Oppanna.com

‘ಅಡಿಗೆ ಸತ್ಯಣ್ಣ’ ಜೋಕುಗೊ – ಭಾಗ 18

ಬರದೋರು :   ಚೆನ್ನೈ ಬಾವ°    on   11/07/2013    12 ಒಪ್ಪಂಗೊ

ಚೆನ್ನೈ ಬಾವ°

1.
ಹೊಗೆಸೊಪ್ಪು ತಿಂಬಲಾಗ – ಕ್ಯಾನ್ಸರ್ ಬಕ್ಕು

ಚಿತ್ರಕೃಪೆ : ವೆಂಕಟ್ ಕೋಟೂರ್
ಚಿತ್ರಕೃಪೆ :
ವೆಂಕಟ್ ಕೋಟೂರ್

ಸೀವು ತಿಂಬಲಾಗ – ಸಕ್ಕರೆ ಖಾಯಿಲೆ ಬಕ್ಕು
ಹೀಂಗೆ ಹಲವಾರು ಆಗ, .. ಹಾಂಗಕ್ಕು.
ಅಂಬಗ ತಿನ್ನೋದ್ದೋರಿಂಗೆ ಕ್ಯಾನ್ಸರ್ ಬೈಂದಿಲ್ಯ, ಬತ್ತಿಲ್ಯ ! – ನಮ್ಮಾಂಗೆ ಸತ್ಯಣ್ಣಂಗೂ ಕೆಲವು ಸರ್ತಿ ಗ್ರೇಶಿ ಹೋಪದಿದ್ದು..

ಕೊಡಯಾಲಲ್ಲಿ ಆದ ವಿಮಾನ ಅಪಘಾತ ನಿಂಗೊ ಹೇಂಗೆ ಮರದ್ದಿಲ್ಯೋ..,  ಸತ್ಯಣ್ಣನೂ ಮರದ್ದನಿಲ್ಲೆ..
ಆದರೆ ವಿಮಾನಲ್ಲಿ ಹತ್ತಿ ಕೂದ ಮತ್ತೆ ಕೂಸುಗೊ ಬಂದು ಕಿರಿಕಿರಿ ಮಾಡ್ತದಿದ್ದನ್ನೇ.. ಅಡಿಗೆ ಸತ್ಯಣ್ಣಂಗೂ ಸೈಸಲೆಡಿತ್ತಿಲ್ಲೆ..
ವಿಮಾನಲ್ಲಿ ಕೂದ ಸತ್ಯಣ್ಣಂಗೆ ನೇರ್ಪಕ್ಕೆ ಹೋಗಿ UKಗೆ ಹೋಗಿ ಇಳಿಯೆಕ್ಕೀಗ..
ಕೂಚಕ್ಕ ಬಂದು ಹೇಳಿತ್ತು, ವಿಮಾನ ಇದೀಗ ಹಾರ್ಲೆ ಹೆರಡುತ್ತು.., ಮದಾಲು ಈಗ ನಿಂಗೊ ಎಲ್ಲೋರು ಬೆಲ್ಟು ಕಟ್ಟೆಕು, ಮತ್ತೆ ಹಾರುವಾಗ ವಿಮಾನ ಹೀಂಗಾದರೆ ಹಾಂಗೆ ಮಾಡೆಕು, ಹಾಂಗಾದರೆ ಹೀಂಗೆ ಮಾಡೆಕು ..
ಸತ್ಯಣ್ಣ ಕೇಟ° – “ಏ ಕೂಸೇ!, ಇದು ಹಾರ್ಲೆ ಹೋಪ ವಿಮಾನವೋ, ಬೀಳ್ಳೆ ಹೋಪ ವಿಮಾನವೋ!! 😀
~~
2.
ಅಡಿಗೆ ಸತ್ಯಣ್ಣನೊಟ್ಟಿಂಗೆ ಕಾಯಿ ಕಡವಲೆ ರಂಗಣ್ಣ ಹೋವ್ಸು..
ರಂಗಣ್ಣ ಬಾರದ್ದಲ್ಲಿ ಸತ್ಯಣ್ಣನೇ ಖುದ್ಧಾಗಿ ಸುಧಾರ್ಸುತ್ಸು..
ಓ ಮನ್ನೆ ಓ ಅಲ್ಲಿ ಆದ್ದು ಅದೇ ಕತೆ..
ರಂಗಣ್ಣ ಬಾರದ್ದ ಕಾರಣ ಆಟಲ್ಲಿ ಡೋಳುಗಂಟೆ ನಾರಾಯಣಾಚಾರ್ ವೇಷದೋನ ಪೂಜೆಭಟ್ಟನ ಕತೆಯ ಹಾಂಗೆ ಬೇಶುತ್ಸು ಸತ್ಯಣ್ಣನೇ ಕಾಯಿ ಕಡವದೂ ಸತ್ಯಣ್ಣನೇ..
ಅಂದರೂ ಆಯೇಕ್ಕಾದ ಸಮಯಕ್ಕೆ ಆಯೇಕ್ಕಾದ್ದು ಎಲ್ಲವೂ ರೆಡಿ.. ರೆಡಿ..
ಕಾಯಿ ಕಡಿದು ಎದ್ದುಗೊಂಡಿದ್ದ ಸತ್ಯಣ್ಣನ ನೋಡಿ ಮನೆ ಹೆಮ್ಮಕ್ಕ ಹೇದವು – ಏ ಸತ್ಯಣ್ಣ, ನಿಂಗಳೇ ಕಾಯಿ ಕಡದ್ದೋ! ಎನ್ನತ್ರೆ ಹೇಳಿತ್ತಿದ್ರೆ ಕಡದು ಕೊಡ್ತಿತ್ತನಿಲ್ಯೋ?!
ಸತ್ಯಣ್ಣ ಹೇದಾ°… – “ಮತ್ತೇಕೆ ನಿಂಗೊ ಆಗಳೇ ಕೇಳದ್ದು”! 😀
~~
 
