- ಬಲೀಂದ್ರಪೂಜೆ – (ಸರಳ ಸಂಕ್ಷಿಪ್ತ ವಿಧಾನ) - October 30, 2020
- ಗೋಪೂಜೆ – (ಸರಳ ಸಂಕ್ಷಿಪ್ತ ವಿಧಾನ) - October 30, 2020
- ತೊಳಶಿ ಪೂಜೆ – ಸರಳ ಸಂಕ್ಷಿಪ್ತ ವಿಧಾನ - October 30, 2020
1
ಅಡಿಗೆ ಸತ್ಯಣ್ಣಂಗೆ ಮನ್ನೆ ತಲೆಂಗಳ ಮದುವೆ ಅನುಪ್ಪತ್ಯ.
ಮಾಟ್ರಕ್ಕೋ, ಮಕ್ಕೋ, ನೆಂಟ್ರುಗೊ, ಹೆಮ್ಮಕ್ಕೊ, ಆಪ್ತರುಗೊ ಹೇದು ಮುದ್ದುಮಂದಿರ ಒಂದರಿ ಫುಲ್
ಅಡಿಗೆ ಸತ್ಯಣ್ಣ ಮತ್ತು ಬಳಗ ಮುನ್ನಾಣ ದಿನಂದಲೇ ಬಿಡಾರ ಹೂಡಿದ್ದವು.
ಅತ್ತಾಳ ಲೆಕ್ಕಲ್ಲಿ ಹಲವು ಜೆನ ಹಲವು ನಮೂನೆಲಿ ಕೊರೆತ್ತವು. ಕೆಲವು ಜೆನ ಹೋಲಿಲ್ಲಿ ಕೊರದರೆ, ಕೆಲವು ಜೆನ ಹೋಲ ಕರೇಲಿ ಕೊರದವು. ಕೆಲವು ಜೆನ ಅಡಿಗೆ ಕೊಟ್ಟಗೆಲಿ ನಿಂದೊಂಡು ಕೊರದವು. ಪುಣ್ಯಕ್ಕೆ ಕರವಲೆ ಹೇದು ಅಲ್ಲಿ ಇಲ್ಲೆ. ಹೆರಂದ ತಪ್ಪದು.
ಹಾಂಗೆ ಹೀಂಗೆ ಕೆಲಸ ಆಯಿಕ್ಕೊಂಡಿಪ್ಪಗ ಬನಾರಿ ಮಾವ ಒಂದರಿ ಅಲ್ಲೆ ಅಡಿಗೆ ಕೊಟ್ಟಗ್ಗೆ ಹೋದವು ಸತ್ಯಣ್ಣನ ಕಂಡು ಮಾತಾಡಿಗೊಂಡಿತ್ತವು.
ಎಡಕ್ಕಿಲಿ ಅದೆಂತದೋ ಶುದ್ದಿ ಬಪ್ಪಗ ಬನಾರಿ ಮಾವ ಹೇದವು – ಸತ್ಯಣ್ಣೋ.. ಈಗೀಗ ಪ್ರಾಯದೋರ ನೋಡಿಗೊಂಬವೇ ಇಲ್ಲೆನ್ನೆ. ವೃದ್ಧಾಶ್ರಮಂಗೊ ಹೆಚ್ಚಾವ್ತಾ ಇದ್ದು. ಪ್ರಾಯದೋರ ಪ್ರತ್ಯೇಕ ಮನೇಲಿ ಬಿಟ್ಟಿಕ್ಕಿ ಮಕ್ಕೊ ದೂರ ಪೇಟೆಲಿ ಹೋಗಿ ಕೂರ್ತವು..
ಅಡಿಗೆ ಸತ್ಯಣ್ಣ ಹೇದ° – “ಅದಕ್ಕೆ ಭಾವೋ, ಪ್ರಾಯದೋರಿಪ್ಪ ಮನಗೆ ರೇಶನ್ ಅಕ್ಕಿ ಉಚಿತ, ಕರೆಂಟು ಬಿಲ್ಲು ಉಚಿತ, ಸಾಲದ ಬಡ್ಡಿ ಮನ್ನಾ, ವೃದ್ಧರೊಟ್ಟಿಂಗೆ ಹೋಪವಕ್ಕೆ ಟಿಕೆಟಿಂಗೆ ಕಡಿತ ಹೀಂಗೆಂತಾರು ಸವಲತ್ತುಗೊ, ಸೌಲಭ್ಯಂಗೊ, ಸಬ್ಸಿಡಿಗೊ ಇದ್ದು ಹೇದು ಮಾಡೆಕು. ಅಂಬಗ ನೋಡಿ ಮತ್ತೆ” 😀
2
ತಲೆಂಗಳ ಭಾವನ ಮದುವೆ ಕಳಾತು. ಇನ್ನು ಇರುಳಿಂಗೆ ಚತುರ್ಥಿ.
ಮಧ್ಯಾಹ್ನ ಉಂಡಿಕ್ಕಿ ಅಂಬೇರ್ಪಿನವೂ ಸಾವಕಾಶದೋರು ಹೋದಮತ್ತೆ ಬಾಕಿಪ್ಪೋರಿಂಗೆ ರಜಾ ಹೊತ್ತು ಸಾವಕಾಶ.
ಕೆಲವು ಜೆನ ಕಾಲುದ್ದಮಾಡಿ , ಚಕ್ಕನಾಟಿ ಕೂದೊಂಡು, ಕೆಲವು ಜೆನ ತಲಗೆ ಕೈ ಮಡುಸಿ ಕುತ್ತಂಗೋಲಿನಾಂಗೆ ಸ್ಟೇಂಡು ಕೊಟ್ಟೊಂಡು ಒಂದೊಂದಿಕ್ಕೆ ಸ್ಥಾಪನೆ ಆಗಿ ಪಟ್ಟಾಂಗಲಿ ತೊಡಗಿದವು.
