Oppanna.com

ಈಶಾವಾಸ್ಯೋಪನಿಷತ್ತು – ಶ್ಲೋಕ ಹದಿನೆಂಟು

ಬರದೋರು :   ಬೊಳುಂಬು ಕೃಷ್ಣಭಾವ°    on   17/03/2014    8 ಒಪ್ಪಂಗೊ

ಈಶಾವಾಸ್ಯೋಪನಿಷತ್ತು – ಶ್ಲೋಕ ಹದಿನೆಂಟು

ಅಗ್ನೇ ನಯ ಸುಪಥಾ ರಾಯೇ ಅಸ್ಮಾನ್ ವಿಶ್ವಾನಿ ದೇವ ವಯುನಾನಿ ವಿದ್ವಾನ್ |
ಯುಯೋSಧ್ಯಸ್ಮಜ್ಜುಹುರಾಣಮೇನೋ
ಭೂಯಿಷ್ಠಾಂತೇ ನಮ ಉಕ್ತಿಂ ವಿಧೇಮ ||೧೮||

ದಾರಿ ತೋರಿಸು ಜ್ವಲಿಪ ಜ್ಞಾನಿಯೆ ನೀಡು ಸತ್ಕೃತಿ ಸಂಪದ
ಕುಟಿಲ ಪಾಪಗಳಿಂದ ತೊಲಗಿಸು ನಿನಗೆ ನಮಿಪೆವು ಬಹುವಿಧ ||೧೮||
– ಇದು ಡಾ| ಶಾಮ ಭಟ್ಟ, ಮಡ್ವ ಇವರ ಅನುವಾದ.
ಆಯ ಹೇಳಿಯರೆ ಕರ್ಮಫಲವಾಗಿ ನವಗೆ ಸಿಕ್ಕಲಿಪ್ಪದು. ಭುಕ್ತಿ ಹೇಳಿಯರೆ ಅದರೆ ಅನುಭೋಗ. ಹೇ ಅಗ್ನೇ! ಆನು ಮಾಡಿದ ಕಾರ್ಯಾಕಾರ್ಯಂಗಳ ತಿಳುದವ° ನೀನು. ಎನ್ನ ನೀನು ಸಂಪತ್ಕರವಾದ ಸನ್ಮಾರ್ಗಲ್ಲಿ ಕರಕ್ಕೊಂಡುಹೋಗು. ಎಂದಿಂಗೂ ತಿರುಗಿ ಬರೆಕ್ಕಾದ ಅಗತ್ಯ ಇಲ್ಲದ್ದ ಒಳ್ಳೆಯ ಮಾರ್ಗಲ್ಲಿ ಎನ್ನ ಕರಕ್ಕೊಂಡು ಹೋಗು. ಪಾಪಂಗಳ ಎನ್ನಂದ  ದೂರಮಾಡು. ಹೇ ಅಗ್ನೇ! ನಿನಗೆ ಪುನಾ ಪುನಾ ನಮನಂಗಳ ಅರ್ಪಿಸುತ್ತೆ. ಹೀಗೆ ಹಿರಣ್ಯಗರ್ಭೋಪಾಸಕನಾದ ಯೋಗಿ ಅಗ್ನಿದೇವನ ಹತ್ತರೆ ಬೇಡಿಗೊಳುತ್ತ°. ಇದು ಕ್ರಮಮುಕ್ತಿಗಿಪ್ಪ ಮಾರ್ಗ.
