Oppanna.com

‘ಅಡಿಗೆ ಸತ್ಯಣ್ಣ’ ಜೋಕುಗೊ – ಭಾಗ 26

ಬರದೋರು :   ಚೆನ್ನೈ ಬಾವ°    on   05/09/2013    3 ಒಪ್ಪಂಗೊ

ಚೆನ್ನೈ ಬಾವ°

1
ಸತ್ಯಣ್ಣಂಗೆ ಇರುಳಾಣ ಅಡಿಗೆ ಸುರತ್ಕಲ್ ಹೊಡೆ.
ರಂಗಣ್ಣನೂ ಸತ್ಯಣ್ಣನೂ ಉದಿಯಪ್ಪಗ ರೆಜ ಬೇಗವೆ ಹೆರಟವು. ಮಾಣಿ ಮಠಕ್ಕೆ ಬೇಗ ಎತ್ತಿರೆ ಗುರುಗ ಮಾಡ್ತ ಪೂಜೆ ನೋಡ್ಲಕ್ಕು ಹೇದು ಒಂದು ಆಶೆ.
ರಂಗಣ್ಣನ ಬೈಕ್, ಕೊಟ್ಟಾರ  ದಾಂಟಿ   ಮುಂದಾಣ  ಫ್ಲೈ ಓವರ್ ಹತ್ರಂಗೆ ಎತ್ತಿತ್ತು .

