Oppanna.com

'ಅಡಿಗೆ ಸತ್ಯಣ್ಣ' ಜೋಕುಗೊ – ಭಾಗ 19

ಬರದೋರು :   ಚೆನ್ನೈ ಬಾವ°    on   18/07/2013    17 ಒಪ್ಪಂಗೊ

ಚೆನ್ನೈ ಬಾವ°

1.
ಅಡಿಗೆ ಸತ್ಯಣ್ಣನ ಮಾರಾಪಿಲ್ಲಿ ಬಹುಕಾಲಂದ ಇತ್ತಿದ್ದದು ಹಿತ್ತಾಳೆ ಮೇಗಂದ ಸ್ಟೀಲಿನ ಪೈಂಟು ಕೊಟ್ಟ ಎವೆರೆಡಿ ಟೋರ್ಚ ಲೈಟ್..

ಚಿತ್ರಕೃಪೆ : ವೆಂಕಟ್ ಕೋಟೂರ್
ಚಿತ್ರಕೃಪೆ :
ವೆಂಕಟ್ ಕೋಟೂರ್

ಹೆಚ್ಚು ಕಮ್ಮಿ  ಸತ್ಯಣ್ಣನಷ್ಟೇ ಪ್ರಾಯ ಆದಿಕ್ಕು ಅದಕ್ಕೂ.. ಅಂದರೆ ಬೆಟ್ರಿ ಹಾಕಿರೆ ಬೆಣಚ್ಚಿ ಸಮಾಕೆ ಕಾಂಗು. ಹೊತ್ತದ್ದರೆ ಕೆಲವೊಂದರಿ ತಲಗೆ ಹೆಟ್ಟಿ ಸರಿ ಮಾಡ್ತ ಎಳ್ಪ ಕೆಲಸ. ಹಾಂಗೆ ಅದಕ್ಕೆ ‘ಹೆಟ್ಟುತ್ತ ಲೈಟು’ ಹೇದೂ ಒಂದು ಅಡ್ಡ ಹೆಸರು.
ಅದಾರೋ ಮಾನೀರ್ ಮಾಣಿಯಡೋ.. “ಈಗ ಹೊಸತ್ತು.., ಚಾರ್ಜು ಮಾಡ್ತಾಂಗಿಪ್ಪದು, ಹಗೂರದ್ದು, ಸಣ್ಣಕೆ ಕಿಸಿಲಿಯೇ ಮಡಿಕ್ಕೊಂಡು ಹೋವ್ತಾಂಗಿಪ್ಪದು, ಅಂಬಗಂಬಗ ಬೆಟ್ರಿ ಹಾಕುತ್ತ ಕೆಲಸ ಇಲ್ಲೆ” ಹೇದು ಯೇವುದೋ ಒಂದು ಹೆಸರಿಲ್ಲದ್ದ ಪ್ಲೇಸ್ಟಿಕ್ ಕರಡಿಗೆ ಹಾಂಗಿರ್ಸರ ಕಮ್ಮಿ ಬೆಲೆದು ಹೇದು ಕೈಗೆ ಚಳ್ಳಿಬಿಟ್ಟಿದನಡ..
ಸರಿ, ಆಗಲಿಪ್ಪ., ಎಳ್ಪದ್ದಾದರೆ ಒಳ್ಳೆದೇ ಆತನ್ನೇದು, ಇರುಳು ಉಚ್ಚೊಯ್ವಲೆ, ಕರೆಂಟು ಹೋದರೆ ಪಕ್ಕನೆ ಒಂದರಿಯಂಗೆ ಬೆಣಚ್ಚಿ ಮಾಡಿಗೊಂಬಲಾತು ಹೇದು ಸತ್ಯಣ್ಣನೂ ಚೀಲಕ್ಕೆ ಸೇರ್ಸಿಯೊಂಡ. ಹೋವ್ತಲ್ಯಂಗೂ ಇದೇ ಹೋವ್ಸು ಈಗೆಲ್ಲ ಸತ್ಯಣ್ಣನ  ಮಾರಾಪಿನೊಟ್ಟಿಂಗೆ..
ಓ ಮನ್ನೆ ಬೈಲ ದೊಡ್ಡಜ್ಜನ ಸಣ್ಣ ಮಗಳ ಮನೆ ಅನುಪ್ಪತ್ಯಕ್ಕೆ ಹೇದು ಮುನ್ನಾಣದಿನವೇ ಹೋದ್ದು.,  ಹೋಗಿ ಎತ್ತಿಯಪ್ಪಗ ಮೂರ್ಸಂಧಿ ಕಳುದ್ದು..
ಜಾಲಕೊಡಿಂಗೆ ಎತ್ತುವದ್ದೆ ಕರೆಂಟತ್ತೆ ಹೋತು..
ಸತ್ಯಣ್ಣ ಮಾರಾಪಿಂದ ಹೊಸ ಟೋರ್ಚು ತೆಗದ.., ಎಷ್ಟು ಹೊತ್ತಾರು ಇವ° ಟೋರ್ಚಿಲೈಟು ಹೊತ್ಸುತ್ತು ಕಾಣುತ್ತಿಲ್ಲೆ..
ಹಿಂದಿಕ್ಕೇ ಪರಡಿಗೊಂಡು ಬಂದೊಂಡಿತ್ತಿದ್ದ ರಂಗಣ್ಣ ಸುರುಮಾಡಿದ° – “ಏ ಮಾವ°, ಒಂದರಿ ಲೈಟು ಹಾಕಿ ಇತ್ತೆ”..
