- ಬಲೀಂದ್ರಪೂಜೆ – (ಸರಳ ಸಂಕ್ಷಿಪ್ತ ವಿಧಾನ) - October 30, 2020
- ಗೋಪೂಜೆ – (ಸರಳ ಸಂಕ್ಷಿಪ್ತ ವಿಧಾನ) - October 30, 2020
- ತೊಳಶಿ ಪೂಜೆ – ಸರಳ ಸಂಕ್ಷಿಪ್ತ ವಿಧಾನ - October 30, 2020
ಸತ್ಯನಾರಾಯಣ ವ್ರತ ಕಥೆಯ ಭಾವಾರ್ಥ, ಸರಳ ಹವ್ಯಕ ಭಾಶೆಲಿ.. ಓದುಗರ ಅವಗಾಹನೆಗೆ – ಸ್ಥಳಂದ ಸ್ಥಳಕ್ಕೆ ಪಾಠಾಂತರ ವ್ಯತ್ಯಾಸ ಇಪ್ಪಲೂ ಸಾಕು.
ಕಳುದವಾರ – ಪ್ರಥಮೋಧ್ಯಾಯಃ
ಕಥಾಶ್ಲೋಕ ಶ್ರವಣಕ್ಕೆ:
[audio:audio/SNP_KATHA_CHAPTER_02.mp3]
ಧ್ವನಿ ಕೃಪೆ : www.sangeethamusic.com
ಶ್ರೀ ಸತ್ಯನಾರಾಯಣಪೂಜಾವ್ರತಕಥಾ – ದ್ವಿತೀಯೋಧ್ಯಾಯಃ
|| ಶ್ರೀ ಭಗವಾನುವಾಚ ॥
ಅಥಾನ್ಯತ್ಸಂಪ್ರವಕ್ಷ್ಯಾಮಿ ಕೃತಂ ಏನ ಪುರಾದ್ವಿಜ ।
ಕಶ್ಚಿತ್ಕಾಶೀಪುರೇ ರಮ್ಯೇ ಹ್ಯಾಸೀದ್ವಿಪ್ರೋತಿನಿರ್ಧನಃ ।।೧॥
ಕ್ಷುತ್ತೃಡ್ಭ್ಯಾಂ ವ್ಯಾಕುಲೋ ಭೂತ್ವಾ ನಿತ್ಯಂ ಬಭ್ರಾಮ ಭೂತಲೇ ।
ದುಃಖಿತಂ ಬ್ರಾಹ್ಮಣಂ ದೃಷ್ಟ್ವಾ ಭಗವಾನ್ ಬ್ರಾಹ್ಮಣಪ್ರಿಯಃ ॥೨॥
ವೃದ್ಧಬ್ರಾಹ್ಮಣರೂಪಸ್ತಂ ಪಪೃಚ್ಛ ದ್ವಿಜಮಾದರಾತ್ ।
ಕಿಮರ್ಥಂ ಭ್ರಮಸೇ ವಿಪ್ರ ಮಹೀಂ ನಿತ್ಯಂ ಸುದುಖ್ಖಿತಃ ॥೩॥
ತತ್ಸರ್ವಂ ಶ್ರೋತುಮಿಚ್ಛಾಮಿ ಕಥ್ಯತಾಂ ದ್ವಿಜಸತ್ತಮ ॥
|| ಬ್ರಾಹ್ಮಣ ಉವಾಚ ॥
ಬ್ರಾಹ್ಮಣೋತಿದರಿದ್ರೋಹಂ ಭಿಕ್ಷಾರ್ಥಂ ವೈ ಭ್ರಮೇ ಮಹೀಂ ॥೪॥
ಉಪಾಯಂ ಯದಿ ಜಾನಾಸಿ ಕೃಪಯಾ ಕಥಯ ಪ್ರಭೋ ॥
|| ವೃದ್ಧಬ್ರಾಹ್ಮಣ ಉವಾಚ ॥
ತಸ್ಯ ತ್ವಂ ಪೂಜನಂ ವಿಪ್ರ ಕುರುಷ್ವ ವ್ರತಮುತ್ತಮಂ ।
ಯತ್ ಕೃತ್ವಾ ಸರ್ವದುಃಖೇಭ್ಯೋಮುಕ್ತೋ ಭವತಿ ಮಾನವಃ ॥೬।।
ವಿಧಾನಂ ಚ ವ್ರತಸ್ಯಾಪಿ ವಿಪ್ರಾಯಾಭಾಷ್ಯ ಯತ್ನತಃ ।
ಸತ್ಯನಾರಾಯಣೋ ವೃದ್ಧಸ್ತತ್ರ್ಯೆವಾಂತರಧೀಯತ ॥೭॥
ತದ್ವ್ರತಂ ಸಂಕರಿಷ್ಯಾಮಿ ಯದುಕ್ತಂ ಬ್ರಾಹ್ಮಣೇನ ವೈ ।
ಇತಿ ಸಂಚಿಂತ್ಯ ವಿಪ್ರೋಸೌ ರಾತ್ರೌ ನಿದ್ರಾಂ ನ ಲಬ್ಧವಾನ್ ॥೮।।
ತತಃ ಪ್ರಾತಃ ಸಮುತ್ಥಾಯ ಸತ್ಯನಾರಾಯಣವ್ರತಂ ।
ಕರಿಷ್ಯ ಇತಿ ಸಂಕಲ್ಪ್ಯ ಭಿಕ್ಷಾರ್ಥಮಗಮದ್ವಿಜಃ ॥೯॥
ತಸ್ಮಿನ್ನೇವ ದಿನೇ ವಿಪ್ರಃ ಪ್ರಚುರಂ ದ್ರವ್ಯಮಾಪ್ತವಾನ್ ।
ತೇನೈವ ಬಂಧುಭಿಃ ಸಾರ್ಧಂ ಸತ್ಯಸ್ಯ ವ್ರತಮಾಚರತ್ ॥೧೦॥
ಸರ್ವದುಃಖವಿರ್ಮುಕ್ತಃ ಸರ್ವಸಂಪತ್ಸಮನ್ವಿತಃ ।
ಬಭೂವ ಸ ದ್ವಿಜಶ್ರೇಷ್ಠೋ ವ್ರತಸ್ಯಾಸ್ಯ ಪ್ರಭಾವತಃ ॥೧೧॥
ತತಃ ಪ್ರಭೃತಿ ಕಾಲಂ ಚ ಮಾಸಿ ಮಾಸಿ ವ್ರತಂ ಕೃತಂ ।
ಏವಂ ನಾರಾಯಣಸ್ಯೇದಂ ವ್ರತಂ ಕೃತ್ವಾ ದ್ವಿಜೋತ್ತಮಃ ।
ಸರ್ವಪಾಪವಿನಿರ್ಮುಕ್ತೋ ದುರ್ಲಭಂ ಮೋಕ್ಷಮಾಪ್ತವಾನ್ ॥೧೨॥
