ಮಹರ್ಷಿ ಬಾದರಾಯಣ ವ್ಯಾಸ ಸಮ್ಮಾನ –
ಇದೊಂದು ರಾಷ್ಟ್ರಪ್ರಶಸ್ತಿ.ಸಂಸ್ಕೃತಕ್ಕಾಗಿ ವಿಶಿಷ್ಟ ಕೊಡುಗೆ/ಸೇವೆ/ಸಾಧನೆ ಮಾಡಿದ ಯುವ ಸಾಧಕರಿಂಗೆ (ಯಂಗ್ ಎಚೀವರ್ಸ್) ರಾಷ್ಟ್ರಪತಿ ಕೊಡುವ ಪುರಸ್ಕಾರ ಇದು. ಇದರ ಘೋಷಣೆ ಪ್ರತಿ ವರುಷ ಸ್ವಾತ೦ತ್ರ್ಯೋತ್ಸವದ ಶುಭದಿನ ಭಾರತ ಸರಕಾರ ಮಾಡ್ವದು. ಈ ವರುಷ ಈ ಪ್ರಶಸ್ತಿ ಘೋಷಣೆಯಾದ್ದದು ಹವ್ಯಕ ಪ್ರತಿಭೆಗೆ. ನಮ್ಮ ವೆಂಕಟೇಶ ಮೂರ್ತಿ ಅಣ್ಣಂಗೆ.
ಶ್ರೀಮಾನ್ ವೆ೦ಕಟೇಶ ಮೂರ್ತಿ “ಕೂಳಕ್ಕೋಡ್ಳು-ಈಶಾವಾಸ್ಯಮ್” ಶ್ರೀಮತಿ ಸುಲೋಚನಾ-ಶ್ರೀ ಶಂಕರನಾರಾಯಣ ಭಟ್ಟರ ದೊಡ್ಡ ಮಗ°,ಒಪ್ಪಣ್ಣನ ಬೈಲಿನ ಹೆಮ್ಮೆಯ ಡಾ.ಮಹೇಶಣ್ಣನ ಅಣ್ಣ. ಶುಭಲಕ್ಷ್ಮೀ ಹೇಳಿ ಹೆಂಡತಿಯ ಹೆಸರು. ಮಗ ಈಶಾನಂಗೆ ಐದು ವರ್ಷ ಆತು. ಈಗ ಸದ್ಯವೇ ಬಾಬೆ ಮಗಳೂ ಬಯಿಂದು.
ಸಂಸ್ಕೃತ ಮನೆ – ಮೂರ್ತಿ ಅಣ್ಣ ತಾನು ಮಾಂತ್ರ ಅಲ್ಲ, ಹೆಂಡತಿಯೂ, ಮಗನೂ ಸಂಸ್ಕೃತ ಮಾತಾಡುವ ಹಾಂಗೆ ಮಾಡಿದ್ದವು. ಮಗಂಗೆ ಸಂಸ್ಕೃತವೇ ಮಾತೃಭಾಷೆ. ಹಾಂಗಾಗಿ ಮನೆ – “ಸಂಸ್ಕೃತ ಗೃಹ”. ಸುಸಂಸ್ಕೃತ, ಸರಳ, ಸೌಜನ್ಯ ಪೂರ್ಣ ವ್ಯಕ್ತಿತ್ವ ಹೊಂದಿದ ಸಂಸ್ಕೃತ, ಸಂಸ್ಕೃತಿಲ್ಲಿ ಅಚಲ ನಿಷ್ಠೆ ಇಪ್ಪ ಪಾರಂಪರಿಕ ಮೌಲ್ಯವ ಒಳಗೊಂಡ ಆಧುನಿಕ ಜೀವನ.