ಸತ್ಯಣ್ಣ ಇನ್ನೆದ್ದು ಇನ್ನಾಣ ಕೆಲಸಕ್ಕೆ ತೊಡಗೆಕು ಹೇದು ಎಲೆತಟ್ಟಗೆ ಕೈ ಹಾಕ್ಯೊಂಡಿಪ್ಪಗ ಒಂದು ವಿಷಯ ಪ್ರಸ್ತಾಪ ಆತು – ಎಲ್ಲೋರದ್ದೂ ಪರಿಷತ್ತು, ವೇದಿಕೆ, ಸಮಾವೇಶ ಇತ್ಯಾದಿಗೊ ಇದ್ದು..
ಅಡಿಗೆಯೋರದ್ದೂ ಈ ವೊರಿಶ ಆಗಿ ಹೋಕೋದು ಗ್ರೇಶಿಯೊಂಡಿತ್ತವರಲ್ಲಿ ಅಡಿಗೆ ಸತ್ಯಣ್ಣನೂ ಒಬ್ಬ°
ಅಕೇರಿಗೆ .. ಆಯೇಕ್ಕಾಗಿತ್ತು.. ಆಯ್ದಿಲ್ಲೆ ., ಏನೋ ಕಾರ್ಯಕ್ಕಾರು ಕಾರಣ ಇಕ್ಕು ಹೇದು ನಂಬಿದವರಲ್ಲಿ ಅಡಿಗೆ ಸತ್ಯಣ್ಣನೂ ಒಬ್ಬ°
ಅಡಿಗೆಯೋರ ಪರಿಷತ್ತು ಆದರೆ ಎಂತ ಎಂತ ನಿರ್ಣಯಂಗೊ ಆಗಿಕ್ಕುಗು ಹೇದು ಒಂದರಿ ಅಂತೇ ಕೂದೊಂಡಿದ್ದಲ್ಲಿ ಚರ್ಚೆ ಆತು ಉಂಡಿಕ್ಕಿ ಚಾಯೆ ಬಪ್ಪನ್ನಾರ
ಸತ್ಯಣ್ಣ ಹೇದ°, ನಿಂಗೊ ಎಂತ ಬೇಕಾರು ಸೂಚನೆ ಕೊಟ್ಟುಗೊಳ್ಳಿ, ಆದರೆ ಇದಾ –
“ಇನ್ನು ಮುಂದೆ ಭೋಜನಕಾಲೇಯೂ, ಭೋಜನಾಂತೇಯೂ ನಮಃ ಪಾಚಕಮುಖ್ಯಾಯ ಅಡಿಗೆ ಸತ್ಯಣ್ಣಾಯ, ಅಡಿಗೆ ಮಾಲಿಂಗಣ್ಣಾಯ ಹೇದು ಬದಲಾವಣೆ ತಪ್ಪಲೇ ಬೇಕು” 😀
ರಂಗಣ್ಣ ಹೇದ° – ಅಪ್ಪಪ್ಪು … ಅಂಬಗಷ್ಟೇ ಅಡಿಗೆಯೋಕ್ಕೂ ಭೋಜನಕಾಲೇ… ಹೇಳ್ಳೆ ಉಮೇದು ಬಕ್ಕು 😀
**
3
ಇದು ಈಗಲ್ಲ ., ಕೆಲವು ವೊರಿಶ ಮದಲೆ ನಡದ್ದದು
ಅಂಬಗ ಸತ್ಯಣ್ಣಂಗೆ ಬೈಕೂ ಇಲ್ಲೆ, ಕಾರು ಇಲ್ಲೆ. ಬಸ್ಸು ಹೋಗದ್ದಲ್ಲಿ ಹೋಪಲೆ ತುಳುಕಾರೇ ಗೆತಿ
ಪಕಳಕುಂಜ ಅನುಪ್ಪತ್ಯ ಕಳ್ಸಿಕ್ಕಿ ಒಟ್ಟಿಂಗೆ ಹೆರಟೋರೊಟ್ಟಿಂಗೆ ಮಾತಾಡ್ಯೊಂಡು ನಡಕ್ಕೊಂಡು ಬಂದಪ್ಪಗ ನಲ್ಕ ತಿರ್ಗಾಸು ಬಸ್ಸು ನಿಂಬ ಜಾಗ್ಗೆ ಎತ್ತಿತ್ತು.
ಬಾಯಿಲಿ ತುಂಬ ತುಂಬ್ಸಿಗೊಂಡು ಏನೂ ಮಾತಾಡದ್ದೆ ಒಟ್ಟಿಂಗೇ ಇತ್ತಿದ್ದ ನೇರೋಳು ಮುದ್ದಣ್ಣ° ಒಂದರಿ ಬರೆ ಕರೇಂಗೆ ಪುರ್ರ್ರ್ರ್ರ್…ನೆ ತುಪ್ಪಿ ಬಾಯಿಲಿ ಇಪ್ಪದರ ಕಾಲಿಮಾಡಿಕ್ಕಿ ಸತ್ಯಣ್ಣನತ್ರೆ ಕೇಟ° – ಸತ್ಯಣ್ಣ!, ಇನ್ನು ಏವ ಹೊಡೆಂಗೆ?
ಸತ್ಯಣ್ಣ ಹೇದ° – ಏವ ಹೊಡೆಂಗೂ ಅಕ್ಕು. ಬಲತ್ತಿಂಗೆ ಹೋದರೆ ಸೊರ್ಗ, ಎಡತ್ತಿಂಗೆ ಹೋದರೆ ಪುನರ್ಜನ್ಮ 😀
**
4
ಈ ‘ಪುನರ್ಜನ್ಮ’ ಹೇದು ಅಡಿಗೆ ಸತ್ಯಣ್ಣ ಹೇದ್ದು ಎಂತ್ಸರ ಹೇದು ಮುದ್ದಣ್ಣಂಗೆ ಗೊಂತಾತು.