3.
ಅಡಿಗೆ ಸತ್ಯಣ್ಣನ ಕೆಲ್ಸ ಮುಗುದತ್ತು, ಊಟ ಕಳಾತು, ಚಾಯೆ ಬೇಶಿ ಆತು, ಪಾತ್ರೆ ಸಮಲ್ಸಿ ಕೊಟ್ಟಾತು
ಇನ್ನು ಹೆರಡುಸ್ಸು ಹೇದು ಹೆಗಲಿಂಗೆ ಚೀಲಸುರ್ಕೊಂಡಪ್ಪಗ ಮನೆ ಯೆಜಮಾನ ಬಂದು ಕೇಳಿದಾ ಎಷ್ಟು ಸತ್ಯಣ್ಣ ಇಂದ್ರಾಣದ್ದು?
ಇಂದ್ರಾಣದ್ದು ಎಷ್ಟು ಹೇದು ಕೇಳಿಯಪ್ಪಗ ಸತ್ಯಣ್ಣಂಗೆ ಒಳಂದೊಳ ತೋರಿತ್ತು ಮದಲಾಣದ್ದೇನಾರು ಬಾಕಿ ಇದ್ದೋ ಅಂಬಗ..
ಹಾಂಗೇಳಿ ಅಡಿಗೆ ಸತ್ಯಣ್ಣ ಹಾಂಗೆಲ್ಲ ಕೇಳುವಷ್ಟು ತಾಪು ಅಲ್ಲ..
ಬಾಯಿಬಿಟ್ಟು ಕೇಳಿದ ಕಾರಣ ಬಾಯಿಬಿಟ್ಟು ಸತ್ಯಣ್ಣ ಹೇದ ಐನ್ನೂರು ಕೊಡಿ ಬಾವ°..
ಇಷ್ಟು ಸಣ್ಣ ಅಡಿಗ್ಗೆ ಐನ್ನೂರೋ! “ರಜಾ ಸಣ್ಣಕೆ, ಹದಾಕೆ ಹೇಳು ಸತ್ಯಣ್ಣ “ – ಹೇದ ಮನೆಯೆಜಮಾನ.
ಸತ್ಯಣ್ಣ ಮೆಲ್ಲಂಗೆ ಹಗೂರಕೆ ಹೇದ° – “ಐನ್ನೂರು”. 😀
~~
4.
ಅಡಿಗೆ ಸತ್ಯಣ್ಣಂಗೂ ತೆರಕ್ಕಿನ ಗೋಪಣ್ಣಂಗೂ ಹಳೇ ಕಾಲದ ಸ್ನೇಹಾಚಾರ..
ತೆರಕ್ಕಿನ ಗೋಪಣ್ಣನ ಬೈಲಿಲಿ ಗೊಂತಿಲ್ಲದ್ದೋರು ಒಂದಾರೇಳು ಜೆನ ಇಕ್ಕಷ್ಟೆ..
ಗೋಪಣ್ಣ ಹೇದರೆ ಕೃಷಿ ಕಾರ್ಯದೊಟ್ಟಿಂಗೆ ಪ್ರವೃತ್ತಿಲಿ ಹಲವು ವಿಷಯಂಗಳಲ್ಲಿ ತೆರಕ್ಕಿಲಿಪ್ಪೋನು, ಎಂಟು ಜೆನ್ರ ಗೊಂತಿಪ್ಪೋನು.. ಆದರೆಂತ…! ಒಂದಕ್ಕೂ ಸಿಕ್ಕದ್ದ ಬಗೆ. ಅಷ್ಟೇ ದೋಶ.
ಬೈಲ ಆರಾರು ಸಿಕ್ಕಿರೆ ಬಡಾಯಿ ಬಿಡ್ತರ್ಲಿ ಏನೂ ಕಮ್ಮಿ ಇಲ್ಲೆ, ಸಕ್ಕರೆ ಹಾಂಗೆ ಚೀಪೆ ಮಾತುದೆ…- “ಛೇ.. ನೀ ಒಂದು ಮಾತು ಎನ್ನತ್ರೆ ಹೇಳಿರ್ತಿದ್ರೆ..”
ಅಡಿಗೆ ಸತ್ಯಣ್ಣಂಗೆ ಪುತ್ತೂರ್ಲಿ ಒಂದು ಸ್ವಕಾರ್ಯ ಕೆಲಸ ಆಯೇಕ್ಕಾತು..