ಈಗ ಡೆಲ್ಲಿಲ್ಲಿಪ್ಪ ರಾಷ್ಟ್ರಿಯ ಸಂಸ್ಕೃತ ಸಂಸ್ಥಾನ (ಮಾನಿತ ವಿಶ್ವವಿದ್ಯಾಲಯ) ದ ಮುಕ್ತಸ್ವಾಧ್ಯಾಯ ಪೀಠ (ಇನ್ಸ್ಟಿಟ್ಯೂಟ್ ಒಫ್ ಡಿಸ್ಟೇನ್ಸ್ ಎಜುಕೇಶನ್)ಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ (ಅಸಿಸ್ಟೆಂಟ್ ಪ್ರೊಫೆಸರ್) ಕಾರ್ಯನಿರತರಾಗಿದ್ದವು. ವಿಶ್ವವಿದ್ಯಾಲಯ ಆಯೋಜಿಸುವ ರಾಷ್ಟ್ರೀಯ ಕಾರ್ಯಕ್ರಮಂಗಳ, ಪ್ರಶಿಕ್ಷಣ ಕಾರ್ಯಕ್ರಮಂಗಳ ಸಂಯೋಜಕರಾಗಿ ಇವು ದೇಶಾದ್ಯಂತ ವಿದ್ವಜ್ಜನರಿಂಗೆ ಸುಪರಿಚಿತ. ಅಷ್ಟೇ ಅಲ್ಲ ವ್ಯವಹಾರ ಶೈಲಿಂದಾಗಿ ಆತ್ಮೀಯನೂ ಕೂಡ. ವಿಶ್ವವಿದ್ಯಾಲಯ ತಯಾರು ಮಾಡಿದ ಭಾಷಾಧ್ಯಯನದ ಡಿವಿಡಿ ಗಳ ನಿರ್ಮಾಣಲ್ಲಿ ಮೂರ್ತಿ ಅಣ್ಣನ ಪರಿಶ್ರಮ ಇದ್ದು. ಡಿಡಿ – ಜ್ಞಾನದರ್ಶನ್ ಡಿಡಿ ಭಾರತಿ ಚಾನೆಲಿಲ್ಲಿ ಬಪ್ಪ ‘ಭಾಷಾಮಂದಾಕಿನೀ’ ಕಾರ್ಯಕ್ರಮಲ್ಲಿಯೂ ಕೆಲವು ಸರ್ತಿ ಶಿಕ್ಷಕರಾಗಿ ಕಾಣ್ತವು.
ಹತ್ತನೇ ಕ್ಲಾಸಿನವರೆಗೆ – ನೀರ್ಚಾಲಿನ ಮಹಾಜನ ಶಾಲೆಲ್ಲಿ ಕಲ್ತದು. ತದನಂತರದ ಶಿಕ್ಷಣ – ತಿರುಪತಿಯ ರಾಷ್ಟ್ರಿಯ ಸಂಸ್ಕೃತ ವಿದ್ಯಾಪೀಠಲ್ಲಿ. ವಿಶೇಷ ಅಧ್ಯಯನ – ಅದ್ವೈತ ವೇದಾಂತ ಲ್ಲಿ.
ಸ್ಫೂರ್ತಿ – ಕಲಿವಗಳೇ ಕಲೆ, ಭಾಷಣ, ಕ್ರೀಡೆ, ನೇತೃತ್ವ, ಆಯೋಜಕತ್ವ ಗುಣಗಳ ಬಹುಮುಖ ಪ್ರತಿಭೆಂದ ವಿದ್ವಜ್ಜನರ ಮನಸ್ಸಿನ ಗೆದ್ದು ಕ್ರಿಯಾಶೀಲ (ಡೈನಮಿಕ್ ಸ್ಟೂಡೆಂಟ್) ವಾಗಿತ್ತಿದ್ದವಡ. ರಾಷ್ಟ್ರೀಯ ಸ್ಪರ್ಧೆಲ್ಲಿ ಹಲವು ಪುರಸ್ಕಾರಂಗ ಸಿಕ್ಕಿದ್ದಡ.
ಸಂಸ್ಕೃತ ಸಂಭಾಷಣೆಯ ರುಚಿಯ ಎಲ್ಲೋರಿಂಗುದೆ ಅಂಟುಸಿ ಜೂನಿಯರ್ ಗಕ್ಕೆ ತುಂಬ ಜೆನಕ್ಕೆ ಸ್ಫೂರ್ತಿ ನೀಡಿದ ವ್ಯಕ್ತಿತ್ವ. ಅವೆಲ್ಲ ಮೂರ್ತಿ ಅಣ್ಣನ ‘ಪ್ರಥಮ ಶಿಕ್ಷಕ’ ಹೇಳಿ ಆತ್ಮೀಯತೆಂದ ಕಾಣ್ತವಡ, ಅವು ಹೇಳ್ತವಡ – ಮೂರ್ತಿಯವರ ಪ್ರೇರಣೆಂದ ಎಂಗ ಇಷ್ಟು ಮೇಲೆ ಬಂದದು ಹೇಳಿ. ವಿಶ್ವವಿದ್ಯಾಲಯಲ್ಲಿ ಮಾಂತ್ರ ಅಲ್ಲದ್ದೆ ತಿರುಪತಿ ನಗರಲ್ಲಿಯೂ ಇವರೆಲ್ಲೋರ ಸೇರ್ಸಿಯೊಂಡು ಸಂಸ್ಕೃತ ಸಂಭಾಷಣಾ ಆಂದೋಲನವ ನಡೆಸಿತ್ತಿದ್ದವಡ. ನಿಸ್ವಾರ್ಥ ಪರಿಶ್ರಮಂದ ಮಾಂತ್ರ ಹೀಂಗಿಪ್ಪದೆಲ್ಲ ಮಾಡ್ಳೆಡಿವದು.
ಹಾಂಗಾಗಿ ಪ್ರೇರಣಾದಾಯಕ ವ್ಯಕ್ತಿತ್ವ ಇವರದ್ದು ಹೇಳ್ವದು ಇವರ ವೈಶಿಷ್ಟ್ಯ.
ಕಲಾವಿದ –ನಾಟಕ, ಏಕಪಾತ್ರಾಭಿನಯದ ಅಭಿರುಚಿ ತುಂಬಾ ಇದ್ದು. ಕೃಷ್ಣ, ದುರ್ಯೋಧನ, ಅಶ್ವತ್ಥಾಮನ, ಕಂಸ ಇತ್ಯಾದಿ ಪಾತ್ರಲ್ಲಿ ತನ್ನ ಅಭಿನಯ ಕೌಶಲವ ತೋರಿಸಿ ಕಲಾರಸಿಕರ, ವಿದ್ವಜ್ಜನರ ಮೆಚ್ಚುಗೆ ಗಳಿಸಿದ ಕೀರ್ತಿ ಸಿಕ್ಕಿದ್ದು ಇವಕ್ಕೆ.
ಯಕ್ಷಗಾನದ ನಾಟ್ಯ ಕಲ್ತದು ಊರಿಲ್ಲಿ ನೀರ್ಚಾಲು ಶಾಲೆಲ್ಲಿ. ಅಂಬಗ ಕಲ್ತ ಯಕ್ಷಗಾನಕ್ಕೆ ಸಂಸ್ಕೃತ ನಾಟಕವ ಅಳವಡಿಸಿ ವಿಶ್ವಸಮ್ಮೇಳನಲ್ಲಿ ಪ್ರದರ್ಶಿಸಿದ ಸಾಮರ್ಥ್ಯವ ಮೆಚ್ಚೆಕಾದ್ದದು. ಭೋಪಾಲ, ಉಜ್ಜಯಿನಿ, ದೆಹಲಿಲ್ಲಿ ಆದ ನಾಟ್ಯಮಹೋತ್ಸವಲ್ಲಿ ಇಂತಹ ಪ್ರದರ್ಶನ ಆಯಿದು. ಸಂಸ್ಕೃತ ಗೊಂತಿಪ್ಪ ಕಲಾಭಿಮಾನಿ ಜನತೆ ದೇಶಾದ್ಯಂತ ಇದ್ದವು. ಅವಕ್ಕೆ ಯಕ್ಷಗಾನದ ರುಚಿ ತೋರುಸಲೆ ಸಂಸ್ಕೃತ ಉತ್ತಮ ಮಾಧ್ಯಮ ಹೇಳುವದರ ತೋರುಸಿ ಕೊಟ್ಟಿದವು.