ಆದರೆ ಅವನೊಟ್ಟಿಂಗೆ ಇತ್ತಿದ್ದ ಕಾಡಮನೆ ಬಂಗಾರಣ್ಣಂಗೆ ಎಂತ್ಸರ ಅದು ಹೇದು ಗೊಂತಾಯ್ದಿಲ್ಲೆ
ಪುನರ್ಜನ್ಮ ಹೇಳ್ಸು ಸಾರಡ್ಕ ಗೇಟಿನ ಬುಡಲ್ಲಿ ಇಪ್ಪ ಸುಬ್ಬಣ್ಣನ ಹೋಟ್ಳು ಅದಾ
ಒಂದೇ ನಮೂನೆಲಿ ಬಹುವರ್ಶಂದಲೇ ನಡಕ್ಕೊಂಡು ಬತ್ತಾ ಇರ್ಸು ಅದು. ಅಲ್ಲಿಯಾಣ ಇಡ್ಳಿ, ಚಟ್ನಿ ಒಂದರಿ ತಿಂದವ° ಇನ್ನೊಂದರಿ ಏವಾಗ ತಿಂಬೋ ಹೇದು ಗ್ರೇಶದ್ದೆ ಬಿಡವು
ಹಾಂಗೇ.. ಅದು ಅಲ್ಲಿಯಾಣ ಆಸುಪಾಸಿಂಗೆ ಅದೊಂದು ಪ್ರಾಮುಖ್ಯ ಕಟ್ಟೆಪೂಜೆಯ ಜಾಗೆಯೂ ಅಪ್ಪು. ಪೇಪರು, ಠಪ್ಪಾಲು ಎಲ್ಲ ಬಂದು ಬೀಳುಸ್ಸು ಅಲ್ಲಿಗೇ. ಹೊತ್ತೋಪಗ ಹೊತ್ತು ಹೋಪಲೆ ಬಂದು ಕೂಬವೂ ಇದ್ದವು ಅಲ್ಲಿಗೆ
ಏವುದೋ ಗ್ರಾಚಾರ ದೋಷಂದ ಆ ಪ್ರೀತಿಯ ಸುಬ್ಬಣ್ಣನ ಹೋಟ್ಲು ಅಗ್ನಿಗೆ ಆಹುತಿ ಆಗಿಹೋತು, ಸುಬ್ಬಣ್ಣಂಗೆ ಎಂತ ಮಾಡಿಕ್ಕಲೂ ಎಡಿಯದ್ದ ಸ್ಥಿತಿ. 🙁
ಮತ್ತೆ ಅಲ್ಲೆ ನೆರೆಕರೆ ಮಳಿ ಅಪ್ಪಚ್ಚಿಯಕ್ಕಳ ಸಕಾಯಂದಲಾಗಿ ಆ ಹೋಟ್ಳ ವಾಪಾಸು ಕಟ್ಟಿ ಅದಕ್ಕೆ ಜೀವ ಕೊಟ್ಟವು.
ಅದರ ನೆಂಪಿಂಗೆ ಸುಬ್ಬಣ್ಣ ಅದಕ್ಕೆ ಪುನರ್ಜನ್ಮ ಹೇದೇ ನಾಮಕರಣ ಮಾಡಿದ್ದು ಹೇದು ಕತೆ ಹೇದುವು ಮಳಿ ಅಜ್ಜಿ ಮನ್ನೆಯುದೆ
ಪುನರ್ಜನ್ಮ ಹೇಳ್ತ ಪಾಯಿಂಟಿಗೆ ಮೇಗೆ ಹೇಳಿದ ವಿಷಯಂಗೊ ಅಲ್ಲದ್ದೆ ಹಲವು ಮುಖ್ಯತ್ವಂಗಳೂ ಇದ್ದು.
ಒಂದನೆ.. ಅದು ಗಡಿ ಗೇಟು ಇಪ್ಪ ಜಾಗೆ, ಮತ್ತೆ ಅಲ್ಲಿ ಖಾಯಮ್ಮಿನ ಗಿರಾಕಿಗೊ, ಮತ್ತೆ ಅಲ್ಲಿ ರುಚಿಶುಚಿಯಾದ ಇಡ್ಳಿ ಚಟ್ನಿ ಚಾಯೆ, ಧರ್ಮಕ್ಕೆ ಪೇಪರು ಓದಲೆ ಕೆಲವು ಜೆನಕ್ಕೆ, ಅಂಚೆ ವಿಲೆವಾರಿ, ಪೇಪರು ವಿಲೆವಾರಿ, ಹಾಂಗೇ.. ಎದುರೆ ಕುತ್ತಕಂಡೆ ಕಾಂಬ ಮಾರ್ಗಲ್ಲೆ ನಡಕ್ಕೊಂಡು ಬಂದವಕ್ಕೆ ಅಲ್ಲಿಗೆ ಎತ್ತುವಾಗ ಮದಾಲು ಸಿಕ್ಕುವದು ಪುನರ್ಜನ್ಮ
ಹಾಂಗೇ ಕುಂಬ್ಳೆ ಅಜ್ಜನಲ್ಲಿಗೆ ಏವಾತ್ತಾರು ಹೋಯ್ಕೊಂಡು ಬಪ್ಪ ದೊಡ್ಡಳಿಯನೂ ಹೇಳ್ತ ಕ್ರಮ ಇದ್ದು, ಪುನರ್ಜನ್ಮ ಸಿಕ್ಕಿರೆ ಮತ್ತೆ ಮಾರ್ಗವೂ ನೈಸ್ ನೈಸು 😀
ಅಡಿಗೆ ಸತ್ಯಣ್ಣಂಗೂ ಆ ನೈಸು ಮಾರ್ಗ ಕಂಡ್ರೆ ಗಾಡಿ ಅಟ್ಟುಸಲೆ ಕೊಶಿಯೇ 😀
**
5
ಮನ್ನೆ ನಮ್ಮ ಆಯುಧ ಪೂಜೆ ದಿನಾವೇ ಪುತ್ತೂರ್ಲಿ ಪೊರ್ಬುಗೊಕ್ಕೂ ಆಯುಧ ಪೂಜೆ ಇತ್ತಡ
ಮರದಿನ ಪೇಪರ್ಲಿ ಬಂದ್ಸರ ಪೆರ್ಲದ ಕುಂಞಣ್ಣ ತೋರ್ಸಿಯಪ್ಪಳೇ ಅಡಿಗೆ ಸತ್ಯಣ್ಣಂಗೆ ಗೊಂತಾದ್ಸು.
ಪೇತ್ರು ಆಶೀರ್ವಚನ ಎಲ್ಲ ಮಾಡಿದ್ದಡ ವಾಹನಂಗೊಕ್ಕೆ.