ಆ ಬಗ್ಗೆ ಹಲವು ಸರ್ತಿ ಗೋಪಣ್ಣಂಗೆ ವಿಷಯ ತಿಳಿಶಿಕ್ಕುವೋ ಹೇದು ಗೋಪಣ್ಣಂಗೆ ಹಲವು ಸರ್ತಿ ಫೋನ್ ಮಾಡಿದ್ದೂ ಆತು ಅಡಿಗೆ ಸತ್ಯಣ್ಣ. ಆದರೆಂತ ಮಾಡುಸ್ಸು.. ಫೋನಿಂಗೆ ಸಿಕ್ಕಿದ್ದನಿಲ್ಲೆ ಗೋಪಣ್ಣ.
ಮಾತ್ನಾಡುವ ಎಡೆಲಿ ಗೋಪಣ್ಣನತ್ರೆ ಹೀಂಗೀಗೆ ವಿಷಯ ಹೇದು ಹೇಳಿ ಹೋತು ಅಡಿಗೆ ಸತ್ಯಣ್ಣಂಗೆ..
“ಅದಕ್ಕೆಂತಯೇಕು., ನೀ ಇದಾ.. ಪುತ್ತೂರಿಂಗೆ ಬಂದು ಬಸ್ಸಿಳುದು ಒಂದು ಫೋನ್ ಮಾಡಿರೆ ಸಾಕು…” – ಸತ್ಯಣ್ಣಂಗೆ ಹೇದ° ಗೋಪಣ್ಣ°.
ಹಳೇ ಕಾಲದ ಸ್ನೇಹಾಚಾರ ಹೇದಮತ್ತೆ ಸತ್ಯಣ್ಣಂಗೆ ಗೊಂತಿಲ್ಯೋ ಇವನ ಬಂಡಾರ!
“ಅಪ್ಪಪ್ಪು ಫೋನ್ ಮಾಡಿರೆ ಈ ಮನುಷ್ಯ ತೆಗದು ಬೇಕನ್ನೇ!, ನೇರ ಮನಗೆ ಬತ್ಸು ಬೇಡ ಹೇದಲ್ಲದೋ ಇಂವ ಈಗ ಹೇಳುಸ್ಸು, ವಿಪರೀತ ತೆರಕ್ಕಿನೋರು ಉಪಕಾರಕ್ಕೆ ಆಗದ್ದವು ಹ್ಮ್ಮ್” -ಮನಸ್ಸಿನೊಳದಿಕ್ಕೆ ಹೇಳಿಗೊಂಡು ಕೇಳಿದ್ದರಷ್ಟ್ರ ‘ಆತು ಆತು’ ಹೇದು ಆಚ ಕೆಮಿಲಿ ತೂರಿ ಬಿಟ್ಟ° ಅತ್ತೆ ಅಡಿಗೆ ಸತ್ಯಣ್ಣ°. 😀
~~
5.
ಅಡಿಗೆ ಸತ್ಯಣ್ಣ ಅನುಪ್ಪತ್ಯದ ಅಡಿಗ್ಗೆ ಹೋದಲ್ಲಿ ಒಂದಿಕ್ಕೆ ಕುಂಞಿಮಾಣಿ ಒಬ್ಬ ಅಡಿಗ್ಗೆ ಕೊಟ್ಟಗ್ಗೆ ಬಂದು ಸತ್ಯಣ್ಣನತ್ರೆ ಹೇದಾ – ಮಾವ° ನಿಂಗೊ ಮಾಡ್ತ ಕಾಪಿ ಲಾಯಕ ಆವ್ತು. ಎಂಗಳಲ್ಲಿ ಅಮ್ಮ ನಿತ್ಯಕ್ಕೆ ಮಾಡ್ತ ಕಾಪಿ ಬರೇ ನೀರಟೆ. ಅಬ್ಬೆಯತ್ರೆ ಕೇಳಿರೆ ದನ ಅಕ್ಕಚ್ಚು ಹೆಚ್ಚಿಗೆ ಕುಡಿತ್ತಕಾರಣ ಹಾಂಗಪ್ಪದಾಯ್ಕು ಹೇಳ್ತು. 
ಸತ್ಯಣ್ಣ ಹೇದ° “ಅದು ಅಬ್ಬೋ.., ಹಾಲು ಕಾಸುವಾಗ ಹಾಲಿಂಗೆ ನೀರು ಹಾಕಿ ಕಾಸೆಕು, ನೀರಿಂಗೆ ಹಾಲು ಹಾಕಿ ಕಾಸಲಾಗ”  😀
~~
6.
