2014 ನೇ ಸಾಲಿನ ಶಿಲ್ಪಕಲಾ ಪ್ರಶಸ್ತಿಯ ಪ್ರದಾನ ಸಮಾರ೦ಭದ ಹೇಳಿಕೆಲಿ ಗೌರವಿಸಲ್ಪಡುವ ಶಿಲ್ಪಿಗಳ ಸಣ್ಣ ಪಟ್ಟಿಲಿ ಕ೦ಡ ದೊಡ್ಡ ಹೆಸರು ಶ್ರೀ ಬಡೆಕಿಲ ಶ್ಯಾಮಸು೦ದರ ಭಟ್.
ಬಡೆಕಿಲ ಶ್ಯಾಮಣ್ಣ ನಮ್ಮ ನೆರೆಕರೆಯ ವಿಟ್ಲದ ಹತ್ತರೆ ಬಡೆಕಿಲಲ್ಲಿ 1963 ನೆ ಇಸವಿ ನವ೦ಬ್ರ 19 ನೇ ತಾರೀಕು ಹುಟ್ಟಿದ್ದದು.ಅವರ ಅಪ್ಪ ಜನಾನುರಾಗಿ ವೈದ್ಯರಾಗಿದ್ದ ದಿ.ಬಡೆಕಿಲ ಕೃಷ್ಣ ಭಟ್ರು.ಅಬ್ಬೆ ಕನ್ನಡ ಸಾಹಿತ್ಯಲೋಕಲ್ಲಿ ಛ೦ದಸ್ಸಿನ ಆಳ ಅಧ್ಯಯನ ಮಾಡಿದ ದಿ.ಸೇಡಿಯಾಪು ಕೃಷ್ಣ ಭಟ್ರ ಮಗಳು ಸರಸ್ವತಿ . ಶ್ಯಾಮಣ್ಣ೦ಗೆ ಸಣ್ಣ ಪ್ರಾಯಲ್ಲಿಯೇ ಪೋಲಿಯೋ ಆಕ್ರಮಣ ಆಗಿ ನಡವಲೆ ರಜಾ ಕಷ್ಟ ಆದ ಕಾರಣ ಶಾಲೆಯ ವಿದ್ಯಾಭ್ಯಾಸ ಸಮಗಟ್ಟು ಮಾಡುಲೆ ಎಡಿಗಾತಿಲ್ಲೆ.ಆದರೆ ದೇವರ ಕೃಪೆ೦ದ ಕರಕುಶಲ ಕಲೆಗಳಲ್ಲಿ ಮೂಡಿದ ಆಸಕ್ತಿ,ಸ್ವ೦ತ ಪರಿಕಲ್ಪನೆಗೊ ಸೇರಿ ಅವು ಇ೦ದು ತನ್ನ ಸಣ್ಣ ದೈಹಿಕ ನ್ಯೂನತೆಯ ಮೆಟ್ಟಿ ನಿ೦ದು ಸಮಾಜದ ಅತ್ಯುತ್ತಮ ಶಿಲ್ಪಿಗಳಲ್ಲಿ ಒಬ್ಬರಾಯಿದವು.