ಸತ್ಯಣ್ಣ ಹೇದಾ°.. – “ನಿಲ್ಲೋ°, ಅದನ್ನೇ ಆನಿಲ್ಲಿ ಹಸಬಡಿತ್ತಾ ಇಪ್ಪದು. ಇಲ್ಲಿ ಆರಾತ್ರಾರು ಬೆಣಚ್ಚಿ ಇದ್ದರೆ ಒಂದರಿ ಇತ್ತೆ ಹಿಡಿರಿ .. ಇದರ ಸುಚ್ಚಿ ಕೈಗೂ ಸಿಕ್ಕುತ್ತಿಲ್ಲೆ ಇಲ್ಲಿ!. ಇದರ ಸುಚ್ಚಿ ಹುಡ್ಕಲೆ ಇನ್ನೊಂದು ಟೋರ್ಚಿ ಒಟ್ಟಿಂಗೇ ಹಿಡ್ಕೊಳ್ಳೆಕ್ಕಾಗಿದ್ದೋಳಿ ಇನ್ನು..” !! 😀
ಕಸ್ತಲೆಲಿ ಚಿಟ್ಟೆಲಿ ಕೂದೊಂಡಿತ್ತಿದ್ದ ಆರೋ ಒಬ್ಬ ಹೇಳೋದು ಕೇಳಿತ್ತು – “ಸತ್ಯಣ್ಣಂಗೆ ಇದರಿಂದ ಒಂದು ನುಸಿ ಬೇಟು ಕೈಲಿ ಹಿಡ್ಕೊಂಬಲಾವ್ತಿತ್ತು”!
“ಆನೆಂತ ಶಬ್ದವೇಧಿ ಕಲಿವಲೆ ಹೆರಟವನಾ”?! – ಸತ್ಯಣ್ಣನೂ ಒಳಂದೊಳವೇ ಹೇಳಿಗೊಂಡ 😀
~~     
2.
ಮಂಗ್ಳೂರ ಹೋಬಳಿಲಿ ಅಡಿಗೆ ಸತ್ಯಣ್ಣನ ಅಡಿಗೆಂದಲೂ ಬಲ ಅಡಿಗೆ ಸತ್ಯಣ್ಣನ ಒಗ್ಗರಣೆ ಹೇದು ಹೆಸರು ಎತ್ತಿತ್ತು ಉತ್ತರಕನ್ನಡಕ್ಕೆ..
ಉತ್ತರಕನ್ನಡದ ಹೆಗ್ಡೆಕಟ್ಟಂದ ಸತ್ಯಣ್ಣಂಗೆ ಹೇಳಿಕೆ ಬಂತು ‘ಎಂಗ್ಳಲ್ಲಿ ಅಗತ್ಯ ಬಂದು ನಿಂಗ್ಳ ಕೈಂದ್ಲೇ ಅಪ್ಪೆಹುಳಿ ಮಾಡಿ ಕೊಡಾವು’ ಹೇದು..
ಓಟೆ ಹುಳಿಯನ್ನೂ, ಬೀಂಪುಳಿಯನ್ನೂ ಕಚ್ಚಿ ಕಚ್ಚಿ ತಿಂದು ಗೊಂತಿಪ್ಪ ಅಡಿಗೆ ಸತ್ಯಣ್ಣಂಗೆ ‘ಅಪ್ಪೆಹುಳಿ’ ಹೇದರೆ ಎಂತ ಕಾಡ ಹುಲಿಯ ಕಟ್ಟಿ ಹಿಂಡುತ್ತಾಂಗಿಪ್ಪ ಕೆಲಸವೋ!
ಸತ್ಯಣ್ಣ ಫೋನಿಲ್ಲಿಯೇ ಹೇಳಿ ಬಿಟ್ಟ – “ಮಾವಿನ್ಕಾಯ್ ತೆಗ್ದು ಇರ್ಸಿ., ಅಪ್ಪೆಹುಳಿ ಮಾಡೋವ, ಆದ್ರೆ ನಂಗೆ ಮಾಂತ್ರ ಕುಡಿಸ್ಲಾಗ ಅಷ್ಟೇ” 😀
ಸತ್ಯಣ್ಣಂಗೆ ಮದಲು ಒಂದರಿ ಅಪ್ಪೆಹುಳಿ ಎಂಟುಗ್ಲಾಸು ಕುಡುದು ಒರಕ್ಕು ಬಿರಿಯದ್ದ ಅಮಲಿಲಿ ಬಾಕಿಯಾದ್ದು ಗ್ರೇಶಿ ಚಳಿ ಕೂದತ್ತು 😀
~~
3.
ಅಡಿಗೆ ಸತ್ಯಣ್ಣ ಬನ್ಸ್ ನ ಗುಟ್ಟು ರಟ್ಟು ಮಾಡಿದ್ದದು ಬೈಲಿಲಿ ಪೂರಾ ಪ್ರಚಾರ ಆಗಿಹೋತು..
ಬೈಲಿಲಿ ಮಾಂತ್ರ ಅಲ್ಲ..,  ಅದು ಶುದ್ದಿ ಪೇಟಗೂ ಎತ್ತಿತ್ತು..
ಮನ್ನೆ ಮನ್ನೆ ವೊರೆಂಗೆ ಜೋರು ಖಾಯಸ್ಸಾಗ್ಯೊಂಡಿತ್ತಿದ್ದ ಹೋಟ್ಳುಗಳಲ್ಲಿ ಬನ್ಸ್ ತಿಂಡಿ ಮಾಡ್ತದರ್ನೇ ನಿಲ್ಸೇಕ್ಕಾಗಿ ಹೋತು..