ವ್ರತಮಸ್ಯ ಯದಾ ವಿಪ್ರಃ ಪೃಥಿವ್ಯಾಂ ಸಂಕರಿಷ್ಯತಿ ।
ತದೈವ ಸರ್ವದುಃಖಂ ಚ ಮನುಜಸ್ಯ ವಿನಶ್ಯತಿ ।।೧೩॥
|| ಸೂತ ಉವಾಚ ॥
ಏವಂ ನಾರಾಯಣೇನೋಕ್ತಂ ನಾರದಾಯ ಮಹಾತ್ಮನೇ ।
ಮಯಾ ತತ್ಕಥಿತಂ ವಿಪ್ರಾಃ ಕಿಮನ್ಯತ್ ಕಥಯಾಮಿ ವಃ ॥೧೪॥
|| ಋಷಯ ಊಚುಃ ॥
ತಸ್ಮಾದ್ವಿಪ್ರಾತ್ ಶ್ರುತಂ ಕೇನ ಪೃಥಿವ್ಯಾಂ ಚರಿತಂ ಮುನೇ ।
ತತ್ಸರ್ವಂ ಶ್ರೋತುಮಿಚ್ಛಾಮಃ ಶ್ರದ್ಧಾಸ್ಮಾಕಂ ಪ್ರಜಾಯತೇ ॥೧೫॥
ಸೂತ ಉವಾಚ॥
ಶೃಣುಧ್ವಂ ಮುನಯಃ ಸರ್ವೇ ವ್ರತಂ ಯೇನ ಕೃತಂ ಭುವಿ ।
ಏಕದಾ ಸ ದ್ವಿಜವರೋ ಯಥಾವಿಭವವಿಸ್ತರೈಃ ॥೧೬॥
ಬಂಧುಭಿಃ ಸ್ವಜನೈಃ ಸಾರ್ಧಂ ವ್ರತಂ ಕರ್ತುಮ್ ಸಮುದ್ಯತಃ ।
ಏತಸ್ಮಿನ್ನಂತರೇಕಾಲೇಕಾಷ್ಠಕ್ರೇತಾ ಸಮಾಗಮತ್ ॥೧೭॥
ಬಹಿಃ ಕಾಷ್ಠಂ ಚ ಸಂಸ್ಥಾಪ್ಯ ವಿಪ್ರಸ್ಯ ಗೃಹಮಾಯಯೌ ।
ತೃಷ್ಣಯಾ ಪೀಡಿತಾತ್ಮ ಚ ದೃಷ್ಟ್ವಾ ವಿಪ್ರಕೃತಂ ವ್ರತಂ ॥೧೮॥
ಪ್ರಣಿಪತ್ಯ ದ್ವಿಜಂ ಪ್ರಾಹ ಕಿಮಿದಂ ಕ್ರಿಯತೇ ತ್ವಯಾ ।
ಕೃತೇ ಕಿಂ ಫಲಮಾಪ್ನೋತಿ ವಿಸ್ತರಾದ್ವದ ಮೇ ಪ್ರಭೋ ॥೧೯॥
ವಿಪ್ರ ಉವಾಚ ॥
ಸತ್ಯನಾರಾಯಣಸ್ಯೇದಂ ವ್ರತಂ ಸರ್ವೇಪ್ಸಿತಪ್ರದಂ ।
ತಸ್ಯ ಪಸಾದಾನ್ಮೇ ಸರ್ವಂ ಧನಧಾನ್ಯಾದಿಕಂ ಮಹತ್ ॥೨೦॥
ತಸ್ಮಾದೇತದ್ವ್ರತಂ ಜ್ಞಾತ್ವಾ ಕಾಷ್ಠಕ್ರೇತಾತಿಹರ್ಷಿತಃ ।
ಪಪೌ ಜಲಂ ಪ್ರಸಾದಂ ಚ ಭುಕ್ತ್ವಾ ಸ ನಗರಂ ಯಯೌ ॥೨೧॥
ಸತ್ಯನಾರಾಯಣಂ ದೇವಂ ಮನಸಾ ಇತ್ಯಚಿಂತಯತ್।
ಕಾಷ್ಠಂ ವಿಕ್ರಯತೋ ಗ್ರಾಮೇ ಪ್ರಾಪ್ಯತೇ ಚಾದ್ಯ ಯದ್ಧನಂ ॥೨೨।।
ತೇನೈವ ಸತ್ಯದೇವಸ್ಯ ಕರಿಷ್ಯೇ ವ್ರತಮುತ್ತಮಂ ।
ಇತಿ ಸಂಚಿಂತ್ಯ ಮನಸಾ ಕಾಷ್ಠಂ ಧೃತ್ವಾ ತು ಮಸ್ತಕೇ ॥೨೩॥
ಜಗಾಮ ನಗರೇ ರಮ್ಯೇ ಧನಿನಾಂ ಯತ್ರ ಸಂಸ್ಥಿತಿಃ ।
ತದ್ದಿನೇ ಕಾಷ್ಥಮೂಲ್ಯಂ ಚ ದ್ವಿಗುಣಂ ಪ್ರಾಪ್ತವಾನಸೌ ॥ ೨೪।।
ತತಃ ಪ್ರಸನ್ನಹೃದಯಃ ಸುಪಕ್ವಂ ಕದಲೀಫಲಂ ।
ಶರ್ಕರಾಂ ಘೃತದುಗ್ದೇ ಚ ಗೋಧೂಮಸ್ಯ ಚೂರ್ಣಕಂ ॥೨೫॥
ಕೃತ್ವೈಕತ್ರ ಸಪಾದಂ ಚ ಗೃಹೀತ್ವಾ ಸ್ವಗೃಹಂ ಯಯೌ ।
ತತೋ ಬಂಧೂನ್ ಸಮಾಹೂಯ ಚಕಾರ ವಿಧಿನಾ ವ್ರತಂ ॥೨೬॥
ತದ್ವ್ರತಸ್ಯ ಪ್ರಭಾವೇನ ಧನಪುತ್ರಾನ್ವಿತೋಭವತ್ ।
ಇಹ ಲೋಕೇ ಸುಖಂ ಭುಂಕ್ತ್ವಾ ಚಾಂತೇ ಸತ್ಯಪುರೌ ಯಯೌ ॥ ೨೭॥
ಇತಿ ಶ್ರೀಸ್ಕಂದಪುರಾಣೇ ರೇವಾಖಂಡೇ ಸತ್ಯನಾರಾಯಣವ್ರತಕಥಾಯಾಂ ದ್ವಿತೀಯೋಧ್ಯಾಯಃ॥
ಶ್ರೀಮನ್ನಾರಾಯಣ ನಾರದಂಗೆ ಮುಂದಾಣ ಕತೆಯ ಹೇಳುತ್ತ°
– ಕಾಶೀಪಟ್ಟಣಲ್ಲಿ ಬಹುಬಡವ ಬ್ರಾಹ್ಮಣ ಒಬ್ಬ ಇತ್ತಿದ್ದನಡ. ಒಳ್ಳೆ ಗುಣದವನಾದ ಅವ° ಹಸಿವು ಬಾಯಾರಿಕೆಂದ ನರಳಿಗೊಂಡು, ಭಿಕ್ಷೆ ಬೇಡಿಗೊಂಡು ಅತ್ತಿತ್ತೆ ತಿರುಗಿಯೊಂಡು ಇತ್ತಿದ್ದ°.