೨೦೦೯ ರಲ್ಲಿ ವಿಶ್ವಸಂಸ್ಕೃತ ಸಮ್ಮೇಳನ ಜಪಾನಿಲ್ಲಿ ಆದ್ದದು. ಅದರಲ್ಲಿ “ಕೌರವೌರವಮ್ ”
ಹೇಳುವ ಏಕವ್ಯಕ್ತಿ-ಯಕ್ಷಗಾನ ಪ್ರದರ್ಶನ ಮಾಡಿತ್ತಿದ್ದವು. ಇದು ಗದಾಯುದ್ಧದ ದುರ್ಯೋಧನನ ರೋಷ-ವಿಲಾಪದ ಮನೋಜ್ಞ ಅಭಿನಯ.
ಬಾಲ್ಯಲ್ಲಿ ಸಿಕ್ಕಿದ ಸಂಸ್ಕಾರ ಯಾವತ್ತಿಂಗುದೆ ಉಪಯೋಗಕ್ಕೆ ಬತ್ತು ಹೇಳ್ವದಕ್ಕೆ ಇದೊಂದು ದೃಷ್ಟಾಂತ ಅಲ್ಲದ?
ಕಲ್ತದರ ಜೀವನಲ್ಲಿ ಅಳವಡಿಸುವದು, ಅಳವಡಿಸಲೆ ಬೇಕಾಗಿ ಕಲಿವದು ಈ ಗುಣ ಇವರಲ್ಲಿ ಕಾಣ್ತು. ಆಯುರ್ವೇದ, ವಾಸ್ತು ಪುಸ್ತಕಂಗಳ ಮೂಲತತ್ತ್ವಂಗಳನ್ನೂ ಸಕಾರಣವಾಗಿ ತಿಳ್ಕೊಂಡು ಜೀವನಲ್ಲಿ ಅದರ ಉಪಯೋಗುಸುತ್ತವು. ಸಂಸ್ಕೃತವ ಹೇಂಗೆ ನಮ್ಮ ಜೀವನಕ್ಕೆ ಉಪಯೂಗುಸಲಕ್ಕು ಹೇಳ್ವದಕ್ಕೆ ಇದೊಂದು ಉದಾಹರಣೆ.
ಬಾಲ್ಯ ಎಲ್ಲ ನಮ್ಮೆಲ್ಲರ ಹಾಂಗೆಯೇ. ಆದರೆ ಜೀವನಕ್ಕೆ ಒಂದು ಸಾರ್ಥಕ ಲಕ್ಷ್ಯ ಸಿಕ್ಕಿದ್ದು, ಉತ್ತಮ ವೃತ್ತಿ ಸಿಕ್ಕಿದ್ದು ಸನ್ಮಾರ್ಗವ ದೊರಕಿಸಿಕೊಂಡಿದವು ಹೇಳುವದು ಇವರ ವೈಶಿಷ್ಟ್ಯ,
ಈಗ ಪ್ರಶಸ್ತಿ ಘೋಷಣೆ ಆವ್ತಾ ಇದ್ದ ಹಾಂಗೆ ಸಂಸ್ಕೃತ ವಲಯಲ್ಲಿಪ್ಪ ಬಹಳಷ್ಟು ಜನಂಗೊಕ್ಕೆ ತುಂಬಾ ಸಂತೋಷ ಆಯಿದಡ.
ಪ್ರಶಸ್ತಿ ಅರ್ಹ ವ್ಯಕ್ತಿಗೆ ಸೇರಿರೆ ಅದರ ಗೌರವ ಹೆಚ್ಚುತ್ತಡ, ಅಲ್ಲದಾ!