“ಆಗಲಿಯಪ್ಪ ., ಅವರದ್ದು ಅವಕ್ಕೆ” – ಸತ್ಯಣ್ಣ ಉವಾಚ
ಮತ್ತೆ ಸತ್ಯಣ್ಣ ಹೇದ°- “ಪುಣ್ಯ ನಾವಂದು ಆ ಹೊಡೆಲಿ ಹೋಯ್ದಿಲ್ಲೆ. ಇಲ್ಲದ್ರೆ ನಮ್ಮ ಲಟ್ಟಣಿಗೆ ಇಡಿ ಬಟ್ರೇ ಹೇಳ್ತಿತ್ತವೋ ಏನೋ ಆ ಹೊತ್ತಿಂಗೆ ಅಲ್ಲೆ ಹೋಗಿದ್ರೆ ! 😀
ರಂಗಣ್ಣನ ಬಾಯಿ ಸುಮ್ಮನೆ ಕೂರುಗೋ?! – ಮಾವ°, ಅವ್ವು ಲಿಂಬುಳಿ ಅಲ್ಲೇ ಹಿಂಡಿ ಸರ್ಬತ್ತು ಮಾಡಿಕ್ಕೋ ?
ಸತ್ಯಣ್ಣ ಹಾಂಗೆ ಹೇಳಿದ್ದರ ಎಲ್ಲ ಕೇಳಿಗೊಂಡು ಕೂಬ ಜೆನ ಅಲ್ಲ, ರಂಗಣ್ಣಂಗೆ ಸಮಾಧಾನ ಹೇದ° – “ ರಂಗೋ!, ಅವು ಲಿಂಬುಳಿ ಸರ್ಬತ್ತು ಮಾಡ್ತವೋ ಅಲ್ಲ ಬಣ್ಣ ಬಣ್ಣದ ಸರಬತ್ತು ನೀಡುತ್ತವೋ ನವಗೆ ಬೇಡ. ನಾವಲ್ಲಿಗೆ ಹೋಪಲ್ಲಿಲ್ಲೆನ್ನೆ ಹೇಂಗಾರು. ಮತ್ತೆಂತಾಕೆ ಈ ಎಲ್ಲ ಚೋದ್ಯ?! , ನಾವು ಪೆರ್ಲಕ್ಕೆ ಹೋಪೋ ಈಗ, ಕಿಣಿ ಅಂಗುಡಿಲಿ ಕಬ್ಬಿನಾಲು ಕುಡಿವೋ 😀
**
6
ಅಡಿಗೆ ಸತ್ಯಣ್ಣ° ಪುರುಸೊತ್ತಿಪ್ಪಗೆಲ್ಲ ಬೈಲ ಇಣ್ಕಿ ನೋಡ್ಳೆ ಇದ್ದು. ಶುದ್ದಿಗಳ ಓದಿಗೊಂಬಲೆ ಇದ್ದು
ಓ ಮನ್ನೆ ಹಾಂಗೇ ಎಲ್ಯೂ ಅನುಪ್ಪತ್ಯ ಇಲ್ಲದ್ದ ಎಡೆ ದಿನ. ಉದಿಯಪ್ಪಂದಲೇ ಕೂದೊಂಡು ಅಣ್ಣ° ಬರದ ಕೆಲವು ಶುದ್ದಿಗಳ ಓದಿ ಮುಗಿಶಿಯಾತು
ರಮ್ಯ, ಅಮ್ಮ ಮಾಡಿದ ಎಡೆ ಹೊತ್ತಾಣ ಚಾಯೆ ತೆಕ್ಕೊಂಡು ಸತ್ಯಣ್ಣನ ಎದುರೆ ನಿಂದಪ್ಪಗ ಸತ್ಯಣ್ಣ° ಗಡ್ಡಕ್ಕೆ ಕೈ ಮಡಿಕ್ಕೊಂಡು ಮೇಗೆ ನೋಡ್ತಾ ಇತ್ತಿದ್ದ°
“ಎಂತರಪ್ಪ° ಹೀಂಗೊಂದು ಏಚನೆ ಮಾಡ್ತಾ ಇಪ್ಪದು?”- ಹೇದು ಕೇಟತ್ತು
ಸತ್ಯಣ್ಣ ಹೇದ° – ಅಲ್ಲ ಮಗಳೋ!, ಈ ಒಬ್ಬ ಅಣ್ಣ° ಎಲ್ಲೆ ಹೋವ್ತರೂ ಬೈಕಿನ ಹಿಂದೆ ಕೂರ್ಸಡ!, ಜೀಪಿಲ್ಲಿಯೂ ಹಿಂದೆ ಕೂರ್ಸಡ!, ಕಾರಿಲ್ಲಿ ಹೋವ್ಸರೂ ಹಿಂದಾಣ ಹೊಡೆಲಿಯೇ ಸೀಟು ಆಯೇಕ್ಕಡ!, ಬಸ್ಸಿಲ್ಲಿಯೂ ಹಿಂದಾಣ ಸೀಟಡ!. ಅಲ್ಲ… ಇವಂಗೆ ಎಂತ ವಾಹನಲ್ಲಿ ಹೋಪಗ ಕಾರ್ತ ಅಭ್ಯಾಸ ಇದ್ದೋದು ?! 😀
**
7
ಅಡಿಗೆ ಸತ್ಯಣ್ಣಂಗೆ ಕಾರ್ಮಾರಿಲ್ಲಿ ಅನುಪ್ಪತ್ಯ
ಸತ್ಯಣ್ಣನ ಬಾಯಿಗೆ ಕೋಲಾಕಲೆ ಬಂದು ಅಡಿಗೆ ಕೊಟ್ಟಗೆಲಿ ಕೂದ ಮುಳಿಗೆದ್ದೆ ಬಾವ ಎಡೇಲಿ ಹೇದ-
ಸತ್ಯಣ್ಣೋ.. ಎನಗೆ ಕಾಯಿ ಹೋಳಿಗೆ ಮಾಡೇಕು ಹೇದು ಇದ್ದು. ಆದರೆ ಎಂಗಳಲ್ಲಿ ತೆಂಗಿನಕಾಯಿ ಇಲ್ಲೆನ್ನೆ
ಸತ್ಯಣ್ಣನೂ ಒಂದು ಉಪಾಯ ಹೇದ° – “ಬಾವೋ.., ಕಾಯಿ ಹೋಳಿಗೆ ಮಾಡ್ಳೆ ನಿಂಗಳಲ್ಲಿ ತೆಂಗಿನಕಾಯಿಯೋ, ತೆಂಗಿನಕಾಯಿ ಮರವೋ ಇದ್ದೇ ಆಯೇಕು ಹೇದು ಇಲ್ಲೆ. ಹೇಂಗಾರು ಕಾಯಿ ಅಷ್ಟು ಎಲ್ಲಿಂದಾರುಲ್ಲಿ ತರ್ಸಿ ಮಡಿಗಿರೆ ಆತು. ಆನು ಬಂದು ಮಾಡಿಕೊಡುವೆ”
ಅದೇ ಸತ್ಯಣ್ಣ°, ಈಗ ಕಾಯಿಗೆ ಅಲ್ಪ ರೇಟು ಇದ್ದಲ್ಲದ. ಕಾಯಿ ಹಾಂಗೆ ಆರೂ ಕೊಡವು –ಬಾವನ ಹೇಳಿಕೆ.