ಬಾಳೆಣ್ಣು ಮಾರಾಟ ಮಾಡ್ತವಕ್ಕೂ ಉದಿಯಪ್ಪಗ ಒತ್ತರೆ ಮಾಡ್ಳೆ ರಾಶಿ ರಾಶಿ ಸೇರ್ಲೆ ಸುರುವಾತು..
ಹೀಂಗಾರೆ ಈ ಪಂಚಾತಿಗೆ ಆಗ ಹೇದು ಬಾಳೆಣ್ಣು ಮಾರ್ತೋರು, ಹೋಟ್ಳಿನೋರು ಸೇರಿಗೊಂಡು ಸತ್ಯಣ್ಣನ ಮಾತಾಡ್ಸಲೆ ಬಂದವು..
ಸತ್ಯಣ್ಣ ಅಕೇರಿಗೆ ಒಂದು ಉಪಾಯ ಹೇದಾ °..-  “ಕೊಟ್ಟ ಸ್ಟೇಟ್‍ಮೆಂಟು ಹಿಂದಂಗೆ ತೆಕ್ಕೊಂಡ್ರೆಲ್ಲ ಸಮ ಆಗ, ಅಡಿಗೆ ಸತ್ಯಣ್ಣ ಬನ್ಸ್ ತಿಂಬ ಫಟವ ಮಾಡ್ಸಿ ಎಲ್ಲ ಹೋಟ್ಳುಗಳಲ್ಲಿ, ಬಾಳೆಣ್ಣು ಅಂಗಡಿಲಿ ನೇಲ್ಸುವೊ°”.
ಇದು ಕೆಣಿ ಅಪ್ಪಾದ್ದೇ ಹೇದು ಮರುದಿನಂದಲೇ ಸುರುವಾಯ್ದಡದಾ ಅಡಿಗೆ ಸತ್ಯಣ್ಣ ನೆಗೆಮಾಡ್ಯೊಂಡು ಕಳಿತ (ಕೊಳೆದ ಅಲ್ಲ) ಬಾಳೆಣ್ಣು ಬನ್ಸ್ ತಿಂಬ ಫಟ – “ಅಡಿಗೆ ಸತ್ಯಣ್ಣನ ಪ್ರೀತಿಯ ಬನ್ಸ್ ..” . ರೇಟು ಮಾಂತ್ರ ಬದಲಿದ್ದೆಲ್ಲೆಡಪ್ಪ ..
ಕಾರ್ಟೂನಣ್ಣಂಗೆ ಕೈಬೇನೆ ಗುಣ ಆದಿಕ್ಕೋ ಈಗ?, ಫಟಂಗೊ ಇನ್ನು ಅಲ್ಪ ಬೇಕಕ್ಕಲ್ಲದ 😀
~~ 
4.
ಬಾಳೆಣ್ಣು ಬನ್ಸ್ ಎಡ್ವೆಟೈಸುಮೆಂಟು ಜೋರು ಜೋರು ಸುರುವಾತು..
ಅಡಿಗೆ ಸತ್ಯಣ್ಣನ ಫಟ ಎಷ್ಟು ಜೆನ್ರ ಕೈಲಿ ಇದ್ದರೂ ಅಧಿಕೃತವಾಗಿ ಹಾಕೇಕ್ಕಾರೆ ಸತ್ಯಣ್ಣನ ಒಪ್ಪಿಗೆ ಇಲ್ಲದ್ದೆ ಆಗನ್ನೇ..
ಅವ್ವವ್ವು ಬಂದು ಅಡಿಗೆ ಸತ್ಯಣ್ಣನತ್ರೆ ಫಟ ಕೇಳ್ವವೇ..
ಅಡಿಗೆ ಸತ್ಯಣ್ಣ ಹೇದಾ° – ಇದಾ.. ಫಟ ಹಾಕುತ್ತರೆ ಎನ್ನ ಆ ನೀಲಿ ಅಂಗಿದೇ ಹಾಕೆಕು. ಬೇರೆ ಫಟಂಗ ಬೇಡ..
ಆರೋ ಒಬ್ಬ° ಭಾವಯ್ಯ ಕೇಳಿಯೇ ಬಿಟ್ಟ° – “ಅದೆಂತ ಸತ್ಯಣ್ಣ ಬೇರೆ ಎಷ್ಟು ಫಟ ಇದ್ದರೂ ಆ ನೀಲಿ ಅಂಗಿದೇ ಆಯೇಕು ಹೇದು?!”
ಅಡಿಗೆ ಸತ್ಯಣ್ಣಂಗೆ ಹುಗ್ಗಿಸಿ ಮಾತಾಡ್ಳೆ ಎಲ್ಲ ಅರಡಿಯ.. ಇಪ್ಪದರ ಇಪ್ಪಾಂಗೆ ಓಪನ್ ಆಗಿ ಹೇಳಿಕ್ಕುಗು..
ಸತ್ಯಣ್ಣ ಆ ಭಾವಯ್ಯನ ಕೆಮೆಗೆಂಡೆ ಹತ್ರೆ ಗುಟ್ಟಿಲ್ಲಿ ಸಣ್ಣಕೆ ಹೇದಾ°….“ಅದು… ಶಾರದೆಯ ತಂಗೆ ವಿದ್ಯಾ ಇದ್ದಲ್ಲದಾ… ಆ ಫಟಲ್ಲಿ ನಿಂಗೊ ತುಂಬ ಚಂದಕ್ಕೆ ಕಾಣುತ್ತಿ ಭಾವ” ಹೇದು ಹೇಯ್ದು. 😀
 