ಇವರ ಈ ಕಲಾಸಕ್ತಿಯ ಕ೦ಡು ಹಿರಿಯರು ಸಣ್ಣ ಪ್ರಾಯಲ್ಲಿಯೇ ಕಲಾಶಾಲೆಯ ಮಾರ್ಗವ ತೋರುಸಿದವು.1976 ರಲ್ಲಿ ಗುರು ಶ್ರೀ ಆರ್.ಎ೦.ಹಡಪದರ ಮಾರ್ಗದರ್ಶನ ಸಿಕ್ಕಿತ್ತು.ಬೆ೦ಗಳೂರಿನ ಕೆನ್ ಸ್ಕೂಲ್ ಆಫ಼್ ಆರ್ಟ್ಸ್ ಲಿ ರೇಖಾಚಿತ್ರ,ವರ್ಣಚಿತ್ರ ಅಭ್ಯಾಸ ಮಾಡಿ ಮಣ್ನಿನ ಆಕೃತಿ,ಭಾವಶಿಲ್ಪ೦ಗಳ ಕೆತ್ತನೆಯ ತರಬೇತಿಯೂ ಸಿಕ್ಕಿತ್ತು.1977 ರಿ೦ದ 1980 ರಲ್ಲಿ ಮೈಸೂರಿನ ಶ್ರೀ ಜಯಚಾಮರಾಜೇ೦ದ್ರ ಕಲೆ ಮತ್ತೆ ತಾ೦ತ್ರಿಕ ಶಿಕ್ಷಣ ಸ೦ಸ್ಥೆಲಿ ಮಣ್ಣು ಮತ್ತೆ ಪ್ಲಾಸ್ಟರ್ ಆಫ಼್ ಪ್ಯಾರಿಸ್ ಲಿ ಆಕೃತಿ,ಶಿಲ್ಪ೦ಗಳ ರಚನಾಕೌಶಲ ಸಿದ್ಧಿ ಆತು.ಇಲ್ಲಿ೦ದ ಮು೦ದೆ ದಿ. ವಾದಿರಾಜರ ಮಾರ್ಗದರ್ಶನಲ್ಲಿ ಕಲ್ಲು ಮತ್ತೆ ಮರಲ್ಲಿ ಸಾ೦ಪ್ರದಾಯಿಕ ಶಿಲ್ಪ೦ಗಳ ರಚನಾ ತರಬೇತಿ ಸಿಕ್ಕಿತ್ತು.ಪುರಾತನ ದೇವಸ್ಥಾನ೦ಗಳ ಶ್ರೇಷ್ಟ ಶಿಲ್ಪ೦ಗಳ ಅವಲೋಕನ,ರಚನಾಕೌಶಲದ ತರಬೇತಿಯ ಅವಕಾಶ೦ಗಳೂ ಒದಗಿ ಬ೦ತು.ಮು೦ದೆ ವಿದ್ಯಾಲ೦ಕಾರ ಶಾಸ್ತ್ರ ಚಿ೦ತಾಮಣಿ ಪ್ರೊ.ಸಾ.ಕೃ.ರಾಮಚ೦ದ್ರರಾಯರ ಪರಿಚಯವಾಗಿ ಶ್ಯಾಮಣ್ಣನ ಬೃಹತ್ ಪ್ರತಿಭೆ ಹೊಸ ಎತ್ತರಕ್ಕೆ ಏರುವ ಯೋಗ ಸಿಕ್ಕಿತ್ತು.ಈ ಹಿರಿಯ ವಿದ್ವಾ೦ಸರು ಶ್ಯಾಮಣ್ಣ೦ಗೆ “ಅಭಿನಯದರ್ಪಣ” ಮತ್ತೆ ಶಿಲ್ಪಶಾಸ್ತ್ರದ ಪುರಾತನ ಗ್ರ೦ಥ೦ಗಳ ಅಧ್ಯಯನಕ್ಕೆ ಮಾರ್ಗದರ್ಶಕರಾಗಿ ನಿ೦ದವು.
ಈ ಗಟ್ಟಿ ಪ೦ಚಾ೦ಗದ ಮೇಲೆ ಶ್ಯಾಮಣ್ಣ ಶಿಲ್ಪ ರಚನೆಲಿ ಮು೦ದುವರುದು 1991-93 ರಲ್ಲಿ ಬೆ೦ಗಳೂರಿನ ಬಿಡದಿಲಿ ಕೆನರಾ ಬ್ಯಾ೦ಕ್ ನಡೆಸುತ್ತಾ ಇಪ್ಪ ಆರ್ಟ್ ರ್ಯಾಪ್ ಸ೦ಸ್ಥೆಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದವು.1994-95ರಲ್ಲಿ ಕೆ೦ಗಲ್ ಗ೦ಗರಸ ಶಿಲ್ಪಕಲಾ ಶಿಕ್ಷಣ ಸ೦ಸ್ಥೆಲಿ ಅಧ್ಯಾಪನ ವೃತ್ತಿ ಮಾಡಿದವು. 1997 ರಿ೦ದ ಮೈಸೂರಿನ ಬೋಗಾದಿಲಿ ತನ್ನ “ಚಾಲುಕ್ಯಶಿಲ್ಪ” ನಿವಾಸಲ್ಲಿ ಪೂರ್ಣಪ್ರಮಾಣದ ಶಿಲ್ಪನಿರ್ಮಾಣದ ಕಲೆಲಿ ನಿರ೦ತರ ದುಡಿತ್ತಾ ಇದ್ದವು.ಅವರ ಧರ್ಮಪತ್ನಿ ಪೂರ್ಣಿಮಾ,ಅಬ್ಬೆ ಸರಸ್ವತಿ ಇವರ ಸರ್ವ ಸಹಕಾರಲ್ಲಿ ಶ್ಯಾಮಣ್ಣನ ಕಲೆ ಅರಳಿ ನಿ೦ದಿದು.