ಸತ್ಯಣ್ಣ ಹೇದ° – “ಇದಾ… ನೀನು ಇದರ ಎರಡು ತಿಂಗಳು ಮದಲೇ ಹೇಳ್ಳಾವ್ತಿಲ್ಯ ಅಂಬಗ ಎನ್ನತ್ರೆ!. ಹೇಂಗೂ ಕಳದ ತಿಂಗಳು ಮಹಾಲಯ ಮಾಸ ಆಗಿತ್ತಿದ್ದು. ಮೆಲ್ಲಂಗೆ ನೀನು ಬಟ್ಟಮಾವನ ಚೆಂಙಾಯಿ ಮಾಡಿಕ್ಕೆಕ್ಕಾತು. ಬಟ್ಟಮಾವ° ಹೇಂಗೂ ಈಗ ಪರಾಧೀನಕ್ಕೆ ಕೂರ್ತವಿಲ್ಲೆ. ಈ ಒಂದು ತಿಂಗಳು ಬಟ್ಟಮಾವನೊಟ್ಟಿಂಗೆ ಹೋಗಿತ್ತಿದ್ರೆ ಮಹಾಲಯ ಕಳುದಕೂಡ್ಳೆ ಕಾಯಿಹೋಳಿಗೆ ಮಾಡಿಕ್ಕಲಾವ್ತಿತ್ತು. ಎಂತಕೂ ಇನ್ನೀಗ ನಿಂಗೊಗೆ ಬಪ್ಪ ವರುಶಕ್ಕೇ ಆತಷ್ಟೇ” 😀
**
8
ನಮ್ಮ ಕಳೆಯತ್ತೋಡಿ ಮಾವನಲ್ಲಿ ಅಂದೆಂತ್ಸೋ ಸಣ್ಣ ಅನುಪ್ಪತ್ಯ ಇರುಳಿಂಗೆ
ಮದಲಿಂದಲೇ ಅಲ್ಲಿಗೆ ಬಟ್ಟಮಾವನೇ ಹೋವ್ಸು , ಸತ್ಯಣ್ಣನೇ ಬತ್ಸು
ಬಟ್ಟಮಾವನ ನಂತ್ರ ಬಟ್ಟಬಾವನೇ ಹೋವ್ಸು, ಸತ್ಯಣ್ಣನ ನಂತ್ರ ಹೇದು ಹೇಳ್ಳೆ ಈಗಂಗೆ ಆಯ್ದಿಲ್ಲೆ ಬಿಡಿ.
ಅಂದೆಂತ್ಸೋ ಬಟ್ಟಬಾವಂಗೆ ಹೆರಡ್ಳಪ್ಪಗ ಅಶೌಚ
ಅಂಬೇರ್ಪಿಂಗೆ ಇನ್ನಾರ ಹುಡುಕ್ಕುಸ್ಸು ಹೇದು ಅಲ್ಲೇ ಹತ್ರೆ ಇಪ್ಪ ಕಟ್ಟು ಕಟ್ಳೆ ಸುಧಾರ್ಸುವ ನೆರೆಕರೆ ವಿಟ್ವಣ್ಣನ ಕಳ್ಸಿದ್ದದು (ವಿಟ್ವಣ್ಣ ಹೇದರೆ ‘ವಿಷ್ಣು ಅಣ್ಣ’ ನ ಅಪ್ರಭ್ರಂಶ ಉಚ್ಚಾರಡ್ಡ)
ವಿಟ್ವಣ್ಣ ನೂ ಹೊತ್ತಂಗೆ ಸರಿ ಎತ್ತಿಗೊಂಡ°
ಬಂದೋನಿಂಗೆ ಆಸರಿಂಗೆ ಬೇಕೋ ಕೇಟವು ಮನೆಯೆಜಮಾಂತಿ ಅತ್ತೆ
ಬೇಡ, ಮನೆಂದ ಕುಡುದಿಕ್ಕಿಯೇ ಬಂದ್ಸು ಹೇದ ವಿಟ್ವಣ್ಣ°
ಸರಿ ಅಂಬಗ ಇನ್ನು ಸುರುಮಾಡುವೋ ಹೇದವು ಮನೆಯೆಜಮಾನ ಕಳೆಯತ್ತೋಡಿ ಮಾವ
“ಅಕ್ಕು ಸುರುಮಾಡುವೋ” ಹೇದು ಉತ್ತರ ಆತು ಬಂದ ಬಟ್ಟಣ್ಣ° ವಿಟ್ವಣ್ಣಂದು
“ಬಟ್ಟಣ್ಣಂಗೆ ಮೀಯೇಕೋ?” – ಕಳೆಯತ್ತೋಡಿ ಮಾವ°
“ಬೇಡ°, ಮನೇಲಿ ಮಿಂದಿಕ್ಕಿಯೇ ಬಂದ್ಸು , ಕೈ ಕಾಲು ಮೋರೆ ತೊಳಕ್ಕಂಡ್ರೆ ಆತೆನಗೆ , ನಿಂಗೊ ಮಿಂದಿಕ್ಕಿ ಬನ್ನಿ” – ವಿಟ್ವಣ್ಣ°
“ಬಟ್ಟಣ್ಣಂಗೆ ಅರ್ಘ್ಯೆಜೆಪಕ್ಕೆ ಮಡುಗೆಕೋ?” ಮನೆಯೆಜಮಾನನ ಕರ್ತವ್ಯ ಕೇಟದಾತು
