Oppanna.com

ಈಶಾವಾಸ್ಯೋಪನಿಷತ್ತು – ಶ್ಲೋಕ ಹದಿಮೂರು

ಬರದೋರು :   ಬೊಳುಂಬು ಕೃಷ್ಣಭಾವ°    on   10/02/2014    0 ಒಪ್ಪಂಗೊ

ಈಶಾವಾಸ್ಯೋಪನಿಷತ್ತು – ಶ್ಲೋಕ ಹದಿಮೂರು

ಅನ್ಯದೇವಾಹುಃ ಸಂಭವಾದನ್ಯದಾಹುರಸಂಭವಾತ್ |
ಇತಿ ಶುಶ್ರುಮ ಧೀರಣಾಂ ಯೇ ನಸ್ತದ್ವಿಚಚಕ್ಷಿರೇ ||೧೩||

ಈಶ ಪ್ರಕೃತಿಗಳಿಂದ ಬರುವುವು ಬೇರೆ ಬೇರೆಯ ಫಲಗಳು
ತತ್ತ್ವ ದರ್ಶಿಗಳಿಂತು ಪೇಳ್ವರು ಶ್ರುತಿ ವಿಚಾರದ ಮಥನವು ||೧೩||
– ಇದು ಡಾ| ಶಾಮ ಭಟ್ಟ, ಮಡ್ವ ಇವರ ಅನುವಾದ.

ಬೇರೆ ಫಲ ಸಂಭವದೆ ಮೂಲಾತ್ಮ ಭಜನೆಯಿಂ |
ಬೇರೆಯದಸಂಭವದೆ ಲೋಕಸೇವನೆಯಿಂ ||
ಧೀರರ್ ಈ ಯುಕ್ತಿಯಂ ಬ್ರಹ್ಮವಿಶ್ವಂಗಳ್ಗೆ |
ಸಾರಿ ಪೇಳಿಹರದನು ನಾವು ಕೇಳಿಹೆವು ||

ಸಂಭೂತಿಯ ಉಪಾಸನೆ ಮಾಡಿಯರೆ ಸಿಕ್ಕುವ ಫಲ ಅಸಂಭೂತಿಯ ಉಪಾಸನೆ ಮಾಡಿಯರೆ ಸಿಕ್ಕ. ಹಾಂಗೆಯೇ ಅಸಂಭೂತಿಯ ಉಪಾಸನೆ ಮಾಡಿಯರೆ ಸಿಕ್ಕುವ ಫಲ ಸಂಭೂತಿಯ ಉಪಾಸನೆ ಮಾಡಿಯರೆ ಸಿಕ್ಕ. ಕಾರ್ಯಬ್ರಹ್ಮವಾದ ಹಿರಣ್ಯಗರ್ಭನ ಉಪಾಸನೆ ಮಾಡುವದರಿಂದ ಅಣಿಮಾದಿಗಳಾದ ಐಶ್ವರ್ಯಂಗೊ ಸಿದ್ಧಿಯಾವುತ್ತು ಹೇಳಿಯೂ ಅವ್ಯಾಕೃತೋಪಾಸನೆಯ ಫಲ “ಅಂಧಂತಮಃ ಪ್ರವಿಶಂತಿ” ಹೇಳ್ತ ಹಾಂಗಿಪ್ಪ ಪ್ರಕೃತಿಲಿ ಲಯವಪ್ಪದು ಹೇಳಿಯೂ ಈ ಎರಡು ಉಪಾಸನೆಗೊ ಬೇರೆ ಬೇರೆ ಹೇಳಿ ನಮ್ಮ ಆರ್ಷ ಪರಂಪರೆಲಿ ಬತ್ತು. ಹೀಂಗೆ ವ್ಯಾಕೃತಾವ್ಯಾಕೃತೋಪಾಸನೆಗಳ ಬಗೆಗೆ ನಮ್ಮ ಪರಂಪರೆಯ ಆಚಾರ್ಯಕ್ಕೊ ಹೇಳಿದ್ದವು. ಹಾಂಗಾಗಿ ಪ್ರಕೃತಿಯ ಉಪಾಸನೆಯೂ ಕಾರ್ಯಬ್ರಹ್ಮದ ಉಪಾಸನೆಯೂ ಬೇರೆ ಬೇರೆಯಾಗಿ ಆಯೆಕ್ಕಾದ್ದದಲ್ಲ, ಎರಡನ್ನೂದೆ ಒಟ್ಟಿಂಗೆ ಮಾಡಿಯರೆ ಮಾಂತ್ರವೇ ಅದರ ಫಲ ನವಗೆ ಸಿಕ್ಕುಗಷ್ಟೇ. ಅಲ್ಲದ್ದೆ ಈ ಎರಡೂ ಸೇರಿ ಒಂದು ಪುರುಷಾರ್ಥವಾದ ಕಾರಣ ಎರಡನ್ನೂ ಒಟ್ಟಿಂಗೆ ಉಪಾಸನೆ ಮಾಡೆಕ್ಕು ಹೇದು ಹೇಳ್ತವು.
ಗೀತೆಯ ಏಳನೆಯ ಅಧ್ಯಾಯದ ಇಪ್ಪತ್ತಮೂರನೆಯ ಶ್ಲೋಕಲ್ಲಿ ಭಗವಾನ್ ಹೀಂಗೆ ಹೇಳ್ತ°-
ಅಂತವತ್ತು ಫಲಂ ತೇಷಾಂ ತದ್ ಭವತ್ಯಲ್ಪಚೇತಸಾಂ ।
ದೇವಾನ್ ದೇವಯಜೋ ಯಾಂತಿ ಮದ್ ಭಕ್ತಾ ಯಾಂತಿ ಮಾಮಪಿ ॥೨೩॥
ಅಲ್ಪಬುದ್ಧಿಲಿ ದೇವತೆಗಳ ಉಪಾಸನೆ ಮಾಡುತ್ತವು ದೇವತೆಗಳ ಲೋಕವ ಸೇರುತ್ತವು. ಆದರೆ ಎನ್ನ ಉಪಾಸನೆ ಮಾಡುವವು ಎನ್ನ ಸೇರುತ್ತವು. ಕೇವಲ ದೇವತೋಪಾಸನೆಂದ ಪ್ರಯೋಜನ ಇಲ್ಲೆ, ಭಗವಂತನ ಇರವಿನ ಅರಿಯೆಕ್ಕು ಹೇಳ್ತದು ಸಾರ.
~~~***~~~
 

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×