~~
5.
ಪೆಟ್ರೋಲಿಂಗೆ ಚಿನ್ನಕ್ಕೆ ರೇಟು ಏರುತ್ತದು ಇಂದು ನಿನ್ನೆದೆಲ್ಲ..
ಆ ಬಗ್ಗೆ ಎಲ್ಲೋರಿಂಗೂ ತಲೆಬೆಶಿಯೇ..
ವರುಶಕ್ಕೆಷ್ಟು ಸರ್ತಿ ಹೇದಲ್ಲ , ತಿಂಗಳಿಂಗೆಷ್ಟು ಸರ್ತಿ ಅಲ್ಲ ದಿನಕ್ಕೆಷ್ಟು ಸರ್ತಿ ಹೇಳ್ವಲ್ಯಂಗೆ ಎತ್ತುತ್ತಿನ್ನೀಗ..
ಅನುಪ್ಪತ್ಯದಡಿಗೆ ಎಡಕ್ಕಿಲ್ಲಿ ಒಬ್ಬ ಅಡಿಗೆ ಕೊಟ್ಟಗ್ಗೆ ಬಂದ ಭಾವಯ್ಯ ಹೇದ° – “ ಪೆಟ್ರೋಲಿಂಗೆ ವಾಪಾಸು ಏರಿತ್ತನ್ನೇ ಸತ್ಯಣ್ಣ..!, ವಾಪಾಸು ಅಂಬಗ ಸ್ಟ್ರೈಕು, ಬಂದ್ ಅಕ್ಕನ್ನೇ!!”
ಸತ್ಯಣ್ಣಂಗೆ ಅಲ್ಲದ್ದೆ ತಲೆಬೆಶಿ ., ಹೇದಾ° – ಅಪ್ಪು.., ಈ ಪೆಟ್ರೋಲಿಂಗೆ ಏರಿತ್ತು ಹೇದು ಇವು ಎಂತಕ್ಕಪ್ಪಾ ಇಲ್ಲ್ಯೆಲ್ಲ ನಿಂದೊಂಡು ಗೌಜಿ ಮಾಡಿ ಉಪದ್ರ ಮಾಡ್ತದು. ಹೋಗಿ ಆ ಏರುಸುತ್ತವರ ಹಿಡುದು ಕಟ್ಟಿ ಹಾಕಿ ನಾಕು ಜೆಪ್ಪಲಾಗದ! 😀
~~
6.
ಅಡಿಗೆ ಸತ್ಯಣ್ಣಂಗೆ ದಣಿಯ ಭಾಷೆಗೊ ಗೊಂತಿಲ್ಲದ್ರೂ ಕೈಕರಣ ಮಾಡಿ ಎಲ್ಲಿ ಹೋದರೂ ಬದ್ಕಲೆ ಎಡಿಗು ಹೇಳ್ವ ನಂಬಿಕೆ..
ವಿಮಾನಲ್ಲಿ ಹೋಪಗಳೂ ಈ ವಿದ್ಯೆಯೇ ಅವಂಗೆ ಅನುಕೂಲಕ್ಕೆ ಸಿಕ್ಕಿದ್ದದು..
ಹೀಂಗಿಪ್ಪಗೆ  ಒಂದರಿ ಅಡಿಗೆ ಸತ್ಯಣ್ಣಂಗೆ ಕಾಶ್ಮೀರಕ್ಕೆ ಹೋಯೇಕ್ಕಾಗಿ ಬಂತು ಒಂದು ಅನುಪ್ಪತ್ಯಕ್ಕೆ ಇತ್ಲಾಗಿಂದ ಹೋವ್ತೋರ ಸೆಟ್ಟಿಲ್ಲಿ..
ಸತ್ಯಣ್ಣ ಅಡಿಗೆ ಕೆಲಸಲ್ಲಿ ಇಪ್ಪಗ ಅಲ್ಯಾಣವ° ಒಬ್ಬ° ಅಡಿಗೆ ಕೊಟ್ಟಗ್ಗೆ ಬಂದ°..
ಅಡಿಗೆ ಸತ್ಯಣ್ಣ ಬಂದವನತ್ರೆ ಏನು ಹೇದು ಹೆಬ್ಬಟೆ ಬೆರಳ ಕುತ್ತಮಾಡಿ ಕೈಭಾಷೆ ಮಾಡಿ ಮಾತಾಡ್ಸಿದ°..
ಬಂದವ° ಕೂಡ್ಳೆ ಒಂದು ಗ್ಲಾಸು ನೀರು ತೆಗದು ಅಡಿಗೆ ಸತ್ಯಣ್ಣನ ಕೈಲಿ ಕೊಟ್ಟ!..  🙁
ನಾವು ಹೆಬ್ಬಟೆ ಬೆರಳ ನೆಗ್ಗಿ ಏನು ಕೇಳ್ತದು ಅಲ್ಲಿ ನೀರು ಬೇಕು ಹೇಳ್ವ ಸಂಜ್ಞೆ !
ನೀರು ಬೇಡ ಮಾರಾಯ ಹೇದು ಕೈಭಾಶೆ ಮಾಡಿ ಹೇಳಿ ಆತು ಮತ್ತೆ..
ಮತ್ತೆ ಅಡಿಗೆ ಸತ್ಯಣ್ಣ ತಾನು ಅಡಿಗೆ ಮಾಡ್ತಾ ಇಪ್ಪದು ಹೇದು ಸೌಟು ತಿರುಗಿಸಿ ತೊಳಚ್ಚುತ್ತ ಏಕುಟು ಮಾಡಿದ°..
ಬಂದ ಜೆನ ರೊಟ್ಟಿ ತಟ್ಟುತ್ತ ಕೈಕರಣ ಮಾಡಿ ಹೇತು – “ನೀನು ಅಡಿಗೆ ಮಾಡ್ತಾ ಇಪ್ಪದೋ?!
ಅಲ್ಲಿ ರೊಟ್ಟಿ ತಟ್ಟುತ್ತ ಏಕುಟು ಅಡಿಗೆ ಮಾಡ್ತ ಕೈಬಾಶೆಡ !
ಇದಾಗಪ್ಪ ಇವರ ಅವತಾರ ಹೇದು ಅಡಿಗೆ ಸತ್ಯಣ್ಣ ಹೆಗಲ ತುಂಡ ತೆಗದು ಮೋರೆ ಬೆಗರು ಉದ್ದಿಗೊಂಡ 😀
 