“ಬೇಡ, ಮನೇಲಿ ಮಾಡಿಕ್ಕಿಯೇ ಬಂದ್ಸು” – ಹೇದವು ಬಟ್ಟಣ್ಣ
ಅಡಿಗೆ ಕೊಟ್ಟಗೆಲಿ ಇತ್ತಿದ್ದ ಸತ್ಯಣ್ಣನ ಕೆಮಿಗೆ ಬೀಳ್ತಾ ಇದ್ದು ಇಲ್ಲಿ ಮಾತಾಡುಸ್ಸು
ಪೂಜೆ ಆತು, ಬಾಳೆಲೆ ಹಾಕಿ ಆತು. ಸತ್ಯಣ್ಣ° ಮೆಲ್ಲಂಗೆ ವಿಟ್ವಣ್ಣನತ್ರೆ ಕೇಟಾ° – ವಿಟ್ವಣ್ಣ ಮನೆಲಿ ಉಂಡಿಕ್ಕಿಯೇ ಬಂದ್ಸೋ ?! 😀
**
10
ಗಟ್ಟದ ಕೆಳಾಣ ಭಾವ ಒಬ್ಬಂಗೆ ಗಟ್ಟದ ಮೇಗಂದ ಮದುವೆಯಾದ ಗಟ್ಟದಕೆಳಾಣ ಭಾವ ಒಬ್ಬನ ಮೂಲಕ ಗಟ್ಟದ ಮೇಗಾಣ ಕೂಸೇ ನಿಘಂಟಾತು
ಗಟ್ಟಂದಮೇಗಂದ ಮದುವೆಯಾದ ಗಟ್ಟದ ಕೆಳಾಣ ಭಾವಂಗೆ ಗಟ್ಟದ ಮೇಗಾಣ ಕೂಸು ನಿಘಂಟು ಆಗಿ ಎಂಟು ತಿಂಗಳೇ ಆಯ್ದಡ ಮದುವೆ ಅಪ್ಪಲೆ
ಗಟ್ಟಂದ ಮದುವೆಯಾದ ಬಾವನ ಹಾಂಗೆ ಅಪ್ಪಲಾಗ ತನ್ನ ಮದುವೆ ಹೇದು ಗಟ್ಟಂದ ಮದುವೆ ಅಪ್ಪಲಿಪ್ಪ ಗಟ್ಟದ ಕೆಳಾಣ ಭಾವ ಗಟ್ಟದ ಕೆಳಾಣ ಇನ್ನೊಬ್ಬ ಹತ್ರಾಣ ಚೆಂಙಾಯಿ ಭಾವನ ಕರ್ಕಂಡು ಗಟ್ಟಕ್ಕೆ ಹೋದನಡ ಕೂಸಿನ ಮನೆಲಿ ಮದುವೆ ಇನ್ನು ದಣಿಯ ಉದ್ದ ಎಳವಲಾಗ ಹೇದು ಮದಲೇ ಮಾತಾಡಿ ಒಪ್ಪುಸಲೆ
ಗಟ್ಟದ ಕೆಳಾಣ ಮದಿಮ್ಮಾಯ ಭಾವ, ಗಟ್ಟದ ಕೆಳಾಣ ಆಚ ಭಾವನ ಕೂಡ್ಯೊಂಡು ಗಟ್ಟದ ಮನಗೆ ಎತ್ತುವಾಗ ಗಟ್ಟದ ಕೂಸು ಕೆಲಸಕ್ಕೆ ಹೋಗಿತ್ತಿದ್ದ ಕಾರಣ ಕೂಸಿನ ಕಾಂಬಲೆ ಎಡಿಗಾಗದ್ರೂ ಕೂಸಿನ ಮನೆಯವರತ್ರೆ ಮಾತಾಡಿಕ್ಕಿ ಹೆರಡುವಾಗ ಗಟ್ಟದ ಮೇಗಾಣ ಚಕ್ಕುಲಿ ಮಾಡಿ ಕೊಟ್ಟು ಕಳ್ಸಿತ್ತಿದ್ದವಡ ಕೂಸಿನ ಅಬ್ಬೆ.
ಅಂತೂ ಓ ಮನ್ನೆ ಮದುವೆ ಕಳಾತು, ಸಟ್ಟುಮುಡಿ ಉಂಡಾತು, ದಿಬ್ಬಾಣ ಬಿರುದತ್ತು.
ಓ ಇಂತ ದಿನ ಸಮ್ಮಾನಕ್ಕೆ ಬನ್ನಿ ಹೇದಿಕ್ಕಿ ಗಟ್ಟದ ಮೇಗಾಣವು ಗಟ್ಟ ಹತ್ತಿದವು. ಮದುಮಕ್ಕಳತ್ರೆ ಅತ್ತೆಗಳು ಹೇಳ್ವಾಗ ಗಟ್ಟದ ಕೆಳಾಣ ಈ ಭಾವನೂ ಅಲ್ಲೇ ಇತ್ತಿದ್ದರಿಂದ ಇವನತ್ರೆಯೂ ಹೇದವು ‘ನಿಂಗಳೂ ಬನ್ನಿ’ ಹೇದು.
ಗಟ್ಟಕ್ಕೆ ಹೋವ್ಸು ಹೇದರೆ ಅಂದಿಗಂದೇ ಹೋಗಿ ಎತ್ತುತ್ತ ಪಂಚಾತಿಗೆ ಅಲ್ಲನ್ನೇದು ಮದುಮಕ್ಕೊ ಮುನ್ನಾಣ ದಿನ ಉದಿಯಪ್ಪಗಳೆ ಹೋಗಿತ್ತವು.