ದೊಡ್ಡಮಾಣಿ ದೊಡ್ಡಮಾವನ ತಿಂಗಳ ಮಾಸಿಕ ಅಡಿಗ್ಗೆ ಉದಿಯಪ್ಪಗ ಹೋದರೆ ಸಾಕಾದರೂ, ಅಂದು ಕೇರಳ ಬಂದ್, ಬಸ್ಸು ಓಡ, ಬ್ಯಾರಿ ಚಕ್ಕಂಗೊ  ಬೈಕಿಂಗೆ ಕಲ್ಲು ಮಣ್ಣ ಇಡ್ಕುಗು.. ಹೇದಾವ್ತು ದೊಡ್ಡ ಭಾವ ಅಡಿಗೆ ಸತ್ಯಣ್ಣಂಗೆ ಮುನ್ನಾಣ ದಿನವೇ ಬಂದಿಕ್ಕು ಹೇದು ಹೇದ್ದದು..
ಪೆರ್ಲಂದ ಬದಿಯಡ್ಕ ಬಂದು ಗುರುವಾಯೂರಪ್ಪನ ಹಿಡ್ಕೊಂಡು ಸೂರಂಬೈಲಿಲಿ ಇಳುದು ರಂಗಣ್ಣನನ್ನೂ ಬಲುಗಿಯೊಂಡು ಮನೆ ಜಾಲಿಗೆ ಎತ್ತುವದೂ ದೊಡ್ಡಕ್ಕ ಬಟ್ಳು ಹರಗೊದೂ ಹಾಳಿತ ಆಯ್ದು.
ಊಟ ಆಗಿಕ್ಕಿ ಮತ್ತೆ ಕೆಲಸ ಎಂತೂ ಇಲ್ಲೆ, ಹಸೆ ಹಾಕಿ ಕೊರದರಾತಿದ.. 
ದೊಡ್ಡಭಾವನೇ ಖುದ್ದು ನಿಂದು ಹಸೆ ತಲೆಗೊಂಬು ಹಾಸಿಕ್ಕಿ, ಕೈಬುಡಲ್ಲೆ ಹೊದವಲೂ ಮಡಿಗಿಕ್ಕಿ ಇನ್ನೆಂತ ಲಾಟನು ನಂದ್ಸಿ ಒರಗೊದಲ್ಲದ…,
“ಸತ್ಯಣ್ಣ, ನಿಂಗೊಗೆ ಮಂಚಲ್ಲಿ ವ್ಯವಸ್ಥೆ ಮಾಡಿದ್ದೆ. ಸಾವಕಾಶ ಮಾಡಿಗೊಳ್ಳಿ” ಹೇದವು ದೊಡ್ಡಭಾವ°..
ಸತ್ಯಣ್ಣ ಮಂಚದತ್ರಂಗೆ ಹೋಗಿ ತಲೆಗೊಂಬ ಮಾಂತ್ರ ಅಲ್ಲಿಂದ ಪೀಂಕುಸಿ ಈಚಿಗೆ ಕೆಳ ಹಾಕಿದ ಹಸೆ ಹತ್ರೆಂಗೆ ಒಚ್ಚಿದ°.
ರಂಗಣ್ಣ ಕೇಟ° – ಅದೆಂತ ಸತ್ಯಣ್ಣ ನಿಂಗೊ ಮಂಚ ಬೇಡ ಹೇದು ಮಾಡ್ಯೊಂಡದು?!!
ಸತ್ಯಣ್ಣ ಹೇದಾ° – ಅದಾಗದೋ° ನವಗೆ. ಮತ್ತೆ ಇವು ಬಂದು ಮಂಚಲ್ಲಿ ಮನುಗುವವು ಬೆಲ್ಟ್ ಕಟ್ಟಿಗೊಳ್ಳಿ ಹೇದು ಹೇಳಿರೆ?!! 😀
~~
7.
ಅಡಿಗೆ ಸತ್ಯಣ್ಣನ ಒಟ್ಟಿಂಗೆ ಹೋವ್ತ ರಂಗಣ್ಣ ಹೇದರೆ ಸತ್ಯಣ್ಣನ ಕಣ್ಣೆದುರೆ ಬೆಳದ ಮಾಣಿ..
ಹಾಂಗಾಗಿ ಅಡಿಗೆ ಸತ್ಯಣ್ಣಂಗೂ, ಒಟ್ಟಿಂಗೆ ಹೋಪ ರಂಗಣ್ಣಂಗೂ ಪ್ರಪ್ರತ್ಯೇಕ ಸ್ವಾತಂತ್ರ ಇಪ್ಪದಾರೂ, ಅನುಪ್ಪತ್ಯಕ್ಕೆ ಹೋದಲ್ಲಿ ಸತ್ಯಣ್ಣನ ಕಂಟ್ರೋಲಿಲ್ಯೇ ಇರ್ಸು ಹೆಚ್ಚಾಗಿ ರಂಗಣ್ಣ..