- ಅವನೀಶ- SSLC 99.68% - May 20, 2023
- ಕಣ್ಣಾಮುಚ್ಚೇ ಕಾಡಾಗೂಡೇ - August 3, 2021
- ಮರಳಿ ಗೂಡಿಗೆ - May 31, 2021
ಅಭಿನಂದನೆಗೊ…
ಹರೇ ರಾಮ,ವೆ೦ಕಟೇಶ ಮೂರ್ತಿಗೆ ಮನದಾಳದ ಅಭಿನ೦ದನಗೊ.ಮತ್ತಷ್ಟು ಉಜ್ಜ್ವಲ ಭವಿಷ್ಯಕ್ಕಾಗಿ ಹಾರೈಸುತ್ತಾ “ शुभाशिषः ”
ಹರೇರಾಮ ,ವೆಂಕಟೇಶಮೂರ್ತಿಗೆ ಹಾರ್ದಿಕ ಅಭಿನಂದನಗೊ
ಅಭಿನಂದನೆಗೊ… ಇನ್ನೂ ಹತ್ತು ಹಲವು ಪ್ರಶಸ್ತಿಗೊ ಹರಿದು ಬರಲಿ… 🙂
ಮಹರ್ಷಿ ಬಾದರಾಯಣ ವ್ಯಾಸ ಸಮ್ಮಾನವೆಂಬ ರಾಷ್ಟ್ರಪತಿ ಪುರಸ್ಕಾರಕ್ಕೆ ಎನ್ನ ಹೆಸರು ಘೋಷಣೆಯಾದ ಸುದ್ದಿ ಹಂಚಿ ಬಹುಜನರ ಆಶೀರ್ವಾದ ಸಿಗುವ ಹಾಂಗೆ ಮಾಡಿದ ಶರ್ಮಪ್ಪಚ್ಚಿಗೂ, ಸುದ್ದಿ ತಿಳಿದು ಆಶೀರ್ವಾದ ಮಾಡಿದ ಮತ್ತು ಶುಭ ಹಾರೈಸಿದ/ಅಭಿನಂದಿಸಿದ ಎನ್ನ ಎಲ್ಲ ಹಿತೈಷಿಗಕ್ಕೂ ತುಂಬಾ ಧನ್ಯವಾದಂಗೋ. जयतु संस्कृतम् , जयतु भारतम् ।
ಅಭಿನಂದನೆಗೋ
ಮೂರ್ತಿಗೆ ಅಭಿನಂದನೆಗೊ.ಶುಭಾಶೀರ್ವಾದಂಗೊ.
ನೀರ್ಚಾಲು ಶಾಲೆಲಿ ಕಲಿವಗ ಬೇರೆ ಬೇರೆ ಕಡೆ ಕರಕೊಂಡು ಹೊಗಿ ಚಿತ್ರರಚನಾ-ಸ್ಪರ್ಧೆಲಿ ಭಾಗವಹಿಸಲೆ ಪ್ರೊತ್ಸಾಹಿಸಿದ ನಿಂಗಳ, 5ರಿಂದ 10ರವರೆಗೆ ಸಂಸ್ಕೃತ ಕಲಿಸಿ ಪ್ರೊತ್ಸಹಿಸಿದ ಸಂಸ್ಕೃತಾಧ್ಯಾಪಕರ ಮ್ನತ್ತು ಎಲ್ಲಾ ಇತರ ಅಧ್ಯಾಪಕರ ನೆನಪಾವುತ್ತು . ಧನ್ಯವಾದ. ” ಜೈ ಮ. ಸಂ. ಕಾಲೇಜು ಹೈಸ್ಕೂಲು, ನೀರ್ಚಾಲು “
ಬಹಳ ಸಂತೋಷ.ಅಭಿನಂದನೆಗೊ.