ದುಃಖಿಯಾಗಿಪ್ಪ ಆ ಬ್ರಾಹ್ಮಣನ ಕಂಡು, ಧರ್ಮಾತ್ಮರ ಪ್ರೀತಿಸುವ ಶ್ರೀ ಮಹಾವಿಷ್ಣು, ಒಂದಿನ ಒಬ್ಬ° ವೃದ್ಧ ಬ್ರಾಹ್ಮಣನ ರೂಪಲ್ಲಿ ಆ ಬ್ರಾಹ್ಮಣಂಗೆ ಕಾಣಿಸಿಗೊಂಡು – “ಎಲೈ ಬ್ರಾಹ್ಮಣನೇ, ನೀನು ಹೀಂಗೆ ಎಂತಕೆ ದುಃಖಿಸಿಗೊಂಡು ಯೇವತ್ತೂ ತಿರುಗಿಯೊಂಡು ಇದ್ದೆ? ನಿನ್ನ ಕಷ್ಟ ದುಃಖ ಎಂತರ, ಎನ್ನತ್ರೆ ಹೇಳು” ಹೇಳಿ ಹೇಳಿದ.
ಅದಕ್ಕೆ ಆ ಬ್ರಾಹ್ಮಣ°- ‘ಬ್ರಾಹ್ಮಣೋತಿದರಿದ್ರೋಹಂ ಭಿಕ್ಷಾರ್ಥಂ ವೈ ಭ್ರಮೇ ಮಹೀಂ….’, “ಆನೊಬ್ಬ ಕಡು ಬಡವ (ದರಿದ್ರ) ಬ್ರಾಹ್ಮಣ. ಭಿಕ್ಷೆಗಾಗಿ ಊರೂರ ತಿರುಗಿಯೊಂಡು ಸಂಕಟಪಡುತ್ತಾ ಇದ್ದೆ. ಎನ್ನ ಈ ದಾರಿದ್ರ್ಯ ತೀರ್ಲೆ ಏನಾರು ಉಪಾಯ ಗೊಂತಿದ್ದರೆ ಹೇಳು” ಹೇಳಿ ಬೇಡಿಗೊಂಡ.
ಅದಕ್ಕೆ ವೃದ್ಧಬ್ರಾಹ್ಮಣರೂಪಲ್ಲಿ ಇಪ್ಪ ಮಹಾವಿಷ್ಣು, – “ಎಲೈ ಬ್ರಾಹ್ಮಣನೇ, ಸತ್ಯನಾರಾಯಣ ಸ್ವರೂಪಿಯಾದ ಶ್ರೀ ಮಹಾವಿಷ್ಣುವಿನ ಸತ್ಯನಾರಾಯಣ ವ್ರತವ ಆಚರುಸುವದರ ಮೂಲಕ ನೀನು ಅವನ ಆರಾಧುಸು. ಈ ವ್ರತವ ಆಚಾರಿಸಿದವಂಗೆ ಸಕಲ ಇಷ್ಟಾರ್ಥಸಿದ್ಧಿಯೂ ಆವ್ತು. ಎಲ್ಲಾ ದುಃಖಂಗಳೂ ಪರಿಹಾರ ಆಗಿ ಕ್ಷೇಮ ಲಭಿಸುತ್ತು” ಹೇಳಿ ಹೇಳಿಕ್ಕಿ, ಆ ವ್ರತವ ಹೇಂಗೆ ಮಾಡೆಕ್ಕಪ್ಪದು ಹೇಳ್ವ ವಿವರವನ್ನೂ ತಿಳಿಸಿ ಅಲ್ಲಿಯೇ ಅಂತರ್ಧಾನನಾದ°.
ಆ ವೃದ್ಧಬ್ರಾಹ್ಮಣ ಹೇಳಿದ ಮಾತುಗಳ ಕೇಳಿ ಈ ಬ್ರಾಹ್ಮಣ, “ಇಂತಹ ಶ್ರೇಷ್ಠವಾದ ಒಂದು ವ್ರತ ಇಪ್ಪದಾದರೆ ನಿಶ್ಚಯವಾಗಿ ಆನು ಮಾಡುತ್ತೆ” ಹೇಳಿ ಮನಸ್ಸಿಲ್ಲಿಯೇ ನಿಶ್ಚೈಸಿ ಆ ದಿನ ಇರುಳು ಮನುಗಿದ. ಇತಿ ಸಂಚಿಂತ್ಯ ವಿಪ್ರೋಸೌ ರಾತ್ರೌ ನಿದ್ರಾಂ ನ ಲಬ್ಧವಾನ್… – ಮರುದಿನ ಸತ್ಯನಾರಾಯಣ ಪೂಜೆ ಮಾಡೆಕ್ಕು ಹೇಳಿ ತವಕಲ್ಲಿ ಮನುಗಿದ ಬ್ರಾಹ್ಮಣಂಗೆ ಇರುಳಿಡೀ ಒರಕ್ಕೇ ಬೈಂದಿಲ್ಲೆ. ಮರುದಿನ ಉದಿಯಪ್ಪಗ ಎದ್ದು “ಈ ದಿನ ಸಿಕ್ಕುವ ಭಿಕ್ಷೆಲಿ ಹೇಂಗಾರು ಸತ್ಯನಾರಾಯಣ ಪೂಜೆ ಮಾಡುತ್ತೆ” ಹೇಳಿ ಆಲೋಚಿಸಿ ಭಿಕ್ಷಾಟನೆಗೆ ಹೆರಟ°.
ದೈವಾನುಕೂಲಂದ ಆ ದಿನ ಅವಂಗೆ ಹೋದಲೆಲ್ಲಾ ಕೈತುಂಬಾ ಬಗೆ ಬಗೆ ಭಿಕ್ಷೆ ಸಿಕ್ಕಿತ್ತು. ಹಾಂಗೆ ಸಿಕ್ಕಿದ ದ್ರವ್ಯಂದ ಅವ° ಅಂದು ಬಹು ಶ್ರದ್ಧಾಭಕ್ತಿಂದ ಶ್ರೀ ಸತ್ಯನಾರಾಯಣ ಪೂಜೆಯ ಮಾಡಿದ°.
ಈ ವ್ರತದ ಪ್ರಭಾವಂದ ಅವನ ದಾರಿದ್ರ್ಯ ತೊಲಗಿ ಸಕಲ ಸಂಪತ್ತುಗೊ ಅವಂಗೆ ಅನುಕೂಲವಾಗಿ ಒದಗಿ ಬಂತು.