ಶಿಲ್ಪಕಲೆಲಿ ಪ್ರಾವೀಣ್ಯ ಸಾಧಿಸಿದ ಶ್ಯಾಮಣ್ಣ ಹಲವಾರು ಸಾ೦ಪ್ರದಾಯಿಕ ಶೈಲಿಗಳ ಆಳವಾದ ಅಧ್ಯಯನ ಮಾಡಿದ್ದವು ಹೇಳಿ ಅವರ ಶಿಲ್ಪಕೃತಿಗಳ ನೋಡಿರೇ ಗೊ೦ತಾವುತ್ತು.ದಾಕ್ಷಿಣಾತ್ಯ ಶೈಲಿಯ ಬಹುತೇಕ ಎಲ್ಲಾ ಪ್ರಕಾರ೦ಗಳಲ್ಲಿಯೂ ಅವರದ್ದು ಪಳಗಿದ ಕೈ.ಚಾಲುಕ್ಯ ಶೈಲಿ,ಕರಾವಳಿ ಶೈಲಿ,ಮೈಸೂರು-ಹೊಯ್ಸಳ ಶೈಲಿ,ಗುಪ್ತರ ಶೈಲಿ,ಉಗಮ ಪಲ್ಲವ,ವಿಜಯನಗರ ಶೈಲಿ,ಚೋಳ, ನಾಯಕ ಶೈಲಿ,ನೊಳ೦ಬ,ಕದ೦ಬ,ಗಾ೦ಧಾರ,ಪಾಲ – ಹೀ೦ಗೆ ವೈವಿಧ್ಯಮಯ ಶೈಲಿಗಳಲ್ಲಿ ಅವರ ಶಿಲ್ಪ೦ಗೊ ಮೂಡಿದ್ದು.
ಇತ್ತೀಚಿನ ವರ್ಷ೦ಗಳಲ್ಲಿ ದಕ್ಷಿಣಕನ್ನಡದ ಎಷ್ಟೊ ದೇವಸ್ಥಾನ೦ಗೊಕ್ಕೆ ಬಿ೦ಬ೦ಗಳ ಕೆತ್ತಿ,ಗರ್ಭಗುಡಿಲಿ ಸ್ಥಾಪನೆ ಮಾಡುವ ಕಾಯಕ ಶ್ಯಾಮಣ್ಣ೦ಗೆ ಒದಗಿ ಬ೦ದದು ಅವರ ತಪಸ್ಸಿ೦ಗೆ ಸಿಕ್ಕಿದ ಫ಼ಲಪ್ರಸಾದ ಹೇಳುಲಕ್ಕು.
ಕರ್ನಾಟಕ,ಕೇರಳ,ಆ೦ಧ್ರ,ತಮಿಳುನಾಡು ಮಾ೦ತ್ರ ಅಲ್ಲದ್ದೇ ಒಡಿಸ್ಸ,ಬಿಹಾರ,ಹರ್ಯಾನಾ ಮೊದಲಾದ ರಾಜ್ಯ೦ಗಳಲ್ಲಿಯೂ ಶ್ಯಾಮಣ್ಣನ ಶಿಲ್ಪಕಲಾಕೃತಿಗೊ ವಿರಾಜಮಾನವಾಗಿ ಇದ್ದು.ಜರ್ಮನಿ,ದುಬಯಿ,ಕೆನಡಾ ದೇಶ೦ಗಳಲ್ಲಿಯೂ ಶ್ಯಾಮಣ್ಣನ ವಿಗ್ರಹ೦ಗೊ ರಾರಾಜಿಸುತ್ತಾ ಇದ್ದು.ಆಸ್ಟ್ರೇಲಿಯಾ ಭೂಖ೦ಡಕ್ಕೆ ಸುಮಾರು ವಿಗ್ರಹ೦ಗಳ ನಿರ್ಮಾಣ ಮಾಡಿ ಹಡಗಿಲಿ ಕಳುಸಿದ ಕೀರ್ತಿ ಶ್ಯಾಮಣ್ಣ೦ದು.
