- ಬಲೀಂದ್ರಪೂಜೆ – (ಸರಳ ಸಂಕ್ಷಿಪ್ತ ವಿಧಾನ) - October 30, 2020
- ಗೋಪೂಜೆ – (ಸರಳ ಸಂಕ್ಷಿಪ್ತ ವಿಧಾನ) - October 30, 2020
- ತೊಳಶಿ ಪೂಜೆ – ಸರಳ ಸಂಕ್ಷಿಪ್ತ ವಿಧಾನ - October 30, 2020
‘ಅಡಿಗೆ ಸತ್ಯಣ್ಣ’ ಜೋಕುಗೊ – ಭಾಗ ೧ ಓದಿದ್ದೀರನ್ನೇ. (ಸಂಕೋಲೆ) ಓದದ್ರೆ ಅದರ ಮದಾಲು ಓದಿಕ್ಕಿ ಇದಕ್ಕೆ ಬನ್ನಿ. ಇಲ್ಲದ್ರೆ ಇದು ಅರ್ಥ ಆಗ ಇದಾ ..
‘ಅಡಿಗೆ ಸತ್ಯಣ್ಣ’ ಜೋಕುಗೊ – ಭಾಗ ೨ ಇಲ್ಲಿದ್ದು. ಓದಿಕ್ಕಿ ಒಪ್ಪ ಬರದಿಕ್ಕಿ ಆತೋ. ನಿಂಗಳತ್ರೆಯೂ ಏನಾರು ಇದ್ದರೆ ಇತ್ಲಾಗಿ ತಿಳಿಶೆಕದಾ..
~~~~~
1.
ಅಡಿಗೆ ಸತ್ಯಣ್ಣಂಗೆ ಒಂದು ಹಳೆಯ ರೊಮಾಂಟಿಕ್ ಕನ್ನಡ ಚಲನಚಿತ್ರ ನೋಡೆಕು ಹೇಳಿ ಆತು.
ಯಾವುದಕ್ಕು ಹೇಳಿ ಸಿಲೆಕ್ಟ್ ಮಾಡ್ಳೆ ಅವನ ರೈಟ್ ಹೇಂಡ್ ರಂಗಣ್ಣಂಗೆ ಬಿಟ್ಟ°.
ರಂಗಣ್ಣ ಒಂದು ಸಿ.ಡಿ ತಂದ°.
ಅದು ರವಿಚಂದ್ರನ ಪ್ರೇಮಲೋಕ ಚಿತ್ರ.
ಹೇಂಗಾರು ಮರುದಿನ ಅನುಪತ್ಯ ಇಲ್ಲೆ. ಫಿಲ್ಮ್ ನೋಡ್ಳೆ ರಂಗಣ್ಣ ಜೋಯ್ಸಣ್ಣನ ರೇಡಿಯೋ ರಿಪೇರಿ ಅಂಗಡಿ ಸಿಲೆಕ್ಟ್ ಮಾಡಿದ°.
ಉದಿಯಪ್ಪಗ ಕಾಪಿ ಮುಗಿಶಿ ಇಬ್ರೂ ಜೋಯ್ಸಣ್ಣನ ಅಂಗಡಿಗೆ ಹೋಗಿ ಫಿಲ್ಮ್ ನೋಡ್ಳೆ ಸುರುಮಾಡಿದವು.
“ ಏ ನಿಂಬೆ ಹಣ್ಣಿನಂತ ಹುಡುಗೀ ಬಂತು ನೋಡೂ..” ಹಾಡು ನೋಡಿಗೊಂಡಿಪ್ಪಗ ಕರೆಂಟು ಕೈಕೊಟ್ಟತ್ತು.
ಆದರೆ ಸತ್ಯಣ್ಣನ ತಲೆಂದ ಆ ಸೀನ್ ಮಾತ್ರ ಹೋಯ್ದೇ ಇಲ್ಲೆ. ಇರುಳು ಹೋಳಿಗ್ಗೆ ಮಾಡಿದ ಕಾಯಿಹಾಲು ಒಂದು ಚೆಂಬು ಕುಡುದ ಅಮಲೂ ಇದ್ದತ್ತು.