ಇದರಿಂದ ಸಂತುಷ್ಟನಾದ ಅವ° ಮತ್ತೆ ಪ್ರತಿ ತಿಂಗಳು ತಿಂಗಳು ತಪ್ಪದ್ದೆ ಶ್ರೀ ಸತ್ಯನಾರಾಯಣವ್ರತವ ಆಚರಿಸಿಗೊಂಡು ಬಂದು ಸರ್ವಪಾಪಂಗಳಂದ ಮುಕ್ತನಾಗಿ ಅಕೇರಿಗೆ ಮೋಕ್ಷವ ಪಡದ°.
ಹೀಂಗೆ ಯಾವಾತ° ಈ ವ್ರತವ ಆಚರುಸುತ್ತನೋ ಅವನ ಸರ್ವ ದುಃಖಂಗೊ ಪರಿಹಾರ ಆವ್ತು. ಹೀಂಗೆ, ಭಗವಾನ್ ಆದಿನಾರಾಯಣ° ಸ್ವತಃ ನಾರದಂಗೆ ಹೇಳಿದ ವಿಚಾರವ ನಿಂಗೊಗೆ ಈಗ ಹೇಳಿದ್ದೆ. ಇನ್ನೆಂತಾರು ಸಂಶಯಂಗೊ ಇದ್ದರೆ ಕೇಳಿ ಹೇಳಿ ಶೌನಕಾದಿ ಮುನಿಗಳಿಂಗೆ ಸೂತಪುರಾಣಿಕ ಹೇಳಿ ನಿಲ್ಲುಸಿದ°.
ಇದಿಷ್ಟರ ಕೇಳಿ ಇನ್ನೂ ಇಂತಹ ಪುಣ್ಯಕಥೆಗಳ ಕೇಳೆಕು ಹೇಳ್ವ ಕುತೂಹಲಂದ ಶೌನಕಾದಿ ಋಷಿಗೊ ಸೂತಪುರಾಣಿಕನತ್ರೆ ಕೇಳ್ತವು – “ ಹೇ ಮಹಾನುಭಾವ, ಆ ಬ್ರಾಹ್ಮಣನತ್ರಂದ ಈ ವ್ರತದ ವಿಚಾರ ಮುಂದೆ ಆರು ಕೇಳಿ ತಿಳುಕ್ಕೊಂಡವು? ಬೇರೆ ಆರು ಆರು ಈ ಪುಣ್ಯ ವ್ರತವ ಮಾಡಿದವು, ಅವಕ್ಕೆ ಎಂತಹ ಫಲಂಗೊ ಸಿಕ್ಕಿತ್ತು, ಇತ್ಯಾದಿ ವಿಷಯ ಎಂಗೊಗೆ ತಿಳಿಯೇಕು ಹೇಳಿ ಆಗ್ರಹ ಆಯ್ದು. ದಯವಿಟ್ಟು ಅದೆಲ್ಲ ವಿವರವಾಗಿ ಹೇಳಿ” ಹೇಳಿ ಕೇಳಿಕೊಂಡವು.
ಅದಕ್ಕೆ ಸೂತಪುರಾಣಿಕ ಮುಂದಾಣ ಕತೆಯ ಹೇಳುತ್ತ° –
“ಎಲೈ ಮುನಿಗಳೇ, ಈ ವ್ರತವ ಮಾಡಿ ಬೇಕಾದ ಫಲಂಗಳ ಪಡದವರ ಕತೆ ಹೇಳುತ್ತೆ, ಕೇಳಿ” ಹೇಳಿ ಸುರುಮಾಡಿದ° – ಒಂದಿನ ಏವತ್ರಾಣ ಹಾಂಗೆ ಆ ಬ್ರಾಹ್ಮಣ ತನ್ನ ಬಂಧುವರ್ಗವ ಆಮಂತ್ರಿಸಿ ಪೂಜಗೆ ಬೇಕಾದ ಸಮಸ್ತವಸ್ತುಗಳ ಸಂಗ್ರಹಿಸಿ ತನ್ನ ಮನೇಲಿ ಸತ್ಯನಾರಾಯಣ ಪೂಜೆಯ ಮಾಡಿಗೊಂಡಿಪ್ಪಗ ಒಬ್ಬ ಸೌದಿ ಮಾರುತ್ತವ° ಅಲ್ಯಾಗಿ ಬಂದ°. ತಲೆಮೇಲ್ಕಟೆ ಇದ್ದ ಸೌದಿಹೊರೆಯ ಕೆಳ ಇಳುಸಿ, ಆಸ್ರಿಂಗೆ ಕುಡಿವಲೆ ಹೇದು ಬ್ರಾಹ್ಮಣನ ಮನೆ ಹತ್ರೆ ಬಂದ°. ಪೂಜೆಮಾಡಿಗೊಂಡಿದ್ದಿದ್ದರ ಕಂಡು ಬ್ರಾಹ್ಮಣನತ್ರೆ – ‘ಭಟ್ರೇ, ಇದೆಂತರ ಪೂಜೆ ನಿಂಗೊ ಮಾಡ್ತಾ ಇಪ್ಪದು, ಇದರ ಹೆಸರೆಂತರ. ಇದರ ಫಲ ಎಂತರ” ಹೇಳಿ ಕೇಳಿತ್ತು. ಅದಕ್ಕೆ ಬ್ರಾಹ್ಮಣ ಹೇಳಿದ – ‘ಸತ್ಯನಾರಾಯಣಸ್ಯೇದಂ ವ್ರತಂ ಸರ್ವೇಪ್ಸಿತಪ್ರದಂ….’, “ನಾವು ಬಯಸುವ ಎಲ್ಲಾ ಫಲಗಳ ಕೊಡುವ ಈ ಪೂಜೆ ಸತ್ಯನಾರಾಯಣ ಪೂಜೆ ಹೇಳಿ ಹೇಳುತ್ತವು. ಕಡುಬಡವ° ಆಗಿದ್ದ ಆನು ಈ ವ್ರತವ ಮಾಡ್ಳೆ ಸುರುಮಾಡಿದ ಮತ್ತೆ ಎನ್ನ ಬಡತನ ದೂರ ಆತು. ಮಾತ್ರವಲ್ಲ, ಸಮಸ್ತ ಸುಖ ಸಂಪತ್ತು ಧನಧಾನ್ಯಾದಿ ಸಮೃದ್ಧಿಯಾಗಿ ಎನಗೆ ಒದಗಿ ಬಂತು”. ಬ್ರಾಹ್ಮಣನ ಮಾತುಗಳ ಕೇಳಿ ಸೌದಿಮಾರುತ್ತ ಮನುಷ್ಯ° ಇಂತ ಪ್ರಭಾವವುಳ್ಳ ಸತ್ಯನಾರಾಯಣ ಸ್ವಾಮಿಯ ಮನಸ್ಸಿಲ್ಲಿಯೇ ಧ್ಯಾನಿಸಿ ವಂದಿಸಿ ತೀರ್ಥಪ್ರಸಾದವ ತೆಕ್ಕೊಂಡು ತನ್ನ ಸೌದಿಹೊರೆಯ ತಲಗೇರಿಸಿಗೊಂಡು ತನ್ನ ಮನಗೆ ಹೋತು.