~~
7.
ಅಡಿಗೆ ಸತ್ಯಣ್ಣಂಗೆ ಕೆಲವೊಂದರಿ ರಂಗಣ್ಣನ ಬಿಂಗಿ ಕೊಂಗಿ ನೋಡಿ ಪಿಸುರು ಬತ್ತದಾದರೂ ಹೋದೆಲ್ಲೆಲ್ಲಾ ಅದರ ತೋರ್ಸಿಗೊಂಬಲೆ ಇಲ್ಲೆ.. , ನಾಕು ಜೆನರ ಎದುರಿಲ್ಲಿ ರಂಗಣ್ಣನ ಬೈವಲಿಲ್ಲೆ..
ರಂಗಣ್ಣನ ಹಿಡುದು ಎರಡ ಒಗವಲಾಗದೋ ಹೇದು ಕೆಲವೊಂದರಿ ಕೆಲವು ಭಾವಂದ್ರು ಸತ್ಯಣ್ಣಂಗೆ ಹೇಳಿದ್ದದೂ ಇದ್ದು..
ಅಡಿಗ್ಗೆ ಹೋಪದಾಗಿರಲಿ, ಪರಿಕರ್ಮಕ್ಕೆ ಹೋಪದಾಗಿರಲಿ ಹೋದವು ಒಗ್ಗಟ್ಟಾಗಿರೆಕು ಹೇಳ್ವದು ಸತ್ಯಣ್ಣನ ಅಭಿಪ್ರಾಯ..
ಸತ್ಯಣ್ಣ ಹೇದಾ° – “ಒಟ್ಟಿಂಗೆ ಬಂದವರ ನಾಕು ಜೆನರ ಎದುರು ಅಥವಾ ಮನೆಯವರ ಎದುರು ನಾವೇ ನೆಗೆಮಾಡಿರೆ, ಬೈದರೆ, ತಾತ್ಸಾರಂದ ನೋಡಿರೆ.., ಅದು ಮೇಗೆ ನೋಡಿ ತುಪ್ಪಿದಾಂಗೇ. ಮನೆಯೋರೂ ಮತ್ತೆ ಮರ್ಯಾದಿ ಕೊಡವು. ಅತ್ತಿತ್ತೆ ಅರ್ಥಮಾಡಿಗೊಂಡು ಎಜೆಸ್ಟು ಮಾಡಿಗೊಂಡು ಕೆಲಸ ಮಾಡಿರೆ ಕಾರ್ಯಕ್ರಮಕ್ಕೇ ಚಂದ”.
ಇದು ಕೇಳಿದವಂಗೂ ಅರ್ಥ ಅಕ್ಕು – ‘ಮಾತಿನ ಪೆಟ್ಟಿಂಗೆ ಅಡರಿನ ಪೆಟ್ಟು ಸಮವೋ’!  😀
~~
8.
ಅಡಿಗೆ ಸತ್ಯಣ್ಣ ಆಟ ನೋಡ್ತದು ಎಷ್ಟೆಯೋ ಅಷ್ಟೇ ರಂಗಣ್ಣನೂ..
ನೋಡಿದ್ದಿಲ್ಯೋ ಕೇಳಿರೆ ನೋಡಿದ್ದು… ಹಾಂಗೇಳಿ ಇರುಳಿಡೀ ಕೂಯ್ದಿಲ್ಲೆ ಎಲ್ಯೂ..
ಮನ್ನೆ ನೀರ್ಚಾಲಿಲಿ ಆಟ ಹೇದು ಭಾರೀ ಪ್ರಚಾರ ಇತ್ತಿದ್ದು.. ಸತ್ಯಣ್ಣ ಮೋರೆಪುಟಲ್ಲಿಯೂ ಆ ವಿಷ್ಯ ನೋಡಿತ್ತಿದ್ದ!..
ಭರ್ಜರಿ ಮಳೆಗಾಲ  ಆದಕಾರಣ ಅನುಪ್ಪತ್ಯ ಇತ್ತಿಲ್ಲೆ ಅಂದು..
ಕಾಲವೀಳ್ಯಕ್ಕೆ ಅಡಿಗೆ ಸತ್ಯಣ್ಣನೂ ರಂಗಣ್ಣನೂ ಎರಡು ಬೇರೆ ಬೇರೆ ಬೈಕಿಲ್ಲಿ ನೀರ್ಚಾಲಿಂಗೆ ಎತ್ತಿರೂ ಬೈಕು ನಿಲ್ಸಲೆ ಎಲ್ಯೂ ಜಾಗೆ ಇತ್ತಿಲ್ಲೆ.. ಅಲ್ಯಾಣ ಮಟ್ಟಿಂಗೆ ಜೆನಸಾಗರವೇ.
ಮೇಗಾಣ ಸೊಸೈಟಿ ಹತ್ರಂದ ಇತ್ಲಾಗಿ ಕನ್ನೆಪ್ಪಾಡಿ ಕಾಲುವಾಶಿಮುಟ್ಟ ಎಲ್ಲಿ ನೋಡಿರೂ ಕಾರು ಬೈಕು ಬಿಟ್ಟಿಕ್ಕಿ ಹೋಗಿತ್ತವು. ಎಲ್ಲಿಯೂ ತುರ್ಕಿಸಿ ಕರೆಲಿ ದೂಡಿ ಮಡಿಗಕ್ಕಲೆ ಎಡಿಯ..
ಅಂದರೂ ಹೇಂಗೋ ಖಂಡಿಗೆ ಮಾರ್ಗಲ್ಲಿ ಅರೆವಾಶಿ ದೂರ ಹೋಗಿ ಒಂದು ಬೀಜದಮರದಡಿಲಿ ಬೈಕಿಂಗೆ ಜಾಗೆ ಆತು..
ವಿಸೇಷ ಜೆನಂಗೊಕ್ಕೆ ಮೀಸಲಾತಿ ಕುರ್ಚಿ ಸಾಲಿಲ್ಲಿ ಸತ್ಯಣ್ಣ-ರಂಗಣ್ಣಂಗೆ ಆಸನ ವ್ಯವಸ್ಥೆ ಆತು..  ಆಟ ಸುರುವಾತು.. ಜೋರು ಜೋರು ರೈಸಿಗೊಂಡಿತ್ತು..
ರಂಗಣ್ಣ ಕೇಳಿದ° …ಅಪ್ಪೋ ಮಾವ°,  ಇವು ಕೊಣಿತ್ತದು ಕಾಣುತ್ತು ಆದರೆ ಒಬ್ಬನೈಲ್ಯೂ ಕತ್ತಿ ಇಲ್ಲೆ ! 😀
