- ಬಲೀಂದ್ರಪೂಜೆ – (ಸರಳ ಸಂಕ್ಷಿಪ್ತ ವಿಧಾನ) - October 30, 2020
- ಗೋಪೂಜೆ – (ಸರಳ ಸಂಕ್ಷಿಪ್ತ ವಿಧಾನ) - October 30, 2020
- ತೊಳಶಿ ಪೂಜೆ – ಸರಳ ಸಂಕ್ಷಿಪ್ತ ವಿಧಾನ - October 30, 2020
1
ಮಾಣಿಮಠಲ್ಲಿ ಮನ್ನೆ ಕನ್ಯಾಸಮಾವೇಶ ಕಳಾತು ಅಲ್ಲದೋ.
ಎಲ್ಲಾ ಕನ್ಯೆಗೊ ಆ ದಿನ ಬಂದು ಸೇರೇಕು – ಹೇದು ಗುರಿಕ್ಕಾರ್ರು ಮನೆಮನೆಗೆ ಹೇಳಿದ್ದವು.
ಸತ್ಯಣ್ಣಂಗೆ ಹೋಗದ್ದೆ ಗೊಂತಿದ್ದೋ? , ರಮ್ಯನ ಪ್ರೆಂಡುಗೊ ಹೋವ್ತ ಕಾರಣ ರಮ್ಯನೂ ಹೋಯೇಕು ಹೇಯ್ದು ಬೇರೆ.
ಅದಲ್ಲದ್ದೆ – ಕಳುದ ವಾರ ತಂದುಕೊಟ್ಟ ದಾಸನ ಬಣ್ಣದ ಹೊಸಾ ಚೂಡಿದಾರು ಹಾಕುತ್ತ ಉಮೇದು ರಮ್ಯಂಗೆ.
ಹೇಂಗೂ ಆ ದಿನ ಪೆಲ್ತಡ್ಕ ತಿಥಿ ಹೇಳಿಕೆ ಮಾಂತ್ರ ಇದ್ದದು, ರಂಗ ಒಬ್ಬನೇ ಸಾಕು.
ಹಾಂಗೆ, ರಂಗಣ್ಣನ ಪೆಲ್ತಡ್ಕಕ್ಕೆ ಹೋಪಲೆ ಮಾಡಿಕ್ಕಿ ಸತ್ಯಣ್ಣ ರಮ್ಯನ ಕರಕ್ಕೊಂಡು ಮಾಣಿಮಠಕ್ಕೆ ಬಂದದು.
ಮಠಕ್ಕೆ ಬಂದು ಬೈಕ್ಕು ನಿಲ್ಲುಸಿ ಆಸರಿಂಗೆ ಕುಡುದಪ್ಪಲೆ ಪುರುಸೊತ್ತಿಲ್ಲೆ, ಓ ಆಚಿಕೆ ರಂಗಣ್ಣನ ತಲೆಕೊಡಿ ಕಂಡತ್ತು.
ಪಿಸುರು, ಆಶ್ಚರ್ಯ – ಎರಡುದೇ ಬಂತು ಸತ್ಯಣ್ಣಂಗೆ!
ಕಶಾಯದ ಗ್ಲಾಸು ಅಲ್ಲಿ ಮಡಗಿದೋನೇ – ಸೀತ ಹೋಗಿ ದುರುಗುಟ್ಟಿ ನಿಂದೊಂಡು ಕೇಟ° – “ತಿತಿ ಅಡಿಗೆ ಮಾಡ್ಳೆ ಹೋಗು ಹೇದರೆ, ಇಲ್ಲಿದ್ದೆಯೋ?! –
“ಅಲ್ಲ ಮಾವ°, ತಿತಿ ಅಡಿಗೆ ಎಲ್ಲ ಬೇಗೆಬೇಗ ಮುಗುಶಿ ಎನ್ನ ಬೈಕನ್ನೇ ಓಡ್ಸಿಗೊಂಡು ಬಂದೆ”, ಹೇಳಿದ° ರಂಗಣ್ಣ°.