ಮರದಿನ ಏವತ್ರಾಣ ಹಾಂಗೆ ಕಟ್ಟಿಗೆ ಹೊರೆ ತಲೆಲಿ ಮಡುಗಿ “ಇಂದು ಈ ಕಟ್ಟಿಗೆ ಮಾರಾಟಂದ ಎಷ್ಟು ಪೈಸೆ ಬತ್ತೋ ಅದೆಲ್ಲವನ್ನೂ ವಿನಿಯೋಗಿಸಿ ಒಂದು ಸತ್ಯನಾರಾಯಣ ಪೂಜೆ ಮಾಡುತ್ತೆ” ಹೇಳಿ ಮನಸ್ಸಿಲ್ಲಿ ಸಂಕಲ್ಪಿಸಿಗೊಂಡು ಧನಿಕರು ಅಧಿಕ ಇಪ್ಪ ನಿವಾಸದ ಕಡೆಂಗೆ ಮಾರಾಟಕ್ಕೆ ಹೆರಟತ್ತು. ಆ ದಿನ ಏವತ್ರಾಣಂದ ಎರಟಿ ಲಾಭ ಸಿಕ್ಕಿತ್ತು. ಸಂತುಷ್ಟನಾದ ಆತ° ಪೇಟೆಂದ ಬಾಳೆಹಣ್ಣು, ಗೋಧಿಹುಡಿ, ಸಕ್ಕರೆ, ಹಾಲು, ತುಪ್ಪ ಮುಂತಾದ್ದರ ತೆಕ್ಕೊಂಡು ತನ್ನ ಮನಗೆ ಬಂತು. ತನ್ನ ಬಂಧುಮಿತ್ರರ ಆಮಂತ್ರಿಸಿ ತನ್ನಿಂದ ಎಡಿಗಪ್ಪಷ್ಟು ಒಳ್ಳೆ ರೀತಿಲಿ ವೈಭವಂದ ಶ್ರೀ ಸತ್ಯನಾರಾಯಣ ಪೂಜೆಯ ಮಾಡಿ ನೆರವೇರಿಸಿತ್ತು. ಹೀಂಗೆಯೇ ಮುಂದೆಯೂ ಈ ವ್ರತವ ಆಚರಿಸಿಗೊಂಡು, ‘ಇಹ ಲೋಕೇ ಸುಖಂ ಭುಂಕ್ತ್ವಾ ಚಾಂತೇ ಸತ್ಯಪುರೌ ಯಯೌ’ – ಇಹಲೋಕದ ಎಲ್ಲ ಸುಖ ಸೌಭಾಗ್ಯಂಗಳ ಅನುಭವುಸಿ ಕಡೇಂಗೆ ಸತ್ಯಲೋಕವ ಸೇರಿತ್ತು” ಎಂಬಲ್ಯಂಗೆ ಶ್ರೀ ಲಕ್ಷ್ಮೀಸಹಿತ ಶ್ರೀ ಸತ್ಯನಾರಾಯಣಸ್ವಾಮಿ ಪೂಜಾಕಥೆಯ ಎರಡನೇ ಅಧ್ಯಾಯ ಮುಗಿತ್ತು.
ಓಂ ನಮೋ ನಾರಾಯಣಾಯ ॥ ಶ್ರೀ ಕೃಷ್ಣಾರ್ಪಣಮಸ್ತು ॥
ಶ್ರೀ ಲಕ್ಷ್ಮೀಸಹಿತ ಶ್ರೀ ಸತ್ಯನಾರಾಯಣ ದೇವರಪಾದಾರವಿಂದಕ್ಕೆ ಗೋವಿಂದ ಅನ್ನಿ ಗೋವಿಂದ ….., ಗೋ..ವಿಂದ ॥
ಶ್ರೀ ಲಕ್ಷ್ಮೀಸಹಿತ ಶ್ರೀ ಸತ್ಯನಾರಾಯಣ ದೇವರ ಮನಸ್ಸಿಲ್ಲಿಯೇ ಧ್ಯಾನಿಸಿಗೊಂಡು ಮನಸಾ ಷೋಡಶೋಪಚಾರಪೂಜೆಯ ಪರಿಕಲ್ಪಿಸಿ ಒಂದು ಮಂಗಳಾರತಿಯನ್ನೂ ಮನಸ್ಸಿಲ್ಲೇ ಮಾಡಿಕೊಂಬದು. ಆರತಿ ಎಲ್ಲಿದ್ದು ಹೇಳಿ ಹುಡ್ಕೆಕು ಹೇಳಿ ಇಲ್ಲೆಡ. ಒಂದನೇ ಅಧ್ಯಾಯದ ಅಕೇರಿಗೆ ಎತ್ತಿದ ಆರತಿಯನ್ನೇ ನೆರಿಕೀತ್ಲೆಲಿ (ಬಾಳೆಕೀತು) ಉದ್ದಿ, ಕರ್ಪೂರ ಮಡಿಗಿ ಹೊತ್ಸಿ ಆರತಿ ಎತ್ತಲಕ್ಕಡ! – ನೆಗೆಗಾರಣ್ಣ ಹೇಳಿದ್ದು!!. ಇದಾ ಚಕ್ಕನಾಟಿ ಕೂದಲಿಂದ ಎದ್ದಿಕ್ಕಿ ಹೋಪಲೆ ಆಯ್ಡಿಲ್ಲೆ., ಬೇಕಾರೆ ಎದ್ದು ನಿಂದು ಒಂದರಿ ಕೈಕಾಲು ಸರಿಮಾಡಿಕ್ಕೊಂಬಲಕ್ಕು., ಆನೊಂದರಿ ಪುಟ ಮೊಗಚ್ಚಿಯೋಳ್ತೆ.. ಏ° (ಅಕೇರಿಯಾಣ ಪುಟ ಅಲ್ಲ, ಇನ್ನಾಣ ಪುಟ ಆತೋ!)