ಅಷ್ಟೊತ್ತಿಂಗೆ ಮಾಬಲ ಮಾಷ್ಟ್ರ ಹೆಂಡತಿ ರೇಡಿಯೋ ರಿಪೇರಿ ಮಾಡುಸಲೆ ಆ ಅಂಗಡಿಗೆ ಬಂತು
ಆ ಹೆಮ್ಮಕ್ಕಳ ನೋಡಿ ಒಂದು ರಾಗ ಎಳದು ಬಿಟ್ಟ° ಸತ್ಯಣ್ಣ° – “ ಏ ನಿಂಬೆ ಹಣ್ಣಿನಂತೆ ಹುಡುಗೀ ಬಂತು ನೋಡೂ..”
.
.
.
ಮಾಬಲಮಾಷ್ಟ್ರ ಹೆಂಡತಿ ಮತ್ತೆ ಮನಗೆ ಹೋಗಿ ಕನ್ನಟಿ ಎದುರು ನಿಂದು ಮನಸ್ಸಿಲ್ಲಿ ಗ್ರೇಶಿಯೊಂಡು ಹೇಳಿತ್ತಡ – “ಪ್ರಾಯ 58 ಆದರೂ ಎನ್ನ ಹುಡುಗಿ ಹಾಂಗೇ ಕಂಡತ್ತಡ..! ಇನ್ನು ತಲಗೆ ಡೈ ಹಾಕೆಕ್ಕೇ”. 😀
~~
2.
ಸತ್ಯಣ್ಣಂಗೆ ಅಡಿಗೆ ವೃತ್ತಿ ಸುರುಮಾಡೆಕ್ಕಾರೆ ಮದಲು ಪೆರ್ಲಲ್ಲಿ ಒಂದು ಸಣ್ಣ ಹೋಟ್ಳು ಇತ್ತಿದ್ದು ಮದಲಿಂಗೆ ಸತ್ಯಣ್ಣಂಗೆ.
ಒಂದಿನ ‘ರಂಗಣ್ಣ’ ಹೋಟ್ಳಿಂಗೆ ಬಂದವನೇ.. ಅಲ್ಲಿತ್ತಿದ್ದ ಸೋಜ° ಹುಡುಗನತ್ರೆ ಕೇಳಿದ° – ‘ಸತ್ಯಣ್ಣ° ಎಲ್ಲಿ?
ಅದು ಹೇಳಿತ್ತು – “ಆರೇಗ್ ಮಾನಸಿಕ” = (ಅವಂಗೆ ಮಾನಸಿಕ°).
ರಂಗಣ್ಣಂಗೆ ಒಂದೇ ಶಾಕ್ ! 🙁
ಮತ್ತೆ ವಿಚಾರಿಸಿ ನೋಡ್ಯಪ್ಪಗ ….. – “ಆರೆನ ಅಪ್ಪೆನ ಮಾಸಿಕ!!” = (ಅವನ ಅಬ್ಬೆಯ ಮಾಸಿಕ!!) 😀
~~
3
ಅಡಿಗೆ ಸತ್ಯಣ್ಣಂಗೆ ಒಂದರಿ MRPL ಎಂಜಿನೀಯರ್ ಮಾಪಣ್ಣ ಬಾವನ ಮನೆಯ ಅನುಪತ್ಯದ ಅಡಿಗಗೆ ಮಂಗಳೂರಿಂಗೆ ಏ.ಸಿ. ಕಾರ್ಲಿ ಕೂದೊಂಡು ಹೋಪ ಅವಕಾಶ ಸಿಕ್ಕಿತ್ತು.
ಸತ್ಯಣ್ಣನ ಶಾಮಿಯಾನದ ಕರೇಲಿ ತಗಡು ಹಾಕಿದ ಅಡಿಗೆ ಕೊಟ್ಟಗಗೆ ಮಾಪಣ್ಣ ಕರಕ್ಕೊಂಡು ಹೋದ°.
ಹೋಳಿಗೆ ಲಟ್ಟುಸುಲಪ್ಪಗ ಸತ್ಯಣ್ಣನ ಪಿತ್ತ ನೆತ್ತಿಗೇರಿತ್ತು.