ಚಿತ್ರಕೃಪೆ : ವೆಂಕಟ್ ಕೋಟೂರ್
ಚಿತ್ರಕೃಪೆ :
ವೆಂಕಟ್ ಕೋಟೂರ್

ಅಲ್ಲಿಯೇ ಭಾರತ್ ನವರದ್ದು ಮಾರುತಿ ಕಾರ್ ಶೋ ರೂಮ್ ಇಪ್ಪದಿದ.
ಮಾಳಿಗೆಲಿ ಕಾರುಗಳ ಸಾಲು ನೋಡಿ ರಂಗಣ್ಣಂಗೆ ಆಶ್ಚರ್ಯ .
ಈ ಕಾರುಗಳ ಅಲ್ಲಿ ಹೆಂಗೆ ತೆಕ್ಕೊಂಡೊಗಿ ನಿಲ್ಲುಸಿದವು? ಕೇಳಿದ ಸತ್ಯಣ್ಣ ನತ್ರೆ.
“ಈಗ ಎಂತದೋ ಹೊಸ ಮಾಡೆಲ್ ಕಾರ್ ಬಯಿನ್ದಡ , ಅದು ಮಾರ್ಗಲ್ಲಿಯೂ ಹೋವ್ತಡ , ಆಕಾಶಲ್ಲಿಯೂ ಹಾರ್ತಡ, ಮೊನ್ನೆ ಪೇಪರಿಲ್ಲಿ ಓದಿದ್ದೆ ”  ಅದೇ ಆದ್ದಿಕ್ಕು ಅದು ಸತ್ಯಣ್ಣ ಸಮಜಾಯಿಷಿ ಕೊಟ್ಟ .
ಕೂಡ್ಳೆ ರಂಗಣ್ಣ – “ಮಾವ°, ಅಂಬಗ ನಾವು ನಮ್ಮ ಮಾರುತಿ800 ಬಿಟ್ಟಿಕ್ಕಿ ಈ ಮಾಡೆಲ್ಲು…”
ಸತ್ಯಣ್ಣ ಹೇದ° –  “ಇದಾ.., ಈಗ ನೀನು ಮಾರ್ಗ ಸರಿ ನೋಡದ್ದೆ ಎಲ್ಲೆಲ್ಲೋ ನೋಡಿಂಡು ಹೋದರೆ ಇಬ್ರೂ ಮೇಗಂಗೆ ಹಾರೆಕ್ಕಕ್ಕು” 😀
**
2
ಮುಳಿಯದೋರ ಪೈಕಿ ಆರೋ ಗುಜರಾತಿಲಿ ಇತ್ತಿದ್ದವಾಡ, ಒಂದುಕಾಲಲ್ಲಿ ಹೋಗಿ ಅಲ್ಲೇ ಸೆಟ್ಳು ಆದವು.
ಅಲ್ಲಿ ಒಂದು ನೆಂಟ್ರುಗೊ ಎಲ್ಲ ಸೇರಿ ಹೋಳಿಗೆ ತಿನ್ನೇಕು ಹೇದು ಬಯಕ್ಕೆ ಆತಾಡ. ಹಾಂಗೆ, ಅಡಿಗೆ ಸತ್ಯಣ್ಣನ ಬಪ್ಪಲೆ ಹೇಳುಲೆ ಪೋನುಮಾಡಿದವಾಡ.
ಬಪ್ಪಲೆ ಹೇಳಿಯಪ್ಪಗ ಹೋಗದ್ದರೆ ಅಕ್ಕೋ – ರಂಗಣ್ಣನೂ, ಸತ್ಯಣ್ಣನೂ ಹೆರಡುದು ಹೇದು ಅಂದಾಜಿ ಮಾಡಿಂಡಿಪ್ಪದ್ದೇ , ಬಪ್ಪಲೆ ವೆವಸ್ತೆ ಹೇಂಗೆ- ಕೇಟವಾಡ ಆ ಮುಳಿಯದೋರತ್ರೆ.
“ಸತ್ಯಣ್ಣಾ, ನಿಂಗೊ ಕೊಡೆಯಾಲಂದ ರೈಲು ಹತ್ತಿರೆ ಆತು. ಗುಜರಾತಿಲಿ ಬಂದು ಇಳಿತ್ತು. ಕಚ್ಚು ಹೇಳ್ತಲ್ಲಿ ಪಟೇಲ್ತಿ ಬಂದು ನಿಂಗಳ ಕಾದು ನಿಲ್ಲುತ್ತು. ಅದು ನಿಂಗಳ ಕಾರಿಲಿ..” ಹೇಳಿಂಡಿಪ್ಪದ್ದೇ ಸತ್ಯಣ್ಣ ಪೋನು ಮಡಗಿ ಬೆಗರು ಉದ್ದಿಗೊಂಡನಾಡ.