ಸತ್ಯಣ್ಣ ಹೇದ° – ತಳಿಯದ್ದೆ ಆಟ ನೋಡು ಮಾರಾಯ.. ಕೈಲಿ ಬಿಲ್ಲು ಬಾಣ ಇದ್ದಲ್ಲದ .. ಸಾಕು., ಬಡಿಗೆ ಮುರುದ ಮತ್ತೆ ಕತ್ತಿ 😀
~~
 9.
ಅಡಿಗೆ ಸತ್ಯಣ್ಣಂಗೆ ಪ್ರಪಂಚ ಬದಲುತ್ತ ಇದ್ದು ಹೇಳ್ವದು ವೇದ್ಯ ಆಯ್ದು..
ಕಾಲಕ್ಕೆ ತಕ್ಕ ಕೋಲ ಹೇಳ್ವದು ಸತ್ಯ ಆದರೂ ಒಂದರಿಯಂಗೇ ಒಗ್ಗಿಸಿಗೊಂಬಲೆ ರಜಾ ಬಂಙ ಆವ್ತು..
ಹಾಂಗಾಗಿ ಅದಾ ಅಡಿಗೆ ಸತ್ಯಣ್ಣನೂ ಪಲ್ಸರು ಬೈಕು, ಮಾರುತಿ ಕಾರು, ರಂಗಣ್ಣನ ಮೊಬೈಲು, ಡೆಲ್ಲು ಕಂಪ್ಲೀಟರು, ಓಯಿಲು ಸೀರೆ… ಹೀಂಗೆ  ಒಂದೊಂದೇ ಎಲ್ಲ ಸೌಕರ್ಯ ಮಾಡಿಗೊಂಡದು..
ಹೀಂಗಿಪ್ಪಗ ಓ ಮನ್ನೆ ಯುಕೆಲಿಪ್ಪ ಕುಂಟಾಂಗಿಲ ಬಾವನ ಪೈಕಿಯೋರಿಂಗೆ ಅಡಿಗೆ ಸತ್ಯಣ್ಣನತ್ರೆ ಮಾತಾಡೇಕು ಹೇದು ಆತು..
ಫೋನಿಲ್ಲಿ ಮಾತಾಡಿರೆ ಅಲ್ಪ ಬಿಲ್ಲು ಆವ್ತು., ಹೇಂಗೂ ಕಂಪ್ಯೂಟ್ರು ಇದ್ದನ್ನೇ, ಅದರ್ಲೇ ಸ್ಕೈಪು ಇದ್ದನ್ನೆ ಅದರ್ಲಿ ಮಾತಾಡುವೋ ಹೇದು ಸಮಯ ನಿಘಂಟು ಮಾಡ್ಯೊಂಡವು..
ಮನೆಲಿ ಕಂಪ್ಯೂಟರ ಇದ್ದರೂ ಅದರ ಗುರುಟ್ಳೆ ರಮ್ಯಾನೋ ರಂಗಣ್ಣನೋ ಆಯೇಕ್ಕಷ್ಟೇ..
ಅಂದರೂ ಒಂದು ಕೈ ನೋಡಿಕ್ಕುವೋ ಹೇದು ಸ್ಕೈಪಿಲ್ಲಿ ಮಾತಾಡ್ಳೆ ಕೂದೊಂಡ ಅಡಿಗೆ ಸತ್ಯಣ್ಣ..
ಆಚಿಗೆಂದ ಮಾತಾಡ್ತದು ಈಚಿಗಂಗೆ ಅಡಿಗೆ ಸತ್ಯಣ್ಣಂಗೆ ಕೇಳುತ್ತು.., ಈಚಿಗೆಂದ ಅಡಿಗೆ ಸತ್ಯಣ್ಣ ಮಾತಾಡ್ತದು ಆಚಿಗಂಗೆ ಕೇಳುತ್ತಿಲ್ಲೆ!
ಅದೂ ಇದೂ ಪರಡಿ ನೋಡಿ ಆತು, ಸೆಟ್ಟಿಂಗೂ ನೋಡಿ ಆತು.., ಎಂತ ಮಾಡಿರೂ ಅಡಿಗೆ ಸತ್ಯಣ್ಣ ಮಾತಾಡ್ತದು ಆಚಿಗಂಗೆ ಕೇಳುತ್ತಿಲ್ಲೆ.
ಆಚಿಗಾಣ ಬಾವ ಕೇಟ- ಪಿನ್ನು ಕುತ್ತಿದ್ಯೋ ಸತ್ಯಣ್ಣ.
ಸತ್ಯಣ್ಣ ಹೇದ° – ಕುತ್ತಿದ್ದೆ, ಅಷ್ಟು ಬೋಸ ಅಲ್ಲ ಆತಾ
ಆಚಿಗಾಣ ಬಾವ – ಎರಡು ಪಿನ್ನೂ ಕುತ್ತಿದ್ಯಾ?
ಸತ್ಯಣ್ಣ – ಎರಡು ಎಲ್ಲ ಬೇಡ ಇದಕ್ಕೆ. ಇದನ್ನೇ ಮೊಬೈಲಿಂಗೂ ಕುತ್ತಿ ಆನು ಮಾತಾಡ್ತೆ . ಒಂದೇ ಕುತ್ತಲಿಪ್ಪದು.
ಆಚಿಗಾಣ ಬಾವ – ಅಪ್ಪೋ! ಯೇವುದರ ಅಂಬಗ ನಿಂಗೊ ಕುತ್ತಿದ್ದು ?
ಸತ್ಯಣ್ಣ – ಅದುವೇಯೋ°… ಈ ಮೊಬೈಲಿಲ್ಯೂ ಕೆಮಿಗೆ ಕುತ್ತಿ ಮಾತಾಡ್ತಾಲ್ಲದಾ. ಅದೇ ವಯರು.
ಆಚಿಗಾಣ ಬಾವ – ಹೆಲಾ ಮಲಾಮತ್ತೇ..! ಅದು ಈಯರ್ ಫೋನು ಮೊಬೈಲಿಂಗೆ ಕುತ್ತುತ್ತದು. ಕಂಪ್ಯೂಟರಿಂಗೆ ಕುತ್ತಲೆ ಹೆಡ್ಫೋನು ಬೈಕು ಸತ್ಯಣ್ಣ.
ಅಂಬಗ ಈಗ ಆನೇ ಬೋಸನೋ!”  ಹೇದು ಟೈಪಿಸಿಕ್ಕಿ  ಕೈ ಬಿಟ್ಟ ಅಡಿಗೆ ಸತ್ಯಣ್ಣ 😀
~~