ಹೀಂಗೆ..,  ಒಂದಿನ ಅಡಿಗೆ ಸತ್ಯಣ್ಣನೂ, ರಂಗಣ್ಣನೂ ಹತ್ರೆ ಹತ್ರೆ ಕೂದಿತ್ತವು ಬೈಲ ಅನುಪ್ಪತ್ಯ ಊಟಲ್ಲಿ..
ಪಾಚ ಬಪ್ಪಲೆಲ್ಲಾ ಕಾವಲೆ ಇಲ್ಲೆ ಚೂರ್ಣಿಕೆ ಸುರುವಾಯೇಕ್ಕಾರೆ..
ಶ್ಲೋಕ, ಹಾಡು, ಸಂಗೀತ, ಪದ, ಪದ್ಯ ಹೇದು ಒಂದರ ಬೆನ್ನಿಂಗೆ ಮತ್ತೊಂದು ಬಂದುಗೊಂಡಿತ್ತು..
ಚೂರ್ಣಿಕೆ ರೈಸುತ್ತರ ನೋಡಿ ಸತ್ಯಣ್ಣನತ್ರೆ ಹತ್ರೆ ಕೂದೊಂಡಿದ್ದ ರಂಗಣ್ಣ ಕೇಳಿದ° – ಮಾವ°, ಆನೂ ಒಂದು ಪದ್ಯ ಹೇಳ್ಳಿಯಾ?
ಸತ್ಯಣ್ಣ ಹೇಳಿದಾ°- ಬೇಡ ಬೇಡ, ತಳಿಯದ್ದೆ ಕೂದು ಉಣ್ಣೀಗ ನೀನು ಮದಾಲು. ಮುಳಿಯ ಬಾವ “ಚಾಮಿಯ ಜಾಂನ್ಸಿಯೊಂಡು ಎಂಟೋಳಿಗೆ ಕಾಯಿಹಾಲಾಕಿ ತಿಂದೆ..” ಹೇದು ಪದ್ಯ ಕಟ್ಟಿ ಹೇಳುಗು., ನೀನಿನ್ನು “ಕಾಯಿ ಒಡದೆ, ಕಾಯಿ ಕೆರದೆ, ಕಾಯಿ ಕಡದೆ, ಕೈ ಬೇನೆ ಆದ್ದು ಹತ್ರೆ ಕೂದವಂಗೆ ಗೊಂತಕ್ಕೋ” ಹೇದಿನ್ನು ಇಲ್ಲಿ ಕೂದೊಂಡು ರಾಗ ಎಳೆಡ ಈಗ ನೀನು!., ನೀವು ಅವರೊಟ್ಟಿಂಗೆ ಮಹಾದೇವ ಹೇಳು ಸಾಕು   😀
~~
8.
ಕೋರೆಂಗಾನ ಮಾವನ ಮಗ° ಬಾವಯ್ಯ° ಮೂಡ್ಳಾಗಿ ಪಂಜದ ಹೊಡೆಲಿ ಜಾಗೆ ತೆಗದು ಮನೆಕಟ್ಟಿ ಒಕ್ಕಲಾಗಿ ಎರಡು ವರ್ಷ ಕಳಾತು ಹೇದು ನವಗೆ ಬಂಟಮಲೆ ಬಾವಯ್ಯ ಹೇಳಿಯಪ್ಪಗಳೇ ಗೊಂತಾದ್ದುಳ್ಳೊ..
ಮೂಡ್ಳಾಗಿ ಹೋದರೂ ಅಲ್ಲಿಗೆ ಅನುಪ್ಪತ್ಯದ ಅಡಿಗ್ಗೆ ಹೋವುಸ್ಸು ಅಡಿಗೆ ಸತ್ಯಣ್ಣನೇ..
ಹಾಂಗೆ.., ಓ ಮನ್ನೆ ಅಲ್ಲಿ ಅಜ್ಜನ ತಿಥಿ…  ಅಡಿಗೆ ಸತ್ಯಣ್ಣಂಗೆ ಇಪ್ಪತ್ತು ದಿನ ಮದಲೆ ಫೋನಿಲ್ಲಿಯೇ ಬುಕ್ ಆಗಿದ್ದತ್ತು..