ಅಭಿನಂದನಾನಿ ಶ್ರೀ ಮಾನ್ ಉತ್ತರೋತ್ತರ ಅಭಿವೃದ್ಧಿರಸ್ತು ಇತಿ ಆಶಿಶಾಮಿ
ಭೂರಿಶಃ ಧನ್ಯವಾದಾಃ
ಮೂರ್ತಿ ಅಣ್ಣನ ದೆಹಲಿಲಿ ನಾಟ್ಯ ಮಹೊತ್ಸವಲ್ಲಿ ನಾವು ಪ್ರದರ್ಶನ ಕಂಡಿದು..ಅಧ್ಬುತ ಪ್ರತಿಭೆ..ಶುಭಾಶಯ..ಅಭಿನಂದನೆಗ..
ಧನ್ಯವಾದ
ವರ್ತಮಾನ ಕೇಟು ಸಂತೋಷ ಆತಿದ. ಹೆಮ್ಮೆಯೂ ಸಾನ. ಹರೇ ರಾಮ. ಅಭಿನಂದನೆಗೊ
जायतात् संस्कृतवाणी मधुरा , भवतात् विश्वजनादरणीया ।
ಅಭಿನಂದನೆಗೊ. ಇನ್ನಷ್ಟು ಯಶಸ್ಸು ಸಿಕ್ಕಲಿ ಹೇಳಿ ಹಾರೈಸುತ್ತೆ.
ಅಪರೂಪದ ವ್ಯಕ್ತಿತ್ಯ
ಮೂರ್ತಿಗೆ ಅಭಿನ೦ದನೆ . ನಿಜಕ್ಕೂ ಅರ್ಹ ವ್ಯಕ್ತಿಯ ಗುರುತಿಸಿ ಕೊಟ್ಟ ಸನ್ಮಾನ. ಮೂರ್ತಿಯ ಗದಾಯುದ್ಧದ ಕೌರವನ ವಿಡಿಯೋ ನೋಡಿತ್ತಿದ್ದೆ,ಅದ್ಭುತ ಭಾವ ಪ್ರದರ್ಶನ,ವಾಕ್ಸರಣಿ. ಮೂರ್ತಿಗೆ ಮೂರ್ತಿಯೇ ಸಾಟಿ.
ಇನ್ನೂ ಹೆಚ್ಚಿನ ಯಶಸ್ಸು ಸಿಕ್ಕಲಿ ಹೇಳಿ ಹಾರೈಕೆಗೊ.
अनुगृहीतोस्मि ।
ಮೂರ್ತಿಗೆ ಹೃತ್ಪೂರ್ವಕ ಅಭಿನಂದನೆಗೊ. ನಾವೆಲ್ಲಾ ಹೆಮ್ಮೆ ಪಡೆಕ್ಕಾದ ವಿಚಾರ ಇದು.
ಸ್ವಾರ್ಥರಹಿತವಾಗಿ ಶ್ರದ್ಧೆಂದ ಸಾಧನೆ ಮಾಡಿದವರ ಸರಕಾರವೇ ಖುದ್ದಾಗಿ ಗುರುತಿಸಿ ಪುರಸ್ಕರಿಸಿದರೆ ಆ ಪುರಸ್ಕಾರಕ್ಕೆ ಬೆಲೆ ಹೆಚ್ಚಾವುತ್ತು.
ನಮ್ಮ ಮನೆ ಮಾಣಿಯ ಸಾಧನೆಗೆ ಇನ್ನೊಂದು ಗರಿಮೂಡಿದ್ದು ತುಂಬಾತುಂಬ ಸಂತೋಷದ ಸಂಗತಿ.
ಒಳ್ಲೆ ಸುದ್ದಿಯ ಹಂಚಿಗೊಂಡದಕ್ಕೆ ಶರ್ಮಪ್ಪಚ್ಚಿ, ನಿಂಗೊಗೂ ಧನ್ಯವಾದಂಗೊ.
ಧನ್ಯೋಸ್ಮಿ
ಅಭಿನಂದನೆಗೊ ಮೂರ್ತಿ.
ಅಭಿನಂದನೆಗೋ…
ಧನ್ಯವಾದಂಗೋ