್ಲಿರು. ಬೇರೆಯೋರ ಕರುಣೆಲಿ ನೋಡು.” ಹೇಳಿ ರಾಮ ಭರತಂಗೆ ಹಿತವಚನಗಳ ಹೇಳಿದ°. ಗಂಗಾನದಿ ಕರೆಲ್ಲಿ ದಶರಥಂಗೆ ರಾಮ ಲಕ್ಷ್ಮಣರು ತರ್ಪಣ ಬಿಟ್ಟವು. ಅಪ್ಪಂಗೆ ಸದ್ಗತಿ ಕೋರಿ ಪ್ರಾರ್ಥಿಸಿದವು.
ಭರತ° ಅಣ್ಣನ ಪಾದುಕೆಗಳ ತಲೆ ಮೇಲೆ ಮಡುಗಿ ಮತ್ತೆ ಅಯೋಧ್ಯೆಯ ಕಡೆಂಗೆ ಸಾಗಿದ°. ರಾಮ ಇಲ್ಲದ್ದ ಅಯೋಧ್ಯೆಲಿ ಇಪ್ಪಲೆ ಅವಂಗೆ ಮನಸ್ಸು ಬಯಿಂದಿಲ್ಲೆ. ಅಯೋಧ್ಯೆಯ ಹತ್ತರೆ ‘ನಂದಿಗ್ರಾಮ’ ಹೇಳ್ತ ಸಣ್ಣ ಹಳ್ಳಿಲಿ ವಾಸ ಮಾಡುಲೆ ಸುರು ಮಾಡಿದ°. ರಾಮನ ಪಾದುಕೆಗಳ ಸಿಂಹಾಸನದ ಮೇಲೆ ಮಡುಗಿ, ಅದಕ್ಕೇ ಪಟ್ಟಾಭಿಷೇಕ ಮಾಡಿದ°. “ಆನು ಕೇವಲ ಅಣ್ಣನ ಸೇವಕ ಮಾತ್ರ. ನಿಜವಾದ ಪ್ರಭು ಹೇಳಿದರೆ ಈ ಪಾದುಕೆಗೊ” ಹೇಳಿ ಭರತ° ಪ್ರಜೆಗೊಕ್ಕೆ ಹೇಳಿದ°. ಮೆಟ್ಟು ಮೆಟ್ಟಿಂಗೂ ರಾಮನ ನೆನಪು ಮಾಡಿಗೊಂಡು, ಪಾದುಕೆಗೊಕ್ಕೆ ಭಕ್ತಿ, ಗೌರವ ಸಲ್ಲಿಸಿಗೊಂಡು ಅವ° ಅಯೋಧ್ಯೆಯ ಆಳಿದ°. ಅವನ ಆಡಳಿತದ ಕಾಲಲ್ಲಿ ಪ್ರಜೆಗೊ ಕ್ಷೇಮಲ್ಲಿ ಇತ್ತಿದ್ದವು.
ರಾಮ ಚಿತ್ರಕೂಟಂದ ಬೇರೆ ಜಾಗೆಗೆ ಹೋಪ ನಿರ್ಧಾರ ಮಾಡಿದ. ಚಿತ್ರಕೂಟಲ್ಲಿ ಭರತ-ಶತ್ರುಘ್ನರ, ಅಮ್ಮಂದಿರ ನೆನಪು ಜೋರಾಗಿ ರಾಮಂಗೆ ಕಾಡುಲೆ ಸುರುವಾಗಿತ್ತು. ಹಾಂಗಾಗಿ ಆ ಜಾಗೆಯ ಬಿಟ್ಟು ಅವು ಮೂರು ಜೆನವೂ ಮುಂದೆ ನಡದವು. ದಟ್ಟಕಾಡಿಲಿ ತಿರುಗಿಗೊಂಡು ನೆಮ್ಮದಿಲಿ ದಿನ ಕಳುದವು.
(ಸಶೇಷ)
ಸೂ.ಃ

  • ಗೆರೆಚಿತ್ರ ಮಾಡಿ ಕೊಡುವ ಮದರಂಕಾನ ಬಾಲಣ್ಣಮಾವಂಗೆ
  • ಪ್ರಕಟಣೆಗೆ ಅನುಮತಿ ಕೊಟ್ಟ “ವಾಸನ್ ಪಬ್ಲಿಕೇಶನ್ಸ್”
    – ಇವಕ್ಕೆಲ್ಲೋರಿಂಗೂ ಬೈಲು ಆಭಾರಿಯಾಗಿದ್ದು.

3 thoughts on “ಮಕ್ಕೊಗೆ ರಾಮಾಯಣ ಅಧ್ಯಾಯ – 4 ಭಾಗ – 3

  1. ಮಕ್ಕಳ ರಾಮಾಯಣ ಮಕ್ಕಳ ಹಾಂಗೆ ಇಪ್ಪ ದೊಡ್ದೊರಿಂಗು ಕುಶಿ ಆವುತ್ತಾ ಇದ್ದು ಕೈಲಾರು ಚಿಕ್ಕಮ್ಮ ,ಲಾಯಕ್ಕು ಬತ್ತಾ ಇದ್ದು

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×