“ಪಟೇಲ್ತಿಯೂ, ಅದರ ಕಚ್ಚಾಣವೂ, ಅದರ ಕಾರೂ ಅವಕ್ಕೇ ಆತು; ನವಗೆ ಪೆರ್ಲದ ನುಸಿಗಳೇ ಸಾಕು ಕಚ್ಚಲೆ”- ಹೇಳಿದನಾಡ ರಂಗಣ್ಣನ ಹತ್ತರೆ.
**
3
ಮಾಣಿ ಮಠದ ಗೌಜಿ ಎಡಕ್ಕಿಲ್ಲಿಯೂ ಬೈಲಿಲಿ ಅನುಪ್ಪತ್ಯ ತಪ್ಪಿದ್ದಿಲ್ಲೆ. 
ಸತ್ಯಣ್ಣಂಗಂತೂ ಒಂದಲ್ಲದ್ರೊಂದು ಅನುಪ್ಪತ್ಯ ಇದ್ದೇ ಇದ್ದು
ಇದರೆಡಕ್ಕಿಲ್ಲಿ ಬೈಲ ಮಾವನಲ್ಲಿ ಪುಳ್ಳಿಗೆ ಬಾರ್ಸ, ಸತ್ಯಣ್ಣಂದೇ ಅಡಿಗೆ, ಹೋಳಿಗೆ ಸ್ವೀಟು
ಹೋಳಿಗೆ ಕೆರುಶಿ ಹೆರಟತ್ತು, ಬೆನ್ನಿಂಗೆ ತುಪ್ಪ ಕೊಂಡೋದವು, ಗುರಿಕ್ಕಾರ ಚಪ್ಪರಂದಲೇ ಹೇಳೋದು ಕೇಳ್ತು – ‘ಕಾಯಾಲು ಬರ್ಲಿ’
ಸತ್ಯಣ್ಣ° ಕವಂಗ ನೆಗ್ಗಿ ಕೊಟ್ಟ° ಬಡುಸಲೆ ನಿಂದ ಕಾಯಾಲು ಆಗದ್ದ ಬಾವನ ಕೈಲಿ – ‘ನಿನಗೆ ಕಾಯಾಲು ಆಗದ್ರೆ ಎಂತ ನೀನು ಕಾಯಾಲು ಬಳ್ಸಲಾಗ ಹೇದಿಲ್ಲನ್ನೇ’ ಹೇದು
ಹೋಳಿಗ್ಗೆ ತುಪ್ಪ ಇಪ್ಪಗ ಈ ಕಾಯಾಲು ಹೇದು ಸುರುಮಾಡಿದ್ದಾರಪ್ಪ ಹೇದೊಂಡೇ ಕವಂಗಕ್ಕೆ ಕೈ ಒಡ್ಡಿದ ಅಂತೂ ಬಾವಯ್ಯ
ಸತ್ಯಣ್ಣ° ಹೇದ° – “ಕಾಯಾಲು ಮದಲಿಂಗೆ ಇತ್ತಿಲ್ಲೆ, ಕೃಷ್ಣ ಹುಟ್ಟಿದ ಮತ್ತೆ ಹಾಲು, ಬೆಣ್ಣೆ, ಮೊಸರು ಕದ್ದು ಕದ್ದು ತಿಂಬಲೆ ಸುರುಮಾಡಿಯಪ್ಪಗ ಅನುಪ್ಪತ್ಯಕ್ಕೆ ಹೋಳಿಗ್ಗೆ ಬಳುಸಲೆ ತುಪ್ಪ ಸಿಕ್ಕ್ಯೊಂಡಿತ್ತಿಲ್ಲೆ. ಅಂಬಗ ಸುರುವಾದ್ದು ಈ ಕಾಯಿಹಾಲು., ಬೇಗ ಕೊಂಡೋಗು”
ಅಪ್ಪೋ ಅಲ್ಲದೋ, ಸತ್ಯಣ್ಣ° ಹೇದ್ದು ಕೇಳ್ವಾಗ ಶ್ಯಾಮಣ್ಣ ಕತೆ ಹೇಳ್ತಾಂಗೇ ಅಪ್ಪಪ್ಪು ಹೇದು ಕಂಡತ್ತು ಕಾಯಾಲು ಬಳ್ಸಲೆ ಹೆರಟ ಬಾವಯ್ಯಂಗೆ 😀