ಅಡಿಗೆ ಪೂರ ಮುಗುಶಿದ್ದೆನ್ನೇ – ಹೇದು ಎರಡೆರಡು ಸರ್ತಿ ಧೃಡಮಾಡಿದ ಮತ್ತೆಯೇ ಸತ್ಯಣ್ಣಂಗೆ ಬೀಪಿ ಇಳುದ್ದದು! 😀
ಸಮಾವೇಶದ ಒಳ ಸಭಾಂಗಣಕ್ಕೆ ಹೋಪಗಲ್ಲದ ಸತ್ಯಣ್ಣಂಗೆ ಗೊಂತಾದ್ದದು – ರಂಗಣ್ಣನ ಹಾಂಗೆ “ಬೇಗ ಕೆಲಸ ಮುಗುಶಿ” ಬಂದೋರು ಸುಮಾರಿದ್ದವು ಹೇದು! 😀
**
2
ಅಡಿಗೆ ಸತ್ಯಣ್ಣಂಗೆ ಇದರೆಡಕ್ಕಿಲ್ಲಿ ಮೂಡ್ಳಾಗಿ ಅದೇ ಆ ಮೀಸೆ ಇಲ್ಲದ್ದ ಭಾವಯ್ಯನ ಮನೆಲಿ ಅನುಪ್ಪತ್ಯ.
ಸತ್ಯಣ್ಣ ಅಲ್ಲೆ ಇಪ್ಪಗ ಭಾವಯ್ಯನ ತಂಗೆ ಭಾವಯ್ಯನತ್ರೆ ಹೇಳಿತ್ತಡ ” ಎನ್ನ ಮಾಣಿ ಮಠಕ್ಕೆ ಕರಕ್ಕೊಂಡು ಹೋಗು”
ಸತ್ಯಣ್ಣಂಗೆ ಒಂದರಿಯಂಗೆ ತಲೆ ತಿರಿಗಿತ್ತು., ಎಂತಕೂ ಜಾಗ್ರತೆಗೆ ಆತು ಹೇದು ಆ ತಂಗೈಲಿ ಹೇದ.. ಇದಾ ಮನ್ನೆ ‘ಒಪ್ಪ’ ಕೇಟದು ನೆಂಪಿದ್ದನ್ನೇ ..
ಭಾವಯ್ಯನ್ಗೆ ಚಳಿ ಕೂದತ್ತಡ – ಇಂದು ಇನ್ನು ಆರಾರು ಎಂತೆಂತ ಕೇಳ್ತವೋ ಗೊನ್ತಿಲ್ಲೆ!.
“ನೀನು ನಿನ್ನ ಪ್ರೆಂಡ್ ಗಳೊಟ್ಟಿಂಗೆ ಹೋಗಿಕ್ಕು. ಎನಗೆ ಬೇರೆ ಕೆಲಸ ಇದ್ದು” ಹೇದಿಕ್ಕಿ ಚಾಂಬಿದಡ° ಭಾವಯ್ಯ°. 😀
**
3
ತಿತಿ ಅಡಿಗ್ಗೆ ರಂಗಣ್ಣನ ಕಳುಗಿ ಸತ್ಯಣ್ಣ ಮಗಳೊಟ್ಟಿಂಗೆ ಮಠಕ್ಕೆ ಎತ್ತೊಗ ಹೊತ್ತು ಸುಮಾರು ಆಯಿದು..
ಅಲ್ಲಿ ರಂಗಣ್ಣ ಕಣ್ಣಿಂಗೆ ಬಿದ್ದದು, ಬಿಪಿ ಏರಿ ಎರಡು ಗೌಜಿ ಮಾಡಿದ್ದು ಎಲ್ಲ ಆತನ್ನೆ.
ರಂಗಣ್ಣ ಹೊಸ ವೇಷ್ಟಿ, ಅರಶಿನ ಶಾಲು ಹಾಕ್ಯೋಂಡು ಬಂದವಂಗೆ ಬೇಜಾರಾದ್ದಂತೂ ಸತ್ಯ.
ಚಪ್ಪೆ ಮೋರೆ ಮಾಡ್ಯೊಂಡು ಅಲ್ಲೇ ಅತ್ತಿತ್ತ ಓಂಗಿಗೊಂಡಿಪ್ಪಗ ಓ ಅಲ್ಲಿ ಕಾನಾವಕ್ಕ ಒಬ್ಬನೆ ಕೂದೊಂಡಿದ್ದದು ಕಂಡತ್ತು ರಂಗಣ್ಣಂಗೆ..