 

 😀 😀 😀

 

17 thoughts on “'ಅಡಿಗೆ ಸತ್ಯಣ್ಣ' ಜೋಕುಗೊ – ಭಾಗ 19

  1. ಸತ್ಯಣ್ಣನ ಅನುಭವದ ಒಂದೊಂದು ಘಟನೆಗಗೊ ಲಾಯಿಕಕೆ ಮೂಡಿ ಬಯಿಂದು.
    ಟೋರ್ಚಿನ ಸ್ವಿಚ್ ಹುಡ್ಕಲೆ ಇನ್ನೊಂದು ಟೋರ್ಚ್, ನೀಲಿ ಅಂಗಿಲಿ ಪಟ ತೆಗೆಕು ಹೇಳ್ಲೆ ಇಪ್ಪ ಕಾರಣ, ಸ್ಕೈಪಿಲ್ಲಿ ಮಾತಾಡ್ಲೆ ಹೆರಟ ಫಜೀತಿ, ಭಾಶೆ ಗೊಂತಿಲ್ಲದವರತ್ರೆ ಕೈ ಭಾಷೆಲಿ ಏಕುಟು, ಎಲ್ಲವೂ ಒಂದಕ್ಕಿಂತ ಒಂದು ರೈಸಿದ್ದು.

  2. 🙂 🙂 ಬೈಲಿಲ್ಲಿಯೂ ಸತ್ಯಣ್ಣ ಬನ್ಸ್ ತಿಂತ ಫಟ ಹಾಕದ್ರೆ ಅವನ ಫೇನುಗೊ ಹೋಟ್ಲಿಲ್ಲಿ ತಿನ್ನ ಇದಾ ಭಾವಾ….

  3. ಶಾಮಣ್ಣ ರಮ್ಯಂಗೆ 19 ಆಗದೋ ಹೇಳಿ. ಎಲ್ಯೋ ಹದ್ನೈದೋ ಹದ್ನಾರೋ ಅಷ್ಟೆ ಅಕ್ಕಟ್ಟೆ !! ಪ್ರಾಯ ಎಟ್ಟಾರು ನವಗೆಂತ ಬೊಜ್ಜೋ..

  4. Chennai bavange koti koti dhanyavadango… Supper aagi batta iddu ningala sathyanna na kathe…. 🙂

  5. ಸತ್ಯಣ್ಣನ ಕಾಮಿಡಿ, ಮೆಡಿ ಉಪ್ಪಿನಕಾಯಿಂದಲುದೆ ರುಚಿ ಇದ್ದಾನೆ. ಭಲೇ ಭಲೇ ಸತ್ಯಣ್ಣ.

  6. ಅದಾ ಅದಾ ನಾನು ಅ೦ದೇ ಹೇಳಿದೆ ಸತ್ಯಣ್ಣ೦ಗೆ.. ಆ ಸಣ್ಣ ಟಾರ್ಚಿನ ಓ ಆ ಮೂಲೆಲಿ ಇನ್ನೂ ಸಣ್ಣಕ್ಕೆ ಸ್ಟಾರ್ * ಮಾರ್ಕ್ ಇದ್ದು.. ಅದೆ೦ತರ ನೋಡಿಯೊಳ್ಳಿ ಒ೦ದಾರಿ ಹೇಳಿ… ರಮ್ಯ೦ಗೆ ಅದೆಲ್ಲಾ ಗೊ೦ತಾವ್ತು ಹೇಳಿ ಅರ್ಜೆ೦ಟಿಲಿ ಟಾರ್ಚಿನ ಕಿಸೆಯೊಳ ಸೇರಿಸಿ ಐದು ರುಪಾಯಿಯ ಟಾರ್ಚಿಗೆ ಮೂರು ರುಪಾಯಿ ಕೊಟ್ಟು ಓಡಿದವು.
    ಹೇಳುಲೆ ಮರದತ್ತು… ಅ೦ಬಗ೦ಬಗ ಬ್ಯಾಟರೀ ಹಾಕುದು ಬೇಡಾ.. ಅದರೆ ಒ೦ದಾರಿ ಬ್ಯಾಟರೀ ಹಾಕಿ ಅದರ ಚಾರ್ಜ್ ಮಾಡ್ತಾ ಇರೆಕ್ಕಾವ್ತು ಹೇಳಿ ಶುದ್ದಿ ಮುಟ್ಟಿಸಿ ಸತ್ಯಣ್ಣ೦ಗೆ .. 😉

    1. (ಒ೦ದಾರಿ ಬ್ಯಾಟರೀ ಹಾಕಿ ಅದರ ಚಾರ್ಜ್ ಮಾಡ್ತಾ ಇರೆಕ್ಕಾವ್ತು)
      ಆತದು…. ಇನ್ನೀಗ ಸತ್ಯಣ್ಣ “ಎನಗೆ ಬೇಡ” ಹೇಳಿ ವಾಪಸು ಕೊಡುಗು. ಬಸ್ಸು ಚಾರ್ಜ್, ರೈಲು ಚಾರ್ಜ್ ಇದ್ದಾಂಗೆ ಈ ಬೆಟ್ರಿಗೂ ಗಡಿ ಗಡಿ ಚಾರ್ಜ್ ಮಾಡೆಕ್ಕು ಹೇಳಿ ಆದರೆ….