“ಇಪ್ಪತ್ತೈದು ಜೆನಕ್ಕೆ ಊಟಕ್ಕೆ ಅಟ್ಟಣೆ ಸಾಕು.. ಆದರೆ ಹೋಳಿಗೆ ನಾಕು ಸೇರು ಗೊಂತಾತನ್ನೇ..” ಹೈದ° ಬಾವಯ್ಯ°..
ವಿಪರೀತ ಮಳೆ, ಕರೆಂಟೂ ಸಮಗಟ್ಟು ಇರ.., ಹಾಂಗೆ ಒಬ್ಬನೇ ಹೋದರೆ ಸಾಲ ಹೇದು ಅಡಿಗೆ ಸತ್ಯಣ್ಣ ಮುನ್ನಾಣ ದಿನ ಉದಿಯಪ್ಪಗಳೇ ರಂಗಣ್ಣನ ಸಹಿತ ಎತ್ತಿಗೊಂಡದು ತಿಥಿ ಅಡಿಗ್ಗೆ..
ಬೇಗ ಬೇಗ ಹೋಳಿಗೆ ಕೆಲಸ ಮುಗುಶಿ, ಕೆರುಶಿ ಅಟ್ಟಕ್ಕೇರಿಸಿ ಊಟಾದಿಕ್ಕಿ ಗಂಟೆ ಹತ್ತಾಯೇಕ್ಕಾರೇ ಚಾವಡಿಲಿ ಹಸೆ ಹೊದಕ್ಕೆ ವ್ಯವಸ್ಥೆ ಆಗಿದ್ದತ್ತು..
ಇರಿಂಟಿರಾಗ ತಾರಕಕ್ಕೇರುತ್ತಿಪ್ಪಂತೆ ಜಡಿಗುಟ್ಟಿ ಮಳೆ ಸೊಯ್ಪಲೆ ಸುರುವಾತದಾ..
“ಬಂಟಮಲೆ ಬುಡಲ್ಲಿ ಮಳೆ ಏನು ಕಮ್ಮಿಯೋ “?! – ಕೇಳುಗು ಬಂಟಮಲೆ ಬಾವ°..
ಕಣ್ಣಮುಚ್ಚಿ ಮನಿಕ್ಕೊಂಡ ಸತ್ಯಣ್ಣಂಗೆ ಹತ್ರಂದ ನರಕ್ಕುವ ಶಬ್ದ ಕೇಳಿತ್ತು.. ಕಣ್ಣೊಡದು ಟೋರ್ಚ್ ಹೆಟ್ಟಿ ನೋಡುವಾಗ ರಂಗಣ್ಣ ಚಳಿಲಿ ನಡುಗುತ್ತದು ಕಾಣುತ್ತು ಮನಿಕ್ಕೊಂಡು..
ಅದರ ನೋಡಿ ‘ಅಯ್ಯೋ ಪಾಪನೇ’ ಕಂಡತ್ತು ಸತ್ಯಣ್ಣಂಗೆ..
ತನ್ನ ಹಸೆಲಿದ್ದ ಬೆಡ್ಶೀಟನ್ನೂ ಅವಂಗೆ ಹೊದೆಶಿ “ಇನ್ನು ತಳಿಯದ್ದೆ ಮನಿಕ್ಕೋ” ಹೇದು ಸಮಾಧಾನ ಮಾಡಿದ ಸತ್ಯಣ್ಣ..
ರಂಗಣ್ಣ ಆಶ್ಚರ್ಯಲ್ಲಿ ಕಣ್ಣರಳಿ ನೋಡಿ –  ‘ಅಂಬಗ ನಿಂಗೊಗೆ ಮಾವ°’?!
“ಎನಗೆ ಇದಾ…. ಓಯಿಲ್ ಸೀರೆ ಇದ್ದಿಲ್ಲಿ. ಇದರ ಹೊದ್ದು ಮನಿಗಿರೆ ಚಳಿಯೂ ಆಗ, ಸೆಕೆಯೂ ಆಗ” – ಹೇದಿಕ್ಕಿ ಅಡಿಗೆ ಸತ್ಯಣ್ಣ ಮುಸುಕು ಎಳಕ್ಕೊಂಡ ಓಯಿಲ್ ಸೀರೆಯ. 😀
ರಂಗಣ್ಣಂಗೂ ಈಗ ಗೊಂತಾತು-  ಎಂತಕೆ ಈ  ಸತ್ಯಣ್ಣ° ಶಾರದೆಗೆ ಸೀರೆ ತೆಗೆತ್ತರೆ ಓಯಿಲ್ ಸೀರೆಯನ್ನೇ ಹುಡ್ಕಿ ತೆಗವದು ಹೇದು 😀
 