ಕುರ್ಶಿ ಎಳದು ಹತ್ತರೆ ಕೂದೊಂಡು ಹೇದ – “ನೋಡಿ ಅಕ್ಕ°, ಆನು ಇದು ಗುರುಗಳ ಕಾಣೇಕು ಹೇದು ಬಪ್ಪದು ಚಾತುರ್ಮಾಸಕ್ಕೆ. ಅದಕ್ಕೂ ಅಡ್ಡಿ ಹೇಳ್ತವು ಮಾವ°!. ಅಂಬಗ ಆನು ಗುರುಗಳತ್ತರೆ ಮಂತ್ರಾಕ್ಷತೆ ಬೇಡುದು ಆಗದೋ!.., ನಿಂಗಳೇ ಹೇಳಿ ಒಂದರಿ.”
“ಶ್ಯೆಲಾ..ಇವನ.! ಇವಂಗೆ ಇಂದೇ ಮುಹೂರ್ತ ಸಿಕ್ಕಿದ್ದೋ, ಇಲ್ಲಿಗೆ ಬಪ್ಪಲೆ, ಅದೂ ಕನ್ಯಾ ಸಮಾವೇಶ ಆಗ್ಯೊಂಡಿಪ್ಪ ದಿನ” ಹಾಂಗೆ ಮನಸ್ಸಿಲ್ಯೇ ಗ್ರೇಶೊಂಡು ಅಕ್ಕ ಹೇದವು- “ಅಕ್ಕು, ಆನು ಹೇಳ್ತೆ ಸತ್ಯಣ್ಣನ ಹತ್ತರೆ”
ರಂಗಣ್ಣ ತಲೆ ಆಡ್ಸಿಗೊಂಡು, ಒಳ ನಡದು ಮೇಲೆ ಬಾಲ್ಕನಿಲಿ ಹೋಗಿ ಕೂದೊಂಡ°.
“ಹೋ..! ಇಲ್ಲಿಂದ ಎಲ್ಲ ಸರೀ…ಕಾಣುತ್ತು”
ಆದರೆಂತ ಮಾಡ್ಸು…. ಈಚಿಗೆ ಕೂದ ಸತ್ಯಣ್ಣಂಗೂ ಆಚಿಗೆ ರಂಗಣ್ಣ ಕೂದ್ದು ಕಾಣುತ್ತು 😀
**
4
ಕನ್ಯಾ ಸಮಾವೇಶ ಆವ್ತಲ್ಯಂಗೆ ಸತ್ಯಣ್ಣ ಬಂದ್ಸು ಆತು. ರಮ್ಯ ಪ್ರೆಂಡುಗಳೊಟ್ಟಿಂಗೆ ಸುದರಿಕಗೆ ಸೇರಿದ್ದೂ ಆತು
ಕೆಲವರ ಕಣ್ಣು ಅಡಿಗೆ ಸತ್ಯಣ್ಣನ ಮೇಗೆಯೇ, ಆದರೆ ಸತ್ಯಣ್ಣಂಗೆ ಯಥಾರ್ಥಕ್ಕೆ ಅದು ಗೊಂತೇ ಇಲ್ಲೆ
ಎಡಕ್ಕಿಲ್ಲಿ ಮೀಸೆ ಇಪ್ಪ ಒಬ್ಬ ಭಾವ° ಅಡಿಗೆ ಸತ್ಯಣ್ಣನತ್ರೆ ಕೂದು ಏನು ತಾನು ಹೇದು ಲೋಕಭಿರಾಮ ಸುರುಮಾಡಿದ°
ಮೀಸೆ ಭಾವಂಗೆ ಒಬ್ಬ ಮಾಣಿ ಇದ್ದ°, ಅವಂಗೂ ಮೀಸೆ ಇದ್ದೋ ಹೇಳ್ಸು ಮುಖ್ಯ ಅಲ್ಲ. ಮಾಣಿ ಇರ್ಸು ಬೆಂಗ್ಳೂರ್ಲಿ, ಕಂಪ್ಯೂಟರ್ ಕುಟ್ಟುತ್ತ ಕೆಲಸ
ಆ ಮಾಣಿಗೊಂದು ಕೂಸಾಯೇಕು ಹೇದು ಈ ಮೀಸೆ ಬಾವ ಹೊಣೆಸ್ಸು ಕೆಲವು ಸಮಯ ಆತು.