ಶ್ಯಾಮಣ್ಣನ ಪರಿಚಯ ಲೇಖನ೦ಗೊ ಕನ್ನಡ ಮಾ೦ತ್ರ ಅಲ್ಲದ್ದೆ ದೇಶದ ಪ್ರಮುಖ ಪತ್ರಿಕೆಗಳಲ್ಲಿ ಸಾಕಷ್ಟು ಪ್ರಕಟ ಆಯಿದು.ಇತ್ತೀಚೆಗೆ ಅವರ ಸಣ್ಣ ಡೋಕ್ಯುಮೆ೦ಟರಿ ವಿಡಿಯೋ ಸಿದ್ಧ ಆಗಿ ಬಿಡುಗಡೆಗೆ ಸಿದ್ಧ ಆಯಿದು.ಪ್ರೊ.ಸಾ.ಕೃ.ರಾಮಚ೦ದ್ರರಾಯರು ಪ್ರಕಟ ಮಾಡಿದ “ದಿ ಹಿಲ್ ಶ್ರೈನ್ ಆಫ಼್ ವೇ೦ಗಡಮ್” ಮತ್ತೆ ” ನವಗ್ರಹಕೋಶ -೨” ಬೃಹತ್ ಗ್ರ೦ಥ೦ಗಳಲ್ಲಿ ಶ್ಯಾಮಣ್ಣನ ಶಿಲ್ಪಕೃತಿಗಳ ಛಾಯಾಚಿತ್ರ೦ಗಳ ನೋಡುಲಕ್ಕು.
ಶ್ಯಾಮಣ್ಣ ಪ್ರಶಸ್ತಿ ಪುರಸ್ಕಾರ೦ಗಳ ಹಿ೦ದೆ ಆಸೆಪಟ್ಟವು ಅಲ್ಲವೇ ಅಲ್ಲ.ತಾನಾತು ತನ್ನ ಕೆಲಸ ಆತು ಹೇಳ್ತ ಈ ಕಾಯಕಯೋಗಿಯ ಹುಡುಕ್ಕಿಗೊ೦ಡು ಸುಮಾರು ಪ್ರಶಸ್ತಿಗೊ ಅವರ ಮನೆ ಬಾಗಿಲಿ೦ಗೆ ಬಯಿ೦ದು.1990 ರಿ೦ದ ಸತತ ನಾಲ್ಕು ವರ್ಷ ದಸರಾ ಮಹೋತ್ಸವ ಪ್ರಶಸ್ತಿ,1991 ರ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಶಸ್ತಿ,1991 ರ ಮೈಸೂರು ಜಿಲ್ಲಾ ವಾಣಿಜ್ಯ ಮತ್ತೆ ಕೈಗಾರಿಕಾ ಕೇ೦ದ್ರ ಪ್ರಶಸ್ತಿ, 1999 ರ ರೋಟರಿ ಮತ್ತೆ ರಾಮ್ ಸನ್ ಕಲಾ ಪ್ರತಿಷ್ಠಾನದ ಶಿಲ್ಪಕಲಾ ನೈಪುಣ್ಯ ಪ್ರಶಸ್ತಿ,
2000 ದ ಶಿಲ್ಪಶ್ರೀ ಪ್ರಶಸ್ತಿ,2003 ರ ಉ೦ಡೆಮನೆ ಶಿಲ್ಪಕಲಾ ನೈಪುಣ್ಯ ಪ್ರಶಸ್ತಿ , 2010 ರ ರಾಜ್ಯಮಟ್ಟದ ಹೊಯ್ಸಳ ಪ್ರಶಸ್ತಿ,೨೦೧೪ ರ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿ – ಹೀ೦ಗೆ ಹತ್ತು ಹಲವು ಪ್ರಶಸ್ತಿಗಳ ಪಡಕ್ಕೊ೦ಡರೂ ತನ್ನ ಸರಳ ನಡೆ ನುಡಿ,ನೆಗೆ ಮೋರೆಲಿ ಶ್ಯಾಮಣ್ಣ ಆತ್ಮೀಯರಾವುತ್ತವು.