 😀 😀 😀

 

12 thoughts on “‘ಅಡಿಗೆ ಸತ್ಯಣ್ಣ’ ಜೋಕುಗೊ – ಭಾಗ 18

  1. ಸತ್ಯಣ್ಣ೦ಗೆ ಸಾಟಿ ಇಲ್ಲೆ. ಕಟ್ಟಿದ ಹಾಸ್ಯ ಅಲ್ಲ ಇದು,ವಾಸ್ತವ ಹೇಳಿ ಅನ್ಸುತ್ತು.ಬರಳಿ ಭಾವ ಹೀ೦ಗೆಯೇ.

  2. ಸತ್ಯಣ್ಣನ ಸತ್ಯಕಥೆ ಸೂಪರಾಯಿದು. ಐನ್ನೂರು, ಗೋಪಾಲಣ್ಣ, ಓಯಿಲ್ ಸೀರೆಗೊ ಎಲ್ಲವುದೆ ಲಾಯಕಾತು. ಸತ್ಯಣ್ಣನ ಜೋಕುಗೊ
    ಹೀಂಗೇ ಮುಂದುವರುದು ಪುಸ್ತಕ ರೂಪಲ್ಲಿ ಹೆರಬರಳಿ.

  3. ಸತ್ಯಣ್ಣಂಗೆ ನಮೋ ನಮಃ
    ಚೆಲ!! ಈ ಸತ್ಯಣ್ಣ ಪೇಸುಬುಕ್ಕಿಲಿಯೂ ಎಕೌಂಟ್ ಸುರು ಮಾಡಿದ್ದಾಳಿ!

  4. ಸತ್ಯಣ್ಣ ಭಾರೀ ರೈಸುತ್ತಾ ಇದ್ದ°- ಒಂದು ಹೊಡೆಲಿ ಜೋಕು ಹೇಳಿಗೊಂಡು ಇನ್ನೊಂದು ಹೊಡೆಲಿ ಕವನಬರವಲೆ ಹೆರಡುವವಕ್ಕೆ ಪುರುಸೊತ್ತಿಲಿ ಸಕಾಯವನ್ನೂ ಮಾಡ್ತಾ ಇದ್ದ°. ಜಾಕು ಅಜ್ಜಿಯ ಹಾಂಗೆ ಊರಿಂಗೇ ಬೇಕಾದ ವ್ಯಕ್ತಿ ಈ ಸತ್ಯಣ್ಣ. ಹೇಳಿದಾಂಗೆ, ಸತ್ಯಣ್ಣನ ಚೀಲದ ಗೆಂಟಿಲಿ ಹಳೇ ಓಯಿಲ್ ಸೀರೆ ಏವಗಳೂ ಇರ್ತೋ!