ಈ ಪ್ರಾಯಕ್ಕೆ ಬಂದ ಕೂಸುಗಳ ಅಪ್ಪನತ್ರೆ ಮಾತಾಡ್ವಾಗ ರಜಾ ಜಾಗ್ರತೆ ಬೇಕು, ಅರಡಿಯದ್ದೆ ಕೇಟಿಕ್ಕಲೂ ಗೊಂತಿಲ್ಲೆ, ಕೇಟತ್ತುಕಂಡ್ರೆ ಎಂತರ ಉತ್ತರ ಸಿಕ್ಕುತ್ತೋ ಗೊಂತಿಲ್ಲೆ
ಅಂತೂ ಜಾಗ್ರುತೆಲಿ ಮೀಸೆ ಭಾವಯ್ಯ ಕೇಟ – ಸತ್ಯಣ್ಣ° ಈ ವೊರಿಶ ಪಾಚ ಉಂಬ ಏರ್ಪಾಡು ಇದ್ದೋ?
ಸತ್ಯಣ್ಣಂಗೆ ಇವ° ಎಂತ ಕೇಳ್ಸು ಹೇದು ಅಂದಾಜಿ ಆತು, ಸತ್ಯಣ್ಣ ಹೇದ° – “ಇಲ್ಲೆಪ್ಪಾ, ಸದ್ಯಕ್ಕೆ ಬೋಚೆಜ್ಜೆಯೇ” 😀
**
5
ಅಂತು ಇಂತು ಅಡಿಗೆ ಸತ್ಯಣ್ಣ ರಮ್ಯಂಗೆ ಬೇಕಾಗಿ ಕನ್ಯಾ ಸಮವೇಶಕ್ಕೆ ಹೋದ್ದೂ ಆತು, ತಿತಿ ಅಡಿಗೆ ಪಕ್ಕ ಮುಗಿಶಿ ರಂಗಣ್ಣ ಬಂದ್ಸೂ ಆತು.
ಹೊತ್ತೋಪಗ ಮಂತ್ರಾಕ್ಷತೆ ಮುಗುಶಿ ಬ್ರೂ ಒಟ್ಟೊಂಟ್ಟಿಂಗೇ ಹೆರಟು ಅವರವರ ಬೈಕಿನತ್ರೆ ಬಂದವು..
ಸ್ಟೇಂಡು ಜಾರ್ಸಿ ಬೈಕಿಂಗೆ ಮೆಟ್ಟುವಾಗ ಅಡಿಗೆ ಸತ್ಯಣ್ಣ° ರಂಗಣ್ಣನತ್ರೆ ಹೇದಾ° – ಅಪ್ಪೋ ರಂಗ!, ಇಂದು ಕೂಸುಗಳಿಂದ ಹೆಮ್ಮಕ್ಕಳೇ ಹೆಚ್ಚಿಗೆ ಇಲ್ಲಿ ಇತ್ತಿದ್ದದು ಅಪ್ಪೋ ! 😀
**
6
ರಮ್ಯನೊಟ್ಟಿಂಗೆ ಕನ್ಯಾಸಮಾವೇಶಕ್ಕೆ ಹೋದ ಅಡಿಗೆ ಸತ್ಯಣ್ಣನ ಅಲ್ಲಿ ಸುಮಾರು ಕೂಸುಗೆ ಏನು ಒಳ್ಳೆದು ಮಾತಾಡ್ಸಿದ್ದವು.
ಆದಾರೆ ಅದರ್ಲಿ ಸುಮಾರು ಹೊಸ ಮೋರಗಳೇ. ರಮ್ಯನ ಕೋಳೇಜು ಪ್ರೆಂಡುಗೊ.
ಶಾಲೆ ಪ್ರೆಂಡುಗೊ ಆಗಿದ್ರೆ ಸತ್ಯಣ್ಣಂಗೆ ಗುರ್ತ ಇಲ್ಲದ್ದೆ ಇದ್ದಿರ, ಮನೆ ಹತ್ರಾಣ ನೆರೆಕರೆ ಮಕ್ಕಳೇ ಶಾಲೆಲಿ ಇರ್ಸು..