“ಅವಿದ್ಯಯಾ ಮೃತ್ಯುಂ ತೀರ್ತ್ವಾ ವಿದ್ಯಯಾSಮೃತಮಶ್ನುತೇ”, “ವಿನಾಶೇನ ಮೃತ್ಯುಂ ತೀರ್ತ್ವಾ ಸಂಭೂತ್ಯಾSಮೃತಮಶ್ನುತೇ” ಹೀಂಗಿಪ್ಪ ಮಂತ್ರಂಗಳ ನೋಡಿರೆ ಗೊಂತಾವುತ್ತು, ಅಲ್ಲಿ ವಿದ್ಯೆ ಹೇಳಿರೆ ಮುಖ್ಯವಾದ “ಪರಮಾತ್ಮವಿದ್ಯೆ” ಹೇಳ್ತ ಅರ್ಥ ಇಲ್ಲೆ, ಹಾಂಗೆಯೇ ಅಮೃತ ಹೇಳ್ತ ಶಬ್ದಕ್ಕೆ ಮೋಕ್ಷ ಹೇಳ್ತ ಅರ್ಥ ಇಲ್ಲೆ. ಕರ್ಮಕ್ಕೂ ಪರಮಾತ್ಮ ವಿದ್ಯೆಗೂ ವಿರೋಧ ಇಪ್ಪ ಕಾರಣ ಈ ಎರಡರ ಒಟ್ಟೊಟ್ಟಿಂಗೆ ಅನುಷ್ಠಾನ ಮಾಡೆಕ್ಕು ಹೇಳಿ ಹೇಳ್ಲೆ ಎಡಿತ್ತಿಲ್ಲೆ. ಹಾಂಗಾಗಿ ವಿದ್ಯೆ ಹೇಳ್ತ ಶಬ್ದಕ್ಕೆ  “ಪರಮಾತ್ಮವಿದ್ಯೆ” ಹೇಳಿ ಅರ್ಥ ಇಲ್ಲೆ ಹೇಳಿರೆ ಒಪ್ಪಿಗೊಂಬಲೆಡಿತ್ತು. ಹಾಂಗಾರೆ ಪರಮಾತ್ಮ ವಿದ್ಯೆಗೂ ಕರ್ಮಕ್ಕೂ ಇಪ್ಪ ವಿರೋಧ ಎಂತರ ಹೇಳಿ ಗೊಂತಾವುತ್ತಿಲ್ಲೆ. ವಿರೋಧಕ್ಕೂ ಅವಿರೋಧಕ್ಕೂ ಶಾಸ್ತ್ರವೇ ಪ್ರಮಾಣ. ಕರ್ಮಾನುಷ್ಠಾನಕ್ಕೂ ವಿದ್ಯೋಪಾಸನೆಗೂ ಶಾಸ್ತ್ರವೇ ಪ್ರಮಾಣ. “ನ ಹಿಂಸ್ಯಾತ್ ಸರ್ವಭೂತಾನಿ” (ಯಾವ ಜೀವಿಗೂ ಉಪದ್ರವ ಕೊಡ್ಲಾಗ) ಹೇಳ್ತ ಶಾಸ್ತ್ರವಾಕ್ಯ ಇಪ್ಪ ಹಾಂಗೆಯೇ “ಅಧ್ವರೇ ಪಶುಂ ಹಿಂಸ್ಯಾತ್” (ಯಾಗಲ್ಲಿ ಪಶುವಿನ ಹಿಂಸೆ ಮಾಡ್ಲಕ್ಕು) ಹೇಳಿಯೂ  ಶಾಸ್ತ್ರವಾಕ್ಯ ಇದ್ದು. ಅಲ್ಲಿ ಶಾಸ್ತ್ರೀಯವಾದ ವಿರೋಧ ಇಪ್ಪದು ಗೊಂತಾವುತ್ತು. ಹೀಂಗಿಪ್ಪ ವಿರೋಧ ಇದ್ದರೆ ಮಾಂತ್ರ  ಶಾಸ್ತ್ರೀಯವಾದ ವಿರೋಧ ಹೇಳಿ ಹೇಳ್ಲೆ ಎಡಿಗಷ್ಟೇ. ಪರಮಾತ್ಮ ವಿದ್ಯೆಗೂ ಕರ್ಮಕ್ಕೂ ಹೀಂಗಿಪ್ಪ ವಿರೋಧ ಇದ್ದೋ ಹೇಳಿ ಕೇಳಿಯರೆ, ಇದ್ದು. “ದೂರಮೇತೇ ವಿಪರೀತೇ ವಿಷೂಚೀ ಅವಿದ್ಯಾ ಯಾ ಚ ವಿದ್ಯಾ” ಹೇಳ್ತ ಶ್ರುತಿವಾಕ್ಯವೇ ಇದಕ್ಕೆ ಪ್ರಮಾಣ. ಹೇತುವಿರೋಧವೂ ಸ್ವರೂಪವಿರೋಧವೂ ಫಲವಿರೋಧವೂ ಇಲ್ಲಿದ್ದು. ಅಗ್ನಿ ಸುಡುವಂಥದ್ದೂ ಬೆಣಚ್ಚಿ ಕೊಡುವಂಥದೂ ಆಗಿಂಡಿಪ್ಪದು ಗೊಂತಿಪ್ಪವಂಗೆ ಅದು ತಣುಕ್ಕಂಡಿಪ್ಪದೋ ಬೆಣಚ್ಚಿ ಇಲ್ಲದ್ದದೋ ಹೇಳ್ತ ಅನುಮಾನ ಬತ್ತಿಲ್ಲೆ. ಅಷ್ಟೇ ಅಲ್ಲ, ವಿದ್ಯೆಗೂ ಅವಿದ್ಯೆಗೂ ಒಂದಕ್ಕೊಂದು ವಿರೋಧ ಇಲ್ಲದ್ದರೆ ಮಾಂತ್ರ ಜ್ಞಾನದ್ದೂ ಕರ್ಮದ್ದೂ ಒಟ್ಟೊಂಟ್ಟಿಂಗೆ ಮಾಡುವ ಉಪಾಸನೆ ಸಿದ್ಧಿಸುಗಷ್ಟೇ. ಈ ಸಮುಚ್ಚಯ ಸಿದ್ಧಿಸಿರೆ ಮಾಂತ್ರ ವಿರೋಧ ಇಲ್ಲದ್ದೆ ಇಪ್ಪದು ಸಿದ್ಧಿಸುಗಷ್ಟೇ. “ಯಸ್ಮಿನ್ ಸರ್ವಾಣಿ ಭೂತಾನಿ ಆತ್ಮೈವಾಭೂದ್ವಿಜಾನತಃ ತತ್ರ ಕೋ ಮೋಹಃ ಕಃ ಶೋಕ ಏಕತ್ವಮನುಪಶ್ಯತಃ” ಹೇಳಿ ಬ್ರಹ್ಮಜ್ಞಾನಿಗೆ ಶೋಕವೂ ಮೋಹವೂ ಉಂಟಾವುತ್ತಿಲ್ಲೆ ಹೇಳಿ ಹೇಳಿದ್ದವು. ವಿದ್ಯೆ ಸಂಭವಿಸಿರೆ ಅವಿದ್ಯೆ ಸಂಭವಿಸದ್ದರೆ ಬೇಡ, ಕರ್ಮ ಸಂಭವಿಸಲಾಗದೋ? ಬ್ರಹ್ಮಜ್ಞಾನಿಗಳುದೇ  ಭಿಕ್ಷಾಟನೆ, ಶಿಷ್ಯರಿಂಗೆ ಪಾಠ ಮಾಡುವ ಹಾಂಗಿಪ್ಪ ಪ್ರವೃತ್ತಿಗಳ ಅನುಷ್ಠಾನಂಗಳ  ಮಾಡುವದು ಗೊಂತಾವುತ್ತು. ಆದ ಕಾರಣ ಕರ್ಮದೊಟ್ಟಿಂಗೆ  ಪರಬ್ರಹ್ಮವಿದ್ಯೆ ಸೇರಿಂಡಿದ್ದು, ವಿರೋಧ ಎಂತರ ಹೇಳಿ ಕೇಳಿಯರೆ ಸಮಾಧಾನ ಇದ್ದು. ಅವಿದ್ಯೆ ಸಂಭವಿಸದ್ದ ಕಾರಣ ಅವಿದ್ಯೆಂದಲಾಗಿ ಸಂಭವಿಸುವ ಕರ್ಮವೂ ಸಂಭವಿಸುತ್ತಿಲ್ಲೆ. ಬ್ರಹ್ಮವೂ ಆತ್ಮವೂ ಒಂದೇ ಹೇಳಿ ಅನುಭವಿಸಿ ಗೊಂತಿಪ್ಪವಂಗೆ ಮನಸ್ಸಿಲಿ ಕಾಮಂಗೊ ಇಲ್ಲದ್ದ ಕಾರಣ ಏವದೇ ಚೋದನೆಗೊ ಉಂಟಾವುತ್ತಿಲ್ಲೆ. “ಅಕಾಮಿನಃ ಕ್ರಿಯಾ ಕಾಚಿದ್ ದೃಶ್ಯತೇ ನೇ ಹ ಕಸ್ಯಚಿತ್; ಯದ್ಯದ್ಧಿ ಕುರುತೇ ಜಂತುಸ್ತತ್ತತ್ ಕಾಮಸ್ಯ ಚೇಷ್ಟಿತಂ ( ಕಾಮಂಗೊ ಇಲ್ಲದ್ದೆ ಇಪ್ಪವ° ಏವದೇ ಕ್ರಿಯೆಗಳ ಕಾಣುತ್ತನಿಲ್ಲೆ; ಜಂತು ತಾನು ಮಾಡುವದು ಏವದೇವದು ಇದ್ದೋ ಅದೆಲ್ಲವೂ ಕಾಮಪ್ರೇರಿತವಾಗಿಂಡಿರುತ್ತು.)” – ಇದು ಸ್ಮೃತಿವಾಕ್ಯ.  ಅಮೃತ ಹೇಳ್ತ ಶಬ್ದದ ಅರ್ಥ ಮೋಕ್ಷ ಹೇಳಿ ಅಲ್ಲ, ಆಪೇಕ್ಷಿಕ ಅಮೃತದ ಬಗ್ಗೆ ಇಲ್ಲಿ ಹೇಳುವದು ಗೊಂತಾವುತ್ತು.  ವಿದ್ಯೆ ಹೇಳ್ತ ಶಬ್ದಕ್ಕೆ ಪರಮಾತ್ಮ ವಿದ್ಯೆ ಹೇಳ್ತ ಅರ್ಥ ಅಲ್ಲ, ಹಾಂಗಾಗಿ ಕರ್ಮಂಗೊ ಉಪಾಸನೆಯೊಟ್ಟಿಂಗೆ ಸೇರುವದು ಗೊಂತಾವುತ್ತು. ಉಪಾಸನೆಯ ಅನುಷ್ಠಾನ ಮಾಡುವವಂಗೆ ಅಲ್ಲದ್ದೆ ಬ್ರಹ್ಮಜ್ಞಾನಿಗೆ ಪ್ರಾಣಂಗೊ ಊರ್ಧ್ವಗತಿಲಿ ಚಲುಸುತ್ತಿಲ್ಲೆ. ಅವಂಗೆ ಇಲ್ಲಿಯೇ ಮುಕ್ತಿ ಸಿಕ್ಕುತ್ತು ಹೇಳ್ತ ವಿಷಯ ಶ್ರುತಿಗಳ ಮೂಲಕ ಗೊಂತಾವುತ್ತು. ಹಾಂಗಾಗಿ ಇಲ್ಲಿ ಹೇಳುವ ಅಮೃತ ಉಪಾಸನೆಯ ಮೂಲಕ ಸಿದ್ಧಿಸುವ ಅಮೃತ ಹೇಳಿ ಆವುತ್ತು.

ಓ ಯಜ್ಞಪತಿ ನಡೆಸು ನಮ್ಮನೊಳ್ದಾರಿಯಲಿ |
ಆಯ ಭುಕ್ತಿಗೆ, ನಮ್ಮ ಕರ್ಮವರಿತನು ನೀಂ ||
ಸಾಯಿಸೆಮ್ಮಯ ವಕ್ರ ಪಾಪಗಳನೆಲ್ಲವಂ |
ಶ್ರೇಯವಂ ತೋರು ನಮಿಪೆವು ಮರಳಿ ಮರಳಿ ||

ಇನ್ನೊಂದಾರಿ, ಕಂಡು ಕೈ ಮುಗುದವಕ್ಕೂ ಓದಿ ಅಭಿಪ್ರಾಯ ಹೇಳಿದವಕ್ಕೂ ಆ ಮೆಯಿಲು ಈ ಮೆಯಿಲುಗಳಲ್ಲಿ ಸಂದೇಹ ಪರಿಹಾರ ಮಾಡಿಗೊಂಡವಕ್ಕೂ ಗೋಶುಬಾರಿ ಮಾಡಿದವಕ್ಕೂ ಓದದ್ದೆ ಫೇಸ್ಬುಕ್ಕಿಲಿ ಹಾರಯಿಸಿದವಕ್ಕೂ ಆ ಪರಮ ಚೇತನದ ದಯಂದಲಾಗಿ ಒಳ್ಳೆಯದೇ ಬರಲಿ ಹೇಳುವಲ್ಲಿಗೆ ಈ ಆಖ್ಯಾನಕ್ಕೆ ಮಂಗಳ.