**

4
ಶಾರದೆ ಸಂಸ್ಕೃತ ಕಲಿವಲೆ ಸುರುಮಾಡಿ ರೆಜಾ ಸಮಯ ಆತು.
ಮನೆಲಿ ಪುಚ್ಚೆಂದ ಹಿಡುದು ಅಡಿಗೆ ಸತ್ಯಣ್ಣನತ್ರೆಯೂ ಸಂಸ್ಕೃತ ಪ್ರಯೋಗ ಸುರುವಾತು
ಇದರ ಹೀಂಗೆ ಬಿಟ್ರೆ ಆಗ, ಸಂಸ್ಕೃತ ನಿತ್ಯ ಮನೆಲಿ ಮಾತಾಡುತ್ತಷ್ಟು ಸುಲಭವೋ?!  ಆನುದೇ ಸಂಸ್ಕೃತ ಕಲಿಯದ್ದೆ ಆಗ ಅಂಬಗ ಹೇದು ಅಡಿಗೆ ಸತ್ಯಣ್ಣನ ಮನಸ್ಸಿಂಗೆ ನಾಟಿತ್ತು.
ಒಂದಿನ ಅಡಿಗೆ ಸತ್ಯಣ್ಣ ಅನುಪ್ಪತ್ಯ ಮುಗಿಶಿ ಬಪ್ಪಗ ಪೆರ್ಲ ಶಾಲೆಲಿ ಸಂಸ್ಕೃತ ಹೇಳಿ ಕೊಡ್ಸು ಮಾರ್ಗವರೇಂಗೆ ಕೇಳುತ್ತು.
ಮಾರಾಪಿನ ಬೆನ್ನ ಹೊಡೆಂಗೆ ದೂಡಿ ಹಿಂದಂಗೆ ಕೈಕಟ್ಟಿಗೊಂಡು ಶಾಲೆ ಹತ್ರಂಗೆ ಹೋದ ಅಡಿಗೆ ಸತ್ಯಣ್ಣ°
ಕ್ಲಾಸಿನ ಹತ್ರೆ ಬಂದಪ್ಪಗ ‘ಒಳ ಬನ್ನಿ, ಕೂಬಲಕ್ಕು’ – ಹೇದ° ಅಲ್ಯಾಣ ಮಾಟ್ರ°
‘ಆಗಚ್ಚತು.., ಉಪವಿಶತು..’ ಮನೆಲಿ ಕೇಟು ಅಭ್ಯಾಸ ಇದ್ದ ಸತ್ಯಣ್ಣಂಗೂ ಅದು ಅರ್ಥ ಆಗಿ ಹೋಗಿ ಒಳ ಕೂದ°.
ಕೆಮಿಕೊಟ್ಟು ಮೂಗರಳಿ ಕೇಟುಗೊಂಡು ಕೂದ° ಐದು ನಿಮಿಷ.
ಅಟ್ಟಪ್ಪಗ ಮಧ್ಯಂತರ, ಒಂದು ಗೀತೆ ಹಾಡುಸಿದವು. ಸತ್ಯಣ್ಣನೂ ತುಟಿ ಆಡಿಸಿದ.
ಮತ್ತಾಣ ಪಾಠ ಸುರುವಪ್ಪಂದ ಮದಲೆ “ಇದೀಗ ಹತ್ತು ದಿನಾಣ ಕ್ಲಾಸು ಅಷ್ಟೇ, ಇದು ಕಳುದಿಕ್ಕಿ ವಾರಕ್ಕೆ ಒಂದು ದಿನಾಣ ಒಂದು ಗಂಟೆಯ ಕ್ಲಾಸು.. , ಒಂದು ವರ್ಷ ನಿರಂತರ ಕ್ಲಾಸಿಂಗೆ ಬಂದರೆ ಸಲೀಸಾಗಿ ಸಂಸ್ಕೃತಲ್ಲಿ ಮಾತಾಡ್ಳೆ ಎಡಿಗು” ಹೇದು ಹೇಳಿಕ್ಕೆ ಮತ್ತೆ ಮತ್ತಾಣ ಪಾಠವ ಸುರುಮಾಡಿದ ಮಾಟ್ರ
“ಪುರುಷಃ …
ಮಾಟ್ರ° ಬಾಯಿ ತೆಗವಲೆ ಸುರುಮಾಡಿದ್ದನಷ್ಟೆ. ಸತ್ಯಣ್ಣಂಗೆ ಡೌಟು – “ಹೇದಾಂಗೆ ಕ್ಲಾಸು ಉದಿಯಪ್ಪಗಳೋ ಹೊತ್ತೋಪಗಳೋ?”
ಮಾಟ್ರ° ಹೇದ° – ಹೊತ್ತೋಪಗ ಇಕ್ಕಷ್ಟೇ, ಬಪ್ಪೋರ ಅನುಕೂಲ ನೋಡಿಗೊಂಡು ಸಮಯ ಎಜೆಸ್ಟು ಮಾಡಿಗೊಂಬೊ°”.
ಸತ್ಯಣ್ಣ ಆತಾತು ಹೇದು ತಲೆ ಎಡತ್ತು ಬಲ್ಲತ್ತು ಆಡ್ಸಿಯಪ್ಪದ್ದೆ ಮಾಟ್ರ ಮತ್ತೆ ಸುರುಮಾಡಿದ – “ಪುರುಷಃ
ಸತ್ಯಣ್ಣಂಗೆ ಮತ್ತೆ ಡೌಟು – “ಕ್ಲಾಸಿಲ್ಲಿ ಬರವಲೆ ಎಲ್ಲ ಇರ್ತಾ”
ಮಾಟ್ರ° – “ಬರಕ್ಕೊಂಬಲೆ ಒಂದು ಸಣ್ಣ ನೋಟುಪುಸ್ತಕ ಇದ್ದರೆ ಸಾಕು. ಕೈಲಿ ಪೆನ್ನೋ ಪೆನ್ಸಿಲೋ ನಿಂಗಳೇ ತರೆಕು”
ಸತ್ಯಣ್ಣನ ತಲೆ ಆಡ್ಸುಸಲೆ ಕಾಯ್ದನಿಲ್ಲೆ, ಮಾಟ್ರ ಸುರುಮಾಡಿದ° – “ಪುರುಷಃ..
ಸತ್ಯಣ್ಣ° ಕೂಡ್ಳೆ – ಇದಕ್ಕೆ ಪೀಸು ಹೇದು ಎಟ್ಟು?
ಮಾಟ್ರ° ಕೈಲಿ ಕಟ್ತ್ಯೊಂಡಿದ ವಾಚಿನ ನೋಡಿದ° – ಕ್ಲಾಸು ಮುಗುಶಲೆ ಇನ್ನೆರಡೇ ನಿಮಿಷ ಇಪ್ಪದು! 😀
**
5
ಅಜಕ್ಕಳ ತಂಗೆಯ ಭಾವನೋರ ಮಗಳ ಕೊಟ್ಟದು ಬೆಂಗ್ಳೂರ ಮಾಣಿಗೆ
ಬೆಂಗ್ಳೂರ ಮಾಣಿ ಹೇದರೆ ಬೆಂಗ್ಳೂರ ಮಾಣಿಯೇ ಅಲ್ಲ, ನಮ್ಮ ಬೈಲಿನವನೆ. ಕೇಳಿರೆ ಪುಟ್ಟಬಾವನೂ ಗುರ್ತ ಇದ್ದಪ್ಪ ಹೇಳುಗು.