  5. ಚೆನ್ನೈ ಭಾವ ಗಂಭೀರ ವಿಷಯಲ್ಲೂ ಹಾಸ್ಯ ವಿಷಯಲ್ಲೂ ಸಿದ್ಧಹಸ್ತರು…! ಒಂದು ಕಡೆ ಗರುಡ ಪುರಾಣ, ಮತ್ತೊಂದು ಕಡೆ ಕುಶಾಲಿನ ಪುರಾಟು!

  6. ವಾಸ್ತವಿಕ ಘಟನೆಗೆ ಹತ್ತರೆ ಇಪ್ಪ ಜೋಕುಗೊ ಬರೇ ತಮಾಷೆ ಆಗಿ ಕಾಣದ್ದೆ, ವಿಚಾರ ಪ್ರಚೋದನೆಗೂ ಅವಕಾಶ ಕೊಡುತ್ತು.
    ವಿಮಾನಲ್ಲಿ ಗಗನ ಸಖಿಗೊ ಹೇಳ್ತದರ ಕೇಳುವಾಗ ಸುರುವಾಣ ಸರ್ತಿ ಹೋವ್ತವಂಗೆ ತಲೆ ಬೆಶಿ ಆಗದ್ರೆ ಮತ್ತೆ ಕೇಳಿ. ವಿಮಾನ ಬೀಳಲೇ ಹೋವ್ತ ಮಾತುಗಳೇ ಇಪ್ಪದು ಅವರತ್ರೆ.
    ಎಲ್ಲ ಕೆಲಸ ಮುಗುದ ಮತ್ತೆ, ಹೋ.. ಎನಗೆ ಗೊಂತೇ ಆಯಿದಿಲ್ಲೆ, ಇಲ್ಲದ್ರೆ ಆನು ಮಾಡಿ ಕೊಡ್ತಿತೆ ಹೇಳಿ ಜಾಣತನ ತೋರುಸುವವು ಎಶ್ಟು ಜೆನಂಗೊ ಇದ್ದವು ಅಲ್ಲದಾ ( “ಮತ್ತೇಕೆ ನಿಂಗೊ ಆಗಳೇ ಕೇಳದ್ದು”)
    ಐನ್ನೂರು ಹೇಳಿ ಅಪ್ಪಗ ಸಣ್ಣಕೆ ಹೇಳು ಹೇಳಿರೆ, ಸಣ್ಣ ಸ್ವರಲ್ಲಿಯೇ ಹೇಳೆಕ್ಕಲ್ಲದ್ದೆ, ಈಗಾಣ ಕಾಲಲ್ಲಿ ಅದಕ್ಕಿಂತ ಕಮ್ಮಿ ಸಂಬಳಕ್ಕೆ ಕೂಲಿ ಕೆಲಸದವೂ ಸಿಕ್ಕುತ್ತವಿಲ್ಲೆ!!!
    ತೆರಕ್ಕಿನ ಗೋಪಾಲನ ಹಾಂಗಿಪ್ಪ ಬೆಣ್ಣೆ ಹಾಂಗೆ ಜಾರುವ ಜಾಯಮಾನದವರ ಅನುಭವ ಹೆಚ್ಚಿನವಕ್ಕೂ ಇಕ್ಕು.
    ನೀರಿಂಗೆ ಹಾಲು ಹಾಕಿ ಕಾಸಲಾಗ, ಮಂಚಲ್ಲಿ ಮನುಗಿರೆ ಬೆಲ್ಟ್ ಕಟ್ಟೆಕ್ಕು ಹೇಳುಗು, ವೋಯಿಲ್ ಸೀರೆ ಬೆಚ್ಚಂಗೆ ಹೊದಕ್ಕೊಂಬಲೆ– ಎಲ್ಲವೂ ಲಾಯಿಕ ಆಯಿದು.

  7. ‘ಐನ್ನೂರು’ ದೆ ಓಯಿಲ್ ಸೀರೆದೆ ಸುಪ್ಪರಾಯಿದು ಭಾವಯ್ಯ಼ ಬಾಕಿಪ್ಪದುದೇ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×