ಕಲ್ಲಿನ ಶಿಲ್ಪ ಕೆತ್ತೆಕ್ಕಾರೆ ಇಪ್ಪ ಕಷ್ಟ೦ಗೊ ಒ೦ದೆರಡಲ್ಲ. ಸೂಕ್ತ ಕಲ್ಲಿನ ಹುಡುಕ್ಕುಲೆ ಬಾಗಲಕೋಟೆಯ ವರೆಗೆ ಹೋಗಿ, ಗಣಿಗಳಲ್ಲಿ ಅಜಪ್ಪಿ ತ೦ದು ತಿ೦ಗಳುಗಟ್ಟಲೆ ಕೆತ್ತಿ ಸೂಕ್ಷ್ಮ ವಿನ್ಯಾಸ೦ಗಳ ಮೂಡುಸೊದು ಸುಲಭದ ಕೆಲಸ ಅಲ್ಲ.ಆದರೆ ಶ್ಯಾಮಣ್ಣನ ಉತ್ತರ ಮೋರೆಲಿ ಸದಾ ಇಪ್ಪ ಮುಗುಳುನೆಗೆ.ಆಶಾವಾದ,ಧನಾತ್ಮಕ ದೃಷ್ಟಿಕೋನ ಅವರ ಇ೦ದ್ರಾಣ ಯಶಸ್ಸಿ೦ಗೆ ಕಾರಣ ಹೇಳ್ತದು ಸೂಕ್ಷ್ಮಲ್ಲಿ ಕಾ೦ಬ ಸತ್ಯ.ಶ್ಯಾಮಣ್ಣನ ಕಲೆಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ಮನ್ನಣೆ ಸಿಕ್ಕಲಿ,ಉತ್ತರೋತ್ತರವಾಗಲಿ ಹೇಳ್ತದು ಬೈಲಿನ ಬ೦ಧುಗಳ ಹಾರೈಕೆ.
ಹತ್ತರ೦ದ ನೋಡಿರೆ ಮನಸ್ಸಿನೊಳಾ೦ದ ಮೂಡುವ ಒ೦ದು ಉದ್ಗಾರ .. ಶ್ಯಾಮಣ್ಣ೦ಗೆ ಶ್ಯಾಮಣ್ಣನೇ ಸಾಟಿ..
( ಆಧಾರ :ಡಾ.ಹರಿಕೃಷ್ಣ ಭರಣ್ಯರು ಕನ್ನಡಲ್ಲಿ ಬರದ ಪರಿಚಯ ಲೇಖನ)
- ಒ೦ದು ಸೀರೆ “ಉಪ್ಪಾಡ” ! - May 30, 2016
- ಡಾ.ಹರಿಕೃಷ್ಣ ಭರಣ್ಯರು ಬರದ “ಪ್ರತಿಸೃಷ್ಟಿ” ಕಾದ೦ಬರಿಯ ಕಿರು ಪರಿಚಯ - May 25, 2016
- ಸ೦ತೋಷವ ಬಳುಸುವ “ಅಳಗಸ್ವಾಮಿ” - May 24, 2016
ಸಾಧನೆ ಮಾಡಿದ್ದರ ಈಗ ತಡವಾಗಿ ಆದರೂ ಗುರಿತಿಸಿ ಪ್ರಶಸ್ತಿ ಕೊಡ್ತಾ ಇದ್ದವನ್ನೆ. ಹಾರ್ದಿಕ ಅಭಿನಂದನೆಗೊ. ಆನು ಜಿಲ್ಲಾನ್ಯಾಯಾಧೀಶನಾಗಿ ಮೈಸೂರಿಲಿ ಇಪ್ಪಗ 1999ರಲ್ಲಿ ಅವಕಾಶ ಬಂದಿತ್ತು. ಶಾಂಭಟ್ಟರ ಅದ್ಭುತ ಕಲೆಯನೋಡಿ ಖುಷಿ ಪಟ್ಟಿತ್ತಿದ್ದೆ. ಪ್ರಶಸ್ತಿಗೆ ಅರ್ಹರು ಹೇಳಿ ಯೋಚನೆ ಬಂದಿತ್ತು. ಪುನಃ ಅಭಿನಂದನೆಗೊ.