ಹಾಂಗೆ ಆ ಬೆಂಗ್ಳೂರ ಬಾವನಲ್ಲಿ ಓ ಮನ್ನೆ ಒಂದು ಸಣ್ಣ ಅನುಪ್ಪತ್ಯ. ಸಣ್ಣ ಒಂದೈವತ್ತು ಜೆನರ ಏರ್ಪಾಡು ಹೇದು ಸತ್ಯಣ್ಣಂಗೂ ಹೇಳಿಕೆ
ಸಣ್ಣ ಐವತ್ತು ಆದರೆ ನಮ್ಮೂರ್ಲಿ ನಮ್ಮ ಮನೆಲಿಪ್ಪ ಪಾತ್ರ ಸಾಮಾನಿಲ್ಲಿ ಸುಧಾರ್ಸುಲೆಡಿಗು. ಪೇಟೇಲಿ ?!
ಅಡಿಗೆ ಸತ್ಯಣ್ಣ ಹೋದವನೇ ಡ್ಯೂಟಿಗೆ ಇಳುದ°
“ಪಾತ್ರ ಸೌಟು ಎಲ್ಲ ತೊಳದು ಇತ್ತೆ ಮಡುಗು” – ಹೇದ° ಸತ್ಯಣ್ಣ°
“ಮಾವ°, ಇದು ಕಿಚನ್ನು ಸಣ್ಣದು. ಪಾತ್ರ  ಎಲ್ಲ ಓ ಇಲ್ಲಿ ಚಾವಡಿಲಿ ಮಡುಗುತ್ತೆ, ನಿಂಗೊ ಕೇಳಿದಾಂಗೆ ಆನು ತೆಗದು ಕೊಡುವೆ” -ಹೇದ° ಬೆಂಗ್ಳೂರ ಭಾವ°
“ಒಂದು ಬಾಣಾಲೆಯೂ, ಒಂದು ಸೌಟೂ ಮದಾಲು ಇತ್ತೆ ಕೊಡು. ಹಲ್ವ ಕಾಸುವ ಕೆಲಸ ಮದಾಲು ಮುಗಿಶಿಕ್ಕುವೋ”   – ಹೇದ° ಸತ್ಯಣ್ಣ°.
ಬೆಂಗ್ಳೂರ ಭಾವನೂ ಅಲ್ಲಿಪ್ಪ ದೊಡ್ಡ ತಪ್ಪಲೆಯನ್ನೂ,  ದೊಡ್ಡ ಚಮಚಂದ ರಜಾ ದೊಡ್ಡಕೆ ಇತ್ತಿದ್ದ ಸೌಟನ್ನೂ ತೆಗದು ಕೊಟ್ಟ°.
ಸತ್ಯಣ್ಣ° ಹೇದ° – ಅಣ್ಣೋ., ಸೌಟು ಎಲ್ಲ ಹೀಂಗಿರ್ಸೇ ಇರ್ಸೋ?!.,  ಹಾಂಗಾರೆ  ಹೀಂಗಿಪ್ಪ ಒಂದಿಪ್ಪತ್ತು ಸೌಟು ತಪ್ಪಲೆಗಳ ಈಗಳೆ ತರ್ಸಿ ಮಡುಗುಸ್ಸು ಒಳ್ಳೆದು. ಹಲ್ವ ಕಾಸಿ ಒಳುದರೆ ಮತ್ತೆ ಸೌಟು ನಿತ್ಯ ಉಪಯೋಗಕ್ಕೆ ಆವ್ತು. 😀
 