ಗಟ್ಟದ ಕೆಳಾಣ ಭಾವ° ಗಟ್ಟದ ಮೇಗೆ ಸಮ್ಮಾನಕ್ಕೆ ಹೋಪಗ ಗಟ್ಟದ ಕೆಳಾಣ ಈ ಬಾವನನ್ನೂ ಈ ಸರ್ತಿಯೂ ಕರ್ಕಂಡು ಹೋಕು ಹೇದು ಗ್ರೇಶಿಯೊಂಡೇ ಇತ್ತಿದ್ದ.
ಹೊತ್ತೋಪಗ ಗಟ್ಟದ ಕೆಳಾಣ ಭಾವನ ಶುದ್ದಿ ಬಂತಡ ಆನು ಗಟ್ಟಕ್ಕೆ ಎತ್ತಿ ಆತು.
‘ಕತೆ ಹೀಂಗೀಂಗೆ ಆಯ್ದು ಸತ್ಯಣ್ಣ ಈ ಗಟ್ಟದ ಕೆಳಾಣ ಭಾವನ ನಂಬಿದ್ದರ್ಲಿ., ಎನ್ನತ್ರೆ ಒಂದು ಮಾತ “ಬತ್ತೆಯೋ…” ಹೇಳಿಯೂ ಕೇಳಿದ್ದನಿಲ್ಲೆ!’ ಹೇದು ಅಡಿಗೆ ಸತ್ಯಣ್ಣನತ್ರೆ ಹೇದಪ್ಪಗ ಅಡಿಗೆ ಸತ್ಯಣ್ಣ° ಹೇದ° – ‘ಅಲ್ಲದ್ರೂ .. ನೀ ಎಲ್ಲಿಗಪ್ಪ ಇನ್ನು ಶಿವಪೂಜೆಲಿ ಕರಡಿ ಬಿಟ್ಟಾಂಗೆ!’ 😀
**
11
ಅಡಿಗೆ ಸತ್ಯಣ್ಣನೂ, ಅಷ್ಟೆಂಟು ರಂಗಣ್ಣನೂ ಓ.. ಅಲ್ಲಿ ಪುತ್ತೂರ ಹತ್ರೆ ಒಂದು ಮದುವೆ ಅಡಿಗ್ಗೆ ದಿನ ಮುಂದಾಗಿಯೇ ಎತ್ತಿಗೊಂಡಿದವು.
ಮದುವೆಮನೆಲಿ ಮದುವೆ ಕಾರ್ಯಕ್ರಮದ ಒಟ್ಟಿಂಗೆ ಸಂಗೀತ ಕಛೇರಿ ಮಡಗಿತ್ತಿದ್ದವು.
ಒಂದು ಚೆಂದದ ಕೂಚಕ್ಕ ಲಾಯ್ಕ ಸಂಗೀತ ಹಾಡಿಗೊಂಡಿತ್ತಿದ್ದು – “ಸೀತಾ.. ಕಲ್ಯಾಣ ವೈಭೋಗಮೇ…ರಾ..ಮಾ.. ಕಲ್ಯಾಣಾ.. ವೈಭೋಗಮೇ..”
ಅಡಿಗೆ ಮಾಡ್ತ ಎಡೇಲಿ ಸತ್ಯಣ್ಣನ ಹೊಗೆ ಸಂಗೀತದ ಷ್ಟೇಜಿಂಗೆ ಹೋಪದೂ, ಅಲ್ಲಿಂದ ಸಂಗೀತದ ಗಾಳಿ ಅಡಿಗೆ ಕೊಟ್ಟಗೆಗೆ ಬಪ್ಪದೂ ನೆಡಕ್ಕೊಂಡಿತ್ತು!!
ಸತ್ಯಣ್ಣ ಸಂಗೀತ ರಾಗಕ್ಕೆ ತಲೆ ಆಡ್ಸಿಗೊಂಡು ಅಡಿಗೆ ಬೇಗ ಬೇಗ ಮುಗಿಶುವ ತೆರಕ್ಕಿಲ್ಲಿತ್ತಿದ್ದ°
ಸತ್ಯಣ್ಣ° ಕೊಶೀಲಿ ಕೇಟುಗೊಂಡು ಇಪ್ಪಗ ರಂಗಣ್ಣ° ಬಾಯಿ ತೆಗದ- ಅಪ್ಪೋ ಮಾವ, ಈ ಕೂಸು ಸೀತಾ ಕಲ್ಯಾಣ ವೈಭೋಗದ್ದು, ರಾಮ ಕಲ್ಯಾಣ ವೈಭೋಗದ್ದು ಹೇಳ್ತು. ಅಂಬಗ ಇದು ಎರಡು ಬೇರೆ ಬೇರೆ ಕಲ್ಯಾಣಂಗಳೋ?! ಮನ್ನೆ ನಾವು ಆಟಲ್ಲಿ ನೋಡಿದ ಹಾಂಗೆ? ಯಾವ ಕಲ್ಯಾಣ ಹೆಚ್ಚು ಲಾಯ್ಕಾದ್ದು ಹೇದು ಹೇಳುಸ್ಸು ಹೇಂಗೆ?! 🙁
ಕೊಶೀಲಿ ಕೇಳಿಗೊಂಡಿತ್ತಿದ್ದ ಸತ್ಯಣ್ಣಂಗೆ ಒಂದರಿಯಂಗೆ ಶ್ರುತಿ ತಪ್ಪಿದ ಹಾಂಗೆ ಆತದಾ 🙁
ಅಂದರೂ ಸಮಧಾನಲ್ಲೇ ಸತ್ಯಣ್ಣ° ರಂಗಣ್ಣಂಗೆ ಹೇದ° – “ರಂಗೋ, ನಾವು ಇಂದು ಇಲ್ಲಿಗೆ ಬಂದದು ಮನೆಯೋರ ಕಲ್ಯಾಣಕ್ಕೆ. ನಮ್ಮ ಅಡಿಗೆ ಅವಕ್ಕೆ ಒಳ್ಳೆದು ಮಾಡುಗು. ನಮ್ಮ ಕೆಲಸ ಶ್ರದ್ಧೇಲಿ ಮಾಡುವೊ°. ಅವು ಮನಸಾ ಕೊಟ್ಟದರ ತೆಕ್ಕೊಂಡ್ರೆ ನಮ್ಮ ಕಲ್ಯಾಣ ಅಕ್ಕು. ನೀನು ಕೇಟ ಪ್ರಶ್ನೆಗೆ ನಾವು ವಾಪಾಸು ಹೋಪಗ ಉತ್ತರ ಕೊಡ್ತೆ ಮಿನಿಯಾ.” 😀
ಹೋಪಲಪ್ಪಗ ರಂಗಣ್ಣನ ಹುಡ್ಕಿರೆ ಅವ° ಎಲ್ಲಿದ್ದ°?! 😀
**
*** 😀 😀 😀 ***
ಬೋಲೋ ಅಡಿಗೆ ಸತ್ಯಣ್ಣ ಕೀ…. ಜೈ
ಸತ್ಯಣ್ಣನ ಮೋದಿಯ ಸರಕಾರಲ್ಲಿ ಆಹಾರ ಮಂತ್ರಿ ಮಾಡಿರೆ ವ್ರದ್ದಾಶ್ರಮಂಗಳ ಸಂಖ್ಯೆ ಕಡಮ್ಮೆ ಅಕ್ಕು. ಲಾಯಕ ಆಯಿದು. ಹರೇ ರಾಮ.