~~~~***~~~~

8 thoughts on “ಈಶಾವಾಸ್ಯೋಪನಿಷತ್ತು – ಶ್ಲೋಕ ಹದಿನೆಂಟು

  1. ಎಲ್ಲವನ್ನೂ ಓದಿದ್ದ್ದೆ.ಕೆಲವೆಲ್ಲ ಎನಗೆ ಅರ್ಥ ಆಯಿದಿಲ್ಲೆ. ಎಲ್ಲೊರಿ೦ಗೆ ಅರ್ಥ ಅಪ್ಪಷ್ತು ಸರಳ ಇಲ್ಲೆಯೋ ಹೇಳಿ ಎನಗನಿಸಿತ್ತು.
    ”ಉಪನಿಷತ್ತು ಹೇಳಿಯರೆ ಎಂತರ? ” ಹೇಳಿ ನಿ೦ಗೊ ಕೇಳಿದ ಪ್ರಶ್ನಗೆ ಎನಗೆ ಉತ್ತರ ಸಿಕ್ಕಿದ್ದಿಲ್ಲೆ. ನಿ೦ಗಳೇ ಹೇಳಿದರೆ ಒೞೆದಿತ್ತು.

    1. ಭಾಗ್ಯಲಕ್ಶ್ಮಿ ಅಕ್ಕ, ಧನ್ಯವಾದಂಗೊ.
      ಅಷ್ಟು ಸರಳವಾದ ವಿಷಯ ಇದಲ್ಲ. ಎಡಿಗಪ್ಪಷ್ಟು ಸರಳವಾಗಿ ವಿವರುಸುವ ಪ್ರಯತ್ನ ಇಲ್ಲಿಪ್ಪದು.
      ”ಉಪನಿಷತ್ತು ಹೇಳಿಯರೆ ಎಂತರ?” ಈ ಪ್ರಶ್ನೆಗೆ ನಿಂಗೊಗೆ ಗೊಂತಿಪ್ಪ ಉತ್ತರ ಹೇಳಿ. ಎರಡು-ಮೂರು ಜೆನ ಆದರೂ ಉತ್ತರ ಕೊಟ್ರೆ ಎನಗೆ ಗೊಂತಿಪ್ಪದರ ಹೇಳ್ಲೆ ಆವುತ್ತಿತ್ತು.

    2. ಅರ್ಥ ಆಗದ್ದೆ ಇಪ್ಪದರ ಕೇಳಿ. ಗೊಂತಿಪ್ಪದಾದರೆ ಹೇಳುವೆ.

      1. ಬೊಳುಂಬು ಕೃಷ್ಣಭಾವ,ನಿ೦ಗಳ ಕಾಳಜಿಗೆ ಧನ್ಯವಾದ. ಎ೦ತರ ಗೊನ್ತಿಲ್ಲೆ ಹೇಳಿ ನವಗೆ ಗೊ೦ತಾದರೆ ಮಾತ್ರ ಪ್ರಶ್ನೆ ಕೇಳಲೆ ಎಡಿತಷ್ಟ.
        ಆನು ಬರೆ ಎನ್ನ ಒಬ್ಬನ ದೃಷ್ಟಿ೦ದ ಕೇಳಿದ್ದಲ್ಲ .ನಿ೦ಗಳ ಪ್ರಯತ್ನ ಶ್ಲಾಘನೀಯವೆ. ಎನಗೆ ಪೀಠಿಕೆ ಶ್ಳೋಕ ತಕ್ಕ ಮಟ್ಟಿ೦ಗೆ( ಭಗವದ್ಗೀತೆ ಓದುದರಿ೦ದ) ಅರ್ಥ ಆಯಿದು. ಅದು ಸಾಕು.

  2. ವಿವರಣೆ ಮತ್ತೆ ನಿರೂಪಣೆ ಲಾಯಕ ಆಯಿದು ,ಒಳ್ಳೆ ವಿಚಾರವ ತಿಳಿಯ ಪಡಿಸಿದ್ದಕ್ಕೆ ಧನ್ಯವಾದಂಗ

    1. ಧನ್ಯವಾದಂಗೊ ಲಕ್ಶ್ಮಿ ಅಕ್ಕ.

    1. ಧನ್ಯವಾದಂಗೊ ವೆಂಕಟರಮಣ ಮಾವ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×