ಮಾಪಣ್ಣನ ಹೆಂಡತಿ ಹತ್ರೆ ಸತ್ಯಣ್ಣ ಏವ ದಾಕ್ಷಿಣ್ಯ ಇಲ್ಲದ್ದೆ ಹೇಳಿದ° – ” ಏ ಅಕ್ಕೋ., ಈ ಸರ್ತಿ ಆನು ಹೇಂಗೋ ಬಂದಾತು ಬಿಡಿ!, ಮುಂದಂಗೆ ನಿಂಗೊ ಅನುಪತ್ಯ ಮಾಡುವಾಗ ಆಡಿಗೆ ಕೊಟ್ಟಗಗೆ ಒಂದು ಏ.ಸಿ ಫಿಟ್ ಮಾಡ್ಳೆ ಯಜಮಾನ್ರತ್ರೆ ಹೇಳೆಕು. ಇಲ್ಲದ್ರೆ ಆನು ಇನ್ನು ಮುಂದೆ ಅಡಿಗಗೆ ಬಾರ್ಲೇ ಬಾರೆ. ಗೊಂತಾತಿಲ್ಯ?! ” 😀
~~
4
ನೆಡು ಬೇಸಗೆಲಿ ಅಡಿಗೆ ಸತ್ಯಣ್ಣ° ಏವುದೋ ಅನುಪತ್ಯ ಮುಗಿಶಿಕ್ಕಿ ಮನಗೆ ಬತ್ತಾ ಇತ್ತಿದ್ದ°.
ಪೆರ್ಲಕ್ಕೆ ಎತ್ತಿಯಪ್ಪಗ ಬೊಂಡದಂಗುಡಿಂದ ಒಂದು ದೊಡ್ಡಾ ಬೊಂಡ ತೆಗದು ಕುಡಿವೋ ಹೇಳಿ ನಿಂದು ಬೊಂಡ ಕೆತ್ತುಸಿ ಕುಡುದ°.
ವಿಪರೀತ ಸೆಕೆಲಿ ಆಸರಾಗಿತ್ತ ಅವಂಗೆ ಅದು ಸಾಕಾಯ್ದಿಲ್ಯೋ, ನಾಟಿದಿಲ್ಯೋ ಏನೋ ..
ಅಂಗಡಿ ಜೆನರತ್ರೆ ಕೇಳಿಯೇ ಬಿಟ್ಟ°, – ಅಪ್ಪೋ ತ್ಯಾಂಪಣ್ಣ°, ತುಂಬಾ ನೀರಿಪ್ಪ ಬೊಂಡ ಕೊಡು ಹೇಳಿ ಆನು ಕೇಳಿದ್ದಲ್ಲದ ನಿನ್ನತ್ರೆ ? ನೀಯೆಂತಕೆ ಕಮ್ಮಿ ನೀರಿಪ್ಪ ಬೊಂಡ ಕೊಟ್ಟದು??!
ಅಂಗಡಿ ತ್ಯಾಂಪಣ್ಣ° : ಒಂದರಿ ತಳಿಯದ್ದೆ ಕೂರಿ ಸತ್ಯಣ್ಣ ನಿಂಗೊ. ಇಡೀ ದೇಶಲ್ಲೇ ನೀರಿಲ್ಲದ್ದಿಪ್ಪ ಈ ಸಮಯಲ್ಲಿ ಬೊಂಡಲ್ಯಾರು ಎಲ್ಲಿಂದ ಇಕ್ಕು ನೀರು ??!! 😀
~~
5
ಅಡಿಗೆ ಸತ್ಯಣ್ಣಂಗೆ ಕೊಡೆಯಾಲಕ್ಕೆ ಡಾಕ್ಟ್ರ ಕಾಂಬಲೆ ಹೋಪಲಿತ್ತಿದ್ದು..
ಯಜಮಾಂತಿಯುದೇ ಹೆರಟಿದು..
ಸತ್ಯಣ್ಣನ ಮಾರುತಿ800 ಶೆಡ್ಡಿಂದ ಹೆರಟತ್ತದಾ..