~*~*~
ಹರಿಕಥಾ ಶ್ರವಣಕ್ಕೆ:
[audio:audio/KATHA_CHAPTER_02.mp3]
ಧ್ವನಿ ಕೃಪೆ : www.sangeethamusic.com
~*~*~
ಉತ್ಸಾಹಲ್ಲಿ ಓದಿದ ಕೇಳಿದ ಎಲ್ಲೋರಿಂಗೂ ಧನ್ಯವಾದಂಗೊ. ಇದೇ ಉತ್ಸಾಹಲ್ಲಿ ಮೂರನೇ ಅಧ್ಯಾಯವನ್ನೂ ನೋಡಿಕ್ಕುವೋ ಅಲ್ಲದೋ
ಎರಡನೆ ಅಧ್ಯಾಯದ ಕತೆಯ ಶ್ರದ್ಧಾ ಭಕ್ತಿಲಿ ಮನೆಯವು ಎಲ್ಲರೂ ಕೂದೊಂಡು ಕೇಳಿದಿಯೊ°
ಧನ್ಯವಾದಂಗೊ
ಸತ್ಯನಾರಾಯಣ ವ್ರತ ಕತೆಯ ಕನ್ನಡಲ್ಲಿ ಪದ್ಯ ರೂಪಲ್ಲಿ[ಚೌಪದಿ ] ಬರೆದ್ದವು.ಬರೆದವರ ಹೆಸರು ನೆಂಪಿಲ್ಲೆ.ಅದರಲ್ಲಿ ಸಪಾದಭಕ್ಷ್ಯದ ಬಗ್ಗೆ ಹೀಂಗಿದ್ದು-
ರಂಭಫಲ,ಘೃತ,ಕ್ಷೀರ,ಶರ್ಕರೆ,ತಂಬಿಟ್ಟು
ಇಂಬಾಗಿ ಹಾಗಪಾಲವನು ಸೇರಿಸೊಟ್ಟು
ಇಂಬುಗೊಳದಿರೆ ಅಕ್ಕಿಹಿಟ್ಟು ಬೆಲ್ಲವನು
ತುಂಬಿಸುತ ವಿರಚಿಸು ಸಪಾದಭಕ್ಷ್ಯವನು
ಈ ಕಿರುಕಾವ್ಯ ತುಂಬಾ ಮನೋಹರವಾಗಿ ಇದ್ದು.
ಚೆನ್ನೈ ಭಾವ ಬರೆದ್ದೂ ಚೆಂದ ಆಯಿದು.
ಚೆನ್ನಾದ ಬರಹ ಬರವ ಚೆನ್ನೈ ಭಾವನ ಕಾವ್ಯನಾಮ ಅನ್ವರ್ಥಕ!
ಚೆನ್ನೈ ಭಾವ° ಇಡೀ ದಿನ ಬೈಲಿಲ್ಲೇ ತಿರುಗಿಯೊಂಡು, ಒಳ್ಳೆ ಕೃಷಿಕರಾಗಿಪ್ಪದು ನೋಡುವಾಗ ಖುಷಿ ಆವುತ್ತು! ಬೈಲ್ಲಿ ಕೆಲಸ ಮಾಡುವವರ ಪ್ರೋತ್ಸಾಹಿಸೆಂಡು, ತಾನೂ ಶ್ರಮ ವಹಿಸಿ ದುಡಿವ, ಒಳ್ಳೆ ಸಾಂಪ್ರದಾಯಿಕ ಉತ್ಪನ್ನಂಗಳ ಕೊಡುವ ಭಾವಯ್ಯನ ಎಷ್ಟು ಹೊಗಳಿದರೂ ಸಾಲ!
ನಮ್ಮ ಸಂಸ್ಕೃತಿ, ಸಂಸ್ಕಾರಂಗಳ ಬಗ್ಗೆ, ಆಚಾರ ವಿಚಾರಂಗಳ ಬಗ್ಗೆ, ಪೂಜೆ ಪುನಸ್ಕಾರಂಗಳ ಬಗ್ಗೆ, ವೇದ ಮಂತ್ರಂಗಳ ಬಗ್ಗೆ ಎಲ್ಲ ನಾವು ಮಾತಾಡ್ತ ಹಾಂಗೇ, ಎಲ್ಲೋರಿಂಗೂ ಅರ್ತ ಅಪ್ಪ ಹಾಂಗೆ ವಿವರವಾಗಿ ಬರದು ತಿಳುಶುವ ಕೆಲಸ ಸುಲಬದ್ದಲ್ಲ! ಅದರೊಟ್ಟಿಂಗೆ ನಮ್ಮ ಬಟ್ಟ ಮಾವಂದಿರ ಸ್ವರಲ್ಲೇ ಮಂತ್ರಂಗಳ ಕೇಳುಸುವ ಪ್ರಯತ್ನವೂ ಮೆಚ್ಚೆಕ್ಕಾದ್ದೆ. ಎಲ್ಲವೂ ಓದಿ, ಕಲ್ತು, ಸಂಗ್ರಹ ಮಾಡಿ ಮಡಿಕ್ಕೊಳೆಕ್ಕಾದ ಶುದ್ದಿಗಳೆ.
ಈ ವಾರ ಒಪ್ಪಣ್ಣ ಭಾವನೆ, ಸಂಭಾವನೆಗಳ ಬಗ್ಗೆ ಬರದ್ದ°. ಈ ಭಾವ ದೂರದ ಚೆನ್ನೈಲಿ ಕೂದೊಂಡು ನಮ್ಮ ಬೈಲ್ಲಿ ಪ್ರೀತಿಂದ, ಅಭಿಮಾನಂದ ಯಾವದೇ ‘ಸಮ್’ ಇಲ್ಲದ್ದೆ ಹಗಲಿರುಳು ಮಾಡ್ತ ಕೆಲಸದ ಭಾವನೆಗೆ ಎಂತ ಹೇಳ್ತಿ?
ನಿಂಗೊ ಎಲ್ಲೋರ ಪ್ರೀತಿ ಪ್ರೋತ್ಸಾಹ, ಆಶೀರ್ವಾದ, ಮಾರ್ಗದರ್ಶನ, ವಿಷಯ ತಪ್ಪಿದ್ದಲ್ಲಿ ತಿದ್ದಿ ಸೂಕ್ತ ಮಾಹಿತಿ ಕೊಟ್ಟು ಬೈಲ ಗುಣ ಮತ್ತು ಹಿರಿಮೆಯ ಕಾಪಾಡುವ ವಿಶಾಲಹೃದಯಕ್ಕಿಂತ ಹೆಚ್ಚಿಗೆ ನವಗೆಂತ ಬೇಕು ಮಾವ. ಗೋಪಾಲಣ್ಣ ಹೇಳಿದಾಂಗೆ ವೃತ್ತಿಪರರಿಂಗೆ ಸಂಭಾವನೆ ಮುಖ್ಯ ಆದರೆ ನವಗೆ ಸಂ-ಭಾವನೆಲಿಯೇ ಸಂಪೂರ್ಣ ತೃಪ್ತಿ. ಪೆರ್ವದಣ್ಣ ಹೇಳಿದ ಒಪ್ಪಣ್ಣನ ಭಾವನೆಗೆ ನಮ್ಮ ಸಂ-ಭಾವನೆ ಸೇರ್ಸುವೋ. ಸರ್ಪಮಲೆ ಮಾವಂಗೆ ಹೃತ್ಪೂರ್ವಕ ಧನ್ಯವಾದ ಹೇಳಿತ್ತು – ‘ಚೆನ್ನೈವಾಣಿ’.