ಅಂದರೂ ಆರಾರು ಅದು ಮಾತಾಡ್ಸಿದ್ದದು ಹೇದು ಸತ್ಯಣ್ಣಂಗೆ ತಿಳಿಯದ್ದೆ ಒರಕ್ಕು ಬಾರ
ಹಸೆ ಬಿಡಿಸಿ ಮನಿಗಿದ ಸತ್ಯಣ್ಣ ರಮ್ಯನತ್ರೆ ಒಂದೊಂದೇ ಕೇಳ್ಳೆ ಸುರುಮಾಡಿದ, ಆ ಉದ್ದ ಜೆಡೆದು ಏವುದು, ಎರಡು ಜೆಡೆದು ಆರು, ಬೆಳಿದು ನೆಗೆ ನೆಗೆ ಮಾಡಿಗೊಂಡು ಮಾತಾಡಿದ್ದು ಆರು, ತಲೆ ಬಗ್ಗುಸಿ ಮಾತಾಡಿಗೊಂಡ್ಯೊಂಡಿದದು ಎಲ್ಯಾಣದ್ದು…
ಸತ್ಯಣ್ಣ° ಮತ್ತಾಣದ್ದು ಕೇಳೇಕಾರೆ ರಮ್ಯ ಒರಗಿ ಆಗಿತ್ತು 😀
**
7
ಅಡಿಗೆ ಸತ್ಯಣ್ಣಂಗೆ ಬೈಲಿನ ಅನುಪ್ಪತ್ಯ
ರಜಾ ಚಿತ್ರನ್ನವೂ ಮಾಡಿಕ್ಕಿ ಹೇಳಿದ° ಮನೆ ಯೆಜಮಾನ°
ಸತ್ಯಣ್ಣ ಮತ್ತೂ ಅನುಮಾನಲ್ಲೇ ಕೇಟ° – ಚಿತ್ರನ್ನ ಬೇಕೋ ?!
ಮನೆ ಯೆಜಮಾನಂಗೆ ಆಶ್ಚರ್ಯ ಆತು ಎಂತ ಇವ° ಹೀಂಗೆ ಡೌಟು ತೋರ್ಸುತ್ತ!
‘ಎಂತ ಸಂಶಯ ?!’ – ಕೇಳಿದ° ಮನೆಯೆಜಮಾನ°
ಸತ್ಯಣ್ಣ ಹೇದ° – ಈಗೆಲ್ಲ ಮೈಸೂರುಪಾಕು ಮಾಡಿರೆ ಮೈಸೂರು ಪಾಕ್‍ಲಿ ಮೈಸೂರು ಎಲ್ಲಿದ್ದು ಕೇಳ್ತವು.. ಇನ್ನು ಚಿತ್ರಾನ್ನ ಮಾಡಿರೆ ಚಿತ್ರ ಎಲ್ಲಿದ್ದು ಕೇಳವೋ ?! 😀
***
8
ಸಾಲೆತ್ತೂರು ವೇಂಕಟಿಯಕ್ಕನಲ್ಲಿ ತಿತಿ ಅನುಪ್ಪತ್ಯ
ಅಡಿಗೆ ಸತ್ಯಣ್ಣ ಉದಿಯಪ್ಪಗ ಹೋಗಿ ಸುರುಮಾಡಿರೆ ಸಾಲ ಹೇದಿದಾ ಮುನ್ನಾಣ ದಿನವೇ ಹೋದ್ದಲ್ಲಿಗೆ
ಕೆಲಸಕ್ಕೆ ಮದಲೆ ಬಂದುಗೊಂಡಿದ್ದ ಸುಂದರಿ ಈಗ ಬಾರದ್ದ ಕಾರಣ ವೇಂಕಟಿಯಕ್ಕಂಗೂ ಅಲ್ಪ ಕೆಲಸಂಗೊ ಮುನ್ನಾಣ ದಿನಕ್ಕೆ ಉದಿಯಪ್ಪಂದಲೇ
ಮನೆಯೊಳ ಹೆರ ಸಗಣ ಬಳುಗೆಕು, ಪಾತ್ರಂಗಳ ತೊಳದು ಬೂದಿ ಉದ್ದಿಮಡುಗೆಕು, ಅದರೆಡಿಲೆ ಊಟದ ಏರ್ಪಾಡೂ ಆಗ್ಯೊಳ್ಳೆಕು
ವೇಂಕಟಿಯಕ್ಕ ಉದಿಯಪ್ಪಳೇ ಮುಂಡಿ ತುಂಡು ತಾಳುದೇ, ಪ್ರೀತಿಂದ ಅಡ್ಕತ್ತಿಮಾರು ಮಾವ ಕಳ್ಸಿಕೊಟ್ಟ ಕಾನಕಲ್ಲಟೆ ಮೇಲಾರವೂ ಮಾಡಿ ಮಡಿಗಿಕ್ಕಿ ಮತ್ತಾಣ ಕೆಲಸ ಸುರುಮಾಡಿತ್ತು.