**
6
ಅಡಿಗೆ ಸತ್ಯಣ್ಣಂಗೆ ಒಂದು ವಾರಂದ ವಿಪರೀತ ತಲೆಬೇನೆ
ತಲೆಬೇನೆಯೋ, ತಲೆಶೆಲಿವದೋ ಎಂತ ಹೇದು ಹೇಳ್ಳೆ ಅರಡಿತ್ತಿಲ್ಲೆ, ಒಟ್ಟಾರೆ ತಲೆಬೇನೆ
ಇನ್ನು ಕೂದರೆ ಆಗ ಹೇದು ಡಾಕುಟ್ರಣ್ಣನಲ್ಲಿಗೆ ಹೋದ
ಡಾಕುಟ್ರಣ್ಣ ಸತ್ಯಣ್ಣನತ್ರೆ ಕೇಟವು – ಎಷ್ಟು ದಿನಂದ ಸತ್ಯಣ್ಣ ?
ಸತ್ಯಣ್ಣ° ಹೇದ° – “ಒಂದು ವಾರಂದ ಡಾಕುಟ್ರಣ್ಣ”.
ಡಾಕುಟ್ರಣ್ಣ ಮತ್ತೆ ಕೇಟವು – “ಇಷ್ಟು ದಿನ ಏಕೆ ಬಾರದ್ದು??!”
ಸತ್ಯಣ್ಣ ಹೇದ° – “ಅದೇ ಡಾಕುಟ್ರಣ್ಣ ಎನಗೂ ಅರಡಿಯದ್ದು. ಅದರತ್ರೇ ಕೇಳೆಕ್ಕಷ್ಟೆ – ಇಷ್ಟು ದಿನ ಬಾರದ್ದದು ಇದೆಂತಕೆ ಈಗ ಬಂತು ?!” 😀
**
7
ಅಡಿಗೆ ಸತ್ಯಣ್ಣನ ಮನೆ ಹತ್ರೆ ಏವುದೋ ಒಂದು  ನಾಯಿ ಬಂತು.
ಸುಮಾರು ಮಧ್ಯಾಹ್ನಪ್ಪಗ ಬಂದ್ಸು ಏನ ಮಾಡಿರೂ ಹೋವ್ಸು ಕಾಣುತ್ತಿಲ್ಲೆ.
ಹೊತ್ತಪ್ಪಗ ಮಳೆ ಹನುಕ್ಕುಲೆ ಸುರುವಾತು, ನಾಯಿ ಬೂದಿಹೊಂಡಲ್ಲಿ ಮನಿಗಿದ್ದದು ಹಂದುತ್ತ ಅಂದಾಜಿ ಇಲ್ಲೆ
ಸತ್ಯಣ್ಣ ದೊಡಾ ದೊಣ್ಣೆ ತೆಕ್ಕೊಂಡು ಎರಡ ಮಡುಗುತ್ತೆ ಇದಕ್ಕೆ ಹೇದೊಂಡು ಹೆರಟ°
ಬಂದವ° ಇತ್ತಿದ್ದ ರಂಗಣ್ಣ° ಹೇದ° – ಮಾವ°, ಜಾಗ್ರತೆ.,  ಅದು ಮರ್ಳು ನಾಯಿ ಆಯಿಕ್ಕು., ನೆಂಪಿರಳಿ
ಸತ್ಯಣ್ಣ° ಹೇದ° – ಎನ್ನ ಕೈಲಿ ಬಡಿಗೆ ಇದ್ದು, ಅದಕ್ಕೂ ನೆಂಪಿರಳಿ  😀
**
8
ಚೆನ್ನಬೆಟ್ಟಣ್ಣನ ಪುಣ್ಯಾಯ ಕಳ್ಸಿಕ್ಕಿ ಅಡಿಗೆ ಸತ್ಯಣ್ಣನೂ ರಂಗಣ್ಣನೂ ಒಟ್ಟಿಂಗೆ ಹೆರಟವು ಒಟ್ಟಿಂಗೇ ಪೆರ್ಲಕ್ಕೆ ಬಂದವು
ಮಳೆಗಾಲ ಆದಕಾರಣವೋ ಮಳೆಬತ್ತಕಾರಣವೋ ಅಂತೂ ಹರ್ಷೋದ್ಧಾರ ಮಳೆ
ಪೆರ್ಲಕ್ಕೆ ಎತ್ತಿಯಪ್ಪಗ ಆಚಿಗೆ ಶಾಲೆಂದ ಚೆಂಡೆಪೆಟ್ಟು ಕೇಳ್ತು.
ಸರಿ., ‘ಯಕ್ಷಗಾನ ಇದ್ದೊಂಬಗ!’ ಹೇದು ಶಾಲೆ ಹೋಲಿನತ್ರಂಗೆ ಹೋದವು, ನೋಡಿರೆ ಅಲ್ಲಿ ನಿಡ್ಳೆ ಸೆಟ್ಟು ಮೂರುಗಂಟೆ ಯಕ್ಷಗಾನ. ಹೇಳಿಕೆ ಕಾಗದ ನೋಡಿರೆ ಮಹಾರತಿ ಕರ್ಣ ಹೇದು ಪ್ರಿಂಟಾಗಿಪ್ಪದು ಕಂಡತ್ತು !
ರತಿಯೋ ರಥಿಯೋ ಏವುದಾದರೂ ಅಡ್ಡಿ ಇಲ್ಲೆ ಹೇದು ಇಬ್ರೂ ಒಳಹೋಗಿ ಕೂದೊಂಡವು
ಪೀಠಿಕೆ, ಸ್ತುತಿ ಕಳುದಕಾರಣ ಪ್ರಸಂಗವೇ ಸುರುವಾಗಿ ಆಗಿತ್ತು ಇವ್ವಲ್ಲಿಗೆ ಎತ್ತುವಾಗ
ದೂರ್ವಾಸ ಬಂದ, ಕುಂತಿ ಉಪಚರಿಸಿತ್ತು, ಮಂತ್ರ ಸಿಕ್ಕಿತ್ತು, ಟೆಸ್ಟಿಂಗು ಮಾಡಿತ್ತು, ಸೂರ್ಯ ಬಂದ,  ಕುಂಞಿಮಾಣಿ ಕೊಟ್ಟಿಕ್ಕಿ ಹೋದ°
ಕುಂತಿ ಹೇಳಿಗೊಂಡಿತ್ತು… ಬಾಬೆ ಹುಟ್ಟಿತ್ತು…ಇನ್ನೆಂತ ಮಾಡ್ಸು…
ಸಭೆಲಿ ಕೂದೊಂಡಿದ್ದ ಸತ್ಯಣ್ಣ ರಂಗಣ್ಣನತ್ರೆ ತಿರುಗಿ ಹೇದ….  “ರಂಗೋ!, ಪುಣ್ಯಾಹ ಹೇಳಿಕೆ ಬಕ್ಕೋ?!, ಬಂದರೆ ನೀನೇ ಹೋತಿಕ್ಕು ಮಿನಿಯ° 😀
**