ಯಾವುದೇ ಪೂಜೆಯ ಯಶಸ್ಸಿನ ಹಿಂದೆ ಪ್ರಧಾನ ಪಾತ್ರ ವಹಿಸುದು ಅಲ್ಲಿ ಸೇರಿದವರ ಮನಸ್ಸಿನ ಭಕ್ತಿಯ ಭಾವ ಮತ್ತು ಆ ಭಾವಂದ ಮಾಡಿದ ಪ್ರಾರ್ಥನೆ… ಚೆನ್ನೈ ಭಾವ ಹೇಳುತ್ತ ಹಾಂಗೆ ಈ ಭಕ್ತಿ ಭಾವವ ಪ್ರೇರೆಪಿಸುದೇ ಕಥಾ ಶ್ರವಣದ ಪ್ರಧಾನ ಉದ್ದೇಶ… ಇಂದು ನಮ್ಮ ಮನೆಗಳಲ್ಲಿ ಪೂಜೆ ಹೇಂಗೆ ನಡೆತ್ತು ಹೇಳಿ ನಮಗೆಲ್ಲ ಗೊಂತಿದ್ದು… ಅಂಬಗ ನಮ್ಮ ಮನೆಗಳಲ್ಲಿ ಪೂಜೆ ನಡವಗ ಎಲ್ಲೋರು ಭಕ್ತಿಲ್ಲಿ ಕಥಾ ಶ್ರವಣ ಮಾಡುವ ಹಾಂಗೆ ಆಯೆಕ್ಕಾರೆ ನಾವು ಎಂತ ಮಾಡುಲಕ್ಕು ಹೇಳಿ ಆರಿನ್ಗಾರೂ ಐಡಿಯಾ ಇದ್ದರೆ ಅದರ ಹಂಚಿಗೊಮ್ಬಲಕ್ಕು… ಹಾಂಗೆ ಮಾಡಿದ ಅನುಭವ ಇದ್ದರೆ ಹಂಚಿಗೊಮ್ಬಲಕ್ಕು… ಆ ಮೂಲಕ ನಮ್ಮ ಮನೆಗಳಲ್ಲಿ ಪೂಜೆ ಒಳ್ಳೆ ತರಲ್ಲಿ ನಡೆತ್ತ ಹಾಂಗೆ ನೋಡಿಗೊಮ್ಬಲಕ್ಕು… ಒಪ್ಪಣ್ಣ ತಾಣ ಓದುವವರ ಮನೇಲಿ ಮಾದರಿ ರೀತಿಲ್ಲಿ ಪೂಜೆ ನಡೆಕ್ಕು… ಇದು ಇಡೀ ಸಮಾಜಕ್ಕೆ ಮಾದರಿ ಆಯೆಕ್ಕು… ಈ ತರಲ್ಲಿ ಒಪ್ಪಣ್ಣ ತಾಣವ ನಾವು ಸಾರ್ಥಕ ಪಡಿಸುಲೇ ಅಕ್ಕು…
ನಮ್ಮವಕ್ಕಾದರೆ ಅವ°, ಹೆರಜಾತಿಯವ್ವಾದರೆ ಅದು..!
ಎಂತಕೆ ಹಾಂಗೆ?
ಮಂಗ್ಳೂರು ಮಾಣೀ,
ಚಿಂತನೆಯ ಪ್ರಶ್ನೆಯೇ ಕೇಳಿದ್ದೆ ನೀನು. ಸುಮಾರು ಜೆನಕ್ಕೆ ಈ ನಮುನೆ ಸಂಶಯಂಗೊ ಬಪ್ಪದಿದ್ದು.
ಆದರೆ, ಆ° ಹೇಳ್ಸು ಎಂತರ ಹೇಳಿತ್ತುಕಂಡ್ರೆ, ಅದು ನಮ್ಮ ಭಾಶೆಯ ಮಾತಿನ ಶೈಲಿಗಳಲ್ಲಿ ಒಂದು.
ಪ್ರತಿ ಭಾಶೆಲಿಯೂ ಅದರದ್ದೇ ಆದ ಶೈಲಿಗೊ ಇದ್ದಲ್ಲದೋ, ಹಾಂಗೇ ನಮ್ಮದರ್ಲಿಯೂ ಇದ್ದು.
ಉದಾಹರಣಗೆ,ಇಂಗ್ಳೀಶಿಲಿ:
ಒಬಾಮನ HE ಹೇಳ್ತವು,
ಒಬಾಮನ ನಾಯಿಯನ್ನೂ HE ಹೇಳ್ತವು.
ಒಬಾಮನ ದೇವರನ್ನೂ HE ಹೇಳ್ತವು.
ಅದು ಇಂಗ್ಳೀಶಿನ ಶೈಲಿ.
ಆಯಾ ಭಾಶೆಗೆ ಆಯಾ ಶೈಲಿಗಳೇ ಚೆಂದ.
ನಾವು ಹೇಳುತ್ತ ಭಾಶೆಯ ಶಬ್ದಂಗೊ ಹೇಂಗಿದ್ದರೆಂತ, ನಮ್ಮ ಮನಸ್ಸಿಲಿಪ್ಪ ಭಾವನೆ,ಮನುಷ್ಯತ್ವ ಸರೀ ಇದ್ದರಾತನ್ನೇ!
ಎಂತ ಹೇಳ್ತೆ? 🙂
ಸರಿಯೇ.. 🙂
ಮಲಯಾಳಲ್ಲಿ
ಅಪ್ಪ ಬ೦ದವು,
ನಾಯಿ ಬ೦ತು,
ಅಮ್ಮ ಬ೦ದವು
ಹೇಳುವ ಮೂರು ವಾಕ್ಯ೦ಗಳ ಹೇ೦ಗೆ ಹೇಳ್ತವು ಹೇಳಿ ಎನಗೆ ಒಬ್ಬ ವಿವರಿಸಿತ್ತಿದ್ದವು ಸುಮಾರು ಒ೦ದು ವರ್ಶ ಮೊದಲು.
ಅಚ್ಚನ್ ವನ್ನು,
ಪಟ್ಟಿ ವನ್ನು
ಅಮ್ಮೆ ವನ್ನು
ಹೇಳಿ, ಕೇಳುವಗ ನೆಗೆ ಬ೦ತು. ಆದರೂ ಕೆಲ ವಿಶಯ೦ಗ ಭಾಶೆಗಳಿ೦ದ ಭಾಶೆಗೊಕ್ಕೆ ಬದಲಪ್ಪದು ನೋಡಿದರೆ ಆಶ್ಚರ್ಯ ಆವ್ತು.