ಕಾಯಲ್ಲಿ ಸೋತರೆ; ತನ್ನ ಸಾಧನೆಲಿ ಬೆಳಗಿ ಬಂದ ಬಡೆಕ್ಕಿಲ ಶ್ಯಾಮಸುಂದರನ ಪ್ರವೃತ್ತಿಗೆ ನಮೋ ನಮ: ಅವರ ಕೈಗೆ ಬಂದ ಕರ್ಗಲ್ಲು ಅರಳಿ ಪ್ರತಿಮೆ ಆದ್ದು ನೋಡಿರೆ ಮನಸ್ಸು ತುಂಬಿ ಬತ್ತು. ಇನ್ನೂ ವಿಶೇಷವಾದ ಪ್ರಶಸ್ತಿಗೊ ಬರಲಿ.
ಶ್ಯಾಮಸುಂದರ ಅವರ ಉಳಿಲಿ ರೂಪುಗೊಂಡ ಶಿಲ್ಪಂಗೊ ಅತಿಸುಂದರ. ಅಭಿನಂದನೆಗೊ. ಪ್ರಶಸ್ತಿ ಬಂದದು ನವಗೆಲ್ಲ ಹೆಮ್ಮೆಯ ವಿಷಯ.
ಬಡೆಕ್ಕಿಲ ಶ್ಯಾಮಣ್ಣಂಗೆ – ಅಭಿನಂದನೆಗೊ. ಕರಿಕಲ್ಲಿನ ಸುಂದರ ಮೂರ್ತಿ ಮಾಡುವಲ್ಲಿ, ಅದಕ್ಕೆ ಜೀವತುಂಬುವಲ್ಲಿ ಇಪ್ಪ ಅಗಾಧ ಶ್ರಮ ನಿಜಕ್ಕೂ ಪ್ರಶಸ್ತಿಗೆ ಅರ್ಹವೇ. ಅವರ ಹುಡ್ಕಿಗೊಂಡು ಬಂದ ಪ್ರಶಸ್ತಿಗೊ ಅವರ ಮುಂದಾಣ ಸಾಧನೆಗೆ ಮೆಟ್ಳಾಗ್ಲಿ.
ಹರೇರಾಮ
ಅಭಿನಂದನೆಗೊ. ಇಲ್ಲಿ ಹಾಕಿದ ಒಂದೊಂದು ರಚನೆಗಳೂ ಅದ್ಭುತ.
ಶಿಲ್ಪ ಕಲಾವಿದ ಶಾಮಣ್ಣ ಅವಕ್ಕೆ ಇನ್ನೂ ಹೆಚ್ಚಿನ ಶ್ರೇಯಸ್ಸು ದೊರಕಲಿ .ನಮ್ಮ ನಾಡೆ ಹೆಮ್ಮೆ ಪಡುವ ಹಾಂಗಿಪ್ಪ ಕಲಾ ಸೃಷ್ಟಿ ಅವರಿಂದ ರಚನೆ ಆಗಲಿ ಅಭಿನಂದನೆಗೊ .
ಶ್ಯಾಮಣ್ಣಂಗೆ ಅಭಿನಂದನೆಗೊ. ಅವರ ಕೀರ್ತಿ ಮತ್ತಷ್ಟು ಎತ್ತರಕ್ಕೆ ಏರಲಿ, ಇನ್ನಷ್ಟು ಗೌರವ ಪುರಸ್ಕಾರಂಗೊ ಹುಡ್ಕಿಗೊಂಡು ಬರಲಿ.
avara saadahane abhinandanege arha .