ಇರುಳಾಣ ಊಟ ಬಳ್ಸಿಯೊಂಡಿಪ್ಪಗ ವೇಂಕಟಿಯಕ್ಕಂಗೆ ಮಜ್ಜಾನದ ಕಾನಕಲ್ಲಟೆ ಮೇಲಾರ ನೆಂಪಾತು. ಸತ್ಯಣ್ಣಂಗೆ ರುಚಿ ನೋಡ್ಳೆ ಆತು ಹೇಳಿ ಉಳುದ್ದರ ಮುಚ್ಚಿಮಡಿಗಿದ್ದಿದ್ದತ್ತು.
ಮೇಲಾರ ಪಾತ್ರ ಹತ್ರಂಗೆ ತಂದು ಬಳ್ಸೆಕ್ಕಾರೆ ಒಂದರಿ ಮೂಸಿ ನೋಡಿತ್ತು, ಯೆಬೇ… ಹಳಸಿದ್ದು.
ವೇಂಕಟಿಯಕ್ಕಂಗೆ ಬೇಜಾರಾಗಿ ತಡೆಯ..
ಇದಾ ಸತ್ಯಣ್ಣ, ಅಡ್ಕತ್ತಿಮಾರು ಮಾವ° ಅಷ್ಟು ಪ್ರೀತಿಂದ ಕೆಲಸದಾಣು ಹತ್ರೆ ಕೊಟ್ಟು ಕಳ್ಸಿದ ಕಾನಕಲ್ಲಟೆ. ಅಷ್ಟು ಲಾಯಕ ಇತ್ತಿದ್ದು. ಮನ್ನೆ ಸುಂದರನತ್ರೆ ಕೊಯಿಶಿದ ಗೆನಾ ಹಣ್ಣು ತೆಂಙಿನಕಾಯಿದೇ. ಗೆನಾ ದಪ್ಪ ಮಜ್ಜಿಗೆಯೂ ಹಾಕಿ ಮೇಲಾರ ಮಾಡಿದ್ಸು.. ಮಧ್ಯಾಹ್ನಕ್ಕೆ ಲಾಯಕ ಇತ್ತಿದ್ದು. ಒಳ್ಳೆ ರುಚೀ ಆಯ್ದುದೇ..
ಸತ್ಯಣ್ಣ ಹೇದಾ° – ಎಲ್ಲ ಅಪ್ಪು. ಎಂತಾರೆಂತ.., ಈಗ ಹಳಸಿತ್ತನ್ನೇ. ಇನ್ನದರ ಎಷ್ಟು ಲಾಯಕಕ್ಕೆ ಆಗ ಇತ್ತಿದ್ದು ಹೇದು ಎಂತ ಗುಣ. ಕರೇಲಿ ಮಡಿಗಿ ಅದರ ಇನ್ನು. ಓ ಇದೆಂತರ ಮುಳ್ಳುಸೌತೆ ಮೇಲಾರವೋ?, ಇತ್ತೆ ಮಡಗಿ ಅದರ” 😀
***
ಕೆಲಾ…ವು ಜೆನ ಮಾಣಿಯಂಗೊ ಅಂದು ಮಠಕ್ಕೆ ಸೆಂಟು ಎಲ್ಲ ಹಾಕಿಯೊಂಡು ಜಿ…ಗ್ಗನೆ ಬಂದಿತ್ತಿದ್ದವು , ಭಾರೀ…ಸುದರಿಕೆಮಾಡಿಯೊಂಡಿತ್ತಿದ್ದವು ಹೇಳಿ ಒಂದು ಸುದ್ದಿ ಇತ್ತಪ್ಪ- ಅಪ್ಪೋ ಸತ್ಯಣ್ಣ?
ನಾಡ್ತು ಮಾಣ್ಯಂಗಳ ಸಮಾವೇಶಕ್ಕೆ ಫೋರಿನ್ ಸೆಂಟು ಹಾಕ್ಯೊಂಡು ನೆಗೆಮಾಣಿ,ಪೆಂಗಣ್ಣ,ಬೋಚಭಾವ ಎಲ್ಲ ಬತ್ತವಡ, ಹಾಂಗೊಂದು ಗುಸು ಗುಸು ಬೈಲಿಲಿ ಆಯಿಕ್ಕೊಂಡಿದ್ದು ಅತ್ತೆ.