Sariyada uttara oppanna , enagu idee doubt ittu…
ಗುರಿಕ್ಕಾರ್ರು ಹೇಳಿದ್ದು ನೂರಕ್ಕೆ ನೂರು ಸರಿ! ಪ್ರತಿಯೊಂದು ಭಾಷಗೂ ಅದರದ್ದೇ ಆದ ವೈಶಿಷ್ಟ್ಯ ಇದ್ದು, ಮಾತಿನ ಶೈಲಿಯೂ ಇದ್ದು. ಹಿಂದಿ ಭಾಷೆಲಿ ನಪುಂಸಕ ಲಿಂಗ ಇಲ್ಲೆ; ನಿರ್ಜೀವ ವಸ್ತುಗಳನ್ನೂ ಪುಲ್ಲಿಂಗ, ಸ್ತ್ರೀಲಿಂಗ ಹೇಳಿ ವಿಂಗಡುಸುತ್ತವಿಲ್ಲೆಯೋ? (ಇದು ನವಗೆ ಅರ್ತ ಆವುತ್ತಿಲ್ಲೆ!) ಅದೇ ರೀತಿ ನಮ್ಮ ಭಾಷೆಲಿ ಸ್ತ್ರೀಲಿಂಗ ಇಲ್ಲೆ. ಇದರ ಅರ್ತ ಮಾಡ್ಯೊಂಡರೆ ಸಮಸ್ಯೆ ಇಲ್ಲೆ.
ಇಲ್ಲಿ ಜಾತಿಯ ಪ್ರಶ್ನೆ ಬೇಡ! ಹೆರ ಜಾತಿಯವು ಒಳ ಬತ್ತಾ ಇದ್ದವು, ಒಳಾಣವು ಹೆರ ಹೋವುತ್ತಾ ಇದ್ದವು! ಹೀಂಗೇ ಮುಂದುವರುದರೆ ಭಾಷೆ ಒಳಿಗೋ, ಜಾತಿ ಒಳಿಗೋ, ಹವೀಕರೊಳಿಗೋ? ಭಾಷೆ ಒಳಿಯೆಕ್ಕೋ, ಜಾತಿ ಒಳಿಯೆಕ್ಕೋ, ಹವೀಕರು ಒಳಿಯೆಕ್ಕೋ? ಎಂತಕೆ ಒಳಿಯೆಕು? ಸುರುವಾಗಲಿ ಚರ್ಚೆ; ವಾದ, ವಿವಾದ!!
ಹಾಂಗೆ ಆಯೇಕ್ಕಾರೆ ಅದರ ಬೇರೇ ಒಂದು ಪುಟಲ್ಲಿ ಸುರುಮಾಡ್ಳಕ್ಕು ಹೇಳಿ ಎನ್ನ ಅಭಿಪ್ರಾಯ. ನಾವಿಲ್ಲಿ ಒಂದು ವಿಷಯ ಪ್ರಸ್ತುತ ಪಡಿಸಿಪ್ಪಗ ಅದರ ಬಿಟ್ಟು ಇನ್ನೊಂದು ವಿಷಯವ ಇಲ್ಲಿಗೆ ಎಳಕ್ಕೊಂಡು ಬಂದು ಜಯಕ್ಕ ಹೇಳಿದಾಂಗೆ ಪ್ರಧಾನ ವಿಷಯವ ತಿರುಗುತ್ಸು ಬೇಡ ಹೇಳಿ ಎನ್ನ ಅಭಿಪ್ರಾಯ.
ಮಂಗಳೂರು ಮಾಣಿಗೆ ಬಂದ ಸಂಶಯ ಗುರಿಕ್ಕಾರರ ಉತ್ತರಂದ ಪರಿಹಾರ ಆದ ಕಾರಣ ಹೀಂಗಿದ್ದ ವಿಷಯಂಗಳಲ್ಲಿ ಹೆಚ್ಚು ಚರ್ಚಿಸಿಗೊಂಡು ಕೂಬ್ಬ ಬದಲು ನಮ್ಮ ಪ್ರಧಾನ ಉದ್ದೇಶದತ್ತ ಗಮನ ಕೊಡುದು ಒಳ್ಳೆಯದೋ ಹೇಳಿ ಅನ್ನಿಸುತ್ತು ಅಲ್ಲದ ಗುರಿಕ್ಕಾರಣ್ಣ?
ಗುರಿಕ್ಕಾರ್ರು ಹೇಳಿದ್ದು ೧೦೦% ಸತ್ಯ. ನಮ್ಮ ಭಾಷೆಲಿ ‘ಅದು’, ‘ಇದು’ ಈ ಬಗ್ಗೆ ನಮ್ಮ ಬೈಲಿಲಿ ಯಾವುದೋ ಒಂದು ಶುದ್ದಿಲ್ಲಿ ಬೈಂದು. ಓದಿದ ನೆಂಪಿದ್ದು. ಯಾವುದು ಹೇಳಿ ಪಕ್ಕಕ್ಕೆ ನೆಂಪು ಬತ್ತಿಲ್ಲೆ. ಅಪ್ಪನ ಅವ ಅವು ಹೇಳುತ್ತು . ಅಬ್ಬೆಯ ಅದು ನೀನು. ಇಲ್ಲಿ ಭಾವನೆಯೇ ಮುಖ್ಯ ಹೇಳಿ ಆ ಶುದ್ದಿಲಿ ಇತ್ತಿದ್ದು.
ಅದು ಇದು ಹೇಳಿರೆ ಆಗದ್ದವು ಅವ್ವು ಇವ್ವು ಹೇಳಿಯೇ ಓದಿಗೊಳ್ಳಲಿ. ನಾವೆಂತೂ ಅಡ್ಡಿ ಹೇಳ್ತಿಲ್ಲೆ.
🙂
ಒಪ್ಪ 🙂
ಎಸ್ ಎನ್ ಪಿ ಕಥೆ ದ್ವಿತೀಯ ಭಾಗ ಚೆಂದಕೆ ಬಂತು. ಕೂದು ಕೂದು ಕಾಲು ಜಿಂಜರುಸಿದವಕ್ಕೆಲ್ಲ ಎದ್ದು ನಿಂಬಲೆ ಹೇಳಿದ್ದ ಭಾವಯ್ಯ. ಅದಾ ಈಗ ಸರಿ ಆತು. ಇನ್ನಾಣ ಕತಗೆ ಕಾಯ್ತಾ ಇದ್ದೆ.
ಧನ್ಯವಾದ, ಭಾವ.
ಧನ್ಯವಾದ೦ಗೊ, ಇದರಿಂದ ಹೆಚ್ಚಿಗೆ ಹೇಳುಲೆ ನವಗೆ ಎಂತದೂ ಅರಡಿತ್ತಿಲ್ಲೆ .
ನಮ್ಮದು ಒಂದು ಒಪ್ಪ.
ಒಳ್ಳೇದಾಯಿದು, ಧನ್ಯವಾದ೦ಗೊ.