ಏವತ್ರಾಣಾಂಗೆ ರಂಗಣ್ಣಂದು ಡ್ರೈವಿಂಗು..
ಪಾಣೆಮಂಗಳೂರಿಂಗೆ ಎತ್ತುವಂದ ಮದಲೆ ರಂಗಣ್ಣ ಕಾರಿನ ಹಳೆಸಂಕಲ್ಲೆ ಕೊಂಡೋಗಿ ಸತ್ಯಣ್ಣನ ಹತ್ರುಪ್ಪಾಯಿ ಒಳುಶುವ ಅಂದಾಜು ಮಾಡಿದ°..
ಸತ್ಯಣ್ಣ° ರಂಗಣ್ಣಂಗೆ ಕೇಳಿದ° – “ಏ ರಂಗಣ್ಣೋ.. ನಮ್ಮದು ಇದಾ ದೊಡಾ ಗಾಡಿ, ಟೂ ವೀಲರ್ ಅಲ್ಲ, ಹಳೆ ಸಂಕಲ್ಲಿ ಈ ಗಾಡಿ ಪಾಸಕ್ಕೋ..”!! 😀
~~
6
ಮೌಢ್ಯಲ್ಲಿ ಬೆಂಗ್ಳೂರಿಂಗೆ ದೊಡ್ಡ ಮಗಳ ಮನಗೆ ಹೋದ ‘ಅಡಿಗೆ ಸತ್ಯಣ್ಣ’ನ್ನುದೇ ಅಳಿಯನುದೇ ಪೇಟೆ ತಿರುಗಲೆ ಹೋದವು..
ಅಳಿಯ° ಮಾವನ ಕಾರ್ಲಿ ಕೂರ್ಸಿಗೊಂಡು ಅಲ್ಲಿ ಇಲ್ಲಿ ಸುತ್ತಿ ತೋರ್ಸಿದ°..
ಅಕೇರಿಗೆ ದೊಡ್ಡ ಅಂಗುಡಿ ಬಿಗ್ ಬಜಾರಿಂಗೆ ಹೋದವು..
ಲಿಫ್ಟಿಲ್ಲಿ ನಿಂದುಗೊಂಡು ಅಳಿಯ° ಹೇಳಿದ° –
“ಮಾಂವ° ನಾವೀಗ ಲಿಫ್ಟಿಲ್ಲಿ ಇದರ ನಾಕನೇ ಮಾಳಿಗ್ಗೆ ಹೋಪದು. ನಿಂಗೊ ಲಿಫ್ಟಿನೊಳ ಬಂದು ನಿಂದರಾತು. ಆನು ಗುಬ್ಬಿ ಒತ್ತುತ್ತೆ. ಬೇಗ ಮೇಗಂತಾಗಿ ಹೋಪಲಾವ್ತು”.
ಸತ್ಯಣ್ಣ° : ಅಳಿಯೋ., ನವಗೆ ಇದೆಲ್ಲ ಬೇಡ. ನವಗೆ ನಮ್ಮೂರಿಲ್ಲಿಪ್ಪ ಪೈಗಳ ಅಂಗುಡಿಯೇ ಸಾಕು. ಅಲ್ಲಿಗೆ ಹೋದರೆ ಹೀಂಗೆ ಮೇಗೆ ಕೆಳ ಅಪ್ಪಲಿಲ್ಲೆ. 😀
~~
7
ಅಡಿಗೆ ಸತ್ಯಣ್ಣ° ಹೇಳಿರೆ ಸೀದಾ ಹೇಳಿರೆ ಸೀದಾ, ಪೆದಂಬು ಹೇಳಿರೆ ಮಹಾಪೆದಂಬನೂ..
ಬಿಗ್ ಬಜಾರು ಎಲ್ಲ ನೋಡ್ಳೆ ಎಂತ ಇಲ್ಲೆ ಊರ ಪೈಗಳ ಅಂಗಡಿಯೇ ಸಾಕು ಹೇಳಿದ ಸತ್ಯಣ್ಣನ ಅಳಿಯ° ಅಲ್ಲಿಂದ ಮೆಜೆಸ್ಟಿಕ್ ಸುತ್ತ ಮುತ್ತ ತೋರುಸಲೆ ಕರ್ಕೊಂಡು ಹೋದ°.