  7. Sathyannana ee sarthi kelav pata maadvaali idde.kai beralu bene thakka mattinge guna aathida 🙂 🙂

  8. ನಮ್ಮ ಈ ಸತ್ಯಣ್ಣಂಗೆ ಪ್ರಾಯ ಎಷ್ಟಕ್ಕು?

    1. ಕೋಪಿಸುವಾಗ ದೂರ್ವಾಸನ ಸಮಪ್ರಾಯ,
      ಪಾಕ ಅಪ್ಪಗ ನಳ೦ಗೆ ಕಮ್ಮಿ ಅಲ್ಲ,
      ಕಡವಕಲ್ಲಿನೆದುರು ಭೀಮಣ್ಣ್ ೦ದ ದೊಡ್ಡ,ನಡೆಲಿ ಧರ್ಮಣ್ಣ,.,
      ನಾಟ್ಯ ಪ್ರಕಾರ ಈಗಾಣ
      ಬ್ರಮರಾ೦ಡ(ಬ್ರಹ್ಮಾ೦)ರಜಾ ಹಿ೦ದೇ ಹೇಳುವುದು ರಿಯಾಲಿಟಿ.
      ಈ ಭಾಗದ ಜೋಕುನ ಅ೦ದಾಜಿಲಿ ಟೀನೇಜು-19.
      ಹೊಗೆಸೊಪ್ಪಿನ ಪೀ೦ಟುಸುವ ಅ೦ದಾಜಿಲಿ,ಅರ್ಧಗಡ್ಡ ಶ್ವೇತ ವರ್ಣ.
      ಪಾಯಸ ಕುಡಿದಪ್ಪಗ ರಜಾ ಪಾಸ್ವಾನ್ ಹಾ೦ಗೆ ಕಾಣುತ್ತ ಹೇಳುವುದು ಬೈಲಿನ ಒ೦ದು ತಕರಾರು.

      1. ಇದು ಅದ್ಭುತ ಆಯ್ದು ಮಾವ° !!! 😀

      2. ಹೊಸ ಪ್ರಶ್ಣೆಗಃ
        ೧) ದೂರ್ವಾಸನ ಪ್ರಾಯ ಎಷ್ಟು?
        ೨) ನಳನ ಪ್ರಾಯ ಎಷ್ಟು?
        ೩) ಭೀಮಣ್ಣನ ಪ್ರಾಯ ಎಷ್ಟು?
        ೪) ಧರ್ಮಣ್ಣನ ಪ್ರಾಯ?
        ೫) ಬ್ರಮರಾ೦ಡಂಗೆ ಈಗ ೫೦ ಅಕ್ಕೋ?
        ೬) ಟೀನೇಜು-19 ಮಗಳು ರಮ್ಯಂಗೆ ಅಷ್ಟಾಯ್ದು ಹೇಳ್ಲಕ್ಕು.
        ೭) ಅರ್ಧಗಡ್ಡ ಶ್ವೇತ ವರ್ಣ- ಇದರ ಆಧಾರಲ್ಲಿ ಐವತ್ತು ಅಕ್ಕಾಯ್ತು… ಅಲ್ಲದ?

        1. ೧ ಪ್ರಶ್ನೆ ಕೇಳಿ, ಬಲೆ ಬೀಸಿ ೬-೭ ಉಪಪ್ರಶ್ನೆ ಮಡುಗವ ಕ್ರಮ ಇಲ್ಲೇ ಹೇಳಿ, ಡಿಮಾ೦ಡ್ ಭಾವನ ಬುಲೆಟಿನ್ ಲಿ ಓದಿದ ನೆ೦ಪು.
          ಹಾ೦ಗದಕಾರಣ ಪ್ರಾಯ ಲೆಕ್ಕ ಹಾಕುವುದು,ಇನ್ನಾಣ ಸರ್ತಿಗೆ ಇದ್ದರೆ ಒಳಿತು ಅಲ್ಲದೊ?.

  9. ಸತ್ಯಣ್ನ ಮಿಂಚಿಂಗು ಮಿಂಚಿಗು…. ಟಾರ್ಚ್ ಲೈಟು ಹುಡುಕ್ಕುಲೆ ಇನ್ನೊಂದು ಟಾರ್ಚು ಲೈಟು ಬೇಕಾದ್ದು ಕೇಳಿ… ನೆಗೆ ತಡವಲೆ ಎಡಿಗಾಯಿದಿಲ್ಲೆ…
    ಅಡಿಗೆ ಸತ್ಯಣ್ಣ ಫ಼ೇಸು ಬುಕ್ಕು ಅಕೌಂಟು ಮಾಡಿದ್ದವು ಹೇಳಿ ಕೇಳಿದ್ದೆ!!!!ಸ್ಕೈಪು ಹೊಸ ವಿಶಯ.. ಒಂದರಿ ಮಾತಾಡೆಕ್ಕದ! 🙂 🙂 😀
    ಅಡಿಗೆ ಸತ್ಯಣ್ಣ ಎಸ್ಟು ಓದುಲೆ ಕುಶಿ ಆವ್ತು ಹೇಳಿರೆ .. ಪ್ರತಿ ಎಪಿಸೋಡಿಂಗು ಕಾದು ಕೂಪಾಂಗೆ ಆಯಿದು…. ಭಾರಿ ಲಾಇಕಾಯಿದು ಬರದ್ದು….
    ನವಿರಾದ ಜೋಕುಗು ಮನಸ್ಸಿಂಗೆ ಮುದ ಕೊಡ್ತು.. ಇಲ್ಲಿ ಸತ್ಯಣ್ಣನ ಮುಗ್ಧತೆ ತುಂಬಾ ಕುಶಿ ಆವ್ತು…

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×