ವ್ರದ್ದಾಶ್ರಮಂಗ ಹೆಚ್ಹಾವುತಕ್ಕೆ ಸತ್ಯಣ್ಣ ಕೊಟ್ಟ ಪರಿಹಾರ ಇದ್ದಲ್ಲದ , ಅದು ಸತ್ಯಕ್ಕೂ ಮೆಚ್ಚೆಕ್ಕಾದ್ದೆ….
“ಅದಕ್ಕೆ ಭಾವೋ, ಪ್ರಾಯದೋರಿಪ್ಪ ಮನಗೆ ರೇಶನ್ ಅಕ್ಕಿ ಉಚಿತ, ಕರೆಂಟು ಬಿಲ್ಲು ಉಚಿತ, ಸಾಲದ ಬಡ್ಡಿ ಮನ್ನಾ, ವೃದ್ಧರೊಟ್ಟಿಂಗೆ ಹೋಪವಕ್ಕೆ ಟಿಕೆಟಿಂಗೆ ಕಡಿತ ಹೀಂಗೆಂತಾರು ಸವಲತ್ತುಗೊ, ಸೌಲಭ್ಯಂಗೊ, ಸಬ್ಸಿಡಿಗೊ ಇದ್ದು ಹೇದು ಮಾಡೆಕು. ಅಂಬಗ ನೋಡಿ ..”
ಸತ್ಯಣ್ಣನ ಸಲಹೆಗ ಭಾರೀ ಲಾಯ್ಕ ಇದ್ದು.ಜಾರಿಗೆ ಬಂದರೆ ಅವರವರ ಮನೆ ಹೆರಿಯೋರು ಮಾತ್ರ ಅಲ್ಲ ಬೇರೆಯೋರ ಹೆರಿಯೋರನ್ನು ನೋಡಿಗೊಮ್ಬಲೆ ಜೆನಂಗ ಸಾಲು ಕಟ್ಟಿ ನಿಂಗು ಹೇಳಿ ಕಾಣ್ತು !!!!
ಹಿರಿಯರ ನೋಡ್ಯೋಳದ್ದ ಮಕ್ಕಳ ಸರಿ ದಾರಿಗೆ ತಪ್ಪಲೆ ಸತ್ಯಣ್ಣನ ಕೆಣಿ ಆಗದ್ದೆ ಇಲ್ಲೆ. ಗಟ್ಟಕ್ಕೆ ಹತ್ತಿ ಇಳುದಪ್ಪಗ ಅಬ್ಬಬ್ಬೋ, ಬಚ್ಚಿ ಹೋತಪ್ಪ. ಗಟ್ಟದ ಕೆಳಾಣ ಭಾವಂಗೆ ಉಪಕಾರ ಸ್ಮರಣೆ ಇಲ್ಲದ್ದಾತಾನೆ. ಚೆ. ವಿಟ್ವಣ್ಣ ಮನೆಲಿ ಉಂಡಿಕ್ಕಿಯೇ ಬಂದ್ಸೋ ?! ಇದುದೆ ಲಾಯಕಾಯಿದು.
Rangannange Kallyaaana aayekku bega
ಗಟ್ಟದ ಮೇಲೆ , ಕೆಳ ಹೇದು ಓದಿಯಪ್ಪಗ ವಾರ ವಾರ ಗಟ್ಟ ಇಳಿತ್ತವಕ್ಕೆ ಇನ್ನು ಈ ಮದುವೆ ಜೆಂಬರ ಆಗ ಹೇಳಿ ಕಾಂಗು.
{ಹಾಂಗೇ ಕುಂಬ್ಳೆ ಅಜ್ಜನಲ್ಲಿಗೆ ಏವಾತ್ತಾರು ಹೋಯ್ಕೊಂಡು ಬಪ್ಪ ದೊಡ್ಡಳಿಯನೂ ಹೇಳ್ತ ಕ್ರಮ ಇದ್ದು, ಪುನರ್ಜನ್ಮ ಸಿಕ್ಕಿರೆ ಮತ್ತೆ ಮಾರ್ಗವೂ ನೈಸ್ ನೈಸು } – ನೈಸು ಮಾರ್ಗಲ್ಲಿ ಹೋದೋರಿಂಗೇ ಅನುಭವಕ್ಕೆ ಬಕ್ಕಟ್ಟೆ.
ಒಟ್ಟಾರೆ ರೈಸಿದ್ದು.
ಸತ್ಯಣ್ಣ ಎಂಗಳ ಮನೆಗೆ ಬಂದ ಶುದ್ದಿಯೂ ಚೆನ್ನೈಗೆ ಅಷ್ಟು ಬೇಗ ಎತ್ತಿತ್ತೋ?ಎಲ್ಲಾ ಚಲನವಾಣಿ ಮಹಿಮೆ!ತಲೆಂಗಳ ಮದುವೆಗೆ ಹೋದರೂ ಅಡಿಗೆ ಕೊಟ್ಟಗ್ಗೆ ಹೋಗದ್ದ ಕಾರಣ ಸತ್ಯಣ್ಣನೇ ಹೇದು ಗೊಂತಾಯಿದಿಲ್ಲೆ.