ಮಾರ್ಗದ ಕರೇಲಿಪ್ಪ ಅಂಗುಡಿಗಳ, ತಮಾಷೆಗಳ ನೋಡ್ಯೋಂಡು ರೈಲ್ವೇಸ್ಟೇಶನ್ ಎದುರಾಗಿ ಹೋಗಿಯೊಂಡಿತ್ತವು..
ಅಷ್ಟಪ್ಪಗ ಒಂದು ಜೆವ್ವನಿಗ° ಹರ್ಕು ಅಂಗಿ ಹಾಕ್ಯೊಂಡು ಕಳದ ತಿಂಗಳು ಮಿಂದಾಂಗೆ ಇಪ್ಪದು ಎದುರೆ ಬಂದು ಸ್ವಾಮೀ ಧರ್ಮ ನೀಡಿ, ಎರಡು ದಿನಂದ ಊಟ ಮಾಡಿದ್ದಿಲ್ಲೇ… – ಒರಂಜಲೆ ಸುರುಮಾಡಿತ್ತು.
ಸತ್ಯಣ್ಣ ಅವನ ಕಿಸಗೆ ಕೈ ಹಾಕಿ ಪರ್ಸು ತೆಗದು ಬಿಡಿಸಿ ನೂರು ರುಪಾಯಿ ನೋಟು ತೆಗದು ತೋರುಸಿ – 90 ರುಪಾಯಿಗೆ ಚಿಲ್ರೆ ಉಂಟಾ ಕೇಳಿದ°..
ಆ ಬೇಡ್ತದು – ‘ಹ್ಮ್ಮ್ಮ್ ಉಂಟು ಸ್ವಾಮ್ಯೋರೇ… ‘
ಅಡಿಗೆ ಸತ್ಯಣ್ಣ° : “ಹಾಗಾದ್ರೆ ಮೊದ್ಲು ಅದನ್ನು ಖರ್ಚು ಮಾಡು ಏನು. ಆಮೇಲೆ ಭಿಕ್ಷೆ ಕೇಳು” ಹೇಳಿಕ್ಕಿ ಪರ್ಸಿಲ್ಲಿ ಪೈಸೆ ಮಡಿಗಿ ಕಿಸಗೆ ಹಾಕಿಕ್ಕಿ ಮುಂದೆ ನಡದ°. 😀
~~
8
ಒಂದಿನ ಅಡಿಗೆ ಸತ್ಯಣ್ಣಂಗೆ ಹೊಟ್ಟೆ ಬೇನೆ ಸುರುವಾತು..
ಡಾಕುಟ್ರನತ್ರಂಗೆ ಓಡಿ ಹೋದ ಸತ್ಯಣ್ಣ° – ” ಡಾಕ್ಟ್ರೇ ., ಹೊಟ್ಟೆಬೇನೆ ಹೇಳಿರೆ ಹೊಟ್ಟೆಬೇನೆ., ಕಂಡಾಪಟ್ಟೆ ಹೊಟ್ಟೆಬೇನೆ”..
ಡಾಕುಟ್ರ ಸತ್ಯಣ್ಣನ ಹೊಟ್ಟೆ ಮುಟ್ಟಿ ಟೆಸ್ಟ್ ಮಾಡ್ಳೆ ಸುರುಮಾಡಿದ°..
ಸತ್ಯಣ್ಣ° : “ಡಾಕುಟ್ರೇ., ಎನ ಮದಲೊಂದರಿ ಹೀಂಗೇ ಹೊಟ್ಟೆಬೇನೆ ಆಗಿತ್ತಿದ್ದು. ಅಂಬಗ ಡಾಕುಟ್ರು ಮುಟ್ಟಿ ನೋಡಿ ಕಲ್ಲು ಇದ್ದು ಹೇಳಿ ಮದ್ದು ಕೊಟ್ಟಿದವು. ಈಗಳೂ ಹಾಂಗೆ ಇದಾ ಹೊಟ್ಟೆ ಬೇನೆ. ಅಲ್ಲಿಂದ ಇಲ್ಲಿವರೇಗೂ ಹೊಟ್ಟೆಬೇನೆ. ಹಾಂಗಾಗಿ ಇದು ಕಲ್ಲು ಆಗಿಕ್ಕು..