*** 😀 😀 😀 ***

 

3 thoughts on “‘ಅಡಿಗೆ ಸತ್ಯಣ್ಣ’ ಜೋಕುಗೊ – ಭಾಗ 26

  1. { ಹಾಂಗಾರೆ ಹೀಂಗಿಪ್ಪ ಒಂದಿಪ್ಪತ್ತು ಸೌಟು ತಪ್ಪಲೆಗಳ ಈಗಳೆ ತರ್ಸಿ ಮಡುಗುಸ್ಸು ಒಳ್ಳೆದು…. }
    ಅದು ಪಷ್ಟಾಯಿದು 😀 😀 😀

  2. ಸತ್ಯಣ್ಣ , ಕೊಡೆಯಾಲದ ರಾಂಪ, ಕುಂದಾಪುರದ ಕುಟ್ಟಿ. Times ನ ಸಾಮಾನ್ಯ ಮನುಶ್ಯ, ನವಭಾರಥದ ಶಿಂಗಣ್ಣ ಎಲ್ಲರನ್ನೂ ನೆನಪ್ಪು ಮಾಡ್ತಃ)

  3. ರಂಗೋ!, ಪುಣ್ಯಾಹ ಹೇಳಿಕೆ ಬಕ್ಕೋ?! ಓದಿ ತುಂಬಾ ನೆಗೆ ಮಾಡಿದೆ ಆರನ್ನೂ ಬೆಟ್ಟು ಮಾಡದ್ದ ,ಆರಿನ್ಗೂ ಒಂದಿನಿತೂ ಚುಚ್ಚಿ ಬೇನೆ ಮಾಡದ್ದ ನವುರು ಹಾಸ್ಯ ಓದಕ್ಕಾದರೆ ಅಡಿಗೆಸತ್ಯಣ್ಣನ ಹತ್ತರಂಗೆ ಬರಕ್ಕಷ್ಟೇ ,ಒಳ್ಳೇ ಹಾಸ್ಯಂಗಳ ಹೊಟ್ಟೆ ತುಮ್ಬವಷ್ಟು ಬಳುಸುವ ಚೆನ್ನೈ ಭಾವ°ಗೆ ಧನ್ಯವಾದಂಗ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×