Oppanna.com

ಈಶಾವಾಸ್ಯೋಪನಿಷತ್ತು – ಶ್ಲೋಕ ನಾಲ್ಕು

ಬರದೋರು :   ಬೊಳುಂಬು ಕೃಷ್ಣಭಾವ°    on   09/12/2013    6 ಒಪ್ಪಂಗೊ

ಈಶಾವಾಸ್ಯೋಪನಿಷತ್ತು – ಶ್ಲೋಕ ನಾಲ್ಕು
ಅನೇಜದೇಕಂ ಮನಸೋ ಜವೀಯೋ ನೈನದ್ದೇವಾ ಆಪ್ನುವನ್ ಪೂರ್ವಮರ್ಷತ್ |
ತದ್ಧಾವತೋSನ್ಯಾನತ್ಯೇತಿ ತಿಷ್ಠತ್ ತಸ್ಮಿನ್ನಪೋ ಮಾತರಿಶ್ವಾ ದಧಾತಿ ||೪||
ಅಚಲನೊಬ್ಬನೆ ಮನವನಿಂದ್ರಿಯ ಮೀರಿ ಮುಂಗಡೆಯಿರುವನು
ಸ್ಥಿರದಲಿರುತಲಿ ಧಾವಿಪೆಲ್ಲೆಡೆ ಜೀವಧಾರಿಯೆ ಕರ್ತೃವು ||೪||
ಈಶಾವಾಸ್ಯೋಪನಿಷತ್ತಿನ ನಾಲ್ಕರಿಂದ ಎಂಟರವರೆಗಣ ಶ್ಲೋಕಂಗೊ ಪರತತ್ತ್ವದ ಬಗೆಗೆ ಇಪ್ಪದು. ಆ ಪ್ರಜ್ಞೆ ಗುಣ-ಭಾವಗಳ ಮೀರಿದ್ದದು. ಅದಕ್ಕೆ ಚಲನೆಯಿಲ್ಲೆ. ಅದು ಎಲ್ಲೆಡೆಯೂ ಇಪ್ಪ ಕಾರಣ ಅದಕ್ಕೆ ಚಲಿಸುಲೆ ಇನ್ನೊಂದು ಎಡೆಯಿಲ್ಲೆ. ಸಣ್ಣದಕ್ಕಿಂತ ಸಣ್ಣದೂ ದೊಡ್ಡದಕ್ಕಿಂತ ದೊಡ್ಡದು ಅಗಿ ಇಪ್ಪದದು. ಆದರೆ ಜಗತ್ತು ಹಾಂಗಲ್ಲ. ಅದು ನಿರಂತರ ಚಲನೆಲಿಪ್ಪದು. ಆತ್ಮದ ವೇಗ ಮನಸ್ಸಿನ ವೇಗಕ್ಕಿಂತ ಹೆಚ್ಚು. ಆತ್ಮದ ಇರವು ಇಂದ್ರಿಯಂಗಳ ಮೀರಿದ್ದದು. ಅದು ಏಕ, ಅದ್ವಿತೀಯವಾದ್ದು. ಆ ಪರತತ್ತ್ವವ ದೇವತೆಗಳಿಂದಲೂ ಮೀರುಸಿಗೊಂಬಲೆಡಿಯ.
ದೇವತೆಗೊ ಹೇಳಿರೆ ಆರು ಹೇಳಿ ನೋಡೆಕ್ಕಾವುತ್ತು. ನಾಸದೀಯ ಸೂಕ್ತಲ್ಲಿ (ಋಗ್ವೇದ ಹತ್ತನೆಯ ಮಂಡಲ, ನೂರ ಇಪ್ಪತೊಂಬತ್ತನೇ ಮಂತ್ರ) ಹೇಳ್ತು, ಲೋಕದ ಸೃಷ್ಟಿಯಾದ ನಂತರ ದೇವತೆಗೊ ಹುಟ್ಟಿದವಡ. “ಅರ್ವಾಗ್ದೇವಾ ಅಸ್ಯ ವಿಸರ್ಜನಾಯ”. ದೇವತೆಗೊ ದಯಾಳುಗಳೂ ಉಪಕಾರಿಗಳೂ ಆದ ಅತೀತ ಕಾಯಂಗೊ ಉಪಕಾರವನ್ನೇ ಮಾಡಿ ಬದಲಿಂಗೆ ಇನ್ನೊಂದ ವಸ್ತುವ ಬೇಡದ್ದವನನ್ನೂ ದೇವತೆ ಹೇಳಿ ಹೇಳುಲಾವುತ್ತು. ಬೃಹದಾರಣ್ಯಕೋಪನಿಷತ್ತಿಲಿ  ಮೂವತ್ತಮೂರು ಜೆನ ದೇವತೆಗಳ ವಿವರ ಸಿಕ್ಕುತ್ತು. ಅವರಲ್ಲಿ ಎಂಟು ಜೆನ ವಸುಗೊ ಅಡ. ಪಂಚಭೂತಂಗಳೂ, ಸೂರ್ಯ-ಚಂದ್ರ-ಅಂತರಿಕ್ಷವೂ ಸೇರಿ ಒಟ್ಟು ಎಂಟು ಜೆನ ಆದವು. ಹನ್ನೊಂದು ಜೆನ ರುದ್ರಂಗೊ. ಐದು ಕರ್ಮೇಂದ್ರಿಯಂಗೊ, ಐದು ಜ್ಞಾನೇಂದ್ರಿಯಂಗೊ, ಮನಸ್ಸೂ ಸೇರಿ ಹನ್ನೊಂದು ಜೆನ ರುದ್ರಂಗೊ.  ಹನ್ನೆರಡು ಜೆನ ಆದಿತ್ಯರುಗೊ ಹೇಳಿರೆ ಹನ್ನೆರಡು ತಿಂಗಳುಗೊ. ಒಳುದವೂ ಇಂದ್ರನೂ ಪ್ರಜಾಪತಿಯೂ. ಹೀಂಗೆ ಮೂವತ್ತಮೂರು ಜೆನ ದೇವತೆಗೊ. ‘ಮೂವತ್ತಮೂರು ಕೋಟಿ ದೇವತೆಗೊ’ ಹೇಳಿ ಇಪ್ಪದರ ಈ ರೀತಿಲಿ ಅರ್ಥ ಮಾಡಿಗೊಳೆಕ್ಕು, ಅಲ್ಲದ್ದೆ ಮೂವತ್ತಮೂರು ಕೋಟಿ ಪೂಜಾರ್ಹ ದೇವರುಗೊ ಅಲ್ಲ. ಹಾಂಗೆ ನೋಡುವಗ ಯಾವ ದೇವತೆಗಳ ಪರತತ್ತ್ವ ತಾನು ಮೀರುಸುತ್ತೋ ಆ ದೇವತೆಗೊ ಇಂದ್ರಿಯಂಗೊ ಹೇಳಿ ಗೊಂತಾವುತ್ತು.  ಇಂದ್ರಿಯಂಗೊ ತಾವಾಗಿ ಕೆಲಸ ಮಾಡುವಂಥವಲ್ಲ, ಪರತತ್ತ್ವ ತಾನು ಅವರ ಒಳ ಇದ್ದುಗೊಂಡು ಕೆಲಸ ಮಾಡುಸುತ್ಸು. ಭಗವದ್ಗೀತೆಯ ಹತ್ತನೆಯ ಅಧ್ಯಾಯದ ಎರಡನೇ ಶ್ಲೋಕಲ್ಲಿ ಭಗವಾನ್ ಹೇಳ್ತ°, “ದೇವಗಣಂಗಳಿಂದಲೋ ಋಷಿಗಳಿಂದಲೋ ಎನ್ನ ಮೂಲವನ್ನೋ ಸಾಮರ್ಥ್ಯವನ್ನೋ ಅರಿತುಗೊಂಬಲೆಡಿಯ, ಎಲ್ಲದರ ಕಾರಣಕರ್ತನೇ ಆನಾಗಿಂಡಿದ್ದೆ.” ದೇವತೆಗೊ ಮೇರು ಪರ್ವತದ ಕೊಡಿಲಿ ಇಪ್ಪವು ಹೇಳ್ತ ಕಲ್ಪನೆ ಕಾಳಿದಾಸನದ್ದು, ಇದು ಕುಮಾರಸಂಭವಲ್ಲಿ ಬಪ್ಪದು. ಐತರೇಯೋಪನಿಷತ್ತು ಹೇಳ್ತು, ಪರಮಾತ್ಮನೇ ಎಲ್ಲಾ ದೇವತೆಗೊವಕ್ಕೂ ಶರೀರಲ್ಲಿ ಇಂದ್ರಿಯರೂಪಲ್ಲಿ ನೆಲೆಮಾಡಿಕೊಟ್ಟನಡ. ಆ ಇಂದ್ರಿಯಂಗೊವಕ್ಕೆ ಆಹಾರವಾಗಿ ಹಶುವನ ಕೊಟ್ಟನಡ, ಹಶುವಿಂಗೆ ಆಹಾರವಾಗಿ ಆಹಾರವನ್ನೇ ಕೊಟ್ಟನಡ.