ಕನ್ಯಾ ಸಮಾವೇಶ ವಿಶೇಷಾಂಕ ಓದಿ ನೆಗೆ ಮಾಡಿ ಮನಸ್ಸು ಹಗೂರ ಮಾಡಿ ಗೊಂಡೆ !
ಛೆ ! ಕನ್ಯಾ ಸಮಾವೇಶಲ್ಲಿ ಮಹಿಳಾಮಣಿಗೋ ಬಂದು ರಂಗಣ್ಣ೦ಗೆ ಭಾರಿ ಮೋಸ ಆತನ್ನೇ !
hu hu hu ಸತ್ಯಣ್ಣ ರೈಸಿದ್ದ…
ಬೋಚೆಜ್ಜೆ ಪಷ್ಟಾಯಿದಾತೊ…
ನಾಳ್ತಾನ ‘ಮಾಣಿಯ೦ಗಳ ಸಮಾವೇಶ’ ಕ್ಕೆ ರ೦ಗಣ್ಣ ಬೇಗ ಎತ್ತಿಕ್ಕುಗೋ……….
ಅಷ್ಟು ಲಾಯ್ಕದ ಕಾನಕಲ್ಲಟೆ ಮೇಲಾರ ಹಾಳಾತೋ…ಎನಗೂ ಬೇಜಾರಾತು…..
ಹ್ಹ… ಹ್ಹ… ಹ್ಹ… 😀 😀 😀
ಸೂಪರು ಆಯಿದು…. ಆದರೆ ಒಂದು ಸಣ್ಣ ಸಂಶಯ…
{ ದಾಸನ ಬಣ್ಣದ ಹೊಸಾ ಚೂಡಿದಾರು ಹಾಕುತ್ತ..} – ಈ ದಾಸನದ ಬಣ್ಣ ಯಾವುದು? ಕೆಂಪಾ?? ಅಥವಾ ಬೆಳಿಯಾ??? 😉 🙂 😀 😀
ಇನ್ನು ಸೂರ್ಯಕಾ೦ತಿಯ ಕಲರ್ ಹೇಳಿ ಬರದಿದ್ದರೆ,
ಉದಿಯಪ್ಪಗಳೋ ,ಹೊತ್ತೋಪೋಗಳೋ,
ಸ೦ಶಯ ಬಕ್ಕು ಹೇಳೀ ,ಕತ್ತರಿದಾಸನಕ್ಕೆ ಕತ್ತರಿ ಹಾಕಿ,
ದಾಸನ ಹೇಳೀ ಭಾವಯ್ಯ ಬರದ್ದಾದಿಕ್ಕು?
ಇನ್ನಾಣ ಸಮಾವೇಶಕ್ಕೆ ,
ನಿ೦ಗಳ ಒಲವಿನ ಬಣ್ಣ
ಕಾ೦ಗ ಎನೋ?.
ಮೊನ್ನೆ ಕನ್ಯಾ ಸಮಾವೇಶ ನಡದ ಮತ್ತೆ ಯೆನಗೆ ಒರಕ್ಕೇ ಇಲ್ಲೇ . ಎನ್ನ ಮಗಳು ಅಲ್ಲಿಗೆ ಹೋಗಿ ಬಂದು ನರ್ಸರಿಲಿ ಸಿಕ್ಕುವ ಒಂದು ದಾಸನ ಗೆಡು ಆಯೆಕೂ ಹೇಳಿ ಹಟ ಮಡುತ್ತು . ಕೇದಗೆ ಬಣ್ಣದ ದಾಸನ ಪಾರಿಜಾತದ ಪರಿಮಳ್ಳಲ್ಲಿ ಸಿಕ್ಕುದು ಬತ್ತಡಪ್ಪೋ . ರಮ್ಯ ಮೊನ್ನೆ ಅದನ್ನೇ ಸೂಡಿಯೊಂಡು ಅದೇ ಬಣ್ಣದ ಚೋಢಿದಾರ ಹಾಕಿಯೊಂಡು ಬಯಿಂದಡೋ . ಈ ವಿಜ್ಜ್ನಾನಿಗೋ ಎಂತೆಲ್ಲಾ ಕಂಡು ಹಿಡುತ್ತವೋ ಆ ದೇವನೇ ಬಲ್ಲ –ನಾಣಪ್ಪಚ್ಚಿ