ಡಾಕ್ಟ್ರೇ., ಕಲ್ಲು … ಕಲ್ಲೇ. ನಿಂಗೊ ಕಲ್ಲಿಂಗೇ ಮದ್ದು ಕೊಡಿ ಈಗ”. 😀
~~
9
ಅಡಿಗೆ ಸತ್ಯಣ್ಣ° ಶಾಲಗೆ ಹೋಪಗಳೇ ರಜಾ ಒಳ್ಳೆತ ಕಿಲಾಡಿ ಜೆನ..
ಒಂದಿನ ಶಾಲೆಲಿ ಸತ್ಯಣ್ಣನ ಕ್ಲಾಸಿಲ್ಲಿ ಒಟ್ಟಿಂಗೆ ಇಪ್ಪ ಬಾಚಣ್ಣ ಶಾಲಗೆ ಬೈಂದನಿಲ್ಲೆ..
ಮರುದಿನ ಬಾಚಣ್ಣ ರಜೆ ಅರ್ಜಿ ಬರದು ತೆಕ್ಕಂಡು ಕ್ಲಾಸಿಂಗೆ ಬಂದ°..
ಮಾಷ್ಟ್ರ ಅದರ ನೋಡಿಕ್ಕಿ – ” ಬಾಚೋ ಓ ಮನ್ನೆ ತಲೆಬೇನೆ ಹೇದು ಒಂದಿನ ರಜೆ ಹಾಕಿದೆ ಸರಿ, ಈಗ ಕಾಲು ಬೇನೆ ಹೇದು ಎರಡು ದಿನ ರಜೆ ಹಾಕಿದ್ದೆನ್ನೇ!?!
ಬಾಚಣ್ಣ° – “ಅಪ್ಪು ಗುರುಗಳೇ., ಎನಗೆ ಎರಡು ಕಾಲಿದ್ದಲ್ಲದ!”
ಕೂಡ್ಳೆ ಸತ್ಯಣ್ಣ ಎದ್ದು ನಿಂದವನೇ – “ಗುರುಗಳೇ, ಇದಾ ಎನಗೆ ಹಲ್ಲುಬೇನೆ..”! 😀
~~
10
ಅಡಿಗೆ ಸತ್ಯಣ್ಣಂಗೆ ಆ ವರ್ಶದ ಹುಟ್ಟು ಹಬ್ಬ..
ರಂಗಣ್ಣ ಸತ್ಯಣ್ಣನ ಮೊಬೈಲಿಂಗೆ ಮೆಸೇಜು ಕಳುಹಿದ° – ‘ಶುಭಾಶಯಗಳು’
ಸತ್ಯಣ್ಣನೂ ಪ್ರತ್ಯುತ್ತರವಾಗಿ ಮೆಸೇಜು ಕಳುಹಿದ° – ‘ಧನ್ಯವಾದಗಳು’
ರಂಗಣ್ಣ ಮತ್ತೆ ಮೆಸೇಜು ಕಳ್ಸಿದ° – ‘ಅಷ್ಟು ಹೇಳಿರೆ ಸಾಲ, ಪಾರ್ಟಿ ಆಯೇಕು. ಎಲ್ಲಿಗೋಪೋ?’
ಸತ್ಯಣ್ಣನೂ ರಿಪ್ಲೈ ಮೆಸೇಜು ಕಳ್ಸಿದ° – ‘ಸಂದೇಶ ರವಾನೆ ವಿಫಲ, ಚಂದಾದಾರರು ವ್ಯಾಪ್ತಿ ಪ್ರದೇಶದಿಂದ ಹೊರಗೆ ಇದ್ದಾರೆ’
ರಂಗಣ್ಣಂಗೆ ಗೊಂತಾತು ಸತ್ಯಣ್ಣಂಗೆ ಇನ್ನೀಗ ಫೋನ್ ಮಾಡಿಯೂ ಪ್ರಯೋಜನ ಇಲ್ಲೆ! 😀
“““` 😀 😀 “““`
tale beshsi yella kadamme auttu bava …..ningala joku odidare….