ಇದ್ದಲ್ಲಿಯೇ ಇದ್ದರೂ ಅದು ತನ್ನ ಹಿಂಬಾಲಿಸಿದವರಿಗಿಂತ ವೇಗವಾಗಿರುತ್ತು. ಸುಖವೋ ದುಃಖವೋ ಬಪ್ಪದು ನಮ್ಮ ಮನಸ್ಸಿನ ಸ್ಥಿತಿಯ ಅನುಗುಣವಾಗಿಯೇ. ಮನಸ್ಸು ಶಾಂತವಾಗಿಪ್ಪಗ ಮಾಂತ್ರ, ಆಲೋಚನೆಗಳಿಂದ ಮುಕ್ತವಾಗಿಂಡಿಪ್ಪಗ ಮಾಂತ್ರ ನವಗೆ ಅನಂದದ ಅನುಭವ ಅಪ್ಪದು. ಅನಂತ ಪ್ರಜ್ಞೆಯಾದ ಆ ಪರತತ್ತ್ವವೇ ಎಲ್ಲಾ ಚಲನೆಗೊವಕ್ಕೂ ಕಾರಣಕರ್ತ°. ದೇವತೆಗೊ ಹೇಳಿರೆ ವೇಗವಾಗಿ ಚಲಿಸುವವು ಹೇಳಿ ಇದ್ದು. ಆದರೆ ಆ ಪರತತ್ತ್ವ ದೇವತೆಗಳನ್ನೂ ಮೀರುಸಿದ್ದು ಹೇಳಿ ಹೇಳುವಗ ಅದು ಸರ್ವಾಂತರ್ಯಾಮಿಯಾಗಿದ್ದು ಹೇಳಿ ಅರ್ಥ ಆವುತ್ತು. ಜೀವನಕ್ಕೆ ಬೇಕಾದ ಪ್ರಾಣವಾಯುವನ್ನೂ ನೀರನ್ನೂ ಅದುವೇ ಕೊಡುತ್ತು.
~~~

6 thoughts on “ಈಶಾವಾಸ್ಯೋಪನಿಷತ್ತು – ಶ್ಲೋಕ ನಾಲ್ಕು

  1. ಒಳ್ಳೆಯ ಮಾಹಿತಿ ಸರಳವಾದ ನಿರೂಪಣೆ ಮನ ಮುಟ್ಟಿತ್ತು ಬೊಳುಂಬು ಕೃಷ್ಣಭಾವ°
    ದೇವತೆಗ ಮತ್ತು ಪರತತ್ವದ ಬಗ್ಗೆ ಒಳ್ಳೆಯ ಅಪೂರ್ವ ಮಾಹಿತಿ ಒದಗಿಸಿಕೊಟ್ಟದಕ್ಕೆ ಧನ್ಯವಾದಂಗ

  2. ಭಾರತೀಯ ಸಂಸ್ಕೃತಿಗೆ ಈಶಾವಾಸ್ಯೋಪನಿಷತ್ತೂ ಸೇರಿ ಯಾಜ್ಞವಲ್ಕ್ಯರ ಕೊಡುಗೆ ಅಪಾರ. ಕನ್ನಡ ಆಡಿಯೋ ಡಾಟ್ ಕಾಮಿಂಗೆ ಹೋದರ ಪ್ರವಚನ ವಿಭಾಗಲ್ಲಿ ಶತಾವಧಾನಿ ಆರ್ ಗಣೇಶರ “ಭಾರತೀಯ ಸಂಸ್ಕೃತಿಗೆ ಯಾಜ್ಞವಲ್ಕ್ಯರ ಕೊಡುಗೆ” ಹೇಳುವ ಆಡಿಯೋ ಸಿಕ್ಕುತ್ತು. ಅದರ ಮೂರನೆಯ ಭಾಗಲ್ಲಿ ಈಶಾವಾಸ್ಯೋಪನಿಷತ್ತಿನ ಸಂಕ್ಷಿಪ್ತ ವಿವರಣೆ ಇದ್ದು.

    1. ಧನ್ಯವಾದ ವೆಂಕಟರಮಣ ಮಾವ.

  3. ಅನಂತ ಪ್ರಜ್ಞೆಯಾದ ಆ ಪರತತ್ತ್ವವೇ ಎಲ್ಲಾ ಚಲನೆಗೊವಕ್ಕೂ ಕಾರಣಕರ್ತ° ಹೇಳ್ತ ಸಾರವ ಸರಳ ರೀತಿಲಿ ಪರತತ್ತ್ವದ ವಿವರಣೆ ಲಾಯಕ ಬತ್ತಾ ಇದ್ದು. ಮುಂದಾಣ ಭಾಗದ ನಿರೀಕ್ಷೆಲಿ..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×