ಚೆನ್ನೈ ಭಾವ ಜೋಕುಗ ಲಯಕಾಯ್ದು..ಸತ್ಯಣ್ಣನ ಒಂದರಿ ಮುಖತ ಕಂಡು ಈ ಜೋಕುಗಳ ಕೇಳಿರೆ ಜಂಬ್ರಲ್ಲಿ ಒರಕ್ಕು ಕೆಟ್ಟರೂ ಗೋತಾಗ..
ಕಿಲಾಡಿ ಸತ್ಯಣ್ಣನ ಜೋಕುಗಳ ಎರಡನೇ ಬಾಗವುದೆ ಲಾಯಕಾತು. ನಿಜವೇ ಹೇಳಿ ಅನ್ನಿಸುತ್ತು. ಬರಳಿ ಇನ್ನಾಣ ಬಾಗ.
ಚೆನ್ನೈ ಭಾವನ “ಸತ್ಯಣ್ಣನ ಜೋಕು”ಗಳ ಸಂಗ್ರಹ ಕಂಡು ತುಂಬಾ ಕೊಶಿ ಆತು. ಇನ್ನೂ ತುಂಬಾ ಜೋಕುಗೊ ಬೈಲಿಂಗೆ ಬತ್ತಾ ಇರಲಿ.
{4. ….. ಅಂಗಡಿ ತ್ಯಾಂಪಣ್ಣ° : ಒಂದರಿ ತಳಿಯದ್ದೆ ಕೂರಿ ಸತ್ಯಣ್ಣ ನಿಂಗೊ. ಇಡೀ ದೇಶಲ್ಲೇ ನೀರಿಲ್ಲದ್ದಿಪ್ಪ ಈ ಸಮಯಲ್ಲಿ ಬೊಂಡಲ್ಯಾರು ಎಲ್ಲಿಂದ ಇಕ್ಕು ನೀರು ??!! } – ಮುಂದುವರಿದ ಭಾಗ:
ಸತ್ಯಣ್ಣ: ಎಷ್ಟಾತು?
ತ್ಯಾಂಪಣ್ಣ: 20 ರೂಪಾಯಿ
ಅಷ್ಟಪ್ಪಗ ಸತ್ಯಣ್ಣ 10 ರೂಪಾಯಿ ಕೊಟ್ಟಿಕ್ಕಿ ಹೇಳಿದಡ: ಇಡೀ ದೇಶವೇ ಸಾಲಲ್ಲಿ ಇಪ್ಪಗ ಎನ್ನತ್ರೆ ಎಲ್ಲ್ಲಿಂದ ಇಪ್ಪತ್ತು ರೂಪಾಯಿ ಇಪ್ಪದು 🙂 😀 😀
ಅದು ಪಷ್ಟಾಯ್ದು ಮುಣ್ಚಿಕ್ಕಾನ ಭಾವ
Baari ollediddu… Kelasada tension ella ondariye jarrrrrrrrrrane iludattu… 🙂 Abbaaa…. Chennai Bavange dhanyavadanga…
ಒಂದೊಂದು ಘಟನೆಗಳೂ ಲಾಯಿಕ ಆರ್ಯಿದು.
ಶಾಮಣ್ಣ ಇದಕ್ಕೆ ಸೂಕ್ತ ರೇಖಾ ಚಿತ್ರ ಕೊಟ್ರೆ ಹೇಂಗಿಕ್ಕು!!!
ಅಡಿಗೆ ಸತ್ಯಣ್ಣನ ಜೋಕುಗೊ ಲಾಯಿಕ ಬತ್ತಾ ಇದ್ದು…. ನಮ್ಮ ದಿನನಿತ್ಯದ ಜೀವನಲ್ಲೇ ಎಷ್ಟೊಂದು ಹಾಸ್ಯದ ಕ್ಷಣಂಗೊ ಇರ್ತು…. ಅದರ ಗ್ರಹಿಸುವ / ನೋಡುವ ಕಣ್ಣುಗೊ ಬೇಕು ನವಗೆ..